Tel: 7676775624 | Mail: info@yellowandred.in

Language: EN KAN

    Follow us :


ಸಿಂಧಗಿಯಲ್ಲಿ ಬಿಜೆಪಿ, ಹಾನಗಲ್ ನಲ್ಲಿ ಕಾಂಗ್ರೆಸ್ ಜಯಭೇರಿ

Posted date: 03 Nov, 2021

Powered by:     Yellow and Red

ಸಿಂಧಗಿಯಲ್ಲಿ ಬಿಜೆಪಿ, ಹಾನಗಲ್ ನಲ್ಲಿ ಕಾಂಗ್ರೆಸ್ ಜಯಭೇರಿ

ಬೆಂಗಳೂರು.ನ.02: ಸಿಂಧಗಿ ಹಾಗೂ ಹಾನಗಲ್ ವಿಧಾನಸಭೆ ಉಪಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು, ಸಿಂಧಗಿಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ 31,573 ಮತಗಳ ಭಾರೀ ಅಂತರ ದಿಂದ ಐತಿಹಾಸಿಕ ವಿಜಯ ಸಾಧಿಸಿದ್ದಾರೆ.

ಅದೇ ರೀತಿಯಲ್ಲಿ ಹಾನಗಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಅವರು 7,598 ಮತಗಳ ಅಂತರದಿಂದ ಜಯಗಳಿಸಿದ್ದಾರೆ

ಸಿಂಧಗಿಯಲ್ಲಿ ಜೆಡಿಎಸ್ ಶಾಸಕರಾಗಿದ್ದ ಎಂ.ಸಿ.ಮನಗೂಳಿ ಅವರ ಪುತ್ರ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಹೀನಾಯ ಸೋಲು ಅನುಭವಿಸಿದ್ದಾರೆ. ಇದರೊಂದಿಗೆ ಕಾಂಗ್ರೆಸ್ ಐದನೇ ಬಾರಿ ಕ್ಷೇತ್ರದಲ್ಲಿ ಸತತ ಸೋಲು ಅನುಭವಿಸಿದೆ.


ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಅವರ ಪಕ್ಷದ ನಾಯಕರು ಹತ್ತಾರು ದಿನ ಠಿಕಾಣಿ ಹೂಡಿದ್ದರೂ ಜೆಡಿಎಸ್ ಪಕ್ಷ ಕ್ಷೇತ್ರವನ್ನು ಕಳೆದುಕೊಂಡಿದೆ. ಜೊತೆಗೆ ಅಭ್ಯರ್ಥಿ ನಾಜಿಯಾ ಅಂಗಡಿ ಠೇವಣಿ ಕಳೆದುಕೊಂಡು ಮುಖಭಂಗ ಅನುಭವಿಸಿದ್ದಾರೆ.

ಬಿಜೆಪಿಯ ರಮೇಶ ಭೂಸನೂರ 93,380 ಮತಗಳನ್ನು ಪಡೆದರೆ, ಕಾಂಗ್ರೆಸ್‌ನ ಅಶೋಕ ಮನ ಗೂಳಿ 62,292 ಮತಗಳನ್ನು ಪಡೆದರು. ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ  ಕೇವಲ 4,371 ಮತಗಳನ್ನಷ್ಟೇ ಪಡೆದು ಹೀನಾಯ ಸೋಲು ಕಂಡಿದ್ದಾರೆ.

ಪಕ್ಷದ ಅಭ್ಯರ್ಥಿ ರಮೇಶ ಭೂಸನೂರ ಅವರು ಗೆಲುವು ಖಚಿತವಾಗುತ್ತಲೇ ಮತ ಎಣಿಕೆ ಕೇಂದ್ರದ ಎದುರು ಹಾಗೂ ಸಿಂಧಗಿ ಬಿಜೆಪಿ ಕಾರ್ಯಕರ್ತರು, ಬೆಂಬಲಿಗರು ವಿಜಯೋತ್ಸವ ಆಚರಣೆಗೆ ಮುಂದಾದರು.


ಅದೇ ರೀತಿಯಲ್ಲಿ ಕಾಂಗ್ರೆ ಸ್‌ನ  ಶ್ರೀನಿವಾಸ ಮಾನೆ 87,113 ಮತ ಪಡೆದರೆ, ಬಿಜೆಪಿಯ ಶ್ರೀವರಾಜ್ ಸಜ್ಜನ್ 79,515 ಮತಗಳನ್ನು ಪಡೆದರು. ಜೆಡಿಎಸ್ ಅಭ್ಯರ್ಥಿ 4 ಅಂಕಿಯನ್ನೂ ದಾಟಲಾಗದೆ ಠೇವಣಿ ಕಳೆದುಕೊಂಡಿದ್ದಾರೆ.

ಕೊನೆಯ ಗಳಿಗೆಯವರೆಗೂ ಬಿಜೆಪಿ ನಾಯಕರುಗಳು ಎರಡೂಕ್ಷೇತ್ರಗಳಲ್ಲಿ ನಾವೇ ಗೆಲ್ಲುವುದು ಎಂಬ ಭರವಸೆಯಲ್ಲಿ ಇದ್ದರು. ಆದರೆ ಫಲಿತಾಂಶ ಬೇರೆಯೇ ಆಯಿತು ಎಂಬುದು ಗಮನಾರ್ಹ ಸಂಗತಿಯಾಗಿದೆ.


ಗೋ ರಾ ಶ್ರೀನಿವಾಸ...

ಮೊ:9845856139.

??????????????

  • ????? ???????? ??????????? ???? ??????????.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in karnataka »

ಕೆ ಹೆಚ್ ರಾಮಯ್ಯ ತಂಡ ಗೆಲ್ಲಿಸಿ, ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತೇವೆ. ಜಯಮುತ್ತು, ಅ ದೇವೇಗೌಡ ತಂಡ ಮನವಿ
ಕೆ ಹೆಚ್ ರಾಮಯ್ಯ ತಂಡ ಗೆಲ್ಲಿಸಿ, ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತೇವೆ. ಜಯಮುತ್ತು, ಅ ದೇವೇಗೌಡ ತಂಡ ಮನವಿ

ನಾವು ಯಾವುದೇ ಕಾರಣಕ್ಕೂ ಭ್ರಷ್ಟಾಚಾರ ಸಹಿಸುವುದಿಲ್ಲ. ನಾವೂ ಸಹ ಈ ಹಿಂದಿನ ಅವಧಿಯಲ್ಲೂ ಸಹ ಭ್ರಷ್ಟಾಚಾರ ಮಾಡಿಲ್ಲ. ಮತದಾರರು ಆಶೀರ್ವದಿಸಿದರೆ ಮುಂದಿನ ದಿನಗಳಲ್ಲಿ ಸಂಘದ ಆಸ್ತಿ ಉಳಿಸುವುದರ ಜೊತೆಗೆ ಸ

ಇಳಿ ವಯಸ್ಸಿನಲ್ಲಿ ಒಂದಾದ ಅಮರ ಪ್ರೇಮಿಗಳು
ಇಳಿ ವಯಸ್ಸಿನಲ್ಲಿ ಒಂದಾದ ಅಮರ ಪ್ರೇಮಿಗಳು

ಮೈಸೂರು: ಮೇಲುಕೋಟೆ. ನಲವತ್ತೈದು ವರ್ಷಗಳ ಹಿಂದೆ ಮೈಸೂರಿನ ಹೆಬ್ಬಾಳ ಗ್ರಾಮದಲ್ಲಿ ಅಕ್ಕಪಕ್ಕದಲ್ಲಿ ನೆಲೆಸಿದ್ದ ಯುವಕ-ಯುವತಿ ಪ್ರೀತಿಸಿ ಮದುವೆಯಾ

ವಿಧಾನ ಪರಿಷತ್ ಚುನಾವಣೆ: ಗ್ರಾ.ಪಂ. ಸದ್ಯರಿಗೆ ಫುಲ್ ಡಿಮ್ಯಾಂಡ್!
ವಿಧಾನ ಪರಿಷತ್ ಚುನಾವಣೆ: ಗ್ರಾ.ಪಂ. ಸದ್ಯರಿಗೆ ಫುಲ್ ಡಿಮ್ಯಾಂಡ್!

ರಾಮನಗರ: ಬೆಂಗಳೂರು ಗ್ರಾಮಾಂತರ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್ ಗೆ ನಡೆಯುವ ಚುನಾವಣೆಯಲ್ಲಿ  ಸ್ಪರ್ಧಿಸಿರುವ ಪ್ರಮುಖ ಮೂರು ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಗೆಲ್ಲಲು ತಂತ್ರ ರೂ

ವಿಧಾನ ಪರಿಷತ್ ದ್ವೈವಾರ್ಷಿಕ ಚುನಾವಣೆ: ಕರಡು ಮತದಾರರ ಪಟ್ಟಿ ಪ್ರಕಟ
ವಿಧಾನ ಪರಿಷತ್ ದ್ವೈವಾರ್ಷಿಕ ಚುನಾವಣೆ: ಕರಡು ಮತದಾರರ ಪಟ್ಟಿ ಪ್ರಕಟ

ರಾಮನಗರ, ನ. 12/21 ಬೆಂಗಳೂರು ಗ್ರಾಮಾಂತರ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ರಾಜ್ಯ ವಿಧಾನ ಪರಿಷತ್ ಗೆ ದ್ವೈವಾರ್ಷಿಕ ಚುನಾವಣೆ-2022ರ ಸಂಬಂಧ ಗ್ರಾಮ ಪಂಚಾಯಿತಿವಾರು/ ನಗರ ಸ್ಥಳೀಯ ಸಂಸ್ಥೆವಾರು ಮತದಾ

ಇರುಳಿಗರಿಗೆ ಮನೆ ನಿರ್ಮಿಸಲು ಜಾಗ ಗೊತ್ತು ಮಾಡಿದ ಅಧಿಕಾರಿಗಳು
ಇರುಳಿಗರಿಗೆ ಮನೆ ನಿರ್ಮಿಸಲು ಜಾಗ ಗೊತ್ತು ಮಾಡಿದ ಅಧಿಕಾರಿಗಳು

ರಾಮನಗರ:ನ;12/21. ತಾಲೂಕಿನ ಕೂಟಗಲ್ ಬಳಿ ಇರುಳಿಗರಿಗೆ ಉಚಿತ ನಿವೇಶನ ನೀಡಲು ಮೀನಾ ಮೇಷ ಎಣಿಸುತ್ತಿದ್ದ ಅಧಿಕಾರಿಗಳು ಗುರುವಾರ ಬೆಳಿಗ್ಗೆ ಏಕಾಏಕಿ ಧಾವಿಸಿ ಬಂದು ಕೂಟಗಲ್ ಸರ್ವೆ ಸಂಖ್ಯೆ 94 ರಲ್ಲಿ 2

ಕರಾವಳಿ ಖಡಕ್ ನಿರ್ದೇಶಕ ಸಂದೇಶ್ ಶೆಟ್ಟಿ  ಜೊತೆಗೆ ಟ್ರೈಬಲ್ ರಾಣಿಯಾಗಿ ಭೂಮಿ ಶೆಟ್ಟಿ ಅಯ್ಕೆ
ಕರಾವಳಿ ಖಡಕ್ ನಿರ್ದೇಶಕ ಸಂದೇಶ್ ಶೆಟ್ಟಿ ಜೊತೆಗೆ ಟ್ರೈಬಲ್ ರಾಣಿಯಾಗಿ ಭೂಮಿ ಶೆಟ್ಟಿ ಅಯ್ಕೆ

ಕರಾವಳಿಯ ಖಡಕ್ ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ ಸದ್ಯ ಹೊಸದೊಂದು ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದಾರೆ. ಎರಡು ವರ್ಷದ ಕೊವೀಡ್ ಬ್ರೇಕ್ ನಡುವೆ ಎರಡು ಆಯಾಮದ ಕಥೆ ಸಿದ್ಧವಾಗಿದೆ. ತಸ್ಮಯ್ ಪ್ರೋಡಕ್ಷನ್

ಸಿಂಧಗಿಯಲ್ಲಿ ಬಿಜೆಪಿ, ಹಾನಗಲ್ ನಲ್ಲಿ ಕಾಂಗ್ರೆಸ್ ಜಯಭೇರಿ
ಸಿಂಧಗಿಯಲ್ಲಿ ಬಿಜೆಪಿ, ಹಾನಗಲ್ ನಲ್ಲಿ ಕಾಂಗ್ರೆಸ್ ಜಯಭೇರಿ

ಬೆಂಗಳೂರು.ನ.02: ಸಿಂಧಗಿ ಹಾಗೂ ಹಾನಗಲ್ ವಿಧಾನಸಭೆ ಉಪಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು, ಸಿಂಧಗಿಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ 3

2020/21 ಸಾಲಿಗೆ “ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ - ಕರ್ನಾಟಕ” ಪ್ರಕಟ
2020/21 ಸಾಲಿಗೆ “ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ - ಕರ್ನಾಟಕ” ಪ್ರಕಟ

ಬೆಂಗಳೂರು, ಸೆಪ್ಟೆಂಬರ್:29. ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ರಾಜ್ಯಾದ್ಯಂತ ಅರ್ಥಪೂರ್ಣವಾಗಿ ಆಚರಿಸಲ

ಅಗ್ರಿಗೋಲ್ಡ್ ಕಂಪನಿ ವಂಚನೆ ಪ್ರಕರಣ. ಒಂದೇ ನ್ಯಾಯಾಲಯ ಸ್ಥಾಪಿಸಲು ಹೈಕೋರ್ಟ್ ಗೆ ಮನವಿ
ಅಗ್ರಿಗೋಲ್ಡ್ ಕಂಪನಿ ವಂಚನೆ ಪ್ರಕರಣ. ಒಂದೇ ನ್ಯಾಯಾಲಯ ಸ್ಥಾಪಿಸಲು ಹೈಕೋರ್ಟ್ ಗೆ ಮನವಿ

ಬೆಂಗಳೂರು: ಹೂಡಿಕೆದಾರರಿಗೆ ವಂಚಿಸಿದ ಆರೋಪ ಪ್ರಕರಣಕ್ಕೆ ಸಂಬಂಧಸಿದಂತೆ ಅಗ್ರಿ ಗೋಲ್ಡ್ ಕಂಪನಿ ವಿರುದ್ಧ ವಿವಿಧ ರಾಜ್ಯಗಳ ನ್ಯಾಯಾಲಯಗಳಲ್ಲಿ ವಿಚ

ರಾಷ್ಟ್ರೀಯ ಹೆದ್ದಾರಿ 40 ಮೀ ಒಳಗೆ ಕಟ್ಟಡ ನಿರ್ಮಿಸುವಂತಿಲ್ಲ. ಹೈಕೋರ್ಟ್
ರಾಷ್ಟ್ರೀಯ ಹೆದ್ದಾರಿ 40 ಮೀ ಒಳಗೆ ಕಟ್ಟಡ ನಿರ್ಮಿಸುವಂತಿಲ್ಲ. ಹೈಕೋರ್ಟ್

ಬೆಂಗಳೂರು: ರಾಷ್ಟ್ರೀಯ ಹೆದ್ದಾರಿಯ 40 ಮೀ.ಒಳಗೆ ಕಟ್ಟಡ ನಿರ್ಮಿಸುವಂತಿಲ್ಲ ಎಂದು ಹೈಕೋರ್ಟ್ ವಿಭಾಗೀಯ ಪೀಠ ಮಹತ್ವದ ಆದೇಶ ನೀಡಿ ಸರ್ಕಾರದ ಸುತ್ತ

Top Stories »  


Top ↑