ತಾಳೆಯೋಲೆ ೨೬೯: ಭಾರತೀಯ ಸಂಪ್ರದಾಯದ ಪ್ರಕಾರ ಹೆಂಡತಿ ಎಂತಹವಳು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ
*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.
ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*
ಭಾರತೀಯ ಸಂಪ್ರದಾಯದ ಪ್ರಕಾರ ಹೆಂಡತಿ ಎಂತಹವಳು ?
ಪರಮೇಶ್ವರನು ಅರ್ಧನಾರೀಶ್ವರನಾಗಿದ್ದು, ಹೆಂಡತಿಯ ಸ್ಥಾನವನ್ನು ತನ್ನ ಸಮವಾದ ಸ್ಥಾನವಾಗಿ ಪುರುಷನು ಗುರುತಿಸುವ ಹಾಗೆ ಇರುವನು. ಗೌರಿ ಶಂಕರ, ಉಮಾ ಮಹೇಶ್ವರ, ಲಕ್ಷ್ಮಿ ನಾರಾಯಣ ಇಂತಹ ಹೆಸರಗಳಲ್ಲಿಯೇ ದೇವರುಗಳು ಗುರುತಿಸಿಕೊಂಡಿರುವರು. ಇದರಿಂದ ಹೆಂಡತಿ ತನಗೆ ಸಮಾನದವಳಾಗಿರುವಳೆಂದು ಗುರುತಿಸುವುದು ಗಂಡನಿಗೆ ಅವಶ್ಯಕವೆಂದು ನಮ್ಮ ಸಂಪ್ರದಾಯ ತಿಳಿಸುತ್ತದೆ.
ಆದ್ದರಿಂದ ಒಬ್ಬ ವ್ಯಕ್ತಿ ತನ್ನ ಹೆಂಡತಿಯಾಗುವವಳನ್ನು ಆಚರಿಸಿಕೊಳ್ಳಬೇಕಾದರೆ ತಕ್ಕ ಎಚ್ವರಿಕೆಯನ್ನು ತೆಗೆದುಕೊಳ್ಳಬೇಕು. ತಾನು ವಿವಾಹವನ್ನು ಮಾಡಿಕೊಳ್ಳುವ ಸ್ತ್ರೀಯು ತನ್ನ ಆರ್ಥಿಕ ಹಾಗೂ ಇತರೆ ಅಂಶಗಳ ಬಗ್ಗೆ ಪೂರ್ತಿಯಾಗಿ ಅಂಗೀಕೃತವಾಗಿರಬೇಕು. ತನ್ನ ಆರ್ಥಿಕ ಸ್ಥಿತಿ ಗತಿಗೆ ತಕ್ಕ ಹಾಗೆ ನಡೆದುಕೊಳ್ಳುವ ಸ್ತ್ರೀ ಯನ್ನು ಮಾತ್ರವೇ ಆಕೆಯ ಅಂಗೀಕಾರದೊಂದಿಗೆ ಮದುವೆಯಾಗಬೇಕು. ತಕ್ಕದಲ್ಲದ ಸ್ತ್ರೀ ಯನ್ನು ಮದುವೆ ಮಾಡಿಕೊಂಡರೆ ಪುರುಷನು ಜೀವನದಲ್ಲಿ ಅನೇಕ ಕಷ್ಟಗಳಿಗೆ ಗುರಿಯಾಗದೆ ತಪ್ಪದು.
ತನ್ನ ಹೆಂಡತಿ ತನ್ನ ಬಂಧು-ಮಿತ್ರರನ್ನು ಆದರಿಸುವವಳಾಗಿರಬೇಕು. ಇಲ್ಲದಿದ್ದರೆ ತನ್ನ ಬಾಂಧವ್ಯಗಳಿಗೆ ಹಾನಿ ಉಂಟು ಮಾಡುವಳು. ಮನೆಯಲ್ಲಿ ಕಿಚ್ಚನ್ನು (ಜಗಳ) ಇಡುವಳು. ಕುಟುಂಬದ ಗೌರವವನ್ನು ಕಾಪಾಡುವುದರಲ್ಲಿ ಹೆಂಡತಿಯ ಪಾತ್ರ ಮುಖ್ಯವಾದುದು. ಅಂತಹ ಸುಗುಣವತಿಯನ್ನೇ ವಿವಾಹ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಮನೆಯ ಗೌರವವನ್ನು ಬೀದಿಗಳೆಯುವಳು. ಆದ್ದರಿಂದ ಆದರ್ಶ ಕುಟುಂಬಗಳಲ್ಲಿನ ಸ್ತ್ರೀಯನ್ನೇ ವಿವಾಹವಾಗುವುದು ಕ್ಷೇಮಕರ.
ಎಷ್ಟು ಧನವಿದ್ದರೂ, ಗುಣವಿಲ್ಲದ ಹೆಂಡತಿ ಹೊಂದಿದವನ ಜೀವನ ನರಕಪ್ರಾಯವಾಗುವುದು. ತಕ್ಕ ಹೆಂಡತಿ ಹೊಂದಿರುವವನ ಕುಟುಂಬವು ಚಿಂತೆಗಳಿಲ್ಲದ ಕುಟುಂಬವಾಗಿ ಸರ್ವವಿಧ ಕ್ಷೇಮಗಳು ಉಂಟಾಗುವವು.
ಹೆಂಡತಿಗೆ ಪತಿಯೇ ದೈವವು. ಹಾಗೂ ಸರ್ವಸ್ವವು. ಆತನ ಆಜ್ಞೆಯನ್ನು ಪಾಲಿಸುವುದಕ್ಕೆ ಆಕೆ ಆದಷ್ಟು ನಗು ಮುಖದಿಂದ ಕೂಡಿರಬೇಕು. ಪತಿಗಿಂತ ಪತಿಯ ಸಂಪತ್ತಿಗೆ ಬೆಲೆ ಕೊಡುವ ಹೆಂಡತಿ ಮನೆಗೆ ಕೆಟ್ಟದ್ದನ್ನು ಬಯಸುವಳು. ಅನುಕೂಲವತಿ ಅಲ್ಲದ ಹೆಂಡತಿಯನ್ನು ಹೊಂದಿರುವವನಿಗೆ ಭಕ್ತಿ ಹಾಗೂ ವೇದಾಂತ ಜ್ಞಾನ ಅತ್ಯವಶ್ಯಕ.
*ಸಂಗ್ರಹ ಮತ್ತು ಪ್ರಚಾರ;*
*ಗೋ ರಾ ಶ್ರೀನಿವಾಸ...*
*ಮೊ:9845856139.*
Recent news in literature »

ರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪಠ್ಯಪುಸ್ತಕ ಸಮಿತಿಗೆ ಆಯ್ಕೆ
ರಾಜ್ಯ ಪಠ್ಯಪುಸ್ತಕ ಸಮಿತಿಗೆ ಮಾಗಡಿ ತಾಲೂಕಿನ ತಿಪ್ಪಸಂದ್ರ ಹೋಬಳಿ ದೊಡ್ಡಸೋಮನಹಳ್ಳಿ ಲೇಖಕರಾದ ಡಾ. ಡಿ.ಸಿರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪುಸ್ತಕ ಆಯ್ಕೆಯಾಗಿದೆ.

ಡಾ ಡಿ ಸಿ ರಾಮಚಂದ್ರ ರವರ ಸಂಪ್ರೀತಿ ರಾಮಾಯಣ ಪುಸ್ತಕವು ಶ್ರೀರಾಮನ್ನು ನೆನಪಿಸುತ್ತದೆ. ಪ್ರದೀಪ್ ಕುಮಾರ್ ಹೆಬ್ರಿ
\'ಸಂಪ್ರೀತಿ ರಾಮಾಯಣ\' ಎಂಬ ಕೃತಿಯನ್ನು ಡಾ/ಡಿ.ಸಿ. ರಾಮಚಂದ್ರ ಅವರು ಬಹಳ ಶ್ರದ್ಧೆಯಿಂದ ರಚಿಸಿದ್ದು, 13 ಅಧ್ಯಾಯಗಳಲ್ಲಿ ಆಕರ್ಷಕ ಚಂದದ ಚಿತ್ರಗಳಿಂದ ಕೂಡಿ ಸುಂದರವಾಗಿ ಮುದ್ರಣಗೊಂಡು ಓದುಗರ ಮನ ಸೆಳೆ

ಗೌಡಗೆರೆ ಕ್ಷೇತ್ರದಲ್ಲಿ ಅದ್ದೂರಿ ಲಕ್ಷ ದೀಪೋತ್ಸವ. \'ಜಗನ್ಮಾತೆಯ ವಿಶ್ವರೂಪ ದರ್ಶನ\' ಕೃತಿ ಲೋಕಾರ್ಪಣೆ
ಚನ್ನಪಟ್ಟಣ: ತಾಲೂಕಿನ ಗೌಡಗೆರೆ ಗ್ರಾಮದ ಶ್ರೀ ಚಾಮುಂಡೇಶ್ವರಿ ಬಸವಪ್ಪ ಪುಣ್ಯಕ್ಷೇತ್ರದಲ್ಲಿ ಶನಿವಾರ ಅದ್ದೂರಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಜರು

ಸೂಫಿ ಗಾಯಕ ಜನಾಬ್ ಮೊಹಮ್ಮದ್ ಗೆ ಹೆಚ್ ಎಲ್ ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ.
ಬೆಂಗಳೂರು.ನ.೨೯: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಪರಿಷತ್ತಿನ ಸಂಸ್ಥಾಪಕ, ಜಾನಪದ ಪರಿಷತ್ತಿನ ರೂವಾರಿ ನಾಡೋಜ ಎಚ್.ಎ

ಪರಿಷತ್ತಿನ ಘನತೆಗೆ ತಕ್ಕುದಾದ ವ್ಯಕ್ತಿ ಪಾರ್ವತೀಶ್ ಬಿಳಿದಾಳೆ
ರಾಮನಗರ.ನ.೧೮: ಈ ಬಾರಿಯ ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಘನತೆ ಹೆಚ್ಚಾಗಬೇಕಾದರೆ ಕನ್ನಡದ ಕಟ್ಟಾಳು, ಲೇಖಕ ಪಾರ್ವತೀಶ್ ಬಿಳಿದಾಳೆ

ಕಸಾಪ ಜಿಲ್ಲಾಧ್ಯಕ್ಷ ಚುನಾವಣೆ: ಬಿ.ಟಿ.ನಾಗೇಶ್ ಬೆಂಬಲಿಸಲು ಸಾಹಿತ್ಯಾಸಕ್ತರ ಮನವಿ
ಚನ್ನಪಟ್ಟಣ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಸ್ಪರ್ಧಿಗಳ ಪೈಕಿ ಬಿ ಟಿ ನಾಗೇಶ್ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಅವರಿಗೆ ಜಿಲ್ಲೆಯ ಕಸ

ಎಂ ಎಲ್ ಮಾದಯ್ಯನವರ ಜೀವನ ನಮಗೆಲ್ಲರಿಗೂ ಆದರ್ಶಣೀಯ. ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ
ಚನ್ನಪಟ್ಟಣ.ನ.06/21: ನಗರದ ಶತಮಾನೋತ್ಸವ ಭವನದಲ್ಲಿ ನಿವೃತ್ತ ಮುಖ್ಯ ಇಂಜಿಯರ್ ಎಂ.ಎಲ್ ಮಾದಯ್ಯನವರ ‘ಜೀವನಸೌಧ-ಹಳ್ಳಿಹೈದನ ತಾಂತ್ರಿಕಗಾಥೆ’ ಎಂಬ

ಶನಿವಾರ ಎಂ ಎಲ್ ಮಾದಯ್ಯನವರ ಜೀವನ ಸೌಧ ಕೃತಿ ಲೋಕಾರ್ಪಣೆ
ಚನ್ನಪಟ್ಟಣ.ನ.೦೨: ಇದೇ ತಿಂಗಳು 6 ನೇ ತಾರೀಖಿನ ಶನಿವಾರ ದಂದು ಬೆಳಿಗ್ಗೆ 10.30 ಕ್ಕೆ ನಗರದ ಬಾಲಕರ ಸರ್ಕಾರಿ ಕಿರಿಯ ಕಾಲೇಜಿನಲ್ಲಿ ಹೊರಾಂಗಣದಲ್ಲಿರುವ ಶತಮಾನೋತ್ಸವ ಭವನದಲ್ಲಿ ‘ತಮ್ಮ ಜೀವನ ಸೌಧ’ ಹಳ್
ಬುದ್ದನ ಸಕಾರತ್ಮಕ ಚಿಂತನೆಗಳು ಮನೋಬಲವನ್ನು ಹೆಚ್ಚಿಸುವುದರ ಮೂಲಕ :ಆತ್ಮಹತ್ಯೆ ಆಲೋಚನೆಯಿಂದ ದೂರವಿಡುತ್ತವೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ, ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ ರೋಟರಿ ಸಿಲ್ಕ್ ಸಿಟಿ ಮತ್ತು ರಾಮನಗ

ಅಪ್ಪನಭುಜ ಎಲ್ಲಾ ಸಿಂಹಾಸನಗಳನ್ನು ಮೀರಿಸಿದ್ದು. ಮಾಯಣ್ಣ
ಅಪ್ಪನ ಭುಜವು ಎಲ್ಲಾ ಮಕ್ಕಳಿಗೂ ಅತಿ ಎತ್ತರದ ಸಿಂಹಾಸನ. ಅದನ್ನೇರದ ಮಕ್ಕಳಿಲ್ಲ. ಯಾವುದೇ ಜಾತ್ರೆ, ಸರ್ಕಸ್, ದೇವರನ್ನು ನೋಡಬೇಕೆಂದರೆ ನಮಗೆ ಅಪ್ಪನ ಭುಜವೇ ಸಿಂಹಾಸನವಾಗಿತ್ತು ಎಂದು ಕನ್ನಡ ಸಾಹಿತ್ಯ ಪ
ಪ್ರತಿಕ್ರಿಯೆಗಳು