ಮುಸ್ಲಿಂ ಯುವತಿ ಪ್ರೀತಿಸಿದ್ದಕ್ಕೆ ಅಳಿಯನನ್ನೇ ಕೊಲೆ ಮಾಡಿದ ಯುವತಿಯ ತಂದೆ*

ಮಾಗಡಿ:ಅ/08/20/ಗುರುವಾರ. ಮಾಗಡಿ ತಾಲ್ಲೂಕಿನ ಕನಕೇನಹಳ್ಳಿ ಇಸ್ಲಾಂಪುರದ ಯುವತಿ ಅಂಬ್ರೀನಾಬಾನು ಹಾಗೂ ನೆಲಮಂಗಲದ ಲಕ್ಷ್ಮೀಪತಿ ಎಂಬುವವರು ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಮದುವೆಗೆ ಎರಡೂ ಕುಟುಂಬದವರು ಒಪ್ಪದ ಕಾರಣ ಕಳೆದ ವರ್ಷ ಮನೆಬಿಟ್ಟು ಹೋಗಿದ್ದರು. ಈ ಸಂಬಂಧ ನೆಲಮಂಗಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ರಾಜಿ ಸಂಧಾನದ ಮೂಲಕ ಎರಡೂ ಕುಟುಂಬಗಳು ಓಡಿ ಹೋಗಿದ್ದ ಜೋಡಿಯನ್ನು ವಾಪಸ್ ಕರೆದು ತಂದು ರಾಜೀಸಂದಾನ ಮಾಡಿ ಸೇರಿಸಿದ್ದರು. ಆದರೆ ಕೆಲವು ಸಮಸ್ಯೆಯಿಂದ ಈ ಜೋಡಿ ಮತ್ತೆ ಮನೆಬಿಟ್ಟು ಓಡಿ ಹೋಗಿದ್ದರು. ಈ ವಿಷಯಕ್ಕೆ ಎರಡು ಕುಟುಂಬಗಳ ನಡುವೆ ಜಗಳ ನಡೆಯುತ್ತಿದ್ದವು.
ಈ ಪ್ರಕರಣದ ಸಂಬಂಧ ಯುವತಿಯ ತಂದೆ, ನಿಜಾಮುದ್ದೀನ್ ಮಾತನಾಡಿ, ಕನಕೇನಹಳ್ಳಿಯಲ್ಲಿ ನಮ್ಮ ಸಂಬಂಧಿ ಗಳಿದ್ದು, ಅಲ್ಲೇ ನನ್ನ ಮಗಳ ಮದುವೆ ಮಾಡಿಕೊಡುವುದಾಗಿ ಹುಡುಗ ಹಾಗೂ ಆತನ ಅಣ್ಣ ನಟರಾಜ್ ಬಳಿ ಮಾತನಾಡಿದ್ದ ಎನ್ನಲಾಗಿದೆ. ಅಲ್ಲದೆ ನಂಬಿಸಿ ಹುಡುಗ ಹಾಗೂ ಅವನ ಅಣ್ಣ ಇಬ್ಬರನ್ನೂ ಕರೆದು ತಂದಿದ್ದ.
ದಾರಿಮಧ್ಯೆ ನಿಜಾಮುದ್ದೀನ್ ತನ್ನ ಸಹೋದರರಾದ ಸಿಕಂದರ್, ಇಬ್ರತ್ ಹಾಗು ಆಟೋ ಮಹಮದ್ ಎಂಬುವವರಿಗೆ ಕುಡಿಸಿ, ಲಕ್ಷ್ಮೀಪತಿ (25) ಎಂಬ ಯುವಕನನ್ನು ಕೊಲೆ ಮಾಡಲಾಗಿದೆ.
ಈ ಆರೋಪಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಮತ್ತಿಬ್ಬರು ಪರಾರಿಯಾಗಿದ್ದಾರೆ.
ಮೊದಲೇ ಲೆಕ್ಕ ಹಾಕಿದ್ದಂತೆ ಆರೋಪಿತರು ನಿರ್ಜನ ಪ್ರದೇಶಕ್ಕೆ ಕರೆದು ಕೊಂಡು ಹೋಗಿ ಲಕ್ಷ್ಮಿಪತಿಯ ಬೆಲ್ಟ್ ನಿಂದಲೇ ಕತ್ತಿಗೆ ಬೀರಿ ಕೊಲೆ ಮಾಡಿದ್ದಾರೆ. ಆಗ ಜೊತೆಯಲ್ಲಿದ್ದ ನಟರಾಜ್ ಹೇಗೋ ತಪ್ಪಿಸಿಕೊಂಡಿದ್ದಾನೆ.
ಲಕ್ಷ್ಮಿಪತಿ ಕೊಲೆಯಾದ ನಂತರ ಅಣ್ಣ ನಟರಾಜ್ ಗಾಗಿ ಆರೋಪಿತರು ಹುಡುಕಾಡಿದ್ದಾರೆ. ಆದರೆ ಆತ ಅಷ್ಟರಲ್ಲಿ ಹೊಲದೊಳಗೆ ಅಡಗಿಕೊಂಡಿದ್ದಾನೆ. ಹುಡುಕಾಡುವಷ್ಟರಲ್ಲಿ ಕತ್ತಲೆಯಾದುದರಿಂದ ಪರಾರಿಯಾಗಿದ್ದಾರೆ.
ತಕ್ಷಣವೇ ಮನೆಗೆ ಬಂದ ನಟರಾಜ್ ಸಂಬಂಧಿಕರಿಗೆ ವಿಷಯ ತಿಳಿಸಿ, ಅವರೊಂದಿಗೆ ಘಟನೆ ನಡೆದ ಸ್ಥಳಕ್ಕೆ ಆಗಮಿಸಿ, ಲಕ್ಷ್ಮಿಪತಿಯ ಶವಕ್ಕಾಗಿ ಹುಡುಕಾಡಿದ್ದಾರೆ. ಶವ ಸಿಗದ ಕಾರಣ ನೆಲಮಂಗಲ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸರು ಲಕ್ಷ್ಮಿಪತಿ ಶವವನ್ನು ಪತ್ತೆ ಹಚ್ಚಿದ್ದಾರೆ, ತದನಂತರ ಆರೋಪಿತರಾದ ನಿಜಾಮುದ್ದೀನ್ ಹಾಗೂ ಸಿಕಂದರ್ ಅವರನ್ನು ವಶಕ್ಕೆ ಪಡೆದಿದ್ದಾರೆ.
ಇಬ್ರತ್ ಹಾಗೂ ಆಟೋ ಮಹಮದ್ ತಲೆ ಮರೆಸಿಕೊಂಡಿದ್ದಾರೆ. ಅವರಿ ಗಾಗಿ ಹುಡುಕಾಟ ನಡೆದಿದೆ.
ಕುದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೃತ್ತ ನಿರೀಕ್ಷಕ ಮಂಜುನಾಥ್ ನೇತೃತ್ವದಲ್ಲಿ ತನಿಖೆ ನಡೆ ಯುತ್ತಿದೆ.
*ಕೊಲೆ ಮಾಡಿದ್ದಾಗಿ ಹುಡುಗಿ ತಂದೆ ಒಪ್ಪಿಗೆ;*
ಇಲ್ಲಿನ ಎಸ್‌ಪಿಯರಾದ ಎಸ್.ಗಿರೀಶ್, ಅನ್ಯ ಧರ್ಮದ ಯುವಕ ತನ್ನ ಮಗಳನ್ನು ಪ್ರೀತಿಸಿದ್ದು, ಅವರಿಗೆ ಮದುವೆ ಮಾಡಿದರೆ ಮರ್ಯಾದೆ ಹೋಗುತ್ತದೆ, ಅದನ್ನು ಸಹಿಸಲಾಗದೆ ನಾನೇ ಕೊಂದೆ ಎಂದು ಯುವತಿಯ ತಂದೆ ನಿಜಾಮುದ್ದೀನ್ ಒಪ್ಪಿಕೊಂಡಿದ್ದಾನೆ ಎಂದು ಹೇಳಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.
ಗೋ ರಾ ಶ್ರೀನಿವಾಸ...
ಮೊ:9845856139.
Recent news in obituary »

ಅಂಗಾಂಗ ದಾನ ಮಾಡುವ ಮೂಲಕ, ಸಾವಿನಲ್ಲೂ ಸಾರ್ಥಕತೆ ಮೆರೆದ ಜೆ ಬ್ಯಾಡರಹಳ್ಳಿ ಗ್ರಾಮದ ಪ್ರಸನ್ನ.
ಚನ್ನಪಟ್ಟಣ:ಜ/13/21/ಬುಧವಾರ. ತಾಲ್ಲೂಕಿನ ಜೆ ಬ್ಯಾಡರಹಳ್ಳಿ ಗ್ರಾಮದ ಇಪ್ಪತ್ತೇಳು ವರ್ಷದ ಪ್ರಸನ್ನ ರವರು ತಮ್ಮ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರ

ಎ ಆರ್ ಎಂ ರೇಷ್ಮೆ ನೂಲು ಬಿಚ್ಚಣಿಕೆ ಫಿಲೇಚರಿಯಲ್ಲಿ ಮಂಡ್ಯ ಮೂಲದ ಕಾರ್ಮಿಕ ನೇಣು ಬಿಗಿದು ಸಾವು, ದೂರು ದಾಖಲು
ಚನ್ನಪಟ್ಟಣ:ಡಿ/07/20/ಸೋಮವಾರ. ತಾಲ್ಲೂಕಿನ ಸುಣ್ಣಘಟ್ಟ ಬಳಿಯ ನೀಲಸಂದ್ರ ರಸ್ತೆಯಲ್ಲಿರುವ ಎ ಎಂ ಆರ್ ರೇಷ್ಮೆ ನೂಲು ಬಿಚ್ಚಣಿಕೆ ಕಾರ್ಖಾನೆಯಲ್ಲಿ

ಟಿವಿ9 ರಾಜು ಎಂದೇ ಹೆಸರುವಾಸಿಯಾಗಿದ್ದ ಹಲಸಿನಮರದದೊಡ್ಡಿ ರಾಜು ನಿಧನ
ಚನ್ನಪಟ್ಟಣ:ಅ/14/20/ಬುಧವಾರ. ಹಿರಿಯ ಮಾಧ್ಯಮ ವರದಿಗಾರರಾಗಿದ್ದ Tv9 ರಾಜುರವರು ಅನಾರೋಗ್ಯದಿಂದ ಇಂದು ನಿಧನರಾಗಿದ್ದಾರೆ. ಮೃತರ ಪಾರ್ಥಿವ ಶರೀರವ

ಮುಸ್ಲಿಂ ಯುವತಿ ಪ್ರೀತಿಸಿದ್ದಕ್ಕೆ ಅಳಿಯನನ್ನೇ ಕೊಲೆ ಮಾಡಿದ ಯುವತಿಯ ತಂದೆ*
ಮಾಗಡಿ:ಅ/08/20/ಗುರುವಾರ. ಮಾಗಡಿ ತಾಲ್ಲೂಕಿನ ಕನಕೇನಹಳ್ಳಿ ಇಸ್ಲಾಂಪುರದ ಯುವತಿ ಅಂಬ್ರೀನಾಬಾನು ಹಾಗೂ ನೆಲಮಂಗಲದ ಲಕ್ಷ್ಮೀಪತಿ ಎಂಬುವವರು ಕಳೆದ

ಕುಂತೂರುದೊಡ್ಡಿ ಬಳಿ ಮಡಿಕೇರಿ ಮೂಲದ ವ್ಯಕ್ತಿಯ ಶವ ಪತ್ತೆ*
ಚನ್ನಪಟ್ಟಣ:ಅ/08/20/ಗುರುವಾರ. ಪಾನಮತ್ತನಾದ ನಂತರ ಸಾವನ್ನಪ್ಪಿರಬಹುದು ಎಂದು ಊಹಿಸಲಾಗಿರುವ ಗಂಡಸಿನ ಮೃತದೇಹವೊಂದು ಪತ್ತೆಯಾಗಿರುವ ಘಟನೆ ಗ್ರಾಮ

ನಗರಸಭೆಯ ಮಾಜಿ ಅಧ್ಯಕ್ಷೆ ಶ್ವೇತಾ ಗೋಪಾಲಕೃಷ್ಣ ನಿಧನ
ಚನ್ನಪಟ್ಟಣ:ಸೆ/29/20/ಮಂಗಳವಾರ. ನಗರಸಭೆಯ ಮಾಜಿ ಅಧ್ಯಕ್ಷೆ ಮಂಗಳವಾರಪೇಟೆ ಯ ನಿವಾಸಿ ಶ್ರೀಮತಿ ಶ್ವೇತಾ ಗೋಪಾಲಕೃಷ್ಣ (35) ಇಂದು ಸಂಜೆ ಹೃದಯಘಾತ

ವಿದ್ಯುತ್ ಸ್ಪರ್ಶಿಸಿ ಕಾರ್ಮಿಕ ಸಾವು
ಚನ್ನಪಟ್ಟಣ:ಸೆ/22/20/ಮಂಗಳವಾರ. ವಿದ್ಯುತ್ ತಂತಿ ಎಳೆಯುವಾಗ ಆಕಸ್ಮಿಕವಾಗಿ ವಿದ್ಯುತ್ ಪ್ರಹರಿಸಿ ಕಾರ್ಮಿಕನೋರ್ವ ಸಾವನ್ನಪ್ಪಿರುವ ಘಟನೆ

ಸೆಷನ್ ಕೋರ್ಟ್ ನ ಸರ್ಕಾರಿ ಅಭಿಯೋಜಕ ಜಯಪ್ರಕಾಶ್ ಸಾವು
ಕನಕಪುರ:ಸೆ/17/20/ಗುರುವಾರ. ಕನಕಪುರ ದ ಸೆಷನ್ ನ್ಯಾಯಾಲಯದ ಸರ್ಕಾರಿ ಅಭಿಯೋಜಕ (ಪಬ್ಲಿಕ್ ಪ್ರಾಸಿಕ್ಯೂಟರ್) ಜಯಪ್ರಕಾಶ್ ರವರು ಇಂದು ಬೆಂಗಳೂರಿನ

ತಗಚಗೆರೆ ವಿಲೇಜ್ ಅಕೌಂಟೆಂಟ್ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಪ್ರಯತ್ನ. ಆಸ್ಪತ್ರೆಗೆ ದಾಖಲು
ಚನ್ನಪಟ್ಟಣ:ಸೆ/14/20/ಮಂಗಳವಾರ. ತಾಲ್ಲೂಕಿನ ತಗಚಗೆರೆ ಗ್ರಾಮ ಪಂಚಾಯತಿಯ ಲೆಕ್ಕಾಧಿಕಾರಿ ಕವಿತಾ ಎಂಬುವವರು ಮರಣ ಪತ್ರ ಬರೆದಿಟ್ಟು ಆತ್ಮಹತ್ಯೆಗೆ

ಪ್ರತಿಕ್ರಿಯೆಗಳು