Tel: 7676775624 | Mail: info@yellowandred.in

Language: EN KAN

    Follow us :


ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ: ಕುಮಾರಸ್ವಾಮಿ ವಿಶ್ವಾಸ

Posted date: 22 Mar, 2018

Powered by:     Yellow and Red

ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ: ಕುಮಾರಸ್ವಾಮಿ ವಿಶ್ವಾಸ

ರಾಮನಗರ : ರಾಜ್ಯದಲ್ಲಿ 113 ಸ್ಥಾನಗಳನ್ನು ಗೆಲ್ಲುವ ಮೂಲಕ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುವುದೆ ನನ್ನ ಗುರಿ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ರಾಮನಗರದಲ್ಲಿ ವಿಕಾಸ ಪರ್ವಯಾತ್ರೆ ಮತ್ತು ಕಾರ್ಯಕರ್ತರ ಸಭೆಯನ್ನು ಉದ್ಧೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ವಿರುದ್ದ ಹೋರಾಟ ಮಾಡಲು ಶಕ್ತಿ ತುಂಬಿದ ಜನ ರಾಮನಗರದ ಮತದಾರರಾಗಿದ್ದು, ಹಣಕ್ಕೆ ಬೆಲೆ ಕೊಡದೆ ಪ್ರೀತಿ ವಿಶ್ವಾಸಕ್ಕೆ ಬೆಲೆ ಕೊಡುವ ಹೃದಯವಂತರು. ಆಗಾಗಿ ಕ್ಷೇತ್ರದಲ್ಲಿ ಒಮ್ಮೆ ಬಂದು ಅರ್ಜಿ ಸಲ್ಲಿಸಿ ಹೋದರೂ ನನ್ನನ್ನು ಬಹುಮತಗಳಿಂದ ಗೆಲ್ಲಿಸಿದ ಕೀರ್ತಿ ನಿಮ್ಮದಾಗಿದೆ ಎಂದು ಹೇಳಿದರು. 
ನೀವು ನೀಡಿದ ಆರ್ಶೀವಾದದಿಂದ ಇಂದು ರಾಜ್ಯದಲ್ಲಿ ಜೆಡಿಎಸ್ ಪಕ್ಷ ಸಂಘಟಿಸಲು ಸಾಧ್ಯವಾಗಿದೆ. ಈಗಾಗಲೆ ರಾಜ್ಯದ 80ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಪ್ರವಾಸ ನಡೆಸಿದ್ದೇನೆ. ಮುಂದಿನ ಏ.10 ರೊಳಗೆ 40ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಪ್ರವಾಸ ನಡೆಸಿ ಪಕ್ಷ ಸಂಘಟಿಸಲಿದ್ದು, ರಾಜ್ಯದೆಲ್ಲೆಡೆ ಪಕ್ಷಕ್ಕೆ ಉತ್ತಮ ಬೆಂಬಲ ವ್ಯಕ್ತವಾಗಿದ್ದು ಜೆಡಿಎಸ್ ಅಧಿಕಾರಕ್ಕೆ ಬರುವ ವಿಶ್ವಾಸವಿದೆ ಎಂದರು.
ರಾಮನಗರ ನನಗೆ ರಾಜಕೀಯ ಮರುಜನ್ಮ ನೀಡಿದ್ದು ಯಾವುದೆ ಕಾರಣಕ್ಕೂ ಕ್ಷೇತ್ರ ಬದಲಿಸುವ ಪ್ರಶ್ನೇಯೆ ಇಲ್ಲ ಎಂದರು. ರಾಜ್ಯದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳಿಂದ ಯಾವುದೇ ಪ್ರಯೋಜನವಾಗಿಲ್ಲ. ಜೆಡಿಎಸ್ ಅಧಿಕಾರಕ್ಕೆ ತರಬೇಕೆಂದು ನಾಡಿನ ಜನ ನಿರ್ಧರಿಸಿದ್ದಾರೆ. ನಮ್ಮ ಕುಟುಂಬದಿಂದ ಇಬ್ಬರೇ ಸ್ಪರ್ಧೆ ಎಂದು ಅವರು ಪುನರುಚ್ಚರಿಸಿದ ಅವರು ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವ ಹಗಲು ಕನಸು ಕಾಣುತ್ತಿದ್ದಾರೆ ಎಂಬ ಸಂಸದ ಡಿ.ಕೆ.ಸುರೇಶ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಎಚ್‍ಡಿಕೆ ನನ್ನನ್ನು ಅವರೇನು ಸಿಎಂ ಮಾಡುವುದಿಲ್ಲ. ರಾಜ್ಯದ ಆರು ಕೋಟಿ ಜನತೆ ಮಾಡುತ್ತಾರೆ. ಹಗಲು ಕನಸಿನ ಬಗ್ಗೆ ಸುರೇಶ್ ಮಾತನಾಡಿದ್ದಾರೆ. ನಾನು ರಾಜ್ಯದಲ್ಲಿ ರೈತರ ಆತ್ಮಹತ್ಯೆ ತಡೆಯುವ ಸರ್ಕಾರ ತರಬೇಕೆಂದು ಕನಸು ಕಾಣುತ್ತಿದ್ದೇನೆಯೆ ಹೊರತು ರಾತ್ರಿ ವೇಳೆ ಗ್ರಾನೈಟ್ ಸಾಗಿಸುವುದು, ಬಡವರ ಭೂಮಿ ಲಪಟಾಯಿಸುವುದನ್ನು ಕನಸು ಕಾಣುತ್ತಿಲ್ಲ ಎಂದು ಚಾಟಿ ಬೀಸಿದರು.
ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಚನ್ನಪಟ್ಟಣ ಜನರೂ ನನ್ನನ್ನು ಬೆಂಬಲಿಸಿದ್ದಾರೆ. ರಾಮನಗರ, ಮಾಗಡಿ, ಮತ್ತು ಚನ್ನಪಟ್ಟಣ, ಕನಕಪುರ ಕ್ಷೇತ್ರದಲ್ಲಿ ಗೆಲ್ಲುವ ಅಗತ್ಯ ಇದೆ. ಆದರೆ  ರಾಮನಗರ ನನ್ನ ಕರ್ಮ ಭೂಮಿ. ಇಲ್ಲಿನ ಕಾರ್ಯಕರ್ತರ ಅಭಿಪ್ರಾಯ ಪಡೆದೆ ಚನ್ನಪಟ್ಟಣ ಕ್ಷೇತ್ರದಲ್ಲಿ ಸ್ಪರ್ದಿಸುವ ಬಗ್ಗೆ ಚಿಂತಿಸುತ್ತೇನೆ. ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಪಕ್ಷ ನಂಬಿರುವ ಕಾರ್ಯಕರ್ತರಿಗೆ ವಿಷ ಉಣಿಸುವ ಕೆಲಸ ಮಾಡುವ ಪ್ರಶ್ನೆಯೇ ಇಲ್ಲ. ನನ್ನ ಬಗ್ಗೆ ಕಾರ್ಯಕರ್ತರು ಅಪನಂಬಿಕೆ ಹೊಂದಿದರೆ ಪಕ್ಷಕ್ಕೆ ಶ್ರೇಯಸ್ಸಾಗುವುದಿಲ್ಲ ಎಂದ ಅವರು ಪ್ರಾಮಾಣಿಕ ಕಾರ್ಯಕರ್ತರಿಗೆ ಪಕ್ಷ ಟಿಕೇಟ್ ನೀಡಿ ಗೆಲುವಿಗಾಗಿ ಶ್ರಮಿಸಲಿದೆ. ಹಣ ಬಲದ ಮೇಲೆ ನನಗೆ ನಂಬಿಕೆ ಇಲ್ಲ ಜನ ಬಲದ ಮೇಲೆ ನಮ್ಮ ಪಕ್ಷ ಚುನಾವಣೆ ಎದುರಿಸಲಿದೆ ಎಂದರು.
ಕಾರ್ಯಕ್ರಮದಲ್ಲಿ ಮಾಗಡಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎ.ಮಂಜುನಾಥ್, ಮಾಜಿ ಶಾಸಕರಾದ ಎಲ್.ಆರ್.ಶಿವರಾಮೇಗೌಡ, ಸಿ.ಅಶ್ವಥ್, ಮರಿಲಿಂಗೇಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಅಶೋಕ್‍ಕುಮಾರ್, ತಾಲ್ಲೂಕು ಅಧ್ಯಕ್ಷ ರಾಜಶೇಖರ್, ಪಕ್ಷದ ರಾಜ್ಯ ವಕ್ತಾರ ಬಿ.ಉಮೇಶ್, ಮುಖಂಡರಾದ ಪ್ರಾಣೇಶ್, ಶಾಂತಪ್ಪ, ಜಯಮುತ್ತು, ಲಿಂಗೇಶ್‍ಕುಮಾರ್, ಜಿಪಂ ಮಾಜಿ ಅಧ್ಯಕ್ಷ ಎಚ್.ಸಿ.ರಾಜಣ್ಣ, ನಗರ ಘಟಕದ ಅಧ್ಯಕ್ಷ ಕುಮಾರ್, ಗ್ರಾಮಾಂತರ ಘಟಕದ ಅಧ್ಯಕ್ಷ ಅಜಯ್‍ದೇವೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.
 

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in karnataka »

ಕಳೆದ 30 ವರ್ಷಗಳಿಂದ ಶಿಕ್ಷಕರ ಸೇವೆ ಮಾಡಿದ್ದೇನೆ ಮತ್ತೊಮ್ಮೆ ಆಶೀರ್ವದಿಸಿ : ಪುಟ್ಟಣ್ಣ
ಕಳೆದ 30 ವರ್ಷಗಳಿಂದ ಶಿಕ್ಷಕರ ಸೇವೆ ಮಾಡಿದ್ದೇನೆ ಮತ್ತೊಮ್ಮೆ ಆಶೀರ್ವದಿಸಿ : ಪುಟ್ಟಣ್ಣ

ರಾಮನಗರ: ಶಿಕ್ಷಕರ ಕ್ಷೇತ್ರದ ಪ್ರತಿನಿಧಿಯಾಗಿ ಕಳೆದ 30 ವರ್ಷಗಳಿಂದಲೂ ನಿಮ್ಮ ಸೇವೆ ಮಾಡಿದ್ದೇನೆ. ಮುಂದೆಯೂ ನಿಮ್ಮ ಕಷ್ಟಗಳನ್ನರಿತು ನಿಮಗಾಗಿ ಮತ್ತಷ್ಟು ಕ

ಕೆರಗೋಡು ಧ್ವಜ ಪ್ರಕರಣ; ಪ್ರಚೋದನೆ ನೀಡುವವರ ವಿರುದ್ಧ ಕ್ರಮ: ಜಿಲ್ಲಾಧಿಕಾರಿ
ಕೆರಗೋಡು ಧ್ವಜ ಪ್ರಕರಣ; ಪ್ರಚೋದನೆ ನೀಡುವವರ ವಿರುದ್ಧ ಕ್ರಮ: ಜಿಲ್ಲಾಧಿಕಾರಿ

ರಾಮನಗರ, ಫೆ. 02  :  ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಇತ್ತೀಚೆಗೆ ನಡೆದ ಧ್ವಜ ಸ್ತಂಭದ ವಿಚಾರವು ತುಂಬಾ ಸೂಕ್ಷ್ಮ ವಿಚಾರವಾಗಿದ್ದು, ಈ ಸಂಬಂಧ ಯಾವು

ಸಂವಿಧಾನ ಜಾಗೃತಿ ಜಾಥಾ ಗೆ ಸ್ವಾಗತ
ಸಂವಿಧಾನ ಜಾಗೃತಿ ಜಾಥಾ ಗೆ ಸ್ವಾಗತ

ಚನ್ನಪಟ್ಟಣ: ಸಂವಿಧಾನ ಜಾಗೃತಿ ಜಾಥಾಕ್ಕೆ ತಾಲ್ಲೂಕು ಆಡಳಿತದಿಂದ ಅದ್ದೂರಿ ಸ್ವಾಗತ ಕೋರಲಾಯಿತು. ಇದೇ ಸಂದರ್ಭದಲ್ಲಿ

ಸಂವಿಧಾನ ಜಾಗೃತಿ ಜಾಥಾ

ಉಜ್ಜನಹಳ್ಳಿ ವೀರಾಂಜನೇಯಸ್ವಾಮಿ ಗೆ ಗ್ರಾಮಸ್ಥರಿಂದ ಅಭಿಷೇಕ
ಉಜ್ಜನಹಳ್ಳಿ ವೀರಾಂಜನೇಯಸ್ವಾಮಿ ಗೆ ಗ್ರಾಮಸ್ಥರಿಂದ ಅಭಿಷೇಕ

ಚನ್ನಪಟ್ಟಣ: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಮಾಡಿದ ಹಿನ್ನೆಲೆಯಲ್ಲಿ ಚನ್ನಪಟ್ಟಣ ತಾಲ್ಲೂಕಿನ ಉಜ್ಜನಹಳ್ಳಿ ಗ್ರಾಮದ ಶ್ರೀ ವೀರಾಂನೇಯಸ್ವಾಮಿ ಗೆ ವಿಶೇಷ

ಇ-ಆಸ್ತಿ ತಂತ್ರಾಂಶದಲ್ಲಿ ಆಸ್ತಿ ದಾಖಲೀಕರಣ ಮತ್ತು ಗಣಕೀಕರಣಗೊಳಿಸಿ
ಇ-ಆಸ್ತಿ ತಂತ್ರಾಂಶದಲ್ಲಿ ಆಸ್ತಿ ದಾಖಲೀಕರಣ ಮತ್ತು ಗಣಕೀಕರಣಗೊಳಿಸಿ

ರಾಮನಗರ, ಜ. 17: ರಾಮನಗರ ಜಿಲ್ಲಾ ವ್ಯಾಪ್ತಿಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾತೆ ಹೊಂದಿರುವ ಆಸ್ತಿಗಳನ್ನು ದಿನಾಂಕ: 02.05.2015 ರಿಂದ ಜಾರಿಗೆ ಬರುವಂತೆ,

ಬೋಧನಾ ಶುಲ್ಕ ಪಾವತಿಸಲು ಅವಧಿ ವಿಸ್ತರಣೆ
ಬೋಧನಾ ಶುಲ್ಕ ಪಾವತಿಸಲು ಅವಧಿ ವಿಸ್ತರಣೆ

ರಾಮನಗರ:  ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ 2019-20, 2020-21, 2021-22 ಮತ್ತು 2022-23ರ (ಜುಲೈ ಆವೃತ್ತಿ) ದ್ವಿತೀಯ/ತೃತೀಯ ವರ್ಷದ ಬಿ

ಸರ್ವಸಮ್ಮೇಳನಕ್ಕೂ ಮಾದರಿಯಾಗಿ ಯಶಸ್ವಿಯಾದ \'ಪರಿಸರಕ್ಕಾಗಿ ನಾವು\' ಸಮ್ಮೇಳನ
ಸರ್ವಸಮ್ಮೇಳನಕ್ಕೂ ಮಾದರಿಯಾಗಿ ಯಶಸ್ವಿಯಾದ \'ಪರಿಸರಕ್ಕಾಗಿ ನಾವು\' ಸಮ್ಮೇಳನ

ಹಾಸನ: ಪ್ರಾಕೃತಿಕ ಸೌಂದರ್ಯವು ಇ-ತ್ಯಾಜ್ಯ, ಕೆಲ ತಂತ್ರಜ್ಞಾನ ಹಾಗೂ ಪ್ಲಾಸ್ಟಿಕ್ ನಿಂದ  ಹಾಳಾಗುತ್ತಿದೆ. ಪರಿಸರ ನಾಶಕ್ಕೆ ಮುನ್ನುಡಿ ಬರೆದವನೇ

೫೨ ಲಕ್ಷಕ್ಕೂ ಹೆಚ್ಚು ಮೌಲ್ಯದ ಪಡಿತರ ಅಕ್ಕಿ ಗೋದಾಮಿನಲ್ಲೇ ಮಾಯ, ಅಧಿಕಾರಿಗಳಿಂದ ಪರಿಶೀಲನೆ, ವ್ಯವಸ್ಥಾಪಕನ ಬಂಧನ
೫೨ ಲಕ್ಷಕ್ಕೂ ಹೆಚ್ಚು ಮೌಲ್ಯದ ಪಡಿತರ ಅಕ್ಕಿ ಗೋದಾಮಿನಲ್ಲೇ ಮಾಯ, ಅಧಿಕಾರಿಗಳಿಂದ ಪರಿಶೀಲನೆ, ವ್ಯವಸ್ಥಾಪಕನ ಬಂಧನ

ಚನ್ನಪಟ್ಟಣ: ತಾಲ್ಲೂಕಿನಾದ್ಯಂತ ಪಡಿತರ ನ್ಯಾಯಬೆಲೆ ಅಂಗಡಿಗಳಿಗೆ ವಿತರಿಸಲು ಪಡಿತರ ಅಕ್ಕಿಯ ಪೈಕಿ ಸುಮಾರು ೫೨ ಲಕ್ಷಕ್ಕೂ  ಮೌಲ್ಯದ ೧,೫೪೩.೬೫ ಕ್ವಿಂಟಾಲ್ ಅ

ದಸರಾ ಎಂಬುದು ಮೈಸೂರಿಗಷ್ಟೇ ಸೀಮಿತವಾಗಬಾರದು, ಮನ-ಮನೆಯಲ್ಲೂ ದಸರಾ ಆಗಬೇಕು. ಡಾ ರೂಪಾ ಶ್ರೀಧರ್
ದಸರಾ ಎಂಬುದು ಮೈಸೂರಿಗಷ್ಟೇ ಸೀಮಿತವಾಗಬಾರದು, ಮನ-ಮನೆಯಲ್ಲೂ ದಸರಾ ಆಗಬೇಕು. ಡಾ ರೂಪಾ ಶ್ರೀಧರ್

ಚನ್ನಪಟ್ಟಣ: ದಸರಾ ಎಂದರೆ ಕೇವಲ ಮೈಸೂರು ಎಂಬಂತಾಗಿದೆ, ಇದು ನಾಡ ಹಬ್ಬ ಎಂಬುದು ಕೇವಲ ಉಲ್ಲೇಖಕ್ಕಷ್ಟೇ ಸೀಮಿತವಾಗಿದೆ. ಇದು ನಾಡಹಬ್ಬ ಎಂಬುದು ಸರ

ಒಕ್ಕಲಿಗರು ಸಂಸ್ಕೃತಿ ಹಿeನರಲ್ಲ ನೈಜ ಸಂಸ್ಕೃತಿಯ ಮಾಲೀಕರು, ಪ್ರೊ ಭಗವಾನ್ ಗೆ ತಿರುಗೇಟು ನೀಡಿದ ಹಿರಿಯ ರೈತ ಮುಖಂಡ ಸಿ ಪುಟ್ಟಸ್ವಾಮಿ
ಒಕ್ಕಲಿಗರು ಸಂಸ್ಕೃತಿ ಹಿeನರಲ್ಲ ನೈಜ ಸಂಸ್ಕೃತಿಯ ಮಾಲೀಕರು, ಪ್ರೊ ಭಗವಾನ್ ಗೆ ತಿರುಗೇಟು ನೀಡಿದ ಹಿರಿಯ ರೈತ ಮುಖಂಡ ಸಿ ಪುಟ್ಟಸ್ವಾಮಿ

ರಾಮನಗರ: ಚನ್ನಪಟ್ಟಣ; ಪ್ರೊ ಭಗವಾನ್ ವಿಚಾರವಾದಿ, ಮೂಢನಂಬಿಕೆಗಳನ್ನು ಕಿತ್ತೊಗೆಯಲು, ಪುರಾಣ ಎಂಬುದು ಕಪೋಲ ಕಲ್ಪಿತ, ಇತಿಹಾಸ ಎಂಬುದು ಸಾರ್ವಕಾಲ

Top Stories »  


Top ↑