ಭಾರತ ಯಾರಪ್ಪನ ಸ್ವತ್ತಲ್ಲ, ಸ್ವಾತಂತ್ರ್ಯ ಹೋರಾಟದಲ್ಲಿ ಮುಸ್ಲಿಮರ ಪಾತ್ರವಿದೆ ಕುಮಾರಸ್ವಾಮಿ

ಚನ್ನಪಟ್ಟಣ:ಫೆ/೧೪/೨೦/ಗುರುವಾರ.
ಭಾರತ ದೇಶ ಯಾರಪ್ಪನ ಸ್ವತ್ತಲ್ಲ, ಆರ್ ಎಸ್ ಎಸ್, ವಿ ಹೆಚ್ ಪಿ ಅಥವಾ ಬಿಜೆಪಿಯವರು ಕಟ್ಟಿದ ದೇಶ ನಮ್ಮದಲ್ಲ, ಸ್ವಾತಂತ್ರ್ಯ ಬಂದಾಗ ಇಂದಿನ ಬಿಜೆಪಿಯ ನಾಯಕರು ಹುಟ್ಟೇ ಇರಲಿಲ್ಲ, ಇಂತಹವರಿಂದ ನಾವು ಪಾಠ ಕಲಿಯಬೇಕಾಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ಕ್ಷೇತ್ರದ ಶಾಸಕ ಹೆಚ್ ಡಿ ಕುಮಾರಸ್ವಾಮಿ ಕೇಂದ್ರ ಸರ್ಕಾರ ಹಾಗೂ ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು.
ಅವರು ಇಂದು ನಗರದ ಪೆಟ್ಟಾ ಸರ್ಕಾರಿ ಶಾಲೆಯ ಬಳಿ ಮುಸ್ಲಿಮರು ಸಿ ಎ ಎ, ಎನ್ ಆರ್ ಸಿ, ಎನ್ ಪಿ ಆರ್ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
*ಪೌರತ್ವ ಕಾಯಿದೆ ಎಲ್ಲರಿಗೂ ಅನ್ವಯ*
ಪೌರತ್ವ ಕಾಯಿದೆ ಕೇವಲ ಮುಸ್ಲಿಮರಿಗಷ್ಟೇ ಅನ್ವಯಿಸುವುದಿಲ್ಲ, ದೇಶದ ಎಲ್ಲಾ ಧರ್ಮದ, ಜಾತಿಯ ಜನರಿಗೂ ಅನ್ವಯಿಸುತ್ತದೆ. ಆದರೆ ಕೆಲವರಿಗೆ ಅರ್ಥವಾಗುತ್ತಿಲ್ಲ. ಅಸ್ಸಾಂ ರಾಜ್ಯವೇ ಇವರಿಗೆ ಉದಾಹರಣೆಯಾಗಿದೆ. ಶೀಘ್ರವಾಗಿ ದೇಶದ ಎಲ್ಲಾ ನಾಗರೀಕರು ದಾಖಲೆ ಹಿಡಿದು ಸರಣಿಯಲ್ಲಿ ನಿಂತಾಗಲೇ ಅರಿವಾಗುತ್ತದೆ ಎಂದರು.
*ಮೋದಿ, ಷಾ, ಹೆಗಡೆ, ವಿರುದ್ದ ಗುಡುಗು*
ಮೋದಿ ಇಲ್ಲಿ ಮಾತನಾಡಿದರೆ ಚೀನಾ ಮತ್ತು ಪಾಕಿಸ್ತಾನ ಗಡಗಡ ಎನ್ನುತ್ತವಂತೆ, ಇಲ್ಲಿಯ ಆರ್ಥಿಕ ಪರಿಸ್ಥಿತಿ, ನಿರುದ್ಯೋಗ ಸರಿಪಡಿಸಲಾಗದ ಮೋದಿಗೆ ಹೆದರುತ್ತಾರೆಯೇ ?.
ನೆಹರು ಮಾಡಿದ ತಪ್ಪನ್ನು ಷಾ ಈಗ ಸರಿ ಮಾಡುತ್ತಾರಂತೆ ! ನೆಹರು ಸತ್ತ ನಾಲ್ಕು ದಿನಗಳ ನಂತರ ಹುಟ್ಟಿದ ಷಾ ಗೆ ನೆಹರು ಮಾಡಿದ ತಪ್ಪು ಹೇಗೆ ಗೊತ್ತಾಯಿತು ?.
ಸಂಸದ ಅನಂತ ಕುಮಾರ ಹೆಗಡೆ ನಾಲ್ಕು ವರ್ಷಗಳ ಹಿಂದೆಯೇ ನಾವು ಬಂದಿರುವುದೇ ಸಂವಿಧಾನ ಬದಲಾಯಿಸಲು ಎಂದು ಹೇಳುತ್ತಾರೆ, ಇಂತಹ ಸಾವಿರ ಮಂದಿ ಬಂದರೂ ಸಾಧ್ಯವಿಲ್ಲ ಎಂದರು.
*ಕಲ್ಲಡ್ಕ ಭಟ್ಟ ಮತ್ತು ಯೋಗೇಶ್ವರ್ ಮತ್ತು ಸರ್ಕಾರದ ವಿರುದ್ಧ ಕಿಡಿ*
ರಾಮನಗರ ಜಿಲ್ಲೆಯಲ್ಲಿ ಸರ್ವಧರ್ಮ ದ ಜನರು ಒಗ್ಗಟ್ಟಾಗಿ ಬಾಳುತ್ತಿದ್ದಾರೆ. ಇಂತಹ ಜಿಲ್ಲೆಯ ಜನರನ್ನು ಧರ್ಮದ ಹೆಸರಿನಲ್ಲಿ ಒಡೆದಾಳಲು ಕಲ್ಲಡ್ಕ ಪ್ರಭಾಕರ್ ಭಟ್ಟ ರಾಮನಗರಕ್ಕೆ ಬಂದಿದ್ದು ಅವನಿಗೆ ಇಲ್ಲಿನ ಶಾಸಕ ಸಾತ್ ನೀಡಿದ್ದು ಇಂತಹ ಚಡ್ಡಿಗಳ ಅವಶ್ಯಕತೆ ನಮಗಿಲ್ಲ. ಮೆಗಾಸಿಟಿ ಹೆಸರಲ್ಲಿ ಬಡವರ ಹಣ ದೋಚಿದವನು ಶಿಸ್ತಿನ ಸಿಪಾಯಿಯಂತೆ ಎಂದು ಯೋಗೇಶ್ವರ್ ಹೆಸರೇಳದೆ ಕುಟುಕಿದರು.
ಮುಸ್ಲಿಮರು ಪ್ರತಿಭಟನೆ ನಡೆಸುತ್ತಾರೆ ಎಂದೇ ೧೪೪ ಸೆಕ್ಷನ್ ಜಾರಿಗೆ ತರುತ್ತಾರೆ. ಇದನ್ನು ಹೈಕೋರ್ಟ್ ತೀವ್ರವಾಗಿ ಖಂಡಿಸಿ ಪೋಲಿಸ್ ವರಿಷ್ಠಾಧಿಕಾರಿಗೆ ಛೀಮಾರಿ ಹಾಕಿದೆ. ಕನಕಪುರ ದ ಚಚ್೯ ವಿಷಯವಾಗಿ ಮಾತನಾಡುವ ಇವರು ಇವರದೇ ಸರ್ಕಾರ ಇದೆ. ತಾಕತ್ತಿದ್ದರೆ ಜಮೀನು ವಾಪಸು ಪಡೆಯಲಿ ಎಂದು ಸವಾಲು ಹಾಕಿದರು.
ಜನರನ್ನು ಪ್ರತಿಬಾರಿ ಮೋಸ ಮಾಡಲು ಆಗುವುದಿಲ್ಲ. ನಿಮ್ಮ ಜೊತೆ ನಾವಿರುತ್ತೇವೆ. ಮೋದಿ ಷಾ ತೊಲಗುವವರೆಗೂ ಪ್ರತಿಭಟಿಸೋಣಾ. ಪೌರತ್ವ ಕಾಯಿದೆಯನ್ನು ವಿರೋಧಿಸೋಣಾ ಎಂದು ಕರೆ ನೀಡಿದರು.
*ಕೇಂದ್ರ ಸರ್ಕಾರದ ವಿರುದ್ಧ ಕುಹಕವಾಡಿದ ಸಿ ಎಂ ಇಬ್ರಾಹಿಂ*
ಕೇಂದ್ರ ಸರ್ಕಾರ ಹಾಗೂ ಬಿಜೆಪಿ ನಾಯಕರ ವರಸೆ ಹೇಗಿದೆ ಎಂದರೆ ಜನರಿಗೆಲ್ಲಾ ಚೋರ್ ಚೋರ್ (ಕಳ್ಳ ಕಳ್ಳ) ಅಲ್ಲಿ ಅಲ್ಲಿ ಎಂದು ಕೂಗುವುದು, ಅವರ ಗಮನ ಆಕಡೆ ಹೋದ ನಂತರ ಪಕ್ಕದಲ್ಲಿದ್ದವನ ಜೇಬಿಗೆ ಕತ್ತರಿ ಹಾಕುವುದು. ನಮ್ಮ ದಾಖಲೆ ಕೇಳಲಿ ಕೊಡೋಣಾ, ನಮ್ಮ ಅಪ್ಪ ಅಮ್ಮ, ಅವರ ಅಪ್ಪ ಅಮ್ಮ, ಹುಟ್ಟಿದ ಜಾತಕ, ಮದುವೆಯಾದ ಜಾತಕ ಎಲ್ಲಿಂದ ಕೊಡುವುದು ?.
ಪೌರತ್ವ ಕಾಯಿದೆಯಿಂದ ಮೂವತ್ತು ಕೋಟಿ ಮಂದಿ ದಾಖಲೆ ನೀಡಲು ಆಗುವುದಿಲ್ಲ, ಯಾಕೆಂದರೆ ಇವರಲ್ಲಿ ಬಡವರು, ಆದಿವಾಸಿಗಳು ಇನ್ನಿತರರು ಸೇರುತ್ತಾರೆ. ಇಂತಹವರು ಎಲ್ಲಿಂ ದಾಖಲೆ ತರುತ್ತಾರೆ.
*ಅಂಬೇಡ್ಕರ್ ಗೆಲ್ಲಿಸಿದ್ದು ಮುಸ್ಲಿಮರು*
ಹಿಂದೂಗಳು ಚುನಾವಣೆಯಲ್ಲಿ ಅಂಬೇಡ್ಕರ್ ಸೋಲಿಸಿದ ನಂತರ ಗೆಲ್ಲಿಸಿದ್ದು ಮುಸ್ಲಿಮರು. ಶೇಕಡಾ ೭೦ ರಷ್ಟು ಮೂಲ ಪಾಕಿಸ್ತಾನದವರು ದೆಹಲಿಯಲ್ಲಿದ್ದಾರೆ, ಮುಸ್ಲಿಮರ ವಿರುದ್ಧ ಮಾತಾಡಿದ್ದಕ್ಕೆ ದೆಹಲಿಯನ್ನು ಬಿಜೆಪಿ ಕಳೆದುಕೊಂಡಿದೆ. ಏರ್ಪೋರ್ಟ್, ಪೆಟ್ರೋಲಿಯಂ ಮತ್ತು ಎಲ್ ಐ ಸಿ ಯಂತಹ ಕಂಪೆನಿಗಳನ್ನು ಮಾರಾಟಕ್ಕೆ ಇಟ್ಟಿದ್ದಾರೆ. ಮೋದಿ ಅಧಿಕಾರಕ್ಕೆ ಬಂದ ನಂತರ ಹತ್ತು ಲಕ್ಷ ಕೋಟಿ ರೂಪಾಯಿ ಲುಕ್ಸಾನಾಗಿದೆ ಎಂದು ಆರೋಪಿಸಿದರು.
*ಹೇ ರಾಮ್, ಶ್ರೀ ರಾಮ್, ಸರ್ವೇಜನ ಸುಖಿನೋ ಭವತು*
ನಾಥೂರಾಂ ಗೋಡ್ಸೆ ಸಾಯುವಾಗ ಶ್ರೀ ರಾಮ್ ಅಂತಾನೆ, ಮಹಾತ್ಮ ಗಾಂಧಿ ಸಾಯುವಾಗ ಹೇ ರಾಮ್ ಅಂತಾರೆ, ಅವರಿಗೂ ಇವರಿಗೂ ಇರುವ ವ್ಯತ್ಯಾಸ ಇದು. ಮದುವೆಗೆ ಮತ್ತು ಆಸ್ತಿಗೆ ಮಾತ್ರ ದಾಖಲೆ ಬೇಕು, ನಮ್ಮ ಧರ್ಮದಲ್ಲಿ ನಾಲ್ಕು ಮದುವೆ ಮಾಡಿಕೊಳ್ಳಲು ಅವಕಾಶ ಇದೆ. ಐದನೆಯದನ್ನು ಮಾಡಿಕೊಂಡರೆ ಅವನ ಕತೆ ಕಲಾಸ್ ಮಾಡುತ್ತಾರೆ.
ಬಿಜೆಪಿ ಸರ್ಕಾರಕ್ಕೆ ಬದ್ದತೆ ಇದ್ದರೆ ಇವಿಎಂ ತೆಗೆದು ಹಾಕಿ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ಗೆಲ್ಲಲಿ ಎಂದು ಸವಾಲು ಹಾಕಿದರು.
ಹಿಂದೂ ಧರ್ಮದಲ್ಲಿ ಸರ್ವೇಜನ ಸುಖಿನೋ ಭವತು ಎಂದರೆ, ಹಸಿದವನ ಜೊತೆ ಹಂಚುಣ್ಣು ಎನ್ನುವುದು ನಮ್ಮ ಧರ್ಮ. ಇಂತಹ ಒಗ್ಗಟ್ಟಿನ ಧರ್ಮವನ್ನು ಒಡೆಯಬೇಡಿ ಎಂದರು.
ಜನಸಂಘದ ಅಮೂಲ್ಯ ಮತ್ತು ಮುಸ್ಲಿಂ ಧರ್ಮಗುರುಗಳು ಮಾತನಾಡಿದರು.
ವೇದಿಕೆಯಲ್ಲಿ ಕಾಂಗ್ರೆಸ್ ಮುಖಂಡರಾದ ಶರತ್ ಚಂದ್ರ, ಗಂಗಾಧರ, ವಕೀಲ ಗಿರೀಶ್, ನಗರಸಭೆ ಮಾಜಿ ಸದಸ್ಯ ವಾಸೀಲ್ ಅಲಿಖಾನ್, ವೀಣಾಕುಮಾರಿ, ಪಾರ್ವತಮ್ಮ, ಕೆ ಟಿ ಲಕ್ಷ್ಮಮ್ಮ, ಕೋಕಿಲಾ, ಜೆಡಿಎಸ್ ಮುಖಂಡರಾದ ಜಯಮುತ್ತು, ಲಿಂಗೇಶಕುಮಾರ್, ರಾಂಪುರ ರಾಜಣ್ಣ, ಗೋವಿಂದಳ್ಳಿ ನಾಗರಾಜು ಮತ್ತಿತರರು ಉಪಸ್ಥಿತರಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
Recent news in nation »

ಜುಲೈ 8ರಂದು ರಾಷ್ಟೀಯ ಲೋಕ ಅದಾಲತ್
ರಾಮನಗರ, ಜೂ. 03: ನ್ಯಾಯಾಲಯದಲ್ಲಿ ಬಾಕಿ ಇರುವ ಹಾಗೂ ರಾಜಿ ಆಗಬಹುದಾದ ಪ್ರಕರಣಗಳನ್ನು 2023ರ ಜುಲೈ 8ರಂದು ನಡೆಯಲಿರುವ ರಾಷ್ಟ್ರೀಯ ಲೋಕ

ಕೆಂಪೇಗೌಡರ ಸಮಾಧಿಯನ್ನು ಪ್ರೇಕ್ಷಣೀಯ ಹಾಗೂ ಪ್ರೇರಣಾ ಸ್ಥಳವನ್ನಾಗಿ ಅಭಿವೃದ್ಧಿ: ಸಿಎಂ
ರಾಮನಗರ, ಜನವರಿ 03: ನಾಡಪ್ರಭು ಕೆಂಪೇಗೌಡರ ವೀರ ಸಮಾಧಿಯನ್ನು ಪ್ರೇಕ್ಷಣೀಯ ಹಾಗೂ ಪ್ರೇರಣಾ ಸ್ಥಳವನ್ನಾಗಿ ಅಭಿವೃದ್ಧಿ ಮಾಡುವುದು ಸರ್ಕಾರದ ಉದ್ದೇಶ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳ

ನಾಳೆ ಸಂಭವಿಸಲಿದೆ ಈ ವರ್ಷದ ಕೊನೆಯ ಸೂರ್ಯಗ್ರಹಣ
ಡಿಸೆಂಬರ್ 4ರ ಶನಿವಾರ ಸೂರ್ಯ ಗ್ರಹಣ ಸಂಭವಿಸಲಿದ್ದು ಇದು ಈ ವರ್ಷದ ಕೊನೆಯ ಗ್ರಹಣವಾಗಿರಲಿದೆ. ಪೂರ್ಣ ಸೂರ್ಯ ಗ್ರಹಣದ ವಿದ್ಯಮಾನ ವಿಶೇಷವಾಗಿದ್ದು ಆ ಸಂದರ್ಭದಲ್ಲಿನ ಪ್ರಕೃತಿಯ ವೈಚಿತ್ರ್ಯಗಳನ್ನು ನೋಡ

ಆಗ್ನೇಯ ಭಾಗದಿಂದ ಚಂಡಾಮಾರುತ ಅಪ್ಪಳಿಸುವ ಸಾಧ್ಯತೆ
ನವದೆಹಲಿ: ಆಗ್ನೇಯ ದಿಕ್ಕಿನಿಂದ ಆಂಧ್ರಪ್ರದೇಶ ಹಾಗೂ ಒಡಿಶಾ ಕರಾವಳಿ ಪ್ರದೇಶಗಳಿಗೆ ಡಿ.4ರಂದು ಬೆಳಗ್ಗೆ ಚಂಡಾಮಾರುತ ಅಪ್ಪಳಿಸುವ ಸಾಧ್ಯತೆಯಿದೆ ಎಂದು ಭಾರತದ ಹವಾಮಾನ ಇಲಾಖೆ ತಿಳಿಸಿದೆ.

ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಕಾಲಿಕ ಮರಣ
ಬೆಂಗಳೂರು.ಅ.29/21: ದೊಡ್ಮನೆ ಹುಡುಗ ಎಂದೇ ಖ್ಯಾತರಾದ, ಮೇರುನಟ ಡಾ ರಾಜಕುಮಾರ್ ರವರ ಕೊನೆಯ ಪುತ್ರ ಕನ್ನಡದ ಖ್ಯಾತ ನಟ ಪುನೀತ್ ರಾಜ್ ಕುಮಾರ್ ರವರು ಇಂದು ಬೆಳಿಗ್ಗೆ ಅಸುನೀಗಿದ್ದಾರೆ. ಅವರು ಮುಂಜಾನೆ ಜಿಮ್ ನಲ್ಲಿ ಕಸರತ್ತು ನಡ

ಕೆಂಪೇಗೌಡರು ಒಬ್ಬ ವ್ಯಕ್ತಿಗೆ ಸೀಮಿತವಲ್ಲ. ಅವರು ರಾಷ್ಟ್ರದ ನಾಯಕರು. ಎಲ್ಐಸಿ ನಾಗರಾಜು
ಕೆಂಪೇಗೌಡರು ಒಕ್ಕಲಿಗರಿಗಾಗಲಿ, ಬೆಂಗಳೂರು ನಿರ್ಮಾತೃರಾಗಿ ಸೀಮಿತವಾಗಿರಲಿಲ್ಲ. ಕರ್ನಾಟಕದ ಭಾಗವಾಗಿದ್ದ ವಿಜಯನಗರದ ಸಾಮ್ರಾಜ್ಯಕಷ್ಟೇ ಸೀಮೀತವಾಗಿರಲಿಲ್ಲ.ಅವರ ಕನಸು ಬಹಳ ವಿಸ್ತಾರವಾಗಿತ್ತು. ಇಡೀ ಭಾರ

ಪಶ್ಚಿಮಬಂಗಾಳದಲ್ಲಿ ಪರಿಶಿಷ್ಟರಿಗೆ ಅವಮಾನ ಮಾಡಿದ ತೃಣಮೂಲ ಕಾಂಗ್ರೆಸ್. ತಹಶಿಲ್ದಾರ್ ಮುಖೇನ ರಾಷ್ಟ್ರಪತಿಗೆ ದೂರು ಸಲ್ಲಿಸಿದ ಬಿಜೆಪಿ ಎಸ್ಸಿ ಮೋರ್ಚಾ
ನಾವು ಹಿಂದುಳಿದವರ ಪರ, ಅಲ್ಪಸಂಖ್ಯಾತರ ಪರ ಎಂದು ಬೊಬ್ಬಿರಿಯುವ ಪಶ್ಚಿಮ ಬಂಗಾಳದ ನಾಯಕಿ ಮಮತಾ ಬ್ಯಾನರ್ಜಿಯವರು, ಅವರ ತೃಣಮೂಲ ಕಾಂಗ್ರೆಸ್ ಪಕ್ಷದ ಮತ್ತೋರ್ವ ನಾಯಕಿ ಸುಜಾತ ಮೊಂಡಲ್ ಖಾನ್ ರವರ ಬಾಯಲ್ಲಿ

ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಹೊಸ ಫಾರ್ಚೂನರ್ ಮತ್ತು ಲೆಜೆಂಡರ್ ನೊಂದಿಗೆ ಹೊಸ ವರ್ಷವನ್ನು ಪ್ರಾರಂಭಿಸುತ್ತಿದೆ

ಅತ್ಯಾಚಾರ ಎಸಗಿ ಕೊಲೆಗೈದ ಪಾಪಿಗಳಿಗೆ ಗಲ್ಲು ಶಿಕ್ಷೆ ನೀಡಿ, ದಲಿತ ಸಂಘಟನೆಗಳ ಆಕ್ರೋಶ
ಚನ್ನಪಟ್ಟಣ:ಅ/05/20/ಸೋಮವಾರ.
ಉತ್ತರ ಪ್ರದೇಶದ ಹಥ್ರಾಸ್ ಜಿಲ್ಲೆಯಲ್ಲಿ ಯುವತಿ ಮೇಲೆ ಪೈಶಾಚಿಕವಾಗಿ ಅತ್ಯಾಚಾರ ನಡೆಸಿ, ಅಮಾನುಷವಾಗಿ ಹತ್ಯೆಗೈದ ಕ್ರೂರಿಗಳಿಗೆ ಗಲ್ಲು ಶಿಕ್ಷೆ ನೀಡಬೇಕು. ಕುಟುಂಬದವರಿಗೂ ಮುಖ ತೋರಿಸದೆ ರಾ

ಇನ್ನು ಮುಂದೆ ಪ್ಯಾರಾಮಿಲ್ಟ್ರಿ ಕ್ಯಾಂಟೀನ್ ಗಳಲ್ಲಿ ಸ್ವದೇಶಿ ವಸ್ತುಗಳಷ್ಟೇ ಮಾರಾಟ ಅಮಿತ್ ಷಾ
ದೆಹಲಿ:ಮೇ/೧೩/೨೦/ಬುಧವಾರ. ದೇಶ ಕಾಯುತ್ತಿರುವ ಅರೆಸೈನಿಕ ಪಡೆಯ ದೇಶದ ನಾನಾ ಭಾಗದ ಎಲ್ಲಾ ಕ್ಯಾಂಟೀನ್ ಗಳಲ್ಲೂ ಜೂನ್ ಒಂದನೇ ತಾರೀಖಿನಿಂದ ಸ್ವದೇಶ
ಪ್ರತಿಕ್ರಿಯೆಗಳು