ರೈಲು ಢಿಕ್ಕಿ ಚಿರತೆ ಸಾವು

ಚನ್ನಪಟ್ಟಣ: ತಾಲೂಕಿನ ಹೆದ್ದಾರಿ ಬಳಿಯ ಮಂಚಶೆಟ್ಟಿಹಳ್ಳಿದೊಡ್ಡಿ (ನಾದ ಗ್ರಾಮ) ಗ್ರಾಮದ ಚಿಕ್ಕಮಣ್ಣುಗುಡ್ಡೆ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಸುಮಾರು ಮೂರರಿಂದ. ಮೂರುವರೆ ವರ್ಷದ ಗಂಡು ಚಿರತೆಯೊಂದು ಚಲಿಸುವ ರೈಲಿಗೆ ಸಿಲುಕಿ ಸಾವನ್ನಪ್ಪಿದೆ.
ಮಂಚಶೆಟ್ಟಿಹಳ್ಳಿದೊಡ್ಡಿ ಸಮೀಪವೇ ಚಿಕ್ಕಮಣ್ಣುಗುಡ್ಡೆ ಅರಣ್ಯ ಪ್ರದೇಶ ಇದ್ದು ಕರಡಿ, ಚಿರತೆ, ಕಾಡು ಹಂದಿ ಸೇರಿದಂತೆ ಹಲವಾರು ವನ್ಯಜೀವಿಗಳು ಅರಣ್ಯದಲ್ಲಿವೆ. ರಾಷ್ಟ್ರೀಯ ಹೆದ್ದಾರಿ ಮತ್ತು ಪ್ರತಿನಿತ್ಯ ಸರಿಸುಮಾರು ೫೪ ರೈಲುಗಳು ಓಡಾಡುವ ರೈಲ್ವೆ ಹಳಿ ಇರುವುದರಿಂದ ಹಗಲು ವೇಳೆ ಓಡಾಡದೆ ರಾತ್ರಿ ವೇಳೆ ಆಹಾರ ಅರಸುತ್ತಾ ಹೋಗುವುದನ್ನು ಪ್ರಾಣಿಗಳು ರೂಢಿಸಿಕೊಂಡಿವೆ.
ಸೋಮವಾರ ರಾತ್ರಿ ವೇಳೆಯಲ್ಲಿ ಆಹಾರ ಅರಸುತ್ತ ಗ್ರಾಮದ ಬಳಿ ಬಂದ ಚಿರತೆ ಪಕ್ಕದಲ್ಲೆ ಹಾದುಹೋಗಿದ್ದ ರೈಲು ಹಳಿ ದಾಟಿ ಹೋಗುವಾಗ ಆಕಸ್ಮಿಕವಾಗಿ ಚಲಿಸುವ ರೈಲು ಗಾಡಿಗೆ ಸಿಲುಕಿದೆ. ರೈಲಿನ ರಭಸಕ್ಕೆ ಸಿಕ್ಕ ಚಿರತೆ ಸ್ಥಳದಲ್ಲಿಯೇ ಸಾವನ್ನಪ್ಪಿದೆ.
ಮಂಗಳವಾರ ಮದ್ಯಾಹ್ನ ಸ್ಥಳೀಯರು ಚಿರತೆ ರೈಲ್ವೆ ಹಳಿ ಸಮೀಪ ಸತ್ತುಬಿದ್ದಿರುವುದನ್ನು ಗಮನಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಎಸಿಎಫ್ ಎಂ.ರಾಮಕೃಷ್ಣಪ್ಪ ಮತ್ತು ಅಧಿಕಾರಿಗಳು ಮಹಜರು ನಡೆಸಿ ಸ್ಥಳ ಪರಿಶೀಲನೆ ನಡೆಸಿದರು. ನಂತರ ಚಿರತೆಯ ಶವವನ್ನು ಚಿಕ್ಕಮಣ್ಣುಗುಡ್ಡೆ ಅರಣ್ಯ ಕಚೇರಿಯ ಜಾಗಕ್ಕೆ ಕೊಂಡೊಯ್ದು ಪಶು ಇಲಾಖೆ ವೈದ್ಯಾಧಿಕಾರಿ ಅಂಕೂಗೌಡ ಅವರಿಂದ ಮರಣೋತ್ತರ ಪರೀಕ್ಷೆ ನಡೆಸಿ ನಂತರ ಚಿರತೆ ಶವವನ್ನು ಸುಡಲಾಯಿತು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ. ರಾಮಕೃಷ್ಣಪ್ಪ, ವಲು ಅರಣ್ಯಾಧಿಕಾರಿ ಮಹಮ್ಮದ್ ಮುನ್ಸೂರ್, ಉಪ ವಲಯ ಅರಣ್ಯಾಧಿಕಾರಿ ಗಳಾದ ಶ್ರೀಧರ್ , ಚಂದ್ರನಾಯಕ್ ಮತ್ತು ಸಿಬ್ಬಂದಿಗಳು ಹಾಜರಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
Recent news in nation »

ಜುಲೈ 8ರಂದು ರಾಷ್ಟೀಯ ಲೋಕ ಅದಾಲತ್
ರಾಮನಗರ, ಜೂ. 03: ನ್ಯಾಯಾಲಯದಲ್ಲಿ ಬಾಕಿ ಇರುವ ಹಾಗೂ ರಾಜಿ ಆಗಬಹುದಾದ ಪ್ರಕರಣಗಳನ್ನು 2023ರ ಜುಲೈ 8ರಂದು ನಡೆಯಲಿರುವ ರಾಷ್ಟ್ರೀಯ ಲೋಕ

ಕೆಂಪೇಗೌಡರ ಸಮಾಧಿಯನ್ನು ಪ್ರೇಕ್ಷಣೀಯ ಹಾಗೂ ಪ್ರೇರಣಾ ಸ್ಥಳವನ್ನಾಗಿ ಅಭಿವೃದ್ಧಿ: ಸಿಎಂ
ರಾಮನಗರ, ಜನವರಿ 03: ನಾಡಪ್ರಭು ಕೆಂಪೇಗೌಡರ ವೀರ ಸಮಾಧಿಯನ್ನು ಪ್ರೇಕ್ಷಣೀಯ ಹಾಗೂ ಪ್ರೇರಣಾ ಸ್ಥಳವನ್ನಾಗಿ ಅಭಿವೃದ್ಧಿ ಮಾಡುವುದು ಸರ್ಕಾರದ ಉದ್ದೇಶ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳ

ನಾಳೆ ಸಂಭವಿಸಲಿದೆ ಈ ವರ್ಷದ ಕೊನೆಯ ಸೂರ್ಯಗ್ರಹಣ
ಡಿಸೆಂಬರ್ 4ರ ಶನಿವಾರ ಸೂರ್ಯ ಗ್ರಹಣ ಸಂಭವಿಸಲಿದ್ದು ಇದು ಈ ವರ್ಷದ ಕೊನೆಯ ಗ್ರಹಣವಾಗಿರಲಿದೆ. ಪೂರ್ಣ ಸೂರ್ಯ ಗ್ರಹಣದ ವಿದ್ಯಮಾನ ವಿಶೇಷವಾಗಿದ್ದು ಆ ಸಂದರ್ಭದಲ್ಲಿನ ಪ್ರಕೃತಿಯ ವೈಚಿತ್ರ್ಯಗಳನ್ನು ನೋಡ

ಆಗ್ನೇಯ ಭಾಗದಿಂದ ಚಂಡಾಮಾರುತ ಅಪ್ಪಳಿಸುವ ಸಾಧ್ಯತೆ
ನವದೆಹಲಿ: ಆಗ್ನೇಯ ದಿಕ್ಕಿನಿಂದ ಆಂಧ್ರಪ್ರದೇಶ ಹಾಗೂ ಒಡಿಶಾ ಕರಾವಳಿ ಪ್ರದೇಶಗಳಿಗೆ ಡಿ.4ರಂದು ಬೆಳಗ್ಗೆ ಚಂಡಾಮಾರುತ ಅಪ್ಪಳಿಸುವ ಸಾಧ್ಯತೆಯಿದೆ ಎಂದು ಭಾರತದ ಹವಾಮಾನ ಇಲಾಖೆ ತಿಳಿಸಿದೆ.

ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಕಾಲಿಕ ಮರಣ
ಬೆಂಗಳೂರು.ಅ.29/21: ದೊಡ್ಮನೆ ಹುಡುಗ ಎಂದೇ ಖ್ಯಾತರಾದ, ಮೇರುನಟ ಡಾ ರಾಜಕುಮಾರ್ ರವರ ಕೊನೆಯ ಪುತ್ರ ಕನ್ನಡದ ಖ್ಯಾತ ನಟ ಪುನೀತ್ ರಾಜ್ ಕುಮಾರ್ ರವರು ಇಂದು ಬೆಳಿಗ್ಗೆ ಅಸುನೀಗಿದ್ದಾರೆ. ಅವರು ಮುಂಜಾನೆ ಜಿಮ್ ನಲ್ಲಿ ಕಸರತ್ತು ನಡ

ಕೆಂಪೇಗೌಡರು ಒಬ್ಬ ವ್ಯಕ್ತಿಗೆ ಸೀಮಿತವಲ್ಲ. ಅವರು ರಾಷ್ಟ್ರದ ನಾಯಕರು. ಎಲ್ಐಸಿ ನಾಗರಾಜು
ಕೆಂಪೇಗೌಡರು ಒಕ್ಕಲಿಗರಿಗಾಗಲಿ, ಬೆಂಗಳೂರು ನಿರ್ಮಾತೃರಾಗಿ ಸೀಮಿತವಾಗಿರಲಿಲ್ಲ. ಕರ್ನಾಟಕದ ಭಾಗವಾಗಿದ್ದ ವಿಜಯನಗರದ ಸಾಮ್ರಾಜ್ಯಕಷ್ಟೇ ಸೀಮೀತವಾಗಿರಲಿಲ್ಲ.ಅವರ ಕನಸು ಬಹಳ ವಿಸ್ತಾರವಾಗಿತ್ತು. ಇಡೀ ಭಾರ

ಪಶ್ಚಿಮಬಂಗಾಳದಲ್ಲಿ ಪರಿಶಿಷ್ಟರಿಗೆ ಅವಮಾನ ಮಾಡಿದ ತೃಣಮೂಲ ಕಾಂಗ್ರೆಸ್. ತಹಶಿಲ್ದಾರ್ ಮುಖೇನ ರಾಷ್ಟ್ರಪತಿಗೆ ದೂರು ಸಲ್ಲಿಸಿದ ಬಿಜೆಪಿ ಎಸ್ಸಿ ಮೋರ್ಚಾ
ನಾವು ಹಿಂದುಳಿದವರ ಪರ, ಅಲ್ಪಸಂಖ್ಯಾತರ ಪರ ಎಂದು ಬೊಬ್ಬಿರಿಯುವ ಪಶ್ಚಿಮ ಬಂಗಾಳದ ನಾಯಕಿ ಮಮತಾ ಬ್ಯಾನರ್ಜಿಯವರು, ಅವರ ತೃಣಮೂಲ ಕಾಂಗ್ರೆಸ್ ಪಕ್ಷದ ಮತ್ತೋರ್ವ ನಾಯಕಿ ಸುಜಾತ ಮೊಂಡಲ್ ಖಾನ್ ರವರ ಬಾಯಲ್ಲಿ

ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಹೊಸ ಫಾರ್ಚೂನರ್ ಮತ್ತು ಲೆಜೆಂಡರ್ ನೊಂದಿಗೆ ಹೊಸ ವರ್ಷವನ್ನು ಪ್ರಾರಂಭಿಸುತ್ತಿದೆ

ಅತ್ಯಾಚಾರ ಎಸಗಿ ಕೊಲೆಗೈದ ಪಾಪಿಗಳಿಗೆ ಗಲ್ಲು ಶಿಕ್ಷೆ ನೀಡಿ, ದಲಿತ ಸಂಘಟನೆಗಳ ಆಕ್ರೋಶ
ಚನ್ನಪಟ್ಟಣ:ಅ/05/20/ಸೋಮವಾರ.
ಉತ್ತರ ಪ್ರದೇಶದ ಹಥ್ರಾಸ್ ಜಿಲ್ಲೆಯಲ್ಲಿ ಯುವತಿ ಮೇಲೆ ಪೈಶಾಚಿಕವಾಗಿ ಅತ್ಯಾಚಾರ ನಡೆಸಿ, ಅಮಾನುಷವಾಗಿ ಹತ್ಯೆಗೈದ ಕ್ರೂರಿಗಳಿಗೆ ಗಲ್ಲು ಶಿಕ್ಷೆ ನೀಡಬೇಕು. ಕುಟುಂಬದವರಿಗೂ ಮುಖ ತೋರಿಸದೆ ರಾ

ಇನ್ನು ಮುಂದೆ ಪ್ಯಾರಾಮಿಲ್ಟ್ರಿ ಕ್ಯಾಂಟೀನ್ ಗಳಲ್ಲಿ ಸ್ವದೇಶಿ ವಸ್ತುಗಳಷ್ಟೇ ಮಾರಾಟ ಅಮಿತ್ ಷಾ
ದೆಹಲಿ:ಮೇ/೧೩/೨೦/ಬುಧವಾರ. ದೇಶ ಕಾಯುತ್ತಿರುವ ಅರೆಸೈನಿಕ ಪಡೆಯ ದೇಶದ ನಾನಾ ಭಾಗದ ಎಲ್ಲಾ ಕ್ಯಾಂಟೀನ್ ಗಳಲ್ಲೂ ಜೂನ್ ಒಂದನೇ ತಾರೀಖಿನಿಂದ ಸ್ವದೇಶ
ಪ್ರತಿಕ್ರಿಯೆಗಳು