Tel: 7676775624 | Mail: info@yellowandred.in

Language: EN KAN

    Follow us :


ಬೆಂಮೈ ಹೆದ್ದಾರಿಯ ಕೋಲೂರು ಗೇಟ್ ಬಳಿ ಅಪಘಾತ ಇಬ್ಬರ ಸಾವು

Posted date: 12 Jun, 2023

Powered by:     Yellow and Red

ಬೆಂಮೈ ಹೆದ್ದಾರಿಯ ಕೋಲೂರು ಗೇಟ್ ಬಳಿ ಅಪಘಾತ ಇಬ್ಬರ ಸಾವು

ಚನ್ನಪಟ್ಟಣ:  ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ಭಾನುವಾರ ಮಧ್ಯಾಹ್ನ ವೇಗವಾಗಿ ಹೋಗುತ್ತಿದ್ದ ಇಂಡಿಕಾ ಕಾರು ಚಾಲಕನ ನಿಯಂತ್ರಣ ತಪ್ಪಿದ್ದು, ಡಿವೈಡರ್‌ಗೆ ಗುದ್ದಿ ಪಲ್ಟಿಯಾಗಿದ್ದು, ಈ ದುರ್ಘಟನೆಯಲ್ಲಿ  ಕಾರಿನ ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದ ಮೂವರಲ್ಲಿ ಇಬ್ಬರಿಗೆ ಗಂಭೀರ ಗಾಯವಾಗಿದ್ದು, ಕೋಡಂಬಳ್ಳಿ ನಿವಾಸಿ ವಿನಯ್ (೨೪) ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾನೆ. ಉಳಿದ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.


ಮದ್ದೂರು ತಾಲೂಕಿನ ಬೆಸಗರಹಳ್ಳಿ ಗ್ರಾಮದಿಂದ ರಾಮನಗರದ ಕಡೆಗೆ ಇಂಡಿಕಾ ಕಾರಿನಲ್ಲಿ ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುತ್ತಿದ್ದ ನಾಲ್ವರಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿದೆ.


*ಚಾಮುಂಡೇಶ್ವರಿ ಆಸ್ಪತ್ರೆಗೆ ಗಾಯಾಳುಗಳ ದಾಖಲು:*   ಮೃತ ಕಾರು ಚಾಲಕನನ್ನು ರಾಮನಗರ ಮೂಲದ ಮಂಜೇಶ್ (28) ಎಂದು ಗುರುತಿಸಲಾಗಿದೆ. ಚನ್ನಪಟ್ಟಣ ತಾಲೂಕಿನ ಕೋಲೂರು ಗೇಟ್ ಬಳಿಯ ಚಾಮುಂಡೇಶ್ವರಿ ಆಸ್ಪತ್ರೆ ಮುಂಭಾಗ ಘಟನೆ ನಡೆದಿದೆ. ರಾಮನಗರದ ಕಡೆಗೆ ಬರುತ್ತಿದ್ದ ಕಾರು ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಈ ಡಿಕ್ಕಿ ರಭಸಕ್ಕೆ ಸ್ಥಳದಲ್ಲೇ ಚಾಲಕ ಮೃತನಾಗಿದ್ದು ರಸ್ತೆಯ ತುಂಬೆಲ್ಲಾ ರಕ್ತ ಚಲ್ಲಾಡಿತ್ತು. ಗಾಯಾಳುಗಳು ಚಾಮುಂಡೇಶ್ವರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಚನ್ನಪಟ್ಟಣ ಗ್ರಾಮಾಂತರ, ಪುರ ಹಾಗೂ ಸಂಚಾರಿ ಪೊಲೀಸರು ಭೇಟಿ ಮಾಡಿದ್ದು, ಸ್ಥಳ ಪರಿಶೀಲನೆ ಮಾಡಿದ್ದಾರೆ. 


*ನಜ್ಜುಗುಜ್ಜಾಗಿ 50 ಮೀಟರ್ ಉರುಳಿ ಹೋದ ಕಾರು:*

 ಇನ್ನು ಕಾರು ವೇಗವಾಗಿ ಚಾಲನೆಯಲ್ಲಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿದ ಕೂಡಲೇ ಡಿವೈಡರ್‌ಗೆ ಡಿಕ್ಕಿ ಹೊಡೆದು ಮುಂಭಾಗ ಸಂಪೂರ್ಣ ಜಖಂ ಆಗಿದೆ. ಆಗ ಕಾರಿನ ಮುಂಭಾಗದಲ್ಲಿದ್ದ ಚಾಲಕನಿಗೆ ಜೀವಹಾನಿಯಾಗಿದೆ. ಇನ್ನು ಡಿವೈಡರ್‌ ಡಿಕ್ಕಿ ಹೊಡೆದು ಪಲ್ಟಿ ಹೊಡೆದಿದ್ದರಿಂದ ಕಾರಿನ ಮೇಲ್ಭಾಗವೂ ಕೂಡ  ನಜ್ಜುಗುಜ್ಜಾಗಿದೆ. ಇದರಿಂದ, ಕಾರಿನ ಹಿಂಬದಿ ಸೀಟಿನಲ್ಲಿದ್ದ ಇಬ್ಬರಿಗೂ ಗಂಭೀರ ಗಾಯಗಳಾಗಿವೆ ಎಂದು ಸ್ಥಳೀಯ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.


*ಕೊನೇ ಕ್ಷಣದ ಮುನ್ನ ಜಾಲಿ ಮೂಡ್ ನಲ್ಲಿದ್ದ ಕುಚುಕುಗಳು;ವಿಡಿಯೋ ವೈರಲ್*


ಸಾಯುವ ಕೆಲ‌ ನಿಮಿಷಗಳ ಮೊದಲು ನಾಲ್ಕು ಮಂದಿ ಸ್ನೇಹಿತರು ಕುಚುಕು, ಕುಚುಕು ಹಾಡು ಹಾಕಿಕೊಂಡು ಜಾಲಿ ಮೂಡ್ ನಲ್ಲಿ ಬರುತ್ತಿದ್ದ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


ರಾಮನಗರದ ವಿನಯ್, ವಿಜಯ್, ಮಂಜೇಶ್ ಮತ್ತು ನಿಖಿಲ್ ಕೆಲಸ‌ದ ನಿಮ್ಮಿತ್ತ ಮದ್ದೂರು ತಾಲೂಕಿನ ಬೆಸಗರಹಳ್ಳಿಗೆ ಹೋಗಿ ರಾಮನಗರಕ್ಕೆ ಹಿಂದಿರುಗುತ್ತಿದ್ದರು. ಹಿಂದಿರುಗುವಾಗ ಕುಚುಕ್ಕೂ ಹಾಡು ಹೇಳಿಕೊಂಡು ಬರುತ್ತಿದ್ದ ವಿಡಿಯೋ ಸಾಮಾಜಿ ಜಾಲತಾಣದಲ್ಲಿ ವೈರಲ್ ಆಗಿದೆ.


ಸಾವಿನಲ್ಲೂ ಜೊತೆಯಾದ ಕುಚುಕುಗಳು

ನಾಲ್ಕೂಮಂದಿ ಒಳ್ಳೆಯ ಸ್ನೇಹಿತರಾಗಿದ್ದು ಕುಚುಕು ಹಾಡು ಹಾಡು ಸಂದರ್ಭದಲ್ಲಿ ಚಾಲಕ‌ ಮಂಜೇಶ್ ಭಾವನಾತ್ಮಕ ವಾಗಿದ್ದು ಈತನ ಪಕ್ಕ ಕುಳಿತಿದ್ದ ವಿನಯ್ ಸಮಾಧಾನ ಮಾಡಿದ ದೃಶ್ಯವಿದೆ. ಇನ್ನು ಇಬ್ಬರು ಕುಚುಕುಗಳು ಸಾವಿನಲ್ಲೂ ಜೊತೆಯಾಗಿರುವುದು ವಿಷಾದನೀಯ ವೆನಿದೆ.

ತೀವ್ರಗಾಯಗೊಂಡಿರುವ ವಿಜಯ್ ಮತ್ತು ನಿಖಿಲ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಕೊಡಿಸಲಾಗುತ್ತಿದೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in karnataka »

ಹೆಚ್.ಕೆ.ಮರಿಯಪ್ಪ ಬದುಕು, ಸಾಧನೆ ವಿದೇಶದಲ್ಲಿರುವ ಭಾರತೀಯರೆಲ್ಲರೂ ಅನುಸರಿಸಬೇಕು, ನಿ ನ್ಯಾ ಸಂತೋಷ್ ಹೆಗ್ಗಡೆ
ಹೆಚ್.ಕೆ.ಮರಿಯಪ್ಪ ಬದುಕು, ಸಾಧನೆ ವಿದೇಶದಲ್ಲಿರುವ ಭಾರತೀಯರೆಲ್ಲರೂ ಅನುಸರಿಸಬೇಕು, ನಿ ನ್ಯಾ ಸಂತೋಷ್ ಹೆಗ್ಗಡೆ

ಚನ್ನಪಟ್ಟಣ:  ಇತ್ತೀಚಿಗೆ ಬಹುತೇಕ ಮಂದಿ ತಾನುಂಟು ತಮ್ಮ ಪರಿವಾರ ಉಂಟು ಎಂಬ ಸ್ವಾರ್ಥವೇ ತುಂಬಿ ತುಳುಕುವ ಇವತ್ತಿನ ಸಮಾಜದಲ್ಲಿ ರಾಜಕೀಯ ಮುತ್ಸದ್ಧಿ ಹೆಚ್.ಕ

ಮನೆ ಕಳ್ಳತನವಾಗಿದೆ ಎಂದು ಪೊಲೀಸರಿಗೆ ಬಂದ ವಿಚಿತ್ರ ದೂರು.!
ಮನೆ ಕಳ್ಳತನವಾಗಿದೆ ಎಂದು ಪೊಲೀಸರಿಗೆ ಬಂದ ವಿಚಿತ್ರ ದೂರು.!

ಸಕ್ಕರೆನಾಡು ಮಂಡ್ಯದಲೊಂದು ವಿಚಿತ್ರ ದೂರು ಪ್ರಕರಣ.!!

ಬೆಲೆಬಾಳುವ ವಸ್ತುಗಳು ಕಳವು ಆಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡುವುದು ಸಹಜ.

ಆದರೆ ಇಲ್ಲೊಬ್ಬ ಮನೆ ಕಳವಾಗಿದ

ಡೆಂಗ್ಯೂ ರೋಗದ ಅರಿವು ಕಾರ್ಯಕ್ರಮ
ಡೆಂಗ್ಯೂ ರೋಗದ ಅರಿವು ಕಾರ್ಯಕ್ರಮ

ಚನ್ನಪಟ್ಟಣ : ಲಯನ್ ಸಂಸ್ಥೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಭಾರತ್ ವಿಕಾಸ ಪರಿಷತ್ತು, ಭಾರತ ಸೇವಾದಳ ಹಾಗೂ ಬಾಲು ಪಬ್ಲಿಕ್ ಸ್ಕೂಲ್ ಸಹಯ

ಬೆಂಮೈ ಹೆದ್ದಾರಿಯ ರಾಮನಗರ ಬಳಿ ಮತ್ತೊಂದು ಅಪಘಾತ: ಕೆಎಸ್‌ಆರ್‌ಟಿಸಿ ಬಸ್‌ ನಿರ್ವಾಹಕ ಸಾವು
ಬೆಂಮೈ ಹೆದ್ದಾರಿಯ ರಾಮನಗರ ಬಳಿ ಮತ್ತೊಂದು ಅಪಘಾತ: ಕೆಎಸ್‌ಆರ್‌ಟಿಸಿ ಬಸ್‌ ನಿರ್ವಾಹಕ ಸಾವು

ನೂತನವಾಗಿ ನಿರ್ಮಾಣವಾಗಿರುವ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಇಂದು ಸಂಜೆ ಮತ್ತೊಂದು ಅಪಘಾತ ಸಂಭವಿಸಿದ್ದು, ಕೆಎಸ್‌ಆರ್‌ಟಿಸಿ ಎಲೆಕ್ಟ್ರಿಕಲ್ ಬಸ್‌ ನಿರ್ವಾಹಕ ಸಾವನಪ್ಪಿರುವ ದುರ್ಘಟನೆ ಜರುಗಿದೆ.

ಜೂ. 23ರಂದು ಡಾಕ್ ಅದಾಲತ್

ರಾಮನಗರ, ಜೂ. 17:   ಚನ್ನಪಟ್ಟಣದ ಅಂಚೆ ಇಲಾಖೆ ವತಿಯಿಂದ ಜೂ. 23ರಂದು ಬೆಳಿಗ್ಗೆ 11 ಗಂಟೆಗೆ ಚನ್ನಪಟ್ಟಣದ ಅಂಚೆ ವಿಭಾಗೀಯ ಕಚೇರಿಯಲ್ಲಿ ಡ

ಬೆಂಮೈ ಹೆದ್ದಾರಿಯ ಕೋಲೂರು ಗೇಟ್ ಬಳಿ ಅಪಘಾತ ಇಬ್ಬರ ಸಾವು
ಬೆಂಮೈ ಹೆದ್ದಾರಿಯ ಕೋಲೂರು ಗೇಟ್ ಬಳಿ ಅಪಘಾತ ಇಬ್ಬರ ಸಾವು

ಚನ್ನಪಟ್ಟಣ:  ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ಭಾನುವಾರ ಮಧ್ಯಾಹ್ನ ವೇಗವಾಗಿ ಹೋಗುತ್ತಿದ್ದ ಇಂಡಿಕಾ ಕಾರು ಚಾಲಕನ ನಿಯಂತ್ರಣ ತಪ್ಪಿದ್ದು, ಡಿ

ಗ್ರಾ,ಮ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳ ಎರಡನೇ ಅವಧಿಗೆ ಮೀಸಲಾತಿ ನಿಗಧಿ
ಗ್ರಾ,ಮ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳ ಎರಡನೇ ಅವಧಿಗೆ ಮೀಸಲಾತಿ ನಿಗಧಿ

ರಾಮನಗರ, ಜೂ. 09:  ರಾಮನಗರ ತಾಲ್ಲೂಕು ಗ್ರಾಮ ಪಂಚಾಯಿತಿಗಳ ಸಾರ್ವತ್ರಿಕ ಚುನಾವಣೆ-2020ರ ಸಂಬಂಧ ಚುನಾವಣೆಯಲ್ಲಿ ಆಯ್ಕೆಯಾದ ಸದಸ್ಯರುಗಳಲ್ಲಿ, ಗ್ರಾಮ ಪಂಚಾ

ಸಂರಕ್ಷಿಸಲು ಯುವಜನತೆಗೆ ಕರೆ: ಬಿ.ಎಸ್ ಹೇಮಲತಾ
ಸಂರಕ್ಷಿಸಲು ಯುವಜನತೆಗೆ ಕರೆ: ಬಿ.ಎಸ್ ಹೇಮಲತಾ

ಚನ್ನಪಟ್ಟಣ: ಜಾಗತಿಕ ಪ್ರಪಂಚದಲ್ಲಿ ವಿಜ್ಞಾನ, ತಂತ್ರಜ್ಞಾನ ಬೆಳವಣಿಗೆಯ ಜೊತೆಗೆ ನಮ್ಮನ್ನೆಲ್ಲಾ ಹೊತ್ತು ನಿಂತಿರುವ ವಸುಂಧರೆಯನ್ನು ಸಂರಕ್ಷಣೆ ಮಾಡುವುದು ನ

ತಾಯಿ ಮಡಿಲಿಗೆ ಮಗು ಸೇರಿಸಿದ ಶ್ರೀಮತಿ  ರಜಿನಿರಾಜ್
ತಾಯಿ ಮಡಿಲಿಗೆ ಮಗು ಸೇರಿಸಿದ ಶ್ರೀಮತಿ ರಜಿನಿರಾಜ್

ಮಂಡ್ಯ: ಕ್ಷುಲ್ಲಕ ಕಾರಣಕ್ಕೆ ಹಸುಗೂಸೊಂದನ್ನು, ತಾಯಿಯಿಂದ ಬೇರ್ಪಡಿಸಿ, ತಂದೆಯ ಮನೆಯಲ್ಲಿ ಇರಿಸಿಕೊಂಡಿದ್ದಾರೆ ಎಂಬ ತಾಯಿಯ ಮನವಿ ಮೇರೆಗೆ ಧ್ವನಿ ಮಹಿಳಾ ಅಧ್ಯಕ್ಷೆ ರಜನಿರಾಜ್ ರವರು ಕೆ ಎಂ ದೊಡ್ಡಿ ಪೋಲೀ

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ, ಪದವಿ ಕಾಲೇಜಿನ ಪ್ರಾಂಶುಪಾಲ ಡಾ ವೆಂಕಟೇಶ್
ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ, ಪದವಿ ಕಾಲೇಜಿನ ಪ್ರಾಂಶುಪಾಲ ಡಾ ವೆಂಕಟೇಶ್

ಚನ್ನಪಟ್ಟಣ: ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದರಿತು ಪ್ರತಿ ವ್ಯಕ್ತಿಯೂ ಕೆಲಸ ಮಾಡಬೇಕು. ಪ್ರಕೃತಿ ಮುನಿದರೆ ವಿಶ್ವವೇ ವಿನಾಶವಾಗುತ್ತದೆ ಎಂದು ನಗರದ

Top Stories »  


Top ↑