Tel: 7676775624 | Mail: info@yellowandred.in

Language: EN KAN

    Follow us :


ಕೇಂದ್ರದ ಮಾಜಿ ಸಚಿವ ಎಂ. ವಿ. ರಾಜಶೇಖರನ್ ಅವರ ನಿಧನಕ್ಕೆ ಮುಖ್ಯಮಂತ್ರಿ ಸಂತಾಪ

Posted date: 13 Apr, 2020

Powered by:     Yellow and Red

ಕೇಂದ್ರದ ಮಾಜಿ ಸಚಿವ ಎಂ. ವಿ. ರಾಜಶೇಖರನ್ ಅವರ ನಿಧನಕ್ಕೆ ಮುಖ್ಯಮಂತ್ರಿ ಸಂತಾಪ

ಬೆಂಗಳೂರು:ಏಪ್ರಿಲ್:೧೩/೨೦/ಸೋಮವಾರ, ಕೇಂದ್ರದ ಮಾಜಿ ಸಚಿವ ಎಂ. ವಿ. ರಾಜಶೇಖರನ್ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.


ಎಂ. ವಿ. ರಾಜಶೇಖರನ್ ಅವರು ಸರಳತೆ, ಸಜ್ಜನಿಕೆಯ ಪ್ರಬುದ್ಧ ರಾಜಕಾರಣಿಯಾಗಿದ್ದರು.


ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರ ಅಳಿಯನಾದ ಅವರು, ಗ್ರಾಮೀಣ ಆರ್ಥಿಕತೆಯ ವಿಚಾರದಲ್ಲಿ ಆಳವಾದ ಜ್ಞಾನ ಹೊಂದಿದ್ದರು. ಗ್ರಾಮೀಣ ಅಭಿವೃದ್ಧಿ ಕುರಿತು ಅಧ್ಯಯನ ಸಂಸ್ಥೆಯೊಂದನ್ನು ಸ್ಥಾಪಿಸಿದ್ದರು. 

ಲೋಕಸಭೆ, ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಸದಸ್ಯರಾಗಿ ಅತ್ಯುತ್ತಮ ಸಂಸದೀಯ ಪಟುವಾಗಿ ಗುರುತಿಸಿಕೊಂಡಿದ್ದರು 

ಡಾ ಮನಮೋಹನ್ ಸಿಂಗ್ ಸರ್ಕಾರದಲ್ಲಿ ಕೇಂದ್ರ ಯೋಜನೆ ಮತ್ತು ಅಂಕಿ ಅಂಶ ಖಾತೆಯ ರಾಜ್ಯ ಸಚಿವರಾಗಿ ಹೊಣೆಗಾರಿಕೆ ನಿಭಾಯಿಸಿದ್ದರು ಎಂದು ಮುಖ್ಯಮಂತ್ರಿಗಳು ಸ್ಮರಿಸಿಕೊಂಡಿದ್ದಾರೆ. 


ಮೌಲ್ಯಾಧಾರಿತ ರಾಜಕಾರಣ ದಿಂದಾಗಿಯೆ ಗುರುತಿಸಿಕೊಂಡಿದ್ದರು. ಅವರ ನಿಧನ ಅತ್ಯಂತ ದುಃಖದ ಸಂಗತಿ. ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅವರ ಕುಟುಂಬ ವರ್ಗ, ಅಭಿಮಾನಿ ಬಳಗಕ್ಕೆ ಈ ನೋವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುವುದಾಗಿ  ಮುಖ್ಯಮಂತ್ರಿಗಳು ತಿಳಿಸಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in obituary »

ಟಿವಿ9 ರಾಜು ಎಂದೇ ಹೆಸರುವಾಸಿಯಾಗಿದ್ದ ಹಲಸಿನಮರದದೊಡ್ಡಿ ರಾಜು ನಿಧನ
ಟಿವಿ9 ರಾಜು ಎಂದೇ ಹೆಸರುವಾಸಿಯಾಗಿದ್ದ ಹಲಸಿನಮರದದೊಡ್ಡಿ ರಾಜು ನಿಧನ

ಚನ್ನಪಟ್ಟಣ:ಅ/14/20/ಬುಧವಾರ. ಹಿರಿಯ ಮಾಧ್ಯಮ ವರದಿಗಾರರಾಗಿದ್ದ Tv9 ರಾಜುರವರು ಅನಾರೋಗ್ಯದಿಂದ ಇಂದು ನಿಧನರಾಗಿದ್ದಾರೆ. ಮೃತರ ಪಾರ್ಥಿವ ಶರೀರವ

ಮುಸ್ಲಿಂ ಯುವತಿ ಪ್ರೀತಿಸಿದ್ದಕ್ಕೆ ಅಳಿಯನನ್ನೇ ಕೊಲೆ ಮಾಡಿದ ಯುವತಿಯ ತಂದೆ*
ಮುಸ್ಲಿಂ ಯುವತಿ ಪ್ರೀತಿಸಿದ್ದಕ್ಕೆ ಅಳಿಯನನ್ನೇ ಕೊಲೆ ಮಾಡಿದ ಯುವತಿಯ ತಂದೆ*

ಮಾಗಡಿ:ಅ/08/20/ಗುರುವಾರ. ಮಾಗಡಿ ತಾಲ್ಲೂಕಿನ ಕನಕೇನಹಳ್ಳಿ ಇಸ್ಲಾಂಪುರದ ಯುವತಿ ಅಂಬ್ರೀನಾಬಾನು ಹಾಗೂ ನೆಲಮಂಗಲದ ಲಕ್ಷ್ಮೀಪತಿ ಎಂಬುವವರು ಕಳೆದ

ಕುಂತೂರುದೊಡ್ಡಿ ಬಳಿ ಮಡಿಕೇರಿ ಮೂಲದ ವ್ಯಕ್ತಿಯ ಶವ ಪತ್ತೆ*
ಕುಂತೂರುದೊಡ್ಡಿ ಬಳಿ ಮಡಿಕೇರಿ ಮೂಲದ ವ್ಯಕ್ತಿಯ ಶವ ಪತ್ತೆ*

ಚನ್ನಪಟ್ಟಣ:ಅ/08/20/ಗುರುವಾರ. ಪಾನಮತ್ತನಾದ ನಂತರ ಸಾವನ್ನಪ್ಪಿರಬಹುದು ಎಂದು ಊಹಿಸಲಾಗಿರುವ ಗಂಡಸಿನ ಮೃತದೇಹವೊಂದು ಪತ್ತೆಯಾಗಿರುವ ಘಟನೆ ಗ್ರಾಮ

ನಗರಸಭೆಯ ಮಾಜಿ ಅಧ್ಯಕ್ಷೆ ಶ್ವೇತಾ ಗೋಪಾಲಕೃಷ್ಣ ನಿಧನ
ನಗರಸಭೆಯ ಮಾಜಿ ಅಧ್ಯಕ್ಷೆ ಶ್ವೇತಾ ಗೋಪಾಲಕೃಷ್ಣ ನಿಧನ

ಚನ್ನಪಟ್ಟಣ:ಸೆ/29/20/ಮಂಗಳವಾರ. ನಗರಸಭೆಯ ಮಾಜಿ ಅಧ್ಯಕ್ಷೆ ಮಂಗಳವಾರಪೇಟೆ ಯ ನಿವಾಸಿ ಶ್ರೀಮತಿ ಶ್ವೇತಾ ಗೋಪಾಲಕೃಷ್ಣ (35) ಇಂದು ಸಂಜೆ ಹೃದಯಘಾತ

ವಿದ್ಯುತ್ ಸ್ಪರ್ಶಿಸಿ ಕಾರ್ಮಿಕ ಸಾವು
ವಿದ್ಯುತ್ ಸ್ಪರ್ಶಿಸಿ ಕಾರ್ಮಿಕ ಸಾವು

ಚನ್ನಪಟ್ಟಣ:ಸೆ/22/20/ಮಂಗಳವಾರ. ವಿದ್ಯುತ್ ತಂತಿ ಎಳೆಯುವಾಗ ಆಕಸ್ಮಿಕವಾಗಿ ವಿದ್ಯುತ್ ಪ್ರಹರಿಸಿ ಕಾರ್ಮಿಕನೋರ್ವ ಸಾವನ್ನಪ್ಪಿರುವ ಘಟನೆ 

ಸೆಷನ್ ಕೋರ್ಟ್ ನ ಸರ್ಕಾರಿ ಅಭಿಯೋಜಕ ಜಯಪ್ರಕಾಶ್ ಸಾವು
ಸೆಷನ್ ಕೋರ್ಟ್ ನ ಸರ್ಕಾರಿ ಅಭಿಯೋಜಕ ಜಯಪ್ರಕಾಶ್ ಸಾವು

ಕನಕಪುರ:ಸೆ/17/20/ಗುರುವಾರ. ಕನಕಪುರ ದ ಸೆಷನ್ ನ್ಯಾಯಾಲಯದ ಸರ್ಕಾರಿ ಅಭಿಯೋಜಕ (ಪಬ್ಲಿಕ್ ಪ್ರಾಸಿಕ್ಯೂಟರ್) ಜಯಪ್ರಕಾಶ್ ರವರು ಇಂದು ಬೆಂಗಳೂರಿನ

ತಗಚಗೆರೆ ವಿಲೇಜ್ ಅಕೌಂಟೆಂಟ್ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಪ್ರಯತ್ನ. ಆಸ್ಪತ್ರೆಗೆ ದಾಖಲು
ತಗಚಗೆರೆ ವಿಲೇಜ್ ಅಕೌಂಟೆಂಟ್ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಪ್ರಯತ್ನ. ಆಸ್ಪತ್ರೆಗೆ ದಾಖಲು

ಚನ್ನಪಟ್ಟಣ:ಸೆ/14/20/ಮಂಗಳವಾರ. ತಾಲ್ಲೂಕಿನ ತಗಚಗೆರೆ ಗ್ರಾಮ ಪಂಚಾಯತಿಯ ಲೆಕ್ಕಾಧಿಕಾರಿ ಕವಿತಾ ಎಂಬುವವರು ಮರಣ ಪತ್ರ ಬರೆದಿಟ್ಟು ಆತ್ಮಹತ್ಯೆಗೆ

ರಸ್ತೆ ಅಪಘಾತದಲ್ಲಿ ಮಧುಸೂದನಚಾರ್ಯಜೋಷಿ ದಂಪತಿಗಳು ನಿಧನ
ರಸ್ತೆ ಅಪಘಾತದಲ್ಲಿ ಮಧುಸೂದನಚಾರ್ಯಜೋಷಿ ದಂಪತಿಗಳು ನಿಧನ

ಚನ್ನಪಟ್ಟಣ/ಮಳವಳ್ಳಿ:ಸೆ/13/20/ಭಾನುವಾರ. ಇಂದು ಮುಂಜಾನೆ ಮಳವಳ್ಳಿ ತಾಲ್ಲೂಕಿನ ದಾಸೇಗೌಡನದೊಡ್ಡಿ ಗ್ರಾಮದ ಬಳಿ ನಡೆದ ರಸ್ತೆ ಅಪಘಾತದಲ್ಲಿ ಚನ್ನಪಟ

ಪ್ರತಿಷ್ಠಿತ ಸಿಐಎಸ್‌ಸಿ ಕ್ಲಬ್ ಮ್ಯಾನೇಜರ್ ಕೃಷ್ಣ ಆತ್ಮಹತ್ಯೆ
ಪ್ರತಿಷ್ಠಿತ ಸಿಐಎಸ್‌ಸಿ ಕ್ಲಬ್ ಮ್ಯಾನೇಜರ್ ಕೃಷ್ಣ ಆತ್ಮಹತ್ಯೆ

ಚನ್ನಪಟ್ಟಣ:ಸೆ/04/20/ಗುರುವಾರ. ತಾಲ್ಲೂಕಿನ ಚಿಕ್ಕಮಳೂರು ಬಳಿಯ ಕೂಡ್ಲೂರು ರಸ್ತೆಯಲ್ಲಿರುವ ಸಿಐಎಸ್‌ಸಿ ಕ್ಲಬ್‌ನ ಮ್ಯಾನೇಜರ್ ಆಗಿ ಕರ್ತವ್ಯ ನಿ

ಆಸ್ಪತ್ರೆಯಲ್ಲೇ ಆತ್ಮಹತ್ಯೆಗೆ ಶರಣಾದ ಕೊರೊನಾ ಸೋಂಕಿತ
ಆಸ್ಪತ್ರೆಯಲ್ಲೇ ಆತ್ಮಹತ್ಯೆಗೆ ಶರಣಾದ ಕೊರೊನಾ ಸೋಂಕಿತ

ಚನ್ನಪಟ್ಟಣ:ಆ/26/20/ಬುಧವಾರ. ಕೊರೊನಾ ಸೋಂಕಿತ ವ್ಯಕ್ತಿಯೊಬ್ಬ ತಾಲೂಕಿನ ಹೊನ್ನನಾಯಕನಹಳ್ಳಿ ಕೋವಿಡ್ ಚಿಕಿತ್ಸಾ ಕೇಂದ್ರದಲ್ಲೇ ಆತ್ಮಹತ್ಯೆಗೆ ಶರ

Top Stories »  


Top ↑