Tel: 7676775624 | Mail: info@yellowandred.in

Language: EN KAN

    Follow us :


ಜನಸಂಖ್ಯೆ ಏರಿಕೆ ಪರಿಸರಕ್ಕೆ ಮಾತ್ರ ಮಾರಕವಲ್ಲ-ಅಭಿವೃದ್ಧಿ ಶೀಲ ದೇಶಗಳಿಗೂ ಮಾರಕ.....

Posted Date: 10 Jul, 2018

ಜನಸಂಖ್ಯೆ ಏರಿಕೆ ಪರಿಸರಕ್ಕೆ ಮಾತ್ರ ಮಾರಕವಲ್ಲ-ಅಭಿವೃದ್ಧಿ ಶೀಲ ದೇಶಗಳಿಗೂ ಮಾರಕ.....

ಏನು ಮಾಡುವುದು, ಈ ಜನಸಂಖ್ಯೆ ನಿಯಂತ್ರಣ ವಿಚಾರ ಒಂದು ರೀತಿಯ ಬಿಡಿಸಲಾಗದ ಕಗ್ಗಂಟು. ಯಾರಿಗೆ ಹೇಳೋದು ಯಾರಿಗೆ ಬಿಡೋದು, ಮಾನವ ಸಂಪನ್ಮೂಲವೇ ಜಗತ್ತು. ಆದರೂ ಇತಿಮಿತಿ ಆರೋಗ್ಯಕರ, ಈಗಾಗಲೇ ದೇಶದಲ್ಲಿ ಜನಸಂಖ್ಯೆ 125 ಕೋಟಿ ಮೀರಿದೆ. 130 ಕೋಟಿ ಮುಟಟುತ್ತಿದೆ. ಅಂಕಿ ಅಂಶಗಳ ಪ್ರಕಾರ, ಸರಿ ಇದನ್ನು ನಿಯಂತ್ರಿಸುವ ಕಥೆ ಹೇಗೆ? ಈ ಭೂಮಂಡಲದ ಮೇಲೆ ವಾಸ ಮಾಡುವ ಸರ್ವಜನತೆಗೂ ಬದುಕಿ ಬಾಳುವ ಆಸೆ, ತಮ್ಮ ತಮ್ಮ ಮಕ್ಕಳಿಗೆ ಮದುವೆ ಮಾಡಿ, ಮಕ್ಕಳು ಮೊಮ್ಮಕ್ಕಳನ್ನು ಪಡೆದು ಮನೆತನ-ವಂಶ ಬೆಳೆಯಬೇಕು ಎನ್ನುವ ಮಹದಾಸೆ ಇದೆ. ಇದು ಎಲ್ಲರಿಗೂ ತಿಳಿದಿರುವ ಸತ್ಯ ಸಂಗತಿ. ಹೀಗಾಗಿ ಜನಸಂಖ್ಯೆ ನಿಯಂತ್ರಣಕ್ಕೆ ಕೈಹಾಕುವ ಸಾಹಸದ ಕೆಲಸ ಕಷ್ಟವೇ ಹೌದು. ಜೊತೆಗೆ ಪ್ರಕೃತಿ ತಾನೆ, ಸೃಷ್ಟಿ, ಇದನ್ನು ತಡೆಯಲಾಗದು, ಪ್ರಕೃತಿ/ಸೃಷ್ಠಿಗೆ ಯಾರ್ರೀ ಹೊಣೆ ಅವೆಲ್ಲ ದೈವ ನೇಮಕ ಎನ್ನುತ್ತಾರೆ ಜನರು. ಹಾಗಾದ್ರೆ ನಿಮ್ಗೆ ಮಕ್ಕಳು ಬೇಡವೇನ್ರಿ, ಮೊಮ್ಮಕ್ಕಳು ಬೇಡವೇನ್ರಿ, ಮನೆ ಬೆಳೆಯೋದು ಬೇಡವೇನ್ರಿ, ಇಷ್ಟೆಲ್ಲ ಸಂಪಾದನೆ ಮಾಡಿ ಏನ್ ಮಾಡ್ತೀರಿ, ಬೀದಿ ಬಿಕಾರಿಗಳಿಗೆ, ಭಿಕ್ಷುಕರಿಗೆ ಅಲ್ಲಿ ಇಲ್ಲಿ ಮರದಡಿಯಲ್ಲಿ, ಜೋಪಡಿಯಲ್ಲಿ ಪಾಳುಮನೆ ದೇವಸ್ಥಾನ, ಅಂತ ಇಂತ ಕಡೆಗಳಲ್ಲಿ ವಾಸ ಮಾಡುವ ಜನರೆಲ್ಲ ಮಕ್ಕಳನ್ನು ಇತಿಮಿತಿ ಇಲ್ಲದೆ ಹಡೆದು ಬೀದಿ ಬೀದಿಗಳಲ್ಲಿ ಅಲೆಮಾರಿಗಳಾಗಿ, ಭಿಕ್ಞುಕರಾಗಿ ಅಲೀತಾವೆ. ಅವರಂತವರೇ ಮಕ್ಕಳನ್ನು ಪಡಿತಾರೆ ಇನ್ನು ನಮ್ಗೆ ನಮ್ಮ ಮಕ್ಕಳಿಗೆ ಮಕ್ಕಳು ಬೇಡವೇನ್ರೀ, ಇದು ಜನಮನದ ವಾಡಿಕೆ ಮಾತು. ಆದರೂ ಜನಸಂಖ್ಯೆಯ ಏರಿಕೆ ದೇಶಕ್ಕೆ ಮಾರಕ-ಏನು ಮಾಡಬಹುದು ಚಿಂತನೆಯೂ ಇಲ್ಲಿ ಪ್ರಸ್ತುತ.
ಈ ಜನಸಂಖ್ಯೆ ನಿಯಂತ್ರಣ ವಿಚಾರವಾಗಿ ಈ ಹಿಂದೆ 1985ರ ಕಾಲಘಟ್ಟದಲ್ಲಿ ಇರಬಹುದು, ಇಡೀ ದೇಶದಲ್ಲೇ ‘ಜನಸಂಖ್ಯಾ ಸ್ಫೋಟ’ ಎಂಬ ಒಂದು ದೊಡ್ಡ ಆಂದೋಲನವೇ ನಡೆದು ಸರ್ಕಾರದ ವತಿಯಿಂದಲೇ ಆರೋಗ್ಯ ಇಲಾಖೆಯಿಂದ ಘೋಷಣೆಗಳು ಕರಪತ್ರ-ಭಿತ್ತಿ ಪತ್ರಗಳು ಹಂಚಿ ಇಡೀ ದೇಶದಾದ್ಯಂತ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳು, ಆರೋಗ್ಯ ನಿರೀಕ್ಷಕರುಗಳು, ಆರೋಗ್ಯ ಸಹಾಯಕಿಯರುಗಳು ಪ್ರತೀ ಜಿಲ್ಲೆ, ತಾಲ್ಲೂಕು, ಗ್ರಾಮಗಳಲ್ಲಿ ಸಭೆಗಳನ್ನು ಮಾಡಿ, ಜಾಗೃತಿ ಬೀದಿ ನಾಟಕಗಳನ್ನು ಮಾಡಿ ಜನರಿಗೆ ತಿಳುವಳಿಕೆ ಮಾಡಿಸಿ ‘ಆರತಿಗೊಂದು-ಕೀರ್ತಿಗೊಂದು ಎರಡೇ ಸಾಕು ಎನ್ನುವ ಘೋಷಣೆ ಎಬ್ಬಿಸಿ ಒಂದು ಬೇಕು-ಎರಡು ಸಾಕು ಎಂದು ಸಾವಿರಾರು ಜನರಿಗೆ ಹೆಂಗಸರಿಗೆ-ಗಂಡಸರಿಗೆ, ಟುಬಿಕ್ಟಿಮಿಯೋ-ವಾಸೆಕ್ಟಮಿಯೋ ಎಂಬ ನಿಯಂತ್ರಣ ಆಪರೇಷನ್ (ಶಸ್ತ್ರ ಚಿಕಿತ್ಸೆ) ಮಾಡಿ ಜನಸಂಖ್ಯಾ ಸ್ಫೋಟ ನಿಯಂತ್ರಣ ಕಾಯಿದೆ ಹೊರಡಿಸಿ ಸ್ವಲ್ಪ ಮಟ್ಟಿಗೆ ಜನಸಂಖ್ಯೆ ತಡೆಗಟ್ಟಲಾಗಿತ್ತು. ಆ ಕಾಲಘಟ್ಟದಲ್ಲಿ ಯಾವ ಆಸ್ಪತ್ರೆಗಳಲ್ಲಿ ನೋಡಿ ಸಾವಿರಾರು ಮಂದಿ ಬಾಣಂತಿಯರಿಗೆ, ಹೆಂಗಸರುಗಳಿಗೆ ಬಹಳಷ್ಟು ಮಂದಿ ಗಂಡಸರಿಗೆ ಆಪರೇಷನ್ ಕಾರ್ಯದ ಜೊತೆಗೆ, ಹಣ, ಲಾಟರಿ ಟಿಕೆಟ್ ಮತ್ತೆ ಇನ್ನು ಏನೇನೋ ಗಿಫ್ಟ್ ಕೊಡುವ ಮೂಲಕ ಜನಸಂಖ್ಯೆ ನಿಯಂತ್ರಣ ಕಾರ್ಯ ಹೆಗ್ಗಿಲ್ಲದೇ ನಡೆದಿತ್ತು. ಆ ವೇಳೆಯಲ್ಲಿ ‘ಚಿಕ್ಕ ಸಂಸಾರ ಚೊಕ್ಕ ಸಂಸಾರ’, ‘ನಾವಿಬ್ಬರೆ-ನಮಗೆ ಇಬ್ಬರು’ ಎಂಬ ಗೋಡೆ ಬರಹಗಳು ಎಲ್ಲೆಲ್ಲಿಯೂ ಕಾಣುತ್ತಿದ್ದವು. ಆ ನಂತರ ದಿನಗಳಲ್ಲಿ ಹೆಣ್ಣಾಗಲಿ/ಗಂಡಾಗಲಿ ಒಂದೇ ಸಾಕು ಎನ್ನುವ ಘೋಷಣೆಯು ಮೊಳಗಿತು. ಇದರ ಸದುಪಯೋಗ ಇಡೀ ದೇಶದಲ್ಲೇ ಬಹಳಷ್ಟು ಮಂದಿ ಪಡೆದರು. ಮನೆಯ ಯಜಮಾನರುಗಳು ಕೂಡ ಒಂದು ಗಂಡು, ಒಂದು ಹೆಣ್ಣು ಆದರೆ ಅದಕ್ಕೆ ಸಮ್ಮತಿ ನೀಡಿ ಆಪರೇಷನ್‍ಗೆ ಒಪ್ಪಿಗೆ ನೀಡಿ ನಿಯಂತ್ರಣ ಕಾರ್ಯ ನಡೆಯಿತು. ಇದರ ಬಗ್ಗೆ ನಾನೂ ಕೂಡ ಕುಟುಂಬ ಕಲ್ಯಾಣ ಮತ್ತು ಆರೋಗ್ಯ ವಿಭಾಗ ಮಾಲಿಕೆಯಲ್ಲಿ ಲಾವಣಿ-ಜನಪದ-ಕಲಾವಿದನಾಗಿ-ಜಾಗೃತಿ ಬೀದಿನಾಟಕ ನಿರ್ದೇಶಕನಾಗಿ ಇಡೀ ಬೆಂಗಳೂರು ಗ್ರಾಮಾಂತರ 08 ಜಿಲ್ಲೆಗಳಲ್ಲೂ ಪ್ರದರ್ಶನ ನೀಡಿದ್ದೆ. ಆಗ ಆರೋಗ್ಯ ಇಲಾಖೆಯ ಕಾರ್ಯ ಚಟುವಟಿಕೆ ಇಡೀ ದೇಶವ್ಯಾಪ್ತಿ ನಡೆಯಿತು. ಇದು ಎಲ್ಲಾ ಜನಸಾಮಾನ್ಯರಿಗೆ ಗೊತ್ತಿರುವ ವಿಚಾರ ಎಂದುಕೊಂಡಿದ್ದೇನೆ. ಆದರೂ ಅತಿಯಾದದ್ದು ಮಿತಿಯಾಗಲೇಬೇಕು, ಎಲ್ಲಾ ವಿಚಾರದಲ್ಲೂ ಆರೋಗ್ಯಕರ.
ಆದರೆ ಈಗ ಬಂಧುಗಳೇ ಇದೇ ಜನಸಂಖ್ಯೆಯ ಏರಿಕೆ ಮತ್ತೆ ದೇಶವ್ಯಾಪ್ತಿ ನಾನಾ ರೂಪದಲ್ಲಿ ಕಾಡುತ್ತಿದೆ. ಏರಿದ ಜನಸಂಖ್ಯೆಯನ್ನು ಕಾಪಾಡಲು ಪರಿಸರ/ಕಾಡು ಮೇಡುಗಳು ಹಾಳು, ಕೃಷಿ ಭೂಮಿಗಳು ಹಾಳು, ಆಹಾರ ಸಮಸ್ಯೆ, ಉದ್ಯೋಗ ಸಮಸ್ಯೆ, ಸೂರು/ವಸತಿ ಸಮಸ್ಯೆ, ಸಾರಿಗೆ ವ್ಯವಸ್ಥೆ ಸಮಸ್ಯೆ, ಶಿಕ್ಷಣ ಸಮಸ್ಯೆ, ಏರಿದ ಜನಸಂಖ್ಯೆಯಿಂದಾಗಿ ಆರೋಗ್ಯ ಸಮಸ್ಯೆ ದಟ್ಟಣೆ ವಾಹನಗಳ ಅಪಘಾತ ಸಮಸ್ಯೆ, ಇತಿಮಿತಿ ಇಲ್ಲದ ಜನಸಂಖ್ಯೆಯ ಅವಾಂತರ ಹಳ್ಳಿಗಳಿಂದ ಹಿಡಿದು ದಿಲ್ಲಿಗಳ ವರೆಗೂ ನೋಡಲಾಗದ ಕಸದ ರಾಶಿ ಸಮಸ್ಯೆ, ನೀರಿಗೂ ಸಮಸ್ಯೆ-ಹೀಗೆ ಬಂಧುಗಳೇ ಇಡೀ ದೇಶವೇ ಮಿತಿಮೀರಿ ಏರಿದ ಜನಸಂಖ್ಯೆಯಿಂದ ನಮ್ಮನ್ನಾಳುವ ಸರ್ಕಾರಗಳು ಕೂಡ ಕಣ್ಣು ಕಣ್ಣು ಬಿಡುವ ಹಾಗಿದೆ. ಇಡೀ ದೇಶದಲ್ಲಿ ಅನ್ನದಾತ ರೈತರ ಸಮಸ್ಯೆ ಬಗೆಹರಿಯದ ಸಮಸ್ಯೆ, ಆಧುನಿಕತೆಯ ಈ ತಂತ್ರಜ್ಞಾನ ವ್ಯವಸ್ಥೆ ಒಂದು ಪರ್ಸೆಂಟ್ ಸುಖ ನೀಡಿ ಪೂರಕವಾದರೆ ಇನ್ನು ಉಳಿದಂತೆ ಒಂಭ್ತು ಪರ್ಸೆಂಟ್ ಮಾರಕವಾಗುತ್ತಿದೆ. ತಂತ್ರಜ್ಞಾನ ವಿಜ್ಞಾನ ಮಾನವನ ಬದುಕಿಗೆ ವಿನಾಶಕಾರಿಯೇ ಹೊರತು ಬದುಕುಳಿಸುವ ಉಪಯೋಕಾರಿ ಅಲ್ಲ. ಸದ್ಯಕ್ಕೆ ಈ ತಂತ್ರಜ್ಞಾನ ಜನತೆಗೆ ಉಪಯೋಗ ಕಾಣುತ್ತಿದೆ. ಆದರೆ ಅದರ ಮತ್ತೊಂದು ಮುಖ ವಿನಾಶವೇ ಹೌದು. ನಮ್ಮ ದೇಶದ ಭವಿಷ್ಯದ ಮಕ್ಕಳು ಯುವ ಪೀಳಿಗೆ ದೀರ್ಘಕಾಲ ಬದುಕಿ ಬಾಳುವ ನಿರೀಕ್ಷೆ ಹುಸಿ ಎಂದು ಕಾಣಿಸುತ್ತದೆ. ಒಟ್ಟಾರೆ ಹೇಳುವುದಾದರೆ ಮನುಕುಲ ಮುಂದೆ ಮುಂದೆ ವಿನಾಶಕಾರಿಯತ್ತ ಸಾಗುತ್ತಿದೆಯೇ ಹೊರತು ಬದುಕುಳಿಯುವ ನಡೆ ಕಾಣುತ್ತಿಲ್ಲ. ನಮ್ಮ ಪ್ರಜಾಪ್ರಭುತ್ವ ರಾಜಕೀಯವು ಹದಗೆಡುತ್ತಿದೆ. ಕೇಡುಗಾಲಕ್ಕೆ ನಾಯಿ ಮೊಟ್ಟೆ ಇಕ್ಕಿತು ಎನ್ನುವಂತೆ ನಮ್ಮನ್ನಾಳುವ ರಾಜಕೀಯ ನಾಯಕರುಗಳು ಸೇಡಿನ ರಾಜಕಾರಣ ಮಾಡಿ ದೇಶವನ್ನು ಸುಡುವುದರ ಜೊತೆಗೆ ತಾವು ಸುಟ್ಟು ಹೋಗುತ್ತಾರೆ. ಇದಕ್ಕೊಂದು ಕಥೆ ಉದಾ:- ಹಾವಿನ ಸ್ನೇಹ ಮಾಡಿ ಸುಟ್ಟು ಹೋದ ಮರ ಎಂಬ ಪಾಠ ಹೀಗಾಗಿ ದೇಶ ವಿನಾಶದತ್ತ ಸಾಗುತ್ತಿದೆ. ಜನಸಂಖ್ಯೆ ನಿಯಂತ್ರಣದ ಬಗ್ಗೆ ಮತ್ತೊಮ್ಮೆ ಚಿಂತನೆ ನಡೆಸಬೇಕಿದೆ.

-ದೇವರಹಳ್ಳಿ ಚೌ.ಪು.ಸ್ವಾಮಿ
ಎಂ.ಎ., ಬಿ.ಇಡಿ.,
ಚನ್ನಪಟ್ಟಣ

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in literature »

ಅನುರಾಗ
ಅನುರಾಗ

ಎದೆಬಾನ ಹೊಂಗೊಳಕೆ 

ತಿಂಗಳೊಲಿದಿಳಿದಂತೆ

ನೈದಿಲೆಯ ನಗುವಾಗಿ ಬಾ

ಹುಣ್ಣಿಮೆಯ ಹಸೆಗೆ.... 


ನೋವೆಲ್ಲ ನಗುವಾಗಿ

ನಮ್ಮೊಲವೇ ಜೊತೆಗಿರ

ಹುತಾತ್ಮ
ಹುತಾತ್ಮ

ಹುತಾತ್ಮ

ನಾನು ಒಂದು ತಿಂಗಳ

ರಜೆ ಪಡೆದು ಬಂದಿದ್ದೆ

ಹೊಸಚೈತ್ರದ ಆಗಮನಕ್ಕಾಗಿ॥


ಇರಲಿಲ್ಲ ನನಗೆಂದೂ

ಹಸೆಮಣೆ ಏರುವಾ ಧಾವಂತ

ಭರವಸೆ ಇರದ ಬದುಕ ಆತಂಕ॥


ಹೆತ್ತವರ ವಂಶಬ

“ಜಗತ್ತಿಗೆ ಜನರೇ ಆಭರಣ-ಆದರೂ ಆಗಬೇಕು ಜನ ನಿಯಂತ್ರಣ”     
“ಜಗತ್ತಿಗೆ ಜನರೇ ಆಭರಣ-ಆದರೂ ಆಗಬೇಕು ಜನ ನಿಯಂತ್ರಣ”     

ಜನಸಂಖ್ಯಾ ಸ್ಫೋಟ ಜಗತ್ತಿಗೆ ಮಾರಕ-ಆದರೆ ನಿಯಂತ್ರಣದ ಬಗೆ....? ವಿಶ್ವ ಜನಸಂಖ್ಯಾ ದಿನದ ಸಂಬಂಧವಾಗಿ ಓದುಗ ನಾಗರೀಕ ಬಂಧುಗಳಿಗೆ ಈ ಲೇಖನ. ಬಂಧುಗಳೇ ಜನರಿಂದ ಜಗತ್ತೋ ಅಥವಾ ಜನರಿಗಾಗಿ ಜಗತ್ತೋ? ಜಗತ್ತಿಗೆ ಜನರ ಅಗತ್ಯವೋ ಅಥವಾ ಜನರಿಗೆ ಜಗದ ಅಗತ

ಜನಸಂಖ್ಯೆ ಏರಿಕೆ ಪರಿಸರಕ್ಕೆ ಮಾತ್ರ ಮಾರಕವಲ್ಲ-ಅಭಿವೃದ್ಧಿ ಶೀಲ ದೇಶಗಳಿಗೂ ಮಾರಕ.....
ಜನಸಂಖ್ಯೆ ಏರಿಕೆ ಪರಿಸರಕ್ಕೆ ಮಾತ್ರ ಮಾರಕವಲ್ಲ-ಅಭಿವೃದ್ಧಿ ಶೀಲ ದೇಶಗಳಿಗೂ ಮಾರಕ.....

ಏನು ಮಾಡುವುದು, ಈ ಜನಸಂಖ್ಯೆ ನಿಯಂತ್ರಣ ವಿಚಾರ ಒಂದು ರೀತಿಯ ಬಿಡಿಸಲಾಗದ ಕಗ್ಗಂಟು. ಯಾರಿಗೆ ಹೇಳೋದು ಯಾರಿಗೆ ಬಿಡೋದು, ಮಾನವ ಸಂಪನ್ಮೂಲವೇ ಜಗತ್ತು. ಆದರೂ ಇತಿಮಿತಿ ಆರೋಗ್ಯಕರ, ಈಗಾಗಲೇ ದೇಶದಲ್ಲಿ ಜನಸಂಖ್ಯೆ 125 ಕೋಟಿ ಮೀರಿದೆ. 130 ಕೋಟಿ

ಮಾದರಿ ಜೀವನ ನಡೆಸಿದ ಹುಣಸನಹಳ್ಳಿ ಸಹೋದರರು
ಮಾದರಿ ಜೀವನ ನಡೆಸಿದ ಹುಣಸನಹಳ್ಳಿ ಸಹೋದರರು

        ಅಂದಿನ ಬೆಂಗಳೂರು ಗ್ರಾಮಾಂತರ ಜಿಲ್ಲೆಯಾಗಿದ್ದ ಇಂದಿನ ರಾಮನಗರದಲ್ಲಿ ಜೆಡಿಎಸ್ ಪಕ್ಷ ಗಟ್ಟಿಯಾಗಿ ಬೆರೂರಲು ಕಾರಣರಾದವರು ಕೈಲಾಂಚ ಹೋಬಳಿ ಹುಣಸನಹಳ್ಳಿ ಗ್ರಾಮದ ಮಾರೇಗೌಡ ಕುಟುಂಬದವರು. 

&nb

ಅಂಬೇಡ್ಕರರ ಆಕ್ರಂಧನ
ಅಂಬೇಡ್ಕರರ ಆಕ್ರಂಧನ

ಬೇಡಿ ತೊಡಿಸಿ ಕೂಡಿಹಾಕುತಿರುವ ನನ್ನವರೇ
ಬಿಟ್ಟುಬಿಡಿ ಭೀಮರಾವ ಜಗದ ಜನರ ಆಸ್ತಿಯು
ದಲಿತನೆಂಬ ಹಣೆಯಪಟ್ಟಿ ಜಾತಿಗಲ್ಲ ಸೀಮಿತ
ನೊಂದವರು ದಮನಿತರು ಎಲ್ಲರಿಗೂ ಅನ್ವಯ
ಬಾಬಣ್ಣನ ಮನದೊಳು ಜಾತಿಭೂತವಿರಲಿಲ್ಲ

ಭೀಮ ಪ್ರಭುಗೆ ನಮಿಸೊಣ ಬನ್ನಿರೊ
ಭೀಮ ಪ್ರಭುಗೆ ನಮಿಸೊಣ ಬನ್ನಿರೊ

ಅಣ್ಣಾ ತಮ್ಮಾ ಬನ್ನಿರೊ

ಅವ್ವ ಅಯ್ಯ ಬನ್ನಿರೋ

ಜಗದ ಬೆಳಕ ಬೆಳಗಿದ 

ಜೈಬೀಮನ ಜನುಮದಿನಕೆ ಬನ್ನಿರೋ

ಬಡಜನರ ಬೆವರಿಗೆ

ಬೆಲೆ ತಂದ ಬಾಬಾಸಾಹೇಬರಿಗೆ

ಜೈ ಜೈ ಎನ್ನಿರೊ

ನನ್ನವಳು

ಅರಸೊತ್ತಿನ ಸುತ್ತೋಲೆಗಳೆಲ್ಲಾ ..

ಬೇಗೆಬಿದ್ದಿದೆ ಮನ

ಬೋರಿಡುತಿದೆಯೆಲ್ಲಾ ..

ಅಂದುಕೊಂಡಿಹೆನು

ಬದುಕು ಅವಳೊಂದಿಗೆ

ನೊಂದಿಕೊಂಡಿಹೆನು

ಅವಳು ದೂರಾದರೆ ಹೇಗೆ ..

ಅಕ್ಕೂರು ರಾಮಕೃಷ್ಣಯ್ಯ ಇನ್ನು ನೆನಪು ಮಾತ್ರ
ಅಕ್ಕೂರು ರಾಮಕೃಷ್ಣಯ್ಯ ಇನ್ನು ನೆನಪು ಮಾತ್ರ

ತನ್ನ ಸಮಕಾಲೀನ ಗೆಳೆಯರೊಂದಿಗೆ ಯಾವಾಗಲೂ ಸಮಾಜದ ಸ್ಥಿತಿಗತಿ, ರಾಜಕೀಯ, ಕೃಷಿಯ ಬಗ್ಗೆ ಚರ್ಚಿಸುತ್ತಿದ್ದ ಸಿ. ರಾಮಕೃಷ್ಣಯ್ಯ ಏಪ್ರಿಲ್‌ 2ರಂದು ಸೋಮವಾರ ನಿಧನರಾದರು. ಅವರಿಗೆ 81 ವರ್ಷ ವಯಸ್ಸಾಗಿತ್ತು. ಅಕ್ಕೂರು ರಾಮಕೃಷ್ಣಯ್ಯ ಎಂದೆ ಖ್ಯ

ಆಧುನಿಕ ಕರ್ನಾಟಕವನ್ನು ರೂಪಿಸಿದ ಹಿರಿಯರಲ್ಲೊಬ್ಬರಾದ ಡಾ.ಎಚ್.ಎಸ್. ದೊರೆಸ್ವಾಮಿ ಅವರಿಗೆ 100 ವರ್ಷ
ಆಧುನಿಕ ಕರ್ನಾಟಕವನ್ನು ರೂಪಿಸಿದ ಹಿರಿಯರಲ್ಲೊಬ್ಬರಾದ ಡಾ.ಎಚ್.ಎಸ್. ದೊರೆಸ್ವಾಮಿ ಅವರಿಗೆ 100 ವರ್ಷ

ಮಹಾತ್ಮ ಗಾಂಧೀಜಿ ಅವರ ಕೊನೆಯ ಕೊಂಡಿಯಂತೆ ಜೀವನ ನಡೆಸುತ್ತಿರುವ ಹರೆಯದ ಡಾ.ಎಚ್.ಎಸ್. ದೊರೆಸ್ವಾಮಿ. ಹಿರಿಯ ಸ್ವಾತಂತ್ರ್ಯ ಹೋರಾಟಗಾರಾದ ಇವರು ರಾಮನಗರ ಜಿಲ್ಲೆಯವರು ಎಂದು ಹಲವರಿಗೆ ತಿಳಿದಿಲ್ಲ.

    ರಾಮನಗರ ಜಿ

Top Stories »  


Top ↑