ಮಂಗಳೂರಿನಲ್ಲಿ ನಾಪತ್ತೆಯಾದ ಮೂವರು ವಿದ್ಯಾರ್ಥಿನಿಯರು ಚೆನ್ನೈ ನಲ್ಲಿ ಪತ್ತೆ- ಇವರ ನಾಪತ್ತೆಗೆ ಕಾರಣ ಗೊತ್ತೇ!

ಮಂಗಳೂರು:ಮಂಗಳೂರಿನಲ್ಲಿ ಸೆಪ್ಟೆಂಬರ್ 21 ರಂದು ನಾಪತ್ತೆಯಾಗಿದ್ದ ಮೂವರು ಕಾಲೇಜು ವಿದ್ಯಾರ್ಥಿನಿಯರು ಚೆನ್ನೈ ನಲ್ಲಿ ಪತ್ತೆಯಾಗಿದ್ದಾರೆ. ಮಂಗಳೂರಿನ ಮೇರಿ ಹಿಲ್ ನ ವಿಕಾಸ ಕಾಲೇಜಿನ ಮೂವರು ಪಿ ಯು ಸಿ ವಿದ್ಯಾರ್ಥಿನಿಯರಾದ ಯಶಸ್ವಿನಿ, ದಕ್ಷತಾ ಮತ್ತು ಸಿಂಚನಾ ಎಂಬ ಮೂವರು ವಿದ್ಯಾರ್ಥಿನಿಯರು ನಾಪತ್ತೆಯಾಗಿದ್ದರು. ವಿಕಾಸ್ ಕಾಲೇಜಿನ ಹಾಸ್ಟೆಲ್ ನಿಂದ ಮುಂಜಾನೆ 3 ಗಂಟೆಗೆ ಕಿಟಕಿ ಮುರಿದು ಪರಾರಿಯಾಗಿದ್ದ ಇವರ ನಾಪತ್ತೆ ಆತಂಕ ಸೃಷ್ಟಿಸಿತ್ತು. ಇವರು ಹಾಸ್ಟೆಲ್ ನಿಂದ ಪರಾರಿಯಾಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು ಈ ಮೂವರು ವಿದ್ಯಾರ್ಥಿನಿಯರು ಸೆಪ್ಟೆಂಬರ್ 23 ರಂದು ಚೆನ್ನೈ ಪೊಲೀಸ್ ಠಾಣೆಯಲ್ಲಿ ಹಾಜರಾಗುವ ಮೂಲಕ ಪತ್ತೆಯಾಗಿದ್ದಾರೆ. ಈ ಮೂವರು ವಿದ್ಯಾರ್ಥಿನಿಯರು ಮಂಗಳೂರಿನಿಂದ ಚೆನ್ನೈ ಗೆ ರೈಲಿನಲ್ಲಿ ಹೋಗಿದ್ದರು. ಅಲ್ಲಿ ಹೋದ ಬಳಿಕ ಇವರಿಗೆ ಮನೆಯವರಿಗೆ ಆತಂಕವಾಗಿರಬಹುದೆಂದು ಅರಿವಾಗಿದೆ. ಆ ಬಳಿಕ ಅವರು ಚೆನ್ನೈ ಪೊಲೀಸ್ ಠಾಣೆಗೆ ತೆರಳಿ ತಾವು ಮಂಗಳೂರಿನಿಂದ ನಾಪತ್ತೆಯಾಗಿರುವುದನ್ನು ತಿಳಿಸಿದ್ದಾರೆ. ಆ ಬಳಿಕ ಚೆನ್ನೈ ಪೊಲೀಸರು ಮಂಗಳೂರು ಪೊಲೀಸರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ. ಚೆನ್ನೈನಿಂದ ಮೂವರು ವಿದ್ಯಾರ್ಥಿನಿಯರನ್ನು ಮಂಗಳೂರಿಗೆ ಕರೆದುಕೊಂಡು ಬರಲಾಗಿದೆ. *ನಾಪತ್ತೆಗೆ ಕಾರಣ ಇದು!* ಈ ಮೂವರು ನಾಪತ್ತೆಯಾಗಲು ಕಾರಣ ವಾದ್ದದ್ದು ಕಡಿಮೆ ಅಂಕ. ಪಿಯುಸಿ ಪ್ರಥಮ ವರ್ಷದಲ್ಲಿ ನಡೆದ ತರಗತಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿರುವುದು ವಿದ್ಯಾರ್ಥಿನಿಯರು ನಾಪತ್ತೆ ನಿರ್ಧಾರ ತೆಗೆದುಕೊಳ್ಳಲು ಕಾರಣವಾಗಿದೆ. ಕಡಿಮೆ ಅಂಕ ಬಂದಿರುವುದರಿಂದ ಮನೆಯವರಿಗೆ ಹೇಗೆ ತಿಳಿಸುವುದು ಎಂಬ ಆತಂಕದಿಂದ ಇವರು ನಾಪತ್ತೆಯಾಗಲು ನಿರ್ಧರಿಸಿದ್ದರು ಎಂದು ಹೇಳಿಕೊಂಡಿದ್ದಾರೆ. ಗೋ ರಾ ಶ್ರೀನಿವಾಸ... ಮೊ:9845856139.
Recent news in karnataka »

ಅರ್ಹತೆ ಮೇರೆಗೆ ಮತ್ತೀಕೆರೆ ಜಯರಾಮ ರವರನ್ನು ಮೇಲ್ಮನೆಗೆ ಕಳುಹಿಸಲು ಸರ್ವಪ್ರಯತ್ನ. ಶಾಸಕ ಅನ್ನದಾನಿ
ಮಂಡ್ಯ: 06/2022. ಭಾನುವಾರ. ಮೇಲ್ಮನೆ ಸದಸ್ಯರನ್ನಾಗಿ ನೇಮಕ ಮಾಡಲು ಯಾರು ಹಣ ತೆಗೆದುಕೊಳ್ಳುತ್ತಾರೋ ನನಗೆ ಗೊತ್ತಿಲ್ಲ. ಆದರೆ ಮುಂದಿನ ದಿನಗಳಲ್

ನವೆಂಬರ್ 11 ರಂದು ಮೊದಲ ರೈಲು ಕೇವಲ 15 ಸಾವಿರ ರೂಪಾಯಿಗಳಲ್ಲಿ 8 ದಿನಗಳ ಕಾಶಿ ದರ್ಶನ ಪ್ಯಾಕೇಜ್ ಟೂರ್
ಬೆಂಗಳೂರು: ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆ ಕರ್ನಾಟಕ – ಭಾರತ್ ಗೌರವ್ ಕಾಶಿ ದರ್ಶನ ಪ್ಯಾಕೇಜ್ ಟೂರ್ ಗೆ ಬುಕ್

ಆಧಾರ್ ನೋಂದಣಿಗಾಗಿ ಭಾನುವಾರವೂ ಕೆಲಸ ನಿರ್ವಹಿಸಲಿವೆ ಅಟಲ್ ಜೀ ಕೇಂದ್ರಗಳು
ಕರ್ನಾಟಕ ಸರ್ಕಾರದ ನಿರ್ದೇಶನಾಲಯ ಅಟಲ್ ಜೀ ಜನಸ್ನೇಹಿ ಕೇಂದ್ರ ಬೆಂಗಳೂರು ರವರು ರಾಜ್ಯದ ಎಲ್ಲಾ ತಾಲೂಕು ಕಚೇರಿಗಳಲ್ಲಿನ ಅಟಲ್ ಜೀ ಜನಸ್ನೇಹಿ ಕೇಂದ್ರ ಗಳಲ್ಲಿ ಪ್ರತಿ ಭಾನುವಾರಗಳಂದು ಆಧಾರ್ ನೋಂದಣಿ ಕಾ

ಪೃಕೃತಿ ಚಿಕಿತ್ಸೆ ಪಡೆಯಲು ಬೆಂಗಳೂರಿಗೆ ಬಂದ ಇಂಗ್ಲೆಂಡ್ ರಾಣಿ ಕ್ಯಾಮಿಲ್ಲಾ
ಬೆಂಗಳೂರು, ಅ.24: ಪೃಕೃತಿ ಚಿಕಿತ್ಸೆ ಪಡೆಯಲು ಇಂಗ್ಲೆಂಡ್ ರಾಣಿ(ಕ್ವೀನ್ ಕಾನ್ಸಾರ್ಟ್) ಕ್ಯಾಮಿಲ್ಲಾ ಅವರು ಬೆಂಗಳೂರಿಗೆ ಆಗಮಿಸಿದ್ದಾರೆ.
<

ರಾಜಕೀಯಕ್ಕೆ ಮರಳುವ ಬಗ್ಗೆ ಸೂಕ್ತ ಸಮಯದಲ್ಲಿ ತಿಳಿಸುವೆ: ಮಾಜಿ ಸಚಿವ ಜನಾರ್ದನರೆಡ್ಡಿ
ಬಳ್ಳಾರಿ; ಅ.24: ರಾಜಕೀಯಕ್ಕೆ ವಾಪಸ್ ಆಗುವ ಮತ್ತು 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತಂತೆ ಈಗಲೇ ನಾನೇನೂ ಹೇಳಲಾ

ಚನ್ನಪಟ್ಟಣದ ಗೊಂಬೆಗೆ ಜಾಗತಿಕ ಮಾನ್ಯತೆಗೆ ಮೈಸೂರು ರಾಜವಂಶಸ್ಥೆ ತ್ರಿಷಿಕಾ ಕುಮಾರಿ ಸಂಶೋಧನೆ
ಮೈಸೂರು:ಅಕ್ಟೋಬರ್ 20: ಇತಿಹಾಸ ಹಾಗೂ ಪುರಾಣ ಪ್ರಸಿದ್ಧ, ಸಾಂಪ್ರದಾಯಿಕ ಚನ್ನಪಟ್ಟಣದ ಗೊಂಬೆಗಳಿಗೆ ಜಾಗತಿಕ ಮಟ್ಟದಲ್ಲಿ ಮಾನ್ಯತೆ ದೊರೆಯುವಂತೆ ಮಾಡುವುದು ನನ್ನ ಕನಸಾಗಿದೆ. ಅದಕ್ಕಾಗಿ ಸಂಶೋಧನೆ ನಡೆಸ

ಒಕ್ಕಲಿಗರು ಕುರಿಗಳಲ್ಲ, ನಾಡನ್ನಾಳಿದ ಸಿಂಹಗಳು : ಡಾ. ನಿರ್ಮಲಾನಂದನಾಥ ಸ್ವಾಮೀಜಿ
ಮೈಸೂರು: ಇತಿಹಾಸ ಮತ್ತು ಪುರಾಣಗಳನ್ನೇ ತೆಗೆದುಕೊಳ್ಳಿ, ತಲಕಾಡು ಗಂಗರು– ನಾವುಗಳೆಲ್ಲರೂ ಒಂದೇ. ಉಪ ಪಂಗಡಗಳ ಭೇದ ತೊರೆದು, ಆಡಳಿತದಲ್ಲಿ ಮುಂದೆ

ನಾಡದೇವಿ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಜಂಬೂ ಸವಾರಿಗೆ ಚಾಲನೆ ನೀಡಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ
ಮೈಸೂರು, ಅ.೫: ನಾಡಹಬ್ಬ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವವು ಬುಧವಾರ ವಿಜೃಂಭಣೆಯಿಂದ ನೆರವೇರಿದ್ದು ಸಮಯ ಸಂಜೆ 05:37ಕ್ಕೆ

ನಾಡ ಅಧಿದೇವತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ನಾಡಹಬ್ಬ ದಸರಾ 2022ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ರವರಿಂದ ವಿದ್ಯುಕ್ತ ಚಾಲನೆ
ಮೈಸೂರು: ರಾಷ್ಟ್ರಪತಿ ದ್ರೌಪದಿ ಮುರ್ಮು ಚಾಮುಂಡಿ ಬೆಟ್ಟದಲ್ಲಿ ನಾಡ ಅಧಿದೇವತೆ ಚಾಮುಂಡೇಶ್ವರಿಯ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ನ

ಮಂಗಳೂರಿನಲ್ಲಿ ನಾಪತ್ತೆಯಾದ ಮೂವರು ವಿದ್ಯಾರ್ಥಿನಿಯರು ಚೆನ್ನೈ ನಲ್ಲಿ ಪತ್ತೆ- ಇವರ ನಾಪತ್ತೆಗೆ ಕಾರಣ ಗೊತ್ತೇ!
ಮಂಗಳೂರು:ಮಂಗಳೂರಿನಲ್ಲಿ ಸೆಪ್ಟೆಂಬರ್ 21 ರಂದು ನಾಪತ್ತೆಯಾಗಿದ್ದ ಮೂವರು ಕಾಲೇಜು ವಿದ್ಯಾರ್ಥಿನಿಯರು ಚೆನ್ನೈ ನಲ್ಲಿ ಪತ್ತೆಯಾಗಿದ್ದಾರೆ. ಮಂಗಳೂರಿನ ಮೇರಿ ಹಿಲ್ ನ ವಿಕಾಸ ಕಾಲೇಜಿನ ಮೂವರು ಪಿ ಯು ಸಿ ವಿದ್ಯಾರ್ಥಿನಿಯರಾದ ಯಶಸ್ವಿನಿ, ದಕ್ಷತಾ
ಪ್ರತಿಕ್ರಿಯೆಗಳು