Tel: 7676775624 | Mail: info@yellowandred.in

Language: EN KAN

    Follow us :


ಸ್ತಬ್ಧವಾಯ್ತು \'ಉತ್ತರ\'ದ ಧ್ವನಿ: ಸಚಿವ ಉಮೇಶ್ ಕತ್ತಿ ಸವೆಸಿದ ಹಾದಿ

Posted date: 07 Sep, 2022

Powered by:     Yellow and Red

ಸ್ತಬ್ಧವಾಯ್ತು \'ಉತ್ತರ\'ದ ಧ್ವನಿ: ಸಚಿವ ಉಮೇಶ್ ಕತ್ತಿ ಸವೆಸಿದ ಹಾದಿ

ಬೆಂಗಳೂರು: ರಾಜ್ಯ ಕಂಡ ಅಪರೂಪದ ರಾಜಕಾರಣಿ, ಜನತಾ ಪರಿವಾರ ಮೂಲದ ಹಿರಿಯ ಮುತ್ಸದ್ಧಿ ಉಮೇಶ್ ಕತ್ತಿ (61) ಹೃದಯಾಘಾತದಿಂದ ನಿಧನರಾಗಿದ್ದಾರೆ. ಈ ಮೂಲಕ ಉತ್ತರ ಕರ್ನಾಟಕದ ಜನಪರ ಧ್ವನಿಯೂ ನಿಂತುಹೋಗಿದೆ.


1961ರ ಮಾರ್ಚ್ 14 ರಂದು ಬೆಳಗಾವಿ ಜಿಲ್ಲೆ ಹುಕ್ಕೇರಿಯ ಬೆಲ್ಲದ ಬಾಗೇವಾಡಿಯಲ್ಲಿ ಉಮೇಶ್ ಕತ್ತಿ ಜನಿಸಿದರು. ತಂದೆ ವಿಶ್ವನಾಥ್ ಕತ್ತಿ ಅವರ ಅಕಾಲಿಕ ನಿಧನದಿಂದ ಹುಕ್ಕೇರಿ ವಿಧಾನಸಭಾ ಕ್ಷೇತ್ರ ಖಾಲಿಯಾಗಿತ್ತು. 1985ರಲ್ಲಿ ಉಮೇಶ್​ ಕತ್ತಿ, ಜನತಾ ಪಕ್ಷದಿಂದ ಶಾಸಕರಾಗಿ ವಿಧಾನಸಭಾ ಮೆಟ್ಟಿಲನ್ನು ಮೊದಲ ಬಾರಿಗೆ ಹತ್ತಿದರು. ನಂತರ ರಾಜಕೀಯ ಕ್ಷೇತ್ರದಲ್ಲಿ ಹೊಸ ಹೊಸ ಎತ್ತರಕ್ಕೆ ಬೆಳೆದು ನಿಂತರು. ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಪ್ರಭಾವ ಹೊಂದಿರುವ ಜೊತೆಗೆ ಪ್ರಭಾವಿ ಲಿಂಗಾಯತ ಸಮುದಾಯಕ್ಕೆ ಸೇರಿದ ಮುಖಂಡರಾಗಿಯೂ ಗುರುತಿಸಿಕೊಳ್ಳುತ್ತಾರೆ. ಜನತಾದಳ, ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿಯೂ ಸೇವೆ ಸಲ್ಲಿಸಿರುವ ಹಿರಿಮೆ ಇವರದ್ದು.1. 9 ಬಾರಿ ಸ್ಪರ್ಧೆ, 8 ಸಲ ಶಾಸಕ: ಹುಕ್ಕೇರಿ ವಿಧಾನಸಭೆ ಕ್ಷೇತ್ರದಲ್ಲಿ 9 ಬಾರಿ ಸ್ಪರ್ಧಿಸಿದ್ದ ಕತ್ತಿ, ಪ್ರಸಕ್ತ ಅವಧಿಯೂ ಸೇರಿದಂತೆ ಎಂಟು ಬಾರಿ ಗೆಲುವಿನ ನಗೆ ಬೀರಿದ್ದರು. ಕಾಂಗ್ರೆಸ್​​ನಿಂದ ಸ್ಪರ್ಧಿಸಿ ಕೇವಲ 800 ಮತಗಳ ಅಂತರದಿಂದ ಸೋಲಿನ ಕಹಿ ಅನುಭವಿಸಿದ್ದರು. ಜನಸಂಖ್ಯೆಗೆ ಅನುಗುಣವಾಗಿ ಕರ್ನಾಟಕವನ್ನು ಮೂರು ರಾಜ್ಯಗಳಾಗಿ ಮಾಡಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ ಎಂಬ ಸ್ಫೋಟಕ ಮಾಹಿತಿಯನ್ನು ಬಹಿರಂಗ ಸಭೆಯಲ್ಲಿ ಹೇಳಿ ಗಮನ ಸೆಳೆದಿದ್ದರು. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬಗ್ಗೆ ಆಗಾಗ ಧ್ವನಿ ಎತ್ತುತ್ತಿದ್ದ ಕತ್ತಿ ವಿಶೇಷ ಕಾರಣದಿಂದ ಜನಮಾನಸದಲ್ಲಿ ನೆನಪಿನಲ್ಲಿ ಉಳಿಯುತ್ತಾರೆ.


2. ಉಮೇಶ್‌ ಕತ್ತಿ ರಾಜಕೀಯ ಹಾದಿ ಹೀಗಿತ್ತು: 1985ರಲ್ಲಿ ಮೊದಲ ಬಾರಿ ಜನತಾ ಪಕ್ಷದಿಂದ ಶಾಸಕರಾಗಿ ಆಯ್ಕೆ

1989ರಲ್ಲಿ ಎರಡನೇ ಬಾರಿ ಶಾಸಕರಾಗಿ ಆಯ್ಕೆ

199 ರಲ್ಲಿ ಮೂರನೇ ಬಾರಿ ಆಯ್ಕೆ

1999ರಲ್ಲಿ ಸಂಯುಕ್ತ ಜನತಾದಳದಿಂದ ಆಯ್ಕೆ, ನಾಲ್ಕನೇ ಬಾರಿ ವಿಧಾನಸಭೆ ಪ್ರವೇಶ

2004ರಲ್ಲಿ ಕಾಂಗ್ರೆಸ್​​​ನಿಂದ ಸ್ಪರ್ಧಿಸಿ ಮೊದಲ ಬಾರಿ ಸೋಲು

2008 ರಲ್ಲಿ ಜಾತ್ಯತೀತ ಜನತಾದಳದಿಂದ ಸ್ಪರ್ಧಿಸಿ ಗೆಲುವು, ಐದನೇ ಬಾರಿ ಶಾಸನಸಭೆ ಪ್ರವೇಶ

2008ರಲ್ಲಿ ಆಪರೇಷನ್ ಕಮಲಕ್ಕೆ ಸಿಲುಕಿ ಜೆಡಿಎಸ್​​ಗೆ ರಾಜೀನಾಮೆ, ಬಿಜೆಪಿಯಿಂದ ಸ್ಪರ್ಧೆ, ಉಪಚುನಾವಣೆಯಲ್ಲಿ ಗೆಲುವು

2013ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು, ಏಳನೇ ಬಾರಿ ವಿಧಾನಸಭೆ ಪ್ರವೇಶ

2018ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಎಂಟನೇ ಬಾರಿ ಗೆದ್ದು ಶಾಸಕರಾಗಿ ಆಯ್ಕೆ


*ಹೃದಯಾಘಾತದಿಂದ ಸಚಿವ ಉಮೇಶ್ ಕತ್ತಿ ವಿಧಿವಶ*

1994 ರಲ್ಲಿ ಜನತಾದಳ ಸರ್ಕಾರ ರಚನೆಯಾದ ಸಂದರ್ಭದಲ್ಲಿ ಮೊದಲ ಬಾರಿ ಸಚಿವ ಸ್ಥಾನ, ದೇವೇಗೌಡರ ಸಂಪುಟದಲ್ಲಿ ಸಕ್ಕರೆ ಸಚಿವ ಸ್ಥಾನ ದೊರೆತಿತ್ತು.

1996 ಜೆ.ಹೆಚ್.ಪಟೇಲ್ ಸಂಪುಟದಲ್ಲಿ ಲೋಕೋಪಯೋಗಿ ಸಚಿವರಾಗಿ ಮುಂದುವರಿಕೆ

2008ರಲ್ಲಿ ಯಡಿಯೂರಪ್ಪ ಸಂಪುಟದಲ್ಲಿ ಕೃಷಿ, ಬಂಧೀಖಾನೆ ಸಚಿವ ಸ್ಥಾನ

2011ರಲ್ಲಿ ಸದಾನಂದಗೌಡರ ಸಂಪುಟದಲ್ಲಿ ಕೃಷಿ ಸಚಿವ ಸ್ಥಾನ

2012ರಲ್ಲಿ ಜಗದೀಶ್ ಶೆಟ್ಟರ್ ಸಂಪುಟದಲ್ಲಿ ಕೃಷಿ ಸಚಿವ ಸ್ಥಾನ

2019 ರಲ್ಲಿ ಯಡಿಯೂರಪ್ಪ ಅಧಿಕಾರಕ್ಕೆ ಬಂದ ಸಂಪುಟದಲ್ಲಿ ಸಚಿವ ಸ್ಥಾನ

2021ರಲ್ಲಿ ಬಸವರಾಜ ಬೊಮ್ಮಾಯಿ‌ ಸಂಪುಟದಲ್ಲಿ ಅರಣ್ಯ, ಆಹಾರ ಸಚಿವ ಸ್ಥಾನ.


*4. ಆರು ಸಲ ಪಕ್ಷ ಬದಲಿಸಿದ್ದ ಉಮೇಶ್‌ ಕತ್ತಿ:* ಜನತಾ ಪಕ್ಷದಿಂದ ರಾಜಕೀಯ ಜೀವನ ಆರಂಭಿಸಿದ್ದ ಉಮೇಶ್ ಕತ್ತಿ, ನಂತರ ಜನತಾದಳಕ್ಕೆ ಬಂದಿದ್ದರು. ಜನತಾದಳ ಇಬ್ಭಾಗವಾದಾಗ ಜೆ.ಹೆಚ್.ಪಟೇಲ್ ಬಣದೊಂದಿಗೆ ನಿಂತು ಜೆಡಿಯು ಸೇರಿದ್ದರು. ಪಟೇಲ್ ನಿಧನದ ನಂತರ ಅಲ್ಲೂ ಇರದೆ ಜೆಡಿಎಸ್ ಸೇರಲಾಗದೆ 2004 ರಲ್ಲಿ ಕಾಂಗ್ರೆಸ್ ಸೇರಿಕೊಂಡು ಮೊದಲ ಸಲ ಸೋಲಿನ ಕಹಿ ಕಂಡರು. ಅಲ್ಲಿಂದ 2008ರಲ್ಲಿ ಜೆಡಿಎಸ್ ಸೇರಿ ಗೆದ್ದು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದರು. ಅಲ್ಲಿಂದ ಬಿಜೆಪಿಗೆ ಬಂದು ಜೊತೆಯಲ್ಲಿಯೇ ಇದ್ದರು.


*ಬೆಳಗಾವಿ ಜಿಲ್ಲೆ ವಿಭಜನೆ ಆಗಲೇಬೇಕು:*

ಸಚಿವ ಉಮೇಶ್ ಕತ್ತಿ ಪ್ರತ್ಯೇಕ ರಾಜ್ಯ ರಚನೆ ಕೂಗು, ಸಿಎಂ ಸ್ಥಾನದ ಆಕಾಂಕ್ಷೆ: ಮಹಾರಾಷ್ಟ್ರಕ್ಕೆ ತುಬ್ಬಿ-ಬಬಲಾದ ಏತ ನೀರಾವರಿ ಯೋಜನೆಯಿಂದ ಕೃಷ್ಣಾ ನೀರು ಬಿಡುವ ಕುರಿತು ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿಕೆಯನ್ನು ಖಂಡಿಸಿದ್ದ ಕತ್ತಿ, ಈ ಪ್ರದೇಶವನ್ನು ನಿರ್ಲಕ್ಷಿಸಿದರೆ ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ರಾಜ್ಯ ರಚನೆಗೆ ಒತ್ತಾಯಿಸುವ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಪ್ರತ್ಯೇಕ ರಾಜ್ಯದ ಬಗ್ಗೆ ಆಗಾಗ ಹೇಳಿಕೆ ನೀಡುತ್ತಲೇ ಅಖಂಡ ಕರ್ನಾಟಕದ ಮುಖ್ಯಮಂತ್ರಿ ಆಗುತ್ತೇನೆ ಎನ್ನುವ ಹೇಳಿಕೆಯನ್ನೂ ನೀಡುತ್ತಿದ್ದರು. ಉಮೇಶ್ ಕತ್ತಿ ಕೇವಲ ರಾಜಕಾರಣಿ ಮಾತ್ರವಲ್ಲದೆ, ಉದ್ಯಮಿ ಹಾಗು ಕೃಷಿಕರೂ ಆಗಿದ್ದರು. ಬೆಳಗಾವಿಯಲ್ಲಿ ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆ ಹೊಂದಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in obituary »

ಪೌಳಿದೊಡ್ಡಿ ಗ್ರಾಮದ ಮುಖಂಡ ಜಯರಾಮಯ್ಯ ನಿಧನ
ಪೌಳಿದೊಡ್ಡಿ ಗ್ರಾಮದ ಮುಖಂಡ ಜಯರಾಮಯ್ಯ ನಿಧನ

ಚನ್ನಪಟ್ಟಣ: ನ/೧೯/೨೨. ತಾಲ್ಲೂಕಿನ ವಂದಾರಗುಪ್ಪೆ ಗ್ರಾಪಂ ವ್ಯಾಪ್ತಿಯ ಪೌಳಿದೊಡ್ಡಿ ಗ್ರಾಮದ ಹಿರಿಯ ಮುಖಂಡ ಜಯರಾಮಯ್ಯ (78) ಇಂದು ಮುಂಜಾನೆ ನಿಧ

ಕೆರೆಗೆ ಬಿದ್ದು ವಿದ್ಯಾರ್ಥಿ ಮೃತ್ಯು
ಕೆರೆಗೆ ಬಿದ್ದು ವಿದ್ಯಾರ್ಥಿ ಮೃತ್ಯು

ಮಂಡ್ಯ, ಅ.24: ಮದ್ದೂರು ತಾಲೂಕಿನ ಕೊಪ್ಪ ಗ್ರಾಮದ ಕೆರೆಯಲ್ಲಿ ಕೈಕಾಲು ತೊಳೆಯುತ್ತಿದ್ದಾಗ ಅಯತಪ್ಪಿ ಬಿದ್ದ ವಿದ್ಯಾರ್ಥಿ ಮೃತಪಟ್ಟಿರುವ ಘಟನೆ ಸೋ

16 ಕೆರೆಗಳ ನಿರ್ಮಾತೃ, ದೇಶದ ಗಮನ ಸೆಳೆದಿದ್ದ ದಾಸನದೊಡ್ಡಿಯ ಕಲ್ಮನೆ ಕಾಮೇಗೌಡ ಇನ್ನಿಲ್ಲ
16 ಕೆರೆಗಳ ನಿರ್ಮಾತೃ, ದೇಶದ ಗಮನ ಸೆಳೆದಿದ್ದ ದಾಸನದೊಡ್ಡಿಯ ಕಲ್ಮನೆ ಕಾಮೇಗೌಡ ಇನ್ನಿಲ್ಲ

ಮಂಡ್ಯ: 16 ಕೆರೆಗಳನ್ನು ನಿರ್ಮಿಸುವ ಮೂಲಕ ದೇಶದ ಗಮನ ಸೆಳೆದಿದ್ದ ಜಿಲ್ಲೆಯ ಮಳವಳ್ಳಿ ತಾಲೂಕು ದಾಸನದೊಡ್ಡಿ ಗ್ರಾಮದ ಕಲ್ಮನೆ ಕಾಮೇಗೌಡ (86) ಸೋಮ

ಎಪ್ಪತ್ತು ವರ್ಷ ಬ್ರಿಟನ್ ಆಳಿದ​ ರಾಣಿ ಎಲಿಜಬೆತ್​ II ನಿಧನ
ಎಪ್ಪತ್ತು ವರ್ಷ ಬ್ರಿಟನ್ ಆಳಿದ​ ರಾಣಿ ಎಲಿಜಬೆತ್​ II ನಿಧನ

ಲಂಡನ್​​: ವಯೋಸಹಜ ಖಾಯಿಲೆಯಿಂದ, ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಬ್ರಿಟನ್ ರಾಣಿ ಎಲಿಜಬೆತ್-II ತಮ್ಮ 96 ನೇ ವಯಸ್ಸಿನಲ್ಲಿ ಗುರುವಾರ ರಾತ್

ಪಾಂಡವಪುರಮಾಜಿ ಶಾಸಕರಾದ ಕೆ.ಕೆಂಪೇಗೌಡಇನ್ನಿಲ್ಲ
ಪಾಂಡವಪುರಮಾಜಿ ಶಾಸಕರಾದ ಕೆ.ಕೆಂಪೇಗೌಡಇನ್ನಿಲ್ಲ

ಮಂಡ್ಯ: ಪಾಂಡವಪುರ;

ಮಾಜಿ ಶಾಸಕ ಕೆ.ಕೆಂಪೇಗೌಡ(96) ವಯೋಸಹಜವಾಗಿ ಬುಧವಾರ ಬೆಳಗ್ಗೆ ನಿಧನರಾಗಿದ್ದಾರೆ.


ಇಂದು ಮಧ್ಯಾಹ್ನ 3 ರಿಂದ 4ಗಂಟೆಯೊಳಗೆ ಸ್ವಗ್ರಾಮ ಪಾಂಡವಪುರ

ಸ್ತಬ್ಧವಾಯ್ತು \'ಉತ್ತರ\'ದ ಧ್ವನಿ: ಸಚಿವ ಉಮೇಶ್ ಕತ್ತಿ ಸವೆಸಿದ ಹಾದಿ
ಸ್ತಬ್ಧವಾಯ್ತು \'ಉತ್ತರ\'ದ ಧ್ವನಿ: ಸಚಿವ ಉಮೇಶ್ ಕತ್ತಿ ಸವೆಸಿದ ಹಾದಿ

ಬೆಂಗಳೂರು: ರಾಜ್ಯ ಕಂಡ ಅಪರೂಪದ ರಾಜಕಾರಣಿ, ಜನತಾ ಪರಿವಾರ ಮೂಲದ ಹಿರಿಯ ಮುತ್ಸದ್ಧಿ ಉಮೇಶ್ ಕತ್ತಿ (61) ಹೃದಯಾಘಾತದಿಂದ ನಿಧನರಾಗಿದ್ದಾರೆ. ಈ ಮ

ಮಕ್ಕಳಿಗೆ ವಿಷ ಕುಡಿಸಿ ಸಾವಿಗೆ ಶರಣಾದ ರೈತ ಸಂಘದ ಅಧ್ಯಕ್ಷನ ಪತ್ನಿ
ಮಕ್ಕಳಿಗೆ ವಿಷ ಕುಡಿಸಿ ಸಾವಿಗೆ ಶರಣಾದ ರೈತ ಸಂಘದ ಅಧ್ಯಕ್ಷನ ಪತ್ನಿ

ಮಾಗಡಿ: ತನ್ನ ಇಬ್ಬರು ಮಕ್ಕಳಿಗೆ ವಿಷ ಉಣಿಸಿ ತಾಯಿಯೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಹೊಸಪಾಳ್ಯ ಗ್ರಾಮದಲ್ಲಿ ನಡೆದಿದೆ.

ಖ್ಯಾತ ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣ ನಿಧನ
ಖ್ಯಾತ ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣ ನಿಧನ

ಬೆಂಗಳೂರು: ಕನ್ನಡದ ಖ್ಯಾತ ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣ ( 83 ) ಗುರುವಾರ ರಾತ್ರಿ ನಗರದ ಜಯದೇವ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಕುಟುಂಬದ ಆಪ್ತ ಮೂಲಗಳು ತಿಳಿಸಿವ

ಚನ್ನಿಗನಹೊಸಹಳ್ಳಿ ಗ್ರಾಮದಲ್ಲಿ ಕಾಡಾನೆಗೆ ಬಲಿಯಾದ ರೈತ ಮಹಿಳೆ. ಅಧಿಕಾರಿಗಳು   ಮತ್ತು ಜನಪ್ರತಿನಿಧಿಗಳು ಭೇಟಿ
ಚನ್ನಿಗನಹೊಸಹಳ್ಳಿ ಗ್ರಾಮದಲ್ಲಿ ಕಾಡಾನೆಗೆ ಬಲಿಯಾದ ರೈತ ಮಹಿಳೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಭೇಟಿ

ಚನ್ನಪಟ್ಟಣ.ಆ.೦೯: ಮಹಿಳೆಯ ಮೇಲೆ ಕಾಡಾನೆ ದಾಳಿ ನಡೆಸಿ ತುಳಿದು ಸಾಯಿಸಿರುವ ಹೃದಯ ವಿದ್ರಾವಕ ಘಟನೆ  ತಾಲೂಕಿನ ಚೆನ್ನಿಗನಹೊಸಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ಮೃತ ಮಹಿಳೆಯ

ಬಸ್ ಮತ್ತು ಬೈಕ್ ಅಪಘಾತದಲ್ಲಿ ನಾಲ್ಕು ವರ್ಷದ ಮಗು ಸಾವು
ಬಸ್ ಮತ್ತು ಬೈಕ್ ಅಪಘಾತದಲ್ಲಿ ನಾಲ್ಕು ವರ್ಷದ ಮಗು ಸಾವು

ರಾಮನಗರ: ತಾಲೂಕಿನ ಕೈ ಲಾಂಚ ಹೋಬಳಿಯ ಗೌಡಯ್ಯನದೊ ಡ್ಡಿ ಗ್ರಾಮದ ಸಮೀಪದ ಕೆರೆ ಏರಿ ರಸ್ತೆಯಲ್ಲಿ ಸೋಮವಾರ ಬೆಳಿಗ್ಗೆ ನಡೆದ ಬಸ್ ಮತ್ತು ಬೈಕ್ ಅಪಘಾ

Top Stories »  


Top ↑