Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೧೮೮: ನಿಜವಾದ ದಾನ (ಚಂದಾ) ಎಂದರೇನು ?

Posted date: 24 Mar, 2020

Powered by:     Yellow and Red

ತಾಳೆಯೋಲೆ ೧೮೮: ನಿಜವಾದ ದಾನ (ಚಂದಾ) ಎಂದರೇನು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*


ನಿಜವಾದ ದಾನ (ಚಂದಾ) ಎಂದರೇನು ?


ನಾವು ವಸ್ತುಗಳನ್ನಾಗಲಿ, ಧನವನ್ನಾಗಲಿ ಬದಲಾಗಿ ಇತರರಿಗೆ ಕೊಡುತ್ತಿರುತ್ತೇವೆ. ಇದು ನಮಗೆ ಮತ್ತೆ ಬರುತ್ತದೆ. ಆದರೆ ಚಂದಾ ರೂಪದಲ್ಲಿ ( ಸಹಾಯ ) ಕೊಟ್ಟಿದ್ದು, ನಮಗೆ ಮತ್ತೆ ಬರುತ್ತದೆಂಬ ಭಾವನೆಯಿಂದ ನಾವು ಕೊಡುವುದಿಲ್ಲ. ಇದೊಂದು ವಿಧವಾದ ದಾನ. ಕಷ್ಟಗಳಲ್ಲಿ ಇರುವವನಿಗೆ ಸ್ವಲ್ಪ ಹಣವನ್ನು ಸಹಾಯ ಮಾಡಿ, ಮತ್ತೆ ಆತನು ಯಾವಾಗ ಕೊಡುವನೋ ಎಂದು ಎದುರು ನೋಡುವುದು ಸಹಾಯ ಮಾಡಿದ ಹಾಗೆಯೋ ಅಥವಾ ದಾನ ಮಾಡಿರುವ ಹಾಗೆಯೇ ಅಲ್ಲ.


*ಬಲಗೈ ದಾನ ಮಾಡಿದರೆ ಎಡಗೈಗೆ ಗೊತ್ತಾಗದೆ ಕೊಡುವುದು ಒಳ್ಳೆಯ ಲಕ್ಷಣ ಎಂದು ಹೇಳುವರು.* ಆದ್ದರಿಂದ ಸ್ವಕೀರ್ತಿಗಾಗಿಯೋ ಇಲ್ಲವೇ ಆ ದಾನಮಾಡುವುದರಿಂದ ತನಗೆ ಇನ್ಯಾವುದೋ ರೀತಿಯ ಸಹಾಯವಾಗುವುದೆಂದೋ ಮಾಡುವ ದಾನ ಅಲ್ಪವಾದುದು. ಹೀಗೆ *ಕೆಲವರು ತಮ್ಮ ದಾನಗುಣ ಹತ್ತು ಜನಕ್ಕೆ ತಿಳಿಯಬೇಕೆಂದು ದಾನ ಮಾಡುವರು. ಆದರೆ ಇಂತಹ ದಾನದಲ್ಲಿ ನೈತಿಕತೆ ಇರುವುದಿಲ್ಲ. ಈ ರೀತಿಯ ಸಹಾಯವನ್ನು ಹೊಂದಿದವನು ಸಹ ಉದ್ಧಾರವಾಗುವುದಿಲ್ಲ.* 


ದಾನ ಮಾಡುವುದರಿಂದ ಕೀರ್ತಿಯನ್ನು ವಶಪಡಿಸಿಕೊಳ್ಳಬಹುದೆಂದು ಆಲೋಚನೆ ಸರಿಯಾದುದಲ್ಲ. ಧಾರ್ಮಿಕವಾಗಿ ಪರಿಪಕ್ವತೆಯನ್ನು ಹೊಂದಿದವರು ಇತರರಿಗೆ ದಾನ ಮಾಡುವ ಅವಕಾಶವನ್ನು ಭಗವಂತನ ಕೃಪೆಯೆಂದು ಭಾವಿಸು ವರು. ಇಲ್ಲದವನಿಗೆ ಇರುವವನು ತನ್ನ ಶಕ್ತಾನುಸಾರ ಮತ್ತೆ ಏನನ್ನೂ ಆಶಿಸದೆ ಸಹಕರಿಸಬೇಕೆಂದು ನಮ್ಮ ಭಾರತೀಯ ಸಂಪ್ರದಾಯ ಹೇಳುತಿದೆ.


ಮತ್ತೆಲ್ಲಿಯೂ ಇಲ್ಲದ ರೀತಿಯಾಗಿ *ನಮ್ಮ ದೇಶದಲ್ಲಿ ಹೆಚ್ಚು ತ್ಯಾಗ ಧಣಿಗಳು, ದಾತರು ಇರುವರು. ಕರ್ಣ, ಶಿಭಿ ಚಕ್ರವರ್ತಿ, ಮಹಾಬಲಿ ಮುಂತಾದ ದಾನವೀರರೆಷ್ಟೋ ತಮ್ಮ ದಾನ ಗುಣದಿಂದ ಶಾಶ್ವತ ಕೀರ್ತಿವಂತರಾಗಿ ಮುಕ್ತಿಧಾಮವನ್ನು ಸೇರಿರುವರೆಂದು ನಮ್ಮ ಪುರಾಣ ಕತೆಗಳು ಹೇಳುತ್ತಿವೆ.* ಅವರೀಗ ಇಲ್ಲದಿದ್ದರೂ ಅವರ ಪ್ರೇರಣೆ ಧಾತು ಗುಣ ಉಳ್ಳವರನ್ನು ಪ್ರಭಾವಿತರನ್ನಾಗಿ ಮಾಡುತ್ತಿದೆ. ಆದ್ದರಿಂದ ಏನೂ ಆಶಿಸದೆ ಸಹಾಯ ಅಗತ್ಯವಿರುವವರಿಗೆ ದಾನ ಧರ್ಮಗಳನ್ನು ಮಾಡುವುದು ಒಂದು ಮಹೋನ್ನತವಾದ ಸತ್ಯವಾದ ಸುಕರ್ಮ ಆಗುತ್ತದೆ. ನಾವು ದಾನ ಮಾಡುವಾಗ ಯೋಚಿಸಿ ಮಾಡಬೇಕು. ದಾನವು ಅಪಾತ್ರ ದಾನವಾಗಬಾರದು.


*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ

ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)

ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ

ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.

ಚನ್ನಪಟ್ಟಣ :  ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ

ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು

ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ

ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್

ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ

ರಾಮನಗರ, ಫೆ. 16  ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ

ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ

ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ

ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ

ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು,  ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ

ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು

ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ

ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್

ರಾಮನಗರ, ಫೆ. 12:   ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ

ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್


ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ

Top Stories »  


Top ↑