Tel: 7676775624 | Mail: info@yellowandred.in

Language: EN KAN

    Follow us :


ವಿಧಾನ ಪರಿಷತ್ ಚುನಾವಣೆ: ಗ್ರಾ.ಪಂ. ಸದ್ಯರಿಗೆ ಫುಲ್ ಡಿಮ್ಯಾಂಡ್!

Posted date: 27 Nov, 2021

Powered by:     Yellow and Red

ವಿಧಾನ ಪರಿಷತ್ ಚುನಾವಣೆ: ಗ್ರಾ.ಪಂ. ಸದ್ಯರಿಗೆ ಫುಲ್ ಡಿಮ್ಯಾಂಡ್!

ರಾಮನಗರ: ಬೆಂಗಳೂರು ಗ್ರಾಮಾಂತರ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್ ಗೆ ನಡೆಯುವ ಚುನಾವಣೆಯಲ್ಲಿ  ಸ್ಪರ್ಧಿಸಿರುವ ಪ್ರಮುಖ ಮೂರು ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಗೆಲ್ಲಲು ತಂತ್ರ ರೂಪಿಸುತ್ತಿದ್ದು, ಗ್ರಾಮ ಪಂಚಾಯಿತಿ ಸದಸ್ಯರಿಗೆ ಡಿಮ್ಯಾಂಡ್  ಜೋರಾಗಿದೆ.

ಮರು ಆಯ್ಕೆ ಬಯಸಿರುವ ಕಾಂಗ್ರೆಸ್ ಅಭ್ಯರ್ಥಿ ಎಸ್ .ರವಿ ಅವರಿಗೆ ಟಕ್ಕರ್  ನೀಡಲು ಜೆಡಿಎಸ್ ನಿಂದ ಎಚ್ ಎಂ. ರಮೇಶ್ ಗೌಡ ಹಾಗೂ ಬಿಜೆಪಿ ಅಭ್ಯರ್ಥಿಯಾಗಿ ಬಿ.ಸಿ. ನಾರಾಯಣಸ್ವಾಮಿ ಅಖಾಡ ಪ್ರವೇಶಿಸಿದ್ದಾರೆ.


ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗಳು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಭದ್ರಕೋಟೆಯಾಗಿರುವ ಕಾರಣ ಉಭಯ ಪಕ್ಷಗಳ ನಡುವೆ ನೇರ ಹಣಾಹಣಿ ಇದ್ದರೂ, ಆಡಳಿತರೂಢ ಬಿಜೆಪಿ ಪಕ್ಷದ ಅಭ್ಯರ್ಥಿಯನ್ನು ನಿರ್ಲಕ್ಷಿಸುವಂತಿಲ್ಲ.

ಈಗ ಮೂರು ಪಕ್ಷಗಳ ಅಭ್ಯರ್ಥಿಗಳು ಸಭೆ ಸಮಾರಂಭಗಳ ಮೂಲಕ ಮತದಾರರ ಮನವೊಲಿಸುವ ಕಾರ್ಯ ಆರಂಭಿಸಿದ್ದಾರೆ. ಚುನಾವಣೆಯಲ್ಲಿ ಸ್ಥಳೀಯ ಸಂಸ್ಥೆಗಳಾದ ಜಿಪಂ, ತಾಪಂ, ಗ್ರಾಪಂ, ನಗರಸಭೆ ಹಾಗೂ ಪುರಸಭೆಗಳ ಚುನಾಯಿತ ಜನಪ್ರತಿನಿಗಳು ಮತದಾರರಾಗಿದ್ದಾರೆ.


ಇವರಲ್ಲಿ ಎಷ್ಟು ಮಂದಿ ಅರ್ಹ ಮತದಾರರಿದ್ದಾರೆ ಎನ್ನುವುದು ಚುನಾವಣಾ ಆಯೋಗದಿಂದ ಪಟ್ಟಿ ಪ್ರಕಟವಾದ ನಂತರವಷ್ಟೇ ಸ್ಪಷ್ಟವಾಗಲಿದೆ. ಆದರೀಗ ಗ್ರಾಮ ಪಂಚಾಯಿತಿಗಳ ಸದಸ್ಯರು ಅತಿ ದೊಡ್ಡ ಸಂಖ್ಯೆಯಲ್ಲಿ ಇರುವುದರಿಂದ ಅವರ ಮನವೊಲಿಕೆಗೆ ರಾಜಕೀಯ ಪಕ್ಷಗಳು ತಂತ್ರ ರೂಪಿಸುತ್ತಿವೆ.


ಪಕ್ಷದ ಚಿಹ್ನೆ ಇಲ್ಲದೇ ಆಯ್ಕೆಯಾದ ಗ್ರಾಮ ಪಂಚಾಯಿತಿ ಸದಸ್ಯರು ಯಾರಿಗೆ ಬೇಕಾದರೂ ಮತದಾನ ಮಾಡಲು ಸ್ವತಂತ್ರರು. ಹೀಗಾಗಿ ದೊಡ್ಡ ಪ್ರಮಾಣದಲ್ಲಿ ಇರುವ ಗ್ರಾಪಂ ಸದಸ್ಯರಿಗೆ ಡಿಮ್ಯಾಂಡ್  ಜೋರಾಗಿದೆ. ಚುನಾವಣಾ ವೆಚ್ಚದ ಬಗ್ಗೆಯೂ ಗಂಭೀರ ಚರ್ಚೆಗಳು ನಡೆಯುತ್ತಿವೆ.

ಗ್ರಾಪಂ ಸದಸ್ಯರು ಯಾವುದೇ ಪಕ್ಷದಿಂದ ಆಯ್ಕೆ ಆಗಿರುವುದಿಲ್ಲ. ಆದರೆ, ಒಂದೊಂದು ಪಕ್ಷದ ಬೆಂಬಲಿತರಾಗಿರುತ್ತಾರೆ. ಅಥವಾ ಒಲವುಳ್ಳವರಾಗಿರುತ್ತಾರೆ. ಅವರು ಯಾರಿಗೆ ಆಶೀರ್ವಾದ ಮಾಡುತ್ತಾರೆ ಎನ್ನುವುದರ ಮೇಲೆ ಅಭ್ಯರ್ಥಿಗಳು ಮತ್ತು ಪಕ್ಷದ ಭವಿಷ್ಯ ನಿರ್ಧಾರವಾಗುತ್ತದೆ.


*ಅಭ್ಯರ್ಥಿಗಳಿಗೆ ಬಂಡವಾಳದ ಚಿಂತೆ*

ಲಭ್ಯ ಅಂಕಿ ಅಂಶದ ಪ್ರಕಾರ ಅಂದಾಜು 3828, ಮತದಾರರು ಇದ್ದಾರೆ. ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಬಿಡದಿ ಪುರಸಭೆಗೆ ಚುನಾವಣೆ ನಡೆದಿಲ್ಲ. ಹೀಗಾಗಿ ಆ ಮತದಾರರು ಇಲ್ಲ. ಹೀಗಾಗಿ ಮತದಾರರ ಸಂಖ್ಯೆಯು 250 ರಿಂದ 300 ಸದಸ್ಯರ ಸಂಖ್ಯೆ ಕಡಿಮೆಯಾಗಿದೆ. ಅತಿ ದೊಡ್ಡ ಸಂಖ್ಯೆಯಲ್ಲಿರುವ ಗ್ರಾಮ ಪಂಚಾಯಿತಿಗಳ ಸದಸ್ಯರ ಮನವೊಲಿಕೆಯತ್ತ ರಾಜಕೀಯ ಪಕ್ಷದವರ ಚಿತ್ತ ನೆಟ್ಟಿದೆ.


ಮತ ಚಲಾವಣೆಗೆ ಹಲವರು ನಿರ್ದಿಷ್ಟ ಮೊತ್ತದ ಕಾಣಿಕೆ ಕೇಳಲು ಸ್ಥಳೀಯ ಮುಖಂಡರ ಮುಂದೆ ಪ್ರಸ್ತಾಪಿಸಿದ್ದಾರೆ. ಹೀಗಾಗಿ ಸದಸ್ಯರ ಡಿಮ್ಯಾಂಡ್ ಕಳೆದ ಚುನಾವಣೆಗಿಂತ ಹೆಚ್ಚಾಗುವ ಆತಂಕ ಅಭ್ಯರ್ಥಿಗಳಲ್ಲಿ ಮೂಡಿದೆ. ಜತೆಗೆ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಸದಸ್ಯರು ಇಲ್ಲದಿರುವುದು ಸ್ವಲ್ಪಮಟ್ಟಿನ ನೆಮ್ಮದಿ ತರಿಸಿದೆ.

ಕಳೆದ ಚುನಾವಣೆಯಲ್ಲಿ ಹಣದ ಹೊಳೆಯೇ ಹರಿದಿತ್ತು. ಇದೀಗ ಆರು ವರ್ಷಗಳ ಅಂತರದಲ್ಲಿ ರಾಜಕೀಯ ಸ್ಥಿತಿಗತಿ ಹಾಗೂ ಮತದಾರನ ಮನಸ್ಥಿತಿ ಬದಲಾಗಿದೆ. ಈಗ ಹಣವಿಲ್ಲದೆ ಯಾವುದೇ ಚುನಾವಣೆ ಮಾಡಲಾಗದು ಎನ್ನುವ ಪರಿಸ್ಥಿತಿಯಿದೆ. ಪರಿಣಾಮ ಅಭ್ಯರ್ಥಿಗಳಿಗೆ ಬಂಡವಾಳದ ಚಿಂತೆಯೂ ಕಾಡುತ್ತಿದೆ.


 *ರಾಮನಗರ ಜಿಲ್ಲೆಯಲ್ಲಿ ಹೆಚ್ಚು ಮತದಾರರು* 

ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಹೋಲಿಕೆ ಮಾಡಿದಲ್ಲಿ  ರಾಮನಗರ ಜಿಲ್ಲೆಯಲ್ಲಿ ಅತಿ ಹೆಚ್ಚಿನ ಮತದಾರರು ಇದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ 102 ಸ್ಥಳೀಯ ಸಂಸ್ಥೆಗಳಿಂದ 1866 ಇದ್ದರೆ, ರಾಮನಗರ ಜಿಲ್ಲೆಯಲ್ಲಿ 126 ಸ್ಥಳೀಯ ಸಂಸ್ಥೆಗಳಿಂದ 2062 ಮತದಾರರು ಸೇರಿ ಒಟ್ಟು 3928 ಜನರು ಮತದಾನದ ಹಕ್ಕು ಹೊಂದಿದ್ದಾರೆ.


ಅಧಿಕಾರದ ಅವಧಿ ಮುಗಿದಿದ್ದ ಗ್ರಾಮ ಪಂಚಾಯಿತಿಗಳಿಗೆ ಕಳೆದ ವರ್ಷ ಡಿಸೆಂಬರ್ ನಲ್ಲಿ ಚುನಾವಣೆ ನಡೆದಿತ್ತು. ಆಗ ನಮ್ಮ ಬೆಂಬಲಿತರು ಇಷ್ಟು ಸಂಖ್ಯೆಯಲ್ಲಿ ಗೆದ್ದಿದ್ದಾರೆ ಎಂದು ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್  ಪಕ್ಷಗಳ ನಾಯಕರು ಘೋಷಿಸಿದ್ದರು. ಈಗ ಸ್ಥಳೀಯ ಸಂಸ್ಥೆಯಿಂದಲೇ ಮೇಲ್ಮನೆಗೆ ಹಣಾಹಣಿ ನಡೆಯುತ್ತಿದ್ದು, ಯಾವ ಪಕ್ಷಕ್ಕೆ ಬೆಂಬಲ ಎಷ್ಟಿದೆ ಎನ್ನುವುದು ಕೂಡ ಗೊತ್ತಾಗಲಿದೆ.


 *ಬೆಂಗಳೂರು ಗ್ರಾಮಾಂತರ ಸ್ಥಳೀಯ ಸಂಸ್ಥೆಗಳ ಮತದಾರರ ವಿವರ*

ತಾಲೂಕು                ಪುರುಷರು          ಮಹಿಳೆಯರು        ಒಟ್ಟು

ದೊಡ್ಡಬಳ್ಳಾಪುರ 251, 265, 516.

ದೇವನಹಳ್ಳಿ 195, 202, 397.

ಹೊಸಕೋಟೆ 285, 297, 582.

ನೆಲಮಂಗಲ 176, 195, 371.

ಮಾಗಡಿ 222, 258, 480.

ಚನ್ನಪಟ್ಟಣ 239, 275, 541.

ರಾಮನಗರ 182, 208, 390.

ಕನಕಪುರ 326, 352, 678.

ಒಟ್ಟು 1876, 2052, 3928.


ಗೋ ರಾ ಶ್ರೀನಿವಾಸ...

ಮೊ:9845856139.

??????????????

  • ????? ???????? ??????????? ???? ??????????.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in karnataka »

ಸಮಯ ಮತ್ತು ಹಣದ ಸದುಪಯೋಗ ಸರ್ಕಾರದ ನೀತಿ: ಬಸವರಾಜ ಬೊಮ್ಮಾಯಿ
ಸಮಯ ಮತ್ತು ಹಣದ ಸದುಪಯೋಗ ಸರ್ಕಾರದ ನೀತಿ: ಬಸವರಾಜ ಬೊಮ್ಮಾಯಿ

ರಾಮನಗರ, ಜನವರಿ 3: ಸಮಯ ಮತ್ತು ಹಣದ ಸದುಪಯೋಗ ಸರ್ಕಾರದ ನೀತಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.


ಅವರು ಇಂದು ಮಾಗಡಿ ತಾಲ್ಲೂಕಿನ ಚಿಕ್ಕಕಲ್ಯಾ ಗ್ರಾ

ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ ಪ್ರಕಟ
ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ ಪ್ರಕಟ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ.

ಇದು ರಾಜ್ಯದಾದ್ಯಂತ ಎಂಟು ಸಾವಿರಕ್ಕೂ ಹೆಚ್ಚು ಕಾರ್ಯನಿರತ ಪತ್ರಕರ್ತ ಸದಸ್ಯರನ್ನು ಹೊಂದಿರುವ ಪತ

ರಸ್ತೆ ಬದಿಯಲ್ಲಿ ನಡೆದು ಹೋಗುತ್ತುದ್ದ ಕಾಲೇಜು ವಿದ್ಯಾರ್ಥಿಗಳಿಗೆ ಢಿಕ್ಕಿ ಹೊಡೆದ ಕಾರು
ರಸ್ತೆ ಬದಿಯಲ್ಲಿ ನಡೆದು ಹೋಗುತ್ತುದ್ದ ಕಾಲೇಜು ವಿದ್ಯಾರ್ಥಿಗಳಿಗೆ ಢಿಕ್ಕಿ ಹೊಡೆದ ಕಾರು

ಮಳವಳ್ಳಿ: ಪಟ್ಟಣದ ಮೈಸೂರು ರಸ್ತೆಯಲ್ಲಿ ಗುರುವಾರ ನಡೆದು ಹೋಗುತ್ತಿದ್ದ ಕಾಲೇಜು ವಿದ್ಯಾರ್ಥಿಗಳಿಗೆ ಮಾರುತಿ ಸುಝುಕಿ ಬಲೆನೋ KA-01 MR 9616 ಸಂ

ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಹತ್ತು ಸ್ಥಾನಗಳನ್ನು ಗೆದ್ದ ಕೆಂಚಪ್ಪಗೌಡ ತಂಡ
ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಹತ್ತು ಸ್ಥಾನಗಳನ್ನು ಗೆದ್ದ ಕೆಂಚಪ್ಪಗೌಡ ತಂಡ

ರಾಜ್ಯ ಒಕ್ಕಲಿಗರ ಸಂಘದ ಚುನಾವಣೆಯು ಈ ಬಾರಿ ಬಹಳ ರಮಾರಮಿಯಾಗಿ

ಕಳೆದ 12ರಂದು ಚುನಾವಣೆ ಜರುಗಿತು. ವಿವಿಧ ಜಿಲ್ಲೆಗಳಿಂದ 20 ಸ್ಥಾನಗಳಿಗೆಹಾಗೂ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ,<

ರಾಷ್ಟ್ರೀಯ ಪಕ್ಷಗಳ ಹಣಬಲದ ಮುಂದೆ ಜನಬಲಕ್ಕೆ ಸೋಲಾಗಿದೆ. ಹೆಚ್ಡಿಕೆ
ರಾಷ್ಟ್ರೀಯ ಪಕ್ಷಗಳ ಹಣಬಲದ ಮುಂದೆ ಜನಬಲಕ್ಕೆ ಸೋಲಾಗಿದೆ. ಹೆಚ್ಡಿಕೆ

ವಿಧಾನ ಪರಿಷತ್ ಚುನಾವಣೆ ಫಲಿತಾಂಶದಲ್ಲಿ ಜೆಡಿಎಸ್ ಪಕ್ಷ ಕೇವಲ ಒಂದು ಕ್ಷೇತ್ರದಲ್ಲಿ ಮಾತ್ರಗೆಲುವು ಸಾಧಿಸಿದೆ. ಈ

ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳ ಹಣಬಲ ಕೆಲಸ ಮಾಡಿದೆ ಎಂದು ವಿಧಾನ

ಕೆ ಹೆಚ್ ರಾಮಯ್ಯ ತಂಡ ಗೆಲ್ಲಿಸಿ, ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತೇವೆ. ಜಯಮುತ್ತು, ಅ ದೇವೇಗೌಡ ತಂಡ ಮನವಿ
ಕೆ ಹೆಚ್ ರಾಮಯ್ಯ ತಂಡ ಗೆಲ್ಲಿಸಿ, ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತೇವೆ. ಜಯಮುತ್ತು, ಅ ದೇವೇಗೌಡ ತಂಡ ಮನವಿ

ನಾವು ಯಾವುದೇ ಕಾರಣಕ್ಕೂ ಭ್ರಷ್ಟಾಚಾರ ಸಹಿಸುವುದಿಲ್ಲ. ನಾವೂ ಸಹ ಈ ಹಿಂದಿನ ಅವಧಿಯಲ್ಲೂ ಸಹ ಭ್ರಷ್ಟಾಚಾರ ಮಾಡಿಲ್ಲ. ಮತದಾರರು ಆಶೀರ್ವದಿಸಿದರೆ ಮುಂದಿನ ದಿನಗಳಲ್ಲಿ ಸಂಘದ ಆಸ್ತಿ ಉಳಿಸುವುದರ ಜೊತೆಗೆ ಸ

ಇಳಿ ವಯಸ್ಸಿನಲ್ಲಿ ಒಂದಾದ ಅಮರ ಪ್ರೇಮಿಗಳು
ಇಳಿ ವಯಸ್ಸಿನಲ್ಲಿ ಒಂದಾದ ಅಮರ ಪ್ರೇಮಿಗಳು

ಮೈಸೂರು: ಮೇಲುಕೋಟೆ. ನಲವತ್ತೈದು ವರ್ಷಗಳ ಹಿಂದೆ ಮೈಸೂರಿನ ಹೆಬ್ಬಾಳ ಗ್ರಾಮದಲ್ಲಿ ಅಕ್ಕಪಕ್ಕದಲ್ಲಿ ನೆಲೆಸಿದ್ದ ಯುವಕ-ಯುವತಿ ಪ್ರೀತಿಸಿ ಮದುವೆಯಾ

ವಿಧಾನ ಪರಿಷತ್ ಚುನಾವಣೆ: ಗ್ರಾ.ಪಂ. ಸದ್ಯರಿಗೆ ಫುಲ್ ಡಿಮ್ಯಾಂಡ್!
ವಿಧಾನ ಪರಿಷತ್ ಚುನಾವಣೆ: ಗ್ರಾ.ಪಂ. ಸದ್ಯರಿಗೆ ಫುಲ್ ಡಿಮ್ಯಾಂಡ್!

ರಾಮನಗರ: ಬೆಂಗಳೂರು ಗ್ರಾಮಾಂತರ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್ ಗೆ ನಡೆಯುವ ಚುನಾವಣೆಯಲ್ಲಿ  ಸ್ಪರ್ಧಿಸಿರುವ ಪ್ರಮುಖ ಮೂರು ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಗೆಲ್ಲಲು ತಂತ್ರ ರೂ

ವಿಧಾನ ಪರಿಷತ್ ದ್ವೈವಾರ್ಷಿಕ ಚುನಾವಣೆ: ಕರಡು ಮತದಾರರ ಪಟ್ಟಿ ಪ್ರಕಟ
ವಿಧಾನ ಪರಿಷತ್ ದ್ವೈವಾರ್ಷಿಕ ಚುನಾವಣೆ: ಕರಡು ಮತದಾರರ ಪಟ್ಟಿ ಪ್ರಕಟ

ರಾಮನಗರ, ನ. 12/21 ಬೆಂಗಳೂರು ಗ್ರಾಮಾಂತರ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ರಾಜ್ಯ ವಿಧಾನ ಪರಿಷತ್ ಗೆ ದ್ವೈವಾರ್ಷಿಕ ಚುನಾವಣೆ-2022ರ ಸಂಬಂಧ ಗ್ರಾಮ ಪಂಚಾಯಿತಿವಾರು/ ನಗರ ಸ್ಥಳೀಯ ಸಂಸ್ಥೆವಾರು ಮತದಾ

ಇರುಳಿಗರಿಗೆ ಮನೆ ನಿರ್ಮಿಸಲು ಜಾಗ ಗೊತ್ತು ಮಾಡಿದ ಅಧಿಕಾರಿಗಳು
ಇರುಳಿಗರಿಗೆ ಮನೆ ನಿರ್ಮಿಸಲು ಜಾಗ ಗೊತ್ತು ಮಾಡಿದ ಅಧಿಕಾರಿಗಳು

ರಾಮನಗರ:ನ;12/21. ತಾಲೂಕಿನ ಕೂಟಗಲ್ ಬಳಿ ಇರುಳಿಗರಿಗೆ ಉಚಿತ ನಿವೇಶನ ನೀಡಲು ಮೀನಾ ಮೇಷ ಎಣಿಸುತ್ತಿದ್ದ ಅಧಿಕಾರಿಗಳು ಗುರುವಾರ ಬೆಳಿಗ್ಗೆ ಏಕಾಏಕಿ ಧಾವಿಸಿ ಬಂದು ಕೂಟಗಲ್ ಸರ್ವೆ ಸಂಖ್ಯೆ 94 ರಲ್ಲಿ 2

Top Stories »  


Top ↑