Tel: 7676775624 | Mail: info@yellowandred.in

Language: EN KAN

    Follow us :


5ರಂದು ಶಾರದಾಂಬ ದೇವಾಲಯ ಹಾಗೂ ಶಂಕರ ಮಠ ಉದ್ಘಾಟನಾ ಸಮಾರಂಭ 

Posted date: 04 Feb, 2018

Powered by:     Yellow and Red

ರಾಮನಗರ: ಶ್ರೀ ಶಂಕರ ಸೇವಾ ಟ್ರಸ್ಟ್ ವತಿಯಿಂದ ಶಂಕರ ಮಠ ಹಾಗೂ ಶಾರದಾಂಭ ದೇವಾಲಯ ಉದ್ಗಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ದೇವಾಲಯದ ಮ್ಯಾನೇಜಿಂಗ್ ಟ್ರಸ್ಟಿಗಳಾದ ಕೆ.ಎಲ್.ಶೇಶಗಿರಿರಾವ್ ಹೇಳಿದರು.
ನಗರದ ಛತ್ರದ ಬೀದಿಯಲ್ಲಿರುವ ಶ್ರೀರಾಮ ದೇವಾಲಯದ ಹಿಂಭಾಗ ನೂತನವಾಗಿ ನಿರ್ಮಿಸಲಾಗಿರುವ ಶಂಕರ ಮಠ ದೇವಾಲಯದಲ್ಲಿ  ದಿನಾಂಕ 05-02-2018ನೇ ಸೋಮವಾರ ಮತ್ತು 06-02-2018ನೇ ಮಂಗಳವಾರದಂದು ಪ್ರತಿಷ್ಠಾ ವಿಧಿ ಕಾರ್ಯಾಂಗ ಪೂಜಾ ಕೈಂಕರ್ಯಗಳನ್ನು ಹಾಗೂ ದಿನಾಂಕ: 07-02-2018ರ ಬುಧವಾರ ಬೆಳಗ್ಗೆ 9.00 ರಿಂದ 11.15ರ ವರೆಗೆ ಸಲ್ಲುವ ಶುಭ ಪುಷ್ಕರಾಂಶ ಲಗ್ನದಲ್ಲಿ  ಶ್ರೀ ಮಹಾಗಣಪತಿ, ಶ್ರೀ ಶಾರದಾದೇವಿ, ಶ್ರೀ ವಲ್ಲೀ ದೇವಸೇನಾ ಸಮೇತ ಶ್ರೀ ಸುಬ್ರಹ್ಮಣ್ಯಸ್ವಾಮಿ ಹಾಗೂ ಶ್ರೀ ಆದಿಶಂಕರಚಾರ್ಯರವರ ದೇವತಾ ಮೂರ್ತಿಗಳಿಗೆ ಅಷ್ಟಬಂಧನ ಪ್ರತಿಷ್ಟಾಪನೆ ಮತ್ತು ಕುಂಭಾಭಿಷೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಈ ಮಹಾಪುಣ್ಯ ಹಾಗೂ ಪವಿತ್ರ ಕಾರ್ಯಕ್ಕೆ ಎಲ್ಲಾ ಭಕ್ತಾಧಿಗಳು ತನು, ಮನ, ಧನ ಮತ್ತು ಪದಾರ್ಥಗಳನ್ನು ನೀಡುವುದಲ್ಲದೇ ಈ ದೇವರ ಕಾರ್ಯಕ್ಕೆ ಭಾಗವಹಿಸಿ ಶ್ರೀ ಭಗವತ್ ಕೃಪೆಗೆ ಪಾತ್ರರಾಗಬೇಕೆಂದು ತಿಳಿಸಿದರು.
ದಿನಾಂಕ 07-02-2018 ರ ಕಾರ್ಯಕ್ರಮಕ್ಕೆ ಶ್ರೀ ಆದಿಶಂಕರಾಚಾರ್ಯ ಶಾರದಾಲಕ್ಷ್ಮೀನರಸಿಂಹ ಪೀಠಮ್, ಶ್ರೀಮಠ ಹರಿಹರಪುರದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಮದ್‍ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿಗಳವರು ಆಗಮಿಸಿ ಕುಂಭಾಭಿಷೇಕವನ್ನು ನೆರವೇರಿಸಿ ಆಶೀರ್ವಚನ ಅನುಗ್ರಹಿಸಲಿದ್ದಾರೆ.
  ಶಂಕರ ಸೇವಾ ಟ್ರಸ್ಟ್‍ನ ಧರ್ಮದರ್ಶಿಗಳಾದ ಕೆ.ಕೆ.ಮೂರ್ತಿ, ಎ.ಗಣೇಶ್‍ರಾವ್, ಹೆಚ್.ವಿ. ಶೇಷಾದ್ರಿ ಅಯ್ಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತಿಷ್ಠಾಪನ ಕಾರ್ಯಕ್ರಮದ ವಿವಿರ: 
ದಿನಾಂಕ: 05-02-2018ನೇ ಸೋಮವಾರ ‘ಪಂಚಮಿ’ ಸಂಜೆ 6.00 ಗಂಟೆಗೆ ಪ್ರಾರಂಭ: ಮಂಗಳವಾದ್ಯ ಶೃಂಗೇರಿ ಶ್ರೀ ಶಾರದಾದೇವಿ ಅನುಜ್ಞೆ, ಶ್ರೀ ಗುರು ಪ್ರಾರ್ಥನೆ, ಮಹಾಗಣಪತಿ ಪೂಜೆ, ಗಂಗಾಪೂಜೆ, ಗೋಪೂಜೆ, ಪುನ್ಯಾಹ ವಾಚನ, ದೇವನಾಂದಿ, ಪಂಚಗವ್ಯ, ಋತಿಗ್ವರಣ, ರಕ್ಷಾಬಂಧನ, ಮೃತ್ಸಂಗ್ರಹಣ, ಅಂಕುರಾರ್ಪಣ, ವಾಸ್ತುಕಲಶ ಸ್ಥಾಪನೆ, ವಾಸ್ತು ಪೂಜೆ, ಅಗ್ನಿ ಪ್ರತಿಷ್ಠೆ, ವಾಸ್ತುರಾಕ್ಷೋಘ್ನಹೋಮ, ವಾಸ್ತು ಬಲಿ, ಪರ್ಯಗ್ನಿಂಕರಣ, ಗ್ರಾಮಶಾಂತಿ, ಪೂರ್ಣಾಹುತಿ, ಅಷ್ಟಾವಧಾನ ಸೇವೆ, ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ.
ದಿನಾಂಕ: 06-02-2018 ನೇ ಮಂಗಳವಾರ ‘ಷಷ್ಠಿ’ ಬೆಳಿಗ್ಗೆ 8.00 ಗಂಟೆಗೆ ಪ್ರಾರಂಭ:  ಮಂಗಳವಾದ್ಯ, ವೇದ ಪಾರಾಯಣ, ಗಣಪತಿ ಪ್ರಾರ್ಥನೆ, ಮಹಾಸಂಕಲ್ಪ, ಕಲಶಸ್ಥಾಪನೆ, ಅಗ್ನಿ ಪ್ರತಿಷ್ಠೆ, ಮಹಾಗಣಪತಿ ಮೋದಕ ಹೋಮ, ನವಗ್ರಹ ಸಹಿತ ಮೃತ್ಯುಂಜಯ ಹೋಮ, ನಕ್ಷತ್ರಹೋಮ, ಮಹಾಲಕ್ಷ್ಮೀಹೋಮ, ಶ್ರೀ ಆದಿಶಂಕರಾಚಾರ್ಯರ ಗುರು ಮೇಧಾದಕ್ಷಿಣಾಮೂರ್ತಿ ಹೋಮ, ಧನ್ವಂತರಿ ಹೋಮ, ಉಕ್ತ ಹೋಮಗಳು, ಪೂರ್ಣಾಹುತಿ, ವಿಗ್ರಹಗಳಿಗೆ ಬಿಂಬಶುದ್ಧಿ ಜಲಾಧಿವಾಸ, ಕ್ಷೀರಾಧಿವಾಸ, ಧಾನ್ಯಾಧಿವಾಸ, ಅಷ್ಟಾವಧಾನಸೇವೆ ಹಾಗೂ ಮಹಾಮಂಗಳಾರತಿ ಪ್ರಸಾದ ವಿನಿಯೋಗ. 
ಸಂಜೆ 5.30 ಗಂಟೆಗೆ ಪ್ರಾರಂಭ, ಮಂಗಳವಾದ್ಯ, ಶ್ರೀ ಲಲಿತಾಸಹಸ್ರನಾಮ ಕುಂಕುಮಾರ್ಚನೆ, ವೇದಪಾರಾಯಣ, ಮಂಟಪಾರ್ಚನೆ, ವೇದಿಕಾರ್ಚನೆ, ಶ್ರೀ ನಾಗಸುಬ್ರಹ್ಮಣ್ಯೇಶ್ವರ ಸರ್ಪ ಶಾಂತಿ ಹೋಮ, ಸರ್ಪಸೂಕ್ತ ಹೋಮ, ಸ್ಕಂದ ಹೋಮ, ಶ್ರೀ ವಿಜಯಲಕ್ಷ್ಮೀ ಸಮೇತ ಮಹಾಸುದರ್ಶನ ಹೋಮ, ದುರ್ಗಾ ಹೋಮ, ಶ್ರೀ ಶ್ರದ್ಧಾಮೇಧಾ ಸಮೇತ ಶ್ರೀ ಸರಸ್ವತಿ ಹೋಮ, ಹಾಗೂ ಪರಿವಾರ ದೇವತೆಗಳ ಮೂಲಮಂತ್ರ, ಮಾಲಾಮಂತ್ರ, ವೇದಮಂತ್ರ, ಅಸ್ತ್ರಮಂತ್ರ ಹೋಮಗಳು, ಪೂರ್ಣಾಹುತಿ, ಪುಷ್ಪ, ಫಲಾಧಿವಾಸ, ಶಯ್ಯಾದಿವಾಸ, ಅಷ್ಟಾವಧಾನ ಸೇವೆ, ಮಹಾಮಂಗಳಾರತಿ ಹಾಗೂ ತೀರ್ಥಪ್ರಸಾಧ ವಿನಿಯೋಗ.
ದಿನಾಂಕ: 07-02-2018ನೇ ಬುಧವಾರ ‘ಸಪ್ತಮಿ’ ಬೆಳಿಗ್ಗೆ 6 ಗಂಟೆಗೆ: ಮಂಗಳವಾಧ್ಯ, ವೇದಪಾರಾಯಣ, ಗಾಯಶಾಲ ಪೂಜೆಗಳು, ಮಂಟಪಾರ್ಚನೆ, ವೇದಿಕಾರ್ಚನೆ, ಅಗ್ನಿ ಕಾರ್ಯ, ನಾಡಿ ಸಂಧಾನ ಪೂರ್ವಕ ಮೂರ್ತಿ ಹೋಮ, ನೇತ್ರೋನ್ಮಿಲನ, ತತ್ವಹೋಮ, ಕಳಾಹೋಮ, ಮೂಲಮಂತ್ರ ಹೋಮಗಳು, ಉಕ್ತಹೋಮಗಳು, ಸ್ಪರ್ಶಾಹುತಿ, ಮಹಾ ಪೂರ್ಣಾಹುತಿ, ಯಂತ್ರಾದಾನ ಪೂರ್ವಕ ಕಲಶ ವಿಸರ್ಜನೆ. 9.00 ರಿಂದ 11.15 ರ ವರೆಗೆ ಸಲ್ಲುವ ಶುಭ ಪುಷ್ಕರಾಂಶ ಲಗ್ನದಲ್ಲಿ ಪರಿವಾರ ಮೂರ್ತಿಗಳಿಗೆ ಹಾಗೂ ಶ್ರೀ ಶಾರದಾ ಅಮ್ಮನವರಿಗೆ ಮಹಾ ಕುಂಭಾಭಿಷೇಕ, ಫಲಪಂಚಾಮೃತ ಅಭಿಷೇಕ, ಅಲಂಕಾರ ಸೇವೆ, ಅಮ್ಮನವರಿಗೆ ಮಾಂಗಲ್ಯ ಸಮರ್ಪಣೆ, ಪುಷ್ಪಾರ್ಚನೆ, ಧೇನು, ಧಾನ್ಯ, ದೀಪ, ದರ್ಪಣದರ್ಶನ, ಗೋಪೂಜೆ, ಷೋಡಷೋಪಚಾರ ಪೂಜೆ, ಅಷ್ಟಾವಧಾನ ಸೇವೆ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ.
ಈ ಮೇಲ್ಕಂಡ ಎಲ್ಲಾ ಕಾರ್ಯಕ್ರಮಗಳನ್ನು ಭಕ್ತವೃಂದ ಸಹಕಾರದೊಂದಿಗೆ ಶ್ರೀ ಶಂಕರಸೇವಾ ಟ್ರಸ್ಟ್‍ವತಿಯಿಂದ ಲೋಕ ಕಲ್ಯಾಣಕ್ಕಾಗಿ ಏರ್ಪಡಿಸಲಾಗಿದೆ. ಈ ಮಹಾಪುಣ್ಯ ಹಾಗೂ ಪವಿತ್ರ ಕಾರ್ಯಕ್ಕೆ ಎಲ್ಲಾ ಭಕ್ತಾಧಿಗಳು ತನು, ಮನ, ಧನ ಮತ್ತು ಪದಾರ್ಥಗಳನ್ನು ನೀಡುವುದಲ್ಲದೇ ಈ ಕಾರ್ಯಕ್ರಮಕ್ಕೆ ಭಾಗವಹಿಸಿ ಶ್ರೀ ಭಗವತ್ ಕೃಪೆಗೆ ಪಾತ್ರರಾಗಬೇಕಾಗಿ ಟ್ರಸ್ಟ್‍ನ ಕಾರ್ಯನಿರ್ವಾಹಕ ಧರ್ಮದರ್ಶಿಗಳಾದ ಕೆ.ಎಲ್.ಶೇಶಗಿರಿರಾವ್ ವಿನಂತಿಸಿದ್ದಾರೆ.
 

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ

ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)

ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ

ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.

ಚನ್ನಪಟ್ಟಣ :  ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ

ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು

ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ

ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್

ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ

ರಾಮನಗರ, ಫೆ. 16  ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ

ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ

ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ

ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ

ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು,  ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ

ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು

ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ

ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್

ರಾಮನಗರ, ಫೆ. 12:   ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ

ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್


ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ

Top Stories »  


Top ↑