Tel: 7676775624 | Mail: info@yellowandred.in

Language: EN KAN

    Follow us :


ನಿಮ್ಮಅಮೂಲ್ಯ ಮತ ಅರ್ಹವ್ಯಕ್ತಿಯನ್ನೇ ಆಯ್ಕೆ ಮಾಡಲಿ...?

Posted Date: 16 Apr, 2019

ನಿಮ್ಮಅಮೂಲ್ಯ ಮತ ಅರ್ಹವ್ಯಕ್ತಿಯನ್ನೇ ಆಯ್ಕೆ ಮಾಡಲಿ...?

ನಮ್ಮ ಭಾರತದೇಶವು ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು ಪ್ರಜೆಗಳೇ ಪ್ರಭುಗಳು ಅಂದರೆ ಅವನು ತನ್ನ ಹಕ್ಕು ಚಲಾಯಿಸಿ ಒಬ್ಬ ನಾಯಕನನ್ನು ಆರಿಸಿಕೊಳ್ಳುವುದು ವಾಡಿಕೆಯಾಗಿದೆ.


ಪ್ರಜೆಯೇ ಪ್ರಭುವಾದ ಮೇಲೆ ಅವನಿಗೆ ಒಬ್ಬ ನಾಯಕ ಬೇಕೆ ಬೇಕು? ಹೌದೆನ್ನುವಿರಾ... ?


ಅದರಲ್ಲೂ ಲಕ್ಷಾಂತರ ಮಂದಿಗೆ ಒಬ್ಬ ನಾಯಕ ! ಎಲ್ಲಾ ಪ್ರಭುಗಳು ನಾಯಕನನ್ನು ಆರಿಸಿದ ಮೇಲೆ ಪ್ರಭುಗಳಾದ ನಾವು ಆ ನಾಯಕ ಹೇಳಿದಂತೆಯೇ ಕೇಳಬೇಕು? ಮತದಾರ ಪ್ರಭುಗಳು ಹೇಳಿದಂತೆ ನಾಯಕನಾಗುವವನು ಕೇಳುವುದು ಚುನಾವಣೆಯ ಸಮಯದಲ್ಲಿ ಮಾತ್ರ ಈ ಪಿಡುಗು ನಮ್ಮ ಭಾರತದಲ್ಲಿತೊಲಗುವುದು ಬಹಳ ಕಷ್ಟಕರವೇಆಗಿದೆ.


ಪ್ರಜ್ಞಾವಂತ ನಾಗರೀಕರೇ, ಮತಬಾಂಧವರೇ, ದಯವಿಟ್ಟು ನಿಮ್ಮಅತ್ಯಮೂಲ್ಯ ಹಕ್ಕುಗಳಲ್ಲೊಂದಾದ ಮತವನ್ನು ವಸ್ತ್ರಾಭರಣಕ್ಕಾಗಿ, ಹೆಂಡಕ್ಕಾಗಿ, ಮುಖ್ಯವಾಗಿ ಹಣಕ್ಕಾಗಿ ಆಸೆಪಟ್ಟು, ಭಿಕ್ಷುಕರಂತೆ ಕೈ ಚಾಚಿ ನಿಮ್ಮತನವನ್ನು ನಿಮ್ಮ ವ್ಯಕ್ತಿತ್ವವನ್ನು ಹಾಳುಮಾಡಿಕೊಳ್ಳಬೇಡಿ, ಹಣವನ್ನುಶ್ರಮದಿಂದಗಳಿಸಿದಾಗ ಮಾತ್ರ ಸಂತೋಷ, ಸುಲಭವಾಗಿ ಪಡೆದ ಗಳಿಕೆ ಅಥವಾ ಮತಕ್ಕಾಗಿ ಅಭ್ಯರ್ಥಿಗಳು ಕೊಟ್ಟ ಹಣ, ವಸ್ತ್ರಾಭರಣವು ತಾತ್ಕಾಲಿಕವಾದದ್ದು ಮತ್ತು ಬಹಳ ಬೇಗ ಕಳೆದುಕೊಳ್ಳುವಂತಹದ್ದು, ಇದರಿಂದ ನಿಮ್ಮ ಮನಸ್ಸು ಕ್ಷಣ ಮಾತ್ರ ಖುಷಿಪಡಿಸಿಕೊಳ್ಳುವಂತಹದ್ದು.


ಇದರಿಂದ ನಿಮ್ಮ ಮನಸ್ಸುಕ್ಷಣ ಮಾತ್ರ ಖುಷಿಪಡಿಸಿಕೊಳ್ಳುತ್ತದೆ  ನಿಜ ಆದರೆ ನಂತರದ ದಿನಗಳಲ್ಲಿ ಮತ ಪಡೆದು ನಾಯಕನಾದವನು ನಿಮ್ಮನ್ನು ಜೀತದಾಳುಗಳನ್ನಾಗಿ ಮಾಡಿಕೊಳ್ಳಲು ಬಂದಾಗ ನಿಮ್ಮಕಣ್ಣಲ್ಲಿ ರಕ್ತ ಸುರಿಯುತ್ತದೆ, ಎಚ್ಚರ ಮತದಾರರೇಎಚ್ಚರ !

ನೀವು ಪ್ರಜ್ಞಾವಂತರಾಗಿ, ಆ ವ್ಯಕ್ತಿಯನ್ನುಅಧ್ಯಯನ ಮಾಡಿ, ಅವನ ವ್ಯಕ್ತಿತ್ವವನ್ನು ಪರೀಕ್ಷಿಸಿ, ಪ್ರಮಾಣಿಕನೆಂದು ದೃಢೀಕರಣಗೊಂಡಾಗ ನಿಮ್ಮ ಮತವನ್ನು ದಾನ ಮಾಡಿ ನಾಯಕನನ್ನಾಗಿ ಮಾಡಿಕೊಳ್ಳಿ ಸರಿಯಾಗಿ ಯೋಚಿಸಿ ನಿಮ್ಮಜನನಾಯಕನನ್ನಾಗಿ ಆರಿಸಿ ಹಳ್ಳಿ, ರಾಜ್ಯ, ದೇಶದ ಹಿತಕ್ಕಾಗಿ ಅರ್ಹ ವ್ಯಕ್ತಿಯನ್ನೆ ಆಯ್ಕೆ ಮಾಡಿ, ಯಾವುದೇ ವಸ್ತುವಿಗೆ ಮತ್ತು ಆಮಿಷಕ್ಕೆ ಬಲಿಯಾಗದೆ ಸದೃಢತೆಯಿಂದ, ಪ್ರಮಾಣಿಕತೆಯಿಂದ ಮತ ಚಲಾಯಿಸಿ.


ಮತದಾರರೇ ಯಾವುದೇ ಕಾರಣವನ್ನು ಮುಂದಿಡದೆ ನೀವು ನಿಮ್ಮ ಮತ ಹಾಕುವುದನ್ನು ಮರೆಯಕೂಡದು, ನಾಗರೀಕರೇ; ಇದರಿಂದ ನಮ್ಮ ಪೌರತ್ವವನ್ನು ಕಾಪಾಡಿಕೊಳ್ಳುವ ಜವಬ್ದಾರಿ ನಿಮ್ಮ ಜನ್ಮ ಸಿದ್ಧ ಹಕ್ಕು ಹೌದು, ಹೊಣೆಗಾರಿಕೆಯು ಹೌದು, ಈ ದೇಶದ ಪೌರರಾದ ನಾವು ಈ ಕೆಲಸವನ್ನು ನಮ್ಮ ಮನೆಯ ಹಿರಿಯನಿಗೆ ಸಲ್ಲುವ ಗೌರವವೆಂದು ತಿಳಿದು ಮತ ಚಲಾಯಿಸಿ.


ಸಾಧ್ಯವಾದರೆ ಅಭ್ಯರ್ಥಿಗಳನ್ನು ಖುದ್ದಾಗಿ ಭೇಟಿ ಮಾಡಿ ನಿಮ್ಮ ಕ್ಷೇತ್ರದ ಸಮಸ್ಯೆಯನ್ನು ತಿಳಿಸಿ ನಿಮಗೆ ಮತ ನೀಡಿದರೆ ಐದು ವರ್ಷಗಳಲ್ಲಿ ನಿಮ್ಮ ಕ್ಷೇತ್ರಕ್ಕೆ ನಿಮ್ಮಕೊಡುಗೆ ಏನು ? ಎಂಬ ಪ್ರಶ್ನೆಯನ್ನು ಕೇಳಿ, ಅಭ್ಯರ್ಥಿಯಿಂದ ಬರುವಉತ್ತರ ಏನೆಂದು ತಿಳಿದುಕೊಳ್ಳಿ ಜೊತೆಗೆ ಈ ಹಿಂದೆ ಏನು ಮಾಡಿದ್ದೀರಿ ? ಯಾವ ಭಾಗವನ್ನು ಅಭಿವೃದ್ಧಿಗೊಳಿಸಿದ್ದೀರೆಂಬ ನಿಮ್ಮ ಪ್ರಶ್ನೆಗೆ ನಿಖರವಾದ ಉತ್ತರ ನಿರೀಕ್ಷಿಸಿ ನಿಮ್ಮ ಪ್ರಶ್ನೆಗೆ  ಅಭ್ಯರ್ಥಿಯ ಕಡೆಯಿಂದ ಹಿಂಬಾಲಕರು ಉತ್ತರಿಸಲು ಬರಬಹುದು, ಅದನ್ನುತಡೆದು ನೇರವಾಗಿ ಅಭ್ಯರ್ಥಿಯನ್ನು ಪ್ರಶ್ನಿಸಿ ಉತ್ತರ ಪಡೆದುಕೊಂಡು ನಿಮಗೆ ಸರಿ ಎನಿಸಿದವರಿಗಷ್ಟೆ ನಿಮ್ಮಅಮೂಲ್ಯವಾದಮತನೀಡಿ.


ಅಭ್ಯರ್ಥಿಯನ್ನು ಭೇಟಿ ಮಾಡಲು ಹೊರಡುರುವುದಾದರೆ ಮೊದಲೇ ನಿಮ್ಮೆಲ್ಲಾ ಸಮಸ್ಯೆಯ ಪ್ರಶ್ನೆಗಳನ್ನು ಸಿದ್ಧಪಡಿಸಿಟ್ಟುಕೊಂಡೆ ಅವರ ಬಳಿ ಹೋಗಿ ಅವರ ಸಹಚರರಿಗೆ ಉತ್ತರಿಸಲು ಅವಕಾಶ ಕೊಡದೇ ಎಚ್ಚರಿಕೆಯಿಂದಉತ್ತರವನ್ನು ಪಡೆದುಕೊಳ್ಳಿರಿ.


ನಮ್ಮ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಗ್ರಾಮ ಹಾಗೂ ಪಟ್ಟಣಗಳ  ಪ್ರಜೆಗಳಾದ ನಿಮಗೆ ಸಹಾಯವಾಗಲೆಂದು ನನಗೆ ತಿಳಿದ ಮಟ್ಟಿಗೆ ಪ್ರಶ್ನಾವಳಿಯನ್ನು ಸಿದ್ಧಪಡಿಸಿ ನಿಮ್ಮಗಳಿಗೆ ಉಣಬಡಿಸುವ ಪ್ರಯತ್ನ ಮಾಡಿರುತ್ತೇನೆ,  ಇವುಗಳ ಜೊತೆಗೆ ನಿಮಗೆ ಗೋಚರಿಸುವ ಸಮಸ್ಯೆಯ ಸರಮಾಲೆಯನ್ನು ಸಹ ಸೇರಿಸಿ ಅಭ್ಯರ್ಥಿಯ ಮುಂದಿಡಿರಿ.


*ಲೋಕಸಭೆ ಕ್ಷೇತ್ರದ ಅಭ್ಯಥಿಯಾದ ನೀವು ನಮ್ಮಗಳ ಮನ ಓಲೈಸಿ ನಿಮ್ಮ ಮಡಿಲಿಗೆ ನಮ್ಮ ಮತವನ್ನು ಹಾಕುತ್ತೇವೆ, ನಿಮಗೆ ಶುಭವಾಗಲಿ ಎಂದು ಆಶಿಸುತ್ತ ನಮ್ಮ ಸಮಸ್ಯೆಯ ಕೆಲವೇ ಕೆಲವು ಪ್ರಶ್ನಾವಳಿಗಳನ್ನು ಮುಂದಿಡೋಣ.


೧. ನೀವು ಗೆದ್ದಂತಹ ಪಕ್ಷವು ಅಧಿಕಾರಕ್ಕೆ ಬರದೇಇದ್ದರೂ ನಮಗೆ ಕೊಟ್ಟಂತಹ ಭರವಸೆಯನ್ನು ಪಾಲಿಸುವಿರಾ ?


೨. ನೀವು ನಮ್ಮ ಕ್ಷೇತ್ರವನ್ನು ಸಂಪೂರ್ಣವಾಗಿ, ಶಾಶ್ವತವಾಗಿ ನೀರಾವರಿ ಕ್ಷೇತ್ರವನ್ನಾಗಿ ಮಾಡುವಿರಾ ?


೩. ನಿಮ್ಮ ಕ್ಷೇತ್ರವನ್ನು ಸಂಪೂರ್ಣವಾಗಿ ಗುಡಿಸಲು ಮುಕ್ತವಾಗಿಸುವಿರಾ ?


೪. ಎಲ್ಲಾ ಹಳ್ಳಿಗಳಿಗೆ ಶುದ್ಧಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿಕೊಡುವಿರಾ ?  ಈಗಾಗಲೇ ಕಲ್ಪಿಸಿರುವವನ್ನು ಸುಸ್ಥಿತಿಯಲ್ಲಿಡುವಿರಾ ?


೫. ಪ್ರತಿ ಮನೆಗೂ ಶೌಚಾಲಯ ಜಾರಿಯಲ್ಲಿದ್ದರೂ ಸಹ ವಾರಸುದಾರರು ಶೌಚಾಲಯ ನಿರ್ಮಿಸಿಕೊಳ್ಳದಂತೆಯೇ ಹಣ ದುರುಪಯೋಗ ಪಡಿಸಿಕೊಳ್ಳುತ್ತಿರುವುದರಿಂದ ಅದರ ಸಮಸ್ಯೆಯನ್ನು ನೀಗಿಸಲು ಆ ಕ್ಷೇತ್ರದ ವ್ಯಾಪ್ತಿಗೆ ಬರುವ ಅಧಿಕಾರಿಗಳ ಮೂಲಕ ಸಫಲಗೊಳಿಸುವಿರಾ?


೬. ಪ್ರತಿಗ್ರಾಮ ಪಂಚಾಯ್ತಿಗೊಂದರಂತೆ ಸಾರ್ವಜನಿಕ ಆಸ್ಪತ್ರೆ ಮತ್ತು ಜಾನುವಾರಗಳ ಆಸ್ಪತ್ರೆ ನಿರ್ಮಿಸಿಕೊಡುವಿರಾ ?


೭. ಈ ದುಬಾರಿಯುಗದಲ್ಲಿ ಹೆಣ್ಣು ಮಕ್ಕಳಿಗೆ ವರದಕ್ಷಣೆ, ವರೋಪಚಾರಗಳನ್ನು ಕೊಟ್ಟು ವಿವಾಹ ಮಾಡುವುದೇ ಕಷ್ಟಕರ ಅದರಲ್ಲೂ ಅದ್ದೂರಿ ಕಲ್ಯಾಣ ಮಂಟಪದಲ್ಲೇ ಆಗಬೇಕೆಂದು ಕೆಲವು ವರನ ಕಡೆಯವರು ಹೇಳುತ್ತಾರೆ. ಅದಕ್ಕೆ ಕೊನೇ ಪಕ್ಷ ಪಂಚಾಯ್ತಿಗೊಂದರಂತೆ ಸಮುದಾಯ ಭವನವನ್ನು ನಿರ್ಮಿಸಿಕೊಡಲು ಸಹಕರಿಸುವಿರಾ ?


೮. ಮುಖ್ಯವಾಗಿ ಸರ್ಕಾರಿ, ಸಹಕಾರಿ, ಉಚಿತ ಎಂಬ ಅರ್ಥವಿದ್ದರೂ ಸಹ ಸರ್ಕಾರಿ ಆಫೀಸುಗಳಲ್ಲಿ ಅದರಲ್ಲೂ ತಾಲ್ಲೂಕು ಆಫೀಸ್, ಪೊಲೀಸ್‌ಠಾಣೆ,  ನೊಂದಾವಣಿ ಕಛೇರಿಯಲ್ಲಿ ತಾಂಡವವಾಡುತ್ತಿರುವ ಲಂಚ ಕೋರತನವನ್ನು ತಡೆಗಟ್ಟುವ ಹೊಣೆ ಹೊರುವಿರಾ ?


೯.  ಕೆಲವು ಬೀದಿಗಳಲ್ಲಿ ಒಂದು ವಾಹನವನ್ನು ನಿಲ್ಲಿಸಿದರೆ ಮತ್ತೊಂದು ವಾಹನವು ತಿರುಗಾಡಲುಕಷ್ಟಕರವಾಗಿರುವುದರಿಂದ ರಸ್ತೆ ಅಗಲೀಕರಣದ ಬಗ್ಗೆ ಕ್ರಮಗೈಗೊಂಡು ಡಾಂಬರು ಹಾಕಿಸುವತ್ತ ಗಮನ ಹರಿಸುವಿರಾ?


೧೦. ಧರ್ಮಾಂಧತೆಗೊಳಗಾಗಿ ಎಷ್ಟೋ ಯೋಜನೆಗಳು ಎಷ್ಟೋ ವರ್ಷಗಳಿಂದ ನೆಲಕಚ್ಚಿವೆ. ಉದಾಹರಣೆಗೆ ಸಾತನೂರುರಸ್ತೆ, ಚರ್ಚ್ ರಸ್ತೆ ಇನ್ನು ಕೆಲವು ರಸ್ತೆಗಳ ವಿವಾದಿತ ಜಾಗಗಳನ್ನು  ತೆರುವುಗೊಳಿಸಿ  ಅಗಲೀಕರಣಗೊಳಿಸಿ, ಪಾದಚಾರಿಗಳಿಗೆ ಓಡಾಡಲು ಅವಕಾಶ ಮಾಡಿಕೊಡುವಿರಾ?


೧೧. ಎಲ್ಲೆಂದರಲ್ಲಿ ಗಲ್ಲಿಗೊಂದರಂತೆ ತಲೆ ಎತ್ತುತ್ತಿರುವ ಮಸೀದಿಗಳು,  ಬಾರ್‌ಗಳು, ಫುಟ್‌ಪಾತ್ ‌ತಿಂಡಿ ತಿನಿಸುಗಳಿಗೆ ಕಡಿವಾಣ ಹಾಕುವಿರಾ ?


೧೨. ಫುಟ್‌ಪಾತ್ ವ್ಯಾಪಾರಿಗಳಿಗೆ ಇರುವ ಕಟ್ಟಡಗಳನ್ನು ಸರಿಪಡಿಸಿಕೊಟ್ಟು ಅಲ್ಲಿಯೇ ತೆರಳಿ ವ್ಯಾಪಾರ ಮಾಡುವಂತೆ ಅವರು ಹೊಟ್ಟೆ ಪಾಡಿಗೆ ದುಡಿಯಲು ಅನುವು ಮಾಡಿಕೊಡುವಿರಾ ?


೧೩. ನಗರಸಭೆ ಗ್ರಾಮ ಪಂಚಾಯ್ತಿ ಮುಂತದಾದ ಕಡೆಗೆ ಬರುವ ಅನುದಾನವನ್ನು ಸಮರ್ಪಕವಾಗಿ ಹಂಚಿ ಕೆಲಸಕ್ಕೆ ಸೂಕ್ತವಾದ ಮಾರ್ಗದರ್ಶನ ಕೊಡಿಸುವಿರಾ ?


೧೪. ಎಗ್ಗಿಲದೆ ತಲೆ ಎತ್ತುತ್ತಿರುವ ಚೀಟಿ ವ್ಯವಹಾರ, ಚಿಟ್‌ಫಂಡ್,  ಮೀಟರ್ ಬಡ್ಡಿ ಸಾಲ, ರೈತರಿಗೆ ಹಾಗೂ ಸಣ್ಣಪುಟ್ಟ ವ್ಯಾಪಾರಿಗಳಿಗೆ ತೊಂದರೆಯಾಗುತ್ತಿರುವ ಈ ದಂಧೆಯನ್ನು ನಿಷೇಧಿಸುವಿರಾ ?


೧೫. ಚನ್ನಪಟ್ಟಣತಾಲ್ಲೂಕಿನಲ್ಲಿ ಇತ್ತೀಚೆಗೆ ಸಾಲದ ಹೊರೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ನಿದರ್ಶನಗಳು ಬಹಳ ಹೆಚ್ಚಾಗುತ್ತಿವೆ. ಅದರ ಬಗ್ಗೆ ಗಮನ ಹರುಸುವಿರಾ ?


ಇಂತಹ ಪ್ರಶ್ನೆಗಳು ತಲೆ ಮತ್ತೆ ಎತ್ತದಂತೆ ನ್ಯಾಯಯುತವಾಗಿ ಸಮಪರ್ಕವಾಗಿರುವಂತೆ ಮಾಡುವುದಾರೆ ಹಾಗೂ ನಮ್ಮೆಲ್ಲರ ಭರವಸೆಯನ್ನು ಕಟ್ಟುನಿಟ್ಟಾಗಿ ಈಡೇರಿಸುವುದಾದರೆ ಈ ಅವಧಿ ಅಷ್ಟೆ ಅಲ್ಲಾ ಎಂದೆಂದೂ ನಮ್ಮಗಳ ಮತ ನಿಮ್ಮ ಪ್ರಮಾಣಿಕ ಸೇವೆಗೆ ಕಟ್ಟಿಟ್ಟ ಬುತ್ತಿ ಹೌದುತಾನೆ.


ಉಪಸಂಹಾರ


ಇಲ್ಲಿ ಅಭ್ಯರ್ಥಿಗಳು ಎಷ್ಟೇ ಇದ್ದರೂ ಹಣಾಹಣಿ ಮಾತ್ರ ಎರಡು ಪಕ್ಷಗಳಿಗಷ್ಟೆ ಸೀಮಿತ. (ಮೈತ್ರಿ ಸೇರಿದಂತೆ)

ಹಾಗಾಗಿ ಭ್ರಷ್ಟ ಹಾಗೂ ಅತಿ ಭ್ರಷ್ಟರನ್ನು ಹುಡುಕಿ ತುಲನೆ ಮಾಡಿ ಪ್ರಾಮಾಣಿಕ ಸಚ್ಚಾರಿತ್ರ ಉಳ್ಳವರಿಗೆ ಮಾತ್ರ ನಿಮ್ಮಅಮೂಲ್ಯವಾದ ಮತ ನೀಡಿರಿ.


ಇಂತಿ

ಲಕ್ಷ್ಮಿ ಗೋ ರಾ ಶ್ರೀನಿವಾಸ್

ಗೋವಿಂದೇಗೌಡನದೊಡ್ಡಿ

ಚನ್ನಪಟ್ಟಣ.

(ಹವ್ಯಾಸಿ ಬರಹಗಾರ್ತಿ)

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in nation »

ಕೇಸರಿಮಯವಾದ ಲೋಕಸಭೆ, ಗಟಾರ ಸೇರಿದ ಮಹಾಘಟಬಂಧನ್, ರಾಜ್ಯಕ್ಕೆ ಮೂರೇ ಗೆಲುವು !
ಕೇಸರಿಮಯವಾದ ಲೋಕಸಭೆ, ಗಟಾರ ಸೇರಿದ ಮಹಾಘಟಬಂಧನ್, ರಾಜ್ಯಕ್ಕೆ ಮೂರೇ ಗೆಲುವು !

ವಿರೋಧ ಪಕ್ಷದಲ್ಲಿ ಕೂರಲು ಅನರ್ಹ


ಇಡೀ ದೇಶದಲ್ಲಿ ಕುತೂಹಲ ಮೂಡಿಸಿದ್ದ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಭರ್ಜರಿ ಗೆಲುವು ಸಾಧಿಸಿದ್ದು ಮತ್ತೆ ನರೇಂದ್ರ ಮೋದಿಯವರು ಪ್ರ

ನಿಮ್ಮಅಮೂಲ್ಯ ಮತ ಅರ್ಹವ್ಯಕ್ತಿಯನ್ನೇ ಆಯ್ಕೆ ಮಾಡಲಿ...?
ನಿಮ್ಮಅಮೂಲ್ಯ ಮತ ಅರ್ಹವ್ಯಕ್ತಿಯನ್ನೇ ಆಯ್ಕೆ ಮಾಡಲಿ...?

ನಮ್ಮ ಭಾರತದೇಶವು ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು ಪ್ರಜೆಗಳೇ ಪ್ರಭುಗಳು ಅಂದರೆ ಅವನು ತನ್ನ ಹಕ್ಕು ಚಲಾಯಿಸಿ ಒಬ್ಬ ನಾಯಕನನ್ನು ಆರಿಸಿಕೊಳ್ಳುವುದು ವಾಡಿಕೆಯಾಗಿದೆ.


ಪ್

ಹೆದ್ದಾರಿಯಲ್ಲಿ ಬೀದಿನಾಯಿ ಮತ್ತು ಸಾಕು ಪ್ರಾಣಿಗಳ ಮಾರಣಹೋಮ ! ಕ್ರಮಕೈಗೊಳ್ಳಲು ಸಾಧ್ಯವಿಲ್ಲವೇ ?
ಹೆದ್ದಾರಿಯಲ್ಲಿ ಬೀದಿನಾಯಿ ಮತ್ತು ಸಾಕು ಪ್ರಾಣಿಗಳ ಮಾರಣಹೋಮ ! ಕ್ರಮಕೈಗೊಳ್ಳಲು ಸಾಧ್ಯವಿಲ್ಲವೇ ?

ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಪ್ರತಿನಿತ್ಯವೂ ಅನೇಕ ಬೀದಿ ನಾಯಿಗಳು ವಾಹನಗಳಿಗೆ ಸಿಲುಕಿ ಸಾವನ್ನಪ್ಪುತ್ತಿವೆ, ಒಂದು ಸಣ್ಣ ಪೆಟ್ಟಾದ ನಾಯಿ ರಸ್ತೆಯಲ್ಲಿ ಬಿದ್ದರಷ್ಟೇ ಸಾಕು ಅದು ಎದ್ದು ಸಾವರಿಸಿ ಮು

ಅಜಾತಶತ್ರು ಒಂದು ಮೆಲುಕು
ಅಜಾತಶತ್ರು ಒಂದು ಮೆಲುಕು

ಅಜಾತಶತ್ರು ವ್ಹಾವ್ ಎಂತ ಅತ್ಯದ್ಭುತ ಪದ.
ಈ ಬಿರುದಾಂಕಿತ ಅಟಲ್ ಬಿಹಾರಿ ವಾಜಪೇಯಿ ಯವರ ಬಗ್ಗೆ ಬರೆಯುವಂತ ವಿದ್ವಾಂಸನೂ ಅಲ್ಲಾ, ಹಿರಿಯ ಮುಖಂಡ, ಒಡನಾಡಿ, ಸಂಬಂದಿಯೂ ಅಲ್ಲಾ ಬಹಳ ಮುಖ್ಯವಾಗಿ ಆ ಯೋಗ್ಯತೆಯೂ ನನಗಿಲ್ಲ ಎಂದು ನನಗೆ ಗೊತ್ತ

ಅಜಾತಶತ್ರು ಒಂದು ಮೆಲುಕು
ಅಜಾತಶತ್ರು ಒಂದು ಮೆಲುಕು

ಅಜಾತಶತ್ರು ವ್ಹಾವ್ ಎಂತ ಅತ್ಯದ್ಭುತ ಪದ.
ಈ ಬಿರುದಾಂಕಿತ ಅಟಲ್ ಬಿಹಾರಿ ವಾಜಪೇಯಿ ಯವರ ಬಗ್ಗೆ ಬರೆಯುವಂತ ವಿದ್ವಾಂಸನೂ ಅಲ್ಲಾ, ಹಿರಿಯ ಮುಖಂಡ, ಒಡನಾಡಿ, ಸಂಬಂದಿಯೂ ಅಲ್ಲಾ ಬಹಳ ಮುಖ್ಯವಾಗಿ ಆ ಯೋಗ್ಯತೆಯೂ ನನಗಿಲ್ಲ ಎಂದು ನನಗೆ ಗೊತ್ತ

ಅಷ್ಟಬಂಧನ ಬಾಲಾಲಯ ಮಹಾಸಂಪ್ರೋಕ್ಷಣಮ್‌: 6 ದಿನ ತಿಮ್ಮಪ್ಪನ ದರ್ಶನವಿಲ್ಲ
ಅಷ್ಟಬಂಧನ ಬಾಲಾಲಯ ಮಹಾಸಂಪ್ರೋಕ್ಷಣಮ್‌: 6 ದಿನ ತಿಮ್ಮಪ್ಪನ ದರ್ಶನವಿಲ್ಲ

ತಿರುಪತಿ: ಆಗಸ್ಟ್‌ 11 ರಿಂದ 17ರ ವರೆಗೆ 6 ದಿನಗಳ ಕಾಲ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ನಿರ್ಬಂಧ ಹೇರಲಾಗಿದೆ. ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ) ಅಧ್ಯಕ್ಷ ಪುಟ್ಟ ಸುಧಾಕರ ಯಾದವ್‌ ಅವರು

ಆರ್ ಸಿ, ಲೈಸೆನ್ಸ್, ಇನ್ಶೂರೆನ್ಸ್‌ ಇನ್ನು ಮೊಬೈಲ್‍‍ನಲ್ಲಿ ಇದ್ದರೆ ಸಾಕು
ಆರ್ ಸಿ, ಲೈಸೆನ್ಸ್, ಇನ್ಶೂರೆನ್ಸ್‌ ಇನ್ನು ಮೊಬೈಲ್‍‍ನಲ್ಲಿ ಇದ್ದರೆ ಸಾಕು

ದೆಹಲಿ: ಇನ್ನು ಮುಂದೆ ವಾಹನ ಸವಾರರು ಆರ್‌.ಸಿ., ಡ್ರೈವಿಂಗ್‌ ಲೈಸೆನ್ಸ್‌, ಇನ್ಶೂರೆನ್ಸ್‌ ದಾಖಲೆಗಳನ್ನು ಹೋದಲ್ಲೆಲ್ಲಾ ಹೊತ್ತೂಯ್ಯುವ ಅಗತ್ಯವಿಲ್ಲ. ಮೊಬೈಲ್‌ನಲ್ಲೇ ಡಿಜಿ ಲಾಕರ್&zw

ಹೆಸರು ಬದಲಿಸಿದ ಪತಂಜಲಿಯ \'ಕಿಂಬೋ\' ಆ್ಯಪ್..?
ಹೆಸರು ಬದಲಿಸಿದ ಪತಂಜಲಿಯ \'ಕಿಂಬೋ\' ಆ್ಯಪ್..?

ಯೋಗ ಗುರು ಬಾಬಾ ರಾಮ್​ದೇವ್ ಒಡೆತನದ ಪತಂಜಲಿ ಕಂಪನಿ ಮೇ ತಿಂಗಳಲ್ಲಿ 'ಕಿಂಬೋ' ಎನ್ನುವ ಮೆಸೇಜಿಂಗ್ ಆ್ಯಪ್​ ಒಂದನ್ನು ಪರಿಚಯಿಸಿತ್ತು. ಆದರೆ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಈ ಆ್ಯಪ್​ ಅನ್ನು ಪ್ಲೇ ಸ್ಟೋರ್​ನಿಂದ ತೆಗೆದು ಹಾಕಲಾಯ

ಪ್ರಧಾನ ಮಂತ್ರಿ ಅವಾಸ ಯೋಜನೆ ಅವಧಿ ವಿಸ್ತರಣೆ, ಈಗಲೇ ಅರ್ಜಿ ಸಲ್ಲಿಸಿ ಸ್ವಂತ ಮನೆ ಪಡೆಯಿರಿ
ಪ್ರಧಾನ ಮಂತ್ರಿ ಅವಾಸ ಯೋಜನೆ ಅವಧಿ ವಿಸ್ತರಣೆ, ಈಗಲೇ ಅರ್ಜಿ ಸಲ್ಲಿಸಿ ಸ್ವಂತ ಮನೆ ಪಡೆಯಿರಿ

ಪಿಎಂಎವೈ ಯೋಜನೆ ಮೂಲಕ ದೇಶದ ಪ್ರತಿಯೊಬ್ಬರಿಗೂ ಸೂರು ಕಲ್ಪಿಸಬೇಕು, ೨೦೨೨ರ ವೇಳೆಗೆ ಎಲ್ಲರಿಗೂ ಸ್ವಂತ ಮನೆ ಇರಬೇಕು ಎನ್ನುವುದು ಕೇಂದ್ರ ಹಾಗು ರಾಜ್ಯ ಸರ್ಕಾರಗಳ ಉದ್ದೇಶ. ಕೇಂದ್ರ, ರಾಜ್ಯ ಸರ್ಕಾರಗಳ ಈ ಯೋಜನೆಯಲ್ಲಿ ಬಡವರು, ಅತಿ ಕೆಳವರ್ಗದವರ

ಸ್ನೇಹಿತರ ಜೊತೆಯಲ್ಲಿ ಮಗಳ ಮೇಲೆ ಅತ್ಯಾಚಾರ ಮಾಡಿದ ತಂದೆ

ಲಖನೌ: ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಕಡಿಮೆಯಾಗವಂತೆ ಕಾಣುತ್ತಿಲ್ಲ. ದಿನಕ್ಕೆ ಹತ್ತಾರು ಪ್ರಕರಣಗಳು ದಾಖಲಾಗುತ್ತಿದ್ದು, ಇದಕ್ಕೆ ಹೊಸತೊಂದು ಸೇರ್ಪೆಡೆಯಾಗಿದೆ. ಉತ್ತರ ಪ್ರದೇಶದ ಸೀತಾಪುರದ ಕಮಲಾಪುರ ಗ್ರಾಮದಲ್ಲ

Top Stories »  


Top ↑