ಸೂಫಿ ಗಾಯಕ ಜನಾಬ್ ಮೊಹಮ್ಮದ್ ಗೆ ಹೆಚ್ ಎಲ್ ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ.

ಬೆಂಗಳೂರು.ನ.೨೯: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಪರಿಷತ್ತಿನ ಸಂಸ್ಥಾಪಕ, ಜಾನಪದ ಪರಿಷತ್ತಿನ ರೂವಾರಿ ನಾಡೋಜ ಎಚ್.ಎಲ್ ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃ ತರಾದ ಉತ್ತರ ಪ್ರದೇಶದ ಜನಪದ ಸೂಫಿ ಗಾಯಕರಾದ ಜನಾಬ್ ಮೊಹಮ್ಮದ್ ಸಲೀಂ ಹಸನ್ ಚಿಸ್ತಿಯವರಿಗೆ, ಕಾರ್ಯಕ್ರಮ ಉದ್ಘಾಟನೆ ಮಾಡಿದ ಆದಿ ಚುಂಚನಗಿರಿ ಮಠಾಧೀಶರಾದ ಶ್ರೀ ಡಾ. ನಿರ್ಮಲಾನಂದ ಸ್ವಾಮೀಜಿಯವರು ಪ್ರಶಸ್ತಿ ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸ್ವಾಮೀಜಿಯವರು, ಜಾನಪದ ಪರಿಷತ್ತು ಮಧ್ಯೆ ಬಂದ ಯಾವುದೇ ಅಡೆ ತಡೆಗಳಿಗೆ ಜಗ್ಗದೆ, ಕಾಲಕಾಲಕ್ಕೆ ತನ್ನ ವ್ಯಾಪ್ತಿಯಲ್ಲಿ ಬರುವ ಕಾರ್ಯಕ್ರಮಗಳನ್ನು ಮಾಡಿಕೊಂಡು ಹೋಗುತ್ತಿದೆ. ಜಗತ್ತಿನಲ್ಲಿ ಏನೇನು ಬದಲಾವಣೆಗಳು ಆಗುತ್ತಿದೆಯೋ ಅದಕ್ಕೆ ಪ್ರತಿಯಾಗಿ ಬೆಂಗಳೂರು ಕೂಡ ಧ್ವನಿಸಿ ಮುಂದೆ ಸಾಗುತ್ತಿದೆ. ವಿಜ್ಞಾನ ತಂತ್ರಜ್ಞಾನ ವಿಷಯದಲ್ಲಿ ತನ್ನದೆ ದಾರಿಯಲ್ಲಿದೆ. ಅಮೆರಿಕೆಯ ಅಧ್ಯಕ್ಷನಾಗಿದ್ದ ಒಬಾಮಾ ಬೆಂಗಳೂರಿಗೆ ಬಂದಿದ್ದಾಗ ಬೆಂಗಳೂರಿನ ಮಕ್ಕಳ ಕೊಡುಗೆ ಅಪಾರ, ಅದನ್ನು ಅಮೆರಿಕೆಯ ಮಕ್ಕಳೂ ಸೇರಿದಂತೆ ಪ್ರಪಂಚದ ಎಲ್ಲಾ ದೇಶದ ಮಕ್ಕಳೂ ಸಹ ಒಂದು ಸಾರಿ ಗಮನಿಸಬೇಕು ಎಂದಿದ್ದರು.
ಮುಂದೊಂದು ದಿವಸ ತಂತ್ರಜ್ಞಾನ, ವಿಜ್ಞಾನ ಎಲ್ಲವನ್ನೂ ಸಹಿಸಲಾಗದು, ಐನ್ಸ್ಟೀನ್, ಮುಂದೊಂದು ಜನ್ಮವಿದ್ದರೆ, ಕಾಡಿನ ಮಧ್ಯೆ ಹರಿಯುತ್ತಿರುವ ನದಿಯ ಪಕ್ಕದಲ್ಲಿ ಗುಡಿಸಿನಲ್ಲಿ ನಾನು ಓರ್ವ ರೈತನ ಮಗನೋ, ಬಡಗಿಯ ಮಗನಾಗಿಯೋ ಹುಟ್ಟಿ ಸಂತೈಸಿಕೊಳ್ಳುತ್ತೇನೆ ಎಂದಿದ್ದರು.
ಅದಕ್ಕಿಂತಲೂ ಮೊದಲು ನಮ್ಮ ನಾಡಿನ ಹೆಮ್ಮೆಯ ಕವಿ ಕುವೆಂಪು ಅಂತಹದ್ದೇ ಒಂದು ಭಾವನೆಯ ಕವಿತ ಬರೆದಿದ್ದರು. ಇವೆಲ್ಲವೂ ಅತಿಯಾದಾಗ ಜಾನಪದ ವೆಂಬ ಪರ್ಯಾಯವೇ ಹಿಂದೆ ಉಳಿದಿದ್ದು, ಮುಂದೆ ಉಳಿಯುವಂತಹದ್ದು ಎಂದು ಹೋಲಿಕೆ ನೀಡಿ, ಅಕ್ಬರನ ಆಸ್ತಾನದಲ್ಲಿ ಹಾಡುತ್ತಿದ್ದ ಸೂಫಿ ಸಂತರ ಪರಂಪರೆಯ 17ನೇ ತಲೆ ಮಾರಿನ ಈ ಕಲಾವಿದನಿಗೆ ಪ್ರಶಸ್ತಿ ಕೊಡಮಾಡುತ್ತಿರುವುದು ಸಾಧುವಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಾನಪದ ವಿದ್ವಾಂಸ ಡಾ.ಗೊ.ರು ಚನ್ನಬಸಪ್ಪ ಮಾತನಾಡಿ, ನನ್ನನ್ನು ಅತಿಥಿ ಎಂದು ಕರೆದಿದ್ದಾರೆ, ಅದು ಅವರ ಅಭಿಮಾನ, ನಾನು ಈ ಮನೆಯಲ್ಲಿಯೇ ಇದ್ದು, ಜಾನಪದ ಪರಿಷತ್ತನ್ನು ನಾಡೋಜ ಎಚ್.ಎಲ್ ನಾಗೇಗೌಡರು ಬೆಳೆಸಿದ್ದನ್ನು ಗಮನಿಸಿದ್ದೇನೆ, ಅವರೊಬ್ಬ ಸಾಹಿತಿಯಷ್ಟೇ ಅಲ್ಲ, ಜಾನಪದ ಪರಿಷತ್ತನ್ನು ಸಶಕ್ತವಾಗಿ ಕಟ್ಟಿದ್ದಾರೆ, ಅವರೊಬ್ಬ ಸಾಧಕ ಅವಿಶ್ರಾಂತ ದುಡಿಮೆಯಿಂದ ಈ ಪರಿಷತ್ತು, ಗಟ್ಟಿಯಾಗಿ ನೆಲೆಯೂರಿದೆ. ಅವರು ಪ್ರಾಚೀನ ಹಾಗೂ ಅರ್ವಾನಚೀನ ಸಮನ್ವಯಕಾರ ಎಂದರು. ಸರ್ಕಾರ ಸ್ಥಾಪಿಸಿ ರುವ ಜಾನಪದ ವಿಶ್ವ ವಿದ್ಯಾನಿಲಯ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ, ಜಾನಪದ ಕಲಾವಿದರ ಪ್ರಾತಿನಿಧಿಕ ಸಂಸ್ಥೆಯಾಗಿ ಪರಿಷತ್ತು, ಅವರ ಬೇಕು ಬೇಡಗಳನ್ನು ಈಡೇರಿಸಿಕೊಡಲು ಮುಂದಾಗಿದೆ ಎಂದರು.
ಆಶಯ ಭಾಷಣ ಹಾಗೂ ಅಧ್ಯಕ್ಷ ಭಾಷಣ ಎರಡನ್ನೂ ಮಾಡಿದ, ಕರ್ನಾಟಕ ಜಾನಪದ ಪರಿಷತ್ತು ಅಧ್ಯಕ್ಷರಾದ ಟಿ. ತಿಮ್ಮೇಗೌಡರು, ಓರ್ವ ಐಎಎಸ್ ಅಧಿಕಾರಿಯಾಗಿ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪೂರ್ವ ಕೃತಿಗಳನ್ನು ನಾಗೇಗೌಡರು ನೀಡಿದ್ದಾರೆ, ಅವರ ಪ್ರವಾಸ ಕಥನ, ಎಂಟು ಸಂಪುಟಗಳಲ್ಲಿ ಪ್ರಕಟಗೊಂಡಿದ್ದು ದೊಡ್ಡ ಸಾಧನೆಯಾಗಿದೆ. ಶ್ರೀಯುತರು ಜಾನಪದ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು, ಅವರು ಮಾಡಿರುವುದನ್ನು ನಾವು ಉಳಿಸಿ ಬೆಳೆಸಿಕೊಂಡು ಹೋದರೆ, ಅವರ ಆತ್ಮಕ್ಕೆ ಚಿರಶಾಂತಿ ನೀಡಿದಂತೆ, ಈಗ ಜಾನಪದ ಲೋಕ ಕಲಾವಿದರ ಕಾಶಿಯಾಗಿದೆ ಎಂದರು.
ನಾಗೇಗೌಡರ ನಂತರ ಅಧ್ಯಕ್ಷರಾಗಿದ್ದ ಜಿ.ನಾರಾಯಣ, ಭದ್ರ ಭುನಾದಿ ಹಾಕಿದ್ದಾರೆ. ಸರ್ಕಾರ ನೀಡುವ ಜಾನಪದ ಶ್ರೀ ಗಿಂತ ಒಂದು ಕೈ ಮೇಲಾಗಿರುವ ಈ ಪ್ರಶಸ್ತಿಯನ್ನು 2015 ರಿಂದ ಇಲ್ಲಿಯವರೆಗೆ 6 ಜನ ಅರ್ಹ ಕಲಾವಿದರಿಗೆ 1 ಲಕ್ಷ ನಗದು ಹಾಗು ಫಲಕ ನೀಡುತ್ತಾ ಬಂದಿದೆ ಎಂದರು.
ಸಂದರ್ಭದಲ್ಲಿ ಪ್ರಶಸ್ತಿ ಪುರಸ್ಕೃತ ಜನಾಬ್ ಮೊಹಮದ್ ಸಲೀಂ ಹಸನ್ ಚಿಸ್ತಿ ಮಾತನಾಡಿ, ಕನ್ನಡ ಜನರ ಹೃಯದ ವೈಶಾಲ್ಯತೆಯ ಬಗ್ಗೆ ಅಭಿನಂದಿಸಿದರು. ಕರ್ನಾಟಕ ಜಾನಪದ ಪರಿ ಷತ್ತು ತಮ್ಮನ್ನು ಗುರುತಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು. ನನಗೆ ಅಂತರರಾಷ್ಟ್ರೀಯ ಮಟ್ಟ ದಲ್ಲೂ ಪ್ರಶಸ್ತಿ ಬಂದಿದೆ, ಆದರೆ ಇದು ಬಂದಾಗ ಆದ ಸಂತೋಷ ಅಪೂರ್ವ ಎಂದು ಹೇಳಿ, ಸೂಫಿ ಗಾಯನ ನಡೆಸಿಕೊಟ್ಟರು.
ಮಂತ್ರಿ ಮಹೋದ ಯರ ಗೈರು:
ವಿಧಾನ ಪರಿಷತ್ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿ ಇದ್ದುದರಿಂದ ಪ್ರಶಸ್ತಿ ಪ್ರದಾನ ಮಾಡಲು ಆಗಮಿಸಬೇಕಾಗಿದ್ದ ರಾಜ್ಯ ಇಂಧನ ಮತ್ತು ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ವಿ. ಸುನೀಲ್ ಕುಮಾರ್ ಅವರು ಗೈರು ಹಾಜರಾದರು.
ಅದೇ ರೀತಿಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗ ವಹಿಸಬೇಕಾಗಿದ್ದ ಇಲಾಖೆಯ ಕಾರ್ಯದರ್ಶಿಗಳಾದ ಡಾ.ಮಂಜುಳಾ ಎನ್ ಹಾಗೂ ಇಲಾಖೆಯ ನಿರ್ದೇ ಶಕರಾದ ಎಸ್ ರಂಗಪ್ಪ ಅವರು ಗೈರು ಹಾಜರಾದರು. ಆದರೂ ಜನ ಕಿಕ್ಕಿರಿದಿತ್ತು.
ಅವರನ್ನು ಸ್ವಾಗತಿಸಲು ರಾಜ್ಯದ ವಿವಿಧ ಜಾನಪದ ಕಲಾತಂಡ ಸಂವಹನಗೊಳಿಸಲಾಗಿತ್ತು. ಇದೇ ಸಂದರ್ಭದಲ್ಲಿ ಶತಕಂಠ ಧ್ವನಿ ಹೊಮ್ಮಿಸಿದ ಹಾಡುಗಾರರಿಂದ, ಅವರನ್ನು ಖುಷಿಗೊಳಿಸಲಾಯ್ತು. ಕೊನೆಯಲ್ಲಿ ಜಾನಪದ ಪರಿಷತ್ತಿನ ವ್ಯವಸ್ಥಾ ಪಕ ಟ್ರಸ್ಟಿ ಆದಿತ್ಯ ನಂಜರಾಜ್ ವಂದನೆಯನ್ನು ಸಲ್ಲಿಸಿದರು.
ಗೋ ರಾ ಶ್ರೀನಿವಾಸ...
ಮೊ:9845856139.
Recent news in literature »

ರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪಠ್ಯಪುಸ್ತಕ ಸಮಿತಿಗೆ ಆಯ್ಕೆ
ರಾಜ್ಯ ಪಠ್ಯಪುಸ್ತಕ ಸಮಿತಿಗೆ ಮಾಗಡಿ ತಾಲೂಕಿನ ತಿಪ್ಪಸಂದ್ರ ಹೋಬಳಿ ದೊಡ್ಡಸೋಮನಹಳ್ಳಿ ಲೇಖಕರಾದ ಡಾ. ಡಿ.ಸಿರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪುಸ್ತಕ ಆಯ್ಕೆಯಾಗಿದೆ.

ಡಾ ಡಿ ಸಿ ರಾಮಚಂದ್ರ ರವರ ಸಂಪ್ರೀತಿ ರಾಮಾಯಣ ಪುಸ್ತಕವು ಶ್ರೀರಾಮನ್ನು ನೆನಪಿಸುತ್ತದೆ. ಪ್ರದೀಪ್ ಕುಮಾರ್ ಹೆಬ್ರಿ
\'ಸಂಪ್ರೀತಿ ರಾಮಾಯಣ\' ಎಂಬ ಕೃತಿಯನ್ನು ಡಾ/ಡಿ.ಸಿ. ರಾಮಚಂದ್ರ ಅವರು ಬಹಳ ಶ್ರದ್ಧೆಯಿಂದ ರಚಿಸಿದ್ದು, 13 ಅಧ್ಯಾಯಗಳಲ್ಲಿ ಆಕರ್ಷಕ ಚಂದದ ಚಿತ್ರಗಳಿಂದ ಕೂಡಿ ಸುಂದರವಾಗಿ ಮುದ್ರಣಗೊಂಡು ಓದುಗರ ಮನ ಸೆಳೆ

ಗೌಡಗೆರೆ ಕ್ಷೇತ್ರದಲ್ಲಿ ಅದ್ದೂರಿ ಲಕ್ಷ ದೀಪೋತ್ಸವ. \'ಜಗನ್ಮಾತೆಯ ವಿಶ್ವರೂಪ ದರ್ಶನ\' ಕೃತಿ ಲೋಕಾರ್ಪಣೆ
ಚನ್ನಪಟ್ಟಣ: ತಾಲೂಕಿನ ಗೌಡಗೆರೆ ಗ್ರಾಮದ ಶ್ರೀ ಚಾಮುಂಡೇಶ್ವರಿ ಬಸವಪ್ಪ ಪುಣ್ಯಕ್ಷೇತ್ರದಲ್ಲಿ ಶನಿವಾರ ಅದ್ದೂರಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಜರು

ಸೂಫಿ ಗಾಯಕ ಜನಾಬ್ ಮೊಹಮ್ಮದ್ ಗೆ ಹೆಚ್ ಎಲ್ ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ.
ಬೆಂಗಳೂರು.ನ.೨೯: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಪರಿಷತ್ತಿನ ಸಂಸ್ಥಾಪಕ, ಜಾನಪದ ಪರಿಷತ್ತಿನ ರೂವಾರಿ ನಾಡೋಜ ಎಚ್.ಎ

ಪರಿಷತ್ತಿನ ಘನತೆಗೆ ತಕ್ಕುದಾದ ವ್ಯಕ್ತಿ ಪಾರ್ವತೀಶ್ ಬಿಳಿದಾಳೆ
ರಾಮನಗರ.ನ.೧೮: ಈ ಬಾರಿಯ ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಘನತೆ ಹೆಚ್ಚಾಗಬೇಕಾದರೆ ಕನ್ನಡದ ಕಟ್ಟಾಳು, ಲೇಖಕ ಪಾರ್ವತೀಶ್ ಬಿಳಿದಾಳೆ

ಕಸಾಪ ಜಿಲ್ಲಾಧ್ಯಕ್ಷ ಚುನಾವಣೆ: ಬಿ.ಟಿ.ನಾಗೇಶ್ ಬೆಂಬಲಿಸಲು ಸಾಹಿತ್ಯಾಸಕ್ತರ ಮನವಿ
ಚನ್ನಪಟ್ಟಣ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಸ್ಪರ್ಧಿಗಳ ಪೈಕಿ ಬಿ ಟಿ ನಾಗೇಶ್ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಅವರಿಗೆ ಜಿಲ್ಲೆಯ ಕಸ

ಎಂ ಎಲ್ ಮಾದಯ್ಯನವರ ಜೀವನ ನಮಗೆಲ್ಲರಿಗೂ ಆದರ್ಶಣೀಯ. ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ
ಚನ್ನಪಟ್ಟಣ.ನ.06/21: ನಗರದ ಶತಮಾನೋತ್ಸವ ಭವನದಲ್ಲಿ ನಿವೃತ್ತ ಮುಖ್ಯ ಇಂಜಿಯರ್ ಎಂ.ಎಲ್ ಮಾದಯ್ಯನವರ ‘ಜೀವನಸೌಧ-ಹಳ್ಳಿಹೈದನ ತಾಂತ್ರಿಕಗಾಥೆ’ ಎಂಬ

ಶನಿವಾರ ಎಂ ಎಲ್ ಮಾದಯ್ಯನವರ ಜೀವನ ಸೌಧ ಕೃತಿ ಲೋಕಾರ್ಪಣೆ
ಚನ್ನಪಟ್ಟಣ.ನ.೦೨: ಇದೇ ತಿಂಗಳು 6 ನೇ ತಾರೀಖಿನ ಶನಿವಾರ ದಂದು ಬೆಳಿಗ್ಗೆ 10.30 ಕ್ಕೆ ನಗರದ ಬಾಲಕರ ಸರ್ಕಾರಿ ಕಿರಿಯ ಕಾಲೇಜಿನಲ್ಲಿ ಹೊರಾಂಗಣದಲ್ಲಿರುವ ಶತಮಾನೋತ್ಸವ ಭವನದಲ್ಲಿ ‘ತಮ್ಮ ಜೀವನ ಸೌಧ’ ಹಳ್
ಬುದ್ದನ ಸಕಾರತ್ಮಕ ಚಿಂತನೆಗಳು ಮನೋಬಲವನ್ನು ಹೆಚ್ಚಿಸುವುದರ ಮೂಲಕ :ಆತ್ಮಹತ್ಯೆ ಆಲೋಚನೆಯಿಂದ ದೂರವಿಡುತ್ತವೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ, ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ ರೋಟರಿ ಸಿಲ್ಕ್ ಸಿಟಿ ಮತ್ತು ರಾಮನಗ

ಅಪ್ಪನಭುಜ ಎಲ್ಲಾ ಸಿಂಹಾಸನಗಳನ್ನು ಮೀರಿಸಿದ್ದು. ಮಾಯಣ್ಣ
ಅಪ್ಪನ ಭುಜವು ಎಲ್ಲಾ ಮಕ್ಕಳಿಗೂ ಅತಿ ಎತ್ತರದ ಸಿಂಹಾಸನ. ಅದನ್ನೇರದ ಮಕ್ಕಳಿಲ್ಲ. ಯಾವುದೇ ಜಾತ್ರೆ, ಸರ್ಕಸ್, ದೇವರನ್ನು ನೋಡಬೇಕೆಂದರೆ ನಮಗೆ ಅಪ್ಪನ ಭುಜವೇ ಸಿಂಹಾಸನವಾಗಿತ್ತು ಎಂದು ಕನ್ನಡ ಸಾಹಿತ್ಯ ಪ
ಪ್ರತಿಕ್ರಿಯೆಗಳು