Tel: 7676775624 | Mail: info@yellowandred.in

Language: EN KAN

    Follow us :


ಅಪಾರ ಮಹಿಳೆಯರು ಉತ್ಸಾಹದಿಂದ ಭಾಗವಹಿಸಿದ ಮಿಸೆಸ್ ಇಂಡಿಯಾ ಕರ್ನಾಟಕ 2018ರ ಆಡಿಷನ್

Posted date: 04 Feb, 2018

Powered by:     Yellow and Red

ಅಪಾರ ಮಹಿಳೆಯರು ಉತ್ಸಾಹದಿಂದ ಭಾಗವಹಿಸಿದ ಮಿಸೆಸ್ ಇಂಡಿಯಾ ಕರ್ನಾಟಕ 2018ರ ಆಡಿಷನ್

ಬೆಂಗಳೂರು : ಮಿಸೆಸ್ ಇಂಡಿಯಾ-ಕರ್ನಾಟಕ 2018 ರ ಆಡಿಷನ್ ಚಾನ್ಸೆರಿ ಪೆವಿಲಿಯನ್‍ನಲ್ಲಿ ಶನಿವಾರ ಅದ್ಧೂರಿಯಾಗಿ ಪ್ರಾರಂಭವಾಯಿತು. ರಾಜ್ಯದ ಮೂಲೆ ಮೂಲೆಯಿಂದ ಮಹಿಳೆಯರು ಅಪಾರ ಸಂಖ್ಯೆಯಲ್ಲಿ ನೆರೆದಿದ್ದು ಅವರ ಸಾಮಥ್ರ್ಯ, ಪ್ರತಿಭೆ ಹಾಗೂ ಸೌಂದರ್ಯದ ಮೂಲಕ ತೀವ್ರ ಸ್ಪರ್ಧೆ ಒಡ್ಡಿದರು. ಭಾಗವಹಿಸಿದ ಎಲ್ಲರಿಗೂ ಸಂಘಟಕರು ಆತ್ಮೀಯ ಸ್ವಾಗತ ನೀಡಿ ಸ್ಪರ್ಧೆಯ ನೀತಿ ನಿಯಮಗಳನ್ನು ವಿವರಿಸಿದರು. ಆಡಿಷನ್ ಪ್ರಾರಂಭವಾದ ನಂತರ ಸ್ಪರ್ಧಿಗಳಿಗೆ ಕ್ಯಾಟ್ ವಾಕ್ ನಡೆಸಿ ತಮ್ಮ ಪರಿಚಯ ಹೇಳಿಕೊಳ್ಳಲು ಸೂಚಿಸಲಾಯಿತು ಮತ್ತು ನಂತರ ತೀರ್ಪುಗಾರರ ತಂಡಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು. 22-40, 41-60 ಮತ್ತು 60 ವರ್ಷ ದಾಟಿದ ವಯೋಮಾನದ ವಿಭಾಗಗಳಲ್ಲಿ ಮಹಿಳೆಯರು ಭಾಗವಹಿಸಿದ್ದರು. ಕೆಲವರು ತಮ್ಮ ಪದವಿ ಪೂರ್ಣಗೊಳಿಸಿದ್ದರೆ ಕೆಲವರು ಗೃಹಿಣಿಯರು ಮತ್ತು ಉದ್ಯಮಿಗಳಿದ್ದರು. 

ಈ ಸಂದರ್ಭ ಕುರಿತು ಮಿಸೆಸ್ ಇಂಡಿಯಾ ಕರ್ನಾಟಕದ ಸಂಘಟಕಿ ಶ್ರೀಮತಿ ಪ್ರತಿಭಾ ಸೌಂಶಿಮಠ್(ಮಿಸೆಸ್ ಏಷ್ಯಾ ಇಂಟರ್‍ನ್ಯಾಷನಲ್ ಮತ್ತು ಮಿಸೆಸ್ ಇಂಡಿಯಾ 2015; ಮಿಸೆಸ್ ಇಂಡಿಯಾ-ಕರ್ನಾಟಕ ನಿರ್ದೇಶಕಿ ಮತ್ತು ಮಿಸೆಸ್ ಇಂಡಿಯಾ ಪ್ರಾದೇಶಿಕ ನಿರ್ದೇಶಕಿ), ಮಿಸೆಸ್ ಇಂಡಿಯಾ-ಕರ್ನಾಟಕ ವೈವಿಧ್ಯತೆಯಲ್ಲಿ ಸೌಂದರ್ಯವನ್ನು ಸಂಭ್ರಮಿಸುವ ಏಕೈಕ ಸೌಂದರ್ಯ ಸ್ಪರ್ಧೆಯಾಗಿದೆ ಎಂದರು. 

`ಪ್ರತಿ ಸ್ತ್ರೀಯೂ ಸುಂದರವಾಗಿರುತ್ತಾಳೆ ಮತ್ತು ಅವರ ಎತ್ತರ, ತೂಕ, ವಯಸ್ಸು ಅಥವಾ ಬಣ್ಣವನ್ನು ಮೀರಿಯೂ ಸೌಂದರ್ಯವನ್ನು ಭಾವಿಸಬೇಕು. ನಮ್ಮ ಸೌಂದರ್ಯಸ್ಪರ್ಧೆ ಕರ್ನಾಟಕದ ಪ್ರತಿಭಾವಂತ ಮತ್ತು ಸುಂದರ ಸ್ತ್ರೀಯರನ್ನು ಮುಂಚೂಣಿಗೆ ತರುತ್ತದೆ' ಎಂದು ಶ್ರೀಮತಿ ಸೌಂಶಿಮಠ್ ಹೇಳಿದರು. ಅವರು ಅಂತಾರಾಷ್ಟ್ರೀಯ ಶೀರ್ಷಿಕೆ ಗೆದ್ದ ಮೊದಲ ಕನ್ನಡಿಗ ಮಹಿಳೆಯಾಗಿದ್ದಾರೆ. ಅವರು ವಿವಿಧ ಹಿನ್ನೆಲೆಯ ಹೆಚ್ಚು ಮಹಿಳೆಯರನ್ನು ಮುಂಚೂಣಿಗೆ ತರಲು ಕಾರ್ಯಕ್ರಮ ಆಯೋಜಿಸುತ್ತಿರುವುದಾಗಿ ಹೇಳಿದರು. ಈ ಸೌಂದರ್ಯಸ್ಪರ್ಧೆಯ ಆಯೋಜಕರು ಮಹಿಳೆಯರಲ್ಲಿ ವಿಶ್ವಾಸ ಮೂಡಿಸುವ ಮೂಲಕ ಅವರ ಜೀವನ ಬದಲಾಯಿಸಲು ಮತ್ತು ಅವರ ಸಾಮಥ್ರ್ಯ ಸಾಬೀತುಪಡಿಸಿಕೊಳ್ಳಲು ನೆರವಾಗುತ್ತದೆ.

ಈ ಸಲ ಮಿಸೆಸ್ ಇಂಡಿಯಾ-ಕರ್ನಾಟಕ ಕೆಲ ಉಪಕ್ರಮಗಳನ್ನು ಯೋಜಿಸಿದೆ; ಕರ್ನಾಟಕದ ವಿವಿಧ ಕ್ಷೇತ್ರದ ಮಹಿಳಾ ಸಾಧಕರನ್ನು ಸನ್ಮಾನಿಸುವುದು; ಇವರಲ್ಲಿ ಕೆಲವರು ಈಗಾಗಲೇ ಪ್ರಖ್ಯಾತರಾಗಿರಬಹುದು, ಕೆಲವರು ಅಜ್ಞಾತರಾಗಿರಬಹುದು. `ಕರ್ನಾಟಕದಲ್ಲಿ ನಾನು ಈ ಉಪಕ್ರಮವನ್ನು ಮಿಸೆಸ್ ಏಷ್ಯಾ ಶೀರ್ಷಿಕೆ ಗೆದ್ದ ನಂತರ ಮಹಿಳೆಯರು ಬೆಳವಣಿಗೆ ಕಾಣಲು ನೆರವಾಗುವ ಉದ್ದೇಶದಿಂದ ಪ್ರಾರಂಭಿಸಿದೆ. ಈ ಮಹಿಳೆಯರು ಇತರರಿಗೆ ಸ್ಫೂರ್ತಿಯಾಗಬೇಕು ಮತ್ತು ಅವರ ಕಠಿಣ ಪರಿಶ್ರಮ ಗಮನಿಸಲ್ಪಡಬೇಕು ಮತ್ತು ಮಾನ್ಯತೆ ಪಡೆಯಬೇಕು' ಎಂದು ಶ್ರೀಮತಿ ಪ್ರತಿಭಾ ಹೇಳಿದರು. 

 

ಮಿಸೆಸ್ ಇಂಡಿಯಾ-ಕರ್ನಾಟಕ ವಿವಾಹಿತ ಮಹಿಳೆಯರಿಗೆ ತಮ್ಮ ಸೌಂದರ್ಯ, ಪ್ರತಿಭೆ, ಗ್ಲಾಮರ್ ಮತ್ತು ಸಂಸ್ಕøತಿಯನ್ನು ಪ್ರದರ್ಶಿಸಲು ದೇಶದ ಅತ್ಯಂತ ದೊಡ್ಡ ವೇದಿಕೆಯಾಗಿದೆ. ಮಿಸೆಸ್ ಇಂಡಿಯಾ ಮಾಡೆಲ್‍ಗಳನ್ನು ಎದುರು ನೋಡುತ್ತಿಲ್ಲ. ಬದಲಾಗಿ ಇದು ರೋಲ್ ಮಾಡೆಲ್‍ಗಳನ್ನು ಸೃಷ್ಟಿಸಲು ಸ್ಫೂರ್ತಿದಾಯಕ ಕಾರ್ಯಕ್ರಮವಾಗಿದೆ. ರಾಜ್ಯಮಟ್ಟದ ಗ್ರಾಂಡ್ ಫೈನಲ್ ಫೆಬ್ರವರಿ 22-24ರಂದು ಯಲಹಂಕದ ರಾಯಲ್ ಆರ್ಕಿಡ್ ರೆಸಾರ್ಟ್ ಅಂಡ್ ಕನ್ವೆನ್ಷನ್ ಸೆಂಟರ್‍ನಲ್ಲಿ ನಡೆಯಲಿದೆ. ಫೈನಲ್ ಫೆಬ್ರವರಿ 24ರಂದು ನಡೆಯಲಿದೆ. ಒಮ್ಮೆ ಆಯ್ಕೆಯಾದ ನಂತರ ಮಿಸೆಸ್ ಇಂಡಿಯಾದಲ್ಲಿ ಭಾಗವಹಿಸುತ್ತಾರೆ ಮತ್ತು ನಂತರ ಮಿಸೆಸ್ ಏಷ್ಯಾ, ಮಿಸೆಸ್ ವಲ್ರ್ಡ್ ಮತ್ತು ಮಿಸೆಸ್ ಪ್ಲಾನೆಟ್‍ನಲ್ಲಿ ಭಾಗವಹಿಸುವ ಅವಕಾಶ ಲಭಿಸುತ್ತದೆ. 

 

ಅಂತಿಮವಾಗಿ 132 ಮಂದಿಯಲ್ಲಿ 32 ಮಹಿಳೆಯರು ರಾಜ್ಯಮಟ್ಟದ ಫೈನಲ್ಸ್‍ನಲ್ಲಿ ಭಾಗವಹಿಸಲು ಆಯ್ಕೆಯಾದರು. 

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in karnataka »

ಶ್ರೀರಂಗ ಯೋಜನೆ ವರ್ಷದಲ್ಲಿ ಪೂರ್ಣ. ಗುಣಮಟ್ಟಕ್ಕೆ ಆದ್ಯತೆ ನೀಡಲು ಡಿಸಿಎಂ ಸೂಚನೆ
ಶ್ರೀರಂಗ ಯೋಜನೆ ವರ್ಷದಲ್ಲಿ ಪೂರ್ಣ. ಗುಣಮಟ್ಟಕ್ಕೆ ಆದ್ಯತೆ ನೀಡಲು ಡಿಸಿಎಂ ಸೂಚನೆ

ಬೆಂಗಳೂರು:/ರಾಮನಗರ:ಆ/26/20/ಬುಧವಾರ. ಶ್ರೀರಂಗ ಏತ ನೀರಾವರಿ, ಸತ್ತೇಗಾಲ ಕುಡಿಯುವ ನೀರು ಯೋಜನೆ ಸೇರಿದಂತೆ ರಾಮನಗರ ಜಿಲ್ಲೆಯಲ್ಲಿ ನಡೆಯುತ್ತಿರ

ಚರ್ಮ ಕುಶಲ ಕರ್ಮಿಗಳಿಗೆ ವಿಶೇಷ ಪ್ಯಾಕೇಜ್ ಘೋಷಿಸಿದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ
ಚರ್ಮ ಕುಶಲ ಕರ್ಮಿಗಳಿಗೆ ವಿಶೇಷ ಪ್ಯಾಕೇಜ್ ಘೋಷಿಸಿದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ

ಬೆಂಗಳೂರು:ಮೇ/೦೮/೨೦/ಶುಕ್ರವಾರ. ಕೊರೊನಾ (ಕೋವಿಡ್-೧೯) ರ ಪರಿಣಾಮ ಹಾಗೂ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ರಸ್ತೆ ಬದಿಯಲ್ಲಿ ಚರ್ಮ

ಕೊರೊನಾ (ಕೋವಿಡ್-೧೯) ದಿಂದಾಗಿ ನಷ್ಟ ಅನುಭವಿಸಿದವರಿಗೆ ೧,೬೧೦ ಕೋಟಿ ರೂ ಪರಿಹಾರ ಘೋಷಿಸಿದ ಸರ್ಕಾರ
ಕೊರೊನಾ (ಕೋವಿಡ್-೧೯) ದಿಂದಾಗಿ ನಷ್ಟ ಅನುಭವಿಸಿದವರಿಗೆ ೧,೬೧೦ ಕೋಟಿ ರೂ ಪರಿಹಾರ ಘೋಷಿಸಿದ ಸರ್ಕಾರ

ಕಳೆದ ಒಂದೂವರೆ ತಿಂಗಳಿನಿಂದ ಲಾಕ್ ಡೌನ್ ನ ಪರಿಣಾಮವಾಗಿ ವಿವಿಧ ನಿರ್ಬಂಧಗಳನ್ನು ಹೇರಿರುವುದರಿಂದ ಎಲ್ಲಾ ವರ್ಗದ ಜನರು ಆರ್ಥಿಕವಾಗಿ ಸಂಕಷ್ಟವನ್ನು ಅನುಭವಿಸುತ್ತಾರೆ.


ಲಾಕ

ವಲಸೆ ಕಾರ್ಮಿಕರಿಗೆ ಉಚಿತ ಬಸ್ ಸೌಲಭ್ಯ: ಇನ್ನೂ ಎರಡು ದಿನ ವಿಸ್ತರಿಸಿದ ಮುಖ್ಯಮಂತ್ರಿ
ವಲಸೆ ಕಾರ್ಮಿಕರಿಗೆ ಉಚಿತ ಬಸ್ ಸೌಲಭ್ಯ: ಇನ್ನೂ ಎರಡು ದಿನ ವಿಸ್ತರಿಸಿದ ಮುಖ್ಯಮಂತ್ರಿ

ಬೆಂಗಳೂರು:ಮೇ/೦೪/೨೦/ಸೋಮವಾರ. ವಲಸೆ ಕಾರ್ಮಿಕರಿಗೆ ಪ್ರಕಟಿಸಿರುವ ಉಚಿತ ಬಸ್ ಪ್ರಯಾಣ ಸೌಲಭ್ಯ ಸುಗಮವಾಗಿ ನಡೆಯುತ್ತಿದ್ದು, ಅದನ್ನು ಇನ್ನು ಎರಡು

ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಿಂದ ಆನ್‌ಲೈನ್ ತರಗತಿಗಳು ಪ್ರಾರಂಭ ಡಾ ವಿಜಯ ಪ್ರಕಾಶ
ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಿಂದ ಆನ್‌ಲೈನ್ ತರಗತಿಗಳು ಪ್ರಾರಂಭ ಡಾ ವಿಜಯ ಪ್ರಕಾಶ

ರಾಮನಗರ:ಮೇ/೦೩/೨೦/ಭಾನುವಾರ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ೨೦೧೯-೨೦ ನೇ ಶೈಕ್ಷಣಿಕ ಸಾಲಿನ ಜುಲೈ ಮತ್ತು ಜನವರಿ ಆವೃತ್ತಿಯಲ್ಲಿ

ಮೃತ ಹನುಮಂತು ಕುಟುಂಬಕ್ಕೆ ೦೫ ಲಕ್ಷ ರೂ ಚೆಕ್ ನೀಡಿದ ಎಚ್ಡಿಕೆ
ಮೃತ ಹನುಮಂತು ಕುಟುಂಬಕ್ಕೆ ೦೫ ಲಕ್ಷ ರೂ ಚೆಕ್ ನೀಡಿದ ಎಚ್ಡಿಕೆ

ಕನಕಪುರ:ಏ/೨೨/೨೦/ಬುಧವಾರ. ನೆನ್ನೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ರಾಮನಗರ ಜಿಲ್ಲಾ ಪಬ್ಲಿಕ್ ಟಿವಿ ವರದಿಗಾರ ಹನುಮಂತು ಅವರ ಕುಟುಂಬದ ಸದಸ್ಯ

ಕಾರಿನಲ್ಲಿ ಮದ್ಯ ಸಾಗಣೆ ಚನ್ನಪಟ್ಟಣ ಮಾಕಳಿ ಗ್ರಾಮದ ಮೂವರ ಬಂಧನ
ಕಾರಿನಲ್ಲಿ ಮದ್ಯ ಸಾಗಣೆ ಚನ್ನಪಟ್ಟಣ ಮಾಕಳಿ ಗ್ರಾಮದ ಮೂವರ ಬಂಧನ

ನಾಗಮಂಗಲ:೨೨/೨೦/ಬುಧವಾರ. ಚಾಮರಾಜನಗರ- ಜೇವರ್ಗಿ ರಾಷ್ಟ್ರೀಯ ಹೆದ್ದಾರಿ ನಾಗಮಂಗಲ ಪಟ್ಟಣದ ಗ್ರಾಮಾಂತರ ಪೊಲೀಸ್ ಠಾಣೆ ಎದುರಿನ ಚೆಕ್ ಪೋಸ್ಟ್ ನಲ್

ಕಾರ್ಮಿಕರ ವೇತನ ಕಡಿತಕ್ಕೆ ಅವಕಾಶ ನೀಡುವುದಿಲ್ಲ : ಕಾರ್ಮಿಕ ಸಚಿವ ಅರೆಬೈಲ್ ಶಿವರಾಮ ಹೆಬ್ಬಾರ್
ಕಾರ್ಮಿಕರ ವೇತನ ಕಡಿತಕ್ಕೆ ಅವಕಾಶ ನೀಡುವುದಿಲ್ಲ : ಕಾರ್ಮಿಕ ಸಚಿವ ಅರೆಬೈಲ್ ಶಿವರಾಮ ಹೆಬ್ಬಾರ್

ಬೆಂಗಳೂರು:ಏ/೧೯/೨೦/ಭಾನುವಾರ. ಕಾರ್ಮಿಕರದ್ದಾಗಲೀ ಅಥವಾ ಇತರೆ ಯಾವುದೇ ಕಾರ್ಮಿಕರದ್ದಾಗಲೀ ವೇತನ ಕಡಿತಕ್ಕೆ ರಾಜ್ಯ ಸರ್ಕಾರ ಅವಕಾಶ ನೀಡುವುದಿಲ್ಲ

ರಾಜ್ಯದಲ್ಲಿನ ಕೊರೊನಾ‌ ಸ್ಥಿತಿಗತಿಯ ಕುರಿತಂತೆ ಸಚಿವ ಸುರೇಶ್ ಕುಮಾರ್‌‌ ಮಾಹಿತಿ
ರಾಜ್ಯದಲ್ಲಿನ ಕೊರೊನಾ‌ ಸ್ಥಿತಿಗತಿಯ ಕುರಿತಂತೆ ಸಚಿವ ಸುರೇಶ್ ಕುಮಾರ್‌‌ ಮಾಹಿತಿ

ಇದುವರೆಗೆ ರಾಜ್ಯದಲ್ಲಿ ಒಟ್ಟಾರೆ ೩೫೯ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಇಂದು ಸಂಜೆ ೦೫:೦೦ ರ ಮಾಹಿತಿಯಂತೆ ೧೩ ಜನ ಸಾವನ್ನಪ್ಪಿದ್ದು, ೮೮ ಮಂದಿ ಗುಣಮುಖರಾಗಿ ಹಿಂತಿರುಗಿದ್ದಾರೆಂದು‌ ಸಚಿವರು ವಿವರ

ಹತ್ತನೇ ತರಗತಿ ಹೊರತುಪಡಿಸಿ ಒಂಭತ್ತನೆಯ ತರಗತಿಯ ತನಕ ಎಲ್ಲರೂ ಪಾಸು ಸುರೇಶ್ ಕುಮಾರ್
ಹತ್ತನೇ ತರಗತಿ ಹೊರತುಪಡಿಸಿ ಒಂಭತ್ತನೆಯ ತರಗತಿಯ ತನಕ ಎಲ್ಲರೂ ಪಾಸು ಸುರೇಶ್ ಕುಮಾರ್

ಬೆಂಗಳೂರು/ರಾಮನಗರ/೦೨/೨೦/ಗುರುವಾರ. ೨೦೧೯/೨೦ ನೇ ಶೈಕ್ಷಣಿಕ ಸಾಲಿನ ೭, ೮ ಮತ್ತು ೯ ನೇ ತರಗತಿಯ ವಿದ್ಯಾರ್ಥಿಗಳನ್ನು ಪರೀಕ್ಷೆ ನಡೆಸದೇ ಉತ್ತೀರ್

Top Stories »  


Top ↑