Tel: 7676775624 | Mail: info@yellowandred.in

Language: EN KAN

    Follow us :


ಅರ್ಹತೆ ಮೇರೆಗೆ ಮತ್ತೀಕೆರೆ ಜಯರಾಮ ರವರನ್ನು ಮೇಲ್ಮನೆಗೆ ಕಳುಹಿಸಲು ಸರ್ವಪ್ರಯತ್ನ. ಶಾಸಕ ಅನ್ನದಾನಿ

Posted date: 06 Nov, 2022

Powered by:     Yellow and Red

ಅರ್ಹತೆ ಮೇರೆಗೆ ಮತ್ತೀಕೆರೆ ಜಯರಾಮ ರವರನ್ನು ಮೇಲ್ಮನೆಗೆ ಕಳುಹಿಸಲು ಸರ್ವಪ್ರಯತ್ನ. ಶಾಸಕ ಅನ್ನದಾನಿ

ಮಂಡ್ಯ: 06/2022. ಭಾನುವಾರ. ಮೇಲ್ಮನೆ ಸದಸ್ಯರನ್ನಾಗಿ ನೇಮಕ ಮಾಡಲು ಯಾರು ಹಣ ತೆಗೆದುಕೊಳ್ಳುತ್ತಾರೋ ನನಗೆ ಗೊತ್ತಿಲ್ಲ. ಆದರೆ ಮುಂದಿನ ದಿನಗಳಲ್ಲಿ ಹಿರಿಯ ಪತ್ರಕರ್ತರಾದ ಮತ್ತೀಕೆರೆ ಜಯರಾಮ ರವರನ್ನು ಅರ್ಹತೆ ಮೇರೆಗೆ ಮೇಲ್ಮನೆ ಸದಸ್ಯರನ್ನಾಗಿ ಮಾಡಲು, ಪಕ್ಷದ ಗಮನ ಸೆಳೆಯುವ ಮೂಲಕ ಸರ್ವಪ್ರಯತ್ನ ಮಾಡುತ್ತೇನೆ ಎಂದು ಕೊಡಗಿನ ಕುಟ್ಟಪ್ಪ ರವರ ಮಾತನ್ನು ಉಲ್ಲೇಖಿಸಿ, ಮಳವಳ್ಳಿ ವಿಧಾನಸಭಾ ಶಾಸಕರಾದ ಡಾ ಕೆ ಅನ್ನದಾನಿ ಹೇಳಿದರು.

ಅವರು ಭಾನುವಾರ ಇಳಿಹೊತ್ತು ಮಂಡ್ಯ ನಗರದ ಹೊರವಲಯದಲ್ಲಿರುವ ಖಾಸಗಿ ಹೋಟೆಲ್ ನಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಹಿತೈಷಿಗಳು ಹಮ್ಮಿಕೊಂಡಿದ್ದ ಮತ್ತೀಕೆರೆ ಜಯರಾಮ್ ೫೦ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಪತ್ರಕರ್ತರು ಎಂದರೆ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಉದ್ಧಾರಕರು. ಅವರಲ್ಲಿ ಎಂದು ಗುಂಪುಗಾರಿಕೆ ಆಗಬಾರದು. ಅದು ಸಮಾಜಕ್ಕೆ ತಪ್ಪು ತಿಳುವಳಿಕೆ ನೀಡುತ್ತದೆ. ಪತ್ರಿಕೆಯಲ್ಲಿ ತೀಕ್ಷ್ಣವಾಗಿ ಬರೆಯುವಷ್ಟೇ ಸಲೀಸಾಗಿ ಸಂಘಟನೆಯನ್ನು ಕಟ್ಟುವುದನ್ನು ತಿಳಿದುಕೊಂಡಿರುವ ಅವರು ರಾಜ್ಯದಲ್ಲಿ ಪತ್ರಕರ್ತರ ಸಂಘವನ್ನು ಕಟ್ಟಲು ಶ್ರಮಿಸಿದ್ದಾರೆ. ಸಣ್ಣಪುಟ್ಟ ಅಡೆತಡೆಗಳನ್ನು ನಿವಾರಿಸುವ ಮೂಲಕ ಎಲ್ಲಾ ಪತ್ರಕರ್ತರನ್ನು ಒಗ್ಗೂಡಿಸುವ ಛಾತಿ ಅವರಲ್ಲಿದೆ. ಆರೋಗ್ಯ ಸರಿ ಇದ್ದರೆ ಮಾತ್ರ ಆಯಸ್ಸು ವೃದ್ಧಿಯಾಗುತ್ತದೆ. ಅವರು ಆರೋಗ್ಯವನ್ನು ಕಾಪಾಡಿಕೊಂಡು ಇನ್ನೂ ನೂರಾರು ವರ್ಷಗಳ ಕಾಲ ಇಂತಹ ಅಭಿನಂದನೆಗಳು ಅವರ ಮುಡಿಗೇರಲಿ ಎಂದು ಆಶಿಸಿದರು.


ರಾಷ್ಟ್ರ ಮತ್ತು ರಾಜ್ಯ ಮಟ್ಟದ ಪತ್ರಿಕೆಗಳಿಗಿಂತ 

ಸ್ಥಳೀಯ ಪತ್ರಿಕೆಗಳ ಜವಾಬ್ದಾರಿ ಹೆಚ್ಚಿದ್ದು, ಪತ್ರಕರ್ತರು ಇದರ ಬಗ್ಗೆ ಗಮನ ಹರಿಸಬೇಕು. ಸಣ್ಣ ಸಮಸ್ಯೆಗಳನ್ನು ಎತ್ತಿ ತೋರಿಸುವ, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಮುಖಕ್ಕೆ ಹಿಡಿಯುವ ಕೆಲಸ ಮಾಡಲು ಆ ಪತ್ರಿಕೆಗಳಿಗೆ ಮಾತ್ರ ಸಾಧ್ಯ. ರಸ್ತೆ, ಚರಂಡಿಗಳಷ್ಟೇ ಅಲ್ಲಾ, ಸಾಧಕರಿಗೆ ಅನುಕೂಲವಾಗುವಂತಹ ಕ್ರೀಡಾಂಗಣ ಸೇರಿದಂತೆ ವಿವಿಧ ಸಂಸ್ಕೃತಿಗಳನ್ನು ಬಿಂಬಿಸುವ ವೇದಿಕೆಗಳನ್ನು ನಿರ್ಮಾಣ ಮಾಡಿಕೊಡುವ ಕೆಲಸವನ್ನು ಸ್ಥಳೀಯ ಪತ್ರಿಕೆಗಳು ಮಾಡಲು ಸಾಧ್ಯವಾಗುತ್ತದೆ. ಪೌರವಾಣಿ ಸೇರಿದಂತೆ ಹಲವಾರು ಪತ್ರಿಕೆಗಳನ್ನು ನಾನು ನೋಡಿದ್ದೇನೆ. ಆ ನಿಟ್ಟಿನಲ್ಲಿ ಕೆಲಸ ಮಾಡಿ ಉನ್ನತ ಸ್ಥಾನಕ್ಕೆ ಬಂದಿರುವ ಅವರಿಗೆ ಶುಭವಾಗಲಿ ಎಂದು ಕ‌ರ್ನಾಟಕ ಸಂಘದ ಅಧ್ಯಕ್ಷ ಪ್ರೊ ಜಯಪ್ರಕಾಶಗೌಡ ಆಶಿಸಿದರು.


ಮತ್ತೀಕೆರೆ ಜಯರಾಮ ರವರು ಕೇವಲ ಪತ್ರಕರ್ತರಾಗಿರದೇ, ಓರ್ವ ಸಂಘಟಕರಾಗಿ, ರಾಜಕೀಯ ಒಳ ಸುದ್ದಿಗಳನ್ನು ವಿವರವಾಗಿ ಬರೆಯುವ ಮೂಲಕ, ಉತ್ತಮ ಸ್ನೇಹಿತರಾಗಿ, ಹಲವಾರು ಪತ್ರಕರ್ತರನ್ನು ಬೆಳೆಸುವ ಮೂಲಕ ಅವರು ಜನಮಾನಸದಲ್ಲಿ ಉಳಿದಿದ್ದಾರೆ. ೧೯೯೯ ರ ನಾಗಮಂಗಲ ವಿಧಾನ ಸಭಾ ಚುನಾವಣೆಯ ಸಂದರ್ಭದಲ್ಲಿ ಅವರು ಬಳಸಿದ ಪೋಟೋ ಮತ್ತು ಬರವಣಿಗೆ ಶಿವರಾಮೇಗೌಡ ರನ್ನು ಸೋಲಿಸಿತು. ಮಂತ್ರಿಮಹೋದಯರ ಅವರವರ ಅವಧಿಯಲ್ಲಿ ಹಲವಾರು ಅವಕಾಶಗಳು ಬಂದರೂ ಮನ್ನಣೆ ನೀಡದೆ ಕೇವಲ ಪತ್ರಕರ್ತರಾಗಿಯೇ ಉಳಿದರು. ಇಂತಹ ಪತ್ರಕರ್ತ ಮಿತ್ರರು ಇನ್ನೂ ಐವತ್ತು ವರ್ಷಗಳ ಕಾಲ ಸಮಾಜ ತಿದ್ದುವ ಕೆಲಸ ಮಾಡಲಿ ಎಂದು ಹಿರಿಯ ಪತ್ರಕರ್ತ ಮಹೇಂದ್ರ ಹಾರೈಸಿದರು.


ಪಂಚಾಯತಿ ಯಿಂದ ಪಾರ್ಲಿಮೆಂಟ್ ವರೆಗೆ ಆರು ತಿಂಗಳ ಮುಂಚೆಯೇ ಚುನಾವಣಾ ಫಲಿತಾಂಶ ನೀಡುವ ಪತ್ರಕರ್ತರೊಬ್ಬರು ಇದ್ದಾರೆ ಎಂದರೆ ಅದು ಮತ್ತೀಕೆರೆ ಜಯರಾಮ ಮಾತ್ರ. ರಾಜಕೀಯದ ಆಳ-ಅಗಲವನ್ನೂ ತಿಳಿದುಕೊಂಡು, ಸಮಗ್ರ ಮಾಹಿತಿಯನ್ನು ಓದುಗರಿಗೂ, ಜನಪ್ರತಿನಿಧಿಗಳಿಗೂ ನೀಡುವ ಮೂಲಕ ಅಚ್ಚರಿ ಮೂಡಿಸುವ ಬರವಣಿಗೆ ಅವರದ್ದಾಗಿತ್ತು. ಇನ್ನೂ ಆಶ್ಚರ್ಯಕರ ವೆಂದರೆ ಅವರ ರಾಜಕೀಯ ಬರವಣಿಗೆ ಬಹುತೇಕ ಸತ್ಯವಾಗಿದ್ದು ರಾಜಕೀಯ ನಾಯಕರು ಅಚ್ಚರಿ ವ್ಯಕ್ತಪಡಿಸುತ್ತಿದ್ದರು ಎಂದು ಕೃಷ್ಣ ರವರು ಪ್ರಶಂಸಿದರು.


ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷರಾದ ಕುಟ್ಟಪ್ಪ ರವರು ಮಾತನಾಡಿ, ಮೇಲ್ಮನೆ ಎಂಬುದು ಚಿಂತಕರ ಚಾವಡಿಯಾಗಬೇಕು. ಇಂತಹ ಮೇಲ್ಮನೆ ಇಂದು ಪೇಮೆಂಟ್ ಸೀಟ್ ಆಗಿದೆ. ಆದರೆ ಮತ್ತೀಕೆರೆ ಜಯರಾಮ್ ರವರಿಗೆ ಅರ್ಹತೆ ಇದೆ‌. ಆ ಅರ್ಹತೆ ಇರುವುದರಿಂದ ಮುಂದಿನ ದಿನಗಳಲ್ಲಿ ಪೇಮೆಂಟ್ ಅಲ್ಲಾ, ಅರ್ಹತೆ ಎಂಬ ನಿಟ್ಟಿನಲ್ಲಿ ಅವರನ್ನು ನೇಮಿಸಬೇಕು. ಅದಕ್ಕೆ ವೇದಿಕೆಯಲ್ಲಿ ಆಸೀನರಾಗಿರುವ ಶಾಸಕ ಅನ್ನದಾನಿ ರವರು ತಮ್ಮ ಪಕ್ಷದ ವರಿಷ್ಠರಿಗೆ ಒತ್ತಡ ತಂದು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.


ಮತ್ತೀಕೆರೆ ಜಯರಾಮು ರವರನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಲಾಯಿತು. ಅತಿಯಾದ ಆತ್ಮೀಯತೆ ಹಾಗೂ ಕಾರ್ಯಕ್ರಮದ ರೂವಾರಿ ಶಾಸಕ ಪುಟ್ಟರಾಜು ರವರ ಗೈರು ಹಾಜರಿ ಎದ್ದು ಕಾಣಿಸುತ್ತಿತ್ತು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಜಯರಾಮ್ ರವರು, ಸಂಘಕ್ಕೆ ನನ್ನ ಪಾತ್ರ ಕೇವಲ ಪೂಜಾರಿಯ ಪಾತ್ರ ಮಾತ್ರ. ಅಧಿಕಾರಸ್ಥ ಜನಪ್ರತಿನಿಧಿಗಳ ಪಾತ್ರ ಬಹಳ ದೊಡ್ಡದಿದೆ. ನಾನು ಮೂಲತಃ ಚನ್ನಪಟ್ಟಣ ತಾಲ್ಲೂಕಿನವನಾಗಿದ್ದರೂ ನನ್ನ ಕರ್ಮಭೂಮಿ ಮಂಡ್ಯ ಜಿಲ್ಲೆಯೇ ಆಗಿದೆ. ನಾನು ಆರಂಭಿಸಿರುವ 'ಆರಂಭ' ಪತ್ರಿಕೆಯನ್ನು ವಿಸ್ತರಿಸಿ ಮಂಡ್ಯ ಜಿಲ್ಲೆಯನ್ನೇ ಕೇಂದ್ರಸ್ಥಾನವನ್ನಾಗಿ ಮಾಡಿಕೊಳ್ಳುತ್ತೇನೆ. ನಿಮ್ಮೆಲ್ಲರ ಅಭಿಮಾನ ಮುಂದೆಯೂ ಇರಲಿ ಎಂದು ಮನವಿ ಮಾಡಿದರು. ಅಮರಾವತಿ ಚಂದ್ರಶೇಖರ ಸೇರಿದಂತೆ ಹಲವಾರು ಗಣ್ಯರು ಜಯರಾಮು ರವರನ್ನು ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ರಾಜ್ಯ ಪದಾಧಿಕಾರಿಗಳು, ಮಂಡ್ಯ ಜಿಲ್ಲೆಯ ಪದಾಧಿಕಾರಿಗಳು, ಜನಪ್ರತಿನಿಧಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಂಡ್ಯ, ರಾಮನಗರ, ಮೈಸೂರು, ಹಾಸನ ಮತ್ತು ಮಡಿಕೇರಿ ಜಿಲ್ಲೆಯ ಹಲವಾರು ಪತ್ರಕರ್ತರು ಸಹ ಅಭಿನಂಧನೆ ಸಲ್ಲಿಸಿದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in karnataka »

ಅರ್ಹತೆ ಮೇರೆಗೆ ಮತ್ತೀಕೆರೆ ಜಯರಾಮ ರವರನ್ನು ಮೇಲ್ಮನೆಗೆ ಕಳುಹಿಸಲು ಸರ್ವಪ್ರಯತ್ನ. ಶಾಸಕ ಅನ್ನದಾನಿ
ಅರ್ಹತೆ ಮೇರೆಗೆ ಮತ್ತೀಕೆರೆ ಜಯರಾಮ ರವರನ್ನು ಮೇಲ್ಮನೆಗೆ ಕಳುಹಿಸಲು ಸರ್ವಪ್ರಯತ್ನ. ಶಾಸಕ ಅನ್ನದಾನಿ

ಮಂಡ್ಯ: 06/2022. ಭಾನುವಾರ. ಮೇಲ್ಮನೆ ಸದಸ್ಯರನ್ನಾಗಿ ನೇಮಕ ಮಾಡಲು ಯಾರು ಹಣ ತೆಗೆದುಕೊಳ್ಳುತ್ತಾರೋ ನನಗೆ ಗೊತ್ತಿಲ್ಲ. ಆದರೆ ಮುಂದಿನ ದಿನಗಳಲ್

ನವೆಂಬರ್‌ 11 ರಂದು ಮೊದಲ ರೈಲು ಕೇವಲ 15 ಸಾವಿರ ರೂಪಾಯಿಗಳಲ್ಲಿ 8 ದಿನಗಳ ಕಾಶಿ ದರ್ಶನ ಪ್ಯಾಕೇಜ್‌ ಟೂರ್‌
ನವೆಂಬರ್‌ 11 ರಂದು ಮೊದಲ ರೈಲು ಕೇವಲ 15 ಸಾವಿರ ರೂಪಾಯಿಗಳಲ್ಲಿ 8 ದಿನಗಳ ಕಾಶಿ ದರ್ಶನ ಪ್ಯಾಕೇಜ್‌ ಟೂರ್‌

ಬೆಂಗಳೂರು: ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆ ಕರ್ನಾಟಕ – ಭಾರತ್‌ ಗೌರವ್‌ ಕಾಶಿ ದರ್ಶನ ಪ್ಯಾಕೇಜ್‌ ಟೂರ್‌ ಗೆ ಬುಕ್

ಆಧಾರ್ ನೋಂದಣಿಗಾಗಿ ಭಾನುವಾರವೂ ಕೆಲಸ ನಿರ್ವಹಿಸಲಿವೆ ಅಟಲ್ ಜೀ ಕೇಂದ್ರಗಳು
ಆಧಾರ್ ನೋಂದಣಿಗಾಗಿ ಭಾನುವಾರವೂ ಕೆಲಸ ನಿರ್ವಹಿಸಲಿವೆ ಅಟಲ್ ಜೀ ಕೇಂದ್ರಗಳು

ಕರ್ನಾಟಕ ಸರ್ಕಾರದ ನಿರ್ದೇಶನಾಲಯ ಅಟಲ್ ಜೀ ಜನಸ್ನೇಹಿ ಕೇಂದ್ರ ಬೆಂಗಳೂರು ರವರು ರಾಜ್ಯದ ಎಲ್ಲಾ ತಾಲೂಕು ಕಚೇರಿಗಳಲ್ಲಿನ ಅಟಲ್ ಜೀ ಜನಸ್ನೇಹಿ ಕೇಂದ್ರ ಗಳಲ್ಲಿ ಪ್ರತಿ ಭಾನುವಾರಗಳಂದು ಆಧಾರ್ ನೋಂದಣಿ ಕಾ

ಪೃಕೃತಿ ಚಿಕಿತ್ಸೆ ಪಡೆಯಲು ಬೆಂಗಳೂರಿಗೆ ಬಂದ ಇಂಗ್ಲೆಂಡ್ ರಾಣಿ ಕ್ಯಾಮಿಲ್ಲಾ
ಪೃಕೃತಿ ಚಿಕಿತ್ಸೆ ಪಡೆಯಲು ಬೆಂಗಳೂರಿಗೆ ಬಂದ ಇಂಗ್ಲೆಂಡ್ ರಾಣಿ ಕ್ಯಾಮಿಲ್ಲಾ

ಬೆಂಗಳೂರು, ಅ.24: ಪೃಕೃತಿ ಚಿಕಿತ್ಸೆ ಪಡೆಯಲು ಇಂಗ್ಲೆಂಡ್ ರಾಣಿ(ಕ್ವೀನ್ ಕಾನ್ಸಾರ್ಟ್) ಕ್ಯಾಮಿಲ್ಲಾ ಅವರು ಬೆಂಗಳೂರಿಗೆ ಆಗಮಿಸಿದ್ದಾರೆ.

<

ರಾಜಕೀಯಕ್ಕೆ ಮರಳುವ ಬಗ್ಗೆ ಸೂಕ್ತ ಸಮಯದಲ್ಲಿ ತಿಳಿಸುವೆ: ಮಾಜಿ ಸಚಿವ ಜನಾರ್ದನರೆಡ್ಡಿ
ರಾಜಕೀಯಕ್ಕೆ ಮರಳುವ ಬಗ್ಗೆ ಸೂಕ್ತ ಸಮಯದಲ್ಲಿ ತಿಳಿಸುವೆ: ಮಾಜಿ ಸಚಿವ ಜನಾರ್ದನರೆಡ್ಡಿ

ಬಳ್ಳಾರಿ; ಅ.24: ರಾಜಕೀಯಕ್ಕೆ ವಾಪಸ್ ಆಗುವ ಮತ್ತು 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತಂತೆ ಈಗಲೇ ನಾನೇನೂ ಹೇಳಲಾ

ಚನ್ನಪಟ್ಟಣದ ಗೊಂಬೆಗೆ ಜಾಗತಿಕ ಮಾನ್ಯತೆಗೆ ಮೈಸೂರು ರಾಜವಂಶಸ್ಥೆ ತ್ರಿಷಿಕಾ ಕುಮಾರಿ ಸಂಶೋಧನೆ
ಚನ್ನಪಟ್ಟಣದ ಗೊಂಬೆಗೆ ಜಾಗತಿಕ ಮಾನ್ಯತೆಗೆ ಮೈಸೂರು ರಾಜವಂಶಸ್ಥೆ ತ್ರಿಷಿಕಾ ಕುಮಾರಿ ಸಂಶೋಧನೆ

ಮೈಸೂರು:ಅಕ್ಟೋಬರ್‌ 20: ಇತಿಹಾಸ ಹಾಗೂ ಪುರಾಣ ಪ್ರಸಿದ್ಧ, ಸಾಂಪ್ರದಾಯಿಕ ಚನ್ನಪಟ್ಟಣದ ಗೊಂಬೆಗಳಿಗೆ ಜಾಗತಿಕ ಮಟ್ಟದಲ್ಲಿ ಮಾನ್ಯತೆ ದೊರೆಯುವಂತೆ ಮಾಡುವುದು ನನ್ನ ಕನಸಾಗಿದೆ. ಅದಕ್ಕಾಗಿ ಸಂಶೋಧನೆ ನಡೆಸ

ಒಕ್ಕಲಿಗರು ಕುರಿಗಳಲ್ಲ, ನಾಡನ್ನಾಳಿದ ಸಿಂಹಗಳು : ಡಾ. ನಿರ್ಮಲಾನಂದನಾಥ ಸ್ವಾಮೀಜಿ
ಒಕ್ಕಲಿಗರು ಕುರಿಗಳಲ್ಲ, ನಾಡನ್ನಾಳಿದ ಸಿಂಹಗಳು : ಡಾ. ನಿರ್ಮಲಾನಂದನಾಥ ಸ್ವಾಮೀಜಿ

ಮೈಸೂರು: ಇತಿಹಾಸ ಮತ್ತು ಪುರಾಣಗಳನ್ನೇ ತೆಗೆದುಕೊಳ್ಳಿ, ತಲಕಾಡು ಗಂಗರು– ನಾವುಗಳೆಲ್ಲರೂ ಒಂದೇ. ಉಪ ಪಂಗಡಗಳ ಭೇದ ತೊರೆದು, ಆಡಳಿತದಲ್ಲಿ ಮುಂದೆ

ನಾಡದೇವಿ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಜಂಬೂ ಸವಾರಿಗೆ ಚಾಲನೆ ನೀಡಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ
ನಾಡದೇವಿ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಜಂಬೂ ಸವಾರಿಗೆ ಚಾಲನೆ ನೀಡಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ

ಮೈಸೂರು, ಅ.೫: ನಾಡಹಬ್ಬ ವಿಶ್ವ ವಿಖ್ಯಾತ  ಮೈಸೂರು ದಸರಾ ಮಹೋತ್ಸವವು ಬುಧವಾರ ವಿಜೃಂಭಣೆಯಿಂದ ನೆರವೇರಿದ್ದು  ಸಮಯ ಸಂಜೆ 05:37ಕ್ಕೆ

ನಾಡ ಅಧಿದೇವತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ನಾಡಹಬ್ಬ ದಸರಾ 2022ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ರವರಿಂದ ವಿದ್ಯುಕ್ತ ಚಾಲನೆ
ನಾಡ ಅಧಿದೇವತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ನಾಡಹಬ್ಬ ದಸರಾ 2022ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ರವರಿಂದ ವಿದ್ಯುಕ್ತ ಚಾಲನೆ

ಮೈಸೂರು: ರಾಷ್ಟ್ರಪತಿ ದ್ರೌಪದಿ ಮುರ್ಮು ಚಾಮುಂಡಿ ಬೆಟ್ಟದಲ್ಲಿ ನಾಡ ಅಧಿದೇವತೆ ಚಾಮುಂಡೇಶ್ವರಿಯ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ನ

ಮಂಗಳೂರಿನಲ್ಲಿ ನಾಪತ್ತೆಯಾದ ಮೂವರು ವಿದ್ಯಾರ್ಥಿನಿಯರು ಚೆನ್ನೈ ನಲ್ಲಿ ಪತ್ತೆ- ಇವರ ನಾಪತ್ತೆಗೆ ಕಾರಣ ಗೊತ್ತೇ!
ಮಂಗಳೂರಿನಲ್ಲಿ ನಾಪತ್ತೆಯಾದ ಮೂವರು ವಿದ್ಯಾರ್ಥಿನಿಯರು ಚೆನ್ನೈ ನಲ್ಲಿ ಪತ್ತೆ- ಇವರ ನಾಪತ್ತೆಗೆ ಕಾರಣ ಗೊತ್ತೇ!

ಮಂಗಳೂರು:ಮಂಗಳೂರಿನಲ್ಲಿ ಸೆಪ್ಟೆಂಬರ್ 21 ರಂದು ನಾಪತ್ತೆಯಾಗಿದ್ದ ಮೂವರು ಕಾಲೇಜು ವಿದ್ಯಾರ್ಥಿನಿಯರು ಚೆನ್ನೈ ನಲ್ಲಿ ಪತ್ತೆಯಾಗಿದ್ದಾರೆ. ಮಂಗಳೂರಿನ ಮೇರಿ ಹಿಲ್ ನ ವಿಕಾಸ ಕಾಲೇಜಿನ ಮೂವರು ಪಿ ಯು ಸಿ ವಿದ್ಯಾರ್ಥಿನಿಯರಾದ ಯಶಸ್ವಿನಿ, ದಕ್ಷತಾ

Top Stories »  


Top ↑