Tel: 7676775624 | Mail: info@yellowandred.in

Language: EN KAN

    Follow us :


ಮಾಕಳಿ ಸೆಕ್ರೆಟರಿಗೆ ಕಿರುಕುಳ; ಪೋಲೀಸರ ಹೆಸರಲ್ಲಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ

Posted date: 02 Jun, 2021

Powered by:     Yellow and Red

ಮಾಕಳಿ ಸೆಕ್ರೆಟರಿಗೆ ಕಿರುಕುಳ; ಪೋಲೀಸರ ಹೆಸರಲ್ಲಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ

ತಾಲ್ಲೂಕಿನ ಮಾಕಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ರಮೇಶ್ ರವರು ಎಂ ಕೆ ದೊಡ್ಡಿ ಪೋಲಿಸ್ ಠಾಣೆಗಳು ಸಬ್ ಇನ್ಸಪೆಕ್ಟರ್ ಸದಾನಂದ ರವರ ಹೆಸರಿಗೆ ಡೆತ್ ನೋಟ್ ಬರೆದಿಟ್ಟು, ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಇಂದು ಮುಂಜಾನೆ ನಡೆದಿದೆ.


ರಮೇಶ್ ಬಿನ್ ಲೇಟ್ ರಾಮೇಗೌಡ ಎಂಬ ಮಾಕಳಿ ಗ್ರಾಮದ ವ್ಯಕ್ತಿಯೋರ್ವರು ಕಳೆದ15 ವರ್ಷಗಳಿಂದ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸುತ್ತಿದ್ದು, ಅಧ್ಯಕ್ಷ ಉಮೇಶ್ ಲೇಟ್ ಜವರೇಗೌಡ, ಸದಸ್ಯರಾದ ಪ್ರೇಮಾ ಸಿದ್ದರಾಜು ಮತ್ತು ರಾಜೇಗೌಡ ಬಿನ್ ಅರೆ ತಿಮ್ಮೇಗೌಡ ಎಂಬ ಈ ಮೂರು ಜನರು ನನ್ನನ್ನು ವೈಯುಕ್ತಿಕವಾಗಿ ದ್ವೇಷಿಸುತ್ತಿದ್ದರು. ಇದನ್ನೇ ಮುಂದುವರೆಸಿದ ಅವರು ಸಂಘದ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಗ್ರಾಮದಲ್ಲಿ ಹೇಳಿಕೊಂಡು ತಿರುಗುತ್ತಿದ್ದರು.


ನನಗೆ ಇದು ಇರುಸುಮುರುಸು ಉಂಟು ಮಾಡಿದ್ದಲ್ಲದೆ, ಗ್ರಾಮದಲ್ಲಿ ತಲೆ ಎತ್ತಲಾಗದ ಸ್ಥಿತಿಯನ್ನು ತಂದಿಟ್ಟಿದ್ದು, ಈ ಮೂರು ಮಂದಿಯನ್ನು ಪಿಎಸ್ಐ ಸದಾನಂದ ರವರು ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸಬೇಕೇಂದು ಅವರು ಮರಣ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಎಂ ಕೆ ದೊಡ್ಡಿ ಪೋಲೀಸರು ಪ್ರಕರಣ ದಾಖಲಿಸಿಕೊಂಡು, ಶವವನ್ನು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯ ನಂತರ ವಾರಸುದಾರರಿಗೆ ಒಪ್ಪಿಸಲಾಯಿತು.


ಆಸ್ಪತ್ರೆಯ ಆವರಣದಲ್ಲಿ ತಾಲ್ಲೂಕು ಎಂಪಿಸಿಎಸ್ ನ ತಾಲ್ಲೂಕು ಅಧ್ಯಕ್ಷ ಪುಟ್ಟೇಗೌಡ, ಮಾಜಿ ಅಧ್ಯಕ್ಷ ದೇವರಾಜು, ಸೆಕ್ರೆಟರಿಗಳಾದ ಪುಟ್ಟರಾಜು ಮತ್ತು ಶೇಖರ್ ರವರು ಮಾತನಾಡಿ, ಕೆಲ ಗ್ರಾಮಗಳಲ್ಲಿ ಸಣ್ಣ ರಾಜಕೀಯ ಮಾಡುವ ಕೆಲ ಮಂದಿಯಿಂದ ಸೆಕ್ರೆಟರಿಗಳು ಪ್ರಾಣ ಕಳೆದುಕೊಳ್ಳುವಂತಹ ಸ್ಥಿತಿ ಬಂದೊದಗಿದೆ. ರಮೇಶ್ ರವರ ಸಾವಿಗೆ ಕಾರಣರಾದವರಿಂದ ಕನಿಷ್ಠ 50 ಲಕ್ಷ ಪರಿಹಾರ ಕೊಡಿಸಬೇಕು. ಸಂಘ ಮತ್ತು ಬಮೂಲ್ ನಿಂದಲೂ ಅವರಿಗೆ ಪರಿಹಾರ ನೀಡಲು ಮನವಿ ಮಾಡುತ್ತೇವೆ. ಇದರ ಜೊತೆಗೆ ಶವಸಂಸ್ಕಾರ ಮಾಡುವ ಮುನ್ನವೇ, ಬಮೂಲ್ ನಿರ್ದೇಶಕರು, ಆಡಳಿತ ಮಂಡಳಿ ಮತ್ತು ತಾಲ್ಲೂಕು ಆಡಳಿತ ಒಗ್ಗೂಡಿ ರಮೇಶ್ ರವರ ಪತ್ನಿಗೆ ಸೆಕ್ರೆಟರಿ ಹುದ್ದೆ ನೀಡಬೇಕು ಎಂದು ಆಗ್ರಹಿಸಿದರು.


ಗೋ ರಾ ಶ್ರೀನಿವಾಸ...

ಮೊ:9845856139.

??????????????

  • ????? ???????? ??????????? ???? ??????????.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in obituary »

ನಗರದ ಉದ್ಯಮಿ ಮೆಡಿಕಲ್ ಕಿರಣ ಆತ್ಮಹತ್ಯೆ. ಪತ್ನಿ ಆತ್ಮಹತ್ಯೆ ಮಾಡಿಕೊಂಡ 105 ದಿನಕ್ಕೆ ಪತಿಯೂ ಆತ್ಮಹತ್ಯೆ. ಅನಾಥವಾದ ಮಗು. ಕಾರಣವೇನು ?
ನಗರದ ಉದ್ಯಮಿ ಮೆಡಿಕಲ್ ಕಿರಣ ಆತ್ಮಹತ್ಯೆ. ಪತ್ನಿ ಆತ್ಮಹತ್ಯೆ ಮಾಡಿಕೊಂಡ 105 ದಿನಕ್ಕೆ ಪತಿಯೂ ಆತ್ಮಹತ್ಯೆ. ಅನಾಥವಾದ ಮಗು. ಕಾರಣವೇನು ?

ಮೆಡಿಕಲ್ ಕಿರಣ ಎಂದೇ ಪ್ರಸಿದ್ಧಿಯಾದ ಗುತ್ತಿಗೆದಾರ, ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ಬಿಎಂ ರಸ್ತೆಯಲ್ಲಿನ ಮೆಡಿಕಲ್ ಸ್ಟೋರ್ ನ ಮಾಲೀಕ ತಾಲ್ಲೂಕಿನ ಮೆಣಸಿಗನಹಳ್ಖಿ ಗ್ರಾಮದ ಕಿರಣ್ ಬುಧವಾರ ರಾತ್ರಿ ನೇಣು ಬ

ಕಾಡಂಕನಹಳ್ಳಿ ಬಳಿ ಬೈಕ್ ಗಳ ನಡುವೆ ಅಪಘಾತ. ಸ್ಥಳದಲ್ಲೇ ಮೃತ. ಅಕ್ಕೂರು ಪೋಲಿಸ್ ಠಾಣೆಯಲ್ಲಿ ದೂರು ದಾಖಲು.
ಕಾಡಂಕನಹಳ್ಳಿ ಬಳಿ ಬೈಕ್ ಗಳ ನಡುವೆ ಅಪಘಾತ. ಸ್ಥಳದಲ್ಲೇ ಮೃತ. ಅಕ್ಕೂರು ಪೋಲಿಸ್ ಠಾಣೆಯಲ್ಲಿ ದೂರು ದಾಖಲು.

ಚನ್ನಪಟ್ಟಣ ತಾಲ್ಲೂಕಿನ ಅಕ್ಕೂರು ಪೋಲಿಸ್ ಠಾಣಾ ವ್ಯಾಪ್ತಿಯ ಕಾಡಂಕನಹಳ್ಳಿ ಗ್ರಾಮದ ಬಳಿ ಎರಡು ಬೈಕ್ ಗಳ ನಡುವೆ ಮುಖಾಮುಖಿ ಢಿಕ್ಕಿ ಆಗಿದ್ದು, ಐವತ್ತು ವರ್ಷದ ಮಹಿಳೆಯೊಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ

ಮಾಕಳಿ ಸೆಕ್ರೆಟರಿಗೆ ಕಿರುಕುಳ; ಪೋಲೀಸರ ಹೆಸರಲ್ಲಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ
ಮಾಕಳಿ ಸೆಕ್ರೆಟರಿಗೆ ಕಿರುಕುಳ; ಪೋಲೀಸರ ಹೆಸರಲ್ಲಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ

ತಾಲ್ಲೂಕಿನ ಮಾಕಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ರಮೇಶ್ ರವರು ಎಂ ಕೆ ದೊಡ್ಡಿ ಪೋಲಿಸ್ ಠಾಣೆಗಳು ಸಬ್ ಇನ್ಸಪೆಕ್ಟರ್ ಸದಾನಂದ ರವರ ಹೆಸರಿಗೆ ಡೆತ್ ನೋಟ್ ಬರೆದಿಟ್ಟು, ನೇಣುಬಿಗಿದು

ಪ್ರೀತಿಸಿ ಓಡಿ ಹೋದ ಮಗಳು. ಮನನೊಂದು ಆತ್ಮಹತ್ಯೆ ಮಾಡಿಕೊಂಡ ಮರ್ಯಾದಸ್ತ ತಂದೆತಾಯಿ
ಪ್ರೀತಿಸಿ ಓಡಿ ಹೋದ ಮಗಳು. ಮನನೊಂದು ಆತ್ಮಹತ್ಯೆ ಮಾಡಿಕೊಂಡ ಮರ್ಯಾದಸ್ತ ತಂದೆತಾಯಿ

ಆತ ತೆಂಕನಹಳ್ಳಿ ಗ್ರಾಮದ ಮುಖ್ಯಸ್ಥ, ಹೆಚ್ ಬ್ಯಾಡರಹಳ್ಳಿ ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷ. ಗ್ರಾಮದಲ್ಲಿ ಒಳ್ಳೆಯ ಹೆಸರು ಮಾಡಿಕೊಂಡಿದ್ದ. ರಾಜಕಾರಣಿಯಾಗಿಯೂ ಗುರುತಿಸಿಕೊಂಡಿದ್ದ ಆ ವ್ಯಕ್ತಿಗ್ರಾಮದಲ್ಲಿ

ಬಯಲುಸೀಮೆ ಸಂಜೆ ದಿನಪತ್ರಿಕೆಯ ಕನಕಪುರ ವರದಿಗಾರ ಶಿವಲಿಂಗಯ್ಯ ನಿಧನ. ಸಂಪಾದಕ ಸು ತ ರಾ ತೀವ್ರ ಸಂತಾಪ
ಬಯಲುಸೀಮೆ ಸಂಜೆ ದಿನಪತ್ರಿಕೆಯ ಕನಕಪುರ ವರದಿಗಾರ ಶಿವಲಿಂಗಯ್ಯ ನಿಧನ. ಸಂಪಾದಕ ಸು ತ ರಾ ತೀವ್ರ ಸಂತಾಪ

ಕನಕಪುರ:ಮೇ.19. ಬಯಲುಸೀಮೆ ಸಂಜೆ ದಿನಪತ್ರಿಕೆಯ ಕನಕಪುರ ವರದಿಗಾರ ಎಲ್ ಶಿವಲಿಂಗಯ್ಯ(62) ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಇವರು 

ನಿಘಂಟು ತಜ್ಞ, ಶತಾಯುಷಿ ಪ್ರೊ ಜಿ ವೆಂಕಟಸುಬ್ಬಯ್ಯ ನಿಧನ
ನಿಘಂಟು ತಜ್ಞ, ಶತಾಯುಷಿ ಪ್ರೊ ಜಿ ವೆಂಕಟಸುಬ್ಬಯ್ಯ ನಿಧನ

1913ರ ಆಗಸ್ಟ್ 23ರಂದು ಜನಿಸಿದ ಪೂಜ್ಯ ಪ್ರೊ. ಜಿ. ವೆಂಕಟಸುಬ್ಬಯ್ಯನವರು ತಮ್ಮ  108ನೇ ವರ್ಷದಲ್ಲಿ  ವಯೋಸಹಜ ಅನಾರೋಗ್ಯದಿಂದ ನಿನ್ನೆ ರಾತ್ರಿ ನಮ್ಮನ್ನಗಲಿದ್ದಾರೆ, ಮೃತರ ಆತ್ಮಕ್ಕೆ ಶಾಂತ

ಮಹಿಳೆ ಆತ್ಮಹತ್ಯೆ, ಕಾರಣ ನಿಗೂಢ. ಪೋಲೀಸರ ಸರ್ಪಗಾವಲು
ಮಹಿಳೆ ಆತ್ಮಹತ್ಯೆ, ಕಾರಣ ನಿಗೂಢ. ಪೋಲೀಸರ ಸರ್ಪಗಾವಲು

ನಗರದ ಹೈವೇ ರಸ್ತೆಯಲ್ಲಿರುವ ಸಾಗರ್ ಮೆಡಿಕಲ್ ಮಾಲೀಕ ಮೆಣಸಿಗನಹಳ್ಳಿ ಗ್ರಾಮದ ಕಿರಣ ಕುಮಾರ್ ರವರ ಪತ್ನಿ ಸುಷ್ಮಾ (28) ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ನಗರ ಪ

ಖಾಸಗಿ ಜಮೀನಿನ ಬಾವಿಯೊಂದರಲ್ಲಿ ಸುಮಾರು 40/45 ವರ್ಷದ ಅಪರಿಚಿತ ಗಂಡಸಿನ ಶವ ದೊರೆತಿದೆ.
ಖಾಸಗಿ ಜಮೀನಿನ ಬಾವಿಯೊಂದರಲ್ಲಿ ಸುಮಾರು 40/45 ವರ್ಷದ ಅಪರಿಚಿತ ಗಂಡಸಿನ ಶವ ದೊರೆತಿದೆ.

ತಾಲ್ಲೂಕಿನ ಕೆಂಗಲ್ ಬಳಿಯ, ಹನುಮಂತಪುರ ಗ್ರಾಮಕ್ಕೆ ಹೋಗುವ ರಸ್ತೆಯ ಬಳಿ ಖಾಸಗಿ ಜಮೀನಿನ ಬಾವಿಯೊಂದರಲ್ಲಿ ಸುಮಾರು 40/45 ವರ್ಷದ ಅಪರಿಚಿತ ಗಂಡಸಿನ ಶವ ದೊರೆತಿದೆ.

ಮೂರ್ನಾಲ್ಕು ದ

ಅಂಗಾಂಗ ದಾನ ಮಾಡುವ ಮೂಲಕ, ಸಾವಿನಲ್ಲೂ ಸಾರ್ಥಕತೆ ಮೆರೆದ ಜೆ ಬ್ಯಾಡರಹಳ್ಳಿ ಗ್ರಾಮದ ಪ್ರಸನ್ನ.
ಅಂಗಾಂಗ ದಾನ ಮಾಡುವ ಮೂಲಕ, ಸಾವಿನಲ್ಲೂ ಸಾರ್ಥಕತೆ ಮೆರೆದ ಜೆ ಬ್ಯಾಡರಹಳ್ಳಿ ಗ್ರಾಮದ ಪ್ರಸನ್ನ.

ಚನ್ನಪಟ್ಟಣ:ಜ/13/21/ಬುಧವಾರ. ತಾಲ್ಲೂಕಿನ ಜೆ ಬ್ಯಾಡರಹಳ್ಳಿ ಗ್ರಾಮದ ಇಪ್ಪತ್ತೇಳು ವರ್ಷದ ಪ್ರಸನ್ನ ರವರು ತಮ್ಮ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರ

ಎ ಆರ್ ಎಂ ರೇಷ್ಮೆ ನೂಲು ಬಿಚ್ಚಣಿಕೆ ಫಿಲೇಚರಿಯಲ್ಲಿ ಮಂಡ್ಯ ಮೂಲದ ಕಾರ್ಮಿಕ ನೇಣು ಬಿಗಿದು ಸಾವು, ದೂರು ದಾಖಲು
ಎ ಆರ್ ಎಂ ರೇಷ್ಮೆ ನೂಲು ಬಿಚ್ಚಣಿಕೆ ಫಿಲೇಚರಿಯಲ್ಲಿ ಮಂಡ್ಯ ಮೂಲದ ಕಾರ್ಮಿಕ ನೇಣು ಬಿಗಿದು ಸಾವು, ದೂರು ದಾಖಲು

ಚನ್ನಪಟ್ಟಣ:ಡಿ/07/20/ಸೋಮವಾರ. ತಾಲ್ಲೂಕಿನ ಸುಣ್ಣಘಟ್ಟ ಬಳಿಯ ನೀಲಸಂದ್ರ ರಸ್ತೆಯಲ್ಲಿರುವ ಎ ಎಂ ಆರ್ ರೇಷ್ಮೆ ನೂಲು ಬಿಚ್ಚಣಿಕೆ ಕಾರ್ಖಾನೆಯಲ್ಲಿ

Top Stories »  


Top ↑