ಇಪ್ಪತ್ತೈದು ವರ್ಷಗಳಲ್ಲಿ ಆಗದ ಕೆಲಸಗಳು ಮೂರು ವರ್ಷಗಳಲ್ಲಿ ಆಗಿವೆ. ಹೆಚ್ಡಿಕೆ

ರಾಮನಗರ: ಚನ್ನಪಟ್ಟಣ ಕ್ಷೇತ್ರದಲ್ಲಿ 25 ವರ್ಷದಲ್ಲಿ ಆಗದ ಕೆಲಸಗಳು ಮೂರು ವರ್ಷದಲ್ಲಿ ನಾನು ಶಾಸಕನಾದ ನಂತರ ಆಗಿವೆ, ಆದರೆ ಈಗ ಕೆಲವರು ನಮ್ಮದೇ ಕೆಲಸ ಎಂದು ಸೌಂಡ್ ಮಾಡಲು ಹೊರಟಿದ್ದಾರೆ ಎಂದು ಮಾಜಿ ಸಿಂಎಂ ಎಚ್.ಡಿ. ಕುಮಾರಸ್ವಾಮಿ ಪರೋಕ್ಷವಾಗಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಗೆ ಟಾಂಗ್ ನೀಡಿದರು.
ಚನ್ನಪಟ್ಟಣದ ಎಪಿಎಂಸಿ ಯಾರ್ಡ್ ನಲ್ಲಿ ಕಾವಲುಗೋಪುರವನ್ನು ಉದ್ಘಾಟಿಸಿದ ಅವರು ಸುದ್ದಿಗಾರರ ಜೊತೆ ಮಾತನಾಡಿದರು. ಮಾಕಳಿ ಏತ ನೀರಾವರಿ ಯೋಜನೆಯ ಶಂಕು ಸ್ಥಾಪನೆ ಮಾಡಿದಾಗ ಯಾರು ಚರ್ಚೆ ಮಾಡಿಲ್ಲ. ಇದೀಗ ನಾವೇ ಮಾಡಿದ್ದು ಎನ್ನುತ್ತಿದ್ದಾರೆ. ಚನ್ನಪಟ್ಟಣ ವಿಚಾರದಲ್ಲಿ ನಾವು ಅಭಿವೃದ್ದಿ ಮಾಡುತ್ತೇವೆ ಎಂದು ಕಣ್ಣು ಒರೆಸುವುದು ಬೇಡವೆಂದರು.
ಚನ್ನಪಟ್ಟಣ ಕ್ಷೇತ್ರಕ್ಕೆ ದೇವೇಗೌಡ ಕುಟುಂಬದ ಕೊಡುಗೆ ಅಪಾರವಿದೆ. ಯಾರೇ ಮರಳು ಮಾಡಿದರು ಜನ ಸೊಪ್ಪು ಹಾಕುವುದಿಲ್ಲ. ಇದೀಗ ದುಡ್ಡು ಕೊಟ್ಟು ಕೆಲವರನ್ನು ಕೊಂಡುಕೊಳ್ಳಲು ಹೊರಟಿದ್ದಾರೆ. ಶಾಸಕರುಗಳನ್ನು ಕೊಂಡುಕೊಂಡಿದ್ದು ಆಯ್ತು
ಇದೀಗ ಚನ್ನಪಟ್ಟಣದಲ್ಲಿ ಮುಖಂಡರನ್ನ ಕೊಂಡುಕೊಳ್ಳಲು ಹೊರಟಿದ್ದಾರೆ. ನಮ್ಮ ಪಕ್ಷದ ಕೆಲ ಲೀಡರ್ ಗಳು ಸಾಲ ಮಾಡಿಕೊಂಡಿದ್ದರಂತೆ. ಅವರಿಗೆ ಇದೀಗ ದುಡ್ಡು ಕೊಟ್ಟು ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದಾರೆ. ಮತದಾರರನ್ನ ಖರೀದಿ ಮಾಡಲು ಸಾಧ್ಯವಿಲ್ಲ. ನನ್ನ ಹತ್ತಿರ ಬರುವವರು ಅತ್ಯಂತ ಸಂಕಷ್ಟಕ್ಕೆ ಒಳಗಾದವರು ಮಾತ್ರ ಬರುತ್ತಾರೆ. ಚನ್ನಪಟ್ಟಣದವರು ಮಾತ್ರವಲ್ಲದೇ ಇಡೀ ರಾಜ್ಯದಲ್ಲಿ ಕಾರ್ಯಕರ್ತರನ್ನ ಸೆಳೆಯುವ ಪ್ರಕ್ರಿಯೆ ನಡೆದಿದೆ. ನಾನು ಯಾವುದಕ್ಕೂ ಎದೆಗುಂದಿಲ್ಲವೆಂದರು.
ಚನ್ನಪಟ್ಟಣ ಕ್ಷೇತ್ರ ಏನು, ಅದರ ನಾಡಿಮಿಡಿತ ಏನು ಎಂಬುದು ಗೊತ್ತಿದೆ. ರಾಮನಗರ ಜಿಲ್ಲೆ ದೇವೇಗೌಡರ ಕುಟುಂಬದ ಬಾಂಧವ್ಯ 50 ವರ್ಷದಿಂದ ಇದ್ದು, ದೇವೇಗೌಡರು ವಿರೋಧ ಪಕ್ಷದ ನಾಯಕರು ಇದ್ದಾಗಲೇ ಚನ್ನಪಟ್ಟಣ ಜನ ಹೃದಯದಲ್ಲಿ ಇಟ್ಟುಕೊಂಡಿದ್ದರು. ಅಮಿತ್ ಶಾ, ನಡ್ಡಾರನ್ನ ಕರೆದುಕೊಂಡು ಬಂದು ಕಾರ್ಯಕ್ರಮ ಮಾಡಿ ಮುಖಂಡರನ್ನು ಸೇರಿಸಿಕೊಳ್ಳಲಿ. ನನ್ನ ಕಾರ್ಯಕರ್ಯರು ಬಿಗಿ ಇದ್ದಾರೆ ಎಂದರು.
*ಸಿದ್ದು ವಿರುದ್ಧ ವಾಗ್ಧಾಳಿ:*
ದೇವೇಗೌಡರ ಬಗ್ಗೆ ಸಿದ್ದರಾಮಯ್ಯ ಏಕವಚನ ಪದ ಪ್ರಯೋಗ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಎಚ್ಡಿಕೆ, ಸಿದ್ದರಾಮಯ್ಯ ದೊಡ್ಡ ಮನುಷ್ಯ. ದೇವೇಗೌಡರನ್ನು ಬೆಳೆಸಿದವರು ಅವರೇ ಅಲ್ಲವೇ. ಜನತಾದಳಕ್ಕೆ ಕುಮಾರಸ್ವಾಮಿ ಕೊಡುಗೆ ಏನು ಎನ್ನುತ್ತಾರೆ. ನಾನು ಅಧ್ಯಕ್ಷನಾಗಿದ್ದಾಗ 58 ಸೀಟ್ ಗೆದ್ದೆ ಎನ್ನುತ್ತಾರೆ. ಸಿದ್ದರಾಮಯ್ಯ ನೋಡಿ ಗೆದ್ದಿದ್ದಾ ಎಂದು ಪ್ರಶ್ನಿಸಿದ ಅವರು, 58 ಸೀಟ್ ಗೆಲ್ಲಲು ನನ್ನದು ಪಾತ್ರ ಇದೆ. ದೇವೇಗೌಡರು ಬಡ್ಡಿಗೆ ಸಾಲ ತಂದು ಚುನಾವಣೆ ಹೇಗೆ ನಡೆಸಿದ್ದರು ಎಂಬುದು ನನಗೆ ಚೆನ್ನಾಗಿ ಗೊತ್ತಿದೆ. ಸಿದ್ದರಾಮಯ್ಯ ನವರಿಗೆ ಗೊತ್ತಿದೀಯಾ ಎಂದು ಪ್ರಶ್ನಿಸಿದರು.
ಅವರ ನಾಯಕತ್ವ ಸರಿ ಇದ್ದಿದ್ದರೆ ಅವತ್ತು 50 ಜನ ಶಾಸಕರು ಯಾಕೆ ನನ್ನ ನಾಯಕತ್ವಕ್ಕೆ ನಂಬಿಕೊಂಡು ಬಂದರು. ಎಲ್ಲ ಕಾಲದಲ್ಲಿ ಎಲ್ಲರದ್ದೂ ನಡೆಯಲ್ಲ. ಸಿದ್ದರಾಮಯ್ಯನವರಿಗೆ ಜೆಡಿಎಸ್ ಹಾಗೂ ದೇವೇಗೌಡರ ಮೇಲೆ ಇರುವ ಆಕ್ರೋಶ ಇದೀಯಲ್ಲ ಅದನ್ನ ಕಾಣಬಹುದು. ಹೃದಯದಲ್ಲಿ ಇರುವ ಕಿಚ್ಚನ್ನ ಕಾಣಬಹುದು. ನನಗೂ ಸಿದ್ದರಾಮಯ್ಯನವರಿಗೂ ರಾಜಕೀಯದಲ್ಲಿಅವಶ್ಯಕತೆ ಕನೆಕ್ಷನ್ ಇಲ್ಲ, ಅವರು ನಮ್ಮ ಪಕ್ಷದಲ್ಲಿ ಇದ್ದಗಲೂ ಅವರ ಆತ್ಮೀಯತೆ ಇರಲಿಲ್ಲ. ನನ್ನ ದುಡ್ಡು ಖರ್ಚು ಮಾಡಿ ಸಭೆ ಮಾಡಿದಾಗ ಭಾಷಣ ಮಾಡಲು ಬರುತ್ತಿದ್ದರು. ಅವರಿಂದ ಸರ್ಟೀಫಿಕೆಟ್ ಪಡೆಯುವ ಅವಶ್ಯಕತೆ ನನಗಿಲ್ಲವೆಂದರು.
ಯಾರೋ ಒಬ್ಬ ಮಂತ್ರಿಯ ರಾಜೀನಾಮೆಗಾಗಿ ಇಷ್ಟೊಂದು ಪ್ರತಿಷ್ಠೆ ಮಾಡಿ ಸದನದ ಕಲಾಪ ವ್ಯರ್ಥ ಮಾಡುತ್ತಿದ್ದಾರೆ. ಸಮಸ್ಯೆಗಳು ನೂರಾರು ಇವೆ. ಎಲ್ಲಿಂದ ಚರ್ಚೆ ಮಾಡುವುದು. ಈಶ್ವರಪ್ಪ ಹೇಳಿಕೆಯನ್ನ ನಾನು ಸಮರ್ಥನೆ ಮಾಡುತ್ತಿಲ್ಲ. ನಾನು ಯಾರ ಪರವಾಗಿಯೂ ಇಲ್ಲ, ವಿರೋಧವಾಗಿಯೂ ಇಲ್ಲ. ಈಶ್ವರಪ್ಪನವರ ಮಂತ್ರಿ ಸ್ಥಾನದ ಬಗ್ಗೆ ಅವರು ಯಾಕೆ ಕೇಳುತ್ತಿದ್ದಾರೆ. ರಾಷ್ಟ್ರಧ್ವಜದ ಬಗ್ಗೆ ಅವರು ಯಾವ ರೀತಿ ಹೇಳಿದ್ದಾರೆ. ದೇಶದಲ್ಲಿ ನಡೆಯುತ್ತಿರುವ ಘಟನೆಗಳನ್ನ ನೋಡುತ್ತಿದ್ದೇವೆ. ಇವತ್ತಿನ ಪರಿಸ್ಥಿತಿಯಲ್ಲಿ ಈಶ್ವರಪ್ಪ ಅವರು ಸ್ವೀಡ್ ಆಗಿದ್ದಾರೆ. ಬಿಜೆಪಿ ಅಂಗ ಪಕ್ಷಗಳು ಯಾವ ರೀತಿ ಹೊರಟಿದ್ದಾರೆ. ಅದಕ್ಕೆ ಜನರು ಸ್ವಂದಿಸುತ್ತಿದ್ದಾರೆ. ಆದರೆ, ಇದು ಎಲ್ಲ ಸಮಯದಲ್ಲೂ ನಡೆಯುವುದಿಲ್ಲ. ಆ ಗುಂಗಿನಲ್ಲಿ ಹೇಳಿದ್ದಾರೆ ಎಂದರು.
ಅದನ್ನ ಕಾಂಗ್ರೆಸ್ ನವರು ಬೇರೆ ರೀತಿ ತೆಗೆದುಕೊಂಡಿದ್ದಾರೆ. ಇದರಲ್ಲಿ ಅರ್ಥವಿಲ್ಲ ಬಡ ಜನರ ದುಡ್ಡು ವ್ಯರ್ಥವಾಗುತ್ತಿದೆ. ರಾಷ್ಟ್ರಧ್ವಜವನ್ನ ಯಾರು ಮುಟ್ಟಲು ಆಗುವುದಿಲ್ಲ. ಕಳೆದ ಏಳೆಂಟು ವರ್ಷಗಳ ಫಲಿತಾಂಶದಿಂದ ಬಿಜೆಪಿ ಅವರಿಗೆ ದುರಂಕಾರ ನೆತ್ತಿಗೆ ಏರಿದೆ. ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಯಾರು ಅಲುಗಾಡಿಸಲು ಸಾಧ್ಯವಿಲ್ಲವೆಂದು ಹೇಳಿದರು.
ಗೋ ರಾ ಶ್ರೀನಿವಾಸ...
ಮೊ:9845856139.
Recent news in karnataka »

ಇಪ್ಪತ್ತೈದು ವರ್ಷಗಳಲ್ಲಿ ಆಗದ ಕೆಲಸಗಳು ಮೂರು ವರ್ಷಗಳಲ್ಲಿ ಆಗಿವೆ. ಹೆಚ್ಡಿಕೆ
ರಾಮನಗರ: ಚನ್ನಪಟ್ಟಣ ಕ್ಷೇತ್ರದಲ್ಲಿ 25 ವರ್ಷದಲ್ಲಿ ಆಗದ ಕೆಲಸಗಳು ಮೂರು ವರ್ಷದಲ್ಲಿ ನಾನು ಶಾಸಕನಾದ ನಂತರ ಆಗಿವೆ, ಆದರೆ ಈಗ ಕೆಲವರು ನಮ್ಮದೇ ಕೆಲಸ ಎಂದು ಸೌಂಡ್ ಮಾಡಲು ಹೊರಟಿದ್ದಾರೆ ಎಂದು ಮಾಜಿ ಸಿ

ಸಮಯ ಮತ್ತು ಹಣದ ಸದುಪಯೋಗ ಸರ್ಕಾರದ ನೀತಿ: ಬಸವರಾಜ ಬೊಮ್ಮಾಯಿ
ರಾಮನಗರ, ಜನವರಿ 3: ಸಮಯ ಮತ್ತು ಹಣದ ಸದುಪಯೋಗ ಸರ್ಕಾರದ ನೀತಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಅವರು ಇಂದು ಮಾಗಡಿ ತಾಲ್ಲೂಕಿನ ಚಿಕ್ಕಕಲ್ಯಾ ಗ್ರಾ

ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ ಪ್ರಕಟ
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ.
ಇದು ರಾಜ್ಯದಾದ್ಯಂತ ಎಂಟು ಸಾವಿರಕ್ಕೂ ಹೆಚ್ಚು ಕಾರ್ಯನಿರತ ಪತ್ರಕರ್ತ ಸದಸ್ಯರನ್ನು ಹೊಂದಿರುವ ಪತ

ರಸ್ತೆ ಬದಿಯಲ್ಲಿ ನಡೆದು ಹೋಗುತ್ತುದ್ದ ಕಾಲೇಜು ವಿದ್ಯಾರ್ಥಿಗಳಿಗೆ ಢಿಕ್ಕಿ ಹೊಡೆದ ಕಾರು
ಮಳವಳ್ಳಿ: ಪಟ್ಟಣದ ಮೈಸೂರು ರಸ್ತೆಯಲ್ಲಿ ಗುರುವಾರ ನಡೆದು ಹೋಗುತ್ತಿದ್ದ ಕಾಲೇಜು ವಿದ್ಯಾರ್ಥಿಗಳಿಗೆ ಮಾರುತಿ ಸುಝುಕಿ ಬಲೆನೋ KA-01 MR 9616 ಸಂ

ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಹತ್ತು ಸ್ಥಾನಗಳನ್ನು ಗೆದ್ದ ಕೆಂಚಪ್ಪಗೌಡ ತಂಡ
ರಾಜ್ಯ ಒಕ್ಕಲಿಗರ ಸಂಘದ ಚುನಾವಣೆಯು ಈ ಬಾರಿ ಬಹಳ ರಮಾರಮಿಯಾಗಿ
ಕಳೆದ 12ರಂದು ಚುನಾವಣೆ ಜರುಗಿತು. ವಿವಿಧ ಜಿಲ್ಲೆಗಳಿಂದ 20 ಸ್ಥಾನಗಳಿಗೆಹಾಗೂ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ,<

ರಾಷ್ಟ್ರೀಯ ಪಕ್ಷಗಳ ಹಣಬಲದ ಮುಂದೆ ಜನಬಲಕ್ಕೆ ಸೋಲಾಗಿದೆ. ಹೆಚ್ಡಿಕೆ
ವಿಧಾನ ಪರಿಷತ್ ಚುನಾವಣೆ ಫಲಿತಾಂಶದಲ್ಲಿ ಜೆಡಿಎಸ್ ಪಕ್ಷ ಕೇವಲ ಒಂದು ಕ್ಷೇತ್ರದಲ್ಲಿ ಮಾತ್ರಗೆಲುವು ಸಾಧಿಸಿದೆ. ಈ
ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳ ಹಣಬಲ ಕೆಲಸ ಮಾಡಿದೆ ಎಂದು ವಿಧಾನ

ಕೆ ಹೆಚ್ ರಾಮಯ್ಯ ತಂಡ ಗೆಲ್ಲಿಸಿ, ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತೇವೆ. ಜಯಮುತ್ತು, ಅ ದೇವೇಗೌಡ ತಂಡ ಮನವಿ
ನಾವು ಯಾವುದೇ ಕಾರಣಕ್ಕೂ ಭ್ರಷ್ಟಾಚಾರ ಸಹಿಸುವುದಿಲ್ಲ. ನಾವೂ ಸಹ ಈ ಹಿಂದಿನ ಅವಧಿಯಲ್ಲೂ ಸಹ ಭ್ರಷ್ಟಾಚಾರ ಮಾಡಿಲ್ಲ. ಮತದಾರರು ಆಶೀರ್ವದಿಸಿದರೆ ಮುಂದಿನ ದಿನಗಳಲ್ಲಿ ಸಂಘದ ಆಸ್ತಿ ಉಳಿಸುವುದರ ಜೊತೆಗೆ ಸ

ಇಳಿ ವಯಸ್ಸಿನಲ್ಲಿ ಒಂದಾದ ಅಮರ ಪ್ರೇಮಿಗಳು
ಮೈಸೂರು: ಮೇಲುಕೋಟೆ. ನಲವತ್ತೈದು ವರ್ಷಗಳ ಹಿಂದೆ ಮೈಸೂರಿನ ಹೆಬ್ಬಾಳ ಗ್ರಾಮದಲ್ಲಿ ಅಕ್ಕಪಕ್ಕದಲ್ಲಿ ನೆಲೆಸಿದ್ದ ಯುವಕ-ಯುವತಿ ಪ್ರೀತಿಸಿ ಮದುವೆಯಾ

ವಿಧಾನ ಪರಿಷತ್ ಚುನಾವಣೆ: ಗ್ರಾ.ಪಂ. ಸದ್ಯರಿಗೆ ಫುಲ್ ಡಿಮ್ಯಾಂಡ್!
ರಾಮನಗರ: ಬೆಂಗಳೂರು ಗ್ರಾಮಾಂತರ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್ ಗೆ ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸಿರುವ ಪ್ರಮುಖ ಮೂರು ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಗೆಲ್ಲಲು ತಂತ್ರ ರೂ

ವಿಧಾನ ಪರಿಷತ್ ದ್ವೈವಾರ್ಷಿಕ ಚುನಾವಣೆ: ಕರಡು ಮತದಾರರ ಪಟ್ಟಿ ಪ್ರಕಟ
ರಾಮನಗರ, ನ. 12/21 ಬೆಂಗಳೂರು ಗ್ರಾಮಾಂತರ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ರಾಜ್ಯ ವಿಧಾನ ಪರಿಷತ್ ಗೆ ದ್ವೈವಾರ್ಷಿಕ ಚುನಾವಣೆ-2022ರ ಸಂಬಂಧ ಗ್ರಾಮ ಪಂಚಾಯಿತಿವಾರು/ ನಗರ ಸ್ಥಳೀಯ ಸಂಸ್ಥೆವಾರು ಮತದಾ
??????????????