Tel: 7676775624 | Mail: info@yellowandred.in

Language: EN KAN

    Follow us :

ಕಮೀಷನರ್ ಸಾಹೆಬ್ರೇ ಇದಕ್ಕೆ ಮುಕ್ತಿ ಯಾವಾಗ ?ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟ ಬೇಡ

Posted date: 22 May, 2020

Powered by:     Yellow and Red

ಕಮೀಷನರ್ ಸಾಹೆಬ್ರೇ ಇದಕ್ಕೆ ಮುಕ್ತಿ ಯಾವಾಗ ?ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟ ಬೇಡ

ಚನ್ನಪಟ್ಟಣ:ಮೇ/೨೨/೨೦/ಶುಕ್ರವಾರ. ನಗರದ ನಗರಸಭೆ ವ್ಯಾಪ್ತಿಯ ಕೆಂಪೇಗೌಡ ಬಡಾವಣೆ ಹಾಗೂ ಸಿಎಂಸಿ ಲೇಔಟ್ ನಡುವೆ ನಾಲ್ಕು ಕೂಡು ರಸ್ತೆಯಿದ್ದು, ಈ ಕೂಡು ರಸ್ತೆಯಲ್ಲಿ ಶೆಟ್ಟಿಹಳ್ಳಿ ಕೆರೆ ಏರಿಯ ಕೆಳಗಿನ ರಾಜಕಾಲುವೆಗೆ ನಿರ್ಮಿಸಿರುವ ಸೇತುವೆ ಕುಸಿದು ವಾರವಾದರೂ ಸಹ ಯಾವುದೇ ಅಧಿಕಾರಿಗಳು ಇತ್ತ ಸುಳಿಯದೇ ಜಾಣ ಕುರುಡು ಪ್ರದರ್ಶಿಸುತ್ತಿರುವುದು ಇಲಾಖೆಯ ಕೆಲಸಕ್ಕೆ ಹಿಡಿದ ಕನ್ನಡಿಯಾಗಿದೆ.

ಈ ಕೂಡು ರಸ್ತೆಯು ಸಂಪೂರ್ಣವಾಗಿ ರಾಜಕಾಲುವೆಯ ರಸ್ತೆಯಾಗಿದ್ದು, ಒಂದು ಸಿಎಂಸಿ‌ ಲೇಔಟ್ ಗೆ, ಮತ್ತೊಂದು ಕೆಂಪೇಗೌಡ ಬಡಾವಣೆ ಮೂಲಕ ಚರ್ಚ್ ರಸ್ತೆಗೆ ತೆರಳಲಿದ್ದು, ಅದೇ ರಾಜಕಾಲುವೆ ರಸ್ತೆಯ ಮೂಲಕ ಚನ್ನಾಂಬಿಕ ಕಾಲೇಜಿನ ಬಳಿ ಸೇರಲಿದ್ದು, ಪ್ರತಿನಿತ್ಯವೂ ಸಹಸ್ರಾರು ಮಂದಿ ಓಡಾಡುತ್ತಿರುವುದು ಗಮನದಲ್ಲಿದ್ದರೂ, ಸಹ ನಗರಸಭೆಯ ಅಧಿಕಾರಿಗಳು ಶೀಘ್ರವಾಗಿ ಸರಿಪಡಿಸದಿರುವುದು ಯಾಕೆ ಎಂಬುದು ಸ್ಥಳೀಯ ನಿವಾಸಿಗಳ ಯಕ್ಷ ಪ್ರಶ್ನೆಯಾಗಿದೆ.

ಕೋಳಿ, ಮಾಂಸ, ಮೀನು ಹಾಗೂ ಹಲವಾರು ರೀತಿಯ ತ್ಯಾಜ್ಯಗಳಿಂದ ತುಂಬಿ ಸಂಪೂರ್ಣವಾಗಿ ತನ್ನ ನೈಜ ಸ್ವರೂಪವನ್ನೇ ಕಳೆದುಕೊಂಡು ದುರ್ವಾಸನೆ ಬೀರುತ್ತಿರುವ ಶೆಟ್ಟಿಹಳ್ಳಿ ಕೆರೆ ಒಂದೆಡೆಯಾದರೆ, ಅದರ ಸೋರಲು ಮತ್ತು ನಗರದ ಕೊಳಚೆ ನೀರು ರಾಜಕಾಲುವೆ ಮೂಲಕ ಹರಿದು ಬರುವ ನೀರಿನ ‌ಗಬ್ಬುವಾಸನೆ ಒಂದೆಡೆ. ಇದರ ಜೊತೆಗೆ ಮೋರಿ ಕುಸಿದಿರುವುದರಿಂದ ನೀರು ನಿಂತು ರಸ್ತೆಯ ಮೇಲೆಲ್ಲಾ ಹರಿಯುವ ಮುನ್ನಾ ಹಾಗೂ ಸಾರ್ವಜನಿಕರು ಬಿದ್ದು ಪ್ರಾಣ ಕಳೆದುಕೊಳ್ಳುವ ಮುನ್ನವೇ ಸೇತುವೆಯನ್ನು ಮರು ನಿರ್ಮಿಸಿ, ಸಾರ್ವಜನಿಕರನ್ನು ಪ್ರಾಣಾಪಾಯದಿಂದ ರಕ್ಷಿಸುವ ಹೊಣೆ ಪೌರಾಯುಕ್ತರ ಮೇಲಿದೆ.

ಇದು ನನ್ನ ಗಮನಕ್ಕೆ ಬಂದಿಲ್ಲ, ಇಂಜಿನಿಯರ್ ರವರನ್ನು ಕಳುಹಿಸಿ ವರದಿ ತರಿಸಿಕೊಂಡು ನನ್ನ ವ್ಯಾಪ್ತಿಯಲ್ಲೇ ಮುಗಿಯುವುದಾದರೆ ಇಂದೇ ಸರಿಪಡಿಸಲು ಪ್ರಯತ್ನಿಸುತ್ತೇನೆ. ದೊಡ್ಡ ಮಟ್ಟದ್ದಾದರೆ ಟೆಂಡರ್ ಕರೆಯಬೆಕಾಗುತ್ತದೆ. ಪರೀಕ್ಷಿಸಿ ಕ್ರಮ ಕೈಗೊಳ್ಳುತ್ತೇನೆ.

*ಶಿವನಂಕಾರಿಗೌಡ. ಪೌರಾಯುಕ್ತರು, ನಗರಸಭೆ ಚನ್ನಪಟ್ಟಣ.*

ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಕ್ಲಸ್ಟರ್ ಪಾರ್ಕಗಳಿಂದ ಹೆಚ್ಚಿನ ಉದ್ಯೋಗ ಸೃಷ್ಟಿ: ಜಗದೀಶ್ ಶೆಟ್ಟರ್
ಕ್ಲಸ್ಟರ್ ಪಾರ್ಕಗಳಿಂದ ಹೆಚ್ಚಿನ ಉದ್ಯೋಗ ಸೃಷ್ಟಿ: ಜಗದೀಶ್ ಶೆಟ್ಟರ್

ರಾಮನಗರ:ಜ/20/21/ಬುಧವಾರ. ಕೈಗಾರಿಕಾ ಕ್ಲಸ್ಟರ್‌ಗಳಿಂದ ಹೆಚ್ಚಿನ ಕೈಗಾರಿಕೆಗಳು ರಚನೆಯಾಗಿ ಸ್ಥಳೀಯವಾಗಿ ಹೆಚ್ಚಿನ ಉದ್ಯೋಗ ದೊರೆಯುತ್ತದೆ. ಇದರಿ

ರಾಮನಗರ ಜಿಲ್ಲೆಯಲ್ಲಿ ಮಹಿಳಾ ಕಾಯಕೋತ್ಸವಕ್ಕೆ ಚಾಲನೆ
ರಾಮನಗರ ಜಿಲ್ಲೆಯಲ್ಲಿ ಮಹಿಳಾ ಕಾಯಕೋತ್ಸವಕ್ಕೆ ಚಾಲನೆ

ರಾಮನಗರ:ಜ/20/21/ಬುಧವಾರ. ಮಹಾತ್ಮಗಾಂಧಿ ನರೇಗಾ ಯೋಜನೆಯಡಿ (ಮನರೇಗಾ) ಮಹಿಳೆಯರು ಭಾಗವಹಿಸುವಿಕೆ ಹೆಚ್ಚಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯ

ಶುಕ್ರವಾರ ಅಂಬೇಡ್ಕರ್ ಭವನ ಉದ್ಘಾನೆ. ಹೆಚ್ ಡಿ ಕುಮಾರಸ್ವಾಮಿ
ಶುಕ್ರವಾರ ಅಂಬೇಡ್ಕರ್ ಭವನ ಉದ್ಘಾನೆ. ಹೆಚ್ ಡಿ ಕುಮಾರಸ್ವಾಮಿ

ಚನ್ನಪಟ್ಟಣ:ಜ/20/21ಬುಧವಾರ. ಈ ತಿಂಗಳ 22 ನೇ ತಾರೀಖಿನ ಶುಕ್ರವಾರದಂದು ನಗರದ ಅಂಬೇಡ್ಕರ್ ಭವನವನ್ನು ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಶ್ರೀರಾಮು

ಗುತ್ತಲೆಹುಣಸೆ ಗ್ರಾಮಕ್ಕೆ ವಸತಿ ಸಚಿವ ವಿ ಸೋಮಣ್ಣ ಭೇಟಿ
ಗುತ್ತಲೆಹುಣಸೆ ಗ್ರಾಮಕ್ಕೆ ವಸತಿ ಸಚಿವ ವಿ ಸೋಮಣ್ಣ ಭೇಟಿ

ರಾಮನಗರ:ಜ/18/21/ಸೋಮವಾರ. ವಸತಿ ಸಚಿವರಾದ ವಿ. ಸೋಮಣ್ಣ ಅವರು ಇಂದು ಕನಕಪುರ ತಾಲ್ಲೂಕಿನ ಗುತ್ತಲಹುಣಸೆ ಗ್ರಾಮದಲ್ಲಿರುವ ಶ್ರೀ ಮಲೆ ಮಹದೇಶ್ವರಸ್

ಗಣರಾಜ್ಯೋತ್ಸವ ಹಬ್ಬ ಸರಳವಾಗಿ ಆಚರಿಸಲಾಗುತ್ತದೆ ತಹಶಿಲ್ದಾರ್ ನಾಗೇಶ್
ಗಣರಾಜ್ಯೋತ್ಸವ ಹಬ್ಬ ಸರಳವಾಗಿ ಆಚರಿಸಲಾಗುತ್ತದೆ ತಹಶಿಲ್ದಾರ್ ನಾಗೇಶ್

  • ಚನ್ನಪಟ್ಟಣ:ಜ/19/21/ಮಂಗಳವಾರ.

ಇದೇ ತಿಂಗಳ 26 ನೇ ತಾರೀಖಿನಂದು‌ ನಡೆಯುವ ಗಣರಾಜ್ಯೋತ್ಸವ ಹಬ್ಬವನ್ನು ಸರಳವಾಗಿ, ಅರ್ಥಪೂರ್ಣವಾಗಿ ಹಾಗೂ ಪ್ರೋಟೋಕಾಲ್ ನಿಯಮಾನುಸಾರ ಪದವಿಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ಆಚ

ಖಾತೆ ರಹಿತ ನೂತನ ಸಚಿವ ಸಿ ಪಿ ಯೋಗೇಶ್ವರ್ ರವರಿಗೆ ಅದ್ದೂರಿ ಸ್ವಾಗತ ಕೋರಿದ ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು
ಖಾತೆ ರಹಿತ ನೂತನ ಸಚಿವ ಸಿ ಪಿ ಯೋಗೇಶ್ವರ್ ರವರಿಗೆ ಅದ್ದೂರಿ ಸ್ವಾಗತ ಕೋರಿದ ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು

ಚನ್ನಪಟ್ಟಣ/ಜ/18/21/ಸೋಮವಾರ. ರಾಜ್ಯದ ಮಂತ್ರಿಯಾಗಿ ಇವತ್ತಿಗೂ ಸಹ ಖಾತೆ ಗಳಿಸದ, ಆಧುನಿಕ ಭಗಿರಥ ಎಂದೇ ಹೆಸರು ಮಾಡಿರುವ ಚನ್ನಪಟ್ಟಣ ಕ್ಷೇತ್ರದ

ಪ್ರಥಮ ಬಾರಿಗೆ ತಾಲ್ಲೂಕಿನ ಇಗ್ಗಲೂರು ಮತ್ತು ನಗರ ಸಾರ್ವಜನಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳಿಗೆ‌ ಇಂದು ಲಸಿಕೆ
ಪ್ರಥಮ ಬಾರಿಗೆ ತಾಲ್ಲೂಕಿನ ಇಗ್ಗಲೂರು ಮತ್ತು ನಗರ ಸಾರ್ವಜನಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳಿಗೆ‌ ಇಂದು ಲಸಿಕೆ

ಚನ್ನಪಟ್ಟಣ:ಜ/16/21/ಶನಿವಾರ. ವಿಶ್ವವನ್ನೇ ಗಾಬರಿ ಹುಟ್ಟಿಸಿ, ವಿಶ್ವದಾದ್ಯಂತ ಲಕ್ಷಾಂತರ ಮಂದಿಯನ್ನು ಬಲಿ ಪಡೆದ  ಕೊರೊನಾ ಮಾರಿಗೆ ಭಾರತದ

ಜಿಲ್ಲೆಯಲ್ಲಿ ಮೊದಲನೇ ದಿನ 353 ಜನರಿಗೆ ಕೋವಿಡ್-19 ಲಸಿಕೆ
ಜಿಲ್ಲೆಯಲ್ಲಿ ಮೊದಲನೇ ದಿನ 353 ಜನರಿಗೆ ಕೋವಿಡ್-19 ಲಸಿಕೆ

ರಾಮನಗರ:ಜ/16/21/ಶನಿವಾರ. ಕೋವಿಡ್-19 ಲಸಿಕೆ ನೀಡಲು ಪ್ರಾರಂಭವಾದ ಮೊದಲನೇ ದಿನವಾದ ಇಂದು (ದಿನಾಂಕ 16-01-2020) 353 ಜನರಿಗೆ ಲಸಿಕೆ ನೀಡಲಾಗಿ

ರಾಮನಗರ ಜಿಲ್ಲೆಗೆ ಆಗಮಿಸಿದ ಕೊರೋನಾ ಲಸಿಕೆ ಹರ್ಷ ವ್ಯಕ್ತಪಡಿಸಿದ ಜಿಲ್ಲಾಡಳಿತ
ರಾಮನಗರ ಜಿಲ್ಲೆಗೆ ಆಗಮಿಸಿದ ಕೊರೋನಾ ಲಸಿಕೆ ಹರ್ಷ ವ್ಯಕ್ತಪಡಿಸಿದ ಜಿಲ್ಲಾಡಳಿತ

ರಾಮನಗರ:ಜ/15/21/ಶುಕ್ರವಾರ. ರಾಮನಗರ ಜಿಲ್ಲೆಗೆ ಶುಕ್ರವಾರ  ಬೆಳಿಗ್ಗೆ ಬಂದ 5000 ಕೊರೋನಾ ಲಸಿಕೆ ಬಂತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿ

ಮಕರ ಸಂಕ್ರಾಂತಿ ಹಬ್ಬವು ರಾಶಿ ರಾಸುಗಳ ಜೊತೆಗೆ ಹೆಣ್ಮಕ್ಕಳ ಹಬ್ಬವೂ ಹೌದು ಜಿಲ್ಲಾಧಿಕಾರಿ ಅರ್ಚನಾ
ಮಕರ ಸಂಕ್ರಾಂತಿ ಹಬ್ಬವು ರಾಶಿ ರಾಸುಗಳ ಜೊತೆಗೆ ಹೆಣ್ಮಕ್ಕಳ ಹಬ್ಬವೂ ಹೌದು ಜಿಲ್ಲಾಧಿಕಾರಿ ಅರ್ಚನಾ

ರಾಮನಗರ:ಜ/14/21/ಗುರುವಾರ. ಮಕರ ಸಂಕ್ರಾಂತಿ ಹಬ್ಬವು ರಾಶಿ, ರಾಸುಗಳ ಜೊತೆಗೆ ರೈತರಿಗೆ ಸುಗ್ಗಿಯ ಹಬ್ಬ. ಹಾಗೆ ಹೆಣ್ಣು ಮಕ್ಕಳಿಗೆ ಬಾಗಿನ ಹಬ್ಬವ

Top Stories »  

Top ↑