ಡಾ ಬಾಬು ಜಗಜೀವನ ರಾಂ ನಮ್ಮೆಲ್ಲರಿಗೂ ಆದರ್ಶ ವ್ಯಕ್ತಿ. ತಹಶಿಲ್ದಾರ್ ಮಹೇಂದ್ರ

ಚನ್ನಪಟ್ಟಣ: ಬಾಬು ಜಗಜೀವನ್ ರಾಂ ಅವರು ನಡೆದು ಬಂದ ಹಾದಿಯಲ್ಲಿ ನಾವೆಲ್ಲರೂ ನಡೆಯಬೇಕು ಹಾಗೂ ಅವರ ಆದರ್ಶ, ತತ್ವ ಸಿದ್ದಾಂತಗಳನ್ನು ಮೈಗೊಡಿಸಿಕೊಳ್ಳಬೇಕು, ಅವರ ಆದರ್ಶಗಳು ಇಂದು ಮತ್ತು ಮುಂದೆಯೂ ಸಹ ನಮಗೆಲ್ಲಾ ಮಾರ್ಗದರ್ಶಕವಾಗಿವೆ ಎಂದು ತಹಶೀಲ್ದಾರ್ ಮಹೇಂದ್ರ ಅಭಿಪ್ರಾಯಪಟ್ಟರು.
ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನ್ ರಾಂ ರವರ 37ನೇ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾವು ಆಚರಿಸುವ ಕಾರ್ಯಕ್ರಮಗಳು ಕೇವಲ ಆಚರಣೆಗೆ ಮಾತ್ರ ಸಿಮೀತವಾಗಿರದೆ, ಅವರು ನಮಗಾಗಿ ಬಿಟ್ಟುಹೋದ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರ ಪುಣ್ಯ ಸ್ಮರಣೆಗೆ ಅರ್ಥ ಬರಲಿದೆ ಎಂದು ತಿಳಿಸಿದರು.
ಅಸ್ಪೃಶ್ಯ ರೆಂಬ ಕಾರಣಕ್ಕೆ ಅವಮಾನಿತರಾದರು ಅದನ್ನು ಲೆಕ್ಕಿಸದೆ ಸತತ ಹೋರಾಟ ಹಾಗೂ ಪರಿಶ್ರಮಗಳಿಂದ ಮೇಲೆ ಬಂದು ಇಂದು ನಾವು ನೀವೇಲ್ಲರೂ ಸ್ಮರಿಸುವಷ್ಟರ ಮಟ್ಟಿಗೆ ಸಾಧನೆಗೈದು ಹೋಗಿದ್ದು, ಇದು ನಮಗೆಲ್ಲರಿಗೂ ಸ್ಪೂರ್ತಿಯಾಗಬೇಕೆಂದರು.
ಹಿರಿಯ ದಲಿತ ಮುಖಂಡ ಸಿದ್ದರಾಮಣ್ಣ ಮಾತನಾಡಿ ಬಾಬಾ ಸಾಹೇಬ್ ಅಂತಾ ಕರೆಯುವುದು ಅಂಬೇಡ್ಕರ್ ರವರಿಗೆ ಮಾತ್ರ ಅದೇರೀತಿ ಬಾಬು ಎಂದು ಯಾರನ್ನಾದರೂ ಕರೆಯುವುದಿದ್ದರೇ ಅದು ಜಗಜೀವನ್ ರಾವ್ ಅವರಿಗೆ ಮಾತ್ರ. ದಲಿತರಾಗಿ ಜನಿಸಿ ಇಡೀ ದೇಶದಲ್ಲಿ ದಲಿತರು ಸ್ವಾಭಿಮಾನಿಗಳಾಗಿ ಬದಕುಲು ಪ್ರೆರೇಪಣೆ ನೀಡಿದ ಇಬ್ಬರು ನಾಯಕರು ದೇಶದ ಮಹಾನ್ ಶಕ್ತಿಯೆಂದು ಬಣ್ಣಿಸಿದರು.
ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸರೋಜಮ್ಮ, ಕ್ಷೇತ್ರ ಶಿಕ್ಷಣಾಧಿಕಾರಿ ಮರೀಗೌಡ, ಶಿರಸ್ತೇದಾರ್ ಸೋಮೇಶ್, ದಲಿತ ಮುಖಂಡರುಗಳಾದ ವೆಂಕಟೇಶ್(ಶೇಠು), ಮಂಗಳವಾರಪೇಟೆ ಕಿರಣ್ ಕುಮಾರ್, ಶಿವಮೂರ್ತಿ, ಮಲ್ಲುಂಗೆರೆ ಮಹದೇವು, ರಮೇಶ್, ಅಪ್ಪಗೆರೆ ಕುಮಾರಿ ಸೇರಿದಂತೆ ಇಲಾಖಾ ಅಧಿಕಾರಿಗಳು ಹಾಗು ದಲಿತ ಮುಖಂಡರು ಹಾಜರಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
Recent news in ramanagara-district »

ಸಂಸ್ಕೃತಿ ಎನ್ನುವುದೇ ನಡವಳಿಕೆ ಡಾ ಬಿ ಟಿ ನೇತ್ರಾವತಿಗೌಡ
ಚನ್ನಪಟ್ಟಣ: ಸಂಸ್ಕೃತಿ ಎಂಬುದೇ ನಡವಳಿಕೆ, ಆ ನಡವಳಿಕೆ ಎಂಬುದು ನಮ್ಮ ಮನೆಯಲ್ಲೇ ಆರಂಭವಾಗಬೇಕು, ನಾವು ನಮ್ಮ ಮಕ್ಕಳಿಗೆ ಬಾಲ್ಯದಲ್ಲಿ ಹೇಗೆ ವರ್ತಿಸಬೇಕು, ಯ

೨೯ರಂದು ಕರ್ನಾಟಕ ಬಂದ್, ಪಕ್ಷಾತೀತ, ಜಾತ್ಯಾತೀತ, ಧರ್ಮಾತೀತವಾಗಿ ಒಗ್ಗೂಡಿ ಚನ್ನಪಟ್ಟಣ ಬಂದ್ ಗೆ ಕರೆ
ಚನ್ನಪಟ್ಟಣ: ಮಂಗಳವಾರ ಅಥವಾ ಗುರುವಾರದಂದು ಚನ್ನಪಟ್ಟಣ ಬಂದ್ ಗೆ ಕರೆ ನೀಡಲು ಉದ್ದೇಶಿಸಲಾಗಿದ್ದು, ೨೯ನೇ ತಾರೀಖಿನ ಶುಕ್ರವಾರ ಕರ್ನಾಟಕ ಬಂದ್ ಆಚ

ಸೆ.30 ರವರೆಗೆ ಬೆಳಿಗ್ಗೆ 8 ರಿಂದ ರಾತ್ರಿ 8 ರವರೆಗೆ ಉಪನೋಂದಣಾಧಿಕಾರಿಗಳ ಕಚೇರಿ ಕಾರ್ಯನಿರ್ವಹಣೆ
ಬೆಂಗಳೂರು:ಸೆ.22: ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕೇಂದ್ರ ಮೌಲ್ಯ ಮಾಪನ ಸಮಿತಿಯ ( Valuation Committee) 2023-24ನೇ ಸಾಲಿನಲ್ಲಿ ಸ್ಥಿರಾಸ್ತಿಗಳ ಮಾ

ಅಮೇರಿಕಾದ ಖ್ಯಾತ ವೈದ್ಯ ಡಾ ಹೆಚ್ ಕೆ ಮರಿಯಪ್ಪ ರವರಿಗೆ ಗುರುವಾರ ಅಭಿನಂದನೆ
ಚನ್ನಪಟ್ಟಣ: ತಾಲ್ಲೂಕಿನ ಅವ್ವೇರಹಳ್ಳಿ ಗ್ರಾಮದ ಸ್ವಾತಂತ್ರ್ಯ ಹೋರಾಟಗಾರ ಹೆಚ್ ಕೆ ವೀರಣ್ಣಗೌಡ ರ ಸಹೋದರ ಡಾ.ಎಚ್.ಕೆ. ಮರಿಯಪ್ಪ ಅಭಿನಂದನಾ ಸಮಿತ

ಆಕ್ಷೇಪಣೆಗಳಿದ್ದಲ್ಲಿ ಅರ್ಜಿ ಸಲ್ಲಿಸಿ:
ರಾಮನಗರ; ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗೆ ಸಂಬಂಧಪಟ್ಟ ಉಪ ನೋಂದಣಿ ಕಚೇರಿಗಳ ವ್ಯಾಪ್ತಿಯಲ್ಲಿ ಬರುವ ಸ್ಥಿರಾಸ್ತಿಗಳ ಅಂದಾಜು

ಜಮೀನಿನಲ್ಲಿ ಬೆಳೆಗೆ ನೀರು ಹಾಯಿಸಲು ಹೋಗಿದ್ದ ಮಹಿಳೆ ಶವವಾಗಿ ಪತ್ತೆ
ಚನ್ನಪಟ್ಟಣ: ತಮ್ಮ ಜಮೀನಿನಲ್ಲಿ ಬೆಳೆದಿದ್ದ ಬೆಳೆಗೆ ನೀರು ಹಾಯಿಸಲು ಹೋಗಿದ್ದ ಮಹಿಳೆಯೊಬ್ಬರು ಅವರದೇ ಹೊಲದ ಪೈಪು ಹೂಳಲು ತೆಗೆದಿದ್ದ ಕಾಲುವೆಯಲ್ಲಿ ಶವವಾಗಿ

ಆಹಾರ ಇಲ್ಲದೆ ಎರಡು ದಿನ ಬದುಕಬಹುದು, ನೀರಿಲ್ಲದೆ ಬದುಕುವುದು ಕಷ್ಟ, ತಾಪಂ ಇಓ
ಚನ್ನಪಟ್ಟಣ: ಒಂದೆರಡು ದಿನ ಆಹಾರವಿಲ್ಲದಿದ್ದರೂ ಮನುಷ್ಯ ಬದುಕುತ್ತಾನೆ ಆದರೆ, ನೀರಿಲ್ಲದೇ ಬದುಕಲಾರ. ಆದ್ದರಿಂದ ಜನರಿಗೆ ಶುದ್ಧನೀರು ಪೂರೈಕೆ ಮಾಡುವುದು ನ

ಹುಚ್ಚಯ್ಯನದೊಡ್ಡಿ ಗ್ರಾಮದಲ್ಲಿ ಅದ್ದೂರಿಯಾಗಿ ನಡೆದ ಮಾರಮ್ಮನ ಹಬ್ಬ
ಚನ್ನಪಟ್ಟಣ: ತಾಲ್ಲೂಕಿನ ವಿರುಪಾಕ್ಷಿಪುರ ಹೋಬಳಿಯ ಹುಚ್ಚಯ್ಯನದೊಡ್ಡಿ ಗ್ರಾಮದಲ್ಲಿ ಮಂಗಳವಾರ ಮಾರಮ್ಮನ ಹಬ್ಬ ಭಕ್ತಿಭಾವದಿಂದ ನೆರವೇರಿತು.
<

ರೋಟರಿ ಕ್ಲಬ್ ವತಿಯಿಂದ ಚಾರಣ
ಚನ್ನಪಟ್ಟಣ : ಜಂಜಾಟದ ಬದುಕಿನಲ್ಲಿ ಮನಷ್ಯರಿಗೆ ಮಾನಸಿಕ ಹಾಗೂ ದೈಹಿಕ ಆರೋಗ್ಯ ಎರಡು ಬಹು ಪ್ರಮುಖವಾಗಿದ್ದು ಇವುಗಳನ್ನು ಕಾಪಾಡಿಕೊಳ್ಳುವುದು ಕೋಟಿ ಸಂಪಾದನೆ

ಸೇವೆಯ ಮೂಲಕ ಜೀವನ ಸಾರ್ಥಕ ಪಡಿಸಿಕೊಳ್ಳಿ ನಿವೃತ್ತ ಶಿಕ್ಷಕ ವಸಂತ್ ಕುಮಾರ್ ಅಭಿನಂದನಾ ಸಮಾರಂಭದಲ್ಲಿ ಪ್ರೊ. ಜಯಪ್ರಕಾಶ್ ಗೌಡ ಅಭಿಮತ
ಚನ್ನಪಟ್ಟಣ: ಜನ ಮೆಚ್ಚುವಂತಹ ಹಾಗೂ ಶಾಶ್ವತವಾಗಿ ಉಳಿಯುವಂತಹ ಒಳ್ಳೆಯ ಸೇವಾ ಕೆಲಸಗಳನ್ನು ಮಾಡಿ ನಮ್ಮ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಮಂಡ್ಯ
ಪ್ರತಿಕ್ರಿಯೆಗಳು