Tel: 7676775624 | Mail: info@yellowandred.in

Language: EN KAN

    Follow us :


ಬೊಂಬೆನಾಡಿನಲ್ಲಿ ಗುಡುಗಿದ ನಮೋ

Posted date: 30 Apr, 2023

Powered by:     Yellow and Red

ಬೊಂಬೆನಾಡಿನಲ್ಲಿ ಗುಡುಗಿದ ನಮೋ

ಅಂದಿನ ಕಾಂಗ್ರೆಸ್, ಇಂದಿನ ಜೆಡಿಎಸ್ ಭದ್ರಕೋಟೆಯಾದ ಬೊಂಬೆನಾಡಿನಲ್ಲಿ ನರೇಂದ್ರ ಮೋದಿ ಅಬ್ಬರ. ಕಾಂಗ್ರೆಸ್ ಜೆಡಿಎಸ್ ಒಂದೇ ಮುಖದ ಎರಡು ನಾಣ್ಯಗಳು. ನೀವು ಜೆಡಿಎಸ್ ಗೆ ಮತ ನೀಡಿದರೆ ಕಾಂಗ್ರೆಸ್ ಗೆ ನೀಡಿದಂತೆ. ಬಿಜೆಪಿ ಪಕ್ಷಕ್ಕೆ ಮತ ನೀಡಿ ಗೆಲ್ಲಿಸಿದರೆ ಡಬಲ್ ಇಂಜಿನ್ ಸರ್ಕಾರದಲ್ಲಿ ಕರ್ನಾಟಕವನ್ನು ನಂಬರ್ ಒನ್ ರಾಜ್ಯವನ್ನಾಗಿ ಮಾಡುತ್ತೇವೆ. ಇಂದಿನ ಪ್ರಚಾರ ಸಭೆಯಲ್ಲಿ ಗುಡುಗಿದ ಮೋದಿ;*


ಕರ್ನಾಟಕ ರಾಜ್ಯವನ್ನು ರಾಷ್ಟ್ರದಲ್ಲಿಯೇ ನಂಬರ್ ಒನ್ ರಾಜ್ಯವನ್ನಾಗಿ ಮಾಡುತ್ತೇವೆ. ಈ ಬಾರಿಯ ಚುನಾವಣೆ ಬಹಳ ಮುಖ್ಯವಾಗಿದೆ. ಬಿಜೆಪಿ ಪಕ್ಷ ಮಾತ್ರ ಈ ಸಾಧನೆಯನ್ನು ಮಾಡುವ ಸರ್ಕಾರ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಕೇವಲ ಎಟಿಎಂ ಕಾರ್ಡುಗಳಾಗಿವೆ. ವಿಕಾಸ ಎಂಬ ಮಾತೇ ಆಡದ ಅವರಿಂದ ರಾಜ್ಯ ಉದ್ಧಾರವಾಗುವುದಿಲ್ಲ. ಬಡವರನ್ನೂ ಉದ್ದರಿಸುವ ಸರ್ಕಾರ ಅದು ನಮ್ಮ ಸರ್ಕಾರ ಮಾತ್ರ. ತಾವೆಲ್ಲರೂ ಈಗಲೇ ನಿರ್ಧರಿಸಿ. ಇದುವರೆಗಿನ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಸರ್ಕಾರ ನೋಡಿದ್ದೀರಿ. ಇವೆರಡೂ ಪಕ್ಷಗಳ ಮುಖಂಡರು ಮೇಲ್ನೋಟಕ್ಕೆ ಮಾತ್ರ ಬೇರೆಬೇರೆ. ದೆಹಲಿಯಲ್ಲಿ, ಸಂಸತ್ ನಲ್ಲಿ ಒಬ್ಬರಿಗೊಬ್ಬರು ಒಪ್ಪಂದ ಮಾಡಿಕೊಂಡಿದ್ದಾರೆ. ಜೆಡಿಎಸ್ ಪಕ್ಷಕ್ಕೆ ನೀಡುವ ಒಂದೊಂದು ಮತವು ಕಾಂಗ್ರೆಸ್ ಪಕ್ಷಕ್ಕೆ ನೀಡಿದಂತೆ. ಎರಡೂ ಪಕ್ಷಗಳು ಕೇವಲ ಇಪ್ಪತ್ತು ಮೂವತ್ತು ಸೀಟು ಪಡೆದು ಕಿಂಗ್ ಮೇಕರ್ ಆಗಲು ಹವಣಿಸಿದ್ದಾರೆ. ಇದಕ್ಕೆ ನೀವು ಅವಕಾಶ ನೀಡಬೇಡಿ ಎಂದು ಪ್ರಧಾನಮಂತ್ರಿ ನರೇಂದ್ರ ದಾಮೋದರ್ ಮೋದಿ ಯವರು ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ವಿರುದ್ದ ಗುಡುಗಿದರು.

ಅವರು ಭಾನುವಾರ ತಾಲ್ಲೂಕಿನ ಮತ್ತೀಕೆರೆ-ಶೆಟ್ಟಿಹಳ್ಳಿ ಬಳಿ ರಾಮನಗರ, ಮಂಡ್ಯ ಜಿಲ್ಲೆಯ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.


ನೀವು ಯಾವಾಗಲೂ ಕೇಂದ್ರ ಮತ್ತು ರಾಜ್ಯದಲ್ಲಿ ನಮ್ಮ ಬಿಜೆಪಿ ಸರ್ಕಾರ ತರುವ ನಿಟ್ಟಿನಲ್ಲಿ ಯೋಚಿಸಿ, ಆಗ ಅದು ಡಬಲ್ ಇಂಜಿನ್ ಸರ್ಕಾರವಾಗುತ್ತದೆ. ಬಡವರ ಕಾಳಜಿ ಹೆಚ್ಚಾಗುತ್ತದೆ. ಪ್ರತಿ ಕುಟುಂಬವನ್ನೂ ನಮ್ಮ ಕುಟುಂಬ ಎಂದು ಪರಿಗಣಿಸುತ್ತದೆ. ರಾಮನಗರ ಜಿಲ್ಲೆಯ ಮೂರು ಸಾವಿರ ಕುಟುಂಬಗಳಿಗೆ ಗ್ಯಾಸ್, ಉಚಿತ ಆರೋಗ್ಯ ನೀಡಲಾಗಿದೆ, ಬಡವರ ಕಲ್ಯಾಣಕ್ಕಾಗಿ ಬಿಜೆಪಿ ಸರ್ಕಾರ ಪಣ ತೊಡುತ್ತಿದೆ. ಇದು ಡಬಲ್ ಇಂಜಿನ್ ಸರ್ಕಾರ ಬಂದಾಗ ಮತ್ತಷ್ಟು ಅಭಿವೃದ್ಧಿ ಸಾಧ್ಯಾಗುತ್ತದೆ.


ಕಾಂಗ್ರೆಸ್ ಸರ್ಕಾರದ ಸಾಧನೆ ಎಂದರೆ ಅದು ವಿಶ್ವಸಘಾತುಕ ಸರ್ಕಾರ, ೨೦೦೮ ರ ಚುನಾವಣೆಯಲ್ಲಿ ಸರ್ಕಾರ ರೈತರ ಸಾಲಮನ್ನಾ ಎಂದು ಸುಳ್ಳು ಭರವಸೆ ನೀಡಿ ವಂಚಿಸಿದ್ದಾರೆ. ಅದೆಷ್ಟೋ ಮಂದಿ ಸಣ್ಣ ರೈತರಿಗೆ ಬ್ಯಾಂಕಿನಲ್ಲಿ ಖಾತೆಯೇ ಇರಲಿಲ್ಲ. ಕಾಂಗ್ರೆಸ್ ಪಕ್ಷದ, ಗ್ಯಾರಂಟಿ, ಪ್ರಣಾಳಿಕೆ ಭರವಸೆಗಳೆಲ್ಲವೂ ಸುಳ್ಳು ಭರವಸೆಗಳಾಗಿವೆ. ರೈತರ ಅಭಿವೃದ್ಧಿ ಹೆಸರಲ್ಲಿ ಅವರು ಮೊದಲು ಮೋಸ ಮಾಡಿದಂತೆ ಮುಂದೆಯೂ ಮಾಡಲು ಗ್ಯಾರಂಟಿ ಹೆಸರಲ್ಲಿ ಮೋಸ ಮಾಡಲು ಹವಣಿಸುತ್ತಿದ್ದಾರೆ. ನೀವು ವಂಚಿತರಾಗಬೇಡಿ ಎಂದು ಕಾರ್ಯಕರ್ತರು ಮತ್ತು ಮತದಾರರಿಗೆ ಕರೆ ನೀಡಿದರು.


ರೈತರಿಗೆ ಕೇಂದ್ರ ಸರ್ಕಾರ ಆರು ಸಾವಿರ ಹಾಗೂ ರಾಜ್ಯ ಸರ್ಕಾರದ ನಾಲ್ಕು ಸಾವಿರ ರೂಪಾಯಿ ಹಣವನ್ನು ಪ್ರತಿವರ್ಷವೂ ನೀಡುತ್ತಿದ್ದೇವೆ. ಈಗಾಗಲೇ ರೈತರಿಗೆ ಹದಿನೆಂಟು ಸಾವಿರ ಕೋಟಿ ನೀಡಲಾಗಿದೆ. ವಿವಿಧ ಯೋಜನೆಗಳಿಂದ ಎರಡೂವರೆ ಲಕ್ಷ ಕೋಟಿ ಹಣ ನೀಡಲಾಗಿದೆ. ಆರೋಗ್ಯ ಭಾಗ್ಯಕ್ಕಾಗಿ ಬಡವರಿಗೆ ವಿಮೆ ಮಾಡಿಸಿ ಲಕ್ಷಾಂತರ ಕುಟುಂಬದ ಬಡ ಜನರಿಗೆ ಉನ್ನತ ಆರೋಗ್ಯ ಭಾಗ್ಯ ನೀಡಲಾಗಿದೆ. ರಾಮನಗರ ಜಿಲ್ಲೆಯ ಅಧಿಕ ಬಡವರು ಈ ಸೌಲಭ್ಯಗಳನ್ನು ಪಡೆದುಕೊಂಡಿದ್ದಾರೆ‌. ರಾಮನಗರ ಜಿಲ್ಲೆ ರೇಷ್ಮೆ ನಾಡು ಎಂದೇ ಪ್ರಖ್ಯಾತ. ಇದೂವರೆಗೂ ಯಾವ ಸರ್ಕಾರವೂ ನೀಡದ ಬೆಂಬಲವನ್ನು ನಾವು ನೀಡಿದ್ದೇವೆ. ರೇಷ್ಮೆ ಬೆಳೆಗೆ ಹೆಚ್ಚು ಕೊಡುಗೆ ನೀಡಿದ್ದು, ಯಡಿಯೂರಪ್ಪ ಮತ್ತು ಬೊಮ್ಮಾಯಿ ಸರ್ಕಾರ. ಹತ್ತು ಸಾವಿರ ರುಪಾಯಿ ಪ್ರೋತ್ಸಾಹ ನೀಡಲಾಗಿದೆ.


ಇಂದಿಗೆ ಕಾಂಗ್ರೆಸ್ ನ ಗ್ಯಾರಂಟಿ ಮುಗಿದಿದೆ. ಹಿಮಾಚಲ ಪ್ರದೇಶದಲ್ಲಿ ಪ್ರತಿ ಮಹಿಳೆಗೆ ಒಂದು ಸಾವಿರ ರೂಪಾಯಿ ನೀಡುತ್ತೇವೆ ಎಂದು ಗ್ಯಾರಂಟಿ ನೀಡಿದ್ದರು. ಆದರೆ ಅವರು ನೀಡದೆ ವಿಶ್ವಾಸಘಾತ ಮಾಡಿದ್ದಾರೆ. ಬಿಜೆಪಿ ಪಕ್ಷದ ಜನಪರ ಅಭಿವೃದ್ಧಿ ರದ್ದು ಮಾಡಿ ಬೆಲೆ ಹೆಚ್ಚಳ ಮಾಡಿದ್ದಾರೆ. ಬಿಜೆಪಿಯ ಹಲವಾರು ಜನಪಯೋಗಿ ಯೋಜನೆಗಳನ್ನು ನುಂಗಿ ಹಾಕುತ್ತಾರೆ. ಜೆಡಿಎಸ್ ಪಕ್ಷ ಕಾಂಗ್ರೆಸ್ ನ ಬಿ ಟೀಂ ಇದ್ದಂತೆ. ಅವರು ಈಗ ರಿವರ್ಸ್ ಗೇರ್ ನಲ್ಲಿ ತೆರಳಲಿದ್ದಾರೆ‌. ಮುದ್ರಾ ಯೋಜನೆಯಲ್ಲಿ ರಾಮನಗರ ಜಿಲ್ಲೆಯೊಂದರಲ್ಲೇ ಏಳು ಲಕ್ಷ ಮಂದಿಗೆ ಸಾವಿರಾರು ಕೋಟಿ ನೀಡಿದೆ. ಇದು ಯುವಕರ ಆಶಾಕಿರಣ ಕಾರ್ಯಕ್ರಮವಾಗಿದೆ.


ಚನ್ನಪಟ್ಟಣ ಸಾಂಪ್ರದಾಯಿಕ ಗೊಂಬೆಗಳ ತವರಾಗಿದೆ. ಇಂತಹ ನಗರದ ಆಟಿಕೆಗಳ ಉದ್ಯಮವನ್ನು ಈ ಹಿಂದಿನ ಸರ್ಕಾರಗಳು ಬರಬಾದ್ ಮಾಡಿದ್ದರು. ಇದನ್ನು ನಾನು ಮನ್ ಕೀ ಬಾತ್ ನಲ್ಲಿ ಪ್ರಸ್ತಾಪ ಮಾಡಿದ್ದೆ‌. ಅದಾದ ನಂತರ ಚೀನಾ ಸೇರಿದಂತೆ ವಿದೇಶಗಳ ಆಟಿಕೆಗಳು ಬಹುತೇಕ ಸ್ಥಗಿತಗೊಂಡಿದ್ದು, ಚನ್ನಪಟ್ಟಣದ ಕರಕುಶಲಕರ್ಮಿಗಳು ಸಾವಿರ ಕೋಟಿ ರೂಪಾಯಿಗಳ ವಹಿವಾಟು ನಡೆಸಿದ್ದಾರೆ. ಇದು ಡಬಲ್ ಇಂಜಿನ್ ಸರ್ಕಾರದ ತಾಕತ್ತು. ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ಹೆದ್ದಾರಿ, ವಂದೇ ಮಾತರಂ ರೈಲು, ರಾಮನಗರದಲ್ಲಿ ಔದ್ಯೋಗಿಕ ಸೃಷ್ಟಿ ಮಾಡಿದ್ದೇವೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದವರು ಬಯ್ಯುತ್ತಲೇ ಇರುತ್ತಾರೆ. ನನ್ನನ್ನು ಸರ್ಪ ಎಂದು ಕರೆಯುತ್ತಾರೆ. ಅದು ಶಿವ ಎಂದು ನಂಬಿದ್ದೇನೆ. ನಾನು ನಿಮ್ಮನ್ನು ಈಶ್ವರ ಎಂದು ನಂಬಿದ್ದೇನೆ. ಅವರು ಬಯ್ಯುತ್ತಲೇ ಇರುತ್ತಾರೆ ನಾವು ಅಭಿವೃದ್ಧಿ ಮಾಡುತ್ತಲೇ ಇರುತ್ತೇವೆ. ನಾನು ಎಲ್ಲರಿಗೂ ನಮಸ್ಕರಿಸುತ್ತೇನೆ. ರಾಮನಗರ ಜಿಲ್ಲೆಯ ಮತದಾರರು ಬಿಜೆಪಿ ಪಕ್ಷಕ್ಕೆ ತಾಕತ್ತು ನೀಡಿ. ನಾವು ಸಂಪೂರ್ಣವಾಗಿ ವಿಕಾಸ ಮಾಡುತ್ತೇವೆ. ನೀವು ನನ್ನ ಹೇಳಿದ ಒಂದು ಮಾತನ್ನು ನಡೆಸಿಕೊಡಬೇಕು. ಪ್ರತಿ ಮನೆಗೂ ಹೋಗಿ ಸರ್ಕಾರದ ಸಾಧನೆ ತಿಳಿಸಿ ಮತ ನೀಡಲು ಮನವಿ ಮಾಡಿಕೊಳ್ಳಿ. ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು. ಇದೇ ವೇಳೆ ಒಂದೇ ಮಾತರಂ, ಭಾರತ್ ಮಾತಾಕಿ ಜೈ ಎಂಬ ಘೋಷಣೆಗಳನ್ನು ಮೊಳಗಿಸಲಾಯಿತು.


*ಮೋದಿ ನಮ್ಮ ಜೊತೆ ಇದ್ದಾರೆ, ಕಾಂಗ್ರೆಸ್ಸಿಗರ ಜೊತೆ ಭ್ರಷ್ಟಾಚಾರವಿದೆ ಆರ್ ಅಶೋಕ್*

ಕಾಂಗ್ರೆಸ್ ನವರು ಕೇಳುತ್ತಾರೆ. ನೀವ್ಯಾಕೆ ಯಾವಾಗಲೂ ಮೋದಿ ಯವರನ್ನೇ ಕರೆಸುತ್ತೀರಿ ಎಂದು ಕೇಳುತ್ತಾರೆ. ಅವರಿಗೆ ನಾವು ಕೇಳುತ್ತೇವೆ. ನಮ್ಮ ಮತ್ತು ಜನರ ಪರವಾಗಿ ನರೇಂದ್ರ ಮೋದಿ ಯವರಿದ್ದಾರೆ. ಕಾಂಗ್ರೆಸ್ ನವರ ಜೊತೆಗೆ ಭ್ರಷ್ಟಾಚಾರವಿದೆ. ನಮ್ಮ ಮುಖ್ಯಮಂತ್ರಿ ಬೊಮ್ಮಾಯಿ ಯವರ ಮೇಲೆ ಒಂದೇ ಒಂದು ಪ್ರಕರಣಗಳಿಲ್ಲಾ, ಆದರೆ ನಿಮ್ಮ ಪಕ್ಷದ ಹಲವಾರು ನಾಯಕರ ಮೇಲೆ ಸಾಕಷ್ಟು ಪ್ರಕರಣಗಳಿವೆ. ಅವೆಲ್ಲವನ್ನೂ ಸಿದ್ದರಾಮಯ್ಯ ನವರು ಮುಚ್ಚಿ ಹಾಕಿಸಿದ್ದಾರೆ. ಡಿ ಕೆ ಶಿವಕುಮಾರ್ ಮತ್ತು ದೇವೇಗೌಡರು ನೆಲೆಸಿರುವ ಪದ್ಮನಾಭನಗರದಲ್ಲಿಯೂ ಸಹ ನಾನು ಸ್ಪರ್ಧಿಸುತ್ತಿದ್ದೇನೆ ಇದು ಬಿಜೆಪಿ ಪಕ್ಷದ ತಾಕತ್ತು ಎಂದರು.


*ಅದ್ವಿತೀಯ ನಾಯಕ ಮೋದಿಯವರ ಆಗಮನ ನಮ್ಮ ಪುಣ್ಯ. ಸಿ ಪಿ ಯೋಗೇಶ್ವರ್*

ಅದ್ವಿತೀಯ ಅಂತರಾಷ್ಟ್ರೀಯ ನಾಯಕರಾದ, ಪ್ರಧಾನಮಂತ್ರಿ ನರೇಂದ್ರ ಮೋದಿ ರವರ ಆಗಮನದಿಂದ ಪುನೀತಾರಾಗಿದ್ದೇವೆ. ಹಳೆ ಮೈಸೂರು ಭಾಗದಲ್ಲಿ ಹೊಂದಾಣಿಕೆ ರಾಜಕಾರಣ ಮಾಡಿಕೊಳ್ಳದೆ, ಬಿಜೆಪಿ ಬಾವುಟ ಹಾರಿಸ ಬೇಕೆನ್ನುವ ನನ್ನ ಮನವಿಗೆ ಸ್ಪಂದಿಸಿದ ಪ್ರಧಾನಮಂತ್ರಿಗಳು ಆಗಮಿಸಿದ್ದಾರೆ. ನಮ್ಮ ಪಕ್ಷದ ಬಗ್ಗೆ ನನಗೆ ಹೆಮ್ಮೆ ಇದೆ. ಯಾಕೆಂದರೆ ಬರಡಾಗಿದ್ದ ತಾಲ್ಲೂಕಿನ ಭೂಮಿಯನ್ನು ಸದಾಕಾಲ ನೀರಿನ ಪಸೆ ಆರದಂತೆ ಮಾಡಲು ಕೈಜೋಡಿಸಿದ್ದು ಇದೇ ಬಿಜೆಪಿ ಸರ್ಕಾರ. ಹಾಗಾಗಿ ಚನ್ನಪಟ್ಟಣ ಕ್ಷೇತ್ರದ ಮತದಾರರು ಈಗಾಗಲೇ ಸ್ವಾಭಿಮಾನಿಯಾದ ನನ್ನನ್ನು ಗೆಲ್ಲಿಸಲು ಪಣ ತೊಟ್ಟಿದ್ದಾರೆ. ಗೆಲ್ಲಿಸುತ್ತಾರೆಂಬ ಭರವಸೆ ನನಗೆ ಇದೆ. ಅದೇ ರೀತಿಯಲ್ಲಿ ಹಳೆ ಮೈಸೂರು ಭಾಗದ ಎಲ್ಲಾ ಬಿಜೆಪಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಸ್ವಾಭಿಮಾನ ಮೆರೆಯಬೇಕೆಂದು ಮತದಾರರಿಗೆ ಕರೆ ನೀಡಿದರು.


*ಕುಮಾರಸ್ವಾಮಿ ಅಭಿವೃದ್ಧಿ ಶೂನ್ಯ ಸಚಿವ ನಾರಾಯಣಗೌಡ*

ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಯವರು ಯಾವುದೇ ಅಭಿವೃದ್ಧಿ ಮಾಡಿಲ್ಲಾ, ಕೇವಲ ಮಾತನಾಡುವ ಮೂಲಕ, ಕಣ್ಣೀರು ಸುರಿಸುವ ಮೂಲಕ ಅನುಕಂಪ ಗಿಟ್ಟಿಸಲು ಪ್ರಯತ್ನಿಸುತ್ತಾರೆ. ಅವರ ಅಭಿವೃದ್ಧಿ ಸಂಪೂರ್ಣವಾಗಿ ಶೂನ್ಯವಾಗಿದ್ದು, ಬಿಜೆಪಿ ನೇತೃತ್ವದ ಸರ್ಕಾರ ಅಭಿವೃದ್ಧಿ ಮಾಡಿದ್ದು, ಮುಂದಿನ ದಿನಗಳಲ್ಲೂ ಸಹ ಅಭಿವೃದ್ಧಿ ಪಥದತ್ತ ಸಾಗಬೇಕು. ತಾವೆಲ್ಲರೂ ಹೆಚ್ಚಿನ ಮತಗಳನ್ನು ನೀಡುವ ಮೂಲಕ ಮತ್ತೊಮ್ಮೆ ಡಬಲ್ ಎಂಜಿನ್ ಸರ್ಕಾರ ಬರಲು ಕಾರಣವಾಗಬೇಕು ಎಂದು ಮನವಿ ಮಾಡಿದರು.


*ವಿದೇಶಿ ಮತ್ತು ಕುಟುಂಬ ರಾಜಕಾರಣ ತೊಲಗಿಸಿ;ಸುಮಲತಾ*

ಅಧಿಕಾರ ಶಾಶ್ವತವಲ್ಲ, ಪ್ರೀತಿಯೇ ಶಾಶ್ವತ, ಅಭಿವೃದ್ಧಿಯೇ ಮಂತ್ರ ಎಂಬುದಕ್ಕೆ ತಾವೆಲ್ಲರೂ ಗಮನ ನೀಡಬೇಕು. ವಿದೇಶಿ ರಾಜಕಾರಣ ಮತ್ತು ಕುಟುಂಬ ರಾಜಕಾರಣಕ್ಕೆ ಇತಿಶ್ರೀ ಹಾಡಲು ಮೇ ಹತ್ತನೇ ತಾರೀಖು ಕೊನೆಯ ಮೊಳೆ ಹೊಡೆಯುವ ಮೂಲಕ ಬಿಜೆಪಿ ಪಕ್ಷದ ಗುರುತಾದ ಕಮಲವನ್ನು ಅರಳಿಸಬೇಕು. ರಾಜ್ಯದಲ್ಲಿ ಮತ್ತೊಮ್ಮೆ ಅಭಿವೃದ್ಧಿ ಪಥ ಸಾಗಲು ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದರು.


ರಾಮನಗರ, ಮಂಡ್ಯ, ಕ್ಷೇತ್ರದ ಅಭ್ಯರ್ಥಿಗಳು, ವಿಧಾನ ಪರಿಷತ್ ಸದಸ್ಯ ಅ ದೇವೇಗೌಡ ಸೇರಿದಂತೆ ಹಲವಾರು ನಾಯಕರು ಮಾತನಾಡಿ, ಪ್ರತಿ ರೈತರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಹತ್ತು ಸಾವಿರ ರೂ ನೀಡಿಕೆ, ಡಬಲ್ ಇಂಜಿನ್ ಸರ್ಕಾರದಿಂದ ರಾಜ್ಯದಾದ್ಯಂತ ಆಗಿರುವ ಅಭಿವೃದ್ಧಿ, ಭಾರತವನ್ನು ವಿಶ್ವಗುರುವನ್ನಾಗಿಸಿ, ವಿಶ್ವ ನಾಯಕರಾದ ಮೋದಿ ರವರ ಶ್ಲಾಘನೆ ಮಾಡುವುದರ ಜೊತೆಗೆ ತಂತಮ್ಮ ಕ್ಷೇತ್ರಗಳಲ್ಲಿ ಈಗಾಗಲೇ ಬಿಜೆಪಿ ಪಕ್ಷದ ಸರ್ಕಾರದಿಂದ ಆಗಿರುವ ಅಭಿವೃದ್ಧಿ, ಮುಂದೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಮಾಡುವ ಅಭಿವೃದ್ಧಿ ಬಗ್ಗೆ ಮಾತನಾಡಿದರು. ಮಾಜಿ ವಿಧಾನ ಪರಿಷತ್ ಸದಸ್ಯರಾದ ಅಶ್ವಥ್ ನಾರಾಯಣಗೌಡ ಕಾರ್ಯಕ್ರಮವನ್ನು ನಿರೂಪಿಸಿದರು.


*ಬಸ್ ಸಂಚಾರ ರದ್ದು, ಕಿಮೀ ಗಟ್ಟಲೆ ನಡೆದ ಕಾರ್ಯಕರ್ತರು*

ಬೆಂಗಳೂರು ಕಡೆಯಿಂದ ಬರುವ ಎಲ್ಲಾ ರೀತಿಯ ವಾಹನಗಳನ್ನು ಭೈರಾಪಟ್ಟಣ ಗ್ರಾಮದ ಬಳಿ ಹಾಗೂ ಮಂಡ್ಯ, ಮೈಸೂರು ಕಡೆಯಿಂದ ಬರುವ ವಾಹನಗಳನ್ನು ಪುಟ್ಟಪ್ಪನದೊಡ್ಡಿ ಹಾಗೂ ಮುದಗೆರೆ ಗ್ರಾಮಗಳ ಬಳಿಯ ಖಾಲಿ ಜಮೀನುಗಳಲ್ಲಿ ಹಾಗೂ ರಸ್ತೆಯ ಇಕ್ಕೆಲಗಳಲ್ಲಿ ಪಾರ್ಕಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿತ್ತು‌. ಗೊತ್ತಿಲ್ಲದೆಯೋ, ಜಬರ್ದಸ್ತ್ ನಿಂದಲೋ ಮುನ್ನುಗ್ಗಿ ಬಂದ ಹಲವಾರು ಪ್ರಯಾಣಿಕರ ಖಾಸಗಿ ವಾಹನಗಳನ್ನು ಕೊನೆಯ ಹಂತದಲ್ಲಿ ತಡೆದ ಭಾರತೀಯ ಸೇನಾ ಸಿಬ್ಬಂದಿ ಹಾಗೂ ಪೋಲಿಸರನ್ಬು, ರಾಜಕೀಯ ನಾಯಕರನ್ನು ಬೈದುಕೊಂಡು ಹೋಗುತ್ತಿದ್ದ ಸಂದರ್ಭಗಳು ಹೆಚ್ಚಾಗಿ ಕಂಡು ಬಂದವು.


*ಪಾಲ್ಗೊಂಡ ಅರ್ಧ ಲಕ್ಷ ಮಂದಿ*

ಪ್ರಮುಖ ವೇದಿಕೆಯ ಮುಂಭಾಗದ ಹಲವಾರು ಬ್ಲಾಕ್ ಗಳು, ವೇದಿಕೆಯ ಇಕ್ಕೆಲಗಳಲ್ಲಿ ಒಟ್ಟು ಮೂವತ್ತೈದರಿಂದ ನಲವತ್ತು ಸಾವಿರ ಕಾರ್ಯಕರ್ತರು ಭಾಗಿಯಾಗಿದ್ದು ಚನ್ನಪಟ್ಟಣ ತಾಲ್ಲೂಕಿನಲ್ಲಿ ಇತಿಹಾಸ ನಿರ್ಮಿಸಲಾಯಿತು. ಸಾರಿಗೆ ಬಸ್ಸುಗಳು, ಖಾಸಗಿ ಬಸ್ಸುಗಳು, ಸ್ವಂತ ವಾಹನಗಳ ಮೂಲಕ, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಯ ನಾಲ್ಕು ಕ್ಷೇತ್ರಗಳು, ಮಂಡ್ಯದ ಏಳು ಕ್ಷೇತ್ರಗಳ ಅಭ್ಯರ್ಥಿಗಳ ಪರವಾಗಿ ಕಾರ್ಯಕರ್ತರು ಆಗಮಿಸಿದ್ದರು. ವೇದಿಕೆಯ ಸುತ್ತಲೂ ಸಹ ಹತ್ತಾರು ಸಾವಿರ ಮಂದಿ ನಿಂತು ಕಾರ್ಯಕ್ರಮ ವೀಕ್ಷಿಸಿದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in karnataka »

ಕಳೆದ 30 ವರ್ಷಗಳಿಂದ ಶಿಕ್ಷಕರ ಸೇವೆ ಮಾಡಿದ್ದೇನೆ ಮತ್ತೊಮ್ಮೆ ಆಶೀರ್ವದಿಸಿ : ಪುಟ್ಟಣ್ಣ
ಕಳೆದ 30 ವರ್ಷಗಳಿಂದ ಶಿಕ್ಷಕರ ಸೇವೆ ಮಾಡಿದ್ದೇನೆ ಮತ್ತೊಮ್ಮೆ ಆಶೀರ್ವದಿಸಿ : ಪುಟ್ಟಣ್ಣ

ರಾಮನಗರ: ಶಿಕ್ಷಕರ ಕ್ಷೇತ್ರದ ಪ್ರತಿನಿಧಿಯಾಗಿ ಕಳೆದ 30 ವರ್ಷಗಳಿಂದಲೂ ನಿಮ್ಮ ಸೇವೆ ಮಾಡಿದ್ದೇನೆ. ಮುಂದೆಯೂ ನಿಮ್ಮ ಕಷ್ಟಗಳನ್ನರಿತು ನಿಮಗಾಗಿ ಮತ್ತಷ್ಟು ಕ

ಕೆರಗೋಡು ಧ್ವಜ ಪ್ರಕರಣ; ಪ್ರಚೋದನೆ ನೀಡುವವರ ವಿರುದ್ಧ ಕ್ರಮ: ಜಿಲ್ಲಾಧಿಕಾರಿ
ಕೆರಗೋಡು ಧ್ವಜ ಪ್ರಕರಣ; ಪ್ರಚೋದನೆ ನೀಡುವವರ ವಿರುದ್ಧ ಕ್ರಮ: ಜಿಲ್ಲಾಧಿಕಾರಿ

ರಾಮನಗರ, ಫೆ. 02  :  ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಇತ್ತೀಚೆಗೆ ನಡೆದ ಧ್ವಜ ಸ್ತಂಭದ ವಿಚಾರವು ತುಂಬಾ ಸೂಕ್ಷ್ಮ ವಿಚಾರವಾಗಿದ್ದು, ಈ ಸಂಬಂಧ ಯಾವು

ಸಂವಿಧಾನ ಜಾಗೃತಿ ಜಾಥಾ ಗೆ ಸ್ವಾಗತ
ಸಂವಿಧಾನ ಜಾಗೃತಿ ಜಾಥಾ ಗೆ ಸ್ವಾಗತ

ಚನ್ನಪಟ್ಟಣ: ಸಂವಿಧಾನ ಜಾಗೃತಿ ಜಾಥಾಕ್ಕೆ ತಾಲ್ಲೂಕು ಆಡಳಿತದಿಂದ ಅದ್ದೂರಿ ಸ್ವಾಗತ ಕೋರಲಾಯಿತು. ಇದೇ ಸಂದರ್ಭದಲ್ಲಿ

ಸಂವಿಧಾನ ಜಾಗೃತಿ ಜಾಥಾ

ಉಜ್ಜನಹಳ್ಳಿ ವೀರಾಂಜನೇಯಸ್ವಾಮಿ ಗೆ ಗ್ರಾಮಸ್ಥರಿಂದ ಅಭಿಷೇಕ
ಉಜ್ಜನಹಳ್ಳಿ ವೀರಾಂಜನೇಯಸ್ವಾಮಿ ಗೆ ಗ್ರಾಮಸ್ಥರಿಂದ ಅಭಿಷೇಕ

ಚನ್ನಪಟ್ಟಣ: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಮಾಡಿದ ಹಿನ್ನೆಲೆಯಲ್ಲಿ ಚನ್ನಪಟ್ಟಣ ತಾಲ್ಲೂಕಿನ ಉಜ್ಜನಹಳ್ಳಿ ಗ್ರಾಮದ ಶ್ರೀ ವೀರಾಂನೇಯಸ್ವಾಮಿ ಗೆ ವಿಶೇಷ

ಇ-ಆಸ್ತಿ ತಂತ್ರಾಂಶದಲ್ಲಿ ಆಸ್ತಿ ದಾಖಲೀಕರಣ ಮತ್ತು ಗಣಕೀಕರಣಗೊಳಿಸಿ
ಇ-ಆಸ್ತಿ ತಂತ್ರಾಂಶದಲ್ಲಿ ಆಸ್ತಿ ದಾಖಲೀಕರಣ ಮತ್ತು ಗಣಕೀಕರಣಗೊಳಿಸಿ

ರಾಮನಗರ, ಜ. 17: ರಾಮನಗರ ಜಿಲ್ಲಾ ವ್ಯಾಪ್ತಿಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾತೆ ಹೊಂದಿರುವ ಆಸ್ತಿಗಳನ್ನು ದಿನಾಂಕ: 02.05.2015 ರಿಂದ ಜಾರಿಗೆ ಬರುವಂತೆ,

ಬೋಧನಾ ಶುಲ್ಕ ಪಾವತಿಸಲು ಅವಧಿ ವಿಸ್ತರಣೆ
ಬೋಧನಾ ಶುಲ್ಕ ಪಾವತಿಸಲು ಅವಧಿ ವಿಸ್ತರಣೆ

ರಾಮನಗರ:  ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ 2019-20, 2020-21, 2021-22 ಮತ್ತು 2022-23ರ (ಜುಲೈ ಆವೃತ್ತಿ) ದ್ವಿತೀಯ/ತೃತೀಯ ವರ್ಷದ ಬಿ

ಸರ್ವಸಮ್ಮೇಳನಕ್ಕೂ ಮಾದರಿಯಾಗಿ ಯಶಸ್ವಿಯಾದ \'ಪರಿಸರಕ್ಕಾಗಿ ನಾವು\' ಸಮ್ಮೇಳನ
ಸರ್ವಸಮ್ಮೇಳನಕ್ಕೂ ಮಾದರಿಯಾಗಿ ಯಶಸ್ವಿಯಾದ \'ಪರಿಸರಕ್ಕಾಗಿ ನಾವು\' ಸಮ್ಮೇಳನ

ಹಾಸನ: ಪ್ರಾಕೃತಿಕ ಸೌಂದರ್ಯವು ಇ-ತ್ಯಾಜ್ಯ, ಕೆಲ ತಂತ್ರಜ್ಞಾನ ಹಾಗೂ ಪ್ಲಾಸ್ಟಿಕ್ ನಿಂದ  ಹಾಳಾಗುತ್ತಿದೆ. ಪರಿಸರ ನಾಶಕ್ಕೆ ಮುನ್ನುಡಿ ಬರೆದವನೇ

೫೨ ಲಕ್ಷಕ್ಕೂ ಹೆಚ್ಚು ಮೌಲ್ಯದ ಪಡಿತರ ಅಕ್ಕಿ ಗೋದಾಮಿನಲ್ಲೇ ಮಾಯ, ಅಧಿಕಾರಿಗಳಿಂದ ಪರಿಶೀಲನೆ, ವ್ಯವಸ್ಥಾಪಕನ ಬಂಧನ
೫೨ ಲಕ್ಷಕ್ಕೂ ಹೆಚ್ಚು ಮೌಲ್ಯದ ಪಡಿತರ ಅಕ್ಕಿ ಗೋದಾಮಿನಲ್ಲೇ ಮಾಯ, ಅಧಿಕಾರಿಗಳಿಂದ ಪರಿಶೀಲನೆ, ವ್ಯವಸ್ಥಾಪಕನ ಬಂಧನ

ಚನ್ನಪಟ್ಟಣ: ತಾಲ್ಲೂಕಿನಾದ್ಯಂತ ಪಡಿತರ ನ್ಯಾಯಬೆಲೆ ಅಂಗಡಿಗಳಿಗೆ ವಿತರಿಸಲು ಪಡಿತರ ಅಕ್ಕಿಯ ಪೈಕಿ ಸುಮಾರು ೫೨ ಲಕ್ಷಕ್ಕೂ  ಮೌಲ್ಯದ ೧,೫೪೩.೬೫ ಕ್ವಿಂಟಾಲ್ ಅ

ದಸರಾ ಎಂಬುದು ಮೈಸೂರಿಗಷ್ಟೇ ಸೀಮಿತವಾಗಬಾರದು, ಮನ-ಮನೆಯಲ್ಲೂ ದಸರಾ ಆಗಬೇಕು. ಡಾ ರೂಪಾ ಶ್ರೀಧರ್
ದಸರಾ ಎಂಬುದು ಮೈಸೂರಿಗಷ್ಟೇ ಸೀಮಿತವಾಗಬಾರದು, ಮನ-ಮನೆಯಲ್ಲೂ ದಸರಾ ಆಗಬೇಕು. ಡಾ ರೂಪಾ ಶ್ರೀಧರ್

ಚನ್ನಪಟ್ಟಣ: ದಸರಾ ಎಂದರೆ ಕೇವಲ ಮೈಸೂರು ಎಂಬಂತಾಗಿದೆ, ಇದು ನಾಡ ಹಬ್ಬ ಎಂಬುದು ಕೇವಲ ಉಲ್ಲೇಖಕ್ಕಷ್ಟೇ ಸೀಮಿತವಾಗಿದೆ. ಇದು ನಾಡಹಬ್ಬ ಎಂಬುದು ಸರ

ಒಕ್ಕಲಿಗರು ಸಂಸ್ಕೃತಿ ಹಿeನರಲ್ಲ ನೈಜ ಸಂಸ್ಕೃತಿಯ ಮಾಲೀಕರು, ಪ್ರೊ ಭಗವಾನ್ ಗೆ ತಿರುಗೇಟು ನೀಡಿದ ಹಿರಿಯ ರೈತ ಮುಖಂಡ ಸಿ ಪುಟ್ಟಸ್ವಾಮಿ
ಒಕ್ಕಲಿಗರು ಸಂಸ್ಕೃತಿ ಹಿeನರಲ್ಲ ನೈಜ ಸಂಸ್ಕೃತಿಯ ಮಾಲೀಕರು, ಪ್ರೊ ಭಗವಾನ್ ಗೆ ತಿರುಗೇಟು ನೀಡಿದ ಹಿರಿಯ ರೈತ ಮುಖಂಡ ಸಿ ಪುಟ್ಟಸ್ವಾಮಿ

ರಾಮನಗರ: ಚನ್ನಪಟ್ಟಣ; ಪ್ರೊ ಭಗವಾನ್ ವಿಚಾರವಾದಿ, ಮೂಢನಂಬಿಕೆಗಳನ್ನು ಕಿತ್ತೊಗೆಯಲು, ಪುರಾಣ ಎಂಬುದು ಕಪೋಲ ಕಲ್ಪಿತ, ಇತಿಹಾಸ ಎಂಬುದು ಸಾರ್ವಕಾಲ

Top Stories »  


Top ↑