ಡಾ. ಶ್ರೀ ಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳ ನೇತೃತ್ವದಲ್ಲಿ ಗುರು ಕೋರಣ್ಯ

ಕನಕಪುರ: ಪರಮಪೂಜ್ಯ ಶ್ರೀಡಾ. ಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳ ನೇತೃತ್ವದಲ್ಲಿ ಕನಕಪುರ ನಗರದಲ್ಲಿ ಎರಡು ದಿನಗಳ ಕಾಲ ದೇಗುಲಮಠ ದಿಂದ ಗುರು ಕೋರಣ್ಯದಲ್ಲಿ ಶ್ರೀ ದೇಗುಲ ಮಠದ ಕಿರಿಯ ಪರಮಪೂಜ್ಯ ಶ್ರೀ ಚನ್ನಬಸವ ಮಹಾಸ್ವಾಮಿಗಳು ಹಾಗೂ ಬಿಲ್ವಪತ್ರೆ ಮಠದ ಪರಮಪೂಜ್ಯ ಶ್ರೀ ಶಿವಲಿಂಗ ಮಹಾಸ್ವಾಮಿಗಳು ಮತ್ತು ಮರಳವಾಡಿ ಮಠದ ಕಿರಿಯ ಪೂಜ್ಯ ಶ್ರೀ ಪ್ರಭು
ಕಿರೀಟ ಮಹಾಸ್ವಾಮಿಗಳು ಹಾಗು ಅತ್ತಹಳ್ಳಿ ಮಠದ ಕಿರಿಯ ಪೂಜ್ಯ ಶ್ರೀ ನಿರಂಜನ ಮಹಾಸ್ವಾಮಿಗಳು ಕನಕಪುರ ನಗರದಲ್ಲಿ ಗುರು ಕೋರಣ್ಯವನ್ನು ನಡೆಸಿದರು.
ಶ್ರೀ ದೇಗುಲಮಠದಿಂದ ಭಾದ್ರಪದ ಮಾಸದ ವಾರ್ಷಿಕ ಗುರುಕೋರಣ್ಯ ಕಾಯಕ ಬಹಳ ಹಿಂದಿನ ಸಂಪ್ರದಾಯ.
ಯಾವುದೇ ಮಠವು ತನ್ನದೇ ಆದ ಆಸ್ತಿಯನ್ನು ಹೊಂದಿದ್ದರೂ ಅಲ್ಲಿ ನಡೆಯುವ ಅನ್ನದಾಸೋಹ,
ವಿದ್ಯಾ ದಾಸೋಹ ಮತ್ತು
ಜ್ಞಾನ ದಾಸೋಹಗಳನ್ನು
ನಿರ್ವಹಿಸಲು ಗುರುಕೋರಣ್ಯ
ಪದ್ಧತಿ ನಡೆದುಕೊಂಡು ಬಂದಿದ್ದು, ಈ ಪದ್ಧತಿಯನ್ನು ಬಹಳ ಹಿಂದಿನಿಂದಲೂ ಶ್ರೀ ದೇಗುಲಮಠದ ಗುರು ಪರಂಪರೆ ಅನೂಚಾನವಾಗಿ ನಡೆಸಿಕೊಂಡು ಬರುತ್ತಿದೆ. ವಿಶೇಷವಾಗಿ ಈ ಬಾರಿ ನಾಲ್ಕು ಸ್ವಾಮೀಜಿಗಳು ಶ್ರೀ ದೇಗುಲ ಮಠಾಧ್ಯಕ್ಷರಾದ ಡಾ. ಶ್ರೀಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳವರ ದಿವ್ಯ ನೇತೃತ್ವದಲ್ಲಿ ನಡೆದ ಈ ಸಾಂಪ್ರದಾಯಿಕ ಕಾರ್ಯದಲ್ಲಿ ಶ್ರೀ ದೇಗುಲ ಮಠದ ಕಿರಿಯ ಪರಮಪೂಜ್ಯ ಶ್ರೀ ಚನ್ನಬಸವ
ಮಹಾಸ್ವಾಮಿಗಳವರು ಹಾಗೂ ಶ್ರೀ ಬಿಲ್ವಪತ್ರೆ ಗವಿಮಠದ ಶ್ರೀ ಶಿವಲಿಂಗ ಮಹಾಸ್ವಾಮಿಗಳು ಹಾಗು ಅತ್ತಹಳ್ಳಿ ಮಠದ ಕಿರಿಯ ಶ್ರೀ ನಿರಂಜನ ಮಹಾಸ್ವಾಮಿಗಳು ಮತ್ತು
ಮರಳವಾಡಿ ಮಠದ ಕಿರಿಯ ಶ್ರೀ ಪ್ರಭು ಕೀರಿಟ ಮಹಾಸ್ವಾಮಿಗಳವರು
ಗುರುಕೋರಣ್ಯ ಕಾಯಕವನ್ನು
ಕೈಗೊಂಡು ಕನಕಪುರ ನಗರದ
ವಿವಿಧ ಬಡಾವಣೆಗಳಾದ ಕೋಟೆ, ಕೆಂಕೆರಮ್ಮ ರಸ್ತೆ, ಹೌಸಿಂಗ್ ಬೋರ್ಡ್, ಪೈಪ್ ಲೈನ್ ರಸ್ತೆ ಮಹದೇಶ್ವರ ಬಡಾವಣೆ ಎಂ ಜಿ ರಸ್ತೆ ಮುನಿಸಿಪಲ್ ಹೈಸ್ಕೂಲ್ ರಸ್ತೆ,
ಹೀಗೆ ಅನೇಕ ಬಡಾವಣೆಗಳಲ್ಲಿ
ಸಂಚರಿಸಿ ಕೋರಣ್ಯ ಮಾಡಿದರು.
ಮೂವರು ಪೂಜ್ಯರನ್ನೂ ಭಕ್ತವೃಂದವು ಅನನ್ಯ ಭಕ್ತಿಭಾವದಿಂದ
ಬರಮಾಡಿಕೊಡು, ಅವರವರ
ಶಕ್ತಿಯ ಅನುಸಾರ ಕಾಣಿಕೆ ದವಸ ಧಾನ್ಯಗಳು, ಎಣ್ಣೆ, ತರಕಾರಿ ಇತ್ಯಾದಿ ದಾಸೋಹ ಪರಿಕರಗಳನ್ನು ಹಾಗೂ
ಯಥಾಶಕ್ತಿ ಕಾಣಿಕೆಗಳನ್ನೂ ಸಮರ್ಪಿಸಿ ಶ್ರಿಗಳವರನ್ನು ಸತ್ಕರಿಸಿದರು.
ಜೊತೆಗೆ ಭಜನೆ, ತಂಡಗಳು
ಮುಂಚೂಣಿಯಲ್ಲಿದ್ದು ಕಾರ್ಯ
ಕ್ರಮಕ್ಕೆ ಮೆರಗು ನೀಡಿದವು. ಈ
ಕಾರ್ಯಕ್ರಮದಲ್ಲಿ ಕನಕಪುರ ನಗರದ ಭಕ್ತರು ಹಳೆ ವಿದ್ಯಾರ್ಥಿಗಳು ಎಲ್ಲಾ
ಹಿರಿಯರು, ತರುಣರು, ಶಿಕ್ಷಕರು ಭಕ್ತವೃಂದ ಹಾಗು ನೌಕರವರ್ಗದವರು ಉಪಸ್ಥಿತರಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
Recent news in nation »

ಜುಲೈ 8ರಂದು ರಾಷ್ಟೀಯ ಲೋಕ ಅದಾಲತ್
ರಾಮನಗರ, ಜೂ. 03: ನ್ಯಾಯಾಲಯದಲ್ಲಿ ಬಾಕಿ ಇರುವ ಹಾಗೂ ರಾಜಿ ಆಗಬಹುದಾದ ಪ್ರಕರಣಗಳನ್ನು 2023ರ ಜುಲೈ 8ರಂದು ನಡೆಯಲಿರುವ ರಾಷ್ಟ್ರೀಯ ಲೋಕ

ಕೆಂಪೇಗೌಡರ ಸಮಾಧಿಯನ್ನು ಪ್ರೇಕ್ಷಣೀಯ ಹಾಗೂ ಪ್ರೇರಣಾ ಸ್ಥಳವನ್ನಾಗಿ ಅಭಿವೃದ್ಧಿ: ಸಿಎಂ
ರಾಮನಗರ, ಜನವರಿ 03: ನಾಡಪ್ರಭು ಕೆಂಪೇಗೌಡರ ವೀರ ಸಮಾಧಿಯನ್ನು ಪ್ರೇಕ್ಷಣೀಯ ಹಾಗೂ ಪ್ರೇರಣಾ ಸ್ಥಳವನ್ನಾಗಿ ಅಭಿವೃದ್ಧಿ ಮಾಡುವುದು ಸರ್ಕಾರದ ಉದ್ದೇಶ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳ

ನಾಳೆ ಸಂಭವಿಸಲಿದೆ ಈ ವರ್ಷದ ಕೊನೆಯ ಸೂರ್ಯಗ್ರಹಣ
ಡಿಸೆಂಬರ್ 4ರ ಶನಿವಾರ ಸೂರ್ಯ ಗ್ರಹಣ ಸಂಭವಿಸಲಿದ್ದು ಇದು ಈ ವರ್ಷದ ಕೊನೆಯ ಗ್ರಹಣವಾಗಿರಲಿದೆ. ಪೂರ್ಣ ಸೂರ್ಯ ಗ್ರಹಣದ ವಿದ್ಯಮಾನ ವಿಶೇಷವಾಗಿದ್ದು ಆ ಸಂದರ್ಭದಲ್ಲಿನ ಪ್ರಕೃತಿಯ ವೈಚಿತ್ರ್ಯಗಳನ್ನು ನೋಡ

ಆಗ್ನೇಯ ಭಾಗದಿಂದ ಚಂಡಾಮಾರುತ ಅಪ್ಪಳಿಸುವ ಸಾಧ್ಯತೆ
ನವದೆಹಲಿ: ಆಗ್ನೇಯ ದಿಕ್ಕಿನಿಂದ ಆಂಧ್ರಪ್ರದೇಶ ಹಾಗೂ ಒಡಿಶಾ ಕರಾವಳಿ ಪ್ರದೇಶಗಳಿಗೆ ಡಿ.4ರಂದು ಬೆಳಗ್ಗೆ ಚಂಡಾಮಾರುತ ಅಪ್ಪಳಿಸುವ ಸಾಧ್ಯತೆಯಿದೆ ಎಂದು ಭಾರತದ ಹವಾಮಾನ ಇಲಾಖೆ ತಿಳಿಸಿದೆ.

ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಕಾಲಿಕ ಮರಣ
ಬೆಂಗಳೂರು.ಅ.29/21: ದೊಡ್ಮನೆ ಹುಡುಗ ಎಂದೇ ಖ್ಯಾತರಾದ, ಮೇರುನಟ ಡಾ ರಾಜಕುಮಾರ್ ರವರ ಕೊನೆಯ ಪುತ್ರ ಕನ್ನಡದ ಖ್ಯಾತ ನಟ ಪುನೀತ್ ರಾಜ್ ಕುಮಾರ್ ರವರು ಇಂದು ಬೆಳಿಗ್ಗೆ ಅಸುನೀಗಿದ್ದಾರೆ. ಅವರು ಮುಂಜಾನೆ ಜಿಮ್ ನಲ್ಲಿ ಕಸರತ್ತು ನಡ

ಕೆಂಪೇಗೌಡರು ಒಬ್ಬ ವ್ಯಕ್ತಿಗೆ ಸೀಮಿತವಲ್ಲ. ಅವರು ರಾಷ್ಟ್ರದ ನಾಯಕರು. ಎಲ್ಐಸಿ ನಾಗರಾಜು
ಕೆಂಪೇಗೌಡರು ಒಕ್ಕಲಿಗರಿಗಾಗಲಿ, ಬೆಂಗಳೂರು ನಿರ್ಮಾತೃರಾಗಿ ಸೀಮಿತವಾಗಿರಲಿಲ್ಲ. ಕರ್ನಾಟಕದ ಭಾಗವಾಗಿದ್ದ ವಿಜಯನಗರದ ಸಾಮ್ರಾಜ್ಯಕಷ್ಟೇ ಸೀಮೀತವಾಗಿರಲಿಲ್ಲ.ಅವರ ಕನಸು ಬಹಳ ವಿಸ್ತಾರವಾಗಿತ್ತು. ಇಡೀ ಭಾರ

ಪಶ್ಚಿಮಬಂಗಾಳದಲ್ಲಿ ಪರಿಶಿಷ್ಟರಿಗೆ ಅವಮಾನ ಮಾಡಿದ ತೃಣಮೂಲ ಕಾಂಗ್ರೆಸ್. ತಹಶಿಲ್ದಾರ್ ಮುಖೇನ ರಾಷ್ಟ್ರಪತಿಗೆ ದೂರು ಸಲ್ಲಿಸಿದ ಬಿಜೆಪಿ ಎಸ್ಸಿ ಮೋರ್ಚಾ
ನಾವು ಹಿಂದುಳಿದವರ ಪರ, ಅಲ್ಪಸಂಖ್ಯಾತರ ಪರ ಎಂದು ಬೊಬ್ಬಿರಿಯುವ ಪಶ್ಚಿಮ ಬಂಗಾಳದ ನಾಯಕಿ ಮಮತಾ ಬ್ಯಾನರ್ಜಿಯವರು, ಅವರ ತೃಣಮೂಲ ಕಾಂಗ್ರೆಸ್ ಪಕ್ಷದ ಮತ್ತೋರ್ವ ನಾಯಕಿ ಸುಜಾತ ಮೊಂಡಲ್ ಖಾನ್ ರವರ ಬಾಯಲ್ಲಿ

ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಹೊಸ ಫಾರ್ಚೂನರ್ ಮತ್ತು ಲೆಜೆಂಡರ್ ನೊಂದಿಗೆ ಹೊಸ ವರ್ಷವನ್ನು ಪ್ರಾರಂಭಿಸುತ್ತಿದೆ

ಅತ್ಯಾಚಾರ ಎಸಗಿ ಕೊಲೆಗೈದ ಪಾಪಿಗಳಿಗೆ ಗಲ್ಲು ಶಿಕ್ಷೆ ನೀಡಿ, ದಲಿತ ಸಂಘಟನೆಗಳ ಆಕ್ರೋಶ
ಚನ್ನಪಟ್ಟಣ:ಅ/05/20/ಸೋಮವಾರ.
ಉತ್ತರ ಪ್ರದೇಶದ ಹಥ್ರಾಸ್ ಜಿಲ್ಲೆಯಲ್ಲಿ ಯುವತಿ ಮೇಲೆ ಪೈಶಾಚಿಕವಾಗಿ ಅತ್ಯಾಚಾರ ನಡೆಸಿ, ಅಮಾನುಷವಾಗಿ ಹತ್ಯೆಗೈದ ಕ್ರೂರಿಗಳಿಗೆ ಗಲ್ಲು ಶಿಕ್ಷೆ ನೀಡಬೇಕು. ಕುಟುಂಬದವರಿಗೂ ಮುಖ ತೋರಿಸದೆ ರಾ

ಇನ್ನು ಮುಂದೆ ಪ್ಯಾರಾಮಿಲ್ಟ್ರಿ ಕ್ಯಾಂಟೀನ್ ಗಳಲ್ಲಿ ಸ್ವದೇಶಿ ವಸ್ತುಗಳಷ್ಟೇ ಮಾರಾಟ ಅಮಿತ್ ಷಾ
ದೆಹಲಿ:ಮೇ/೧೩/೨೦/ಬುಧವಾರ. ದೇಶ ಕಾಯುತ್ತಿರುವ ಅರೆಸೈನಿಕ ಪಡೆಯ ದೇಶದ ನಾನಾ ಭಾಗದ ಎಲ್ಲಾ ಕ್ಯಾಂಟೀನ್ ಗಳಲ್ಲೂ ಜೂನ್ ಒಂದನೇ ತಾರೀಖಿನಿಂದ ಸ್ವದೇಶ
ಪ್ರತಿಕ್ರಿಯೆಗಳು