Tel: 7676775624 | Mail: info@yellowandred.in

Language: EN KAN

    Follow us :


ಪತ್ರಿಕೋದ್ಯಮದ ಚೇತನ ಪಾಪು ಅಸ್ತಂಗತ

Posted date: 17 Mar, 2020

Powered by:     Yellow and Red

ಪತ್ರಿಕೋದ್ಯಮದ ಚೇತನ ಪಾಪು ಅಸ್ತಂಗತ

ಹುಬ್ಬಳ್ಳಿ: ಕನ್ನಡ ಪತ್ರಿಕೋದ್ಯಮ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ *ಪಾಪು* ಎಂದೇ ಖ್ಯಾತರಾಗಿದ್ದ ಹಿರಿಯ ಸಾಹಿತಿ ಶತಾಯುಷಿ *ಡಾ. ಪಾಟೀಲ ಪುಟ್ಟಪ್ಪ* ಅವರು ಇಂದು ವಿಧಿವಶರಾಗಿದ್ದಾರೆ. ಅವರಿಗೆ ೧೦೧ ವರ್ಷ ವಯಸ್ಸಾಗಿತ್ತು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಡಾ. ಪಾಟೀಲ ಪುಟ್ಟಪ್ಪನವರು ಕಳೆದ ಕೆಲವು ದಿನಗಳಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.


ಕರ್ನಾಟಕದ ಗಡಿಭಾಗದ ಜಿಲ್ಲೆಗಳಲ್ಲಿ ಕನ್ನಡದ ಅಸ್ಮಿತೆಯ ಪರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಪಾಪು ಅವರು ಹಲವಾರು ಕನ್ನಡ ಪರ ಹೋರಾಟಗಳ ನೇತೃತ್ವವನ್ನು ವಹಿಸಿ ಈ ಭಾಗದಲ್ಲಿ ಕನ್ನಡದ ಸಾಕ್ಷಿ ಪ್ರಜ್ಞೆಯಾಗಿ ಎಲ್ಲರಿಗೂ ಮಾದರಿಯಾಗಿದ್ದರು. ಡಾ, ಪಾಟೀಲ ಪುಟ್ಟಪ್ಪನವರು ಬೆಳಗಾವಿಯಲ್ಲಿ ನಡೆದಿದ್ದ ೭೦ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.


*ಪ್ರಪಂಚ* ಪತ್ರಿಕೆಯ ಸಂಪಾದಕರಾಗಿದ್ದ ಪುಟ್ಟಪ್ಪನವರು ತಮ್ಮ ಪತ್ರಿಕೆಯ ಮೂಲಕ ಈ ಭಾಗದಲ್ಲಿ ಕನ್ನಡದ ಅರಿವನ್ನು ಜನಸಾಮಾನ್ಯರಲ್ಲಿ ಮೂಡಿಸುವ ಕೆಲಸವನ್ನು ನಿರಂತರವಾಗಿ ನಡೆಸಿಕೊಂಡು ಬಂದಿದ್ದರು. *ತರಂಗ* ವಾರಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಡಾ. ಪುಟ್ಟಪ್ಪನವರ ಅಂಕಣ ಬರಹ *ಪಾಪು ಪ್ರಪಂಚ* ಅವರ ಬರಹದ ವೈಶಿಷ್ಟ್ಯತೆಯನ್ನು ಕರ್ನಾಟಕದ ಜನರಿಗೆ ಪರಿಚಯಿಸಿತ್ತು.


ಕನ್ನಡಿಗರು ಬಹುಸಂಖ್ಯಾತರಾಗಿದ್ದ ಗಡಿಭಾಗದ ಪ್ರದೇಶಗಳ ಒಗ್ಗೂಡುವಿಕೆಗೆ ಆಗ್ರಹಿಸಿ ೧೯೪೦ ಹಾಗೂ ೧೯೫೦ ರಲ್ಲಿ ನಡೆದಿದ್ದ ಹಕ್ಕೊತ್ತಾಯ ಹೋರಾಟದಲ್ಲಿ ಪಾಟೀಲ ಪುಟ್ಟಪ್ಪನವರು ಮುಂಚೂಣಿಯಲ್ಲಿದ್ದರು.


ಕರ್ನಾಟಕದ ಏಕೀಕರಣಕ್ಕೆ ಒತ್ತಾಯಿಸಿ ಡಾ. ಪಾಟೀಲ ಪುಟ್ಟಪ್ಪನವರು ೧೯೪೮ ರಲ್ಲಿ ದಾವಣಗೆರೆಯಲ್ಲಿ ಮೊಟ್ಟ ಮೊದಲ ನಿರ್ಣಯವನ್ನು ಹೊರಡಿಸಿದ್ದರು. ಆ ಮೂಲಕ ಕನ್ನಡ ಭಾಷಾವಾರು ಪ್ರಾಂತ್ಯಗಳ ಒಗ್ಗೂಡುವಿಕೆಗೆ ಪಾಪು ಅವರು ಮೊದಲ ಅಡಿಗಲ್ಲನ್ನು ಸ್ವಾತಂತ್ರ್ಯ ದಕ್ಕಿದ ಆರಂಭದ ವರ್ಷಗಳಲ್ಲೇ ಹಾಕಿದ್ದರು ಎಂಬುದು ವಿಶೇಷ.


*ಕರ್ನಾಟಕದ ಕವಿ ಲೇಖಕರು’, ‘ಕರ್ನಾಟಕ ಸಂಗೀತ ಕಲಾರತ್ನರು’, ‘ಬದುಕಲು ಬೇಕು ಬದುಕುವ ಈ ಮಾತು’, ‘ನೀವು ನಗಬೇಕು’, ‘ನೆನಪಿನ ಬುತ್ತಿ’, ‘ಮಾತು ಮಾಣಿಕ್ಯ’, ‘ಕನ್ನಡದ ಕಂಪು’, ‘ಸುವರ್ಣ ಕರ್ನಾಟಕ’, ‘ಪುಸ್ತಕ ಸಂಸ್ಕೃತಿ’* ಮೊದಲಾದ ಕೃತಿಗಳ ಮೂಲಕ ಪಾಟೀಲ ಪುಟ್ಟಪ್ಪ ಅವರು ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮ ಛಾಪನ್ನು ಮೂಡಿಸಿದ್ದರು.


ಕನ್ನಡ ವಿಶ್ವವಿದ್ಯಾನಿಲಯ ಕೊಡಮಾಡುವ ಪ್ರತಿಷ್ಠಿತ *ನಾಡೋಜ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಪರಿಷತ್ ನಿಂದ ೨೦೦೮ ರಲ್ಲಿ ನೃಪತುಂಗ ಪ್ರಶಸ್ತಿ, ೨೦೧೦ ರಲ್ಲಿ ವೂಡಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ, ಸನ್ಮಾನ ಗೌರವಗಳು ಈ ಶತಾಯುಷಿ ಸಾಹಿತಿಯನ್ನು ಅರಸಿಕೊಂಡು ಬಂದಿವೆ.




ಗೋ ರಾ ಶ್ರೀನಿವಾಸ...


ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in karnataka »

ಕಳೆದ 30 ವರ್ಷಗಳಿಂದ ಶಿಕ್ಷಕರ ಸೇವೆ ಮಾಡಿದ್ದೇನೆ ಮತ್ತೊಮ್ಮೆ ಆಶೀರ್ವದಿಸಿ : ಪುಟ್ಟಣ್ಣ
ಕಳೆದ 30 ವರ್ಷಗಳಿಂದ ಶಿಕ್ಷಕರ ಸೇವೆ ಮಾಡಿದ್ದೇನೆ ಮತ್ತೊಮ್ಮೆ ಆಶೀರ್ವದಿಸಿ : ಪುಟ್ಟಣ್ಣ

ರಾಮನಗರ: ಶಿಕ್ಷಕರ ಕ್ಷೇತ್ರದ ಪ್ರತಿನಿಧಿಯಾಗಿ ಕಳೆದ 30 ವರ್ಷಗಳಿಂದಲೂ ನಿಮ್ಮ ಸೇವೆ ಮಾಡಿದ್ದೇನೆ. ಮುಂದೆಯೂ ನಿಮ್ಮ ಕಷ್ಟಗಳನ್ನರಿತು ನಿಮಗಾಗಿ ಮತ್ತಷ್ಟು ಕ

ಕೆರಗೋಡು ಧ್ವಜ ಪ್ರಕರಣ; ಪ್ರಚೋದನೆ ನೀಡುವವರ ವಿರುದ್ಧ ಕ್ರಮ: ಜಿಲ್ಲಾಧಿಕಾರಿ
ಕೆರಗೋಡು ಧ್ವಜ ಪ್ರಕರಣ; ಪ್ರಚೋದನೆ ನೀಡುವವರ ವಿರುದ್ಧ ಕ್ರಮ: ಜಿಲ್ಲಾಧಿಕಾರಿ

ರಾಮನಗರ, ಫೆ. 02  :  ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಇತ್ತೀಚೆಗೆ ನಡೆದ ಧ್ವಜ ಸ್ತಂಭದ ವಿಚಾರವು ತುಂಬಾ ಸೂಕ್ಷ್ಮ ವಿಚಾರವಾಗಿದ್ದು, ಈ ಸಂಬಂಧ ಯಾವು

ಸಂವಿಧಾನ ಜಾಗೃತಿ ಜಾಥಾ ಗೆ ಸ್ವಾಗತ
ಸಂವಿಧಾನ ಜಾಗೃತಿ ಜಾಥಾ ಗೆ ಸ್ವಾಗತ

ಚನ್ನಪಟ್ಟಣ: ಸಂವಿಧಾನ ಜಾಗೃತಿ ಜಾಥಾಕ್ಕೆ ತಾಲ್ಲೂಕು ಆಡಳಿತದಿಂದ ಅದ್ದೂರಿ ಸ್ವಾಗತ ಕೋರಲಾಯಿತು. ಇದೇ ಸಂದರ್ಭದಲ್ಲಿ

ಸಂವಿಧಾನ ಜಾಗೃತಿ ಜಾಥಾ

ಉಜ್ಜನಹಳ್ಳಿ ವೀರಾಂಜನೇಯಸ್ವಾಮಿ ಗೆ ಗ್ರಾಮಸ್ಥರಿಂದ ಅಭಿಷೇಕ
ಉಜ್ಜನಹಳ್ಳಿ ವೀರಾಂಜನೇಯಸ್ವಾಮಿ ಗೆ ಗ್ರಾಮಸ್ಥರಿಂದ ಅಭಿಷೇಕ

ಚನ್ನಪಟ್ಟಣ: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಮಾಡಿದ ಹಿನ್ನೆಲೆಯಲ್ಲಿ ಚನ್ನಪಟ್ಟಣ ತಾಲ್ಲೂಕಿನ ಉಜ್ಜನಹಳ್ಳಿ ಗ್ರಾಮದ ಶ್ರೀ ವೀರಾಂನೇಯಸ್ವಾಮಿ ಗೆ ವಿಶೇಷ

ಇ-ಆಸ್ತಿ ತಂತ್ರಾಂಶದಲ್ಲಿ ಆಸ್ತಿ ದಾಖಲೀಕರಣ ಮತ್ತು ಗಣಕೀಕರಣಗೊಳಿಸಿ
ಇ-ಆಸ್ತಿ ತಂತ್ರಾಂಶದಲ್ಲಿ ಆಸ್ತಿ ದಾಖಲೀಕರಣ ಮತ್ತು ಗಣಕೀಕರಣಗೊಳಿಸಿ

ರಾಮನಗರ, ಜ. 17: ರಾಮನಗರ ಜಿಲ್ಲಾ ವ್ಯಾಪ್ತಿಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾತೆ ಹೊಂದಿರುವ ಆಸ್ತಿಗಳನ್ನು ದಿನಾಂಕ: 02.05.2015 ರಿಂದ ಜಾರಿಗೆ ಬರುವಂತೆ,

ಬೋಧನಾ ಶುಲ್ಕ ಪಾವತಿಸಲು ಅವಧಿ ವಿಸ್ತರಣೆ
ಬೋಧನಾ ಶುಲ್ಕ ಪಾವತಿಸಲು ಅವಧಿ ವಿಸ್ತರಣೆ

ರಾಮನಗರ:  ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ 2019-20, 2020-21, 2021-22 ಮತ್ತು 2022-23ರ (ಜುಲೈ ಆವೃತ್ತಿ) ದ್ವಿತೀಯ/ತೃತೀಯ ವರ್ಷದ ಬಿ

ಸರ್ವಸಮ್ಮೇಳನಕ್ಕೂ ಮಾದರಿಯಾಗಿ ಯಶಸ್ವಿಯಾದ \'ಪರಿಸರಕ್ಕಾಗಿ ನಾವು\' ಸಮ್ಮೇಳನ
ಸರ್ವಸಮ್ಮೇಳನಕ್ಕೂ ಮಾದರಿಯಾಗಿ ಯಶಸ್ವಿಯಾದ \'ಪರಿಸರಕ್ಕಾಗಿ ನಾವು\' ಸಮ್ಮೇಳನ

ಹಾಸನ: ಪ್ರಾಕೃತಿಕ ಸೌಂದರ್ಯವು ಇ-ತ್ಯಾಜ್ಯ, ಕೆಲ ತಂತ್ರಜ್ಞಾನ ಹಾಗೂ ಪ್ಲಾಸ್ಟಿಕ್ ನಿಂದ  ಹಾಳಾಗುತ್ತಿದೆ. ಪರಿಸರ ನಾಶಕ್ಕೆ ಮುನ್ನುಡಿ ಬರೆದವನೇ

೫೨ ಲಕ್ಷಕ್ಕೂ ಹೆಚ್ಚು ಮೌಲ್ಯದ ಪಡಿತರ ಅಕ್ಕಿ ಗೋದಾಮಿನಲ್ಲೇ ಮಾಯ, ಅಧಿಕಾರಿಗಳಿಂದ ಪರಿಶೀಲನೆ, ವ್ಯವಸ್ಥಾಪಕನ ಬಂಧನ
೫೨ ಲಕ್ಷಕ್ಕೂ ಹೆಚ್ಚು ಮೌಲ್ಯದ ಪಡಿತರ ಅಕ್ಕಿ ಗೋದಾಮಿನಲ್ಲೇ ಮಾಯ, ಅಧಿಕಾರಿಗಳಿಂದ ಪರಿಶೀಲನೆ, ವ್ಯವಸ್ಥಾಪಕನ ಬಂಧನ

ಚನ್ನಪಟ್ಟಣ: ತಾಲ್ಲೂಕಿನಾದ್ಯಂತ ಪಡಿತರ ನ್ಯಾಯಬೆಲೆ ಅಂಗಡಿಗಳಿಗೆ ವಿತರಿಸಲು ಪಡಿತರ ಅಕ್ಕಿಯ ಪೈಕಿ ಸುಮಾರು ೫೨ ಲಕ್ಷಕ್ಕೂ  ಮೌಲ್ಯದ ೧,೫೪೩.೬೫ ಕ್ವಿಂಟಾಲ್ ಅ

ದಸರಾ ಎಂಬುದು ಮೈಸೂರಿಗಷ್ಟೇ ಸೀಮಿತವಾಗಬಾರದು, ಮನ-ಮನೆಯಲ್ಲೂ ದಸರಾ ಆಗಬೇಕು. ಡಾ ರೂಪಾ ಶ್ರೀಧರ್
ದಸರಾ ಎಂಬುದು ಮೈಸೂರಿಗಷ್ಟೇ ಸೀಮಿತವಾಗಬಾರದು, ಮನ-ಮನೆಯಲ್ಲೂ ದಸರಾ ಆಗಬೇಕು. ಡಾ ರೂಪಾ ಶ್ರೀಧರ್

ಚನ್ನಪಟ್ಟಣ: ದಸರಾ ಎಂದರೆ ಕೇವಲ ಮೈಸೂರು ಎಂಬಂತಾಗಿದೆ, ಇದು ನಾಡ ಹಬ್ಬ ಎಂಬುದು ಕೇವಲ ಉಲ್ಲೇಖಕ್ಕಷ್ಟೇ ಸೀಮಿತವಾಗಿದೆ. ಇದು ನಾಡಹಬ್ಬ ಎಂಬುದು ಸರ

ಒಕ್ಕಲಿಗರು ಸಂಸ್ಕೃತಿ ಹಿeನರಲ್ಲ ನೈಜ ಸಂಸ್ಕೃತಿಯ ಮಾಲೀಕರು, ಪ್ರೊ ಭಗವಾನ್ ಗೆ ತಿರುಗೇಟು ನೀಡಿದ ಹಿರಿಯ ರೈತ ಮುಖಂಡ ಸಿ ಪುಟ್ಟಸ್ವಾಮಿ
ಒಕ್ಕಲಿಗರು ಸಂಸ್ಕೃತಿ ಹಿeನರಲ್ಲ ನೈಜ ಸಂಸ್ಕೃತಿಯ ಮಾಲೀಕರು, ಪ್ರೊ ಭಗವಾನ್ ಗೆ ತಿರುಗೇಟು ನೀಡಿದ ಹಿರಿಯ ರೈತ ಮುಖಂಡ ಸಿ ಪುಟ್ಟಸ್ವಾಮಿ

ರಾಮನಗರ: ಚನ್ನಪಟ್ಟಣ; ಪ್ರೊ ಭಗವಾನ್ ವಿಚಾರವಾದಿ, ಮೂಢನಂಬಿಕೆಗಳನ್ನು ಕಿತ್ತೊಗೆಯಲು, ಪುರಾಣ ಎಂಬುದು ಕಪೋಲ ಕಲ್ಪಿತ, ಇತಿಹಾಸ ಎಂಬುದು ಸಾರ್ವಕಾಲ

Top Stories »  


Top ↑