Tel: 7676775624 | Mail: info@yellowandred.in

Language: EN KAN

    Follow us :


ಹೆಚ್.ಕೆ.ಮರಿಯಪ್ಪ ಬದುಕು, ಸಾಧನೆ ವಿದೇಶದಲ್ಲಿರುವ ಭಾರತೀಯರೆಲ್ಲರೂ ಅನುಸರಿಸಬೇಕು, ನಿ ನ್ಯಾ ಸಂತೋಷ್ ಹೆಗ್ಗಡೆ

Posted date: 22 Sep, 2023

Powered by:     Yellow and Red

ಹೆಚ್.ಕೆ.ಮರಿಯಪ್ಪ ಬದುಕು, ಸಾಧನೆ ವಿದೇಶದಲ್ಲಿರುವ ಭಾರತೀಯರೆಲ್ಲರೂ ಅನುಸರಿಸಬೇಕು, ನಿ ನ್ಯಾ ಸಂತೋಷ್ ಹೆಗ್ಗಡೆ

ಚನ್ನಪಟ್ಟಣ:  ಇತ್ತೀಚಿಗೆ ಬಹುತೇಕ ಮಂದಿ ತಾನುಂಟು ತಮ್ಮ ಪರಿವಾರ ಉಂಟು ಎಂಬ ಸ್ವಾರ್ಥವೇ ತುಂಬಿ ತುಳುಕುವ ಇವತ್ತಿನ ಸಮಾಜದಲ್ಲಿ ರಾಜಕೀಯ ಮುತ್ಸದ್ಧಿ ಹೆಚ್.ಕೆ.ವೀರಣ್ಣಗೌಡ ಹಾಗೂ ಅವರ ಸಹೋದರ ಸಮಾಜಮುಖಿ ವೈದ್ಯ, ಶಿಕ್ಷಣ ಪ್ರೇಮಿ ಡಾ.ಹೆಚ್.ಕೆ.ಮರಿಯಪ್ಪ ಅವರು ಬಹಳ ಭಿನ್ನವಾಗಿ ‌ನಿಲ್ಲುತ್ತಾರೆ, ಅದರಲ್ಲೂ ವಿದೇಶಕ್ಕೆ ಹೋದವರು ಹಾಗೂ ಆರ್ಥಿಕವಾಗಿ ಸಬಲವಾದರನ್ನಂತೂ ಕೇಎಳುವುದೇ ಬೇಡ ಎಂದು ವಿಶ್ರಾಂತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಅವರು 

ಅಭಿಪ್ರಾಯಪಟ್ಟರು. 

ತಾಲ್ಲೂಕಿನ ಕೂಡ್ಲೂರು ಬಳಿಯ ಶಿಶಿರ ಹೋಂ ಸ್ಟೇ ಫಾರ್ಮ್ ಹೌಸ್ ನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಡಾ.ಹೆಚ್.ಕೆ.ಮರಿಯಪ್ಪ ಕುರಿತ

"ಹೊನ್ನಕಳಸ" ಅಭಿನಂದನಾ ಗ್ರಂಥ ಹಾಗೂ 

ರೆಮಿನಿಸೆನ್ಸ್ ಆಫ್ ಲೈಫ್ 

(ಮೆಮೋರೀಸ್ ಆಫ್ ಎಚ್.ಕೆ.ವೀರಣ್ಣಗೌಡ) ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಈ ಎರಡು ಗ್ರಂಥಗಳನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.


ಸಮಾಜದೊಳಗೆ ತಾನಿದ್ದೇನೆ ಎಂಬುವುದನ್ನೇ ಮರೆತವರು, ದುರಾಸೆಯನ್ನೇ ಮೈಗೂಡಿಸಿಕೊಂಡಿರುವ ಇವತ್ತಿನ ಸಮಾಜದಲ್ಲಿ  ಹೆಚ್.ಕೆ.ವೀರಣ್ಣಗೌಡ ಸೋದರ ಡಾ.ಹೆಚ್.ಕೆ.ಮರಿಯಪ್ಪ ಅವರಂತಹವರು ಅಪರೂಪದ ವ್ಯಕ್ತಿಯಾಗಿದ್ದಾರೆ. 

ಇಂದಿನ ಸಮಾಜವು ಸ್ವಾರ್ಥ- ಲಾಲಸೆಯೇ ತುಂಬಿದ್ದರೂ  ನಿಸ್ವಾರ್ಥ ಸೇವೆ, ಶೈಕ್ಷಣಿಕ ಸೇವೆ ಹಾಗೂ ಮಾನವೀಯತೆಯ ಸಾಕಾರಮೂರ್ತಿಯಾಗಿ ಮರಿಯಪ್ಪ ಅವರು ತಮ್ಮ ತೊಂಭತ್ತೊಂದರ ಇಳಿ ವಯಸ್ಸಿನಲ್ಲೂ ಸಮಾಜಸೇವೆ ಮಾಡಬೇಕು ಎಂಬ ತುಡಿತ ಹೊಂದಿರುವುದು ಎದ್ದು ಕಾಣುತ್ತದೆ ಎಂದು ಬಣ್ಣಿಸಿದರು. ಏಕ ವ್ಯಕ್ತಿಯಿಂದ ಸಮಾಜಕ್ಕೆ ಏನೆಲ್ಲಾ ಸೇವೆ ಸಂದಾಯವಾಗಬಹುದು ಎಂಬುದನ್ನು "ಹೊನ್ನಕಳಸ" ಗ್ರಂಥವೇ ಎಲ್ಲವನ್ನೂ ಹೇಳುತ್ತದೆ ಎಂದು ತಿಳಿಸಿದರು.


ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ 

ಡಾ.ವೂಡೆ ಪಿ.ಕೃಷ್ಣ ಅವರು ಮಾತನಾಡಿ, ಮೂವತ್ತರ ದಶಕದಿಂದ ಎಪ್ಪತ್ತರ ದಶಕದವರೆಗೆ ಹಳೇ ಮೈಸೂರು ಭಾಗದಲ್ಲಿ ಸ್ವಾತಂತ್ರ್ಯ ಹೋರಾಟ, ರೈತಪರ ಚಳವಳಿ ಮೂಲಕ ತಮ್ಮ ಹೆಜ್ಜೆಗುರುತುಗಳನ್ನು ಮೂಡಿಸಿದ ಧೀಮಂತ ರಾಜಕಾರಣಿ ದಿ.

ಹೆಚ್.ಕೆ.ವೀರಣ್ಣಗೌಡ ಅವರು, 

ಅವರ ಸಹೋದರ ಹೆಚ್.ಕೆ.ಮರಿಯಪ್ಪ ಅವರಲ್ಲೂ ಅಂತಹ ಹೋರಾಟದ ಮನೋಭಾವ ಹಾಗೂ ಜನಸೇವಾ ಗುಣ ಇರುವುದು ಸಹಜವಾಗಿದೆ. 

ತತ್ವ ಬದ್ಧ ಜೀವನ ನಡೆಸುವ ಜೊತೆಗೆ ಆದರ್ಶಮಯ ಜೀವನ ನಡೆಸಿ, ಆಗಿನ ಕಾಂಗ್ರೆಸ್ ಪಕ್ಷವನ್ನು ಕಟ್ಟುವಲ್ಲಿ ಹೆಚ್.ಕೆ.ವೀರಣ್ಣಗೌಡ ಅವರ ಪಾತ್ರ ದೊಡ್ಡದಿದೆ. ಹೊನ್ನಕಳಸ ಅಭಿನಂದನಾ ಗ್ರಂಥ ಹಾಗೂ

ರೆಮಿನಿಸೆನ್ಸ್ ಆಫ್ ಲೈಫ್ 

(ಮೆಮೋರೀಸ್ ಆಫ್ ಎಚ್.ಕೆ.ವೀರಣ್ಣಗೌಡ) 

ರಾಜಕೀಯ ಆಸಕ್ತರಿಗೆ ಆಕರ ಗ್ರಂಥಗಳಾಗಿವೆ ಎಂದು ಅಭಿಪ್ರಾಯಪಟ್ಟರು.


ಡಾ.ಹೆಚ್.ಕೆ.ಮರಿಯಪ್ಪ ಅವರ ಕುರಿತಂತೆ ಹೊರತಂದಿರುವ 

"ಹೊನ್ನಕಳಸ ಅಭಿನಂದನಾ ಗ್ರಂಥ"ದ ಸಂಪಾದಕರಾದ ಸಾಹಿತಿ ಡಾ‌.ಕೂಡ್ಲೂರು ವೆಂಕಟಪ್ಪ ಅವರು ಮಾತನಾಡಿ, ತೊಂಬತ್ತು ವಸಂತ ಪೂರೈಸಿದ 

ಡಾ.ಹೆಚ್.ಕೆ.ಮರಿಯಪ್ಪ ಅವರ ಕುರಿತಂತೆ ಹೊರತಂದಿರುವ 

"ಹೊನ್ನಕಳಸ ಮುತ್ಸದ್ಧಿ ಗ್ರಂಥ"  ಹೆಚ್.ಕೆ.ಮರಿಯಪ್ಪ- ಶಾಂತಾ ಮರಿಯಪ್ಪ

ಶಿಕ್ಷಣ ಸಂಸ್ಥೆಗಳ ಸಿಬ್ಬಂದಿ ಸೇರಿದಂತೆ ನಾಡಿನ ಅನೇಕ ಹೆಸರಾಂತ ಸಾಹಿತಿಗಳು, ಮರಿಯಪ್ಪ ಅವರ ಒಡನಾಡಿಗಳು, ಬಂಧುಗಳು ಎಲ್ಲರೂ ಸೇರಿ ಅಭಿನಂದನಾ ಗ್ರಂಥ ಸುಂದರವಾಗಿ ಮೂಡಿ ಬರಲು ಕಾರಣಕರ್ತರಾಗಿದ್ದಾರೆ. ಗ್ರಂಥ ಒಡಮೂಡಲು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕಾರ ನೀಡಿದ ಎಲ್ಲರನ್ನೂ ಈ ಸಂದರ್ಭದಲ್ಲಿ ಸ್ಮರಿಸಿದರು.

ಅಭಿನಂದನಾ ನುಡಿಗಳನ್ನಾಡಿದ ಬಿಎಂಶ್ರೀ ಪ್ರತಿಷ್ಠಾನದ ಅಧ್ಯಕ್ಷ, ಸಾಹಿತಿ ಡಾ.ಬೈರಮಂಗಲ ರಾಮೇಗೌಡ,

ಡಾ.ಎಚ್.ಕೆ.ಮರಿಯಪ್ಪ

ಅಭಿನಂದನಾ ಸಮಿತಿ ಅಧ್ಯಕ್ಷರಾದ ಎಂ.ಎಲ್.ಮಾದಯ್ಯ ಅವರ ನೇತೃತ್ವದಲ್ಲಿ ರೂಪುಗೊಂಡಿರುವ ಅಭಿನಂದನಾ ಗ್ರಂಥವು ನಾಡಿಗೆ ಮರಿಯಪ್ಪ ಅವರ ಸೇವೆಯನ್ನು ವಿಸ್ತೃತವಾಗಿ ತಿಳಿಸುತ್ತದೆ. 

ಶಿಕ್ಷಣ ಹಾಗೂ ಪ್ರತಿಭೆಗೆ ತಕ್ಕ ಉದ್ಯೋಗ ಅರಸಿ ವಿದೇಶಗಳಿಗೆ ಹೋಗುವವರು ಬಹಳ ಜನರಿದ್ದಾರೆ. ಆದರೆ, ಕುಗ್ರಾಮವೊಂದರಲ್ಲಿ ಜನಿಸಿದ ಮರಿಯಪ್ಪ ಮುಂದೆ ಹೇಗೆ ಬಹು ಎತ್ತರಕ್ಕೆ ಬೆಳೆಯುತ್ತಾರೆ ಎಂಬುದನ್ನು ವಿವರವಾಗಿ ತಿಳಿಸಿದರು.


ಸಾದಹಳ್ಳಿಯಲ್ಲಿ ಜನನ, ಅವ್ವೇರಹಳ್ಳಿಯಲ್ಲಿ ಬಾಲ್ಯ, ಅಕ್ಕೂರು ಹೊಸಹಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ಅಪ್ಪಟ ಗ್ರಾಮೀಣ ಪ್ರತಿಭೆಯಾದ ಸಾಧಕ ಡಾ.ಹೆಚ್.ಕೆ.ಮರಿಯಪ್ಪ ಅವರ ಮೇರು ವ್ಯಕ್ತಿತ್ವ ಹಾಗೂ ಸಾಧನೆಯ ಹಿಂದೆ ಅವರ ಅಣ್ಣ ಡಾ.ಹೆಚ್.ಕೆ.ವೀರಣ್ಣಗೌಡ ಅವರ ಪ್ರಭಾವ ಮಾರ್ಗದರ್ಶನ ಬಹಳ ಮುಖ್ಯವಾಗಿದೆ. 

ಇತ್ತೀಚಿನ ದಿನಗಳಲ್ಲಿ ಶೇಕಡ ತೊಂಬತ್ತಕ್ಕೂ ಹೆಚ್ಚು ರಾಜಕಾರಣಿಗಳು ಹತ್ತು ತಲೆಮಾರಿಗೂ ಹೆಚ್ಚು ಕೂತು ತಿನ್ನುವ ಸಂಪನ್ಮೂಲ ಕ್ರೋಢೀಕರಣವನ್ನೇ ಮೂಲಮಂತ್ರ ಮಾಡಿಕೊಂಡಿರುವುದು ಖೇದಕರ ವಿಚಾರ. ಆದರೆ, ಇದಕ್ಕೆ ಅಪವಾದವಾಗಿ ತಮ್ಮ‌ ರಾಜಕೀಯ ಜೀವನದಲ್ಲಿ ಪಾರದರ್ಶಕ ಹಾಗೂ ಬದ್ಧತೆಯನ್ನು ಮೈಗೂಡಿಸಿಕೊಂಡವರು ಡಾ.ಹೆಚ್.ಕೆ.ವೀರಣ್ಣ ಗೌಡ ಹಾಗೂ ಡಾ.ಹೆಚ್.ಕೆ.ಮರಿಯಪ್ಪ ಸಹೋದರರು ಎಂದು ಬಣ್ಣಿಸಿದರು. 

ಜನಪ್ರಿಯ ವೈದ್ಯರಾಗಿಯೂ ವೈದ್ಯಕೀಯ ಕ್ಷೇತ್ರದಲ್ಲೂ ಕೂಡ ತಮ್ಮದೇ ಆದ ಹೆಜ್ಜೆ ಗುರುತುಗಳನ್ನು ಮೂಡಿಸಿದ ಕೀರ್ತಿ ಮರಿಯಪ್ಪ ಅವರಿಗೆ ಸಲ್ಲುತ್ತದೆ. 

ತಮ್ಮ ಮೂವರು ಮಕ್ಕಳು ಒಂದು ಹಂತಕ್ಕೆ ಬಂದಮೇಲೆ ತಮ್ಮ ಹುಟ್ಟೂರು ಹಾಗೂ ರಾಜ್ಯದಲ್ಲಿ ಏನಾದರೂ ಸೇವೆ ಮಾಡಬೇಕು ಎಂಬ ಹಂಬಲದೊಂದಿಗೆ ಶೈಕ್ಷಣಿಕ ಹಾಗೂ ಆರೋಗ್ಯ ಸೇವೆ ಸಲ್ಲಿಸುವ ಮೂಲಕ ವಿದೇಶಗಳಲ್ಲಿ ಲೆಕ್ಕವಿಲ್ಲದಷ್ಟು ಡಾಲರ್ ಸಂಪಾದಿಸುವ ಅಸಂಖ್ಯಾತ ಕೋಟ್ಯಾಧೀಶರಿಗಿಂತ ಭಿನ್ನವಾಗಿ ನಿಲ್ಲುತ್ತಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

 

ಅಭಿನಂದನಾ ಸಮಿತಿ ಅಧ್ಯಕ್ಷರಾದ ಎಂ.ಎಲ್.ಮಾದಯ್ಯ ಮಾತನಾಡಿ, ಮರಿಯಪ್ಪ ಅವರ ಅಭಿನಂದನಾ ಗ್ರಂಥವು ರೂಪುಗೊಂಡ ಬಗೆ ಹಾಗೂ ಅದರ ಮಹತ್ವವನ್ನು ವಿಸ್ತೃತವಾಗಿ ತಿಳಿಸಿದರು.

ಸಮಾರಂಭದ ಕೇಂದ್ರಬಿಂದು ಡಾ.ಎಚ್.ಕೆ.ಮರಿಯಪ್ಪ ಅವರು ತಮ್ಮ ಜೀವನವನ್ನು ಇಳಿಸಂಜೆಯಲ್ಲಿ ನೆನಪು ಮಾಡಿಕೊಂಡು ಭಾವುಕರಾದರು. 

ವಿದೇಶಕ್ಕೆ ತೆರಳಿ ವೈದ್ಯಕೀಯ ಕ್ಷೇತ್ರದಲ್ಲಿ ಬೆಳೆದ ಬಗೆ, ನಾಡಿನಲ್ಲಿ ಶೈಕ್ಷಣಿಕವಾಗಿ ಸೇವೆ ಸಲ್ಲಿಸಿದ್ದನ್ನು ಹಾಗೂ ತಮ್ಮ ಒಡನಾಟಕ್ಕೆ ಬಂದವರನ್ನೆನ್ನಲ್ಲಾ ಅತ್ಯಂತ ಕೃತಜ್ಞತೆಯಿಂದ ಸ್ಮರಿಸಿದರು. 

ಬದುಕು ಮೆಲುಕು,

ರೆಮಿನಿಸೆನ್ಸ್ ಆಫ್ ಲೈಫ್ 

(ಮೆಮೋರೀಸ್ ಆಫ್ ಎಚ್.ಕೆ.ವೀರಣ್ಣಗೌಡ) ಪುಸ್ತಕ ಅನುವಾದಕ

ಮೈಸೂರು ವಿವಿ ಸಂದರ್ಶಕ ಪ್ರಾಧ್ಯಾಪಕ ಡಾ.ಸಿ.ನಾಗಣ್ಣ ಅವರು ಮಾತನಾಡಿದರು.


ಚುಂಚನಗಿರಿ ಶಾಖಾ ಮಠದ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ,

ಮದ್ದೂರಿನ ಎಂ.ಹೆಚ್.ಚನ್ನೇಗೌಡ ವಿದ್ಯಾಸಂಸ್ಥೆ ಗೌರವಾಧ್ಯಕ್ಷ ಕೆ.ಟಿ.ಚಂದು, ಡಾ.ಎಂ.ಜಿ.ನಾಗರಾಜು, ಯುಎಸ್ ಎ ಹೃದ್ರೋಗ ತಜ್ಞ ಡಾ.ಎಚ್. ಜಿ.ಏಕನಾಥ್, ಗೀತಾ ಏಕನಾಥ್, 

ಅಭಿನಂದನಾ ಸಮಿತಿ ಸದಸ್ಯರಾದ ಪಣ್ಣೆದೊಡ್ಡಿ ಆನಂದ್, ತಿಮ್ಮಸಂದ್ರ ಸುರೇಶ್,  ಬಿ.ಟಿ.ಜಯಮುದ್ದಪ್ಪ, ಸಿ.ಅಪೂರ್ವ ಚಂದ್ರ, ಡಾ.ಎನ್.ಗೋಪಾಲಕೃಷ್ಣ, ಎಸ್.ನಾಗಭೂಷಣ, ಮುಕುಂದರಾವ್ ಲೋಖಂಡೆ, ತ್ಯಾಗರಾಜು, ಬಿ.ಟಿ.ಚಿಕ್ಕಪುಟ್ಟೇಗೌಡ, ಮರಿಮಲ್ಲಯ್ಯ, ಎಚ್.ಪಿ.ಹರೀಶ್ ಗೌಡ ಸೇರಿದಂತೆ ಅನೇಕರು ಭಾಗವಹಿಸಿದ್ದರು. 


*ಅದ್ಧೂರಿ, ವಿಶಿಷ್ಟ, ವಿಶೇಷತೆಗಳೊಂದಿಗೆ 

ಅಭಿನಂದನಾ ಗ್ರಂಥ ಲೋಕಾರ್ಪಣೆ*


ಶಿಶಿರ ಹೋಂ ಸ್ಟೇ ಫಾರ್ಮ್ ಹೌಸ್ ನಲ್ಲಿ ಜರುಗಿದ 

ಡಾ.ಹೆಚ್.ಕೆ.ಮರಿಯಪ್ಪ ಅವರ ಕುರಿತ

ಹೊನ್ನಕಳಸ ಅಭಿನಂದನಾ ಗ್ರಂಥ ಹಾಗೂ 

ರೆಮಿನಿಸೆನ್ಸ್ ಆಫ್ ಲೈಫ್ 

(ಮೆಮೋರೀಸ್ ಆಫ್ ಹೆಚ್.ಕೆ.ವೀರಣ್ಣಗೌಡ) ಪುಸ್ತಕ ಬಿಡುಗಡೆ ಹಾಗೂ ತೊಂಬತ್ತರ ತುಂಬು ಹರೆಯದ  ಡಾ.ಹೆಚ್.ಕೆ.ಮರಿಯಪ್ಪ ಅವರ ಅಭಿನಂದನಾ ಸಮಾರಂಭವು

ಅದ್ಧೂರಿ, ಅರ್ಥಪೂರ್ಣ, ಅಪರೂಪದ ಸಮಾರಂಭ ಎನಿಸಿಕೊಳ್ಳುವ ಜೊತೆಗೆ, ನಾಡಿನ ಧಾರ್ಮಿಕ, ಶೈಕ್ಷಣಿಕ, ಸಾಹಿತ್ಯಿಕ, ನ್ಯಾಯಾಂಗ ಹಾಗೂ ಸಾಂಸ್ಕೃತಿಕ ದಿಗ್ಗಜರ ಸಮಾಗಮಕ್ಕೆ ಸಾಕ್ಷಿಯಾಯಿತು. 

ಕೊರವಂಜಿ ವೇಷದಲ್ಲಿ ಮರಿಯಪ್ಪ ಅವರ ಸಾಧನೆಯ ಮಜಲುಗಳನ್ನು ಮೆಲುಕು ಹಾಕುತ್ತಾ ಹೊನ್ನಕಳಸ ರೂಪದಲ್ಲಿ ಹೆಣ್ಣುಮಕ್ಕಳು ಹೊತ್ತು ತಂದ ಬುಟ್ಟಿಯಿಂದ ತಂದ ಅಭಿನಂದನಾ ಗ್ರಂಥವನ್ನು  ಆದಿಚುಂಚನಗಿರಿ ಮಠಾಧೀಶ ಡಾ.ನಿರ್ಮಲಾನಂದ ಸ್ವಾಮೀಜಿ

ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರಿಗೆ ಕೊಡುವ ಮೂಲಕ ಲೋಕಾರ್ಪಣೆ ಮಾಡಿದ್ದು ವಿಶೇಷವಾಗಿತ್ತು.


ಣಮರಿಯಪ್ಪ ಅಂತಹವರ ಸಂತತಿ ಸತತವಾಗಿ ಬೆಳೆಯಲಿ: ಚುಂಚಶ್ರೀ*


ಪುಸ್ತಕಗಳ ಲೋಕಾರ್ಪಣೆ ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಮಠಾಧೀಶ ಡಾ.ನಿರ್ಮಲಾನಂದ ನಾಥ ಸ್ವಾಮೀಜಿ ಅವರು ಆಶೀರ್ವಚನ ನೀಡಿ ಮಾತನಾಡಿ, ರಾಷ್ಟ್ರಕವಿ ಕುವೆಂಪು ಅವರ ಮಾನಸಪುತ್ರ, ಕರ್ನಾಟಕ ರತ್ನ ಡಾ.ದೇ.ಜವರೇಗೌಡ ಅವರು ಒಂದೆಡೆ ಹೇಳುತ್ತಾರೆ, "ಹೆಚ್.ಕೆ.ವೀರಣ್ಣ ಗೌಡ ಶಿಕ್ಷಕರಾಗಿ ನಮ್ಮೂರಿಗೆ (ಚಕ್ಕೆರೆ) ಬರದಿದ್ದಲ್ಲಿ ನಾನು ಏನಾಗುತ್ತಿದ್ದೆನೋ ಗೊತ್ತಿಲ್ಲ". 

ಈ ಮಾತಷ್ಟೇ ಸಾಕು‌ ಹೆಚ್.ಕೆ.ವೀರಣ್ಣ ಗೌಡ ಅವರ ದಾರ್ಶನಿಕ ವ್ಯಕ್ತಿತ್ವವನ್ನು ಸಾರುತ್ತದೆ. ಅಂತೆಯೇ ಅವರ ಕಿರಿಯ ಸಹೋದರ 

ವೈದ್ಯ, ಶಿಕ್ಷಣ ಪ್ರೇಮಿ, ಪ್ರಖ್ಯಾತ ಕಟ್ಟಡಗಾರನಾಗಿ ಡಾ.ಹೆಚ್.ಕೆ.ಮರಿಯಪ್ಪ ಅವರು ಕೂಡ ತಮ್ಮ ಅಭಿನಂದನಾ ಗ್ರಂಥ "ಹೊನ್ನಕಳಸ"ದಂತೆಯೇ ಬದುಕಿದವರು. ಅವರ ಮಾರ್ಗದರ್ಶನ ನಾಡಿಗೆ ಮತ್ತಷ್ಟು ಬೇಕು. ಮಾನವೀಯತೆ, ಉದಾರ ಮನೋಭಾವದ ಎಚ್.ಕೆ.ಮರಿಯಪ್ಪ ಅವರಂತಹ ಸಂತತಿ ಮತ್ತಷ್ಟು, ಇನ್ನಷ್ಟು ಬೆಳೆಯುತ್ತಿರಲಿ, ಸಮಾಜಕ್ಕೆ ಗಣನೀಯ ಕೊಡುಗೆ ನೀಡುವಂತಾಗಲಿ ಎಂದು ಹಾರೈಸಿದರು. 

ಅಮೆರಿಕದ ನ್ಯೂಜೆರ್ಸಿಯಲ್ಲಿ ಆದಿಚುಂಚನಗಿರಿ ಶಾಖಾ ಮಠದ ಸ್ಥಾಪನೆಯಲ್ಲಿ ಡಾ.ಹೆಚ್.ಕೆ.ಮರಿಯಪ್ಪ ಅವರ ಪಾತ್ರ ಅಪಾರವಾದುದು ಎಂದು ಇದೇ ಸಮಯದಲ್ಲಿ ಸ್ವಾಮೀಜಿ ಸ್ಮರಿಸಿದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in karnataka »

ಕಳೆದ 30 ವರ್ಷಗಳಿಂದ ಶಿಕ್ಷಕರ ಸೇವೆ ಮಾಡಿದ್ದೇನೆ ಮತ್ತೊಮ್ಮೆ ಆಶೀರ್ವದಿಸಿ : ಪುಟ್ಟಣ್ಣ
ಕಳೆದ 30 ವರ್ಷಗಳಿಂದ ಶಿಕ್ಷಕರ ಸೇವೆ ಮಾಡಿದ್ದೇನೆ ಮತ್ತೊಮ್ಮೆ ಆಶೀರ್ವದಿಸಿ : ಪುಟ್ಟಣ್ಣ

ರಾಮನಗರ: ಶಿಕ್ಷಕರ ಕ್ಷೇತ್ರದ ಪ್ರತಿನಿಧಿಯಾಗಿ ಕಳೆದ 30 ವರ್ಷಗಳಿಂದಲೂ ನಿಮ್ಮ ಸೇವೆ ಮಾಡಿದ್ದೇನೆ. ಮುಂದೆಯೂ ನಿಮ್ಮ ಕಷ್ಟಗಳನ್ನರಿತು ನಿಮಗಾಗಿ ಮತ್ತಷ್ಟು ಕ

ಕೆರಗೋಡು ಧ್ವಜ ಪ್ರಕರಣ; ಪ್ರಚೋದನೆ ನೀಡುವವರ ವಿರುದ್ಧ ಕ್ರಮ: ಜಿಲ್ಲಾಧಿಕಾರಿ
ಕೆರಗೋಡು ಧ್ವಜ ಪ್ರಕರಣ; ಪ್ರಚೋದನೆ ನೀಡುವವರ ವಿರುದ್ಧ ಕ್ರಮ: ಜಿಲ್ಲಾಧಿಕಾರಿ

ರಾಮನಗರ, ಫೆ. 02  :  ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಇತ್ತೀಚೆಗೆ ನಡೆದ ಧ್ವಜ ಸ್ತಂಭದ ವಿಚಾರವು ತುಂಬಾ ಸೂಕ್ಷ್ಮ ವಿಚಾರವಾಗಿದ್ದು, ಈ ಸಂಬಂಧ ಯಾವು

ಸಂವಿಧಾನ ಜಾಗೃತಿ ಜಾಥಾ ಗೆ ಸ್ವಾಗತ
ಸಂವಿಧಾನ ಜಾಗೃತಿ ಜಾಥಾ ಗೆ ಸ್ವಾಗತ

ಚನ್ನಪಟ್ಟಣ: ಸಂವಿಧಾನ ಜಾಗೃತಿ ಜಾಥಾಕ್ಕೆ ತಾಲ್ಲೂಕು ಆಡಳಿತದಿಂದ ಅದ್ದೂರಿ ಸ್ವಾಗತ ಕೋರಲಾಯಿತು. ಇದೇ ಸಂದರ್ಭದಲ್ಲಿ

ಸಂವಿಧಾನ ಜಾಗೃತಿ ಜಾಥಾ

ಉಜ್ಜನಹಳ್ಳಿ ವೀರಾಂಜನೇಯಸ್ವಾಮಿ ಗೆ ಗ್ರಾಮಸ್ಥರಿಂದ ಅಭಿಷೇಕ
ಉಜ್ಜನಹಳ್ಳಿ ವೀರಾಂಜನೇಯಸ್ವಾಮಿ ಗೆ ಗ್ರಾಮಸ್ಥರಿಂದ ಅಭಿಷೇಕ

ಚನ್ನಪಟ್ಟಣ: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಮಾಡಿದ ಹಿನ್ನೆಲೆಯಲ್ಲಿ ಚನ್ನಪಟ್ಟಣ ತಾಲ್ಲೂಕಿನ ಉಜ್ಜನಹಳ್ಳಿ ಗ್ರಾಮದ ಶ್ರೀ ವೀರಾಂನೇಯಸ್ವಾಮಿ ಗೆ ವಿಶೇಷ

ಇ-ಆಸ್ತಿ ತಂತ್ರಾಂಶದಲ್ಲಿ ಆಸ್ತಿ ದಾಖಲೀಕರಣ ಮತ್ತು ಗಣಕೀಕರಣಗೊಳಿಸಿ
ಇ-ಆಸ್ತಿ ತಂತ್ರಾಂಶದಲ್ಲಿ ಆಸ್ತಿ ದಾಖಲೀಕರಣ ಮತ್ತು ಗಣಕೀಕರಣಗೊಳಿಸಿ

ರಾಮನಗರ, ಜ. 17: ರಾಮನಗರ ಜಿಲ್ಲಾ ವ್ಯಾಪ್ತಿಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾತೆ ಹೊಂದಿರುವ ಆಸ್ತಿಗಳನ್ನು ದಿನಾಂಕ: 02.05.2015 ರಿಂದ ಜಾರಿಗೆ ಬರುವಂತೆ,

ಬೋಧನಾ ಶುಲ್ಕ ಪಾವತಿಸಲು ಅವಧಿ ವಿಸ್ತರಣೆ
ಬೋಧನಾ ಶುಲ್ಕ ಪಾವತಿಸಲು ಅವಧಿ ವಿಸ್ತರಣೆ

ರಾಮನಗರ:  ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ 2019-20, 2020-21, 2021-22 ಮತ್ತು 2022-23ರ (ಜುಲೈ ಆವೃತ್ತಿ) ದ್ವಿತೀಯ/ತೃತೀಯ ವರ್ಷದ ಬಿ

ಸರ್ವಸಮ್ಮೇಳನಕ್ಕೂ ಮಾದರಿಯಾಗಿ ಯಶಸ್ವಿಯಾದ \'ಪರಿಸರಕ್ಕಾಗಿ ನಾವು\' ಸಮ್ಮೇಳನ
ಸರ್ವಸಮ್ಮೇಳನಕ್ಕೂ ಮಾದರಿಯಾಗಿ ಯಶಸ್ವಿಯಾದ \'ಪರಿಸರಕ್ಕಾಗಿ ನಾವು\' ಸಮ್ಮೇಳನ

ಹಾಸನ: ಪ್ರಾಕೃತಿಕ ಸೌಂದರ್ಯವು ಇ-ತ್ಯಾಜ್ಯ, ಕೆಲ ತಂತ್ರಜ್ಞಾನ ಹಾಗೂ ಪ್ಲಾಸ್ಟಿಕ್ ನಿಂದ  ಹಾಳಾಗುತ್ತಿದೆ. ಪರಿಸರ ನಾಶಕ್ಕೆ ಮುನ್ನುಡಿ ಬರೆದವನೇ

೫೨ ಲಕ್ಷಕ್ಕೂ ಹೆಚ್ಚು ಮೌಲ್ಯದ ಪಡಿತರ ಅಕ್ಕಿ ಗೋದಾಮಿನಲ್ಲೇ ಮಾಯ, ಅಧಿಕಾರಿಗಳಿಂದ ಪರಿಶೀಲನೆ, ವ್ಯವಸ್ಥಾಪಕನ ಬಂಧನ
೫೨ ಲಕ್ಷಕ್ಕೂ ಹೆಚ್ಚು ಮೌಲ್ಯದ ಪಡಿತರ ಅಕ್ಕಿ ಗೋದಾಮಿನಲ್ಲೇ ಮಾಯ, ಅಧಿಕಾರಿಗಳಿಂದ ಪರಿಶೀಲನೆ, ವ್ಯವಸ್ಥಾಪಕನ ಬಂಧನ

ಚನ್ನಪಟ್ಟಣ: ತಾಲ್ಲೂಕಿನಾದ್ಯಂತ ಪಡಿತರ ನ್ಯಾಯಬೆಲೆ ಅಂಗಡಿಗಳಿಗೆ ವಿತರಿಸಲು ಪಡಿತರ ಅಕ್ಕಿಯ ಪೈಕಿ ಸುಮಾರು ೫೨ ಲಕ್ಷಕ್ಕೂ  ಮೌಲ್ಯದ ೧,೫೪೩.೬೫ ಕ್ವಿಂಟಾಲ್ ಅ

ದಸರಾ ಎಂಬುದು ಮೈಸೂರಿಗಷ್ಟೇ ಸೀಮಿತವಾಗಬಾರದು, ಮನ-ಮನೆಯಲ್ಲೂ ದಸರಾ ಆಗಬೇಕು. ಡಾ ರೂಪಾ ಶ್ರೀಧರ್
ದಸರಾ ಎಂಬುದು ಮೈಸೂರಿಗಷ್ಟೇ ಸೀಮಿತವಾಗಬಾರದು, ಮನ-ಮನೆಯಲ್ಲೂ ದಸರಾ ಆಗಬೇಕು. ಡಾ ರೂಪಾ ಶ್ರೀಧರ್

ಚನ್ನಪಟ್ಟಣ: ದಸರಾ ಎಂದರೆ ಕೇವಲ ಮೈಸೂರು ಎಂಬಂತಾಗಿದೆ, ಇದು ನಾಡ ಹಬ್ಬ ಎಂಬುದು ಕೇವಲ ಉಲ್ಲೇಖಕ್ಕಷ್ಟೇ ಸೀಮಿತವಾಗಿದೆ. ಇದು ನಾಡಹಬ್ಬ ಎಂಬುದು ಸರ

ಒಕ್ಕಲಿಗರು ಸಂಸ್ಕೃತಿ ಹಿeನರಲ್ಲ ನೈಜ ಸಂಸ್ಕೃತಿಯ ಮಾಲೀಕರು, ಪ್ರೊ ಭಗವಾನ್ ಗೆ ತಿರುಗೇಟು ನೀಡಿದ ಹಿರಿಯ ರೈತ ಮುಖಂಡ ಸಿ ಪುಟ್ಟಸ್ವಾಮಿ
ಒಕ್ಕಲಿಗರು ಸಂಸ್ಕೃತಿ ಹಿeನರಲ್ಲ ನೈಜ ಸಂಸ್ಕೃತಿಯ ಮಾಲೀಕರು, ಪ್ರೊ ಭಗವಾನ್ ಗೆ ತಿರುಗೇಟು ನೀಡಿದ ಹಿರಿಯ ರೈತ ಮುಖಂಡ ಸಿ ಪುಟ್ಟಸ್ವಾಮಿ

ರಾಮನಗರ: ಚನ್ನಪಟ್ಟಣ; ಪ್ರೊ ಭಗವಾನ್ ವಿಚಾರವಾದಿ, ಮೂಢನಂಬಿಕೆಗಳನ್ನು ಕಿತ್ತೊಗೆಯಲು, ಪುರಾಣ ಎಂಬುದು ಕಪೋಲ ಕಲ್ಪಿತ, ಇತಿಹಾಸ ಎಂಬುದು ಸಾರ್ವಕಾಲ

Top Stories »  


Top ↑