Tel: 7676775624 | Mail: info@yellowandred.in

Language: EN KAN

    Follow us :


ಆಧಾರ್ ಗಾಗಿ ರಕ್ತದ ಮಾದರಿ ಕೊಡಬೇಕು !?

Posted date: 05 Apr, 2018

Powered by:     Yellow and Red

ಆಧಾರ್ ಗಾಗಿ ರಕ್ತದ ಮಾದರಿ ಕೊಡಬೇಕು !?

ಹೊಸದಿಲ್ಲಿ: ಸಾರ್ವಜನಿಕರಿಗೆ ಆಧಾರ್‌ ಕಾರ್ಡ್‌ ನೀಡುವ ಹೊಣೆಗಾರಿಕೆ ಹೊಂದಿರುವ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಮುಂದೊಂದು ದಿನ ತನ್ನ ಗುರುತಿನ ಚೀಟಿಗೆ ಮತ್ತಷ್ಟು ಮಹತ್ವ ನೀಡಲು ಜನರಿಂದ  ರಕ್ತದ ಮಾದರಿ ನೀಡಬೇಕು ಎಂದು ಕೋರಬಹುದೇನೋ ಎಂದು ಸುಪ್ರೀಂ ಕೋರ್ಟ್‌ ಆತಂಕ ವ್ಯಕ್ತಪಡಿಸಿದೆ. ಈ ಮೂಲಕ, 2016ರಲ್ಲಿ ರೂಪಿಸಲಾಗಿರುವ ಆಧಾರ್‌ ಕಾನೂನಿನ್ವಯ ಪ್ರಾಧಿಕಾರಕ್ಕೆ ನೀಡಲಾಗಿ ರುವ ಹೆಚ್ಚಿನ ಅಧಿಕಾರಗಳನ್ನು ಕೋರ್ಟ್‌ ಪ್ರಶ್ನಿಸಿದೆ. 

ಆಧಾರ್‌ ಕಾನೂನಿನ ಸಾಧಕ ಬಾಧಕಗಳ ಬಗ್ಗೆ ಬುಧವಾರ, ಐವರು ನ್ಯಾಯಮೂರ್ತಿಗಳುಳ್ಳ ನ್ಯಾಯಪೀಠದಲ್ಲಿದ್ದ ನ್ಯಾ. ಚಂದ್ರಚೂಡ್‌, ಆಧಾರ್‌ ಕಾರ್ಡ್‌ಗಾಗಿ ಸದ್ಯದ ಮಟ್ಟಿಗೆ ನಾಗರಿಕರಿಂದ ಬೆರಳಚ್ಚು ಹಾಗೂ ಕಣ್ಣಿನ ಮಸೂರವನ್ನು ಸ್ಕ್ಯಾನ್‌ ಮಾಡಲಾಗುತ್ತಿದೆ. ಮುಂದೆ ಸಾರ್ವಜನಿಕರ ರಕ್ತದ ಮಾದರಿ ಪಡೆದು ಅದರ ಡಿಎನ್‌ಎ ಮಾಹಿತಿಯನ್ನು ಸಂಗ್ರಹಿಸುವಂಥ ಕಾಲ ಬರಬಹುದು. ಇಂಥ ಕ್ರಮ ಖಾಸಗಿ ಹಕ್ಕಿಗೆ ಚ್ಯುತಿ ತಂದಂತೆ ಆಗುವುದಿಲ್ಲವೆ' ಎಂದು ಪ್ರಶ್ನಿಸಿದರು. 

ಅದಕ್ಕೆ ಉತ್ತರಿಸಿದ ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌, "ಸರಕಾರದ ಪ್ರತಿ ನಡೆಯನ್ನು ನ್ಯಾಯಾಲಯಗಳು ಪ್ರಶ್ನಿಸುತ್ತಾ ಸಾಗಿದರೆ ಉತ್ತಮ ಉದ್ದೇಶ ಸಾಧನೆಗೆ ಅಡ್ಡಿಯಾಗಬಹುದು' ಎಂದರು. ರಾಷ್ಟ್ರೀಯ ಹಿತಾಸಕ್ತಿಯಲ್ಲಿರುವ ಯೋಜನೆಗೆ ತಡೆಯೊಡ್ಡುವುದು ಸರಿಯಲ್ಲ. ಆಧಾರ್‌ಗಾಗಿ ಬಯೋಮೆಟ್ರಿಕ್‌ ಮಾಹಿತಿ ದಾಖಲಿಸುವುದು ಖಾಸಗಿತಕ್ಕೆ ಧಕ್ಕೆ ಅಲ್ಲ ಎಂದು ಅಟಾರ್ನಿ ಜನರಲ್‌ ಹೇಳಿದ್ದಾರೆ.


 

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in karnataka »

ಶ್ರೀರಂಗ ಯೋಜನೆ ವರ್ಷದಲ್ಲಿ ಪೂರ್ಣ. ಗುಣಮಟ್ಟಕ್ಕೆ ಆದ್ಯತೆ ನೀಡಲು ಡಿಸಿಎಂ ಸೂಚನೆ
ಶ್ರೀರಂಗ ಯೋಜನೆ ವರ್ಷದಲ್ಲಿ ಪೂರ್ಣ. ಗುಣಮಟ್ಟಕ್ಕೆ ಆದ್ಯತೆ ನೀಡಲು ಡಿಸಿಎಂ ಸೂಚನೆ

ಬೆಂಗಳೂರು:/ರಾಮನಗರ:ಆ/26/20/ಬುಧವಾರ. ಶ್ರೀರಂಗ ಏತ ನೀರಾವರಿ, ಸತ್ತೇಗಾಲ ಕುಡಿಯುವ ನೀರು ಯೋಜನೆ ಸೇರಿದಂತೆ ರಾಮನಗರ ಜಿಲ್ಲೆಯಲ್ಲಿ ನಡೆಯುತ್ತಿರ

ಚರ್ಮ ಕುಶಲ ಕರ್ಮಿಗಳಿಗೆ ವಿಶೇಷ ಪ್ಯಾಕೇಜ್ ಘೋಷಿಸಿದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ
ಚರ್ಮ ಕುಶಲ ಕರ್ಮಿಗಳಿಗೆ ವಿಶೇಷ ಪ್ಯಾಕೇಜ್ ಘೋಷಿಸಿದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ

ಬೆಂಗಳೂರು:ಮೇ/೦೮/೨೦/ಶುಕ್ರವಾರ. ಕೊರೊನಾ (ಕೋವಿಡ್-೧೯) ರ ಪರಿಣಾಮ ಹಾಗೂ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ರಸ್ತೆ ಬದಿಯಲ್ಲಿ ಚರ್ಮ

ಕೊರೊನಾ (ಕೋವಿಡ್-೧೯) ದಿಂದಾಗಿ ನಷ್ಟ ಅನುಭವಿಸಿದವರಿಗೆ ೧,೬೧೦ ಕೋಟಿ ರೂ ಪರಿಹಾರ ಘೋಷಿಸಿದ ಸರ್ಕಾರ
ಕೊರೊನಾ (ಕೋವಿಡ್-೧೯) ದಿಂದಾಗಿ ನಷ್ಟ ಅನುಭವಿಸಿದವರಿಗೆ ೧,೬೧೦ ಕೋಟಿ ರೂ ಪರಿಹಾರ ಘೋಷಿಸಿದ ಸರ್ಕಾರ

ಕಳೆದ ಒಂದೂವರೆ ತಿಂಗಳಿನಿಂದ ಲಾಕ್ ಡೌನ್ ನ ಪರಿಣಾಮವಾಗಿ ವಿವಿಧ ನಿರ್ಬಂಧಗಳನ್ನು ಹೇರಿರುವುದರಿಂದ ಎಲ್ಲಾ ವರ್ಗದ ಜನರು ಆರ್ಥಿಕವಾಗಿ ಸಂಕಷ್ಟವನ್ನು ಅನುಭವಿಸುತ್ತಾರೆ.


ಲಾಕ

ವಲಸೆ ಕಾರ್ಮಿಕರಿಗೆ ಉಚಿತ ಬಸ್ ಸೌಲಭ್ಯ: ಇನ್ನೂ ಎರಡು ದಿನ ವಿಸ್ತರಿಸಿದ ಮುಖ್ಯಮಂತ್ರಿ
ವಲಸೆ ಕಾರ್ಮಿಕರಿಗೆ ಉಚಿತ ಬಸ್ ಸೌಲಭ್ಯ: ಇನ್ನೂ ಎರಡು ದಿನ ವಿಸ್ತರಿಸಿದ ಮುಖ್ಯಮಂತ್ರಿ

ಬೆಂಗಳೂರು:ಮೇ/೦೪/೨೦/ಸೋಮವಾರ. ವಲಸೆ ಕಾರ್ಮಿಕರಿಗೆ ಪ್ರಕಟಿಸಿರುವ ಉಚಿತ ಬಸ್ ಪ್ರಯಾಣ ಸೌಲಭ್ಯ ಸುಗಮವಾಗಿ ನಡೆಯುತ್ತಿದ್ದು, ಅದನ್ನು ಇನ್ನು ಎರಡು

ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಿಂದ ಆನ್‌ಲೈನ್ ತರಗತಿಗಳು ಪ್ರಾರಂಭ ಡಾ ವಿಜಯ ಪ್ರಕಾಶ
ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಿಂದ ಆನ್‌ಲೈನ್ ತರಗತಿಗಳು ಪ್ರಾರಂಭ ಡಾ ವಿಜಯ ಪ್ರಕಾಶ

ರಾಮನಗರ:ಮೇ/೦೩/೨೦/ಭಾನುವಾರ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ೨೦೧೯-೨೦ ನೇ ಶೈಕ್ಷಣಿಕ ಸಾಲಿನ ಜುಲೈ ಮತ್ತು ಜನವರಿ ಆವೃತ್ತಿಯಲ್ಲಿ

ಮೃತ ಹನುಮಂತು ಕುಟುಂಬಕ್ಕೆ ೦೫ ಲಕ್ಷ ರೂ ಚೆಕ್ ನೀಡಿದ ಎಚ್ಡಿಕೆ
ಮೃತ ಹನುಮಂತು ಕುಟುಂಬಕ್ಕೆ ೦೫ ಲಕ್ಷ ರೂ ಚೆಕ್ ನೀಡಿದ ಎಚ್ಡಿಕೆ

ಕನಕಪುರ:ಏ/೨೨/೨೦/ಬುಧವಾರ. ನೆನ್ನೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ರಾಮನಗರ ಜಿಲ್ಲಾ ಪಬ್ಲಿಕ್ ಟಿವಿ ವರದಿಗಾರ ಹನುಮಂತು ಅವರ ಕುಟುಂಬದ ಸದಸ್ಯ

ಕಾರಿನಲ್ಲಿ ಮದ್ಯ ಸಾಗಣೆ ಚನ್ನಪಟ್ಟಣ ಮಾಕಳಿ ಗ್ರಾಮದ ಮೂವರ ಬಂಧನ
ಕಾರಿನಲ್ಲಿ ಮದ್ಯ ಸಾಗಣೆ ಚನ್ನಪಟ್ಟಣ ಮಾಕಳಿ ಗ್ರಾಮದ ಮೂವರ ಬಂಧನ

ನಾಗಮಂಗಲ:೨೨/೨೦/ಬುಧವಾರ. ಚಾಮರಾಜನಗರ- ಜೇವರ್ಗಿ ರಾಷ್ಟ್ರೀಯ ಹೆದ್ದಾರಿ ನಾಗಮಂಗಲ ಪಟ್ಟಣದ ಗ್ರಾಮಾಂತರ ಪೊಲೀಸ್ ಠಾಣೆ ಎದುರಿನ ಚೆಕ್ ಪೋಸ್ಟ್ ನಲ್

ಕಾರ್ಮಿಕರ ವೇತನ ಕಡಿತಕ್ಕೆ ಅವಕಾಶ ನೀಡುವುದಿಲ್ಲ : ಕಾರ್ಮಿಕ ಸಚಿವ ಅರೆಬೈಲ್ ಶಿವರಾಮ ಹೆಬ್ಬಾರ್
ಕಾರ್ಮಿಕರ ವೇತನ ಕಡಿತಕ್ಕೆ ಅವಕಾಶ ನೀಡುವುದಿಲ್ಲ : ಕಾರ್ಮಿಕ ಸಚಿವ ಅರೆಬೈಲ್ ಶಿವರಾಮ ಹೆಬ್ಬಾರ್

ಬೆಂಗಳೂರು:ಏ/೧೯/೨೦/ಭಾನುವಾರ. ಕಾರ್ಮಿಕರದ್ದಾಗಲೀ ಅಥವಾ ಇತರೆ ಯಾವುದೇ ಕಾರ್ಮಿಕರದ್ದಾಗಲೀ ವೇತನ ಕಡಿತಕ್ಕೆ ರಾಜ್ಯ ಸರ್ಕಾರ ಅವಕಾಶ ನೀಡುವುದಿಲ್ಲ

ರಾಜ್ಯದಲ್ಲಿನ ಕೊರೊನಾ‌ ಸ್ಥಿತಿಗತಿಯ ಕುರಿತಂತೆ ಸಚಿವ ಸುರೇಶ್ ಕುಮಾರ್‌‌ ಮಾಹಿತಿ
ರಾಜ್ಯದಲ್ಲಿನ ಕೊರೊನಾ‌ ಸ್ಥಿತಿಗತಿಯ ಕುರಿತಂತೆ ಸಚಿವ ಸುರೇಶ್ ಕುಮಾರ್‌‌ ಮಾಹಿತಿ

ಇದುವರೆಗೆ ರಾಜ್ಯದಲ್ಲಿ ಒಟ್ಟಾರೆ ೩೫೯ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಇಂದು ಸಂಜೆ ೦೫:೦೦ ರ ಮಾಹಿತಿಯಂತೆ ೧೩ ಜನ ಸಾವನ್ನಪ್ಪಿದ್ದು, ೮೮ ಮಂದಿ ಗುಣಮುಖರಾಗಿ ಹಿಂತಿರುಗಿದ್ದಾರೆಂದು‌ ಸಚಿವರು ವಿವರ

ಹತ್ತನೇ ತರಗತಿ ಹೊರತುಪಡಿಸಿ ಒಂಭತ್ತನೆಯ ತರಗತಿಯ ತನಕ ಎಲ್ಲರೂ ಪಾಸು ಸುರೇಶ್ ಕುಮಾರ್
ಹತ್ತನೇ ತರಗತಿ ಹೊರತುಪಡಿಸಿ ಒಂಭತ್ತನೆಯ ತರಗತಿಯ ತನಕ ಎಲ್ಲರೂ ಪಾಸು ಸುರೇಶ್ ಕುಮಾರ್

ಬೆಂಗಳೂರು/ರಾಮನಗರ/೦೨/೨೦/ಗುರುವಾರ. ೨೦೧೯/೨೦ ನೇ ಶೈಕ್ಷಣಿಕ ಸಾಲಿನ ೭, ೮ ಮತ್ತು ೯ ನೇ ತರಗತಿಯ ವಿದ್ಯಾರ್ಥಿಗಳನ್ನು ಪರೀಕ್ಷೆ ನಡೆಸದೇ ಉತ್ತೀರ್

Top Stories »  


Top ↑