Tel: 7676775624 | Mail: info@yellowandred.in

Language: EN KAN

    Follow us :


ಖಾಲಿ ಹೊಡೆದ ಹೆದ್ದಾರಿ, ಹಬ್ಬದ ಖರೀದಿಗೆ ಪೇಟೆಗೆ ಮುಗಿಬಿದ್ದ ಗ್ರಾಹಕರು

Posted Date: 24 Mar, 2020

ಖಾಲಿ ಹೊಡೆದ ಹೆದ್ದಾರಿ, ಹಬ್ಬದ ಖರೀದಿಗೆ ಪೇಟೆಗೆ ಮುಗಿಬಿದ್ದ ಗ್ರಾಹಕರು

ಚನ್ನಪಟ್ಟಣ: ಕರ್ನಾಟಕ ಲಾಕ್ ಡೌನ್ ಹಿನ್ನೆಲೆಯಲ್ಲಿ‌ ಬಿಗಿ ಕ್ರಮ ವಹಿಸಿರುವ ತಾಲ್ಲೂಕು ದಂಡಾಧಿಕಾರಿ ಸುದರ್ಶನ್, ಪೌರಾಯುಕ್ತ ಶಿವನಂಕಾರಿಗೌಡ ಮತ್ತು ಡಿವೈಎಸ್ಪಿ ಓಂಪ್ರಕಾಶ್ ರವರು ಒಗ್ಗೂಡಿ ಕಾರ್ಯಾಚರಣೆಗೆ ಇಳಿದಿದ್ದು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.


*ಬೆಂಗಳೂರಿಗೆ ನಿಷೇಧ*

ಜಿಲ್ಲೆಯ ಗಡಿ ಭಾಗಗಳಲ್ಲಿ ಚೆಕ್ ಪೋಸ್ಟ್ ನಿರ್ಮಿಸಿದ್ದು ಕೋಲೂರು ಮತ್ತು ಕಣಿಮಿಣಿಕೆ ಗ್ರಾಮಗಳ ಬಳಿ ಬೆಂಗಳೂರಿಗೆ ಸಾಮಾನ್ಯವಾಗಿ ಹೋಗುವವರರನ್ನು ತಡೆ ಹಿಡಿದು ವಾಪಸ್ಸು ಕಳುಹಿಸುತ್ತಿದ್ದು ನಗರಕ್ಕೆ ಆಗಮಿಸುತ್ತಿರುವ ವಾಹನಗಳನ್ನು ತಡೆ ಹಿಡಿದು ವಿಡಿಯೋ ಮಾಡಿಕೊಳ್ಳುತ್ತಿದ್ದಾರೆ.


*ಕಂಡ ವಾಹನಗಳಿಗೆಲ್ಲಾ ಕೈ ತೋರುವ ಪ್ರಯಾಣಿಕರು*

ಸಾರಿಗೆ ಮತ್ತು ರೈಲು ಸಂಚಾರದ ನಿಷೇಧವಿರುವುದರಿಂದ ನಗರದ ಷೇರು ಹೋಟೆಲ್, ಸಾತನೂರು ಸರ್ಕಲ್, ಬಸ್ ನಿಲ್ದಾಣದ ಮುಂಭಾಗ, ಎಸ್ ಬಿ ಎಂ ನಿಲ್ದಾಣ ಹಾಗೂ ಮಂಗಳವಾರಪೇಟೆ ಯ ಹೆದ್ದಾರಿಯ ಬದಿಯಲ್ಲಿ ಊರಿಗೆ ತೆರಳಲು ಪ್ರಯಾಣಿಕರು ಕಣ್ಣಿಗೆ ಕಾಣುವ ಎಲ್ಲಾ ವಾಹನಗಳಿಗೂ ಕೈತೋರಿ ನಿಲ್ಲಿಸುವಂತೆ ಮನವಿ ಮಾಡುತ್ತಿದ್ದು, ಬಹುತೇಕ ಖಾಸಗಿ ವಾಹನಗಳೇ ಹೋಗುತ್ತಿರುವುದರಿಂದ ಹಾಗೂ ಮಹಾಮಾರಿಯಿಂದ ತಪ್ಪಿಸಿಕೊಳ್ಳಲು ಯಾವುದೇ ವಾಹನಗಳು ನಿಲ್ಲಿಸದೇ ಪ್ರಯಾಣಿಕರು ಪರದಾಡುತ್ತಿರುವುದು ಕಂಡುಬರುತ್ತಿತ್ತು.


*ಹಬ್ಬದ ಖರೀದಿ ಜೋರು*

ಯುಗಾದಿಯ ಮುನ್ನಾ ದಿನವಾದ ಇಂದೂ ಸಹ ನಗರದ ಜೆಸಿ ರಸ್ತೆ ಮತ್ತು ಎಂಜಿ ರಸ್ತೆಯಲ್ಲಿ ವ್ಯಾಪಾರ ವಹಿವಾಟು ನಡೆಯಿತು. ಅದರಲ್ಲೂ ಬೀದಿ ಬದಿಯ ವ್ಯಾಪಾರಿಗಳ ಭರಾಟೆ ಹೆಚ್ಚಾಗಿದ್ದು ಹೂವು, ಹಣ್ಣು, ಬಟ್ಟೆ ಮತ್ತು ಪೂಜಾ ಸಾಮಗ್ರಿಗಳನ್ನು ಜನ ಖರೀದಿಸಲು ಮುಗಿಬಿದ್ದಿದ್ದರು.


*ತಹಶಿಲ್ದಾರ್, ಪೌರಾಯುಕ್ತ ಮತ್ತು ಪೋಲೀಸರು*

ನಗರದಲ್ಲಿ ಹೆಚ್ಚು ಜನಸಂದಣಿ ಉಂಟಾಗದಂತೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ದಂಡಾಧಿಕಾರಿ ಸುದರ್ಶನ್ ಮತ್ತು ಪೌರಾಯುಕ್ತ ಶಿವನಂಕಾರಿಗೌಡರು ಒಂದೇ ವಾಹನದಲ್ಲಿ ಸಂಚರಿಸಿ ನಗರದ ಬೀದಿಬದಿಯ ವ್ಯಾಪಾರಿಗಳಿಗೆ ಹಾಗೂ ಗ್ರಾಹಕರಿಗೆ ತಿಳುವಳಿಕೆ ನೀಡಿದರು. ಇವರ ಜೊತೆಗೆ ಡಿವೈಎಸ್ಪಿ ಓಂಪ್ರಕಾಶ್ ಆದೇಶದ ಮೇರೆಗೆ ಪೋಲಿಸ್ ಗಸ್ತು ವಾಹನ ಮತ್ತು ಸಿಬ್ಬಂದಿಗಳು ಗುಂಪುಗೂಡುವ ಮಂದಿಯನ್ನು ಚದುರಿಸಿ ಕಳುಹಿಸುತ್ತಿದ್ದರು.


*ಸಾರ್ವಜನಿಕ ಆಸ್ಪತ್ರೆಯಲ್ಲಿ ಕರೋನಾ ರೋಗಿಗಳಿಗೆ ವಿಶೇಷ ನಿಗಾ*

ಸಾರ್ವಜನಿಕ ಆಸ್ಪತ್ರೆಯ ಅಧೀಕ್ಷಕ ಡಾ ಮಹೇಂದ್ರ ಮತ್ತು ತಾಲ್ಲೂಕು ವೈದ್ಯಾಧಿಕಾರಿ ಡಾ ರಾಜು‌ ನೇತೃತ್ವದಲ್ಲಿ ಕೊರೊನಾ ವೈರಸ್ ರೋಗಿಗಳಿಗೆ ಮಾಹಿತಿ ನೀಡಲು ವಿಶೇಷ ಕ್ಯಾಬಿನ್ ರೂಪಿಸಿದ್ದು, ರೋಗಿಗಳನ್ನು ಸಂದರ್ಶಿಸಿ, ರೋಗ ದೃಢ ಪಟ್ಟರೆ ತಕ್ಷಣವೇ ನೇರವಾಗಿ ಕಾಯ್ದಿರಿಸಿದ ವಾಡ್೯ಗೆ ಹೋಗಲು ನೆಲದ ಮೇಲೆ ಬಾಣದ ಗುರುತು ಹಾಗೂ ಫಲಕಗಳನ್ನು ಅಳವಡಿಸಿದ್ದು ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಂಡಿರುವುದಾಗಿ ಡಾ ಮಹೇಂದ್ರ ಮಾಹಿತಿ ನೀಡಿದರು.


*ಸನ್ಮಿತ್ರ  ಪತ್ರಿಕೆಯ ಆಶಯ*

*ಈ ವರ್ಷದ ಯುಗಾದಿ ಹಬ್ಬದ ಹರ್ಷ ಕ್ಷೀಣಿಸಿದ್ದು, ಕರೋನಾ ಎಂಬ ಮಹಾಮಾರಿ ಯ ಕೈ ಮೇಲಾಗುವ ಸಾಧ್ಯತೆ ಹೆಚ್ಚಾಗುತ್ತಿದ್ದು, ಆರೋಗ್ಯ ಚನ್ನಾಗಿದ್ದರೆ ಮುಂದಿನ ವರ್ಷ ವಿಜೃಂಭಣೆಯಿಂದ ಹಬ್ಬ ಆಚರಿಸಬಹುದು. ಹಬ್ಬದ ಸಡಗರ ಬಿಟ್ಟು ಕರೋನಾ ತಡೆಗಟ್ಟುವ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಪತ್ರಿಕೆಯ ಆಶಯವಾಗಿದೆ.*


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಬೊಂಬೆನಗರಿಯಲ್ಲಿ‌ ಒಂದೇ ದಿನ ಒಟ್ಟು ಏಳು ಮಂದಿಗೆ ಕೊರೋನಾ ಶಂಕೆ; ಆತಂಕ ತಂದಿಟ್ಟ  ಪಿ.೧೬೯
ಬೊಂಬೆನಗರಿಯಲ್ಲಿ‌ ಒಂದೇ ದಿನ ಒಟ್ಟು ಏಳು ಮಂದಿಗೆ ಕೊರೋನಾ ಶಂಕೆ; ಆತಂಕ ತಂದಿಟ್ಟ ಪಿ.೧೬೯

ಚನ್ನಪಟ್ಟಣ:ಏ/೦೯/೨೦/ಗುರುವಾರ. ಕೊರೋನಾ ಪೀಡಿತ ರೋಗಿಯೊಬ್ಬ ಪಿ.೧೬೯ (ರಾಜ್ಯ ಮಾಹಿತಿಯ ಸೀರಿಯಲ್ ನಂ) ನಗರದಲ್ಲಿ ವಾಸ್ತವ್ಯ ಹೂಡಿದ್ದ ಸಂಗತಿ ಅವನ

ರೇಷ್ಮೆ ಮಾರುಕಟ್ಟೆಯನ್ನು ೩ ಸ್ಥಳಗಳಲ್ಲಿ ನಿರ್ವಹಿಸಿ: ನಾರಾಯಣ ಗೌಡ
ರೇಷ್ಮೆ ಮಾರುಕಟ್ಟೆಯನ್ನು ೩ ಸ್ಥಳಗಳಲ್ಲಿ ನಿರ್ವಹಿಸಿ: ನಾರಾಯಣ ಗೌಡ

ರಾಮನಗರ ಏ. ೦೮ (ಕರ್ನಾಟಕ ವಾರ್ತೆ):- ರಾಮನಗರ ಜಿಲ್ಲಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ರೇಷ್ಮೆ ಮಾರುಕಟ್ಟೆಯಲ್ಲಿ ಜನಸಂದಣಿ ಉಂಟಾಗದAತೆ ಕಾರ್ಯನಿರ್ವಹಿಸಲು ಇನ್ನೂ ೨ ಸ್ಥಳಗಳನ್ನು ಗುರುತಿಸಿ

ಕೋಟಮಾರನಹಳ್ಳಿ ನ್ಯಾಯಬೆಲೆ ಅಂಗಡಿಗೆ ನೋಟೀಸ್ ಜಾರಿ
ಕೋಟಮಾರನಹಳ್ಳಿ ನ್ಯಾಯಬೆಲೆ ಅಂಗಡಿಗೆ ನೋಟೀಸ್ ಜಾರಿ

ಚನ್ನಪಟ್ಟಣ:ಏ/೦೭/೨೦/ಮಂಗಳವಾರ. ತಾಲ್ಲೂಕಿನ ಕೋಟಮಾರನಹಳ್ಳಿ ಗ್ರಾಮದಲ್ಲಿ ನ ನ್ಯಾಯ ಬೆಲೆ ಅಂಗಡಿಯ ಸನ್ನದುದಾರ ವೇಣುಗೋಪಾಲ ರವರಿಗೆ ತಾಲ್ಲೂಕು ಆಹ

ಜಿಲ್ಲಾಡಳಿತಕ್ಕೆ ಬಿಡದಿ ಕೈಗಾರಿಕಾ ಸಂಘದಿಂದ ೫೦೦ ಆಹಾರ ಪದಾರ್ಥ ಕಿಟ್
ಜಿಲ್ಲಾಡಳಿತಕ್ಕೆ ಬಿಡದಿ ಕೈಗಾರಿಕಾ ಸಂಘದಿಂದ ೫೦೦ ಆಹಾರ ಪದಾರ್ಥ ಕಿಟ್

ರಾಮನಗರ:ಏ/೦೭/೨೦/ಮಂಗಳವಾರ. ಬಿಡದಿ ಕೈಗಾರಿಕಾ ಸಂಘದಿಂದ ಆಹಾರ ಪದಾರ್ಥಗಳುಳ್ಳ ೫೦೦ ಕಿಟ್‌ಗಳನ್ನು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್

ಲಾಕ್‍ಡೌನ್ ನಿಂದ ಸಂಕಷ್ಟದಲ್ಲಿರುವ ಬ್ರಾಹ್ಮಣ ಕುಟುಂಬಗಳಿಗೆ ರಾಜ್ಯ ಬ್ರಾಹ್ಮಣರ ಅಭಿವೃದ್ಧಿ ಮಂಡಳಿಯಿಂದ ದಿನಸಿ ಪದಾರ್ಥಗಳ ವಿತರಣೆ
ಲಾಕ್‍ಡೌನ್ ನಿಂದ ಸಂಕಷ್ಟದಲ್ಲಿರುವ ಬ್ರಾಹ್ಮಣ ಕುಟುಂಬಗಳಿಗೆ ರಾಜ್ಯ ಬ್ರಾಹ್ಮಣರ ಅಭಿವೃದ್ಧಿ ಮಂಡಳಿಯಿಂದ ದಿನಸಿ ಪದಾರ್ಥಗಳ ವಿತರಣೆ

ಚನ್ನಪಟ್ಟಣ:ಏ/೦೬/೨೦/ಸೋಮವಾರ.

ಲಾಕ್‍ಡೌನ್ ನಿಂದ ಸಂಕಷ್ಟಕ್ಕೆ  ಸಿಲುಕಿರುವ, ಅರ್ಚಕ ವೃತ್ತಿಯನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ

ಕೋಟಮಾರನಹಳ್ಳಿ ನ್ಯಾಯ ಬೆಲೆ ಅಂಗಡಿಯಲ್ಲಿ ಅನ್ಯಾಯ. ತಹಶಿಲ್ದಾರ್ ದಾಳಿ
ಕೋಟಮಾರನಹಳ್ಳಿ ನ್ಯಾಯ ಬೆಲೆ ಅಂಗಡಿಯಲ್ಲಿ ಅನ್ಯಾಯ. ತಹಶಿಲ್ದಾರ್ ದಾಳಿ

ಚನ್ನಪಟ್ಟಣ:ಏ/೦೬/೨೦/ಸೋಮವಾರ. ತಾಲ್ಲೂಕಿನ ಕೋಟಮಾರನಹಳ್ಳಿ ಯ ನ್ಯಾಯ ಬೆಲೆ ಅಂಗಡಿಯಲ್ಲಿ ದುಡ್ಡು ಪಡೆದು ಪಡಿತರ ವಿತರಿಸುತ್ತಿರುವ ಖಚಿತ ಮಾಹಿತಿ

ರೈತರಿಗೆ ಯಾವುದೇ ತೊಂದರೆಯಾಗದಂತೆ ರೇಷ್ಮೆ ಮತ್ತು ಮಾವು ಮಾರುಕಟ್ಟೆ ಕೆಲಸ ನಿರ್ವಹಿಸುತ್ತವೆ. ಹೆಚ್ ಡಿ ಕೆ
ರೈತರಿಗೆ ಯಾವುದೇ ತೊಂದರೆಯಾಗದಂತೆ ರೇಷ್ಮೆ ಮತ್ತು ಮಾವು ಮಾರುಕಟ್ಟೆ ಕೆಲಸ ನಿರ್ವಹಿಸುತ್ತವೆ. ಹೆಚ್ ಡಿ ಕೆ

ಚನ್ನಪಟ್ಟಣ:ಏ/೦೬/೨೦/ಸೋಮವಾರ. ರೇಷ್ಮೆ ಬೆಳೆದ ರೈತ ಮತ್ತು ಮಾವು ಬೆಳೆದ ರೈತರಿಗೆ ಯಾವುದೇ ತೊಂದರೆಯಾಗದಂತೆ ಈ ಎರಡು ಮಾರುಕಟ್ಟೆಗಳು ಕೆಲಸ ನಿರ್ವ

ಮಹಾವೀರ ಜಯಂತಿ ಪ್ರಯುಕ್ತ ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ಊಟ ನೀಡಿದ ಜೈನ್ ಸಂಘ
ಮಹಾವೀರ ಜಯಂತಿ ಪ್ರಯುಕ್ತ ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ಊಟ ನೀಡಿದ ಜೈನ್ ಸಂಘ

ಚನ್ನಪಟ್ಟಣ:ಏ/೦೬/೨೦/ಸೋಮವಾರ. ಮಹಾಮುನಿ ಮಹಾವೀರ ರ ಜಯಂತಿ ಪ್ರಯುಕ್ತ ತಾಲ್ಲೂಕಿನ ಜೈನಸಂಘ ದವರು ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ತಿಂಡಿ ಮತ್ತು

ಹೆಚ್ ಡಿ ಕೆ ಅನ್ನದಾಸೋಹದ ಅಡುಗೆಮನೆಗೆ ಭೇಟಿ ನೀಡಿದ ನ್ಯಾಯಾಧೀಶರು
ಹೆಚ್ ಡಿ ಕೆ ಅನ್ನದಾಸೋಹದ ಅಡುಗೆಮನೆಗೆ ಭೇಟಿ ನೀಡಿದ ನ್ಯಾಯಾಧೀಶರು

ಚನ್ನಪಟ್ಟಣ:ಏ/೦೫/೨೦/ಭಾನುವಾರ. ಕೊರೊನಾ (ಕೋವಿಡ್-೧೯) ದಿಂದ ಮುಕ್ತರಾಗಲು ಕರ್ನಾಟಕ ಲಾಕ್ ಡೌನ್ ಆದ ನಂತರ ನನ್ನ ಕ್ಷೇತ್ರದ ಬಡವರು ಹಸಿವೆಯಿಂದ ಇ

ಲಾಕ್ ಡೌನ್ ಟು ಲಾಕ್ ಡೌನ್ ಊಟ ವಿತರಿಸುತ್ತಿರುವ ಚನ್ನಪಟ್ಟಣದ ಯುವಕರು
ಲಾಕ್ ಡೌನ್ ಟು ಲಾಕ್ ಡೌನ್ ಊಟ ವಿತರಿಸುತ್ತಿರುವ ಚನ್ನಪಟ್ಟಣದ ಯುವಕರು

ಚನ್ನಪಟ್ಟಣ:ಏ/೦೫/೨೦/ಭಾನುವಾರ. ಭಿಕ್ಷೆ ಕೇಳಿ ಬಂದವರಿಗೆ ಒಂದೊತ್ತಿನ ಊಟ ಅಥವಾ ಒಂದೆರಡು ರೂಪಾಯಿ ನೀಡುವುದೇ ದೊಡ್ಡದು, ಆದರೆ ಕೊರೊನಾ (ಕೋವಿಡ್-

Top Stories »  


Top ↑