Tel: 7676775624 | Mail: info@yellowandred.in

Language: EN KAN

    Follow us :


ನವೆಂಬರ್‌ 11 ರಂದು ಮೊದಲ ರೈಲು ಕೇವಲ 15 ಸಾವಿರ ರೂಪಾಯಿಗಳಲ್ಲಿ 8 ದಿನಗಳ ಕಾಶಿ ದರ್ಶನ ಪ್ಯಾಕೇಜ್‌ ಟೂರ್‌

Posted date: 30 Oct, 2022

Powered by:     Yellow and Red

ನವೆಂಬರ್‌ 11 ರಂದು ಮೊದಲ ರೈಲು ಕೇವಲ 15 ಸಾವಿರ ರೂಪಾಯಿಗಳಲ್ಲಿ 8 ದಿನಗಳ ಕಾಶಿ ದರ್ಶನ ಪ್ಯಾಕೇಜ್‌ ಟೂರ್‌

ಬೆಂಗಳೂರು: ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆ ಕರ್ನಾಟಕ – ಭಾರತ್‌ ಗೌರವ್‌ ಕಾಶಿ ದರ್ಶನ ಪ್ಯಾಕೇಜ್‌ ಟೂರ್‌ ಗೆ ಬುಕ್ಕಿಂಗ್‌ ಪ್ರಾರಂಭವಾಗಿದೆ. ಈ ಯೋಜನೆಯ ಮೊದಲ ರೈಲು ನವೆಂಬರ್‌ 11 ರಂದು ಬೆಂಗಳೂರಿನಿಂದ ಹೊರಡಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಅಮೃತ ಹಸ್ತದಿಂದ ಚಾಲನೆ ನೀಡುವ ನಿಟ್ಟಿನಲ್ಲಿ ಯೋಜಿಸಲಾಗುತ್ತಿದೆ ಎಂದು ಮಾನ್ಯ ಮುಜರಾಯಿ, ಹಜ್‌ ಮತ್ತು ವಕ್ಫ್‌ ಸಚಿವರಾದ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.


ಈ ಬಗ್ಗೆ ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಮಹತ್ವಾಕಾಂಕ್ಷಿ ಯೋಜನೆಯ ಬುಕ್ಕಿಂಗ್‌ ಪ್ರಾರಂಭವಾಗಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಮುತುವರ್ಜಿಯಿಂದ ಮರು ನಿರ್ಮಾಣವಾಗಿರುವ ʼದಿವ್ಯ ಕಾಶಿ - ಭವ್ಯಕಾಶಿʼ ಯನ್ನು ರಾಜ್ಯದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ ಕಾಶಿ ವಿ‍ಶ್ವನಾಥನ ದರ್ಶನ ಪಡೆಯಲಿ ಎನ್ನುವ ಉದ್ದೇಶದಿಂದ ಈ ವಿಶೇಷ ಪ್ಯಾಕೇಜ್‌ ಟೂರನ್ನು ಆಯೋಜಿಸಲಾಗಿದೆ. ಕೇಂದ್ರ ಸರಕಾರದ ಭಾರತ್‌ ಗೌರವ್‌ ಯೋಜನೆಯ ಅಡಿಯಲ್ಲಿ ರೈಲನ್ನು ಮುಜರಾಯಿ ಇಲಾಖೆ ಗುತ್ತಿಗೆಗೆ ಪಡೆದು ಈ ಯೋಜನೆ ಕಾರ್ಯಗತಗೊಳಿಸುತ್ತಿದ್ದಾರೆ. ಕೇಂದ್ರ ರೈಲ್ವೇ ಸಚಿವರ ಸಂಪೂರ್ಣ ಸಹಕಾರದೊಂದಿಗೆ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದ್ದು ಮೊದಲ ರೈಲು ನವೆಂಬರ್‌ 11 ರಂದು ಬೆಂಗಳೂರಿನಿಂದ ಹೊರಡಲಿದೆ ಎಂದು ಹೇಳಿದ್ದಾರೆ. 


*ಉತ್ತರ ಕರ್ನಾಟಕದಲ್ಲೂ ರೈಲು ಹತ್ತುವ ಅವಕಾಶ:*

ಬೆಂಗಳೂರಿನಿಂದ ಹೊರಡುವ ಈ ರೈಲನ್ನು ಹತ್ತಲು ಉತ್ತರ ಕರ್ನಾಟಕದ ಪ್ರಮುಖ ನಿಲ್ದಾಣಗಳಲ್ಲೂ ಅವಕಾಶ ಕಲ್ಪಿಸಲಾಗಿದೆ. ಈ ರೈಲು ಬೆಂಗಳೂರು, ಬೀರೂರ್‌, ಹಾವೇರಿ, ಹುಬ್ಬಳ್ಳಿ, ಬೆಳಗಾವಿ ಹಾಗೂ ರಾಯಭಾಗ ಮಾರ್ಗವಾಗಿ ಕಾಶಿ, ಅಯೋಧ್ಯ ಮತ್ತು ಪ್ರಯಾಗರಾಜ್‌ ಗೆ ಸಂಚರಿಸಲಿದೆ. 


*ಐಆರ್‌ಸಿಟಿಸಿ ಸಹಭಾಗಿತ್ವದಲ್ಲಿ ಎಲ್ಲ ವಿಶೇಷ ಪ್ಯಾಕೇಜ್‌:*

ಅತ್ಯಂತ ಕಡಿಮೆ ವೆಚ್ಚದಲ್ಲಿ ಕಾಶಿ ವಿಶ್ವನಾಥ ಹಾಗೂ ಅಯೋಧ್ಯ ರಾಮಲಲ್ಲಾ ದೈವ ಭೂಮಿಯ ವೈಭವ ಸವಿಯುವ ಅವಕಾಶ ಇದಾಗಿದೆ. 8 ದಿನಗಳ ಕಾಲದ ಈ ಟೂರ್‌ ಪ್ಯಾಕೇಜ್‌ನಲ್ಲಿ ಎಲ್ಲಾ ಸವಲತ್ತುಗಳನ್ನು ಒಳಗೊಂಡಿರಲಿದೆ. ರೈಲು ದರ, ಪ್ರವಾಸಿ ಸ್ಥಳಗಳಲ್ಲಿ ಅಗತ್ಯವಿರುವ ಬಸ್‌ ವ್ಯವಸ್ಥೆ, ಉಳಿದುಕೊಳ್ಳಲು ಹೋಟೇಲ್‌, ಮತ್ತು 8 ದಿನಗಳಲ್ಲಿ ಊಟ ಮತ್ತು ತಿಂಡಿ ವ್ಯವಸ್ಥೆ ಹಾಗೂ ವಿಮೆಯನ್ನು ಸಹ ಈ ಪ್ಯಾಕೇಜ್‌ ಒಳಗೊಂಡಿರಲಿದೆ. 


*ಕರ್ನಾಟಕ ಸರಕಾರದಿಂದ 5 ಸಾವಿರ ರೂಪಾಯಿಗಳ ಸಹಾಯಧನವನ್ನು ಐಆರ್‌ಸಿಟಿಸಿ ಸಹಭಾಗಿತ್ವದ ಈ ಟೂರ್‌ ಪ್ಯಾಕೇಜ್‌ ತಗೆದುಕೊಳ್ಳುವ ಪ್ರತಿ ವ್ಯಕ್ತಿಗೂ 5 ಸಾವಿರ ರೂಪಾಯಿಗಳ ಸಹಾಯಧನವನ್ನ ಕರ್ನಾಟಕ ಸರಕಾರ ನೀಡಲಿದೆ. ಈ ಪ್ಯಾಕೇಜ್‌ ನ ದರ ಮೂಲತಃ 20 ಸಾವಿರ ರೂಪಾಯಿಗಳಾಗಿದ್ದು, ಪ್ರಯಾಣಿಕರು ಕೇವಲ 15,000 ರೂಪಾಯಿಗಳನ್ನು ನೀಡಿದರೆ ಸಾಕು. ಉಳಿದ 5000 ರೂಗಳನ್ನು ಕರ್ನಾಟಕ ಸರಕಾರ ಸಹಾಯಧನದ ರೂಪದಲ್ಲಿ ನೀಡಲಿದೆ. 


*ಮಹತ್ವಾಕಾಂಕ್ಷಿ ಯೋಜನೆಯ ಬುಕ್ಕಿಂಗ್‌ ಈಗಾಗಲೇ ಪ್ರಾರಂಭ:*

ಕರ್ನಾಟಕ–ಭಾರತ್‌ ಗೌರವ್‌ ಕಾಶಿ ದರ್ಶನ ರೈಲು ಯೋಜನೆಯ ಬುಕ್ಕಿಂಗ್‌ ಈಗಾಗಲೇ ಪ್ರಾರಂಭವಾಗಿದೆ. ಐಆರ್‌ಸಿಟಿಸಿ ಹಾಗೂ ಐಟಿಎಂಎಸ್‌ ವೆಬ್‌ಸೈಟ್ ಗಳ ಮೂಲಕ ಬುಕ್ಕಿಂಗ್‌ ಗೆ ಅವಕಾಶ ನೀಡಲಾಗಿದ್ದು, ಈಗಾಗಲೇ ಹಲವಾರು ಜನರು ಬುಕ್ಕಿಂಗ್‌ ಮಾಡಿಕೊಳ್ಳುತ್ತಿದ್ದಾರೆ. ಈ ಲಿಂಕ್‌ ಗಳ ಮೂಲಕ ಬುಕ್ಕಿಂಗ್‌ ಮಾಡಬಹುದಾಗಿದೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in karnataka »

ಅರ್ಹತೆ ಮೇರೆಗೆ ಮತ್ತೀಕೆರೆ ಜಯರಾಮ ರವರನ್ನು ಮೇಲ್ಮನೆಗೆ ಕಳುಹಿಸಲು ಸರ್ವಪ್ರಯತ್ನ. ಶಾಸಕ ಅನ್ನದಾನಿ
ಅರ್ಹತೆ ಮೇರೆಗೆ ಮತ್ತೀಕೆರೆ ಜಯರಾಮ ರವರನ್ನು ಮೇಲ್ಮನೆಗೆ ಕಳುಹಿಸಲು ಸರ್ವಪ್ರಯತ್ನ. ಶಾಸಕ ಅನ್ನದಾನಿ

ಮಂಡ್ಯ: 06/2022. ಭಾನುವಾರ. ಮೇಲ್ಮನೆ ಸದಸ್ಯರನ್ನಾಗಿ ನೇಮಕ ಮಾಡಲು ಯಾರು ಹಣ ತೆಗೆದುಕೊಳ್ಳುತ್ತಾರೋ ನನಗೆ ಗೊತ್ತಿಲ್ಲ. ಆದರೆ ಮುಂದಿನ ದಿನಗಳಲ್

ನವೆಂಬರ್‌ 11 ರಂದು ಮೊದಲ ರೈಲು ಕೇವಲ 15 ಸಾವಿರ ರೂಪಾಯಿಗಳಲ್ಲಿ 8 ದಿನಗಳ ಕಾಶಿ ದರ್ಶನ ಪ್ಯಾಕೇಜ್‌ ಟೂರ್‌
ನವೆಂಬರ್‌ 11 ರಂದು ಮೊದಲ ರೈಲು ಕೇವಲ 15 ಸಾವಿರ ರೂಪಾಯಿಗಳಲ್ಲಿ 8 ದಿನಗಳ ಕಾಶಿ ದರ್ಶನ ಪ್ಯಾಕೇಜ್‌ ಟೂರ್‌

ಬೆಂಗಳೂರು: ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆ ಕರ್ನಾಟಕ – ಭಾರತ್‌ ಗೌರವ್‌ ಕಾಶಿ ದರ್ಶನ ಪ್ಯಾಕೇಜ್‌ ಟೂರ್‌ ಗೆ ಬುಕ್

ಆಧಾರ್ ನೋಂದಣಿಗಾಗಿ ಭಾನುವಾರವೂ ಕೆಲಸ ನಿರ್ವಹಿಸಲಿವೆ ಅಟಲ್ ಜೀ ಕೇಂದ್ರಗಳು
ಆಧಾರ್ ನೋಂದಣಿಗಾಗಿ ಭಾನುವಾರವೂ ಕೆಲಸ ನಿರ್ವಹಿಸಲಿವೆ ಅಟಲ್ ಜೀ ಕೇಂದ್ರಗಳು

ಕರ್ನಾಟಕ ಸರ್ಕಾರದ ನಿರ್ದೇಶನಾಲಯ ಅಟಲ್ ಜೀ ಜನಸ್ನೇಹಿ ಕೇಂದ್ರ ಬೆಂಗಳೂರು ರವರು ರಾಜ್ಯದ ಎಲ್ಲಾ ತಾಲೂಕು ಕಚೇರಿಗಳಲ್ಲಿನ ಅಟಲ್ ಜೀ ಜನಸ್ನೇಹಿ ಕೇಂದ್ರ ಗಳಲ್ಲಿ ಪ್ರತಿ ಭಾನುವಾರಗಳಂದು ಆಧಾರ್ ನೋಂದಣಿ ಕಾ

ಪೃಕೃತಿ ಚಿಕಿತ್ಸೆ ಪಡೆಯಲು ಬೆಂಗಳೂರಿಗೆ ಬಂದ ಇಂಗ್ಲೆಂಡ್ ರಾಣಿ ಕ್ಯಾಮಿಲ್ಲಾ
ಪೃಕೃತಿ ಚಿಕಿತ್ಸೆ ಪಡೆಯಲು ಬೆಂಗಳೂರಿಗೆ ಬಂದ ಇಂಗ್ಲೆಂಡ್ ರಾಣಿ ಕ್ಯಾಮಿಲ್ಲಾ

ಬೆಂಗಳೂರು, ಅ.24: ಪೃಕೃತಿ ಚಿಕಿತ್ಸೆ ಪಡೆಯಲು ಇಂಗ್ಲೆಂಡ್ ರಾಣಿ(ಕ್ವೀನ್ ಕಾನ್ಸಾರ್ಟ್) ಕ್ಯಾಮಿಲ್ಲಾ ಅವರು ಬೆಂಗಳೂರಿಗೆ ಆಗಮಿಸಿದ್ದಾರೆ.

<

ರಾಜಕೀಯಕ್ಕೆ ಮರಳುವ ಬಗ್ಗೆ ಸೂಕ್ತ ಸಮಯದಲ್ಲಿ ತಿಳಿಸುವೆ: ಮಾಜಿ ಸಚಿವ ಜನಾರ್ದನರೆಡ್ಡಿ
ರಾಜಕೀಯಕ್ಕೆ ಮರಳುವ ಬಗ್ಗೆ ಸೂಕ್ತ ಸಮಯದಲ್ಲಿ ತಿಳಿಸುವೆ: ಮಾಜಿ ಸಚಿವ ಜನಾರ್ದನರೆಡ್ಡಿ

ಬಳ್ಳಾರಿ; ಅ.24: ರಾಜಕೀಯಕ್ಕೆ ವಾಪಸ್ ಆಗುವ ಮತ್ತು 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತಂತೆ ಈಗಲೇ ನಾನೇನೂ ಹೇಳಲಾ

ಚನ್ನಪಟ್ಟಣದ ಗೊಂಬೆಗೆ ಜಾಗತಿಕ ಮಾನ್ಯತೆಗೆ ಮೈಸೂರು ರಾಜವಂಶಸ್ಥೆ ತ್ರಿಷಿಕಾ ಕುಮಾರಿ ಸಂಶೋಧನೆ
ಚನ್ನಪಟ್ಟಣದ ಗೊಂಬೆಗೆ ಜಾಗತಿಕ ಮಾನ್ಯತೆಗೆ ಮೈಸೂರು ರಾಜವಂಶಸ್ಥೆ ತ್ರಿಷಿಕಾ ಕುಮಾರಿ ಸಂಶೋಧನೆ

ಮೈಸೂರು:ಅಕ್ಟೋಬರ್‌ 20: ಇತಿಹಾಸ ಹಾಗೂ ಪುರಾಣ ಪ್ರಸಿದ್ಧ, ಸಾಂಪ್ರದಾಯಿಕ ಚನ್ನಪಟ್ಟಣದ ಗೊಂಬೆಗಳಿಗೆ ಜಾಗತಿಕ ಮಟ್ಟದಲ್ಲಿ ಮಾನ್ಯತೆ ದೊರೆಯುವಂತೆ ಮಾಡುವುದು ನನ್ನ ಕನಸಾಗಿದೆ. ಅದಕ್ಕಾಗಿ ಸಂಶೋಧನೆ ನಡೆಸ

ಒಕ್ಕಲಿಗರು ಕುರಿಗಳಲ್ಲ, ನಾಡನ್ನಾಳಿದ ಸಿಂಹಗಳು : ಡಾ. ನಿರ್ಮಲಾನಂದನಾಥ ಸ್ವಾಮೀಜಿ
ಒಕ್ಕಲಿಗರು ಕುರಿಗಳಲ್ಲ, ನಾಡನ್ನಾಳಿದ ಸಿಂಹಗಳು : ಡಾ. ನಿರ್ಮಲಾನಂದನಾಥ ಸ್ವಾಮೀಜಿ

ಮೈಸೂರು: ಇತಿಹಾಸ ಮತ್ತು ಪುರಾಣಗಳನ್ನೇ ತೆಗೆದುಕೊಳ್ಳಿ, ತಲಕಾಡು ಗಂಗರು– ನಾವುಗಳೆಲ್ಲರೂ ಒಂದೇ. ಉಪ ಪಂಗಡಗಳ ಭೇದ ತೊರೆದು, ಆಡಳಿತದಲ್ಲಿ ಮುಂದೆ

ನಾಡದೇವಿ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಜಂಬೂ ಸವಾರಿಗೆ ಚಾಲನೆ ನೀಡಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ
ನಾಡದೇವಿ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಜಂಬೂ ಸವಾರಿಗೆ ಚಾಲನೆ ನೀಡಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ

ಮೈಸೂರು, ಅ.೫: ನಾಡಹಬ್ಬ ವಿಶ್ವ ವಿಖ್ಯಾತ  ಮೈಸೂರು ದಸರಾ ಮಹೋತ್ಸವವು ಬುಧವಾರ ವಿಜೃಂಭಣೆಯಿಂದ ನೆರವೇರಿದ್ದು  ಸಮಯ ಸಂಜೆ 05:37ಕ್ಕೆ

ನಾಡ ಅಧಿದೇವತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ನಾಡಹಬ್ಬ ದಸರಾ 2022ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ರವರಿಂದ ವಿದ್ಯುಕ್ತ ಚಾಲನೆ
ನಾಡ ಅಧಿದೇವತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ನಾಡಹಬ್ಬ ದಸರಾ 2022ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ರವರಿಂದ ವಿದ್ಯುಕ್ತ ಚಾಲನೆ

ಮೈಸೂರು: ರಾಷ್ಟ್ರಪತಿ ದ್ರೌಪದಿ ಮುರ್ಮು ಚಾಮುಂಡಿ ಬೆಟ್ಟದಲ್ಲಿ ನಾಡ ಅಧಿದೇವತೆ ಚಾಮುಂಡೇಶ್ವರಿಯ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ನ

ಮಂಗಳೂರಿನಲ್ಲಿ ನಾಪತ್ತೆಯಾದ ಮೂವರು ವಿದ್ಯಾರ್ಥಿನಿಯರು ಚೆನ್ನೈ ನಲ್ಲಿ ಪತ್ತೆ- ಇವರ ನಾಪತ್ತೆಗೆ ಕಾರಣ ಗೊತ್ತೇ!
ಮಂಗಳೂರಿನಲ್ಲಿ ನಾಪತ್ತೆಯಾದ ಮೂವರು ವಿದ್ಯಾರ್ಥಿನಿಯರು ಚೆನ್ನೈ ನಲ್ಲಿ ಪತ್ತೆ- ಇವರ ನಾಪತ್ತೆಗೆ ಕಾರಣ ಗೊತ್ತೇ!

ಮಂಗಳೂರು:ಮಂಗಳೂರಿನಲ್ಲಿ ಸೆಪ್ಟೆಂಬರ್ 21 ರಂದು ನಾಪತ್ತೆಯಾಗಿದ್ದ ಮೂವರು ಕಾಲೇಜು ವಿದ್ಯಾರ್ಥಿನಿಯರು ಚೆನ್ನೈ ನಲ್ಲಿ ಪತ್ತೆಯಾಗಿದ್ದಾರೆ. ಮಂಗಳೂರಿನ ಮೇರಿ ಹಿಲ್ ನ ವಿಕಾಸ ಕಾಲೇಜಿನ ಮೂವರು ಪಿ ಯು ಸಿ ವಿದ್ಯಾರ್ಥಿನಿಯರಾದ ಯಶಸ್ವಿನಿ, ದಕ್ಷತಾ

Top Stories »  


Top ↑