Tel: 7676775624 | Mail: info@yellowandred.in

Language: EN KAN

    Follow us :


ಸಿಗ್ನಲ್‌ಗಳಲ್ಲಿ ಭಿಕ್ಷುಕರು, ಸಮಾರಂಭಗಳಲ್ಲಿ ಮಂಗಳಮುಖಿಯರಿಂದ ಮುಜುಗರ: ಮೇಲ್ಮನೆಯಲ್ಲಿ ಭಾರಿ ಚರ್ಚೆ

Posted date: 18 Sep, 2022

Powered by:     Yellow and Red

ಸಿಗ್ನಲ್‌ಗಳಲ್ಲಿ ಭಿಕ್ಷುಕರು, ಸಮಾರಂಭಗಳಲ್ಲಿ ಮಂಗಳಮುಖಿಯರಿಂದ ಮುಜುಗರ: ಮೇಲ್ಮನೆಯಲ್ಲಿ ಭಾರಿ ಚರ್ಚೆ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಭಿಕ್ಷುಕರ ಹಾವಳಿ ಮತ್ತು ಸಮಾರಂಭಗಳಲ್ಲಿ ಮಂಗಳಮುಖಿಯರಿಂದ ಆಯೋಜಕರು ಅನುಭವಿಸುತ್ತಿರುವ ಕಿರಿಕಿರಿ ತಪ್ಪಿಸಲು ಸರ್ಕಾರ ಮುಂದಾಗಬೇಕು ಎಂಬ ಬಗ್ಗೆ ವಿಧಾನಪರಿಷತ್‌ನಲ್ಲಿ ಭಾರಿ ಚರ್ಚೆಯೇ ನಡೆಯಿತು.


ನಗರದ ಸಿಗ್ನಲ್‌ಗಳಲ್ಲಿ ಭಿಕ್ಷುಕರು ಹಾಗೂ ಸಮಾರಂಭಗಳಲ್ಲಿ ಮಂಗಳಮುಖಿಯರು ಮುಜುಗರ ಉಂಟುಮಾಡುವ ಪ್ರಸಂಗಗಳು ಕಂಡುಬಂದಿದ್ದು, ಎರಡು ಮೂರು ತಿಂಗಳಲ್ಲಿ ಸಮಸ್ಯೆ ಬಗೆಹರಿಸಲಾಗುತ್ತದೆ ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.


ನಗರದಲ್ಲಿ ವಾಹನ ದಟ್ಟಣೆ ಇರುವ ಸಿಗ್ನಲ್‌ಗಳಲ್ಲಿ ಭಿಕ್ಷುಕರ ಹಾವಳಿ ಹೆಚ್ಚಾಗಿರುವ ಕುರಿತು ಬಿಜೆಪಿ ಸದಸ್ಯ ಅ. ದೇವೇಗೌಡ ಅವರು ವಿಧಾನಪರಿಷತ್ ನಲ್ಲಿ ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಸಚಿವರು ಈ ಉತ್ತರ ನೀಡಿದ್ದಾರೆ.


ಭಿಕ್ಷುಕರ ಹಾವಳಿ ಹೆಚ್ಚಾಗಿರುವುದನ್ನು ಸಚಿವರು ಉತ್ತರದಲ್ಲಿ ಒಪ್ಪಿದ್ದಾರೆ. ಈ ಕುರಿತು ಕ್ರಮ ಕೈಗೊಂಡಿರುವುದನ್ನು ವಿವರಿಸಿರುವ ಸಚಿವರು, ಕರ್ನಾಟಕ ಭಿಕ್ಷಾಟನಾ ನಿಷೇಧ ಅಧಿನಿಯಮ 1975ರ ಪ್ರಕಾರ ಭಿಕ್ಷಾಟನೆಯನ್ನು ನಿಷೇಧಿಸಲಾಗಿದೆ. ಸಂಪೂರ್ಣ ಭಿಕ್ಷಾಟನೆ ನಿಲ್ಲಿಸಲು ಮುಂದಿನ ದಿನಗಳಲ್ಲಿ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.


ಭಿಕ್ಷಾಟನೆಯಲ್ಲಿ ತೊಡಗಿರುವ 18 ವರ್ಷ ಮೇಲ್ಪಟ್ಟ ಮಹಿಳೆಯರು ಹಾಗೂ 16 ವರ್ಷ ಮೇಲ್ಪಟ್ಟ ಪುರುಷರನ್ನು ಬಂಧಿಸಲು ಅವಕಾಶವಿದೆ. 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರು ಹಾಗೂ 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪುರುಷರನ್ನು ಬಂಧಿಸಲು ಅವಕಾಶವಿಲ್ಲ. ಅಂಥವರನ್ನು ಮಹಿಳಾ ಮತ್ತು ಮಕ್ಕಳ ಹಿತರಕ್ಷಣಾ ಸಮಿತಿಗೆ ಒಪ್ಪಿಸಲಾಗುತ್ತದೆ.


ಸಾರ್ವಜನಿಕ ಸ್ಥಳಗಳಲ್ಲಿ ಭಿಕ್ಷೆ ಬೇಡುತ್ತಿರುವುದು ಕಂಡುಬಂದರೆ ಸಾರ್ವಜನಿಕರು 10581 ಅಥವಾ 9482300400 ಸಂಖ್ಯೆಗೆ ಕರೆ ಮಾಡಬಹುದು.


ಭಿಕ್ಷಾಟನೆ ಮಾಡುತ್ತಿರುವವರನ್ನು ಬಂಧಿಸಲು ಹಾಗೂ ರಕ್ಷಿಸಲು 8 ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿದೆ. ಆಗಸ್ಟ್ ಅಂತ್ಯಕ್ಕೆ 1565 ಪುರುಷರು ಹಾಗೂ 272 ಮಹಿಳಾ ಭಿಕ್ಷುಕರನ್ನು ಬಂಧಿಸಲಾಗಿದೆ. ಇವರಲ್ಲಿ 15 ಮಂಗಳಮುಖಿಯರು, 9 ಮಕ್ಕಳನ್ನೂ ರಕ್ಷಣೆ ಮಾಡಲಾಗಿದೆ. ಪುನಃ ಭಿಕ್ಷಾಟನೆಯಲ್ಲಿ ತೊಡಗದಂತೆ ಎಚ್ಚರಿಕೆ ನೀಡಿ, ಮುಚ್ಚಳಿಕೆ ಬರೆಸಿಕೊಂಡು ಮಂಗಳಮುಖಿಯರನ್ನು ಬಿಡುಗಡೆ ಮಾಡಲಾಗಿದೆ.


ಈ ಕುರಿತು ಚರ್ಚಿಸಲು ವಿಶೇಷ ಸಭೆ ಕರೆಯಾಲಾಗಿದೆ. ಮೂರ್ನಾಲ್ಕು ರೀತಿಯ ಭಿಕ್ಷುಕರಿದ್ದಾರೆ. ಮಕ್ಕಳನ್ನು ಬಾಡಿಗೆ ತೆಗೆದುಕೊಂಡು 'ಮತ್ತು ಬರುವ ಔಷಧ ಕೊಟ್ಟು ಭಿಕ್ಷಾಟನೆ ಮಾಡಲಾಗುತ್ತಿತ್ತು. ಇದೀಗ ಪ್ರಥಮ ಹಂತದ ಕಾರ್ಯಕ್ರಮ ಮಾಡಿ ನಿಯಂತ್ರಣಕ್ಕೆ ತರಲಾಗಿದೆ.


ಮಂಗಳ ಮುಖಿಯರು ಸಮಾರಂಭಗಳಲ್ಲಿ ಮುಜುಗರ ಉಂಟು ಮಾಡುತ್ತಿದ್ದಾರೆ. ಕಾನೂನು ಮಂತ್ರಿಗಳ ಜತೆ ಮಾತನಾಡಿ, ಅವರ ರಕ್ಷಣೆ ಮಾಡಲು ನಿರ್ಧಾರ ಮಾಡಲಾಗಿದೆ. ಎರಡ್ಮೂರು ತಿಂಗಳ ಕಾಲದಲ್ಲಿ ಈ ಸಮಸ್ಯೆ ಬಗೆಹರಿಸಲು ಪ್ರಯತ್ನ ಮಾಡುತ್ತೇವೆ ಎಂದು ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು.


ಗೋ ರಾ ಶ್ರೀನಿವಾಸ...

ಮೊ:9845856139.


ಸನ್ಮಿತ್ರ ಅವರಿಂದ ಸಂಬಂಧಿತ ವೀಡಿಯೊಗಳು


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in karnataka »

ನಾಡ ಅಧಿದೇವತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ನಾಡಹಬ್ಬ ದಸರಾ 2022ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ರವರಿಂದ ವಿದ್ಯುಕ್ತ ಚಾಲನೆ
ನಾಡ ಅಧಿದೇವತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ನಾಡಹಬ್ಬ ದಸರಾ 2022ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ರವರಿಂದ ವಿದ್ಯುಕ್ತ ಚಾಲನೆ

ಮೈಸೂರು: ರಾಷ್ಟ್ರಪತಿ ದ್ರೌಪದಿ ಮುರ್ಮು ಚಾಮುಂಡಿ ಬೆಟ್ಟದಲ್ಲಿ ನಾಡ ಅಧಿದೇವತೆ ಚಾಮುಂಡೇಶ್ವರಿಯ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ನ

ಮಂಗಳೂರಿನಲ್ಲಿ ನಾಪತ್ತೆಯಾದ ಮೂವರು ವಿದ್ಯಾರ್ಥಿನಿಯರು ಚೆನ್ನೈ ನಲ್ಲಿ ಪತ್ತೆ- ಇವರ ನಾಪತ್ತೆಗೆ ಕಾರಣ ಗೊತ್ತೇ!
ಮಂಗಳೂರಿನಲ್ಲಿ ನಾಪತ್ತೆಯಾದ ಮೂವರು ವಿದ್ಯಾರ್ಥಿನಿಯರು ಚೆನ್ನೈ ನಲ್ಲಿ ಪತ್ತೆ- ಇವರ ನಾಪತ್ತೆಗೆ ಕಾರಣ ಗೊತ್ತೇ!

ಮಂಗಳೂರು:ಮಂಗಳೂರಿನಲ್ಲಿ ಸೆಪ್ಟೆಂಬರ್ 21 ರಂದು ನಾಪತ್ತೆಯಾಗಿದ್ದ ಮೂವರು ಕಾಲೇಜು ವಿದ್ಯಾರ್ಥಿನಿಯರು ಚೆನ್ನೈ ನಲ್ಲಿ ಪತ್ತೆಯಾಗಿದ್ದಾರೆ. ಮಂಗಳೂರಿನ ಮೇರಿ ಹಿಲ್ ನ ವಿಕಾಸ ಕಾಲೇಜಿನ ಮೂವರು ಪಿ ಯು ಸಿ ವಿದ್ಯಾರ್ಥಿನಿಯರಾದ ಯಶಸ್ವಿನಿ, ದಕ್ಷತಾ

ಇದೇ ಸೆ.30ರಿಂದ ಪೂರ್ಣ ಪ್ರಮಾಣದಲ್ಲಿ ಚಾಲನೆಗೊಳ್ಳಲಿದೆ ಮೈಷುಗರ್‌ : ಗೋಪಾಲಯ್ಯ
ಇದೇ ಸೆ.30ರಿಂದ ಪೂರ್ಣ ಪ್ರಮಾಣದಲ್ಲಿ ಚಾಲನೆಗೊಳ್ಳಲಿದೆ ಮೈಷುಗರ್‌ : ಗೋಪಾಲಯ್ಯ

ಮಂಡ್ಯ: ಜಿಲ್ಲೆಯ ರೈತರ ಜೀವನಾಡಿ ಮೈಷುಗರ್‌ ಕಾರ್ಖಾನೆ ಸೆಪ್ಟೆಂಬರ್‌ 30ರಿಂದ ಪೂರ್ಣ ಪ್ರಮಾಣದಲ್ಲಿ ಚಾಲನೆಗೊಳ್ಳಲಿದೆ ಎಂದು ಜಿಲ್ಲಾ ಉಸ್ತುವಾರಿ

ಹೈದರಾಬಾದ್​ನಲ್ಲಿ ವೆಲ್ ಕಮ್ ಟು 40 ಪರ್ಸೆಂಟ್ ಸಿಎಂ ಬ್ಯಾನರ್ ಅಳವಡಿಕೆ ವ್ಯವಸ್ಥಿತ ಷಡ್ಯಂತ್ರ: ಸಿಎಂ ಬೊಮ್ಮಾಯಿ
ಹೈದರಾಬಾದ್​ನಲ್ಲಿ ವೆಲ್ ಕಮ್ ಟು 40 ಪರ್ಸೆಂಟ್ ಸಿಎಂ ಬ್ಯಾನರ್ ಅಳವಡಿಕೆ ವ್ಯವಸ್ಥಿತ ಷಡ್ಯಂತ್ರ: ಸಿಎಂ ಬೊಮ್ಮಾಯಿ

ಬೆಂಗಳೂರು: ಹೈದರಾಬಾದ್​ನಲ್ಲಿ ವೆಲ್ ಕಮ್ ಟು 40 ಪರ್ಸೆಂಟ್ ಸಿಎಂ ಎನ್ನುವ ಬ್ಯಾನರ್ ಅಳವಡಿಕೆ ವ್ಯವಸ್ಥಿತ ಷಡ್ಯಂತ್ರವಾಗಿದೆ ಎಂದು ಮುಖ್ಯಮಂತ್ರಿ

ಚಿಕ್ಕಬಳ್ಳಾಪುರದಲ್ಲಿ ಹೆದ್ದಾರಿ ಪಕ್ಕದ ಹೋಟೆಲ್​ಗೆ ನುಗ್ಗಿದ ಕ್ಯಾಂಟರ್: ಗರ್ಭದಲ್ಲಿದ್ದ ಶಿಶು ಸೇರಿ ಮೂವರು ಸಾವು
ಚಿಕ್ಕಬಳ್ಳಾಪುರದಲ್ಲಿ ಹೆದ್ದಾರಿ ಪಕ್ಕದ ಹೋಟೆಲ್​ಗೆ ನುಗ್ಗಿದ ಕ್ಯಾಂಟರ್: ಗರ್ಭದಲ್ಲಿದ್ದ ಶಿಶು ಸೇರಿ ಮೂವರು ಸಾವು

ಚಿಕ್ಕಬಳ್ಳಾಪುರ: ನಿಂತಿದ್ದ ಬೈಕ್ ಮತ್ತು ಕಾರುಗಳಿಗೆ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ಗರ್ಭದಲ್ಲಿದ್ದ ಕಂದಮ್ಮ ಸೇರಿ ಮೂವರು ಸಾವನ್ನಪ್ಪಿದ್ದು

ಸಿಗ್ನಲ್‌ಗಳಲ್ಲಿ ಭಿಕ್ಷುಕರು, ಸಮಾರಂಭಗಳಲ್ಲಿ ಮಂಗಳಮುಖಿಯರಿಂದ ಮುಜುಗರ: ಮೇಲ್ಮನೆಯಲ್ಲಿ ಭಾರಿ ಚರ್ಚೆ
ಸಿಗ್ನಲ್‌ಗಳಲ್ಲಿ ಭಿಕ್ಷುಕರು, ಸಮಾರಂಭಗಳಲ್ಲಿ ಮಂಗಳಮುಖಿಯರಿಂದ ಮುಜುಗರ: ಮೇಲ್ಮನೆಯಲ್ಲಿ ಭಾರಿ ಚರ್ಚೆ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಭಿಕ್ಷುಕರ ಹಾವಳಿ ಮತ್ತು ಸಮಾರಂಭಗಳಲ್ಲಿ ಮಂಗಳಮುಖಿಯರಿಂದ ಆಯೋಜಕರು ಅನುಭವಿಸುತ್ತಿರುವ ಕಿರಿಕಿರಿ ತಪ್ಪಿಸಲು

ರಾಜಕುಮಾರಿಯರಿಗಾಗಿಯೇ ನಿರ್ಮಾಣಗೊಂಡ ಮೈಸೂರಿನ ಅರಮನೆಗಳು!
ರಾಜಕುಮಾರಿಯರಿಗಾಗಿಯೇ ನಿರ್ಮಾಣಗೊಂಡ ಮೈಸೂರಿನ ಅರಮನೆಗಳು!

ಮೈಸೂರು: ಮೈಸೂರಿಗೆ ಭೇಟಿ ನೀಡಿದವರಿಗೆ ಮೈಸೂರು ಅರಮನೆ ಸೇರಿದಂತೆ ನಗರದಲ್ಲಿರುವ ಹಲವಾರು ಅರಮನೆಗಳು ಅಚ್ಚರಿ ಮೂಡಿಸುತ್ತವೆ. ಬಹುಶಃ ಮೈಸೂರಿನಲ್ಲ

ಪತಿಯೇ ಬೆಂಕಿ ಹಚ್ಚಿ ಕೊಲೆ ಮಾಡುವ ವೇಳೆ ಪತಿಯನ್ನೇ ತಬ್ಬಿಕೊಂಡ ಪತ್ನಿ ಮೃತ, ಪತಿ ಸ್ಥಿತಿ ಗಂಭೀರ
ಪತಿಯೇ ಬೆಂಕಿ ಹಚ್ಚಿ ಕೊಲೆ ಮಾಡುವ ವೇಳೆ ಪತಿಯನ್ನೇ ತಬ್ಬಿಕೊಂಡ ಪತ್ನಿ ಮೃತ, ಪತಿ ಸ್ಥಿತಿ ಗಂಭೀರ

ಕೆ.ಆರ್.ನಗರ: ಗಾಢ ನಿದ್ರೆಯಲ್ಲಿರಬೇಕಾದ ಸಂದರ್ಭದಲ್ಲಿ ಜಗಳವಾಡಿಕೊಂಡ ಪತಿ-ಪತ್ನಿಯರು ಜಗಳವಾಡಿಕೊಂಡು ಪತಿಯೂ ಪತ್ನಿಗೆ ತಡರಾತ್ರಿ ಬೆಂಕಿ ಹಚ್ಚಿ

16ರ ಬಾಲಕಿ ವರಿಸಿದ್ದ 52 ವರ್ಷದ ವ್ಯಕ್ತಿಯ ಬಂಧನ
16ರ ಬಾಲಕಿ ವರಿಸಿದ್ದ 52 ವರ್ಷದ ವ್ಯಕ್ತಿಯ ಬಂಧನ

ಕಾರವಾರ (ಉತ್ತರಕನ್ನಡ): 16 ವರ್ಷದ ಬಾಲಕಿ ಬಾಲ್ಯವಿವಾಹವಾಗಿ, ಈ ಬಗ್ಗೆ ದೂರು ದಾಖಲಾಗುತ್ತಿದ್ದಂತೆ ಆತ್ಮಹತ್ಯೆಗೆ ಯತ್ನಿಸಿದ್ದ 52 ವರ್ಷದ ವ್ಯಕ್ತಿಯ

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ದಸರಾ ಉದ್ಘಾಟನೆ: ಸಿಎಂ ಬೊಮ್ಮಾಯಿ ಘೋಷಣೆ
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ದಸರಾ ಉದ್ಘಾಟನೆ: ಸಿಎಂ ಬೊಮ್ಮಾಯಿ ಘೋಷಣೆ

ಬೆಂಗಳೂರು: ಕರ್ನಾಟಕದ ಹೆಮ್ಮೆಯ ದಸರಾ ಹಬ್ಬವನ್ನು ಈ ಬಾರಿ ರಾಷ್ಟ್ರಪತಿ ದ್ರೌಪದಿ ಮರ್ಮು ಅವರು ನಾಡಹಬ್ಬ ದಸರಾ ಉದ್ಘಾಟಿಸಲಿದ್ದಾರೆ ಎಂದು ಮುಖ್ಯ

Top Stories »  


Top ↑