ಅನಧಿಕೃತ ಶಾಲೆಗಳಿಗೆ ದಾಖಲಾತಿ ಮಾಡಿಸಬೇಡಿ: ಕ್ಷೇತ್ರ ಶಿಕ್ಷಣಾಧಿಕಾರಿ

ರಾಮನಗರ, ಜೂ. 28: ಅನುದಾನ ರಹಿತ ಶಾಲೆಗಳು 2023-24ನೇ ಸಾಲಿನಲ್ಲಿ ಆಡಳಿತ ಮಂಡಳಿಯವರು ಇಲಾಖೆಯ ಅನುಮತಿ ಪಡೆಯದೇ ಶಾಲೆಗಳನ್ನು ನಡೆಸುತ್ತಿರುವುದು ಕಂಡುಬಂದಿರುತ್ತದೆ, ಆದುದರಿಂದ ಇಂತಹ ಶಾಲೆಗಳಿಗೆ ಮಕ್ಕಳನ್ನು ದಾಖಲಾತಿ ಮಾಡದೇ ಇರಲು ಪೋಷಕರಿಗೆ ತಿಳಿಸಿದೆ.
*ಶಾಲೆಯ ವಿವರ:*
ಮಡಿಲು ಆಂಗ್ಲ ಹಿರಿಯ ಪ್ರಾಥಮಿಕ ಶಾಲೆ, ಬಿಡದಿ, ರಾಮನಗರ ತಾಲ್ಲೂಕು ಮತ್ತು ಜಿಲ್ಲೆ. ಈ ಶಾಲೆಯು ಪೂರ್ವ ಪ್ರಾಥಮಿಕ ಶಾಲೆ (ಎಲ್.ಕೆ.ಜಿ & ಯು.ಕೆ.ಜಿ) ಮಾತ್ರ ಅನುಮತಿ ಪಡೆದಿದ್ದು, ಉಳಿದ ಯಾವುದೇ ತರಗತಿಗಳಿಗೆ ಅನುಮತಿ ಪಡೆದಿರುವುದಿಲ್ಲ. ಡಾಲ್ಫಿನ್ ಇಂಗ್ಲೀಷ್ ಸ್ಕೂಲ್, ನಾಲಬಂದವಾಡಿ ರಾಮನಗರ ಟೌನ್, ರಾಮನಗರ ತಾಲ್ಲೂಕು ಮತ್ತು ಜಿಲ್ಲೆ. ಈ ಶಾಲೆಯು ಪೂರ್ವ ಪ್ರಾಥಮಿಕ ಶಾಲೆ (ಎಲ್.ಕೆ.ಜಿ & ಯು.ಕೆ.ಜಿ) ಮತ್ತು 1 ರಿಂದ 5 ತರಗತಿಗಳಿಗೆ ಮಾತ್ರ ಅನುಮತಿ ಪಡೆದಿದ್ದು, ಉಳಿದ ಯಾವುದೇ ತರಗತಿಗಳಿಗೆ ಅನುಮತಿ ಪಡೆದಿರುವುದಿಲ್ಲ. ಸದ್ವಿದ್ಯಾ ಅಕಾಡೆಮಿ ಪಾರ್ ಕ್ರಿಯೇಟಿವ್ ಲರ್ನಿಂಗ್ ಬಿಡದಿ, ರಾಮನಗರ ತಾಲ್ಲೂಕು ಮತ್ತು ಜಿಲ್ಲೆ. ಈ ಶಾಲೆಯು ಉಪನಿರ್ದೇಶಕರು (ಆ) ಶಾಲಾ ಶಿಕ್ಷಣ ಇಲಾಖೆ, ರಾಮನಗರ ರವರ ಜ್ಞಾಪನ ಪತ್ರದ ದಿನಾಂಕ: 03-06-2023 ರನ್ವಯ ನೋಂದಣಿ ಮತ್ತು ಮಾನ್ಯತೆಯನ್ನು ಹಿಂಪಡೆದಿರುವುದರಿಂದ ಯಾವುದೇ ತರಗತಿಗಳನ್ನು ನಡೆಸಲು ಅನುಮತಿ ಇಲ್ಲದೇ ಇರುವುದಿರಂದ ಪೋಷಕರು ವಿದ್ಯಾರ್ಥಿಗಳನ್ನು ಬೇರೆ ಶಾಲೆಗಳಿಗೆ ದಾಖಲು ಮಾಡಲು ತಿಳಿಸಿದೆ.
ಆದರೂ ಸಹ ಈ ಶಾಲೆಗಳಿಗೆ ಪೋಷಕರು ತಮ್ಮ ಮಕ್ಕಳನ್ನು ದಾಖಲಿಸಿದ್ದಲ್ಲಿ ನೀವೇ ಜವಾಬ್ದಾರರಾಗಿರುತ್ತೀರಿ, ಇಂತಹ ಶಾಲೆಗಳಿಗೆ ದಾಖಲಾತಿ ಮಾಡಿದ್ದಲ್ಲಿ ಇಲಾಖೆಯು ಯಾವುದೇ ಕಾರಣಕ್ಕೂ ಜವಾಬ್ದಾರರಾಗಿರುವುದಿಲ್ಲವೆಂದು ಶಾಲಾ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗೋ ರಾ ಶ್ರೀನಿವಾಸ...
ಮೊ:9845856139.
Recent news in obituary »

ಡಾ ರಾಜಕುಮಾರ್ ಗೆ ಪಿತೃವಿಯೋಗ
ಚನ್ನಪಟ್ಟಣ: ನಗರದ ಸಾರ್ವಜನಿಕ ಆಸ್ಪತ್ರೆಯ ಹಿರಿಯ ಹಾಗೂ ಮೂಳೆ ತಜ್ಞರಾದ ಡಾ ರಾಜಕುಮಾರ್ ರವರ ತಂದೆ ರೇಣುಕಪ್ಪ (೭೨) ನಿಧನರಾಗಿದ್ದು, ಸಾರ್ವಜನಿಕ ಆಸ್ಪತ್ರೆ

ಹಾವು ಕಚ್ಚಿ ಅರ್ಚಕಿ ಸಾವು
ಚನ್ನಪಟ್ಟಣ: ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೃದ್ಧೆಯೊಬ್ಬರು ಹಾವು ಕಚ್ಚಿ ಮೃತಪಟ್ಟಿರುವ ಘಟನೆ ತಾಲೂಕಿನ ನೇರಳೂರು ಗ್ರಾಮದಲ್ಲಿ ಸೋಮವಾರ ನಡೆದಿದೆ.

ಕೆಲಗೆರೆ ಗ್ರಾಮದಲ್ಲಿ ಹಾವು ಕಚ್ಚಿ ವಿದ್ಯಾರ್ಥಿನಿ ಸಾವು
ಚನ್ನಪಟ್ಟಣ: ಮೇ 13 22. ತಾಲ್ಲೂಕಿನ ಕೆಲಗೆರೆ ಗ್ರಾಮದ ವಾಟರ್ ಮನ್ ರಮೇಶ್ ರವರ ಪುತ್ರಿಗೆ ಹಾವು ಕಚ್ಚಿ ಸಾವನ್ನಪ್ಪಿರುವ ಘಟನೆ ಶುಕ್ರವಾರ ಸಂಜೆ

ಶಿಕ್ಷಣ ಸಹಾಯಕ ಎಲಿಯೂರು ಎಸ್ ಈರಯ್ಯ ನಿಧನ
ಚನ್ನಪಟ್ಟಣ: ಎಸ್ ಈರಯ್ಯ ಎಲಿಯೂರು (83) ಮೈಸೂರಿನಲ್ಲಿ ನಿನ್ನೆ ರಾತ್ರಿ ನಿಧನರಾದರು.

ಮೃತ ರಾಮಚಂದ್ರ ರವರಿಗೆ ಸರ್ಕಾರಿ ಗೌರವಗಳೊಂದಿಗೆ ಅಂತಿಮ ನಮನ
ಚನ್ನಪಟ್ಟಣ: ತಾಲ್ಲೂಕಿನ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಕೆ. ರಾಮಚಂದ್ರ ರವರು ವಯೋಸಹಜ ಖಾಯಿಲೆಯಿಂದ ಮಂಗಳವಾರ ರಾತ್ರಿ ಚನ್ನಪಟ್ಟಣದ ಸ್ವಗೃಹ

ಮಾಜಿ ಶಾಸಕ ಚೌಡಯ್ಯ ಅವರ ನಿಧನಕ್ಕೆ ಡಿ.ಕೆ. ಶಿವಕುಮಾರ್ ಅವರ ಸಂತಾಪ:
ಬೆಂಗಳೂರು: ಮಂಡ್ಯದ ಮಾಜಿ ಶಾಸಕರು, ಹಿರಿಯ ಮುಖಂಡರಾದ ಚೌಡಯ್ಯ ಅವರ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸಂತಾಪ ಸೂಚಿಸಿದ್ದ

ಮಚ್ಚಿನ ವಿಚಾರದಲ್ಲಿ ಜಗಳ.ಕೊಲೆಯಲ್ಲಿ ಅಂತ್ಯ
ಹಲಗೂರು: ಸೌದೆ ಕತ್ತರಿಸಲು ತೆಗೆದುಕೊಂಡಿದ್ದ ಮಚ್ಚನ್ನು ವಾಪಸ್ ಕೊಡದ ಕಾರಣ ಇಬ್ಬರ ನಡುವೆ ಜಗಳ ನಡೆದು ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ

ಬೆಳ್ಳಂಬೆಳಗ್ಗೆ ಮಚ್ಚಿನಿಂದ ಕೊಚ್ಚಿ ಮಹಿಳೆ ಕೊಲೆ: 3 ತಾಸಿನಲ್ಲೇ ಸಿಕ್ಕಿಬಿದ್ದ ಹಿಂಬದಿ ಮನೆಯ ಆಗಂತುಕ
ಚನ್ನಪಟ್ಟಣ: ಶುಕ್ರವಾರ ಬೆಳ್ಳಂಬೆಳಗ್ಗೆ ಕೊಲೆಯ ವಿಷಯ ತಿಳಿದು ಇಡೀ ಗ್ರಾಮವೇ ಬೆಚ್ಚಿಬಿದ್ದ ಘಟನೆ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ತೂಬಿನಕೆರೆಯಲ್ಲಿ ಸಂಭವಿಸಿದೆ.
ಬ

ಪುನೀತ್ ಅಭಿಮಾನಿ ನೇಣುಬಿಗಿದು ಸಾವು
ಚನ್ನಪಟ್ಟಣ ನಗರದ ಎಲೇಕೇರಿ ಬಡಾವಣೆಯ ದಿವಂಗತ ಕೃಷ್ಣಪ್ಪ ಎಂಬುವವರ ಪುತ್ರ ವೆಂಕಟೇಶ್ ಎಂಬಾತ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಅಪ್ಪಟ ಅಭಿಮಾನಿಯಾಗಿದ್ದು ಅವರ ಸಾವಿನಿಂದ ನೊಂದು ಆತ್ಮಹತ್ಯೆ ಮಾಡಿ

ಪತ್ನಿಯನ್ನು ಕೊಂದು ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಪತಿ
ರಾಮನಗರ:ಕನಕಪುರ; ಅ/16/21. ಅಂಗಡಿ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ವ್ಯಾಪಾರಿಯೊಬ್ಬ ತನ್ನ ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಿ ತಾ
ಪ್ರತಿಕ್ರಿಯೆಗಳು