Tel: 7676775624 | Mail: info@yellowandred.in

Language: EN KAN

    Follow us :


ಕಾರ್ಮಿಕರ ವೇತನ ಕಡಿತಕ್ಕೆ ಅವಕಾಶ ನೀಡುವುದಿಲ್ಲ : ಕಾರ್ಮಿಕ ಸಚಿವ ಅರೆಬೈಲ್ ಶಿವರಾಮ ಹೆಬ್ಬಾರ್
ಕಾರ್ಮಿಕರ ವೇತನ ಕಡಿತಕ್ಕೆ ಅವಕಾಶ ನೀಡುವುದಿಲ್ಲ : ಕಾರ್ಮಿಕ ಸಚಿವ ಅರೆಬೈಲ್ ಶಿವರಾಮ ಹೆಬ್ಬಾರ್

ಬೆಂಗಳೂರು:ಏ/೧೯/೨೦/ಭಾನುವಾರ. ಕಾರ್ಮಿಕರದ್ದಾಗಲೀ ಅಥವಾ ಇತರೆ ಯಾವುದೇ ಕಾರ್ಮಿಕರದ್ದಾಗಲೀ ವೇತನ ಕಡಿತಕ್ಕೆ ರಾಜ್ಯ ಸರ್ಕಾರ ಅವಕಾಶ ನೀಡುವುದಿಲ್ಲ ಎಂದು ಕಾರ್ಮಿಕ ಸಚಿವ ಅರೆಬೈಲ್ ಶಿವರಾಮ ಹೆಬ್ಬಾರ್ ಅವರು ಇಲ್ಲಿ ಇಂದು ಪ್ರಕಟಿಸಿದರಲ್ಲದೆ, ಕಾರ್ಮಿಕರ ಆರೋಗ್ಯ ದೃಷ್ಠಿಯಿಂದ ಎಲ್ಲಾ ಕಾರ್ಮಿಕರಿಗೂ ಮುಖಗವಸು ಹಾಗೂ ಸ್ಯಾನಿಟೈಜರ್‍ಗಳನ್ನು ಒದಗಿಸುವುದರ ಜೊತೆಗೆ ಕಾರ್ಮಿಕ ಇಲಾಖೆಯ ಎಲ್ಲಾ ಹಿರಿಯ ಅಧ

ರಾಜ್ಯದಲ್ಲಿನ ಕೊರೊನಾ‌ ಸ್ಥಿತಿಗತಿಯ ಕುರಿತಂತೆ ಸಚಿವ ಸುರೇಶ್ ಕುಮಾರ್‌‌ ಮಾಹಿತಿ
ರಾಜ್ಯದಲ್ಲಿನ ಕೊರೊನಾ‌ ಸ್ಥಿತಿಗತಿಯ ಕುರಿತಂತೆ ಸಚಿವ ಸುರೇಶ್ ಕುಮಾರ್‌‌ ಮಾಹಿತಿ

ಇದುವರೆಗೆ ರಾಜ್ಯದಲ್ಲಿ ಒಟ್ಟಾರೆ ೩೫೯ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಇಂದು ಸಂಜೆ ೦೫:೦೦ ರ ಮಾಹಿತಿಯಂತೆ ೧೩ ಜನ ಸಾವನ್ನಪ್ಪಿದ್ದು, ೮೮ ಮಂದಿ ಗುಣಮುಖರಾಗಿ ಹಿಂತಿರುಗಿದ್ದಾರೆಂದು‌ ಸಚಿವರು ವಿವರಿಸಿದರು. ಉಳಿದ ೨೫೮ ಪ್ರಕರಣಗಳಲ್ಲಿ ೨೫೫ ಜನರನ್ನು ಆಸ್ಪತ್ರೆಗಳಲ್ಲಿ ಪ್ರತ್ಯೇಕಿಸಲಾಗಿದೆಯೆಂಬ ಮಾಹಿತಿ ನೀಡಿದ ಸಚಿವರು ೦೩ ಜನರನ್ನು ತೀವ್ರ ನಿಗಾ ಘಟಕಗಳಲ್ಲಿರಿಸಲಾಗಿದೆಯೆಂದರು. ನೆನ್ನೆಯ ಸಂಜೆ ೦೫:೦೦ ಕ್ಕೆ

ಹತ್ತನೇ ತರಗತಿ ಹೊರತುಪಡಿಸಿ ಒಂಭತ್ತನೆಯ ತರಗತಿಯ ತನಕ ಎಲ್ಲರೂ ಪಾಸು ಸುರೇಶ್ ಕುಮಾರ್
ಹತ್ತನೇ ತರಗತಿ ಹೊರತುಪಡಿಸಿ ಒಂಭತ್ತನೆಯ ತರಗತಿಯ ತನಕ ಎಲ್ಲರೂ ಪಾಸು ಸುರೇಶ್ ಕುಮಾರ್

ಬೆಂಗಳೂರು/ರಾಮನಗರ/೦೨/೨೦/ಗುರುವಾರ. ೨೦೧೯/೨೦ ನೇ ಶೈಕ್ಷಣಿಕ ಸಾಲಿನ ೭, ೮ ಮತ್ತು ೯ ನೇ ತರಗತಿಯ ವಿದ್ಯಾರ್ಥಿಗಳನ್ನು ಪರೀಕ್ಷೆ ನಡೆಸದೇ ಉತ್ತೀರ್ಣಗೊಳಿಸುವಂತೆ ರಾಜ್ಯದ ಎಲ್ಲಾ ಜಿಲ್ಲಾ ಶಿಕ್ಷಣ ಉಪ ನಿರ್ದೇಶಕರ ಮೂಲಕ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಆಯಾಯ ಶಾಲೆಯ ಮುಖ್ಯೋಪಾಧ್ಯಾಯರಿಗೆ ಸಚಿವ ಸುರೇಶ್ ಕುಮಾರ್ ಆದೇಶಿಸಿದ್ದಾರೆ.ನೊವೆಲ್ ಕೊರೊನಾ (ಕೋವಿಡ್-೧೯) ನ

ನಾವೂ ಹೊರಹೋಗಲ್ಲ, ನೀವು ಬರಬೇಡಿ. ಕೊರೊನಾ ಬಗ್ಗೆ ಎಚ್ಚರಿಕೆ ವಹಿಸಿದ ಕೆಲವು ಗ್ರಾಮಸ್ಥರು
ನಾವೂ ಹೊರಹೋಗಲ್ಲ, ನೀವು ಬರಬೇಡಿ. ಕೊರೊನಾ ಬಗ್ಗೆ ಎಚ್ಚರಿಕೆ ವಹಿಸಿದ ಕೆಲವು ಗ್ರಾಮಸ್ಥರು

ಚನ್ನಪಟ್ಟಣ:ಮಾ/೨೬/೨೦/ಗುರುವಾರ.ಕೊರೊನಾ ವೈರಸ್ ದಿನೇದಿನೇ ಹೆಚ್ಚಾಗುತ್ತಿರುವುದನ್ನು ನಿಧಾನವಾಗಿ ಅರ್ಥೈಸಿಕೊಳ್ಳುತ್ತಿರುವ ಗ್ರಾಮೀಣ ಭಾಗದ ಯುವಕರು ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದು, ನಮ್ಮ ಗ್ರಾಮದಿಂದ ಯಾರೂ ಹೊರಹೋಗುವುದಿಲ್ಲ. ನಮ್ಮ ಗ್ರಾಮಗಳಿಗೆ ಬೇರೆ ಗ್ರಾಮದವರು ಬರುವುದು ಬೇಡ ಎಂದು ತಾಲ್ಲೂಕಿನ ಕೆಲ ಗ್ರಾಮದ ಗಡಿ ಭಾಗಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದರು.

ನಾಳೆ ನಡೆಯಬೇಕಾಗಿದ್ದ ಪಿಯುಸಿ ಇಂಗ್ಲಿಷ್ ಪರೀಕ್ಷೆ ಮುಂದೂಡಿಕೆ
ನಾಳೆ ನಡೆಯಬೇಕಾಗಿದ್ದ ಪಿಯುಸಿ ಇಂಗ್ಲಿಷ್ ಪರೀಕ್ಷೆ ಮುಂದೂಡಿಕೆ

ಬೆಂಗಳೂರು/ರಾಮನಗರ:ಮಾ/೨೨/೨೦/ಭಾನುವಾರ. ನಾಳೆ ಅಂದರೆ ೨೩ ರ ಸೋಮವಾರ ದಂದು ನಡೆಯಬೇಕಾಗಿದ್ದ ದ್ವಿತೀಯ ಪಿಯುಸಿ ವಾರ್ಷಿಕ ಇಂಗ್ಲಿಷ್ ಭಾಷೆಯ ಪರೀಕ್ಷೆಯನ್ನು ಕರೋನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಆದೇಶ ಹೊರಡಿಸಿದ್ದಾರೆ.ಕೊರೊನಾ ವೈರಸ್ ಸೋಂಕು ಕಡಿಮೆಯಾದ ನಂತರ ದ್ವಿತೀಯ ಪಿಯುಸಿ ವಾರ್ಷಿಕ ಇಂಗ್ಲಿಷ್ ಪರೀಕ್ಷೆಯ ದಿನಾಂಕವನ್

ಪತ್ರಿಕೋದ್ಯಮದ ಚೇತನ ಪಾಪು ಅಸ್ತಂಗತ
ಪತ್ರಿಕೋದ್ಯಮದ ಚೇತನ ಪಾಪು ಅಸ್ತಂಗತ

ಹುಬ್ಬಳ್ಳಿ: ಕನ್ನಡ ಪತ್ರಿಕೋದ್ಯಮ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ *ಪಾಪು* ಎಂದೇ ಖ್ಯಾತರಾಗಿದ್ದ ಹಿರಿಯ ಸಾಹಿತಿ ಶತಾಯುಷಿ *ಡಾ. ಪಾಟೀಲ ಪುಟ್ಟಪ್ಪ* ಅವರು ಇಂದು ವಿಧಿವಶರಾಗಿದ್ದಾರೆ. ಅವರಿಗೆ ೧೦೧ ವರ್ಷ ವಯಸ್ಸಾಗಿತ್ತು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಡಾ. ಪಾಟೀಲ ಪುಟ್ಟಪ್ಪನವರು ಕಳೆದ ಕೆಲವು ದಿನಗಳಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಕೊರೋನಾ ವೈರಸ್ ನೂರಕ್ಕೂ ಹೆಚ್ಚು ಜನ ಸೇರುವ ಸಭೆ ಸಮಾರಂಭ ಒಂದು ವಾರ ಬಂದ್
ಕೊರೋನಾ ವೈರಸ್ ನೂರಕ್ಕೂ ಹೆಚ್ಚು ಜನ ಸೇರುವ ಸಭೆ ಸಮಾರಂಭ ಒಂದು ವಾರ ಬಂದ್

ಬೆಂಗಳೂರು: ಹಲವಾರು ದೇಶಗಳಲ್ಲಿ ಮಾರಕವಾಗಿ ಕಾಡುತ್ತಿರುವ ಕೊರೋನಾ ವೈರಸ್ ನಾಡಿಗೂ ಕಾಲಿಟ್ಟಿದ್ದು ಮುಂಜಾಗ್ರತಾ ಕ್ರಮವಾಗಿ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ರಾಜ್ಯ ಸರ್ಕಾರ, ನಾಳೆಯಿಂದ ಒಂದು ವಾರ ರಾಜ್ಯದಾದ್ಯಂತ ಯಾವುದೇ ಸಭೆ ಹಾಗೂ ಸಾರ್ವಜನಿಕ ಸಮಾರಂಭ ನಡೆಸುವಂತಿಲ್ಲ ಎಂದು ಆದೇಶಿಸಿದೆ.ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದ ನಂತರ ಮಾತನಾಡಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ವೈರಸ್ ಹರಡು

ಅಕ್ರಮವಾಗಿ ಹಸು ಎಮ್ಮೆಗಳ ಸಾಗಾಣೆ; ಪೋಲೀಸರಿಗೆ ಒಪ್ಪಿಸಿದ ಹಿಂಜಾವೆ
ಅಕ್ರಮವಾಗಿ ಹಸು ಎಮ್ಮೆಗಳ ಸಾಗಾಣೆ; ಪೋಲೀಸರಿಗೆ ಒಪ್ಪಿಸಿದ ಹಿಂಜಾವೆ

ಚನ್ನಪಟ್ಟಣ: ಗಾಳಿ ಬೆಳಕು ಇಲ್ಲದ ಲಾರಿಯೊಂದರಲ್ಲಿ (ಕಂಟೇನರ್) ನಿಲ್ಲಲು ಜಾಗವಿಲ್ಲದಂತೆ ಒತ್ತೊತ್ತಾಗಿ ಇಪ್ಪತ್ತಕ್ಕೂ ಹೆಚ್ಚು ಜಾನುವಾರುಗಳನ್ನು ತುಂಬಿದ ವಾಹನವನ್ನು ಹಿಂದೂ ಜಾಗರಣಾ ವೇದಿಕೆಯ  ಕಾರ್ಯಕರ್ತರ ಮಾಹಿತಿ ಮೇರೆಗೆ ನಗರ ಪೋಲೀಸರು ವಾಹನವನ್ನು ಅಡ್ಡಗಟ್ಟಿ ವಶಪಡಿಸಿಕೊಂಡಿರುವ ಪ್ರಕರಣ ಇಂದು ನಡೆದಿದೆ.ಕೆಎ ೨೦ ಸಿ ೮೩೪೩ ನೋಂದಣಿ ಯಿರುವ ವಾಹನದಲ್ಲಿ ಮೂರು ಹಸುಗಳು ಮತ

ಬೊಂಬೆನಾಡಿನಲ್ಲಿ ಬಮೂಲ್ ಮಹೋತ್ಸವ, ಹದಿನೈದು ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ, ಜಯಮುತ್ತು
ಬೊಂಬೆನಾಡಿನಲ್ಲಿ ಬಮೂಲ್ ಮಹೋತ್ಸವ, ಹದಿನೈದು ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ, ಜಯಮುತ್ತು

ತಾಲ್ಲೂಕಿನ ಹದಿನೈದು ಸಾವಿರಕ್ಕೂ ಹೆಚ್ಚಿರುವ ಹೈನೋದ್ಯಮಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬಮೂಲ್ ವತಿಯಿಂದ‌ ಈ ಭಾಗದ  ಹೈನುಗಾರಿಕೆಯ ರೈತರನ್ನು ಉತ್ತೇಜಿಸಲು ಹಾಗೂ ಒಂದೇ ಸೂರಿನಡಿ ಬಮೂಲ್ ಉತ್ಸವದ ವಿಶೇಷತೆಗಾಗಿ ಹಲವಾರು ಮೇಳಗಳನ್ನು ಮಾರ್ಚಿ ತಿಂಗಳ ೦೫ ರ ಗುರುವಾರ ಬೆಳಿಗ್ಗೆ ೧೦:೦೦ ಗಂಟೆಗೆ ತಾಲ್ಲೂಕಿನ ದೊಡ್ಡಮಳೂರು ಗ್ರಾಮದ ಶ್ರೀ ಚೌಡೇಶ್ವರಿ ಕಲ್ಯಾಣ ಮಹಲ್ ಪಕ್ಕದಲ್ಲಿ ಆಯೋಜನೆ ಮಾಡಿರುವುದಾಗಿ ಬಮೂಲ್ ನಿರ್ದೇಶಕ ಜಯಮುತ್ತು ತಿಳಿಸಿದರು.

ಆದಿಚುಂಚನಗಿರಿ ಜಾತ್ರಾ ಮಹೋತ್ಸವ ಮತ್ತು ಮಹಾಕುಂಭಾಭಿಷೇಕ ಮಹೋತ್ಸವಕ್ಕೆ ಭಕ್ತವೃಂದ ಪಾಲ್ಗೊಳ್ಳುವಂತೆ ಸ್ವಾಮೀಜಿ ಕರೆ
ಆದಿಚುಂಚನಗಿರಿ ಜಾತ್ರಾ ಮಹೋತ್ಸವ ಮತ್ತು ಮಹಾಕುಂಭಾಭಿಷೇಕ ಮಹೋತ್ಸವಕ್ಕೆ ಭಕ್ತವೃಂದ ಪಾಲ್ಗೊಳ್ಳುವಂತೆ ಸ್ವಾಮೀಜಿ ಕರೆ

ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ವು ಪ್ರತಿ ವರ್ಷದಂತೆ ಈ ವರ್ಷವೂ ಜಾತ್ರಾ ಮಹೋತ್ಸವವನ್ನು ಹಮ್ಮಿಕೊಂಡಿದ್ದು ರಾಜ್ಯ ಮತ್ತು ಅಂತರರಾಜ್ಯಗಳಿಂದಲೂ ಭಕ್ತಾಧಿಗಳು ಆಗಮಿಸಲಿದ್ದು, ರಾಮನಗರ ಜಿಲ್ಲೆಯ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಅರ್ಚಕರಹಳ್ಳಿ ಶಾಖಾ ಮಠದ ಕಾರ್ಯದರ್ಶಿ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ ಗಳು ಮನವಿ ಮಾಡಿದರು.

Top Stories »  



Top ↑