Tel: 7676775624 | Mail: info@yellowandred.in

Language: EN KAN

    Follow us :


ದಲಿತರ ಅಭಿವೃದ್ಧಿಗೆ ಮಾಜಿ ಸಿಎಂ ಕುಮಾರಸ್ವಾಮಿ ಕೊಡುಗೆ ಶೂನ್ಯ-ಮತ್ತೀಕೆರೆ ಹನುಮಂತಯ್ಯ ಆರೋಪ

Posted date: 02 May, 2023

Powered by:     Yellow and Red

ದಲಿತರ ಅಭಿವೃದ್ಧಿಗೆ ಮಾಜಿ ಸಿಎಂ ಕುಮಾರಸ್ವಾಮಿ ಕೊಡುಗೆ ಶೂನ್ಯ-ಮತ್ತೀಕೆರೆ ಹನುಮಂತಯ್ಯ ಆರೋಪ

ಚನ್ನಪಟ್ಟಣ: ಕಳೆದ ಚುನಾವಣೆಯಲ್ಲಿ ಹೆಚ್.ಡಿ ಕುಮಾರಸ್ವಾಮಿಯವರನ್ನು ಅತಿಯಾದ ನಿರೀಕ್ಷೆಯಿಟ್ಟು ಗೆಲ್ಲಿಸಿದಕ್ಕಾಗಿ, ತಾಲ್ಲೂಕಿನ ಜನತೆ ಹಾಗೂ ಅತಿ ಹೆಚ್ಚಾಗಿ ದಲಿತ ಸಮುದಾಯಕ್ಕೆ ಭಾರೀ ನಿರಾಸೆಯನ್ನುಂಟು ಮಾಡಿದ್ದಾರೆ. ತಾಲ್ಲೂಕಿನ ದಲಿತರಿಗೆ ಯಾವುದೇ ಶಾಶ್ವತವಾದ ಕೊಡುಗೆ ನೀಡಿರುವುದಿಲ್ಲ. ದಲಿತ ಅಭಿವೃದ್ಧಿಗೆ ಅವರ ಕೊಡುಗೆ ಶೂನ್ಯ. ದಲಿತ ಸಮಾಜವನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಮತ್ತೀಕೆರೆ ಹನುಮಂತಯ್ಯ ಅವರು ಗಂಭೀರ ಆರೋಪ ಮಾಡಿದರು.

ಅವರು ನಗರದ 5ನೇ ಕ್ರಾಸ್‍ನಲ್ಲಿನ ಬಿಜೆಪಿ ಕಛೇರಿಯಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.


ಶಾಸಕ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಟೀಕಾ ಪ್ರಹಾರ ನಡೆಸಿದ ಮತ್ತೀಕೆರೆ ಹನುಮಂತಯ್ಯ ಅವರು, ಶಾಸಕರಾಗಿ, ಮುಖ್ಯಮಂತ್ರಿಯಾಗಿ, 5 ವರ್ಷ ಅಧಿಕಾರ ನಡೆಸಿದ್ದಾರೆ. ಅವರು ಗುರುತರವಾದ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ತಾಲೂಕಿನ ದಲಿತರ ಬಹು ದಿನಗಳ ಕನಸಾದ ಡಾ. ಬಿ.ಆರ್.ಅಂಬೇಡ್ಕರ್ ಭವನ ಉದ್ಘಾಟಿಸಿದ ಸಂದರ್ಭದಲ್ಲಿ ಇನ್ನೂ 15 ದಿನಗಳಲ್ಲಿ ಸುಸಜ್ಜಿತಗೊಳಿಸಿ ಸಾರ್ವಜನಿಕ ಉಪಯೋಗಕ್ಕೆ ಅನುಕೂಲ ಮಾಡಿ ಕೊಡುತ್ತೇನೆಂದು ವೇದಿಕೆಯಲ್ಲೇ ಭರವಸೆ ನೀಡಿದ್ದರು. ಆ ಭರವಸೆ ಯಾವುದೇ ಕಾರ್ಯರೂಪಕ್ಕೆ ಬಾರದೇ ಇಂದಿಗೂ ಅನಾಥವಾಗಿ ಭರವಸೆಯಾಗಿಯೇ ಉಳಿದಿದೆ ಎಂದು ಕಿಡಿಕಾರಿದರು.


5 ವರ್ಷದ ಶಾಸಕರ ಅವಧಿಯಲ್ಲಿ ಒಂದು ಅಧಿಕಾರಿಗಳ ಸಭೆ ಮಾಡಲಿಲ್ಲ. ಪ್ರಗತಿ ಪರಿಶೀಲನೆ ಸಭೆ ಕರೆಯಲಿಲ್ಲ. ಗ್ರಾಮ ಸಭೆ ಮಾಡಲಿಲ್ಲ. ರೈತರು, ದಲಿತರ ಕುಂದು ಕೊರತೆ ಸಭೆ ಕರೆದು ಚರ್ಚಿಸಲಿಲ್ಲ. ಹಲವು ಗ್ರಾಮಗಳಲ್ಲಿ ದಲಿತರಿಗೆ ಸ್ಮಶಾನದ ಸಮಸ್ಯೆ,  ದಲಿತರ ಕಷ್ಟ ಸಮಸ್ಯೆಗಳೇನು ಎಂದು ಕೇಳಿಲ್ಲ. ಕೊಟ್ಟ ಭರವಸೆಗಳನ್ನು ಈಡೇರಿಸಲಿಲ್ಲ. ನಗರ ಪ್ರದೇಶದಲ್ಲಿ ಕಸದ ತ್ಯಾಜ್ಯ ಸಮಸ್ಯೆ, ಖಾಸಗಿ ಬಸ್ ನಿಲ್ದಾಣ, ಯುಜಿಡಿ ಸೇರಿದಂತೆ ಹಲವು ಸಮಸ್ಯೆಗಳಿಗೆ ಮುಕ್ತಿ ದೊರಕಿಸಿಕೊಡದೇ ತಾಲ್ಲೂಕು ಆಡಳಿತ ಸಂಪೂರ್ಣ ವಿಫಲವಾಗಿ, ಭ್ರಷ್ಟಾಚಾರದಲ್ಲಿ ಮುಳುಗುವಂತೆ ಮಾಡಿರುವುದೇ ಕುಮಾರಸ್ವಾಮಿಯವರ ಸಾಧನೆ ಎಂದು ಲೇವಡಿ ಮಾಡಿ, ತಮ್ಮ ದಲಿತ ವಿರೋಧಿ ಧೋರಣೆ, ಉದಾಸೀನತೆಯಿಂದ ಬೇಸತ್ತು ಕೆಲವರು ಈಗಾಗಲೇ ಪಕ್ಷ ತೊರೆದು ಬಿಜೆಪಿ ಪಕ್ಷ ಸೇರಿ ಪ್ರತಿಯೊಬ್ಬ ಸಾಮಾನ್ಯರ ಕೈಗೆ ಸಿಗುವ ಸಿ,ಪಿ.ಯೋಗೇಶ್ವರ್ ಅವರನ್ನು ಬೆಂಬಲಿಸಲು ಮುಂದಾಗಿರುವುದು ಆಶಾದಾಯಕ ಬೆಳವಣಿಗೆ ಅಗಿದೆ ಎಂದು ತಿಳಿಸಿದರು.

 

ಬಿಜೆಪಿ ಸರ್ಕಾರದ ಕೆಲವು ನಡೆಗೆ ನಮಗೆ ಕೆಲವು ವಿಷಯಗಳಲ್ಲಿ ಅಸಮಾಧಾನವಿದ್ದರೂ, ತಾಲ್ಲೂಕಿನ ಹಿತದೃಷ್ಟಿಯಿಂದ ನಮ್ಮ ತಾಲ್ಲೂಕಿನವರೇ, ನಮ್ಮ ಕೈಗೆ ಸಿಗುವ, ನಮ್ಮ ಕಷ್ಟ, ಸಮಸ್ಯೆಗಳನ್ನು ಆಲಿಸುವ ಮತ್ತು ತಾಲ್ಲೂಕಿನ ದಲಿತರ ಆಶಯಗಳಾದ ಸುಸಜ್ಜಿತ ಬುದ್ಧ ವಿಹಾರ ನಿರ್ಮಾಣ, ಡಾ. ಬಿ.ಆರ್ ಅಂಬೇಡ್ಕರ್ ಮತ್ತು ನಾಡೋಜ ಡಾ. ಸಿದ್ದಲಿಂಗಯ್ಯನವರ ಅಧ್ಯಯನ ಕೇಂದ್ರ ಸ್ಥಾಪನೆಗೆ ಮತ್ತು ಮುಂದಿನ ದಿನಗಳಲ್ಲಿ ನಿಮ್ಮ ಜೊತೆಯಲ್ಲಿ ಇರುತ್ತೇನೆಂದು ಭರವಸೆ ನೀಡಿರುವ  ಸಿ.ಪಿ ಯೋಗೇಶ್ವರ್ ರವರನ್ನು ಈ ಚುನಾವಣೆಯಲ್ಲಿ ತಾಲೂಕಿನ ದಲಿತ ಸಮುದಾಯದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲಿಸಲು ತೀರ್ಮಾನಿಸಿದ್ದು ನಾವು ಕೂಡ ಸಮುದಾಯದ ಹಿತದೃಷ್ಠಿಯಿಂದ ಸಿ.ಪಿ ಯೋಗೇಶ್ವರ್‍ ರವರ ಗೆಲುವಿಗೆ ದುಡಿಯಲು ಬದ್ಧವಾಗಿದ್ದೇವೆ ಎಂದು ತಿಳಿಸಿದರು.


ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ತಲೆಗೆ ಪೆಟ್ಟು ಬಿದ್ದು ರಕ್ತಗಾಯಗೊಂಡರೆ, ಚುನಾವಣಾ ಡ್ರಾಮಾ ಎಂದು ಲೇವಡಿ ಮಾಡಿದ ಕುಮಾರಸ್ವಾಮಿ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿ, ದಲಿತರು ಗಾಯಗೊಂಡರೆ ಅದು ಡ್ರಾಮಾವಾಗಿ ಕಾಣುತ್ತದೆ, ಆದರೆ ಜೆಡಿಎಸ್ ಅಭ್ಯರ್ಥಿಗಳಿಗೆ ಆ ರೀತಿ ಆಗಿದ್ದರೆ ಈ ರೀತಿ ಹೇಳುತ್ತಿದ್ದರೆ, ಕುಮಾರಸ್ವಾಮಿ ಅವರು ಪ್ರತಿ ಸಭೆ ವೇದಿಕೆಗಳಲ್ಲಿ ಕಣ್ಣಿರು ಹಾಕುತ್ತಾರಲ್ಲ ಅದು ಸ್ವಾಭಾವಿಕ ಕಣ್ಣೀರೇ ಅದು ಡ್ರಾಮಾ ಅಲ್ಲವೇ ಎಂದು ಹನುಮಂತಯ್ಯ ವ್ಯಂಗ್ಯವಾಡಿದರು.  


ಸುದ್ದಿಗೋಷ್ಟಿಯಲ್ಲಿ ಬಿಜೆಪಿ ಮುಖಂಡರಾದ ಡಾ.ಜಿ.ಲೋಕಾನಂದ, ಶಿವರಾಮು, ಗ್ರಾಪಂ. ಸದಸ್ಯ ಎಂ. ಆರ್.ಹರೀಶ್, ಕಿರಣ್, ಪ್ರದೀಪ್ ರಾಂಪುರ, ಕೃಷ್ಣಯ್ಯ,ಎಂ. ಲೋಕೇಶ್ ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in obituary »

ಹಸು ಮೈ ತೊಳೆಯಲು ಹೋಗಿ ವ್ಯಕ್ತಿ ಸಾವು

ಚನ್ನಪಟ್ಟಣ: ಸುಗ್ಗಿ ಹಬ್ಬಕ್ಕೆ ಹಸು ಮೈ ತೊಳೆಯಲು ಹೋಗಿ ಕಾಲುಜಾರಿ ಕೆರೆಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ತಾಲೂಕಿನ ಕೋಮನಹಳ್ಳಿ

ಡಾ ರಾಜಕುಮಾರ್ ಗೆ ಪಿತೃವಿಯೋಗ
ಡಾ ರಾಜಕುಮಾರ್ ಗೆ ಪಿತೃವಿಯೋಗ

ಚನ್ನಪಟ್ಟಣ: ನಗರದ ಸಾರ್ವಜನಿಕ ಆಸ್ಪತ್ರೆಯ ಹಿರಿಯ ಹಾಗೂ ಮೂಳೆ ತಜ್ಞರಾದ ಡಾ ರಾಜಕುಮಾರ್ ರವರ ತಂದೆ ರೇಣುಕಪ್ಪ (೭೨) ನಿಧನರಾಗಿದ್ದು, ಸಾರ್ವಜನಿಕ ಆಸ್ಪತ್ರೆ

ಹಾವು ಕಚ್ಚಿ ಅರ್ಚಕಿ ಸಾವು
ಹಾವು ಕಚ್ಚಿ ಅರ್ಚಕಿ ಸಾವು

ಚನ್ನಪಟ್ಟಣ: ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೃದ್ಧೆಯೊಬ್ಬರು ಹಾವು ಕಚ್ಚಿ ಮೃತಪಟ್ಟಿರುವ ಘಟನೆ ತಾಲೂಕಿನ ನೇರಳೂರು ಗ್ರಾಮದಲ್ಲಿ ಸೋಮವಾರ ನಡೆದಿದೆ.

ಕೆಲಗೆರೆ ಗ್ರಾಮದಲ್ಲಿ ಹಾವು ಕಚ್ಚಿ ವಿದ್ಯಾರ್ಥಿನಿ ಸಾವು
ಕೆಲಗೆರೆ ಗ್ರಾಮದಲ್ಲಿ ಹಾವು ಕಚ್ಚಿ ವಿದ್ಯಾರ್ಥಿನಿ ಸಾವು

ಚನ್ನಪಟ್ಟಣ: ಮೇ 13 22. ತಾಲ್ಲೂಕಿನ ಕೆಲಗೆರೆ ಗ್ರಾಮದ ವಾಟರ್ ಮನ್ ರಮೇಶ್ ರವರ ಪುತ್ರಿಗೆ ಹಾವು ಕಚ್ಚಿ ಸಾವನ್ನಪ್ಪಿರುವ ಘಟನೆ ಶುಕ್ರವಾರ ಸಂಜೆ

ಶಿಕ್ಷಣ ಸಹಾಯಕ ಎಲಿಯೂರು ಎಸ್ ಈರಯ್ಯ ನಿಧನ
ಶಿಕ್ಷಣ ಸಹಾಯಕ ಎಲಿಯೂರು ಎಸ್ ಈರಯ್ಯ ನಿಧನ

ಚನ್ನಪಟ್ಟಣ: ಎಸ್ ಈರಯ್ಯ ಎಲಿಯೂರು (83) ಮೈಸೂರಿನಲ್ಲಿ ನಿನ್ನೆ ರಾತ್ರಿ‌ ನಿಧನರಾದರು.

ಮೃತ ರಾಮಚಂದ್ರ ರವರಿಗೆ ಸರ್ಕಾರಿ ಗೌರವಗಳೊಂದಿಗೆ ಅಂತಿಮ ನಮನ
ಮೃತ ರಾಮಚಂದ್ರ ರವರಿಗೆ ಸರ್ಕಾರಿ ಗೌರವಗಳೊಂದಿಗೆ ಅಂತಿಮ ನಮನ

ಚನ್ನಪಟ್ಟಣ: ತಾಲ್ಲೂಕಿನ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಕೆ. ರಾಮಚಂದ್ರ ರವರು ವಯೋಸಹಜ ಖಾಯಿಲೆಯಿಂದ ಮಂಗಳವಾರ ರಾತ್ರಿ ಚನ್ನಪಟ್ಟಣದ ಸ್ವಗೃಹ

ಮಾಜಿ ಶಾಸಕ ಚೌಡಯ್ಯ ಅವರ ನಿಧನಕ್ಕೆ ಡಿ.ಕೆ. ಶಿವಕುಮಾರ್ ಅವರ ಸಂತಾಪ:
ಮಾಜಿ ಶಾಸಕ ಚೌಡಯ್ಯ ಅವರ ನಿಧನಕ್ಕೆ ಡಿ.ಕೆ. ಶಿವಕುಮಾರ್ ಅವರ ಸಂತಾಪ:

ಬೆಂಗಳೂರು: ಮಂಡ್ಯದ ಮಾಜಿ ಶಾಸಕರು, ಹಿರಿಯ ಮುಖಂಡರಾದ ಚೌಡಯ್ಯ ಅವರ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸಂತಾಪ ಸೂಚಿಸಿದ್ದ

ಮಚ್ಚಿನ ವಿಚಾರದಲ್ಲಿ ಜಗಳ.ಕೊಲೆಯಲ್ಲಿ ಅಂತ್ಯ
ಮಚ್ಚಿನ ವಿಚಾರದಲ್ಲಿ ಜಗಳ.ಕೊಲೆಯಲ್ಲಿ ಅಂತ್ಯ

ಹಲಗೂರು: ಸೌದೆ ಕತ್ತರಿಸಲು ತೆಗೆದುಕೊಂಡಿದ್ದ‌ ಮಚ್ಚನ್ನು ವಾಪಸ್ ಕೊಡದ ಕಾರಣ ಇಬ್ಬರ ನಡುವೆ ಜಗಳ ನಡೆದು ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ

ಬೆಳ್ಳಂಬೆಳಗ್ಗೆ ಮಚ್ಚಿನಿಂದ ಕೊಚ್ಚಿ ಮಹಿಳೆ ಕೊಲೆ: 3 ತಾಸಿನಲ್ಲೇ ಸಿಕ್ಕಿಬಿದ್ದ ಹಿಂಬದಿ ಮನೆಯ ಆಗಂತುಕ
ಬೆಳ್ಳಂಬೆಳಗ್ಗೆ ಮಚ್ಚಿನಿಂದ ಕೊಚ್ಚಿ ಮಹಿಳೆ ಕೊಲೆ: 3 ತಾಸಿನಲ್ಲೇ ಸಿಕ್ಕಿಬಿದ್ದ ಹಿಂಬದಿ ಮನೆಯ ಆಗಂತುಕ

ಚನ್ನಪಟ್ಟಣ: ಶುಕ್ರವಾರ ಬೆಳ್ಳಂಬೆಳಗ್ಗೆ ಕೊಲೆಯ ವಿಷಯ ತಿಳಿದು ಇಡೀ ಗ್ರಾಮವೇ ಬೆಚ್ಚಿಬಿದ್ದ ಘಟನೆ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ತೂಬಿನಕೆರೆಯಲ್ಲಿ ಸಂಭವಿಸಿದೆ.


ಪುನೀತ್ ಅಭಿಮಾನಿ ನೇಣುಬಿಗಿದು ಸಾವು
ಪುನೀತ್ ಅಭಿಮಾನಿ ನೇಣುಬಿಗಿದು ಸಾವು

ಚನ್ನಪಟ್ಟಣ ನಗರದ ಎಲೇಕೇರಿ ಬಡಾವಣೆಯ ದಿವಂಗತ ಕೃಷ್ಣಪ್ಪ ಎಂಬುವವರ ಪುತ್ರ ವೆಂಕಟೇಶ್ ಎಂಬಾತ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಅಪ್ಪಟ ಅಭಿಮಾನಿಯಾಗಿದ್ದು ಅವರ ಸಾವಿನಿಂದ ನೊಂದು ಆತ್ಮಹತ್ಯೆ ಮಾಡಿ

Top Stories »  


Top ↑