Tel: 7676775624 | Mail: info@yellowandred.in

Language: EN KAN

    Follow us :


“ಜಗತ್ತಿಗೆ ಜನರೇ ಆಭರಣ-ಆದರೂ ಆಗಬೇಕು ಜನ ನಿಯಂತ್ರಣ”     

Posted Date: 18 Jul, 2018

“ಜಗತ್ತಿಗೆ ಜನರೇ ಆಭರಣ-ಆದರೂ ಆಗಬೇಕು ಜನ ನಿಯಂತ್ರಣ”     

ಜನಸಂಖ್ಯಾ ಸ್ಫೋಟ ಜಗತ್ತಿಗೆ ಮಾರಕ-ಆದರೆ ನಿಯಂತ್ರಣದ ಬಗೆ....? ವಿಶ್ವ ಜನಸಂಖ್ಯಾ ದಿನದ ಸಂಬಂಧವಾಗಿ ಓದುಗ ನಾಗರೀಕ ಬಂಧುಗಳಿಗೆ ಈ ಲೇಖನ. ಬಂಧುಗಳೇ ಜನರಿಂದ ಜಗತ್ತೋ ಅಥವಾ ಜನರಿಗಾಗಿ ಜಗತ್ತೋ? ಜಗತ್ತಿಗೆ ಜನರ ಅಗತ್ಯವೋ ಅಥವಾ ಜನರಿಗೆ ಜಗದ ಅಗತ್ಯವೋ? ಏನಿದು ರಹಸ್ಯ.
ಜನರಿದ್ದರೇನೇ ಜಗತ್ತು ನಿಜ. ಆದರೆ ಜಗತ್ತು/ಈ ಪ್ರಪಂಚ/ಈ ಭೂಮಂಡಲ/ವಿಶ್ವ ಎನ್ನುವುದು ಉಳಿಯಬೇಕಾದರೆ ಮಿತಿಮೀರಿ ಏರುತ್ತಿರುವ ಜನಸಂಖ್ಯೆ ಇಳಿದಾಗಲೇ, ಇಲ್ಲವಾದರೆ ಜಗತ್ತು ನರಕವಾಗುತ್ತದೆ. ಈ ಆಲೋಚನೆ ಎಲ್ಲರಲ್ಲೂ ಸಹಜವಾಗಿಯೇ ಮೂಡುತ್ತದೆ ಸರಿ. ಆದರೆ, ನಿಯಂತ್ರಿಸುವ ಬಗೆ ಹೇಗೆ? ಬೆಕ್ಕಿಗೆ ಗಂಟೆ ಕಟ್ಟುವವರು ಯಾರು? ಎಷ್ಟು ಘೋಷಣೆಗಳು, ಭಾಷಣಗಳು ಮಾಡಿದರೆ ತಡೆಯಬಹುದು. ಎಷ್ಟು ಭಿತ್ತಿ ಚಿತ್ರಗಳು ಗೋಡೆ ಬರಹಗಳು, ಜಾಹೀರಾತುಗಳು ನಡೆಸಿ ಜಾಗೃತಿ ಮೂಡಿಸಿಲ್ಲ. ಇದಕ್ಕಾಗಿಯೇ 1985ರ ದಶಕದಲ್ಲೇ ‘ಜನಸಂಖ್ಯಾ ಸ್ಫೋಟ’ ಎಂಬ ದೊಡ್ಡ ಆಂದೋಲನವೇ ನಡೆಯಿತು. ಸರ್ಕಾರ ಇದರ ಬಗ್ಗೆ ಬಹಳ ಎಚ್ಚರಿಕೆ ವಹಿಸಿ ಆರೋಗ್ಯ ಇಲಾಖೆಯಿಂದ ಜನಸಂಖ್ಯಾ ನಿಯಂತ್ರಣಕ್ಕಾಗಿ ಗರ್ಭ ನಿರೋಧಕ ಉಪಕರಣಗಳು, ಶಸ್ತ್ರ ಚಿಕಿತ್ಸೆಗಳು, ಕಲಾವಿದರುಗಳಿಂದ ಜಾಗೃತಿ ಬೀದಿ ನಾಟಕಗಳು ಹೀಗೆ ಹಲವಾರು ವಿಧಾನಗಳಿಂದ ವಿಶ್ವವೂ ಸೇರಿದಂತೆ ದೇಶದಾದ್ಯಂತ ಬಹುದೊಡ್ಡ ಆಂದೋಲನವೇ ನಡೆಯಿತು. ಆಗ ‘ಒಂದು ಮಗು ಬೇಕು ಎರಡು ಸಾಕು’ ‘ಆರತಿಗೊಂದು ಕೀರ್ತಿಗೊಂದು’ ‘ನಾವಿಬ್ಬರು-ನಮಗಿಬ್ಬರು’ ‘ಹೆಣ್ಣಾಗಲಿ-ಗಂಡಾಗಲಿ ಒಂದೇ ಮಗು ಸಾಕು’ ‘ಚಿಕ್ಕ ಸಂಸಾರ-ಚೊಕ್ಕ ಸಂಸಾರ’ ‘ಚಿಕ್ಕ ಸಂಸಾರ-ಸುಖಕ್ಕೆ ಆಧಾರ’ ಇಂತ ಅನೇಕ ಘೋಷಣೆಗಳೊಡನೆ ಜನಸಂಖ್ಯಾಸ್ಫೋಟದ ಆಂದೋಲನ ನಡೆದು ದೊಡ್ಡ ಮಟ್ಟದ ಕಾರ್ಯಕ್ರಮಗಳನ್ನು ಪ್ರತಿ ಹಳ್ಳಿ-ಹಳ್ಳಿಗಳು, ತಾಲ್ಲೂಕು ಕೇಂದ್ರ, ಜಿಲ್ಲಾ ಕೇಂದ್ರಗಳಲ್ಲಿ ನಡೆಸಿ ಆ ಕಾಲಘಟ್ಟದಲ್ಲಿ (1985-90ರ ದಶಕದಲ್ಲಿ) ಹೆಚ್ಚಿನ ಮಟ್ಟದಲ್ಲಿ ಗರ್ಭ ನಿರೋಧಕ ಆಪರೇಶನ್, ಮಹಿಳೆಯರು-ಪುರುಷರಿಗೆ ಸೇರಿದಂತೆ ಶಸ್ತ್ರ ಚಿಕಿತ್ಸೆ ನಡೆಸಿ ಸ್ವಲ್ಪ ಮಟ್ಟಿಗೆ ಜನಸಂಖ್ಯೆ ನಿಯಂತ್ರಣಗೊಂಡಿತ್ತು ಎನ್ನುತ್ತಾ ಅದೇ ವೇಳೆಯಲ್ಲಿ 1989ರಲ್ಲಿ ಮೊದಲ ಬಾರಿಗೆ ‘ವಿಶ್ವ ಜನಸಂಖ್ಯಾ ದಿನ’ ಎಂದು ಆಚರಿಸಿ-ಆಚರಣೆಗೆ ತಂದು ಪ್ರತಿ ವರ್ಷವೂ ಆಚರಣೆಯಲ್ಲಿ ಸಾಗಿದೆ. ಆದರೆ ಜನಸಂಖ್ಯೆ ನಿಯಂತ್ರಣ ಅಥವಾ ಮಕ್ಕಳು ಜನಿಸುವ ಈ ಸೃಷ್ಠಿ ಕ್ರಿಯೆಯ ವ್ಯವಸ್ಥೆಗೆ ಕಡಿವಾಣ ಹಾಕುವ ಬಗೆ ಹೇಗೆ...? ಇದು ಜಟಿಲವಾದ ಸಮಸ್ಯೆ.
ಕಾರಣವಾದರೂ ಹೀಗಿದೆ. ಮಾನವ ಸಂಪನ್ಮೂಲವೇ ಜಗತ್ತು ಅಂದರೆ ಜನರು. ಆದರೆ ಮಕ್ಕಳು ಹುಟ್ಟುವಿಕೆಯಲ್ಲಿ/ಹಡೆಯುವ ಪ್ರಕ್ರಿಯೆಯಲ್ಲಿ ‘ಲಿಮಿಟ್’ ತಡೆ ಬೇಕು. ಮಕ್ಕಳನ್ನು ಪಡೆಯುವ ಪ್ರಮಾಣ ಕಡಿಮೆಯಾಗಬೇಕು, ಒಂದು ಕುಟುಂಬಕ್ಕೆ ಅಂದರೆ ಗಂಡ-ಹೆಂಡತಿಗೆ ಒಂದೇ ಮಗು ಸಾಕು. ಇದೇ ಈಗ ಎಲ್ಲರ ಮುಂದೆ ಇರುವ ಸವಾಲು. ಈಗಾಗಲೇ ನಮ್ಮ ಭಾರತದಲ್ಲಿ 130 ಕೋಟಿಗೆ ಜನಸಂಖ್ಯೆ ಇದೆ ಎನ್ನುವ ಕೂಗು ಕೇಳಿ ಬರುತ್ತಿದೆ. ಒಂದೇ ಒಂದು ಎಂದರೂ-ಇಬ್ಬರಿಗೊಬ್ಬರು ಎಂದರೂ ಪ್ರತೀ ವರ್ಷ ಎಷ್ಟಾಗಬಹುದು ಆಲೋಚನೆ ಮಾಡಿ. ಜೊತೆಗೆ ಸಮಾಜದಲ್ಲಿ ಬಹಳ ಮುಖ್ಯವಾಗಿರುವ ಸಮಸ್ಯೆಯ ಕಥೆ ಅಂದರೆ ಯಾರಿಗೆ ಮಕ್ಕಳು ಬೇಡ? ಯಾರ ಮಕ್ಕಳಿಗೆ ಮದುವೆ ಬೇಡ? ಯಾರಿಗೆ ತಮ್ಮ ಮನೆತನ ವಂಶ ಬೆಳೆಯೋದು ಬೇಡ? ಎಂಬ ಮನಸ್ಸಿದೆ, ಎಲ್ಲರಿಗೂ ಮಕ್ಕಳು ಬೇಕು. ಮದುವೆ ಮಾಡಬೇಕು, ಮತ್ತೆ ಮಕ್ಕಳು ಪಡೆಯಬೇಕು-ಇದೇ ಜಗತ್ತು. ಆದರೆ ಏರುತ್ತಿರುವ ಜನಸಂಖ್ಯೆ ಕಡಿಮೆ ಮಾಡಲೇಬೇಕು, ಇದಕ್ಕೆ ಜ್ಞಾನ ವಿಜ್ಞಾನದ ಈ ಆಧುನಿಕತೆಯ ತಂತ್ರಜ್ಞಾನದಿಂದ ಹೇಗಾದರೂ ಮಾಡಿ ಜನಸಂಖ್ಯೆ ಕಡಿಮೆ ಮಾಡಬೇಕು ಎನ್ನುವುದು ಸತ್ಯ-ಒಪ್ಪಬೇಕು. ಆದರೆ ಏನೇ ಕನಿಷ್ಠ ಅಂದರೂ ಒಂದೊಂದೇ ಅಂದರೂ ಸಂಖ್ಯೆ ಏರುತ್ತಲೇ ಹೋಗುತ್ತದೆ. ಇದು ಪ್ರಕೃತಿ/ಸೃಷ್ಠಿ, ಹೆಣ್ಣು-ಗಂಡಿನ ಸಂಗಮ ಸಮಸ್ಯೆ. ಆದರೂ ಒಂದೇ ಸಾಕು ಎಂದು ತಡೆಗೋಡೆ ಹಾಕಿದರೂ ಅದೇ ಕತೆ ಒಂದಾದರೂ ಮಗು ಹೆಣ್ಣಾಗಲಿ/ಗಂಡಾಗಲಿ ಬೇಕೇ ಬೇಕಲ್ಲ. ಆ ಮೇಲೆ ಇನ್ನೊಂದು ಸಮಸ್ಯೆ ಉದ್ಭವವಾಗುತ್ತದೆ. ಏನೋ ಮಾಡಲೋಗಿ ಏನೋ ಆಯಿತು ಅನ್ನೋ ಕಥೆ ಶುರುವಾಗುತ್ತದೆ. ಗಂಡಿನ ಸಮಸ್ಯೆ ಅಥವಾ ಹೆಣ್ಣಿನ ಸಮಸ್ಯೆ ಪ್ರಾರಂಭವಾಗುತ್ತದೆ. ಆ ಮೇಲೆ ಮತ್ತೊಂದು ಯೋಚಿಸಿ ಜಗತ್ತಿಗೆ ಜನ ಬೇಕೇ ಬೇಕಲ್ಲ. ಆದರೂ ನೀವು ಬರಹಗಾರನಾದ ನನಗೆ ಪ್ರಶ್ನೆ ಕೇಳಬಹುದು. ಅಲ್ಲಾ ರೀ ಜನ ಬೇಕು ಅಂತ ಹುಟ್ಟಿಸುತ್ತಾ ಇರಿ ಅನ್ನಬೇಕಾ ಎಂದು ನಿಮ್ಮ ಪ್ರಶ್ನೆ. ಇಲ್ಲ, ಒಂದೇ ಸಾಕು ಆದರೂ ಏರುತ್ತದಲ್ಲ ಇದೊಂದು ರೀತಿಯ ಕಗ್ಗಂಟಿನ ಸಮಸ್ಯೆ-ಜನ ಮಾತಾಡೋದು ಹೀಗೆ ಅಯ್ಯೋ, ಭೂಮಿ ತಾಯಿ ಭಾರ ಹೊರಲಾರಳು, ಜನಜಾಸ್ತಿ ಆದರು, ಎಲ್ಲರಿಗೂ ಅನ್ನ, ಬಟ್ಟೆ, ಕೆಲಸ, ಮನೆ-ಮಟ ಎಲ್ಲಿಂದ ತರೋದು ದೇವರೆ ಅಂತಾರೆ. ಆದರೆ ಮಾಡೋದು ಮಾಡ್ತಾ ಇರ್ತಾರೆ, ಬಾಯಲ್ಲಿ ಹೇಳೋದು ಸುಲಭ, ಆದರೆ ಆಚರಣೆಗೆ ತರೋದು ಕಷ್ಟ. ಸ್ವಾಮಿ ಹುಟ್ಟು-ಸಾವು ಈ ಎರಡು ವಿಷ್ಮಯಕಾರಿ ಗುಟ್ಟು ಮಾನವರಾದ ನಮ್ಮದಲ್ಲ, ನಮಗೆ ಕಾಣದಂತಿರುವ ಆ ಪ್ರಕೃತಿ/ಸೃಷ್ಠಿ/ದೈವ, ಹೆಣ್ಣು-ಗಂಡು ಎನ್ನುವ ಎರಡು ವಸ್ತುಗಳಲ್ಲಿ ಅವನೇ ಇಟ್ಟಿರುವ ಆಸೆ/ಆಕರ್ಷಣೆ ಎಲ್ಲಾ ಜೀವರಾಶಿಗಳಲ್ಲೂ ಇದೆ. ಆದರೆ ನಾವು ನಿಯಂತ್ರಣ ಮಾಡುವುದಕ್ಕಿಂತ ಸೃಷ್ಠಿಕರ್ತನೇ ನಿಯಂತ್ರಣ ಮಾಡಬೇಕು. ಈಗ ನೋಡುತ್ತಿದ್ದೇವಲ್ಲ ಯಾವುದ್ಯಾವುದೋ ರೀತಿಯಲ್ಲಿ ಜನರ ಮಾರಣಹೋಮ/ಸಾವು ಆಗುತ್ತಿದೆ ಇದೇ ನಿಯಂತ್ರಣ. ನಾವು ಮಾಡಿಕೊಳ್ಳುವ ನಿಯಂತ್ರಣ ತಾತ್ಕಾಲಿಕ, ವೈದ್ಯಕೀಯ ಚಿಕಿತ್ಸೆ ಬಳಸಿ ಮಾಡಲೋಗುತ್ತೇವೆ. ಅದು ನಿಯಂತ್ರಣವೂ ಆಗುತ್ತದೆ. ಅಪಾಯವೂ ಆಗುತ್ತದೆ. ಇದರ ಬಗ್ಗೆ ಬಿಡಿಸಲಾಗದ ಒಗಟು ಭಾರತದಲ್ಲಿ ಜಾತಿ ನಿರ್ಮೂಲನೆ-ಜನಸಂಖ್ಯಾ ನಿಯಂತ್ರಣ ಈ ಎರಡೂ ಕಾರ್ಯಕ್ರಮಗಳು ಕಷ್ಟ ಸಾಧ್ಯವೂ ಹೌದು, ಇದು ನನ್ನೊಬ್ಬನ ಆಲೋಚನೆಯಲ್ಲ, ಸಮಸ್ತರ ಮನಸ್ಸಿನಲ್ಲಿ ಹುಟ್ಟುವ ಆಲೋಚನೆಯೂ ಹೌದು. ಈಗ ಹುಟ್ಟು-ಸಾವು ಎನ್ನುವ ಎರಡು ಪದಗಳ ಜೊತೆಗೆ ‘ನಿಯಂತ್ರಣ’ ಎನ್ನುವ ಕೂಗು ಏಳಬೇಕು-ನಮಸ್ಕಾರ.

-ದೇವರಹಳ್ಳಿ ಚೌ.ಪು.ಸ್ವಾಮಿ
ಚನ್ನಪಟ್ಟಣ
 

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in literature »

ಅನುರಾಗ
ಅನುರಾಗ

ಎದೆಬಾನ ಹೊಂಗೊಳಕೆ 

ತಿಂಗಳೊಲಿದಿಳಿದಂತೆ

ನೈದಿಲೆಯ ನಗುವಾಗಿ ಬಾ

ಹುಣ್ಣಿಮೆಯ ಹಸೆಗೆ.... 


ನೋವೆಲ್ಲ ನಗುವಾಗಿ

ನಮ್ಮೊಲವೇ ಜೊತೆಗಿರ

ಹುತಾತ್ಮ
ಹುತಾತ್ಮ

ಹುತಾತ್ಮ

ನಾನು ಒಂದು ತಿಂಗಳ

ರಜೆ ಪಡೆದು ಬಂದಿದ್ದೆ

ಹೊಸಚೈತ್ರದ ಆಗಮನಕ್ಕಾಗಿ॥


ಇರಲಿಲ್ಲ ನನಗೆಂದೂ

ಹಸೆಮಣೆ ಏರುವಾ ಧಾವಂತ

ಭರವಸೆ ಇರದ ಬದುಕ ಆತಂಕ॥


ಹೆತ್ತವರ ವಂಶಬ

“ಜಗತ್ತಿಗೆ ಜನರೇ ಆಭರಣ-ಆದರೂ ಆಗಬೇಕು ಜನ ನಿಯಂತ್ರಣ”     
“ಜಗತ್ತಿಗೆ ಜನರೇ ಆಭರಣ-ಆದರೂ ಆಗಬೇಕು ಜನ ನಿಯಂತ್ರಣ”     

ಜನಸಂಖ್ಯಾ ಸ್ಫೋಟ ಜಗತ್ತಿಗೆ ಮಾರಕ-ಆದರೆ ನಿಯಂತ್ರಣದ ಬಗೆ....? ವಿಶ್ವ ಜನಸಂಖ್ಯಾ ದಿನದ ಸಂಬಂಧವಾಗಿ ಓದುಗ ನಾಗರೀಕ ಬಂಧುಗಳಿಗೆ ಈ ಲೇಖನ. ಬಂಧುಗಳೇ ಜನರಿಂದ ಜಗತ್ತೋ ಅಥವಾ ಜನರಿಗಾಗಿ ಜಗತ್ತೋ? ಜಗತ್ತಿಗೆ ಜನರ ಅಗತ್ಯವೋ ಅಥವಾ ಜನರಿಗೆ ಜಗದ ಅಗತ

ಜನಸಂಖ್ಯೆ ಏರಿಕೆ ಪರಿಸರಕ್ಕೆ ಮಾತ್ರ ಮಾರಕವಲ್ಲ-ಅಭಿವೃದ್ಧಿ ಶೀಲ ದೇಶಗಳಿಗೂ ಮಾರಕ.....
ಜನಸಂಖ್ಯೆ ಏರಿಕೆ ಪರಿಸರಕ್ಕೆ ಮಾತ್ರ ಮಾರಕವಲ್ಲ-ಅಭಿವೃದ್ಧಿ ಶೀಲ ದೇಶಗಳಿಗೂ ಮಾರಕ.....

ಏನು ಮಾಡುವುದು, ಈ ಜನಸಂಖ್ಯೆ ನಿಯಂತ್ರಣ ವಿಚಾರ ಒಂದು ರೀತಿಯ ಬಿಡಿಸಲಾಗದ ಕಗ್ಗಂಟು. ಯಾರಿಗೆ ಹೇಳೋದು ಯಾರಿಗೆ ಬಿಡೋದು, ಮಾನವ ಸಂಪನ್ಮೂಲವೇ ಜಗತ್ತು. ಆದರೂ ಇತಿಮಿತಿ ಆರೋಗ್ಯಕರ, ಈಗಾಗಲೇ ದೇಶದಲ್ಲಿ ಜನಸಂಖ್ಯೆ 125 ಕೋಟಿ ಮೀರಿದೆ. 130 ಕೋಟಿ

ಮಾದರಿ ಜೀವನ ನಡೆಸಿದ ಹುಣಸನಹಳ್ಳಿ ಸಹೋದರರು
ಮಾದರಿ ಜೀವನ ನಡೆಸಿದ ಹುಣಸನಹಳ್ಳಿ ಸಹೋದರರು

        ಅಂದಿನ ಬೆಂಗಳೂರು ಗ್ರಾಮಾಂತರ ಜಿಲ್ಲೆಯಾಗಿದ್ದ ಇಂದಿನ ರಾಮನಗರದಲ್ಲಿ ಜೆಡಿಎಸ್ ಪಕ್ಷ ಗಟ್ಟಿಯಾಗಿ ಬೆರೂರಲು ಕಾರಣರಾದವರು ಕೈಲಾಂಚ ಹೋಬಳಿ ಹುಣಸನಹಳ್ಳಿ ಗ್ರಾಮದ ಮಾರೇಗೌಡ ಕುಟುಂಬದವರು. 

&nb

ಅಂಬೇಡ್ಕರರ ಆಕ್ರಂಧನ
ಅಂಬೇಡ್ಕರರ ಆಕ್ರಂಧನ

ಬೇಡಿ ತೊಡಿಸಿ ಕೂಡಿಹಾಕುತಿರುವ ನನ್ನವರೇ
ಬಿಟ್ಟುಬಿಡಿ ಭೀಮರಾವ ಜಗದ ಜನರ ಆಸ್ತಿಯು
ದಲಿತನೆಂಬ ಹಣೆಯಪಟ್ಟಿ ಜಾತಿಗಲ್ಲ ಸೀಮಿತ
ನೊಂದವರು ದಮನಿತರು ಎಲ್ಲರಿಗೂ ಅನ್ವಯ
ಬಾಬಣ್ಣನ ಮನದೊಳು ಜಾತಿಭೂತವಿರಲಿಲ್ಲ

ಭೀಮ ಪ್ರಭುಗೆ ನಮಿಸೊಣ ಬನ್ನಿರೊ
ಭೀಮ ಪ್ರಭುಗೆ ನಮಿಸೊಣ ಬನ್ನಿರೊ

ಅಣ್ಣಾ ತಮ್ಮಾ ಬನ್ನಿರೊ

ಅವ್ವ ಅಯ್ಯ ಬನ್ನಿರೋ

ಜಗದ ಬೆಳಕ ಬೆಳಗಿದ 

ಜೈಬೀಮನ ಜನುಮದಿನಕೆ ಬನ್ನಿರೋ

ಬಡಜನರ ಬೆವರಿಗೆ

ಬೆಲೆ ತಂದ ಬಾಬಾಸಾಹೇಬರಿಗೆ

ಜೈ ಜೈ ಎನ್ನಿರೊ

ನನ್ನವಳು

ಅರಸೊತ್ತಿನ ಸುತ್ತೋಲೆಗಳೆಲ್ಲಾ ..

ಬೇಗೆಬಿದ್ದಿದೆ ಮನ

ಬೋರಿಡುತಿದೆಯೆಲ್ಲಾ ..

ಅಂದುಕೊಂಡಿಹೆನು

ಬದುಕು ಅವಳೊಂದಿಗೆ

ನೊಂದಿಕೊಂಡಿಹೆನು

ಅವಳು ದೂರಾದರೆ ಹೇಗೆ ..

ಅಕ್ಕೂರು ರಾಮಕೃಷ್ಣಯ್ಯ ಇನ್ನು ನೆನಪು ಮಾತ್ರ
ಅಕ್ಕೂರು ರಾಮಕೃಷ್ಣಯ್ಯ ಇನ್ನು ನೆನಪು ಮಾತ್ರ

ತನ್ನ ಸಮಕಾಲೀನ ಗೆಳೆಯರೊಂದಿಗೆ ಯಾವಾಗಲೂ ಸಮಾಜದ ಸ್ಥಿತಿಗತಿ, ರಾಜಕೀಯ, ಕೃಷಿಯ ಬಗ್ಗೆ ಚರ್ಚಿಸುತ್ತಿದ್ದ ಸಿ. ರಾಮಕೃಷ್ಣಯ್ಯ ಏಪ್ರಿಲ್‌ 2ರಂದು ಸೋಮವಾರ ನಿಧನರಾದರು. ಅವರಿಗೆ 81 ವರ್ಷ ವಯಸ್ಸಾಗಿತ್ತು. ಅಕ್ಕೂರು ರಾಮಕೃಷ್ಣಯ್ಯ ಎಂದೆ ಖ್ಯ

ಆಧುನಿಕ ಕರ್ನಾಟಕವನ್ನು ರೂಪಿಸಿದ ಹಿರಿಯರಲ್ಲೊಬ್ಬರಾದ ಡಾ.ಎಚ್.ಎಸ್. ದೊರೆಸ್ವಾಮಿ ಅವರಿಗೆ 100 ವರ್ಷ
ಆಧುನಿಕ ಕರ್ನಾಟಕವನ್ನು ರೂಪಿಸಿದ ಹಿರಿಯರಲ್ಲೊಬ್ಬರಾದ ಡಾ.ಎಚ್.ಎಸ್. ದೊರೆಸ್ವಾಮಿ ಅವರಿಗೆ 100 ವರ್ಷ

ಮಹಾತ್ಮ ಗಾಂಧೀಜಿ ಅವರ ಕೊನೆಯ ಕೊಂಡಿಯಂತೆ ಜೀವನ ನಡೆಸುತ್ತಿರುವ ಹರೆಯದ ಡಾ.ಎಚ್.ಎಸ್. ದೊರೆಸ್ವಾಮಿ. ಹಿರಿಯ ಸ್ವಾತಂತ್ರ್ಯ ಹೋರಾಟಗಾರಾದ ಇವರು ರಾಮನಗರ ಜಿಲ್ಲೆಯವರು ಎಂದು ಹಲವರಿಗೆ ತಿಳಿದಿಲ್ಲ.

    ರಾಮನಗರ ಜಿ

Top Stories »  


Top ↑