
ನಾಯಕತ್ವ ಬದಲಾವಣೆಯ ರಾಜಕೀಯ ಬಿಟ್ಟು ಜನರ ಕೂಗಿಗೆ ಸರ್ಕಾರ ಸ್ಪಂದಿಸಲಿ. ಹೆಚ್ ಡಿ ಕುಮಾರಸ್ವಾಮಿ
ಚನ್ನಪಟ್ಟಣ: ಕೊರೊನಾ ಎರಡನೆ ಅಲೆಯು ಚಾಲ್ತಿಯಲ್ಲಿರುವಾಗಲೇ ಮೂರನೆ ಅಲೆ ಬರುತ್ತಿದೆ. ಇಂತಹ ಸಂದರ್ಭದಲ್ಲಿ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವು ಮುಖ್ಯಮಂತ್ರಿ ಮತ್ತು ಮಂತ್ರಿಗಳ ಬದಲಾವಣೆಯ ರಾಜಕೀಯ ಲೆಕ್ಕಾಚಾರದಲ್ಲಿ ತೊಡಗಿರುವುದು ಹಾಸ್ಯಾಸ್ಪದ. ವಿರೋಧ ಪಕ್ಷಗಳ ಸಲಹೆ ಸೂಚನೆಗಳನ್ನು ಪಡೆದು ಜನರ ಜೊತೆ ನಿಕಟ ಸಂಪರ್ಕವನ್ನು ಹೊಂದಬೇಕಾಗಿರುವುದು ಸರ್ಕಾರದ ಹೊಣೆ ಎಂದು ಕ್ಷೇತ್ರದ ಶಾಸಕ, ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿಯವರು ಸರ್ಕಾರದ ಕಿವ

ಕೋವಿಡ್ ನಿಂದ ತಂದೆ ತಾಯಿ ಕಳೆದುಕೊಂಡ ಮಕ್ಕಳಿಗೆ ಬಾಲ ಸೇವಾ ಯೋಜನೆ: ಸಚಿವೆ ಶಶಿಕಲಾ ಅ ಜೊಲ್ಲೆ
ಕೋವಿಡ್ ಸೋಂಕಿನಿಂದ ತಂದೆ-ತಾಯಿಯನ್ನು ಕಳೆದುಕೊಂಡ ಅನಾಥ ಮಕ್ಕಳಿಗೆ ನೆರವು ನೀಡಲು ಬಾಲ ಸೇವಾ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಶಶಿಕಲಾ ಅ ಜೊಲ್ಲೆ ಅವರು ತಿಳಿಸಿದರು.ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಭೆ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದರು.ಬಾಲ

ಯಡಿಯೂರಪ್ಪ ಪರ ಡಿಸಿಎಂ ಅಶ್ವಥ್ ನಾರಾಯಣ ಬ್ಯಾಟಿಂಗ್
ರಾಮನಗರ: ಡಿಸಿಎಂ ಅಶ್ವಥ್ ನಾರಾಯಣ ಸಿಎಂ ಯಡಿಯೂರಪ್ಪ ಪರ ಬ್ಯಾಟಿಂಗ್ ಮಾಡಿದ್ದು, ಬಿಜೆಪಿ ಪಕ್ಷದ ಹೆಸರಿನಲ್ಲಿ ನಾವು ಮುಂದಿನ ಚುನಾವಣೆ ಮಾಡುತ್ತೇವೆ. ನನ್ನ ಸ್ಥಾನದ ಮೇಲೆ ಆಸೆ ಇಟ್ಟುಕೊಂಡಿರುವವರು ಮೊದಲು ಜಿಲ್ಲೆಯಲ್ಲಿ ಕೆಲಸ ಮಾಡಿ ತೋರಿಸಲಿ ಎಂದು ಸಿ ಪಿ ಯೋಗೇಶ್ವರ್ ಗೂ ಅವರು ಟಾಂಗ್ ನೀಡಿದರು.ರಾಮನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಬಿಜೆಪಿ ಪಕ್ಷದ ಶಕ್ತಿಯ ಮೇಲೆ ನಾವು ಚುನಾವಣೆ ಮಾಡ್ತೇವೆ.ಎಲ್ಲರೂ ಸಹ ಬಿಜೆಪ

ಹುಚ್ಚಯ್ಯನದೊಡ್ಡಿ ಗ್ರಾಮದಲ್ಲಿ ಬಾಲ್ಯ ವಿವಾಹ ತಡೆದ ಸಿಡಿಪಿಓ ಮತ್ತು ತಂಡ
ಚನ್ನಪಟ್ಟಣ: ಲಾಕ್ಡೌನ್ ಹಿನ್ನೆಲೆಯಲ್ಲಿ ಮದುವೆ ಸಮಾರಂಭಗಳು ಸರಳಗೊಂಡಿವೆ. ಇದರೊಂದಿಗೆ ಕೆಲವೆಡೆ ಬಾಲ್ಯವಿವಾಹ ಪ್ರಕರಣಗಳು ಸಹ ಕಂಡು ಬರುತ್ತಿವೆ.ಚನ್ನಪಟ್ಟಣ ತಾಲೂಕಿನ ಹುಚ್ಚಯ್ಯನದೊಡ್ಡಿ ಗ್ರಾಮದಲ್ಲಿ ನಡೆಯುತ್ತಿದ್ದ ಬಾಲ್ಯವಿವಾಹವೊಂದನ್ನು ಅಧಿಕಾರಿಗಳು ತಡೆದು, ಅಪ್ರಾಪ್ತ ಬಾಲಕಿಯನ್ನು ರಕ್ಷಿಸಿದ್ದಾರೆ..ಭಾನುವಾರ ಬೆಳಿಗ್ಗೆ ಕೋಡಂಬಳ್ಳಿ ಸಮೀಪದ ಹುಚ್ಚ

ನಮಗೆ ವಿರೋಧ ಪಕ್ಷಗಳೇ ಇಲ್ಲ. ಅವರೇ ನಮ್ಮ ಜೊತೆಯಲ್ಲಿದ್ದಾರೆ. ಹಾಗಾಗಿ ನಾವೇ ವಿರೋಧಿಗಳಾಗಬೇಕಾಗಿ ಬಂತು. ಸಿ ಪಿ ಯೋಗೇಶ್ವರ್
ಆಳುವ ಸರ್ಕಾರದ ವಿರುದ್ಧ ತಪ್ಪು ಕಂಡುಹಿಡಿದು, ಕಾಲೆಳೆಯಬೇಕಾದ ವಿರೋಧ ಪಕ್ಷಗಳು ನಮ್ಮ ಪಕ್ಷದವರ ಜೊತೆಯಲ್ಲಿ ಚೆನ್ನಾಗಿ ಇದ್ದಾರೆ. ಹಾಗಾಗಿ ನಮ್ಮ ಆಡಳಿತ ಪಕ್ಷದ ವಿರುದ್ಧ ನಾವೇ ವಿರೋಧ ಪಕ್ಷವಾಗಿ ಕೆಲಸ ಮಾಡುವ ಸಂದರ್ಭ ಬಂತು ಎಂದು ಪ್ರವಾಸೋದ್ಯಮ ಮತ್ತು ಜೀವಿಶಾಸ್ತ್ರ ಸಚಿವ ಸಿ.ಪಿ.ಯೋಗೇಶ್ವರ್ ತಿಳಿಸಿದರು.ತಾಲೂಕಿನ ಸುಣ್ಣಘಟ್ಟ ಸಮೀಪದಲ್ಲಿನ ಕರಣ್‍ಗೌಡ ಫಾರಂ ಬಳಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ಸೂಚಿಸಿ

ಯೋಗೇಶ್ವರ್ ಯಡಿಯೂರಪ್ಪ ನಾಯಕತ್ವದ ಬಗ್ಗೆ ಮಾತನಾಡಿಲ್ಲ, ಕ್ಷೇತ್ರದ ಜನರು ಪ್ರತಿಭಟನೆ ಮಾಡಬೇಕಾಗುತ್ತದೆ. ಮಲವೇಗೌಡ
ಕಳೆದೆರಡು ದಿನಗಳಿಂದ ರೇಣುಕಾ ಚಾರ್ಯ ಮತ್ತು ಸುರೇಶ್ ಗೌಡ ಸೇರಿದಂತೆ, ಕೆಲವು ಶಾಸಕರು ನಮ್ಮ ನಾಯಕರಾದ ಸಚಿವ ಸಿ ಪಿ ಯೋಗೇಶ್ವರ್ ಬಗ್ಗೆ ಅಸಂಬದ್ಧವಾಗಿ ಮಾತನಾಡುತ್ತಿದ್ದಾರೆ. ಸಚಿವರು ಎಲ್ಲಿಯೂ ಯಡಿಯೂರಪ್ಪ ನವರ ನಾಯಕತ್ವ ಮತ್ತು ವ್ಯಕ್ತಿತ್ವದ ಬಗ್ಗೆ ಮಾತನಾಡಿಲ್ಲ. ನಿನ್ನೆ ದಿನ ಸ್ಪಷ್ಟತೆಯನ್ನು ನೀಡಿದ್ದಾರೆ. ಆದರೂ ಸಹ ಕೆಲ ಹಾಲಿ, ಮಾಜಿ ಶಾಸಕರು ನಮ್ಮ ನಾಯಕರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ. ಹೀಗೆ ಮುಂದುವರಿದರೆ ಅವರ ಮನೆಯ ಮುಂದೆ

ಕೋವಿಡ್ ಹಿನ್ನೆಲೆಯಲ್ಲಿ ಅನಾಥವಾದ ಮಕ್ಕಳ ಪೋಷಣೆಗೆ ಸರ್ಕಾರ ಸಿದ್ದ. ಸಚಿವೆ ಶಶಿಕಲಾ ಜೊಲ್ಲೆ
ಬೆಂಗಳೂರು: ಮೇ 18. ಕೋವಿಡ್ ಹಿನ್ನೆಲೆಯಲ್ಲಿ ಅನಾಥವಾದ ಮಕ್ಕಳ ಪೋಷಣೆಗೆ ಸರ್ಕಾರ ಸಿದ್ದವಾಗಿದೆ.ಬಾಧಿತ ಮಕ್ಕಳ ವಸತಿಗಾಗಿ ರೆಸಿಡೆನ್ಸಿಯಲ್ ಶಾಲೆಗಳನ್ನು ಮೀಸಲಿರಿಸಲಾಗುವುದು ಎಂದು ಸಚಿವೆ ಶಶಿಕಲಾ ಜೊಲ್ಲೆ ಮಹತ್ವದ ಘೋಷಣೆ ಮಾಡಿದರು.ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆ ಹಿನ್ನೆಲೆಯಲ್ಲಿ ಪಾಲಕರ ಪೋಷಣೆಯಿಂದ ಅನಾಥರಾದ ಮಕ್ಕಳ ಪುನರ್ವಸತಿ ಕಲ್ಪಿಸಲು ಸರ್ಕಾರ ಸಿದ್ದವಿದ್ದು, 18 ವರ್ಷದೊಳಗಿನ ಮಕ್ಕಳ ಕ್ವಾರೆಂಟೈನ್ ಹ

ಟಾಟಾ ಮೋಟಾರ್ಸ್ ನ ಯಾವುದೇ ವಾಣಿಜ್ಯ ವಾಹನ ಖರೀದಿ ಮತ್ತು ಸೇವೆಯ ಪ್ರಯುಕ್ತ ಸಸಿ ನೆಡುವ ಕಾರ್ಯಕ್ರಮ ನಡೆಸಲಿದ್ದೇವೆ. ಸಿಇಓ ಘೋಷಣೆ
ಟಾಟಾ ಮೋಟಾರ್ಸ್ ಹಸಿರು ಭಾರತ ನಿರ್ಮಾಣಕ್ಕೆ ದಾರಿ ಮಾಡುತ್ತಿದೆ. ಬೆಂಗಳೂರು:19/20/ಶನಿವಾರ.ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕರಾದ ಟಾಟಾ ಮೋಟಾರ್ಸ್, ಅವರ ಚಾನೆಲ್ ಪಾಲುದಾರರೊಂದಿಗೆ, ಪರಿಸರ ಸುಸ್ಥಿರತೆಗೆ ತನ್ನ ಬದ್ಧತೆಗೆ ಅನುಗುಣವಾಗಿ ‘ಗೋ ಗ್ರೀನ್’ ಅಭಿಯಾನವನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಈ ಕಾರ್ಯಕ್ರಮದಡಿ ಟಾಟಾ ಮೋಟಾರ್ಸ್, ಒಂದು ಎನ್ ಜಿ ಒ ಸಹಯೋಗದೊಂದಿಗೆ, ಪ್ರತಿ ಹೊಸ ವಾಣಿಜ್ಯ ವಾಹನದ ಮಾರಾಟಕ್ಕಾಗಿ ಮತ್ತು

ಪ್ರಧಾನ ಮಂತ್ರಿಗಳಿಂದ ರಾಮನಗರದ ಫಲಾನುಭವಿಗಳಿಗೆ ಆಸ್ತಿ ಕಾರ್ಡ್ ವಿತರಣೆ, ಸಾಂಕೇತಿಕವಾಗಿ ವಿತರಿಸಿದ ಸಿಇಓ
ರಾಮನಗರ:ಅ/11/20/ಭಾನುವಾರ. ಗ್ರಾಮೀಣ ಪ್ರದೇಶದ ಜಮೀನನ್ನು ಡ್ರೋಣ್ ತಂತ್ರಜ್ಞಾನದಿಂದ ಭೂಮಾಪನ ಮಾಡಿಸಿ, ಆಸ್ತಿ ಕಾರ್ಡ್ ನೀಡುವ ಕೇಂದ್ರ ಸರ್ಕಾರದ ‘ಸ್ವಾಮಿತ್ವ’ ಯೋಜನೆಯಡಿ ರಾಜ್ಯದ ರಾಮನಗರದ ಫಲಾನುಭವಿಗಳು ಸೇರಿದಂತೆ ದೇವರ ಆರು ರಾಜ್ಯಗಳಲ್ಲಿನ ಫಲಾನುಭವಿಗಳಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ವಿತರಿಸಿದರು.ಪ್ರಧಾನ ಮಂ

ಶ್ರೀರಂಗ ಯೋಜನೆ ವರ್ಷದಲ್ಲಿ ಪೂರ್ಣ. ಗುಣಮಟ್ಟಕ್ಕೆ ಆದ್ಯತೆ ನೀಡಲು ಡಿಸಿಎಂ ಸೂಚನೆ
ಬೆಂಗಳೂರು:/ರಾಮನಗರ:ಆ/26/20/ಬುಧವಾರ. ಶ್ರೀರಂಗ ಏತ ನೀರಾವರಿ, ಸತ್ತೇಗಾಲ ಕುಡಿಯುವ ನೀರು ಯೋಜನೆ ಸೇರಿದಂತೆ ರಾಮನಗರ ಜಿಲ್ಲೆಯಲ್ಲಿ ನಡೆಯುತ್ತಿರುವ ವಿವಿಧ ನೀರಾವರಿ ಮತ್ತು ಕುಡಿಯುವ ನೀರು ಯೋಜನೆಗಳನ್ನು ಮುಂದಿನ ಮೂರು ವರ್ಷಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಬುಧವಾರ ಇಲ್ಲಿ ತಿಳಿಸಿದರು.