Tel: 7676775624 | Mail: info@yellowandred.in

Language: EN KAN

    Follow us :


ನಾಡು ನುಡಿ ಯ ಕೀಳರಿಮೆ ಪರದೇಶಿಗಳಿಂದಲ್ಲ, ನಮ್ಮಿಂದಲೇ ಆಗಿದೆ. ಉಪನ್ಯಾಸಕ ದೇವರಾಜು

Posted Date: 01 Nov, 2019

ನಾಡು ನುಡಿ ಯ ಕೀಳರಿಮೆ ಪರದೇಶಿಗಳಿಂದಲ್ಲ, ನಮ್ಮಿಂದಲೇ ಆಗಿದೆ. ಉಪನ್ಯಾಸಕ ದೇವರಾಜು

ಚನ್ನಪಟ್ಟಣ: ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ, ನಾಡು ನುಡಿ ಜಲ ನಮ್ಮ ಹಕ್ಕು, ನಾವು ಕೊಡುಗೈ ದಾನಿಗಳೇ ವಿನಹ ಬೇಡಿ ಪಡೆಯುವರಲ್ಲ, ಕನ್ನಡ ನಾಡಿಗಾಗಿ ಹೋರಾಟ ಮಾಡಿದ ಮಹನೀಯರ ಋಣವನ್ನು ಇಂದಿಗೂ ತೀರಿಸಲಾಗಿಲ್ಲ. ಯಾರೋ ಪರದೇಶಿಗಳಿಂದ ನಮ್ಮ ಭಾಷೆ ಸೊರಗಿಲ್ಲ. ನಮ್ಮಿಂದ, ಕುರುಡು ಕಾಂಚಾಣಕ್ಕೆ ಕೈ ಒಡ್ಡುವ ಕೆಲ ಕನ್ನಡಿಗರಿಂದಲೇ ನಾಡು ನುಡಿಗೆ ಮಾರಕವಾಗಿದೆ ಎಂದು ಅರಳಾಳುಸಂದ್ರ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಆರ್ ದೇವರಾಜು ಅಭಿಪ್ರಾಯಪಟ್ಟರು.

ಅವರು ಇಂದು ಸರ್ಕಾರಿ ಬಾಲಕರ ಕಾಲೇಜು ಆವರಣದಲ್ಲಿ ತಾಲ್ಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ೬೪ ನೇ ಕನ್ನಡ ರಾಜ್ಯೋತ್ಸವ ದಿನಾಚರಣೆಯಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.


ಕರ್ನಾಟಕದ ಏಕೀಕರಣಕ್ಕೆ ರಾಜ್ಯದ ಎರಡನೇ ಮುಖ್ಯಮಂತ್ರಿಗಳಾಗಿದ್ದ ಕೆಂಗಲ್ ಹನುಮಂತಯ್ಯ ನವರ ಕೊಡುಗೆ ಅಪಾರವಿದೆ, ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಕುಮಾರವ್ಯಾಸ ನ ಕರ್ಣಾಟ ಭಾರತ ಕಥಾಮಂಜರಿ ಗ್ರಂಥವನ್ನು ಸರ್ಕಾರವೇ ಮುದ್ರಿಸುವ ಮೂಲಕ ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಮುನ್ನುಡಿ ಬರೆದರು.


೧೯೨೪ ರ ಬೆಳಗಾವಿ ಅಧಿವೇಶನದಲ್ಲಿ ಗಾಂಧೀಜಿಯವರ ಮುಂದೆ ಹುಯಿಲಗೋಳ ನಾರಾಯಣರಾಯರು ಬರೆದ ಉದಯವಾಗಲಿ ನಮ್ಮ ಚಲುವ ಕನ್ನಡ ನಾಡು ಎಂಬ ಗೀತೆಯನ್ನು ಮೊಳಗಿಸಲಾಯಿತು, ಇದರಿಂದ ೧೯೫೬ ರಲ್ಲಿ ಅಖಂಡ ಕರ್ನಾಟಕ ಉದಯವಾದರು ಭಾಷೆ ಮಾತ್ರ ಬೆಳವಣಿಗೆ ಕಾಣಲೇ ಇಲ್ಲ. ಜಾಗತೀಕರಣ, ಮುಕ್ತ ಆರ್ಥಿಕ ನೀತಿ ಯಂತಹ ಕಾನೂನುಗಳು ಬಡವರ, ರೈತರ ಅವನತಿಗೆ ಕಾರಣವಾದವು ಎಂದು ವಿಷಾದಿಸಿದರು.


ಕಳೆದ ೬೪ ವರ್ಷಗಳೂ ಸಹ ನಮ್ಮನ್ನು ನಮ್ಮವರೇ ಅರಸರಾಗಿ ಆಳಿದ್ದಾರೆ, ನೆಲ, ಜಲ ಮತ್ತು ಭಾಷೆಯ ಬೆಳವಣಿಗೆ ಆಗಲೇ ಇಲ್ಲ, ಸಮಸ್ಯೆಗಳು, ಬಿಕ್ಕಟ್ಟುಗಳ ಪರಿಹಾರವಾಗಲೇ ಇಲ್ಲ. ಆಳುವವರ ಜೊತೆಗೆ ನಾವು ಪೈಪೋಟಿಗೆ ಬಿದ್ದು ಮಕ್ಕಳನ್ನು ಇಂಗ್ಲಿಷ್ ಎಂಬ ಕನಿಷ್ಠ ಕೂಪಕ್ಕೆ ತಳ್ಳುತ್ತಿದ್ದೇವೆ, ಕನ್ನಡವನ್ನು ಉಳಿಸಲು ಎಲ್ಲಾ ವರ್ಗದವರು ಒಂದಾದರೆ ಮಾತ್ರ ಸಾಧ್ಯ ಎಂದರು.


ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತಾಲ್ಲೂಕು ಪಂಚಾಯತಿ ಅಧ್ಯಕ್ಷ ಹರೂರು ರಾಜಣ್ಣ  ಅಖಂಡ ಕರ್ನಾಟಕವನ್ನು ನಿರ್ಮಾಣ ಮಾಡಲು ಸಾಹಿತಿಗಳು, ಕೆಲ ಮುತ್ಸದ್ದಿ ರಾಜಕಾರಣಿಗಳು, ಕನ್ನಡದ ಕಟ್ಟಾಳುಗಳ ಪರಿಶ್ರಮದಿಂದಾಗಿ ನಾವು ಸಮೃದ್ಧ ಕರ್ನಾಟಕದಲ್ಲಿ ಇದ್ದೇವೆ. ಅಂದಿನ ಹೋರಾಟಕ್ಕೂ ಇಂದಿನ ಹೋರಾಟಕ್ಕೂ ಸಾಮ್ಯವೇ ಇಲ್ಲದಾಗಿದೆ, ನಾಡು ನುಡಿಯ ವಿಷಯ ಬಂದಾಗ ನಾಡಿನವರೆಲ್ಲರೂ ಒಂದಾಗಬೇಕು. ಇಂಗ್ಲಿಷ್ ಭಾಷೆಯನ್ನು ವ್ಯವಹಾರಿಕವಾಗಿ ಬಳಸಿಕೊಂಡು ಮಾತೃಭಾಷೆಯನ್ನು ಹೃದಯಲ್ಲಿಟ್ಟು ಪೂಜಿಸಬೇಕು. ಪ್ರತಿಯೊಬ್ಬ ಕನ್ನಡಿಗನೂ ಇದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.


ಅಧ್ಯಕ್ಷತೆ ವಹಿಸಿ ಮಾತನಾಡಿದ ದಂಡಾಧಿಕಾರಿ ಸುದರ್ಶನ್ ರವರು ಕನ್ನಡ ನಮ್ಮ ಜನ್ಮದಾತೆ ಇದ್ದಂತೆ, ಆಕೆಗೆ ಸಣ್ಣ ಪೆಟ್ಟಾದರೂ ಮಕ್ಕಳು ಹೇಗೆ  ನೊಂದುಕೊಳ್ಳುತ್ತಾರೋ ಹಾಗೆ ನಮ್ಮ ಭಾಷೆ ಗೆ ಕೊಂಚ ನೋವಾದರೂ ಸಹಿಸದೇ ನಾಡು ನುಡಿಯ ರಕ್ಷಣೆಗೆ ಬದ್ದರಾಗಿರಬೇಕೆಂದರು.


ಇದೇ ವೇಳೆ ತಾಲ್ಲೂಕಿನ ಹಲವು ಸ್ತರಗಳಲ್ಲಿ ದುಡಿದ ಸಮಾಜ ಸೇವಕರಾದ ದೊಡ್ಡಯ್ಯ, ಕೆಂಚಮ್ಮ, ತ್ರಿಪುರಸುಂದರ ಮತ್ತು ಪೂರ್ಣಿಮಾ ರವರನ್ನು ಸನ್ಮಾನಿಸಲಾಯಿತು. ಸಾಧನೆಗೈದ ಶಾಲಾ ಮಕ್ಕಳನ್ನು ಅಭಿನಂದಿಸಲಾಯಿತು. ಹಲವಾರು ಶಾಲಾ ಮಕ್ಕಳು ವಿವಿಧ ವೇಷ ಭೂಷಣಗಳೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು.


ಕಾರ್ಯಕ್ರಮದಲ್ಲಿ ಕುಕ್ಕುಟ ಮಹಾಮಂಡಳಿಯ ಅಧ್ಯಕ್ಷ ಡಿ ಕೆ ಕಾಂತರಾಜು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿಂ ಲಿಂ ನಾಗರಾಜು, ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಗೋವಿಂದಳ್ಳಿ‌ ನಾಗರಾಜು, ಎಪಿಎಂಸಿ ಅಧ್ಯಕ್ಷ ಯಾಲಕ್ಕೀಗೌಡ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹೆಚ್ ಎಸ್ ಚಂದ್ರಶೇಖರ್, ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜು, ಪೌರಾಯುಕ್ತ ಶಿವಾಂಕರಿಗೌಡ, ರಂಗನಾಥ ಸೇರಿದಂತೆ ಅನೇಕ ಗಣ್ಯರು ಮತ್ತು ಅಧಿಕಾರಿಗಳು ಭಾಗವಹಿಸಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಹಾಲಿನ ಟ್ಯಾಂಕರ್ ಗೆ ಬಾಲಕ ಬಲಿ
ಹಾಲಿನ ಟ್ಯಾಂಕರ್ ಗೆ ಬಾಲಕ ಬಲಿ

ಚನ್ನಪಟ್ಟಣ:ಮೇ/೨೪/೨೦/ಭಾನುವಾರ. ಇಂದು ಇಡೀ ರಾಜ್ಯವೇ ಸ್ತಬ್ದವಾಗಿದ್ದು, ಅಗತ್ಯ ಸೇವೆಗಳ ವಾಹನಗಳಿಗೆ ಮಾತ್ರ ಅವಕಾಶವಿದ್ದ ಸಂದರ್ಭದಲ್ಲಿಯೂ ಸಹ ಹ

ಪ್ರತಿ ವರ್ಷದ ಮಳೆಗಾಲದಲ್ಲೂ ಗಿಡ ನೆಡುತ್ತಾರೆ. ನೆಟ್ಟ ಗಿಡಗಳು ಏನಾಗುತ್ತವೇ ?
ಪ್ರತಿ ವರ್ಷದ ಮಳೆಗಾಲದಲ್ಲೂ ಗಿಡ ನೆಡುತ್ತಾರೆ. ನೆಟ್ಟ ಗಿಡಗಳು ಏನಾಗುತ್ತವೇ ?

ಚನ್ನಪಟ್ಟಣ:ಮೇ/೨೩/೨೦/ಶನಿವಾರ. ತಾಲ್ಲೂಕಿನ ಸಾಮಾಜಿಕ ಅರಣ್ಯ ಇಲಾಖೆ ವತಿಯಿಂದ ಪ್ರತಿ ವರ್ಷದ ಮಳೆಗಾಲದಲ್ಲಿಯೂ ರಸ್ತೆ ಬದಿ, ಗೋಮಾಳ, ಕೆಲ ಉದ್ಯಾನ

ಕೂಡ್ಲೂರು ದೊಡ್ಡಮಳೂರು ನಡುವೆ ಚಿರತೆಯ ಓಡಾಟದ ಹೆಜ್ಜೆ ಗುರುತು ಗ್ರಾಮಸ್ಥರಲ್ಲಿ ಆತಂಕ
ಕೂಡ್ಲೂರು ದೊಡ್ಡಮಳೂರು ನಡುವೆ ಚಿರತೆಯ ಓಡಾಟದ ಹೆಜ್ಜೆ ಗುರುತು ಗ್ರಾಮಸ್ಥರಲ್ಲಿ ಆತಂಕ

ಚನ್ನಪಟ್ಟಣ:ಮೇ/೨೩/೨೦/ಶನಿವಾರ. ರಾಮನಗರ ಜಿಲ್ಲೆಯಲ್ಲಿ ಚಿರತೆಯ ಹಾವಳಿ ಹೆಚ್ಚಾಗಿದ್ದು ಮಾಗಡಿ ತಾಲ್ಲೂಕಿನಲ್ಲಿ ಇಬ್ಬರು ಬಲಿಯಾಗಿದ್ದು, ಇದು ಮಾಸ

ಸಹಜ ಸ್ಥಿತಿಯತ್ತ ಕೈಗಾರಿಕೆಗಳು: ಜಗದೀಶ ಶೆಟ್ಟರ್
ಸಹಜ ಸ್ಥಿತಿಯತ್ತ ಕೈಗಾರಿಕೆಗಳು: ಜಗದೀಶ ಶೆಟ್ಟರ್

ರಾಮನಗರ:ಮೇ/೨೨/೨೦/ಶುಕ್ರವಾರ. ರಾಜ್ಯದಲ್ಲಿ ಲಾಕ್‌ಡೌನ್ ಬಳಿಕ ಸ್ಥಗಿತಗೊಂಡಿದ್ದ ಕೈಗಾರಿಕೆಗಳು ಸಹಜ ಸ್ಥಿತಿಯತ್ತ ಮರುಳುತ್ತಿದ್ದು, ಇನ್ನೊಂದೆರಡ

ಹದಿನೈದು ಕೋಟಿ ರೂ. ವೆಚ್ಚದಲ್ಲಿ ಕೆಂಪೇಗೌಡರ ಸಮಾಧಿ ಅಭಿವೃದ್ಧಿ, ಡಾ ಅಶ್ವಥನಾರಾಯಣ
ಹದಿನೈದು ಕೋಟಿ ರೂ. ವೆಚ್ಚದಲ್ಲಿ ಕೆಂಪೇಗೌಡರ ಸಮಾಧಿ ಅಭಿವೃದ್ಧಿ, ಡಾ ಅಶ್ವಥನಾರಾಯಣ

ರಾಮನಗರ:ಮೇ/೨೨/೨೦/ಶುಕ್ರವಾರ. ಮಾಗಡಿ ತಾಲ್ಲೂಕಿನ ಕೆಂಪಾಪುರದಲ್ಲಿರುವ ನಾಡಪ್ರಭು ಕೆಂಪೇಗೌಡರ ಸಮಾಧಿಯನ್ನು ಹದಿನೈದು ಕೋಟಿ ರೂ. ವೆಚ್ಚದಲ್ಲಿ ಅಭ

ಕಮೀಷನರ್ ಸಾಹೆಬ್ರೇ ಇದಕ್ಕೆ ಮುಕ್ತಿ ಯಾವಾಗ ?ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟ ಬೇಡ
ಕಮೀಷನರ್ ಸಾಹೆಬ್ರೇ ಇದಕ್ಕೆ ಮುಕ್ತಿ ಯಾವಾಗ ?ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟ ಬೇಡ

ಚನ್ನಪಟ್ಟಣ:ಮೇ/೨೨/೨೦/ಶುಕ್ರವಾರ. ನಗರದ ನಗರಸಭೆ ವ್ಯಾಪ್ತಿಯ ಕೆಂಪೇಗೌಡ ಬಡಾವಣೆ ಹಾಗೂ ಸಿಎಂಸಿ ಲೇಔಟ್ ನಡುವೆ ನಾಲ್ಕು ಕೂಡು ರಸ್ತೆಯಿದ್ದು, ಈ ಕೂಡು ರಸ್ತೆ

ಮೇ 22 ರ ಶುಕ್ರವಾರ ಸಚಿವ ಜಗದೀಶ್ ಶೆಟ್ಟರ್ ರವರಿಂದ ಜಿಲ್ಲಾ ಪ್ರವಾಸ
ಮೇ 22 ರ ಶುಕ್ರವಾರ ಸಚಿವ ಜಗದೀಶ್ ಶೆಟ್ಟರ್ ರವರಿಂದ ಜಿಲ್ಲಾ ಪ್ರವಾಸ

ರಾಮನಗರ:ಮೇ/೨೧/೨೦/ಗುರುವಾರ. ಬೃಹತ್, ಮಧ್ಯಮ ಕೈಗಾರಿಕಾ ಹಾಗೂ ಸಾರ್ವಜನಿಕ ಉದ್ದಿಮೆ ಸಚಿವರಾದ ಜಗದೀಶ್ ಶೆಟ್ಟರ್ ಅವರು ಮೇ ೨೧ ರ ಶುಕ್ರವಾರ ರಾಮನ

ಬಮೂಲ್ ನಿಂದ ಆಶಾ ಕಾರ್ಯಕರ್ತೆಯರಿಗೆ ಧನ ಮತ್ತು ಆಹಾರ ಕಿಟ್ ವಿತರಿಸಿದ ಜಯಮುತ್ತು
ಬಮೂಲ್ ನಿಂದ ಆಶಾ ಕಾರ್ಯಕರ್ತೆಯರಿಗೆ ಧನ ಮತ್ತು ಆಹಾರ ಕಿಟ್ ವಿತರಿಸಿದ ಜಯಮುತ್ತು

ಚನ್ನಪಟ್ಟಣ:ಮೇ/೨೦/೨೦/ಬುಧವಾರ. ಬಮೂಲ್ ವತಿಯಿಂದ ಚನ್ನಪಟ್ಟಣ ತಾಲ್ಲೂಕಿನ ೧೯೬ ಜನ ಆಶಾ ಕಾರ್ಯಕರ್ತೆಯರಿಗೆ ತಲಾ ಮೂರು ಸಾವಿರ ರೂಪಾಯಿಗಳ ಚೆಕ್‌ ಅ

ನಗರಸಭಾಧಿಕಾರಿಗಳೇ ಒಮ್ಮೆ ಸಾರ್ವಜನಿಕ ಕಕ್ಕಸು ಮನೆಯನ್ನು ನೀವು ಉಪಯೋಗಿಸಿ, ನಂತರ ಸಾರ್ವಜನಿಕರಿಗೆ ಬಿಡಿ !?
ನಗರಸಭಾಧಿಕಾರಿಗಳೇ ಒಮ್ಮೆ ಸಾರ್ವಜನಿಕ ಕಕ್ಕಸು ಮನೆಯನ್ನು ನೀವು ಉಪಯೋಗಿಸಿ, ನಂತರ ಸಾರ್ವಜನಿಕರಿಗೆ ಬಿಡಿ !?

ಚನ್ನಪಟ್ಟಣ:ಮೇ/೨೦/೨೦/ಮಂಗಳವಾರ.ನಗರಸಭೆಯ ಕಮೀಷನರ್ ಸಾಹೇಬ್ರೇ ನೀವು ಮತ್ತು ನಿಮ್ಮ ಅಧಿಕಾರಿಗಳು ಒಮ್ಮೆಯಾದರೂ, ಕೇವಲ ಒಂದೇ ಒಂದು ಬಾರಿಯದರೂ ನಿಮ್ಮದೇ

ವರ್ಗಾವಣೆಗೊಂಡ ನ್ಯಾಯಾಧೀಶರುಗಳಿಗೆ ವಕೀಲರ ಸಂಘದಿಂದ ಬೀಳ್ಕೊಡುಗೆ
ವರ್ಗಾವಣೆಗೊಂಡ ನ್ಯಾಯಾಧೀಶರುಗಳಿಗೆ ವಕೀಲರ ಸಂಘದಿಂದ ಬೀಳ್ಕೊಡುಗೆ

ಚನ್ನಪಟ್ಟಣ:ಮೇ/೧೯/೨೦/ಸೋಮವಾರ. ಇಲ್ಲಿನ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿದ್ದ ನ್ಯಾಯಾಧೀಶರಾದ ನಟರಾಜು ಮತ್ತು ಅನ್ನಪೂಣೇಶ್ವ

Top Stories »  


Top ↑