Tel: 7676775624 | Mail: info@yellowandred.in

Language: EN KAN

    Follow us :

ಇದೇ ಸೆ.30ರಿಂದ ಪೂರ್ಣ ಪ್ರಮಾಣದಲ್ಲಿ ಚಾಲನೆಗೊಳ್ಳಲಿದೆ ಮೈಷುಗರ್‌ : ಗೋಪಾಲಯ್ಯ

Posted date: 18 Sep, 2022

Powered by:     Yellow and Red

ಇದೇ ಸೆ.30ರಿಂದ ಪೂರ್ಣ ಪ್ರಮಾಣದಲ್ಲಿ ಚಾಲನೆಗೊಳ್ಳಲಿದೆ ಮೈಷುಗರ್‌ : ಗೋಪಾಲಯ್ಯ

ಮಂಡ್ಯ: ಜಿಲ್ಲೆಯ ರೈತರ ಜೀವನಾಡಿ ಮೈಷುಗರ್‌ ಕಾರ್ಖಾನೆ ಸೆಪ್ಟೆಂಬರ್‌ 30ರಿಂದ ಪೂರ್ಣ ಪ್ರಮಾಣದಲ್ಲಿ ಚಾಲನೆಗೊಳ್ಳಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಹೇಳಿದರು.

ನಗರದ ಮೈಷುಗರ್‌ ಸಕ್ಕರೆ ಕಾರ್ಖಾನೆ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಕಾರ್ಖಾನೆಯ ಕೆಲಸ ನಿರ್ವಹಣೆ ಕುರಿತು ಪ್ರಗತಿ ಪರಿಶೀಲನೆ ನಡೆಸಿದರು. ಕಾರ್ಖಾನೆ 2ನೇ ಬಾಯ್ಲರ್‌ನ ಕಾರ್ಯ ಸೆಪ್ಟೆಂಬರ್‌ 19ರಿಂದ ಪ್ರಾರಂಭವಾಗಬೇಕು ಎಂದು ಸೂಚಿಸಿದರು.

ಮೈಷುಗರ್‌ ಕಾರ್ಯ ವ್ಯಾಪ್ತಿಗೆ ಬರುವ ಕಬ್ಬನ್ನು ಬೇರೆ ಕಾರ್ಖಾನೆಯವರು ಕಟಾವು ಮಾಡದಂತೆ ಈಗಾಗಲೇ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿದೆ. ಕಾರ್ಖಾನೆ ವ್ಯಾಪ್ತಿಯ ಕಬ್ಬು ಬೇರೆ ಕಡೆಗೆ ಸಾಗಾಣಿಕೆಯಾಗುತ್ತಿದ್ದಲ್ಲಿ ವಶ ಪಡಿಸಿಕೊಳ್ಳಲು ಕ್ರಮವಹಿಸಿ ಎಂದರು.

ರೈತರಿಂದ ಕಬ್ಬು ಖರೀದಿಸಿ ನಿಗದಿತ ಅವಧಿಯೊಳಗೆ ಹಣ ಪಾವತಿ ಮಾಡುವುದರಿಂದ ರೈತರಲ್ಲಿ ಕಾರ್ಖಾನೆ ಬಗ್ಗೆ ವಿಶ್ವಾಸ ಹೆಚ್ಚಳವಾಗಿ ಮೈಷುಗರ್‌ ವ್ಯಾಪ್ತಿಯ ಕಬ್ಬನ್ನು ಮೈಷುಗರ್‌ ಸಕ್ಕರೆ ಕಾರ್ಖಾನೆಗೆ ನೀಡುತ್ತಾರೆ ಎಂದ ಅವರು, ಸೆ.30ರ ನಂತರ ಮುಖ್ಯಮಂತ್ರಿಗಳನ್ನು ಮೈಷುಗರ್‌ ಕಾರ್ಖಾನೆಗೆ ಆಹ್ವಾನಿಸಿ ಎಲ್ಲಾ ಘಟಕಗಳ ಕಾರ್ಯ ನಿರ್ವಾಹಣೆ ಪರಿಚಯಿಸಲಾಗುವುದು ಎಂದರು.

ಇನ್ನು ಇದಕ್ಕೆ ಪೂರ್ವಭಾವಿಯಾಗಿ ಖುದ್ದು ಸೆ.30ರೊಳಗಾಗಿ ಮತ್ತೆ ಸಕ್ಕರೆ ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲಿಸುತ್ತೇನೆ ಎಂದು ತಿಳಿಸಿದರು.

ರೇಷ್ಮೆ ಸಚಿವ ಕೆ.ಸಿ.ನಾರಾಯಣಗೌಡ ಮಾತನಾಡಿ, ಸಕ್ಕರೆ ಕಾರ್ಖಾನೆ ಪುನಾರಾಂಭಗೊಂಡಿದೆ. ಈ ವೇಳೆ ಸಣ್ಣ ಪುಟ್ಟತೊಂದರೆಗಳು ಉಂಟಾಗಬಹುದು. ಅವುಗಳನ್ನು ಸರಿಪಡಿಸಿಕೊಂಡು ಪೂರ್ಣ ಪ್ರಮಾಣದಲ್ಲಿ ಚಾಲನೆಗೊಳ್ಳಬೇಕು ಎಂದರು.

ಉಪವಿಭಾಗಾಧಿಕಾರಿ ಶಿವಾನಂದಮೂರ್ತಿ, ಸಕ್ಕರೆ ಕಾರ್ಖಾನೆ ಕಾರ್ಯನಿರ್ವಹಣೆ ಹಾಗೂ ಮುಂದಿನ ದಿನಗಳಲ್ಲಿ ಕೈಗೊಳ್ಳುವ ಕ್ರಮಗಳ ಬಗ್ಗೆ ಸಚಿವರಿಗೆ ವಿವರಿಸಿದರು.

ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಯರಾಮ ರಾಯಪುರ, ಜಿಲ್ಲಾಧಿಕಾರಿ ಎಸ್‌.ಅಶ್ವತಿ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ಶಾಂತಾ ಎಲ್‌.ಹುಲ್ಮನಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಯತೀಶ್‌, ಉಪವಿಭಾಗಾಧಿಕಾರಿ ಆರ್‌.ಐಶ್ವರ್ಯ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಗೋ ರಾ ಶ್ರೀನಿವಾಸ...

ಮೊ:9845856139.

ಸನ್ಮಿತ್ರ ಅವರಿಂದ ಸಂಬಂಧಿತ ವೀಡಿಯೊಗಳು

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in karnataka »

ನಾಡ ಅಧಿದೇವತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ನಾಡಹಬ್ಬ ದಸರಾ 2022ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ರವರಿಂದ ವಿದ್ಯುಕ್ತ ಚಾಲನೆ
ನಾಡ ಅಧಿದೇವತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ನಾಡಹಬ್ಬ ದಸರಾ 2022ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ರವರಿಂದ ವಿದ್ಯುಕ್ತ ಚಾಲನೆ

ಮೈಸೂರು: ರಾಷ್ಟ್ರಪತಿ ದ್ರೌಪದಿ ಮುರ್ಮು ಚಾಮುಂಡಿ ಬೆಟ್ಟದಲ್ಲಿ ನಾಡ ಅಧಿದೇವತೆ ಚಾಮುಂಡೇಶ್ವರಿಯ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ನ

ಮಂಗಳೂರಿನಲ್ಲಿ ನಾಪತ್ತೆಯಾದ ಮೂವರು ವಿದ್ಯಾರ್ಥಿನಿಯರು ಚೆನ್ನೈ ನಲ್ಲಿ ಪತ್ತೆ- ಇವರ ನಾಪತ್ತೆಗೆ ಕಾರಣ ಗೊತ್ತೇ!
ಮಂಗಳೂರಿನಲ್ಲಿ ನಾಪತ್ತೆಯಾದ ಮೂವರು ವಿದ್ಯಾರ್ಥಿನಿಯರು ಚೆನ್ನೈ ನಲ್ಲಿ ಪತ್ತೆ- ಇವರ ನಾಪತ್ತೆಗೆ ಕಾರಣ ಗೊತ್ತೇ!

ಮಂಗಳೂರು:ಮಂಗಳೂರಿನಲ್ಲಿ ಸೆಪ್ಟೆಂಬರ್ 21 ರಂದು ನಾಪತ್ತೆಯಾಗಿದ್ದ ಮೂವರು ಕಾಲೇಜು ವಿದ್ಯಾರ್ಥಿನಿಯರು ಚೆನ್ನೈ ನಲ್ಲಿ ಪತ್ತೆಯಾಗಿದ್ದಾರೆ. ಮಂಗಳೂರಿನ ಮೇರಿ ಹಿಲ್ ನ ವಿಕಾಸ ಕಾಲೇಜಿನ ಮೂವರು ಪಿ ಯು ಸಿ ವಿದ್ಯಾರ್ಥಿನಿಯರಾದ ಯಶಸ್ವಿನಿ, ದಕ್ಷತಾ

ಇದೇ ಸೆ.30ರಿಂದ ಪೂರ್ಣ ಪ್ರಮಾಣದಲ್ಲಿ ಚಾಲನೆಗೊಳ್ಳಲಿದೆ ಮೈಷುಗರ್‌ : ಗೋಪಾಲಯ್ಯ
ಇದೇ ಸೆ.30ರಿಂದ ಪೂರ್ಣ ಪ್ರಮಾಣದಲ್ಲಿ ಚಾಲನೆಗೊಳ್ಳಲಿದೆ ಮೈಷುಗರ್‌ : ಗೋಪಾಲಯ್ಯ

ಮಂಡ್ಯ: ಜಿಲ್ಲೆಯ ರೈತರ ಜೀವನಾಡಿ ಮೈಷುಗರ್‌ ಕಾರ್ಖಾನೆ ಸೆಪ್ಟೆಂಬರ್‌ 30ರಿಂದ ಪೂರ್ಣ ಪ್ರಮಾಣದಲ್ಲಿ ಚಾಲನೆಗೊಳ್ಳಲಿದೆ ಎಂದು ಜಿಲ್ಲಾ ಉಸ್ತುವಾರಿ

ಹೈದರಾಬಾದ್​ನಲ್ಲಿ ವೆಲ್ ಕಮ್ ಟು 40 ಪರ್ಸೆಂಟ್ ಸಿಎಂ ಬ್ಯಾನರ್ ಅಳವಡಿಕೆ ವ್ಯವಸ್ಥಿತ ಷಡ್ಯಂತ್ರ: ಸಿಎಂ ಬೊಮ್ಮಾಯಿ
ಹೈದರಾಬಾದ್​ನಲ್ಲಿ ವೆಲ್ ಕಮ್ ಟು 40 ಪರ್ಸೆಂಟ್ ಸಿಎಂ ಬ್ಯಾನರ್ ಅಳವಡಿಕೆ ವ್ಯವಸ್ಥಿತ ಷಡ್ಯಂತ್ರ: ಸಿಎಂ ಬೊಮ್ಮಾಯಿ

ಬೆಂಗಳೂರು: ಹೈದರಾಬಾದ್​ನಲ್ಲಿ ವೆಲ್ ಕಮ್ ಟು 40 ಪರ್ಸೆಂಟ್ ಸಿಎಂ ಎನ್ನುವ ಬ್ಯಾನರ್ ಅಳವಡಿಕೆ ವ್ಯವಸ್ಥಿತ ಷಡ್ಯಂತ್ರವಾಗಿದೆ ಎಂದು ಮುಖ್ಯಮಂತ್ರಿ

ಚಿಕ್ಕಬಳ್ಳಾಪುರದಲ್ಲಿ ಹೆದ್ದಾರಿ ಪಕ್ಕದ ಹೋಟೆಲ್​ಗೆ ನುಗ್ಗಿದ ಕ್ಯಾಂಟರ್: ಗರ್ಭದಲ್ಲಿದ್ದ ಶಿಶು ಸೇರಿ ಮೂವರು ಸಾವು
ಚಿಕ್ಕಬಳ್ಳಾಪುರದಲ್ಲಿ ಹೆದ್ದಾರಿ ಪಕ್ಕದ ಹೋಟೆಲ್​ಗೆ ನುಗ್ಗಿದ ಕ್ಯಾಂಟರ್: ಗರ್ಭದಲ್ಲಿದ್ದ ಶಿಶು ಸೇರಿ ಮೂವರು ಸಾವು

ಚಿಕ್ಕಬಳ್ಳಾಪುರ: ನಿಂತಿದ್ದ ಬೈಕ್ ಮತ್ತು ಕಾರುಗಳಿಗೆ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ಗರ್ಭದಲ್ಲಿದ್ದ ಕಂದಮ್ಮ ಸೇರಿ ಮೂವರು ಸಾವನ್ನಪ್ಪಿದ್ದು

ಸಿಗ್ನಲ್‌ಗಳಲ್ಲಿ ಭಿಕ್ಷುಕರು, ಸಮಾರಂಭಗಳಲ್ಲಿ ಮಂಗಳಮುಖಿಯರಿಂದ ಮುಜುಗರ: ಮೇಲ್ಮನೆಯಲ್ಲಿ ಭಾರಿ ಚರ್ಚೆ
ಸಿಗ್ನಲ್‌ಗಳಲ್ಲಿ ಭಿಕ್ಷುಕರು, ಸಮಾರಂಭಗಳಲ್ಲಿ ಮಂಗಳಮುಖಿಯರಿಂದ ಮುಜುಗರ: ಮೇಲ್ಮನೆಯಲ್ಲಿ ಭಾರಿ ಚರ್ಚೆ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಭಿಕ್ಷುಕರ ಹಾವಳಿ ಮತ್ತು ಸಮಾರಂಭಗಳಲ್ಲಿ ಮಂಗಳಮುಖಿಯರಿಂದ ಆಯೋಜಕರು ಅನುಭವಿಸುತ್ತಿರುವ ಕಿರಿಕಿರಿ ತಪ್ಪಿಸಲು

ರಾಜಕುಮಾರಿಯರಿಗಾಗಿಯೇ ನಿರ್ಮಾಣಗೊಂಡ ಮೈಸೂರಿನ ಅರಮನೆಗಳು!
ರಾಜಕುಮಾರಿಯರಿಗಾಗಿಯೇ ನಿರ್ಮಾಣಗೊಂಡ ಮೈಸೂರಿನ ಅರಮನೆಗಳು!

ಮೈಸೂರು: ಮೈಸೂರಿಗೆ ಭೇಟಿ ನೀಡಿದವರಿಗೆ ಮೈಸೂರು ಅರಮನೆ ಸೇರಿದಂತೆ ನಗರದಲ್ಲಿರುವ ಹಲವಾರು ಅರಮನೆಗಳು ಅಚ್ಚರಿ ಮೂಡಿಸುತ್ತವೆ. ಬಹುಶಃ ಮೈಸೂರಿನಲ್ಲ

ಪತಿಯೇ ಬೆಂಕಿ ಹಚ್ಚಿ ಕೊಲೆ ಮಾಡುವ ವೇಳೆ ಪತಿಯನ್ನೇ ತಬ್ಬಿಕೊಂಡ ಪತ್ನಿ ಮೃತ, ಪತಿ ಸ್ಥಿತಿ ಗಂಭೀರ
ಪತಿಯೇ ಬೆಂಕಿ ಹಚ್ಚಿ ಕೊಲೆ ಮಾಡುವ ವೇಳೆ ಪತಿಯನ್ನೇ ತಬ್ಬಿಕೊಂಡ ಪತ್ನಿ ಮೃತ, ಪತಿ ಸ್ಥಿತಿ ಗಂಭೀರ

ಕೆ.ಆರ್.ನಗರ: ಗಾಢ ನಿದ್ರೆಯಲ್ಲಿರಬೇಕಾದ ಸಂದರ್ಭದಲ್ಲಿ ಜಗಳವಾಡಿಕೊಂಡ ಪತಿ-ಪತ್ನಿಯರು ಜಗಳವಾಡಿಕೊಂಡು ಪತಿಯೂ ಪತ್ನಿಗೆ ತಡರಾತ್ರಿ ಬೆಂಕಿ ಹಚ್ಚಿ

16ರ ಬಾಲಕಿ ವರಿಸಿದ್ದ 52 ವರ್ಷದ ವ್ಯಕ್ತಿಯ ಬಂಧನ
16ರ ಬಾಲಕಿ ವರಿಸಿದ್ದ 52 ವರ್ಷದ ವ್ಯಕ್ತಿಯ ಬಂಧನ

ಕಾರವಾರ (ಉತ್ತರಕನ್ನಡ): 16 ವರ್ಷದ ಬಾಲಕಿ ಬಾಲ್ಯವಿವಾಹವಾಗಿ, ಈ ಬಗ್ಗೆ ದೂರು ದಾಖಲಾಗುತ್ತಿದ್ದಂತೆ ಆತ್ಮಹತ್ಯೆಗೆ ಯತ್ನಿಸಿದ್ದ 52 ವರ್ಷದ ವ್ಯಕ್ತಿಯ

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ದಸರಾ ಉದ್ಘಾಟನೆ: ಸಿಎಂ ಬೊಮ್ಮಾಯಿ ಘೋಷಣೆ
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ದಸರಾ ಉದ್ಘಾಟನೆ: ಸಿಎಂ ಬೊಮ್ಮಾಯಿ ಘೋಷಣೆ

ಬೆಂಗಳೂರು: ಕರ್ನಾಟಕದ ಹೆಮ್ಮೆಯ ದಸರಾ ಹಬ್ಬವನ್ನು ಈ ಬಾರಿ ರಾಷ್ಟ್ರಪತಿ ದ್ರೌಪದಿ ಮರ್ಮು ಅವರು ನಾಡಹಬ್ಬ ದಸರಾ ಉದ್ಘಾಟಿಸಲಿದ್ದಾರೆ ಎಂದು ಮುಖ್ಯ

Top Stories »  

Top ↑