ಸೆಷನ್ ಕೋರ್ಟ್ ನ ಸರ್ಕಾರಿ ಅಭಿಯೋಜಕ ಜಯಪ್ರಕಾಶ್ ಸಾವು

ಕನಕಪುರ:ಸೆ/17/20/ಗುರುವಾರ. ಕನಕಪುರ ದ ಸೆಷನ್ ನ್ಯಾಯಾಲಯದ ಸರ್ಕಾರಿ ಅಭಿಯೋಜಕ (ಪಬ್ಲಿಕ್ ಪ್ರಾಸಿಕ್ಯೂಟರ್) ಜಯಪ್ರಕಾಶ್ ರವರು ಇಂದು ಬೆಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಜ್ವರ ಬಂದ ಹಿನ್ನೆಲೆಯಲ್ಲಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ.
ಜಯಪ್ರಕಾಶ್ ರವರು ಮೂಲ ಪಿರಿಯಾಪಟ್ಟಣ ದವರಾಗಿದ್ದು ಚನ್ನಪಟ್ಟಣದ ನ್ಯಾಯಾಲಯಲ್ಲಿ ಸಹಾಯಕ ಅಭಿಯೋಜಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಅಭಿಯೋಜಕರಾಗಿ ಬಡ್ತಿ ಹೊಂದಿದ್ದು ಬೆಂಗಳೂರಿಗೆ ವರ್ಗವಾಗಿದ್ದರು. ನಂತರ ಕನಕಪುರ ದ ಸೆಷನ್ಸ್ ನ್ಯಾಯಾಲಯದಲ್ಲಿ ಅಭಿಯೋಜಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಇತ್ತೀಚೆಗೆ ಕನಕಪುರ ತಾಲ್ಲೂಕಿನ ಹಾರೋಹಳ್ಳಿ ಪೋಲೀಸ್ ಠಾಣಾ ವ್ಯಾಪ್ತಿಯ ಸಾದೇನಹಳ್ಳಿ ಗ್ರಾಮದ ತಾಯಿ ಮಗ (ನಿಂಗಮ್ಮ ಮತ್ತು ಚಂದ್ರು) ಕೊಲೆ ಕೇಸಿನಲ್ಲಿ, ಬೆಂಗಳೂರಿನ ಉತ್ತರಹಳ್ಳಿಯ ಕೊಲೆಗಾರರಾದ ಸುರೇಶ್, ಶಾರದಾ ಮತ್ತು ಕಲಾ ಎಂಬುವವರ ವಿರುದ್ದ ವಾದ ಮಂಡಿಸಿದ್ದು ಜಿಲ್ಲಾ ಅಪರ ನ್ಯಾಯಾಧೀಶ ಎಸ್ ಎಸ್ ಕಲ್ಕುಣಿ ರವರು ಅಪರಾಧಿಗಳಿಗೆ ತಲಾ 50 ಸಾವಿರ ದಂಡ ಮತ್ತು ಜೀವಾವಧಿ ಶಿಕ್ಷೆಗೆ ಗುರಿ ಪಡಿಸಿದ್ದನ್ನು ಸ್ಮರಿಸಬಹುದು.
ಮೃತರ ದೇಹವು ಪಿರಿಯಾಪಟ್ಟಣಕ್ಕೆ ಹೋಗುವ ಸಮಯದಲ್ಲಿ ಚನ್ನಪಟ್ಟಣದ ನ್ಯಾಯಾಲಯದ ಮುಂದೆ ನಿಲ್ಲಿಸಿ ತಾಲ್ಲೂಕಿನ ವಕೀಲರು ಶ್ರದ್ಧಾಂಜಲಿ ಅರ್ಪಿಸಿದರು.
ಮೃತರು ಪತ್ನಿ ಮತ್ತು ಮಕ್ಕಳನ್ನು ಅಗಲಿದ್ದು, ತಾಲೂಕು ಮತ್ತು ಜಿಲ್ಲಾ ವಕೀಲರ ಸಂಘದ ಪದಾಧಿಕಾರಿಗಳು ಮೃತರಿಗೆ ಶಾಂತಿ ಕೋರಿದ್ದಾರೆ.
ಗೋ ರಾ ಶ್ರೀನಿವಾಸ...
ಮೊ:9845856139.
Recent news in obituary »

ಅಂಗಾಂಗ ದಾನ ಮಾಡುವ ಮೂಲಕ, ಸಾವಿನಲ್ಲೂ ಸಾರ್ಥಕತೆ ಮೆರೆದ ಜೆ ಬ್ಯಾಡರಹಳ್ಳಿ ಗ್ರಾಮದ ಪ್ರಸನ್ನ.
ಚನ್ನಪಟ್ಟಣ:ಜ/13/21/ಬುಧವಾರ. ತಾಲ್ಲೂಕಿನ ಜೆ ಬ್ಯಾಡರಹಳ್ಳಿ ಗ್ರಾಮದ ಇಪ್ಪತ್ತೇಳು ವರ್ಷದ ಪ್ರಸನ್ನ ರವರು ತಮ್ಮ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರ

ಎ ಆರ್ ಎಂ ರೇಷ್ಮೆ ನೂಲು ಬಿಚ್ಚಣಿಕೆ ಫಿಲೇಚರಿಯಲ್ಲಿ ಮಂಡ್ಯ ಮೂಲದ ಕಾರ್ಮಿಕ ನೇಣು ಬಿಗಿದು ಸಾವು, ದೂರು ದಾಖಲು
ಚನ್ನಪಟ್ಟಣ:ಡಿ/07/20/ಸೋಮವಾರ. ತಾಲ್ಲೂಕಿನ ಸುಣ್ಣಘಟ್ಟ ಬಳಿಯ ನೀಲಸಂದ್ರ ರಸ್ತೆಯಲ್ಲಿರುವ ಎ ಎಂ ಆರ್ ರೇಷ್ಮೆ ನೂಲು ಬಿಚ್ಚಣಿಕೆ ಕಾರ್ಖಾನೆಯಲ್ಲಿ

ಟಿವಿ9 ರಾಜು ಎಂದೇ ಹೆಸರುವಾಸಿಯಾಗಿದ್ದ ಹಲಸಿನಮರದದೊಡ್ಡಿ ರಾಜು ನಿಧನ
ಚನ್ನಪಟ್ಟಣ:ಅ/14/20/ಬುಧವಾರ. ಹಿರಿಯ ಮಾಧ್ಯಮ ವರದಿಗಾರರಾಗಿದ್ದ Tv9 ರಾಜುರವರು ಅನಾರೋಗ್ಯದಿಂದ ಇಂದು ನಿಧನರಾಗಿದ್ದಾರೆ. ಮೃತರ ಪಾರ್ಥಿವ ಶರೀರವ

ಮುಸ್ಲಿಂ ಯುವತಿ ಪ್ರೀತಿಸಿದ್ದಕ್ಕೆ ಅಳಿಯನನ್ನೇ ಕೊಲೆ ಮಾಡಿದ ಯುವತಿಯ ತಂದೆ*
ಮಾಗಡಿ:ಅ/08/20/ಗುರುವಾರ. ಮಾಗಡಿ ತಾಲ್ಲೂಕಿನ ಕನಕೇನಹಳ್ಳಿ ಇಸ್ಲಾಂಪುರದ ಯುವತಿ ಅಂಬ್ರೀನಾಬಾನು ಹಾಗೂ ನೆಲಮಂಗಲದ ಲಕ್ಷ್ಮೀಪತಿ ಎಂಬುವವರು ಕಳೆದ

ಕುಂತೂರುದೊಡ್ಡಿ ಬಳಿ ಮಡಿಕೇರಿ ಮೂಲದ ವ್ಯಕ್ತಿಯ ಶವ ಪತ್ತೆ*
ಚನ್ನಪಟ್ಟಣ:ಅ/08/20/ಗುರುವಾರ. ಪಾನಮತ್ತನಾದ ನಂತರ ಸಾವನ್ನಪ್ಪಿರಬಹುದು ಎಂದು ಊಹಿಸಲಾಗಿರುವ ಗಂಡಸಿನ ಮೃತದೇಹವೊಂದು ಪತ್ತೆಯಾಗಿರುವ ಘಟನೆ ಗ್ರಾಮ

ನಗರಸಭೆಯ ಮಾಜಿ ಅಧ್ಯಕ್ಷೆ ಶ್ವೇತಾ ಗೋಪಾಲಕೃಷ್ಣ ನಿಧನ
ಚನ್ನಪಟ್ಟಣ:ಸೆ/29/20/ಮಂಗಳವಾರ. ನಗರಸಭೆಯ ಮಾಜಿ ಅಧ್ಯಕ್ಷೆ ಮಂಗಳವಾರಪೇಟೆ ಯ ನಿವಾಸಿ ಶ್ರೀಮತಿ ಶ್ವೇತಾ ಗೋಪಾಲಕೃಷ್ಣ (35) ಇಂದು ಸಂಜೆ ಹೃದಯಘಾತ

ವಿದ್ಯುತ್ ಸ್ಪರ್ಶಿಸಿ ಕಾರ್ಮಿಕ ಸಾವು
ಚನ್ನಪಟ್ಟಣ:ಸೆ/22/20/ಮಂಗಳವಾರ. ವಿದ್ಯುತ್ ತಂತಿ ಎಳೆಯುವಾಗ ಆಕಸ್ಮಿಕವಾಗಿ ವಿದ್ಯುತ್ ಪ್ರಹರಿಸಿ ಕಾರ್ಮಿಕನೋರ್ವ ಸಾವನ್ನಪ್ಪಿರುವ ಘಟನೆ

ಸೆಷನ್ ಕೋರ್ಟ್ ನ ಸರ್ಕಾರಿ ಅಭಿಯೋಜಕ ಜಯಪ್ರಕಾಶ್ ಸಾವು
ಕನಕಪುರ:ಸೆ/17/20/ಗುರುವಾರ. ಕನಕಪುರ ದ ಸೆಷನ್ ನ್ಯಾಯಾಲಯದ ಸರ್ಕಾರಿ ಅಭಿಯೋಜಕ (ಪಬ್ಲಿಕ್ ಪ್ರಾಸಿಕ್ಯೂಟರ್) ಜಯಪ್ರಕಾಶ್ ರವರು ಇಂದು ಬೆಂಗಳೂರಿನ

ತಗಚಗೆರೆ ವಿಲೇಜ್ ಅಕೌಂಟೆಂಟ್ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಪ್ರಯತ್ನ. ಆಸ್ಪತ್ರೆಗೆ ದಾಖಲು
ಚನ್ನಪಟ್ಟಣ:ಸೆ/14/20/ಮಂಗಳವಾರ. ತಾಲ್ಲೂಕಿನ ತಗಚಗೆರೆ ಗ್ರಾಮ ಪಂಚಾಯತಿಯ ಲೆಕ್ಕಾಧಿಕಾರಿ ಕವಿತಾ ಎಂಬುವವರು ಮರಣ ಪತ್ರ ಬರೆದಿಟ್ಟು ಆತ್ಮಹತ್ಯೆಗೆ

ಪ್ರತಿಕ್ರಿಯೆಗಳು