ಹುಣಸೂರು ಮೂಲದ ಕಳ್ಳನನ್ನು ಬಂಧಿಸಿ ಏಳು ದ್ವಿಚಕ್ರ ವಾಹನ ವಶಪಡಿಸಿಕೊಂಡ ಪುರ ಪೋಲಿಸರು

ಚನ್ನಪಟ್ಟಣ: ನಗರದಲ್ಲಿ ಅನುಮಾನಾಸ್ಪದವಾಗಿ ತಿರುಗುತ್ತಿದ್ದ ವ್ಯಕ್ತಿಯೋರ್ವನನ್ನು ವಿಚಾರಣೆ ಮಾಡಲಾಗಿ ಆತ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದು ಪೋಲಿಸರ ಕಣ್ತಪ್ಪಿಸಿ ತಿರುಗಾಡಿಕೊಂಡಿದ್ದ ಎಂಬುದು ಸಾಬೀತಾದ ಹಿನ್ನೆಲೆಯಲ್ಲಿ ಆತನ ಬಳಿ ಇದ್ದ ದ್ವಿಚಕ್ರ ವಾಹನಗಳು ಮತ್ತು ಹಣವನ್ನು ವಶಪಡಿಸಿಕೊಂಡು ಜೈಲಿಗಟ್ಟಿದ್ದಾರೆ.
ಕಳ್ಳನನ್ನು ಬಂಧಿಸುವ ಮೂಲಕ ಆತನಿಂದ 7 ದ್ವಿಚಕ್ರ ವಾಹನಗಳನ್ನು ಹಾಗೂ ನಂಜನಗೂಡಿನ ದೇವಾಲಯವೊದರಲ್ಲಿ ಕದ್ದಿದ್ದ ಹಣವನ್ನು ವಶಪಡಿಸಿಕೊಳ್ಳುವ ಮುಖಾಂತರ ಭರ್ಜರಿ ಭೇಟೆಯಾಡಿದ್ದಾರೆ.
ಕಿರಣ್ ಆಲಿಯಾಸ್ ಸುಧಿ ಬಂಧಿತ ಆರೋಪಿಯಾಗಿದ್ದು, ಮೈಸೂರು ಜಿಲ್ಲೆಯ ಹುಣಸೂರು ನಗರ ವಾಸಿಯಾದ ಈತ ನಗರದಲ್ಲಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಈತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿ ಹಲವು ಕಡೆ ವಾಹನಗಳನ್ನು ಕದ್ದಿರುವುದಾಗಿ ತಿಳಿಸಿ ಪೊಲೀಸರ ಅತಿಥಿಯಾಗಿದ್ದಾನೆ.
ಕೆಲ ದಿನಗಳ ಹಿಂದಷ್ಟೆ ಕೂರಣಗೆರೆ ಗ್ರಾಮದ ವ್ಯಕ್ತಿಯೊಬ್ಬರ ದ್ವಿಚಕ್ರ ವಾಹನ ತಾಲೂಕು ಕಚೇರಿ ಮುಂಭಾಗ ಕಳುವಾಗಿತ್ತು, ಈ ಬಗ್ಗೆ ಠಾಣೆಯಲ್ಲಿ ದೂರು ದಾಖಲಾಗಿ ತನಿಖೆ ನಡೆಸುತ್ತಿದ್ದು, ಇದೇ ವೇಳೆ ಪೊಲೀಸರಿಗೆ ಈ ವಾಹನ ಕಂಡು ಬಂದಿದ್ದು, ಇದರ ಜಾಡು ಹಿಡಿದು ಹೊರಟಾಗ ಹಲವೆಡೆ ದ್ವಿಚಕ್ರ ವಾಃನಗಳನ್ನು ಕಳ್ಳತನ ಮಾಡುತ್ತಿದ್ದ ಈತ ಸಿಕ್ಕಿ ಹಾಕಿಕೊಂಡಿದ್ದಾನೆ.
ಪ್ರೋಬೇಷನರಿ ಡಿವೈಎಸ್ಪಿ ಸ್ನೇಹಾರಾಜ್ ರವರ ನೇತೃತ್ವದಲ್ಲಿ ನಗರ ವೃತ್ತ ನಿರೀಕ್ಷಕಿ ಶೋಭಾ, ಉಪ ನಿರೀಕ್ಷಕರಾಧ ಹರೀಶ್ ಹಾಗೂ ಎಎಸ್ಐ ಗಳಾದ ಅಫ್ಜಲ್ ಖಾನ್, ರಾಮಕೃಷ್ಣ, ಶ್ರೀನಿವಾಸ, ಮಹದೇವಯ್ಯ, ನರಸಿಂಹಯ್ಯ, ಸಿದ್ದರಾಜು, ಹೆಡ್ ಕಾನ್ಸ್ಟೇಬಲ್ ಗಳಾದ ನಾಗರಾಜು, ಸುಭಾಷ್, ಸಿಬ್ಬಂದಿಗಳಾದ ಸುನೀಲ್ ಕುಮಾರ್, ಪವನ್ ಕುಮಾರ್, ಚಂದ್ರಶೇಖರ್, ಅವಿನಾಶ್, ಆನಂದ, ರವಿಕುಮಾರ್, ರವಿ ಕಾರ್ಯಾಚರಣೆಯಲ್ಲಿ ಪಾಲ್ಗೂಂಡಿದ್ದು, ಇವರೆಲ್ಲರಿಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.
ಗೋ ರಾ ಶ್ರೀನಿವಾಸ...
ಮೊ:9845856139.
Recent news in nation »

ಜುಲೈ 8ರಂದು ರಾಷ್ಟೀಯ ಲೋಕ ಅದಾಲತ್
ರಾಮನಗರ, ಜೂ. 03: ನ್ಯಾಯಾಲಯದಲ್ಲಿ ಬಾಕಿ ಇರುವ ಹಾಗೂ ರಾಜಿ ಆಗಬಹುದಾದ ಪ್ರಕರಣಗಳನ್ನು 2023ರ ಜುಲೈ 8ರಂದು ನಡೆಯಲಿರುವ ರಾಷ್ಟ್ರೀಯ ಲೋಕ

ಕೆಂಪೇಗೌಡರ ಸಮಾಧಿಯನ್ನು ಪ್ರೇಕ್ಷಣೀಯ ಹಾಗೂ ಪ್ರೇರಣಾ ಸ್ಥಳವನ್ನಾಗಿ ಅಭಿವೃದ್ಧಿ: ಸಿಎಂ
ರಾಮನಗರ, ಜನವರಿ 03: ನಾಡಪ್ರಭು ಕೆಂಪೇಗೌಡರ ವೀರ ಸಮಾಧಿಯನ್ನು ಪ್ರೇಕ್ಷಣೀಯ ಹಾಗೂ ಪ್ರೇರಣಾ ಸ್ಥಳವನ್ನಾಗಿ ಅಭಿವೃದ್ಧಿ ಮಾಡುವುದು ಸರ್ಕಾರದ ಉದ್ದೇಶ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳ

ನಾಳೆ ಸಂಭವಿಸಲಿದೆ ಈ ವರ್ಷದ ಕೊನೆಯ ಸೂರ್ಯಗ್ರಹಣ
ಡಿಸೆಂಬರ್ 4ರ ಶನಿವಾರ ಸೂರ್ಯ ಗ್ರಹಣ ಸಂಭವಿಸಲಿದ್ದು ಇದು ಈ ವರ್ಷದ ಕೊನೆಯ ಗ್ರಹಣವಾಗಿರಲಿದೆ. ಪೂರ್ಣ ಸೂರ್ಯ ಗ್ರಹಣದ ವಿದ್ಯಮಾನ ವಿಶೇಷವಾಗಿದ್ದು ಆ ಸಂದರ್ಭದಲ್ಲಿನ ಪ್ರಕೃತಿಯ ವೈಚಿತ್ರ್ಯಗಳನ್ನು ನೋಡ

ಆಗ್ನೇಯ ಭಾಗದಿಂದ ಚಂಡಾಮಾರುತ ಅಪ್ಪಳಿಸುವ ಸಾಧ್ಯತೆ
ನವದೆಹಲಿ: ಆಗ್ನೇಯ ದಿಕ್ಕಿನಿಂದ ಆಂಧ್ರಪ್ರದೇಶ ಹಾಗೂ ಒಡಿಶಾ ಕರಾವಳಿ ಪ್ರದೇಶಗಳಿಗೆ ಡಿ.4ರಂದು ಬೆಳಗ್ಗೆ ಚಂಡಾಮಾರುತ ಅಪ್ಪಳಿಸುವ ಸಾಧ್ಯತೆಯಿದೆ ಎಂದು ಭಾರತದ ಹವಾಮಾನ ಇಲಾಖೆ ತಿಳಿಸಿದೆ.

ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಕಾಲಿಕ ಮರಣ
ಬೆಂಗಳೂರು.ಅ.29/21: ದೊಡ್ಮನೆ ಹುಡುಗ ಎಂದೇ ಖ್ಯಾತರಾದ, ಮೇರುನಟ ಡಾ ರಾಜಕುಮಾರ್ ರವರ ಕೊನೆಯ ಪುತ್ರ ಕನ್ನಡದ ಖ್ಯಾತ ನಟ ಪುನೀತ್ ರಾಜ್ ಕುಮಾರ್ ರವರು ಇಂದು ಬೆಳಿಗ್ಗೆ ಅಸುನೀಗಿದ್ದಾರೆ. ಅವರು ಮುಂಜಾನೆ ಜಿಮ್ ನಲ್ಲಿ ಕಸರತ್ತು ನಡ

ಕೆಂಪೇಗೌಡರು ಒಬ್ಬ ವ್ಯಕ್ತಿಗೆ ಸೀಮಿತವಲ್ಲ. ಅವರು ರಾಷ್ಟ್ರದ ನಾಯಕರು. ಎಲ್ಐಸಿ ನಾಗರಾಜು
ಕೆಂಪೇಗೌಡರು ಒಕ್ಕಲಿಗರಿಗಾಗಲಿ, ಬೆಂಗಳೂರು ನಿರ್ಮಾತೃರಾಗಿ ಸೀಮಿತವಾಗಿರಲಿಲ್ಲ. ಕರ್ನಾಟಕದ ಭಾಗವಾಗಿದ್ದ ವಿಜಯನಗರದ ಸಾಮ್ರಾಜ್ಯಕಷ್ಟೇ ಸೀಮೀತವಾಗಿರಲಿಲ್ಲ.ಅವರ ಕನಸು ಬಹಳ ವಿಸ್ತಾರವಾಗಿತ್ತು. ಇಡೀ ಭಾರ

ಪಶ್ಚಿಮಬಂಗಾಳದಲ್ಲಿ ಪರಿಶಿಷ್ಟರಿಗೆ ಅವಮಾನ ಮಾಡಿದ ತೃಣಮೂಲ ಕಾಂಗ್ರೆಸ್. ತಹಶಿಲ್ದಾರ್ ಮುಖೇನ ರಾಷ್ಟ್ರಪತಿಗೆ ದೂರು ಸಲ್ಲಿಸಿದ ಬಿಜೆಪಿ ಎಸ್ಸಿ ಮೋರ್ಚಾ
ನಾವು ಹಿಂದುಳಿದವರ ಪರ, ಅಲ್ಪಸಂಖ್ಯಾತರ ಪರ ಎಂದು ಬೊಬ್ಬಿರಿಯುವ ಪಶ್ಚಿಮ ಬಂಗಾಳದ ನಾಯಕಿ ಮಮತಾ ಬ್ಯಾನರ್ಜಿಯವರು, ಅವರ ತೃಣಮೂಲ ಕಾಂಗ್ರೆಸ್ ಪಕ್ಷದ ಮತ್ತೋರ್ವ ನಾಯಕಿ ಸುಜಾತ ಮೊಂಡಲ್ ಖಾನ್ ರವರ ಬಾಯಲ್ಲಿ

ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಹೊಸ ಫಾರ್ಚೂನರ್ ಮತ್ತು ಲೆಜೆಂಡರ್ ನೊಂದಿಗೆ ಹೊಸ ವರ್ಷವನ್ನು ಪ್ರಾರಂಭಿಸುತ್ತಿದೆ

ಅತ್ಯಾಚಾರ ಎಸಗಿ ಕೊಲೆಗೈದ ಪಾಪಿಗಳಿಗೆ ಗಲ್ಲು ಶಿಕ್ಷೆ ನೀಡಿ, ದಲಿತ ಸಂಘಟನೆಗಳ ಆಕ್ರೋಶ
ಚನ್ನಪಟ್ಟಣ:ಅ/05/20/ಸೋಮವಾರ.
ಉತ್ತರ ಪ್ರದೇಶದ ಹಥ್ರಾಸ್ ಜಿಲ್ಲೆಯಲ್ಲಿ ಯುವತಿ ಮೇಲೆ ಪೈಶಾಚಿಕವಾಗಿ ಅತ್ಯಾಚಾರ ನಡೆಸಿ, ಅಮಾನುಷವಾಗಿ ಹತ್ಯೆಗೈದ ಕ್ರೂರಿಗಳಿಗೆ ಗಲ್ಲು ಶಿಕ್ಷೆ ನೀಡಬೇಕು. ಕುಟುಂಬದವರಿಗೂ ಮುಖ ತೋರಿಸದೆ ರಾ

ಇನ್ನು ಮುಂದೆ ಪ್ಯಾರಾಮಿಲ್ಟ್ರಿ ಕ್ಯಾಂಟೀನ್ ಗಳಲ್ಲಿ ಸ್ವದೇಶಿ ವಸ್ತುಗಳಷ್ಟೇ ಮಾರಾಟ ಅಮಿತ್ ಷಾ
ದೆಹಲಿ:ಮೇ/೧೩/೨೦/ಬುಧವಾರ. ದೇಶ ಕಾಯುತ್ತಿರುವ ಅರೆಸೈನಿಕ ಪಡೆಯ ದೇಶದ ನಾನಾ ಭಾಗದ ಎಲ್ಲಾ ಕ್ಯಾಂಟೀನ್ ಗಳಲ್ಲೂ ಜೂನ್ ಒಂದನೇ ತಾರೀಖಿನಿಂದ ಸ್ವದೇಶ
ಪ್ರತಿಕ್ರಿಯೆಗಳು