Tel: 7676775624 | Mail: info@yellowandred.in

Language: EN KAN

    Follow us :


ನಿಡಘಟ್ಟ ಗ್ರಾಮದ ಅಣ್ಣೇಗೌಡ ರ ಗೂಡಿನಲ್ಲಿ ಮಧ್ಯತಿರುಮಲ ದೇವಾಲಯಕ್ಕೆ ಸಪ್ತ ದಿನಗಳ ಪೂಜೆ

Posted date: 04 Apr, 2023

Powered by:     Yellow and Red

ನಿಡಘಟ್ಟ ಗ್ರಾಮದ ಅಣ್ಣೇಗೌಡ ರ ಗೂಡಿನಲ್ಲಿ ಮಧ್ಯತಿರುಮಲ ದೇವಾಲಯಕ್ಕೆ ಸಪ್ತ ದಿನಗಳ ಪೂಜೆ

ಮದ್ದೂರು: ನಿಡಘಟ್ಟ; ತಿರುಮಲ ದೇವಾಲಯ ಎಂದರೆ ಅದು ದೂರದ ತಿರುಪತಿ, ಶ್ರೀ ಶ್ರೀನಿವಾಸ ದೇವರು ನೆಲೆಸಿರುವ ತಿರುಪತಿ ಎಂದಷ್ಟೇ ಭಕ್ತರು ತಿಳಿದುಕೊಂಡಿದ್ದಂತೂ ಸತ್ಯ. ತಿರುಪತಿ ದೂರ ಎನ್ನುವ ಕಾರಣಕ್ಕೋ ಏನೋ ರಾಜ್ಯದ ಕೆಲವು ಕಡೆ ಚಿಕ್ಕ ತಿರುಪತಿ ಹೆಸರಲ್ಲಿ ಅನೇಕಾನೇಕ ಶ್ರೀ ವೆಂಕಟೇಶ್ವರ ದೇವಾಲಯಗಳು, ಶ್ರೀದೇವಿ, ಭೂದೇವಿ ಸಮೇತ ವೆಂಕಟೇಶ್ವರ, ಲಕ್ಷ್ಮಿ, ಪದ್ಮಾವತಿ ಸಮೇತ ಶ್ರೀನಿವಾಸ ಸೇರಿದಂತೆ ವಿವಿಧ ಹೆಸರುಗಳ ದೇವಾಲಯಗಳು ತಲೆ ಎತ್ತಿ ಭಕ್ತರನ್ನು ಆರಂಭದಲ್ಲಿ ಸೆಳೆದವಾದರೂ ತಿರುಪತಿಯ ತಿರುಮಲನಂತೆ ಪ್ರಸಿದ್ಧಿಯಾಗುವುದಕ್ಕೆ ಸಾಧ್ಯವಾಗಲಿಲ್ಲ.


ಆದರೆ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ನಿಡಘಟ್ಟ ಗ್ರಾಮದಲ್ಲಿರು ಅಣ್ಣೇಗೌಡ ನೆಸ್ಟ್ ಎಂಬ ಬೃಹತ್ ಲೇಔಟ್ ನಲ್ಲಿ ವಿಸ್ತಾರ ಹೊರತುಪಡಿಸಿ ಸಂಪೂರ್ಣ ತಿರುಪತಿ ತಿಮ್ಮಪ್ಪನ ದೇವಾಲಯದ ಪ್ರತಿರೂಪವನ್ನು ನಿರ್ಮಿಸಲು ಅಣ್ಣೇಗೌಡರ ಕುಟುಂಬ, ಬೆಂಗಳೂರಿನ ಉದ್ಯಮಿ ಬಾಲಕೃಷ್ಣ ಹಾಗೂ ಹಲವಾರು ಭಕ್ತಾದಿಗಳ ಸಹಕಾರದೊಂದಿಗೆ ಮೇಲುಕೋಟೆ ಯ ಯದುಗಿರಿ ಯತಿರಾಜ ಮಠದ ಪೀಠಾಧಿಪತಿಗಳಾದ ಶ್ರೀ ಯತಿರಾಜ ಜೀಯರ್ ಸ್ವಾಮೀಜಿ ಯವರ ನೇತೃತ್ವದಲ್ಲಿ ತಲೆ ಎತ್ತಲು ಸಜ್ಜಾಗಿದ್ದು, ಇದೇ ಏಪ್ರಿಲ್ ತಿಂಗಳ ಮೂರನೇ ತಾರೀಖಿನಿ ಸೋಮವಾರದಿಂದ ಒಂಭತ್ತನೇ ತಾರೀಖಿನ ಭಾನುವಾರದವರೆಗೆ, ಋಗ್ವೇದ ಸಂಹಿತಾಯಾಗ, ಚತುರ್ವೇದ ಪಾರಾಯಣ ಹಾಗೂ ಲಕ್ಷ ಕುಂಕುಮಾರ್ಚನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ವಿಶೇಷವಾಗಿ ಎಂಟನೇ ತಾರೀಖಿನ ಶನಿವಾರ ಬೆಳಿಗ್ಗೆ ಹತ್ತು ಗಂಟೆಗೆ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಭಕ್ತಾದಿಗಳು ಆಗಮಿಸಿ ದೇವರ ಕೃಪೆಗೆ ಪಾತ್ರರಾಗಲು ಮಾಧ್ಯಮದ ಮೂಲಕ ಮನವಿ ಮಾಡಿದ್ದಾರೆ.


ಅಣ್ಣೇಗೌಡರು ಎಂದರೆ ಹಳೇ ಮೈಸೂರು ಭಾಗದಲ್ಲಿ ಬಹುದೊಡ್ಡ ಹೆಸರು, ಸ್ವಾತಂತ್ರ್ಯ ಪೂರ್ವದಿಂದ ಸ್ವಾತಂತ್ರ್ಯಾನಂತರವೂ ಜಮೀನ್ದಾರರಾಗಿ, ದಾನದರ್ಮಿಷ್ಠರಾಗಿ, ಮೈಸೂರು ದೊರೆಗಳಿಂದ, ಸ್ಥಳೀಯ ಪಾಳೇಗಾರರಿಂದ, ಪ್ರಜಾಪ್ರಭುತ್ವದ ನಂತರ ಅಂದಿನ ಮಂತ್ರಿಮಹೋದಯರಿಂದ ಬೆನ್ನು ತಟ್ಟಿಸಿಕೊಂಡವರು. ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಬರುವ ಬಹುತೇಕ ನಗರಗಳಲ್ಲಿರುವ ಅನೇಕ ಸರ್ಕಾರಿ ಜಾಗ ಅಣ್ಣೇಗೌಡರ ಕೊಡುಗೆಯಾಗಿದೆ. ಇದಕ್ಕೆ ಸಾಕ್ಷೀಭೂತವಾಗಿ ಚನ್ನಪಟ್ಟಣ ನಗರದಲ್ಲಿ ಅವರ ಹೆಸರಿನ ವೃತ್ತ ಇರುವುದನ್ನು ಇಂದಿಗೂ ಕಾಣಬಹುದು. ಇವರ ಹೆಸರಿನಲ್ಲಿ ಅವರ ಕುಟುಂಬದವರು ಬೃಹತ್ ಬಡಾವಣೆ ನಿರ್ಮಿಸಿದ್ದು, ಅವರ ಮಾತಾ ಪಿತೃಗಳ ಶಾಶ್ವತ ನೆನಪಿಗಾಗಿ ಸಂಪೂರ್ಣ ತಿರುಪತಿ ಮಾದರಿಯಲ್ಲಿ, ಕಬ್ಬಿಣ, ಸಿಮೆಂಟ್ ಉಪಯೋಗಿಸದೇ ಬೃಹತ್ ಗಾತ್ರದ ಉತ್ತಮ ಕಲ್ಲುಗಳಿಂದ ಶ್ರೀವಾರಿ ಯ ದೇವಾಲಯ ನಿರ್ಮಿಸುತ್ತಿದ್ದು, ಈಗಾಗಲೇ ತಳಪಾಯ ಮುಕ್ತಾಯಗೊಂಡಿದೆ. ಈ ಹಿನ್ನೆಲೆಯಲ್ಲಿ ಏಳು ದಿನಗಳ ಕಾಲ ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಳ್ಳಲಾಗಿದ್ದು ಭಕ್ತಾದಿಗಳು ಸಕಾಲಕ್ಕೆ ಆಗಮಿಸಿ, ಬಾಲಾಜಿಯ ಕೃಪೆಗೆ ಪಾತ್ರರಾಗಲು ಶ್ರೀ ಭಕ್ತರಿಗೆ ಕರೆ ನೀಡಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in karnataka »

ಕಳೆದ 30 ವರ್ಷಗಳಿಂದ ಶಿಕ್ಷಕರ ಸೇವೆ ಮಾಡಿದ್ದೇನೆ ಮತ್ತೊಮ್ಮೆ ಆಶೀರ್ವದಿಸಿ : ಪುಟ್ಟಣ್ಣ
ಕಳೆದ 30 ವರ್ಷಗಳಿಂದ ಶಿಕ್ಷಕರ ಸೇವೆ ಮಾಡಿದ್ದೇನೆ ಮತ್ತೊಮ್ಮೆ ಆಶೀರ್ವದಿಸಿ : ಪುಟ್ಟಣ್ಣ

ರಾಮನಗರ: ಶಿಕ್ಷಕರ ಕ್ಷೇತ್ರದ ಪ್ರತಿನಿಧಿಯಾಗಿ ಕಳೆದ 30 ವರ್ಷಗಳಿಂದಲೂ ನಿಮ್ಮ ಸೇವೆ ಮಾಡಿದ್ದೇನೆ. ಮುಂದೆಯೂ ನಿಮ್ಮ ಕಷ್ಟಗಳನ್ನರಿತು ನಿಮಗಾಗಿ ಮತ್ತಷ್ಟು ಕ

ಕೆರಗೋಡು ಧ್ವಜ ಪ್ರಕರಣ; ಪ್ರಚೋದನೆ ನೀಡುವವರ ವಿರುದ್ಧ ಕ್ರಮ: ಜಿಲ್ಲಾಧಿಕಾರಿ
ಕೆರಗೋಡು ಧ್ವಜ ಪ್ರಕರಣ; ಪ್ರಚೋದನೆ ನೀಡುವವರ ವಿರುದ್ಧ ಕ್ರಮ: ಜಿಲ್ಲಾಧಿಕಾರಿ

ರಾಮನಗರ, ಫೆ. 02  :  ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಇತ್ತೀಚೆಗೆ ನಡೆದ ಧ್ವಜ ಸ್ತಂಭದ ವಿಚಾರವು ತುಂಬಾ ಸೂಕ್ಷ್ಮ ವಿಚಾರವಾಗಿದ್ದು, ಈ ಸಂಬಂಧ ಯಾವು

ಸಂವಿಧಾನ ಜಾಗೃತಿ ಜಾಥಾ ಗೆ ಸ್ವಾಗತ
ಸಂವಿಧಾನ ಜಾಗೃತಿ ಜಾಥಾ ಗೆ ಸ್ವಾಗತ

ಚನ್ನಪಟ್ಟಣ: ಸಂವಿಧಾನ ಜಾಗೃತಿ ಜಾಥಾಕ್ಕೆ ತಾಲ್ಲೂಕು ಆಡಳಿತದಿಂದ ಅದ್ದೂರಿ ಸ್ವಾಗತ ಕೋರಲಾಯಿತು. ಇದೇ ಸಂದರ್ಭದಲ್ಲಿ

ಸಂವಿಧಾನ ಜಾಗೃತಿ ಜಾಥಾ

ಉಜ್ಜನಹಳ್ಳಿ ವೀರಾಂಜನೇಯಸ್ವಾಮಿ ಗೆ ಗ್ರಾಮಸ್ಥರಿಂದ ಅಭಿಷೇಕ
ಉಜ್ಜನಹಳ್ಳಿ ವೀರಾಂಜನೇಯಸ್ವಾಮಿ ಗೆ ಗ್ರಾಮಸ್ಥರಿಂದ ಅಭಿಷೇಕ

ಚನ್ನಪಟ್ಟಣ: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಮಾಡಿದ ಹಿನ್ನೆಲೆಯಲ್ಲಿ ಚನ್ನಪಟ್ಟಣ ತಾಲ್ಲೂಕಿನ ಉಜ್ಜನಹಳ್ಳಿ ಗ್ರಾಮದ ಶ್ರೀ ವೀರಾಂನೇಯಸ್ವಾಮಿ ಗೆ ವಿಶೇಷ

ಇ-ಆಸ್ತಿ ತಂತ್ರಾಂಶದಲ್ಲಿ ಆಸ್ತಿ ದಾಖಲೀಕರಣ ಮತ್ತು ಗಣಕೀಕರಣಗೊಳಿಸಿ
ಇ-ಆಸ್ತಿ ತಂತ್ರಾಂಶದಲ್ಲಿ ಆಸ್ತಿ ದಾಖಲೀಕರಣ ಮತ್ತು ಗಣಕೀಕರಣಗೊಳಿಸಿ

ರಾಮನಗರ, ಜ. 17: ರಾಮನಗರ ಜಿಲ್ಲಾ ವ್ಯಾಪ್ತಿಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾತೆ ಹೊಂದಿರುವ ಆಸ್ತಿಗಳನ್ನು ದಿನಾಂಕ: 02.05.2015 ರಿಂದ ಜಾರಿಗೆ ಬರುವಂತೆ,

ಬೋಧನಾ ಶುಲ್ಕ ಪಾವತಿಸಲು ಅವಧಿ ವಿಸ್ತರಣೆ
ಬೋಧನಾ ಶುಲ್ಕ ಪಾವತಿಸಲು ಅವಧಿ ವಿಸ್ತರಣೆ

ರಾಮನಗರ:  ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ 2019-20, 2020-21, 2021-22 ಮತ್ತು 2022-23ರ (ಜುಲೈ ಆವೃತ್ತಿ) ದ್ವಿತೀಯ/ತೃತೀಯ ವರ್ಷದ ಬಿ

ಸರ್ವಸಮ್ಮೇಳನಕ್ಕೂ ಮಾದರಿಯಾಗಿ ಯಶಸ್ವಿಯಾದ \'ಪರಿಸರಕ್ಕಾಗಿ ನಾವು\' ಸಮ್ಮೇಳನ
ಸರ್ವಸಮ್ಮೇಳನಕ್ಕೂ ಮಾದರಿಯಾಗಿ ಯಶಸ್ವಿಯಾದ \'ಪರಿಸರಕ್ಕಾಗಿ ನಾವು\' ಸಮ್ಮೇಳನ

ಹಾಸನ: ಪ್ರಾಕೃತಿಕ ಸೌಂದರ್ಯವು ಇ-ತ್ಯಾಜ್ಯ, ಕೆಲ ತಂತ್ರಜ್ಞಾನ ಹಾಗೂ ಪ್ಲಾಸ್ಟಿಕ್ ನಿಂದ  ಹಾಳಾಗುತ್ತಿದೆ. ಪರಿಸರ ನಾಶಕ್ಕೆ ಮುನ್ನುಡಿ ಬರೆದವನೇ

೫೨ ಲಕ್ಷಕ್ಕೂ ಹೆಚ್ಚು ಮೌಲ್ಯದ ಪಡಿತರ ಅಕ್ಕಿ ಗೋದಾಮಿನಲ್ಲೇ ಮಾಯ, ಅಧಿಕಾರಿಗಳಿಂದ ಪರಿಶೀಲನೆ, ವ್ಯವಸ್ಥಾಪಕನ ಬಂಧನ
೫೨ ಲಕ್ಷಕ್ಕೂ ಹೆಚ್ಚು ಮೌಲ್ಯದ ಪಡಿತರ ಅಕ್ಕಿ ಗೋದಾಮಿನಲ್ಲೇ ಮಾಯ, ಅಧಿಕಾರಿಗಳಿಂದ ಪರಿಶೀಲನೆ, ವ್ಯವಸ್ಥಾಪಕನ ಬಂಧನ

ಚನ್ನಪಟ್ಟಣ: ತಾಲ್ಲೂಕಿನಾದ್ಯಂತ ಪಡಿತರ ನ್ಯಾಯಬೆಲೆ ಅಂಗಡಿಗಳಿಗೆ ವಿತರಿಸಲು ಪಡಿತರ ಅಕ್ಕಿಯ ಪೈಕಿ ಸುಮಾರು ೫೨ ಲಕ್ಷಕ್ಕೂ  ಮೌಲ್ಯದ ೧,೫೪೩.೬೫ ಕ್ವಿಂಟಾಲ್ ಅ

ದಸರಾ ಎಂಬುದು ಮೈಸೂರಿಗಷ್ಟೇ ಸೀಮಿತವಾಗಬಾರದು, ಮನ-ಮನೆಯಲ್ಲೂ ದಸರಾ ಆಗಬೇಕು. ಡಾ ರೂಪಾ ಶ್ರೀಧರ್
ದಸರಾ ಎಂಬುದು ಮೈಸೂರಿಗಷ್ಟೇ ಸೀಮಿತವಾಗಬಾರದು, ಮನ-ಮನೆಯಲ್ಲೂ ದಸರಾ ಆಗಬೇಕು. ಡಾ ರೂಪಾ ಶ್ರೀಧರ್

ಚನ್ನಪಟ್ಟಣ: ದಸರಾ ಎಂದರೆ ಕೇವಲ ಮೈಸೂರು ಎಂಬಂತಾಗಿದೆ, ಇದು ನಾಡ ಹಬ್ಬ ಎಂಬುದು ಕೇವಲ ಉಲ್ಲೇಖಕ್ಕಷ್ಟೇ ಸೀಮಿತವಾಗಿದೆ. ಇದು ನಾಡಹಬ್ಬ ಎಂಬುದು ಸರ

ಒಕ್ಕಲಿಗರು ಸಂಸ್ಕೃತಿ ಹಿeನರಲ್ಲ ನೈಜ ಸಂಸ್ಕೃತಿಯ ಮಾಲೀಕರು, ಪ್ರೊ ಭಗವಾನ್ ಗೆ ತಿರುಗೇಟು ನೀಡಿದ ಹಿರಿಯ ರೈತ ಮುಖಂಡ ಸಿ ಪುಟ್ಟಸ್ವಾಮಿ
ಒಕ್ಕಲಿಗರು ಸಂಸ್ಕೃತಿ ಹಿeನರಲ್ಲ ನೈಜ ಸಂಸ್ಕೃತಿಯ ಮಾಲೀಕರು, ಪ್ರೊ ಭಗವಾನ್ ಗೆ ತಿರುಗೇಟು ನೀಡಿದ ಹಿರಿಯ ರೈತ ಮುಖಂಡ ಸಿ ಪುಟ್ಟಸ್ವಾಮಿ

ರಾಮನಗರ: ಚನ್ನಪಟ್ಟಣ; ಪ್ರೊ ಭಗವಾನ್ ವಿಚಾರವಾದಿ, ಮೂಢನಂಬಿಕೆಗಳನ್ನು ಕಿತ್ತೊಗೆಯಲು, ಪುರಾಣ ಎಂಬುದು ಕಪೋಲ ಕಲ್ಪಿತ, ಇತಿಹಾಸ ಎಂಬುದು ಸಾರ್ವಕಾಲ

Top Stories »  


Top ↑