ಎಪ್ಪತ್ತು ವರ್ಷ ಬ್ರಿಟನ್ ಆಳಿದ ರಾಣಿ ಎಲಿಜಬೆತ್ II ನಿಧನ

ಲಂಡನ್: ವಯೋಸಹಜ ಖಾಯಿಲೆಯಿಂದ, ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಬ್ರಿಟನ್ ರಾಣಿ ಎಲಿಜಬೆತ್-II ತಮ್ಮ 96 ನೇ ವಯಸ್ಸಿನಲ್ಲಿ ಗುರುವಾರ ರಾತ್ರಿ ಸ್ಕಾಟ್ಲೆಂಡ್ನ ಅರಮನೆಯಲ್ಲಿ ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಇಲ್ಲಿನ ಬಲ್ಮೋರಾಲ್ನಲ್ಲಿ ಅವರು ತೀವ್ರ ವೈದ್ಯಕೀಯ ನಿಗಾದಲ್ಲಿದ್ದರು. ರಾಣಿಯ ಪಾರ್ಥಿವ ಶರೀರವನ್ನು ಇದೀಗ ಬಾಲ್ಮೊರಲ್ ಎಸ್ಟೇಟ್ನಲ್ಲಿ ಇಡಲಾಗಿದೆ. ಇಂದು ಲಂಡನ್ಗೆ ರವಾನಿಸಲಾಗುತ್ತದೆ. ಹಿರಿಯ ಮಗ ಚಾರ್ಲ್ಸ್ ತಕ್ಷಣದಿಂದಲೇ ರಾಜನಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.
*10 ದಿನ ಶೋಕಾಚರಣೆ:* ವಯೋಸಹಜ ಖಾಯಿಲೆಗಳಿಂದ ಬಳಲುತ್ತಿದ್ದ ರಾಣಿ ಈ ವಾರದ ಆರಂಭದಲ್ಲಿ ದೇಶದ ಹೊಸ ಪ್ರಧಾನಿ ಲಿಜ್ ಟ್ರಸ್ ನೇಮಕ ಸೇರಿದಂತೆ ತಮ್ಮ ಹಲವು ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದರು. ಇದೀಗ ಅವರು ಕೊನೆಯುಸಿರೆಳೆದಿದ್ದು ಬ್ರಿಟನ್ನಲ್ಲಿ ಮುಂದಿನ 10 ದಿನಗಳ ಕಾಲ ಶೋಕಾಚರಣೆ ಘೋಷಿಸಲಾಗಿದೆ.1953 ರಿಂದಲೂ ಬ್ರಿಟನ್ ರಾಣಿಯಾಗಿದ್ದು ಏಳು ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ. ತಮ್ಮ ತಂದೆ ಕಿಂಗ್ ಜಾರ್ಜ್ VI ನಿಧನದ ನಂತರ ರಾಣಿ ಪಟ್ಟ ಅಲಂಕರಿಸಿದ್ದ ಇವರು, 1952ರಲ್ಲಿ ಬ್ರಿಟನ್ ಗದ್ದುಗೆ ಏರಿದ್ದರು. ಇವರಿಗೆ ನಾಲ್ವರು ಮಕ್ಕಳಿದ್ದಾರೆ. 8 ಮೊಮ್ಮಕ್ಕಳು ಮತ್ತು 12 ಮರಿ ಮಕ್ಕಳಿದ್ದಾರೆ.
*1953 ರಿಂದಲೂ ಬ್ರಿಟನ್ ರಾಣಿಯಾಗಿ ಸೇವೆ ಜಾಗತಿಕ ಮಟ್ಟದ ಪ್ರಭಾವಿ:*.
ಜಾಗತಿಕ ಮಟ್ಟದಲ್ಲಿ ಪ್ರಭಾವಿ ನಾಯಕಿ ಎಂದೇ ರಾಣಿ ಮನ್ನಣೆ ಗಳಿಸಿದ್ದರು. 2ನೇ ವಿಶ್ವಯುದ್ಧ, ಶೀತಲ ಸಮರ, ಕಮ್ಯುನಿಸಂ ಆಡಳಿತ ಪತನ ಮತ್ತು ಅಂತರ್ಜಾಲ ಯುಗಾರಂಭದ ಗುರುತರ ಜಾಗತಿಕ ಬದಲಾವಣೆಗಳಿಗೆ ಇವರು ಸಾಕ್ಷಿಯಾಗಿದ್ದಾರೆ. ರಾಣಿ ಎಲಿಜಬೆತ್ II 1947ರಲ್ಲಿ ಪ್ರಿನ್ಸ್ ಫಿಲಿಪ್, ಡ್ಯೂಕ್ ಆಫ್ ಎಡಿನ್ಬರ್ಗ್ ಅವರನ್ನು ವಿವಾಹವಾಗಿದ್ದರು. ಬ್ರಿಟನ್ ರಾಣಿಯಾಗುವ ಐದು ವರ್ಷಗಳ ಮೊದಲು ಪ್ರಿನ್ಸ್ ಫಿಲಿಪ್ ಏಪ್ರಿಲ್ 9, 2021 ರಂದು 99 ನೇ ವಯಸ್ಸಿನಲ್ಲಿ ನಿಧನರಾಗಿದ್ದರು.
*ಏಳು ದಶಕಗಳ ಕಾಲ ಸೇವೆ ರಾಣಿಯ ಬಳಿಕ ರಾಜನಾಗಿ ಪುತ್ರ ಚಾರ್ಲ್ಸ್:*
ಕ್ವೀನ್ ಎಲಿಜಬೆತ್ II ರ ನಂತರ ಅವರ ಮೊದಲ ಮಗ ಚಾರ್ಲ್ಸ್ ರಾಜನಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ರಾಜಮನೆತನದ ಮಾಹಿತಿಯಂತೆ, ಉತ್ತರಾಧಿಕಾರವು ವಂಶಸ್ಥರ ಮೂಲಕ ಮಾತ್ರವಲ್ಲದೇ ಸರ್ಕಾರದ ಸಂಸದೀಯ ಶಾಸನದಿಂದಲೂ ನಿಯಂತ್ರಿಸಲ್ಪಡುತ್ತದೆ.
*ದಾಖಲೆಯ ಆಳ್ವಿಕೆ ನಡೆಸಿದ್ದ ರಾಣಿ:*
ಎಲಿಜಬೆತ್ II ಅವರು 1927 ಮತ್ತು 2016 ರ ನಡುವೆ 70 ವರ್ಷ ಮತ್ತು 126 ದಿನಗಳ ಕಾಲ ಆಳ್ವಿಕೆ ನಡೆಸಿದ ಥಾಯ್ಲೆಂಡ್ನ ಕಿಂಗ್ ಭೂಮಿಬೋಲ್ ಅದುಲ್ಯದೇಜ್ ಅವರನ್ನು ಹಿಂದಿಕ್ಕಿ ದಾಖಲೆ ನಿರ್ಮಿಸಿದ್ದರು.
*ಘನತೆ ಮತ್ತು ಸಭ್ಯತೆಯ ಪ್ರತಿರೂಪ- ಪ್ರಧಾನಿ ಮೋದಿ ಸಂತಾಪ:*
ರಾಣಿ ಎಲಿಜಬೆತ್ II ನಮ್ಮ ಕಾಲದ ಧೀಮಂತೆ ಎಂದು ಪ್ರಧಾನಿ ಮೋದಿ ಸ್ಮರಿಸಿದ್ದಾರೆ. ತಮ್ಮ ರಾಷ್ಟ್ರ ಮತ್ತು ಜನರಿಗೆ ಸ್ಪೂರ್ತಿದಾಯಕ ನಾಯಕತ್ವ ನೀಡಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಘನತೆ ಮತ್ತು ಸಭ್ಯತೆಯನ್ನು ಪ್ರದರ್ಶಿಸಿದವರು. ರಾಣಿಯ ನಿಧನದಿಂದ ನೋವಾಗಿದೆ. ದುಃಖದ ಸಮಯದಲ್ಲಿ ಅವರ ಕುಟುಂಬ ಹಾಗೂ ಯುಕೆ ಜನರ ನೋವಿನಲ್ಲಿ ತಾವೂ ಸಹ ಭಾಗಿ ಎಂದು ಟ್ವೀಟ್ ಮಾಡಿದ್ದಾರೆ.
2ನೇ ಎಲಿಜಬೆತ್ ಗುರುವಾರ ರಾತ್ರಿ ನಿಧನಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿದಂತೆ ಅನೇಕರು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.
ಗೋ ರಾ ಶ್ರೀನಿವಾಸ...
ಮೊ:9845856139.
Recent news in obituary »

ಪೌಳಿದೊಡ್ಡಿ ಗ್ರಾಮದ ಮುಖಂಡ ಜಯರಾಮಯ್ಯ ನಿಧನ
ಚನ್ನಪಟ್ಟಣ: ನ/೧೯/೨೨. ತಾಲ್ಲೂಕಿನ ವಂದಾರಗುಪ್ಪೆ ಗ್ರಾಪಂ ವ್ಯಾಪ್ತಿಯ ಪೌಳಿದೊಡ್ಡಿ ಗ್ರಾಮದ ಹಿರಿಯ ಮುಖಂಡ ಜಯರಾಮಯ್ಯ (78) ಇಂದು ಮುಂಜಾನೆ ನಿಧ

ಕೆರೆಗೆ ಬಿದ್ದು ವಿದ್ಯಾರ್ಥಿ ಮೃತ್ಯು
ಮಂಡ್ಯ, ಅ.24: ಮದ್ದೂರು ತಾಲೂಕಿನ ಕೊಪ್ಪ ಗ್ರಾಮದ ಕೆರೆಯಲ್ಲಿ ಕೈಕಾಲು ತೊಳೆಯುತ್ತಿದ್ದಾಗ ಅಯತಪ್ಪಿ ಬಿದ್ದ ವಿದ್ಯಾರ್ಥಿ ಮೃತಪಟ್ಟಿರುವ ಘಟನೆ ಸೋ

16 ಕೆರೆಗಳ ನಿರ್ಮಾತೃ, ದೇಶದ ಗಮನ ಸೆಳೆದಿದ್ದ ದಾಸನದೊಡ್ಡಿಯ ಕಲ್ಮನೆ ಕಾಮೇಗೌಡ ಇನ್ನಿಲ್ಲ
ಮಂಡ್ಯ: 16 ಕೆರೆಗಳನ್ನು ನಿರ್ಮಿಸುವ ಮೂಲಕ ದೇಶದ ಗಮನ ಸೆಳೆದಿದ್ದ ಜಿಲ್ಲೆಯ ಮಳವಳ್ಳಿ ತಾಲೂಕು ದಾಸನದೊಡ್ಡಿ ಗ್ರಾಮದ ಕಲ್ಮನೆ ಕಾಮೇಗೌಡ (86) ಸೋಮ

ಎಪ್ಪತ್ತು ವರ್ಷ ಬ್ರಿಟನ್ ಆಳಿದ ರಾಣಿ ಎಲಿಜಬೆತ್ II ನಿಧನ
ಲಂಡನ್: ವಯೋಸಹಜ ಖಾಯಿಲೆಯಿಂದ, ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಬ್ರಿಟನ್ ರಾಣಿ ಎಲಿಜಬೆತ್-II ತಮ್ಮ 96 ನೇ ವಯಸ್ಸಿನಲ್ಲಿ ಗುರುವಾರ ರಾತ್

ಪಾಂಡವಪುರಮಾಜಿ ಶಾಸಕರಾದ ಕೆ.ಕೆಂಪೇಗೌಡಇನ್ನಿಲ್ಲ
ಮಂಡ್ಯ: ಪಾಂಡವಪುರ;
ಮಾಜಿ ಶಾಸಕ ಕೆ.ಕೆಂಪೇಗೌಡ(96) ವಯೋಸಹಜವಾಗಿ ಬುಧವಾರ ಬೆಳಗ್ಗೆ ನಿಧನರಾಗಿದ್ದಾರೆ.
ಇಂದು ಮಧ್ಯಾಹ್ನ 3 ರಿಂದ 4ಗಂಟೆಯೊಳಗೆ ಸ್ವಗ್ರಾಮ ಪಾಂಡವಪುರ

ಸ್ತಬ್ಧವಾಯ್ತು \'ಉತ್ತರ\'ದ ಧ್ವನಿ: ಸಚಿವ ಉಮೇಶ್ ಕತ್ತಿ ಸವೆಸಿದ ಹಾದಿ
ಬೆಂಗಳೂರು: ರಾಜ್ಯ ಕಂಡ ಅಪರೂಪದ ರಾಜಕಾರಣಿ, ಜನತಾ ಪರಿವಾರ ಮೂಲದ ಹಿರಿಯ ಮುತ್ಸದ್ಧಿ ಉಮೇಶ್ ಕತ್ತಿ (61) ಹೃದಯಾಘಾತದಿಂದ ನಿಧನರಾಗಿದ್ದಾರೆ. ಈ ಮ

ಮಕ್ಕಳಿಗೆ ವಿಷ ಕುಡಿಸಿ ಸಾವಿಗೆ ಶರಣಾದ ರೈತ ಸಂಘದ ಅಧ್ಯಕ್ಷನ ಪತ್ನಿ
ಮಾಗಡಿ: ತನ್ನ ಇಬ್ಬರು ಮಕ್ಕಳಿಗೆ ವಿಷ ಉಣಿಸಿ ತಾಯಿಯೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಹೊಸಪಾಳ್ಯ ಗ್ರಾಮದಲ್ಲಿ ನಡೆದಿದೆ.

ಖ್ಯಾತ ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣ ನಿಧನ
ಬೆಂಗಳೂರು: ಕನ್ನಡದ ಖ್ಯಾತ ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣ ( 83 ) ಗುರುವಾರ ರಾತ್ರಿ ನಗರದ ಜಯದೇವ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಕುಟುಂಬದ ಆಪ್ತ ಮೂಲಗಳು ತಿಳಿಸಿವ

ಚನ್ನಿಗನಹೊಸಹಳ್ಳಿ ಗ್ರಾಮದಲ್ಲಿ ಕಾಡಾನೆಗೆ ಬಲಿಯಾದ ರೈತ ಮಹಿಳೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಭೇಟಿ
ಚನ್ನಪಟ್ಟಣ.ಆ.೦೯: ಮಹಿಳೆಯ ಮೇಲೆ ಕಾಡಾನೆ ದಾಳಿ ನಡೆಸಿ ತುಳಿದು ಸಾಯಿಸಿರುವ ಹೃದಯ ವಿದ್ರಾವಕ ಘಟನೆ ತಾಲೂಕಿನ ಚೆನ್ನಿಗನಹೊಸಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಮೃತ ಮಹಿಳೆಯ

ಬಸ್ ಮತ್ತು ಬೈಕ್ ಅಪಘಾತದಲ್ಲಿ ನಾಲ್ಕು ವರ್ಷದ ಮಗು ಸಾವು
ರಾಮನಗರ: ತಾಲೂಕಿನ ಕೈ ಲಾಂಚ ಹೋಬಳಿಯ ಗೌಡಯ್ಯನದೊ ಡ್ಡಿ ಗ್ರಾಮದ ಸಮೀಪದ ಕೆರೆ ಏರಿ ರಸ್ತೆಯಲ್ಲಿ ಸೋಮವಾರ ಬೆಳಿಗ್ಗೆ ನಡೆದ ಬಸ್ ಮತ್ತು ಬೈಕ್ ಅಪಘಾ
ಪ್ರತಿಕ್ರಿಯೆಗಳು