Tel: 7676775624 | Mail: info@yellowandred.in

Language: EN KAN

    Follow us :


ರಾಜ್ಯ ರೈತ ಸಂಘದ ಇಬ್ಬರ ದುರ್ಮರಣ. ಜಿಲ್ಲೆಯಲ್ಲಿ ಆತಂಕದ ಛಾಯೆ

Posted date: 22 Jul, 2021

Powered by:     Yellow and Red

ರಾಜ್ಯ ರೈತ ಸಂಘದ ಇಬ್ಬರ ದುರ್ಮರಣ. ಜಿಲ್ಲೆಯಲ್ಲಿ ಆತಂಕದ ಛಾಯೆ

ರಾಮನಗರ.ಜು.22: ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ  ಕಾರ್ಯಾಧ್ಯಕ್ಷ ಹೆಚ್ ಮೊಗೇನಹಳ್ಳಿ ಗ್ರಾಮದ ಎಂ ರಾಮು ರವರು ಮತ್ತು ಮೂಲತಃ ಕನಕಪುರ ದ ಹಾಲಿ ಹಾಸನ ಜಿಲ್ಲೆಯ ಆಲೂರು ಗ್ರಾಮದ ನಿವಾಸಿ ಜಿ ಟಿ ರಾಮಸ್ವಾಮಿ ರವರು ನವಲಗುಂದದಲ್ಲಿ 21 ರ ಬುಧವಾರ ನಡೆದ ರೈತ ಹುತಾತ್ಮರ ದಿನಾಚರಣೆ ಮುಗಿಸಿ, ಜಿ.ಟಿ ರಾಮಸ್ವಾಮಿ ಯವರ ಜೊತೆ ಚಿಕ್ಕಮಗಳೂರು ಮಾರ್ಗವಾಗಿ ಹಾಸನ ಜಿಲ್ಲೆ ಆಲೂರು ಗ್ರಾಮದಲ್ಲಿರುವ ರಾಮಸ್ವಾಮಿಯವರ ಜಮೀನಿಗೆ ಬರುತ್ತಿದ್ದ ಸಂದರ್ಭದಲ್ಲಿ ಇಂದು ಮುಂಜಾನೆ ಚಿಕ್ಕಮಗಳೂರು ಟ್ರಾಫಿಕ್ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತವಾಗಿದ್ದು,  ರಾಮಸ್ವಾಮಿಯವರು ಸ್ಥಳದಲ್ಲೇ ಮೃತಪಟ್ಟರೆ, ಎಂ.ರಾಮು ಅವರು ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ಮೃತರಾಗಿದ್ದಾರೆ. ಮೊತ್ತೊಬ್ಬರು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.


ಶ್ರೀಯುತ ರಾಮು ರವರು ಸೌಮ್ಯ ಸ್ವಭಾದ ವ್ಯಕ್ತಿಯಾಗಿದ್ದರು. 80 ರ ದಶಕದಲ್ಲಿ ರೈತ ಸಂಘಟನೆ ವೇಗವಾಗಿ ಕ್ರಮಿಸುತ್ತಿದ್ದ ಸಂದರ್ಭದಲ್ಲಿ ಶ್ರೀಯುತರು ಸ್ವ ಆಸಕ್ತಿಯಿಂದ ತಮ್ಮ ಭಾಗದಲ್ಲಿಯೂ ರೈತ ಸಂಘಟನೆಯನ್ನು ಚುರುಕು ಗೊಳಿಸಬೇಕು ಎಂದು ಮುಂದೆ ಬಂದವರು.

ಅದಕ್ಕೂ ಮೊದಲು ಅವರು ತೆಂಗು ಬೆಳೆಗಾರರ ಸಂಘದ ಪದಾಧಿಕಾರಿಯಾಗಿ, ತೆಂಗು ಬೆಳೆಗಾರರ ಸಮಸ್ಯೆಯನ್ನು ಮುಂದು ಮಾಡಿ, ಹೋರಾಟ ಮಾಡುತ್ತಿದ್ದರು. ಈ ಹೋರಾಟಕ್ಕೆ ಮತ್ತಷ್ಟು ಶಕ್ತಿ ಒದಗಬೇಕು ಎಂದರೆ, ತಾವು ಆಗ ಅಸ್ಥಿತ್ವಕ್ಕೆ ಬಂದಿದ್ದ  ಪ್ರೊ.ನಂಜುಂಡ ಸ್ವಾಮಿ, ರುದ್ರಪ್ಪ , ಸುಂದರೇಶ್, ರವಿವರ್ಮಕುಮಾರ್ ಹಾಗೂ ರೇವಣ ಸಿದ್ದಯ್ಯ ಅವರ ಸಂಘಟನೆಯ ಜೊತೆ ಸೇರಿಕೊಂಡು ತಮ್ಮ ತಾಲ್ಲೂಕಿನಲ್ಲಿ ಸಮಸ್ಯೆಗೆ ಒಳಗಾಗಿರುವ ರೈತರ ಬೆನ್ನಿಗೆ ನಿಲ್ಲಬೇಕು ಎಂದು ಸಂಘಟನೆಯ ಜೊತೆ ತೊಡಗಿಸಿಕೊಂಡವರು.


ಇವರು ತಾಲ್ಲೂಕು ರೈತ ಸಂಘದ ಪದಾಧಿಕಾರಿ ಯಾಗಿ, ಜಿಲ್ಲಾ ರೈತ ಸಂಘದ ಪದಾಧಿಕಾರಿಯಾಗಿ ಅದೇ ರೀತಿಯಲ್ಲಿ ರಾಜ್ಯ ರೈತ ಸಂಘದ ಪದಾಧಿಕಾರಿಯಾಗಿ ವಿವಿಧ ಹಂತಗಳಲ್ಲಿ ರೈತರ ಸಮಸ್ಯೆಗಳನ್ನು ಮನಸ್ಸಿಗೆ ತುಂಬಿಕೊಂಡು ಹೋರಾಟದ ನೆಲೆ ಕಂಡುಕೊಂಡವರು.

ನಾಯಕರು ಹೇಳಿದ್ದನ್ನ ಸೂಕ್ಷ್ಮವಾಗಿ ಗಮನಿಸಿ ಕೊಂಡು, ಅದನ್ನು ಕೆಳ ಹಂತದ ರೈತ ಸಮುದಾಯಕ್ಕೆ ಪ್ರಾಮಾಣಿಕವಾಗಿ ಮುಟ್ಟಿಸುವ ಒಂದು ಗುಣವನ್ನು ಹೊಂದಿದ್ದರು. ಹಲವು ಸಂದರ್ಭಗಳಲ್ಲಿ ಅರ್ಥವಾಗದ ವಿಷಯಗಳನ್ನು ನಾಯಕರ ಬೆನ್ನು ಬಿದ್ದು ಕೇಳಿ ತಿಳಿದು ಕೊಳ್ಳುವ ಚಾಕಚಕ್ಯತೆಯು ಅವರಲ್ಲಿ ಇತ್ತು. ಹಾಗಾಗಿ ಅವರನ್ನು ರಾಜ್ಯಮಟ್ಟದ ನಾಯಕರು ಗುರುತಿಸುವ ಮಟ್ಟಿಗೆ ಬೆಳೆದುಕೊಂಡಿದ್ದರು.


ಕನಕಪುರ ತಾಲ್ಲೂಕಿನಲ್ಲಿ ನಡೆದ ಗ್ರಾನೈಟ್ ತಡೆ ಹೋರಾಟ, ಚನ್ನಪಟ್ಟಣ ತಾಲ್ಲೂಕಿನಲ್ಲಿ ನಡೆದ ಗ್ರಾನೈಟ್ ತಡೆ ಹೋರಾಟ, ಮದ್ಯಪಾನ ನಿಷೇಧ ಚಳವಳಿ, ನೀರಾ ಚಳವಳಿ ಸೇರಿದಂತೆ ಅನೇಕ ಚಳವಳಿಗಳಲ್ಲಿ ಪಾಲ್ಗೊಂಡು ಮೈ ತುಂಬಾ ಕೇಸುಗಳನ್ನು ಹೊದ್ದಿಕೊಂಡಿದ್ದೂ ಉಂಟು.

ಈ ರೀತಿಯಲ್ಲಿ ಅರ್ಪಿಸಿಕೊಂಡು, ಮನೆ ಮಠವನ್ನು ಬಿಟ್ಟು ಸಂಘಟನೆಯೊಂದಕ್ಕೆ ಮೈಯೊಡ್ಡಿದ ರಾಮು ಆಗರ್ಭ ಶ್ರೀಮಂತರೇನು ಅಲ್ಲ, ಬಂದಿದ್ದನ್ನೇ ಉಪಯೋಗಿಸಿ ಕೊಂಡು ಸಂಘಟನೆಗೆ ಚಾಲನೆ ನೀಡಿದವರು. ಸರಳ ಮದುವೆ ಹಾಗೂ ಇನ್ನಿತರೆ ಜನಾಂದೋಲನಗಳಲ್ಲಿ ಪಾಲ್ಗೊಳ್ಳುತ್ತಿದ್ದ ಓರ್ವ ನಿಷ್ಠ ಹಾಗೂ ನಿಷ್ಠುರ ವ್ಯಕ್ತಿಯಾಗಿದ್ದರು.


ಜಿ ಟಿ ರಾಮಸ್ವಾಮಿಯವರು ಮೂಲತಃ ಕನಕಪುರ ದವರಾಗಿದ್ದು ಗುರಿಕಾರ್ ಕುಟುಂಬದ ಕುಡಿ. ಇವರು ಭಾರತ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತ ನಂತರ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ, ಹಿರಿಯ ಅಧಿಕಾರಿಯಾಗಿದ್ದರು. ಅಲ್ಲಿ ನಿವೃತ್ತಿ ಹೊಂದಿದ ನಂತರ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡ ಜಿ ಟಿ ರಾಮಸ್ವಾಮಿಯವರು ಪಿ ಜಿ‌ ಆರ್ ಸಿಂಧ್ಯಾ ರವರ ವಿರುದ್ಧ ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಕಾಂಗ್ರೆಸ್ ಪಕ್ಷವು ಅವರಿಗೆ ಟಿಕೆಟ್ ನಿರಾಕರಿಸಿತ್ತು.


ಜಿಲ್ಲಾ ಪಂಚಾಯತಿ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲುಂಡ‌ ಅವರು ರೈತ ಸಂಘದತ್ತ ಮುಖಮಾಡಿದರು. ಹಂತಹಂತವಾಗಿ ಸಂಘದಲ್ಲಿ ಗುರುತಿಸಿಕೊಂಡ ಅವರು ರಾಜ್ಯ ಉಪಾಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸದ್ಯ ಹಾಸನ ಜಿಲ್ಲೆಯ ಆಲೂರು ಗ್ರಾಮದಲ್ಲಿ ತಮ್ಮ ಮಾವನವರ ಮನೆಯಲ್ಲಿ ವಾಸವಾಗಿದ್ದರು. 22-07 ರ ಸಂಜೆಯ ವೇಳೆಗೆ ಆಲೂರು ಗ್ರಾಮದ ಅವರ ತೋಟದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ರಾಜ್ಯ ರೈತ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.


ಎಂ ರಾಮು ರವರ ಸಾವಿನಿಂದ ರೈತ ಸಂಘ ಓರ್ವ ಶಕ್ತ ಸಂಘಟ ಕನನ್ನು ಕಳೆದುಕೊಂಡಂತೆ ಆಗಿದೆ. ಎಲ್ಲರನ್ನೂ ಕೂಡಿಕೊಂಡು ಸಮಾಜಮುಖಿಯಾಗಿ ಆಲೋಚಿಸುವ ಒಂದು ಗುಣ, ಅವರ ಬಗ್ಗೆ ವಿಶೇಷ ಭಾವನೆಯನ್ನು ಮೂಡಿಸುತ್ತಿತ್ತು. ಇವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಬಯಲುಸೀಮೆ, ರೈತ ಸಂಘದ ಹಲವು ಪ್ರಮುಖರು, ಕಾರ್ಯಕರ್ತರು, ಸ್ನೇಹಿತರು ಆಶಿಸಿದ್ದಾರೆ. ಕ್ಷೇತ್ರದ ಶಾಸಕ ಹೆಚ್ ಡಿ ಕುಮಾರಸ್ವಾಮಿ ಯವರು ಪತ್ರದ ಮೂಲಕ ಸಂತಾಪ ಸೂಚಿಸಿದ್ದಾರೆ. ರಾಮು ರವರ ಅಂತ್ಯ ಕ್ರಿಯೆಯು 23-07 ರ ಶುಕ್ರವಾರ ಮುಂಜಾನೆ 10 ಗಂಟೆಗೆ ಸ್ವಗ್ರಾಮ ಹರೂರು ಮೊಗೇನಹಳ್ಳಿ ಗ್ರಾಮದಲ್ಲಿ ಜರುಗಲಿದೆ.


ಗೋ ರಾ ಶ್ರೀನಿವಾಸ...

ಮೊ:9845856139.

??????????????

  • ????? ???????? ??????????? ???? ??????????.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in obituary »

ಪುನೀತ್ ಅಭಿಮಾನಿ ನೇಣುಬಿಗಿದು ಸಾವು
ಪುನೀತ್ ಅಭಿಮಾನಿ ನೇಣುಬಿಗಿದು ಸಾವು

ಚನ್ನಪಟ್ಟಣ ನಗರದ ಎಲೇಕೇರಿ ಬಡಾವಣೆಯ ದಿವಂಗತ ಕೃಷ್ಣಪ್ಪ ಎಂಬುವವರ ಪುತ್ರ ವೆಂಕಟೇಶ್ ಎಂಬಾತ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಅಪ್ಪಟ ಅಭಿಮಾನಿಯಾಗಿದ್ದು ಅವರ ಸಾವಿನಿಂದ ನೊಂದು ಆತ್ಮಹತ್ಯೆ ಮಾಡಿ

ಪತ್ನಿಯನ್ನು ಕೊಂದು ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಪತಿ
ಪತ್ನಿಯನ್ನು ಕೊಂದು ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಪತಿ

ರಾಮನಗರ:ಕನಕಪುರ; ಅ/16/21. ಅಂಗಡಿ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ವ್ಯಾಪಾರಿಯೊಬ್ಬ ತನ್ನ ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಿ ತಾ

ಶ್ರೀ ಕ್ಷೇತ್ರ ಕಬ್ಬಾಳು ಗ್ರಾಮದ ಬೆಟ್ಟದಲ್ಲಿ ತನ್ನ ಪ್ರೀಯಕರನ ಜೊತೆ ವಿವಾಹಿತ ಯುವತಿ ಆತ್ಮಹತ್ಯೆ
ಶ್ರೀ ಕ್ಷೇತ್ರ ಕಬ್ಬಾಳು ಗ್ರಾಮದ ಬೆಟ್ಟದಲ್ಲಿ ತನ್ನ ಪ್ರೀಯಕರನ ಜೊತೆ ವಿವಾಹಿತ ಯುವತಿ ಆತ್ಮಹತ್ಯೆ

ರಾಮನಗರ: ಸಾತನೂರು ಪೋಲೀಸ್ ಠಾಣೆ ವ್ಯಾಪ್ತಿಯ ಶ್ರೀ ಕ್ಷೇತ್ರ ಕಬ್ಬಾಳು ಗ್ರಾಮದ ಬೆಟ್ಟದಲ್ಲಿ ತನ್ನ ಪ್ರೀಯಕರನ ಜೊತೆ ವಿವಾಹಿತ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕನಕಪುರ ತಾಲೂಕು ಕಬ್ಬಾಳು ಗ್ರಾಮದ ಕಬ್ಬಾಳು ಬೆಟ್ಟದಿಂದ ಹಾರ

ರಾಜ್ಯ ರೈತ ಸಂಘದ ಇಬ್ಬರ ದುರ್ಮರಣ. ಜಿಲ್ಲೆಯಲ್ಲಿ ಆತಂಕದ ಛಾಯೆ
ರಾಜ್ಯ ರೈತ ಸಂಘದ ಇಬ್ಬರ ದುರ್ಮರಣ. ಜಿಲ್ಲೆಯಲ್ಲಿ ಆತಂಕದ ಛಾಯೆ

ರಾಮನಗರ.ಜು.22: ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ  ಕಾರ್ಯಾಧ್ಯಕ್ಷ ಹೆಚ್ ಮೊಗೇನಹಳ್ಳಿ ಗ್ರಾಮದ ಎಂ ರಾಮು ರವರು ಮತ್ತು ಮೂಲತಃ ಕನಕಪುರ ದ ಹಾಲಿ ಹಾಸನ ಜಿಲ್ಲೆಯ ಆಲೂರು ಗ್ರಾಮದ ನಿವಾಸಿ ಜಿ ಟಿ ರಾಮಸ್ವ

ಜಿ. ಮಾದೇಗೌಡ ಕಾವೇರಿ ತಾಯಿಯ ಪುತ್ರ ಇನ್ನಿಲ್ಲ
ಜಿ. ಮಾದೇಗೌಡ ಕಾವೇರಿ ತಾಯಿಯ ಪುತ್ರ ಇನ್ನಿಲ್ಲ

ಜಿ. ಮಾದೇಗೌಡ, ಹೋರಾಟದ ಚಿಲುಮೆ, ಇಂದಿನ ಯುವಕರಿಗೆ ಸ್ಪೂರ್ತಿಯ ಹೋರಾಟದ ಚಿಲುಮೆ.‌ ಇಳಿವಯಸ್ಸಿನಲ್ಲೂ ಹೋರಾಟದ ಕಾವು ಬಿಡದ ಛಲಂದಕ ಮಲ್ಲ. ಇಂತಹ

ಜಿ. ಮಾದೇಗೌಡರು ಸಲ್ಲಿಸಿರುವ ಸಾಮಾಜಿಕ ಸೇವೆ ಅಪಾರವಾದುದು. ರೈತ

ಕುಟುಂಬದಲ್ಲಿ ಹ

ಮಂಗಳವಾರಪೇಟೆಯ ಯುವತಿ ರೈಲಿಗೆ ಸಿಲುಕಿ ಆತ್ಮಹತ್ಯೆ
ಮಂಗಳವಾರಪೇಟೆಯ ಯುವತಿ ರೈಲಿಗೆ ಸಿಲುಕಿ ಆತ್ಮಹತ್ಯೆ

ಮಂಗಳವಾರ ರಾತ್ರಿ ಚನ್ನಪಟ್ಟಣ ರೈಲ್ವೆ ಸ್ಟೇಷನ್ ನಲ್ಲಿ ಸುಮಾರು 20 ವರ್ಷದ, ಮಂಗಳವಾರಪೇಟೆ ಗ್ರಾಮದ ಶೃತಿ ಎಂಬಾಕೆ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಶವವನ್ನು ರೈಲ್ವೆ ಪೋಲೀಸರು ಮಹಜರು

ಯಥೇಚ್ಛ ಮದ್ಯಪಾನ ಮಾಡಿಸಿ ಕೊಲೆ, ಬಿ ವಿ ಪಾಳ್ಯ ಗ್ರಾಮದಲ್ಲಿ ಘಟನೆ. ಪೋಲಿಸರು ದೌಡು
ಯಥೇಚ್ಛ ಮದ್ಯಪಾನ ಮಾಡಿಸಿ ಕೊಲೆ, ಬಿ ವಿ ಪಾಳ್ಯ ಗ್ರಾಮದಲ್ಲಿ ಘಟನೆ. ಪೋಲಿಸರು ದೌಡು

ಯುವಕೋನರ್ವನಿಗೆ ಯಥೇಚ್ಛವಾಗಿ ಮದ್ಯಪಾನ ಮಾಡಿಸಿ, ಕಬ್ಬಿಣದ ರಾಡ್ ನಿಂದ ತಲೆಗೆ ಹೊಡೆದು, ಕೊಲೆ ಮಾಡಿರುವ ಘಟನೆ ತಾಲ್ಲೂಕಿನ ಅಕ್ಕೂರು ಪೋಲಿಸ್ ಠಾಣಾ ವ್ಯಾಪ್ತಿಯ, ಸಾತನೂರು ರಸ್ತೆಯ ಬಿ ವಿ ಪಾಳ್ಯ ಗ್ರಾಮ

ಕನಕಪುರ ಪ್ರಾಧಿಕಾರದ ಅಧ್ಯಕ್ಷರ ಮಗ ಸುಖೇಶ್ ಚನ್ನಪಟ್ಟಣದಲ್ಲಿ ಆತ್ಮಹತ್ಯೆ
ಕನಕಪುರ ಪ್ರಾಧಿಕಾರದ ಅಧ್ಯಕ್ಷರ ಮಗ ಸುಖೇಶ್ ಚನ್ನಪಟ್ಟಣದಲ್ಲಿ ಆತ್ಮಹತ್ಯೆ

ಕನಕಪುರ ಯೋಜನಾ ಪ್ರಾಧಿಕಾರದ ಹಾಲಿ ಅಧ್ಯಕ್ಷ, ಬಿಜೆಪಿ ಪಕ್ಷದ ಮುಖಂಡ ಹೊನ್ನಿಗನಹಳ್ಳಿ ಗ್ರಾಮದ ಜಗನ್ನಾಥ ರವರ ಪುತ್ರ ಸುಖೇಶ್ (19) ಚನ್ನಪಟ್ಟಣ ನಗರದ ರಾಮಮ್ಮನ ಕೆರೆ ಪಕ್ಕದಲ್ಲಿ ಹಾದು ಹೋಗಿರುವ ರೈಲ್ವೇ

ಕುದಿಯುವ ಸಾಂಬಾರ್ ಮೈಮೇಲೆ ಬಿದ್ದು, ಸಾವನ್ನಪ್ಪಿದ ಹಸುಗೂಸು ಧನ್ವಿಕ್
ಕುದಿಯುವ ಸಾಂಬಾರ್ ಮೈಮೇಲೆ ಬಿದ್ದು, ಸಾವನ್ನಪ್ಪಿದ ಹಸುಗೂಸು ಧನ್ವಿಕ್

ತಾಲ್ಲೂಕಿನ ದೇವರಹೊಸಹಳ್ಳಿ ಗ್ರಾಮದ ಚೌಡಯ್ಯನವರ ಮೊಮ್ಮಗ, ಚೌಡೇಶ್ ಮತ್ತು ರಾಧಾ ಎಂಬುವವರ ಒಂದೂವರೆ ವರ್ಷದ ಧನ್ವಿಕ್ ಎಂಬ ಗಂಡು ಪಾಪುವಿನ ಮೇಲೆ ಕುದಿಯುವ ಸಾಂಬಾರು ಮೈಮೇಲೆ ಬಿದ್ದು ಸಾವನ್ನಪ್ಪಿರುವ ಹೃ

ಟ್ರಾಕ್ಟರ್ ಪಲ್ಟಿ ಕರಲಹಳ್ಳಿ ಗ್ರಾಮದ ಇಬ್ಬರು ಯುವಕರು ಸ್ಥಳದಲ್ಲೇ ಮೃತ
ಟ್ರಾಕ್ಟರ್ ಪಲ್ಟಿ ಕರಲಹಳ್ಳಿ ಗ್ರಾಮದ ಇಬ್ಬರು ಯುವಕರು ಸ್ಥಳದಲ್ಲೇ ಮೃತ

ರಾಮನಗರ ಜಿಲ್ಲೆ‌ ಚನ್ನಪಟ್ಟಣ ತಾಲ್ಲೂಕು ಅಂಚೀಪುರ ಗ್ರಾಮದ ಬಳಿ ಟ್ರ್ಯಾಕ್ಟರ್ ಗೆ ಮಣ್ಣು ತುಂಬುವ ವೇಳೆ ಟ್ರ್ಯಾಕ್ಟರ್ ನ ಟ್ರೇಲರ್ ಮಗುಚಿಬಿದ್ದಿದ್ದು ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಶನಿ

Top Stories »  


Top ↑