Tel: 7676775624 | Mail: info@yellowandred.in

Language: EN KAN

    Follow us :


ಸಾಹಿತ್ಯ ಪ್ರೇಮಿ ತೋಟದಮನೆ ಕೃಷ್ಣೇಗೌಡ ಅಸ್ತಂಗತ
ಸಾಹಿತ್ಯ ಪ್ರೇಮಿ ತೋಟದಮನೆ ಕೃಷ್ಣೇಗೌಡ ಅಸ್ತಂಗತ

ಚನ್ನಪಟ್ಟಣ: ರಾಮನಗರ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಹಾಲಿ ಉಪಾಧ್ಯಕ್ಷ, ಕವಿ, ನಿವೃತ್ತ ಸಬ್ ರಿಜಿಸ್ಟ್ರಾರ್ *ತೋಟದಮನೆ ಕೃಷ್ಣೇಗೌಡ* ಎಂದೇ ಚಿರಪರಿಚಿತರಾಗಿದ್ದ ಕೃಷ್ಣೇಗೌಡರು (೭೮) ನಿನ್ನೆ ನಿಧನ ಹೊಂದಿದರು.ರಾಮನಗರ ಸೇರಿದಂತೆ ಅನೇಕ ತಾಲ್ಲೂಕುಗಳಲ್ಲಿ ಸಬ್ ರಿಜಿಸ್ಟ್ರಾರ್ ಆಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದ ಅವರು ವ್ಯವಸಾಯದ ಜೊತೆಗೆ ಕವನಗಳನ್ನು ಬರೆಯುವುದು

ಟ್ರ್ಯಾಕ್ಟರ್ ನಾಗರಾಜು ನಿಧನ

ಚನ್ನಪಟ್ಟಣ ತಾಲ್ಲೂಕಿನ ಅರಳಾಳುಸಂದ್ರ ಗ್ರಾಮದ ಟ್ರ್ಯಾಕ್ಟರ್ ನಾಗರಾಜು ಎಂದೆ ಹೆಸರುವಾಸಿಯಾದ ನಾಗರಾಜು (೭೬) ರವರು ಇಂದು (೧೧/೦೬/೧೯) ರಂದು ನಿಧನರಾದರು.ಮೃತರ ಅಂತ್ಯಕ್ರಿಯೆಯು ಸ್ವಗ್ರಾಮ ಅರಳಾಳುಸಂದ್ರ ದಲ್ಲಿ ೧೨/೦೬/೧೯ ರ ಬುಧವಾರ ದಂದು ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.ಮೃತ ನಾಗರಾಜು ರವರು ೪೦ ವರ್ಷಗಳಿಂದಲೂ ತಾಲ್ಲೂಕಿನಾದ್ಯಂತ ಒಂದು ಲಕ್ಷ ಹೆಕ್ಟೇರ್ ಪ್ರದೇಶ ಉಳುಮೆ ಮಾಡುವ ಮೂಲಕ ನಿಜವಾದ *

ಶ್ರೀ ಕೆಂಗಲ್ ಆಂಜನೇಯ ಸ್ವಾಮಿ ದೇವಸ್ಥಾನ ದ ಪ್ರಧಾನ ಆಗಮಿಕ ಸಂಪತ್ ಕುಮಾರ್ ನಿಧನ
ಶ್ರೀ ಕೆಂಗಲ್ ಆಂಜನೇಯ ಸ್ವಾಮಿ ದೇವಸ್ಥಾನ ದ ಪ್ರಧಾನ ಆಗಮಿಕ ಸಂಪತ್ ಕುಮಾರ್ ನಿಧನ

ಚನ್ನಪಟ್ಟಣ: ಕಳೆದ ಐವತ್ತು ದಶಕಗಳಿಂದಲೂ ಚನ್ನಪಟ್ಟಣದ ಕೆಂಗಲ್ ಆಂಜನೇಯ ಸ್ವಾಮಿ ದೇವಾಲಯದ ಅರ್ಚಕರಾಗಿ, ಪ್ರಮುಖ ಆಗಮಿಕರಾಗಿ, ಸೇವೆ ಸಲ್ಲಿಸುತ್ತಿದ *ಉಭಯ ವೇದ ಪ್ರವರ್ತಕ ಡಿ ಎನ್ ಸಂಪತ್ ಕುಮಾರ್* (೬೭) ರವರು ಅನಾರೋಗ್ಯ ನಿಮಿತ್ತ ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ಮೃತರು ಪತ್ನಿ, ಇಬ್ಬರು ಮಕ್ಕಳು ಸೇರಿದಂತೆ ಅನೇಕ ಬಂಧುಗಳು, ಹಿತೈಷಿಗಳು ಮತ್ತು ದೇವಾಲ

ಸಮಾಜ ಸೇವಕ ವಿ ಪುಟ್ಟಯ್ಯ ನಿಧನ
ಸಮಾಜ ಸೇವಕ ವಿ ಪುಟ್ಟಯ್ಯ ನಿಧನ

ನಗರದ ವಿವೇಕಾನಂದ ಬಡಾವಣೆಯ ನಿವಾಸಿ, ಆಗ್ರೋ ಇಂಡಸ್ಟ್ರೀಸ್ ಕಂಪನಿಯ ಮಾಜಿ ಉದ್ಯೋಗಿ, ಅಗಸನಪುರ ಕಲ್ಲು ಕೈಗಾರಿಕಾ ಸಂಘದ ಕಾರ್ಯದರ್ಶಿ, ಸಮಾಜ ಸೇವಕ ಪುಟ್ಟಯ್ಯ ವಿ (೭೨) ಅವರು ಇಂದು ಮುಂಜಾನೆ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಅಸುನೀಗಿದರು.ಪಾರ್ಥೀವ ಶರೀರವನ್ನು ಮಧ್ಯಾಹ್ನ ಎರಡು ಗಂಟೆಗೆ ನಗರದ ವಿವೇಕಾನಂದ ಬಡಾವಣೆಯ ಮನೆಯಲ್ಲಿ ಅಂತಿಮದರ್ಶನಕ್ಕೆ ಇಟ್ಟು ನಂತರ ಸ್ವಗ್ರಾಮ ಮಳವಳ್ಳಿ ತಾಲ್ಲೂಕಿನ ಅಗಸನಪುರ ಗ್ರಾಮದಲ್ಲ

ಬಿ ಟಿ ಚಿಕ್ಕಪುಟ್ಟೇಗೌಡ ರ ಮಾತೃಶ್ರೀ ನಿಂಗಮ್ಮ ನಿಧನ
ಬಿ ಟಿ ಚಿಕ್ಕಪುಟ್ಟೇಗೌಡ ರ ಮಾತೃಶ್ರೀ ನಿಂಗಮ್ಮ ನಿಧನ

ಚನ್ನಪಟ್ಟಣ ತಾಲ್ಲೂಕು ಬಿ ವಿ ಹಳ್ಳಿ ಗ್ರಾಮದ ತಮ್ಮಣ್ಣಗೌಡರ ಧರ್ಮಪತ್ನಿ ನಿಂಗಮ್ಮ ನವರು (೯೦) ಇಂದು ನಿಧನರಾದರು.ನಾಳೆ ಅಂದರೆ ೧೫/೦೪/೧೯ ರ ಸೋಮವಾರ ಬೆಳಿಗ್ಗೆ ೧೦:೦೦  ಕ್ಕೆ ಸ್ವಗ್ರಾಮ ಬಿ ವಿ ಹಳ್ಳಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.ಮೃತರು ನಿವೃತ್ತ ಕೃಷಿ ಅಧಿಕಾರಿ, ಸಾಹಿತಿ ಬಿ ಟಿ ಚಿಕ್ಕಪುಟ್ಟೇಗೌಡ ಸೇರಿದಂತೆ ಮೂವರು ಗಂಡು ಮಕ್ಕಳು, ಮೂವರು ಹೆಣ

ಚನ್ನಂಕೇಗೌಡನದೊಡ್ಡಿ ಗ್ರಾಮದ ನಿವಾಸಿ ಚಿಕ್ಕಪುಟ್ಟೇಗೌಡರು ಇಂದು ವಿಧಿವಶ
ಚನ್ನಂಕೇಗೌಡನದೊಡ್ಡಿ ಗ್ರಾಮದ ನಿವಾಸಿ ಚಿಕ್ಕಪುಟ್ಟೇಗೌಡರು ಇಂದು ವಿಧಿವಶ

ತೋಟದ ಚಿಕ್ಕಪುಟ್ಟಣ್ಣ ಎಂದೇ ಹೆಸರುವಾಸಿಯಾಗಿದ್ದ ಗೋವಿಂದೇಗೌಡನದೊಡ್ಡಿ ಮತ್ತು ಚನ್ನಂಕೇಗೌಡನದೊಡ್ಡಿ ಗ್ರಾಮದ ನಿವಾಸಿ ಚಿಕ್ಕಪುಟ್ಟೇಗೌಡ ರು ಇಂದು ವಿಧಿವಶರಾದರು, ಮೃತರ ಅಂತ್ಯ ಕ್ರಿಯೆಯು ಸ್ವಗ್ರಾಮದಲ್ಲಿ ಇಂದು 11:00 ಗಂಟೆಗೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.ಮೃತರು ಇಬ್ಬರು ಗಂಡು ಮಕ್ಕಳು, ಮೂವರು ಹೆಣ್ಣು ಮಕ್ಕಳು, ಅಳಿಯಂದಿರು, ಮೊಮ್ಮಕ್ಕಳು ಸೇರಿದಂತೆ ಅನೇಕ ಬಂಧುಬಳಗವನ್ನು ಅಗಲಿದ್ದಾರೆ.

ಸಾಹಿತಿ, ರೊಟೇರಿಯನ್ ಸಿ ಎಸ್ ಜಗದೀಶ್ ನಿಧನ
ಸಾಹಿತಿ, ರೊಟೇರಿಯನ್ ಸಿ ಎಸ್ ಜಗದೀಶ್ ನಿಧನ

ಸ್ನೇಹ ಪುಸ್ತಕದ ಕತೃ, ರೋಟರಿ ಕ್ಲಬ್ ನ ರೊಟೇರಿಯನ್ ಆಗಿದ್ದ ಹಾಗೂ ಪನಸಾರಿ ಅಂಗಡಿ ಎಂದರೆ ಪೇಟೆ ಬೀದಿಯ ಜಗದೀಶ್ ಎಂದು ಹೇಳುವ ಮಟ್ಟಿಗೆ ತಾಲ್ಲೂಕಿನಾದ್ಯಂತ ಚಿರಪರಿಚಿತರಾಗಿದ್ದ ಸಿ ವಿ ಜಗದೀಶ್ (೭೨) ಇಂದು ನಿಧನರಾದರು.ಎಲ್ಲಾ ವಯೋಮಾನದ ವರನ್ನೂ ಆತ್ಮೀಯ ವಾಗಿ ಮಾತನಾಡಿಸುತಿದ್ದ ಶ್ರೀಮಾನ್‌ ಜಗದೀಶ್ ರವರು ರಸಿಕ ಪುತ್ತಿಗೆ ಹಾಗೂ ಸು ತ ರಾಮೇಗೌಡ ರ ನೇತೃತ್ವದಲ್ಲಿ ನಡೆದ ಅಂದಿನ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಸಕ್ರಿಯವಾಗ

ಜಿಲ್ಲಾ ಒಕ್ಕಲಿಗರ ವೇದಿಕೆಯ ಅಧ್ಯಕ್ಷ ಮೊಗೇನಹಳ್ಳಿ ರಮೇಶ್ ರವರ ತಂದೆ ಇಂದು ಸ್ವರ್ಗಸ್ಥ
ಜಿಲ್ಲಾ ಒಕ್ಕಲಿಗರ ವೇದಿಕೆಯ ಅಧ್ಯಕ್ಷ ಮೊಗೇನಹಳ್ಳಿ ರಮೇಶ್ ರವರ ತಂದೆ ಇಂದು ಸ್ವರ್ಗಸ್ಥ

ಜಿಲ್ಲಾ ಒಕ್ಕಲಿಗರ ವೇದಿಕೆಯ ಅಧ್ಯಕ್ಷ ಮೊಗೇನಹಳ್ಳಿ ರಮೇಶ್ ರವರ ತಂದೆ ಇಂದು ಸ್ವರ್ಗಸ್ಥರಾಗಿದ್ದು ಮೃತರ ಅಂತ್ಯಕ್ರಿಯೆಯು ಸ್ವಗ್ರಾಮ ಮೊಗೇನಹಳ್ಳಿಯಲ್ಲಿ ಸಂಜೆ 04:00 ಗಂಟೆಗೆ ನೆರವೇರಲಿದೆ.

ಅಭಿಷೇಕ್ (೨೬) ಅಕಾಲಿಕ ಮರಣ
ಅಭಿಷೇಕ್ (೨೬) ಅಕಾಲಿಕ ಮರಣ

ಸಜ್ಜನ ರಾಜಕಾರಣಿ ಎಂದೇ ಹೆಸರಾದ ಚನ್ನಪಟ್ಟಣ ತಾಲ್ಲೂಕು ಪಂಚಾಯತ ಹಾಲಿ ಅಧ್ಯಕ್ಷರಾದ ಹರೂರು ರಾಜಣ್ಣರವರ ಪುತ್ರ ಅಭಿಷೇಕ್( ೨೬) ಅಕಾಲಿಕ ಮರಣ ಹೊಂದಿದ್ದು ನಾಳೆ ಮಧ್ಯಾಹ್ನ ಹನ್ನೆರಡು ಗಂಟೆಗೆ ಸ್ವಗ್ರಾಮ ಹರೂರಿನಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ,ಅಭಿಷೇಕ್ ಸಾವಿಗೆ ಮಾಜಿ ಶಾಸಕ ಯೋಗೇಶ್ವರ್ ಸೇರಿದಂತೆ ತಾಲ್ಲೂಕಿನ ಗಣ್ಯರು ಸಂತಾಪ ಸೂಚಿಸಿ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ.ಗೋ ರಾ ಶ್ರೀನಿವಾಸ...ಮೊ:9

ಪಾರ್ಥ. ಪಿ. ವಿಧಿವಶ (ಪಾರ್ಥ  ಕಾಂಪ್ಲೆಕ್ಸ್  ಮಾಲೀಕರು)
ಪಾರ್ಥ. ಪಿ. ವಿಧಿವಶ (ಪಾರ್ಥ ಕಾಂಪ್ಲೆಕ್ಸ್ ಮಾಲೀಕರು)

ಪಾರ್ಥ  ಕಾಂಪ್ಲೆಕ್ಸ್ ಮಾಲೀಕರಾದ ಪಾರ್ಥ. ಪಿ. ರವರು ಅನಾರೋಗ್ಯದ ಕಾರಣದಿಂದ  ಇಂದು ಬೆಳಿಗ್ಗೆ ೧೧.೩೦ ಕ್ಕೆ ನಿಧನರಾಗಿದ್ದಾರೆ.  ಇವರು ಪತ್ನಿ ಚಂದ್ರಮ್ಮ ಹಾಗೂ ೪ ಮಕ್ಕಳನ್ನು ಅಗಲಿದ್ದಾರೆ.  ಇವರ ಅಂತ್ಯ ಸಂಸ್ಕಾರವನ್ನು ನಾಳೆ  ಬೆಳಿಗ್ಗೆ ೧೦.೦೦ ಗಂಟೆಗೆ ಮಾಡಲಾಗುತ್ತದೆ ಎಂದು ಪುತ್ರರಾದ ಮಧು ರವರು ತಿಳಿಸಿದ್ದಾರೆ.

Top Stories »  



Top ↑