Tel: 7676775624 | Mail: info@yellowandred.in

Language: EN KAN

    Follow us :


ಹೆದ್ದಾರಿ ಬದಿಯ ಅಂಗಡಿಗಳು ಖುಲ್ಲಾ, ಪೇಟೆ ಬೀದಿ ಬಹುತೇಕ ಬಂದ್, ಸ್ವಯಂ ಘೋಷಿತ ಲಾಕ್ಡೌನ್ ಗೆ ಮಿಶ್ರ ಪ್ರತಿಕ್ರಿಯೆ

Posted date: 27 Jun, 2020

Powered by:     Yellow and Red

ಹೆದ್ದಾರಿ ಬದಿಯ ಅಂಗಡಿಗಳು ಖುಲ್ಲಾ, ಪೇಟೆ ಬೀದಿ ಬಹುತೇಕ ಬಂದ್, ಸ್ವಯಂ ಘೋಷಿತ ಲಾಕ್ಡೌನ್ ಗೆ ಮಿಶ್ರ ಪ್ರತಿಕ್ರಿಯೆ

ಎಂದಿನಂತೆ ಬಾಗಿಲು ತೆರೆದು ವಹಿವಾಟು ನಡೆಸುತ್ತಿರುವ ಬೀದಿಬದಿ, ಹೆದ್ದಾರಿ ಮತ್ತು ಹೂವಿನ ಅಂಗಡಿಗಳ ವ್ಯಾಪಾರಿಗಳು

ಚನ್ನಪಟ್ಟಣ:ಜೂ/೨೬/೨೦/ಶುಕ್ರವಾರ. ಶಾಸಕ ಹೆಚ್ ಡಿ ಕುಮಾರಸ್ವಾಮಿ ಯವರ ಪತ್ರ ‌ಮುಖೇನ ಮನವಿಗೆ ನಗರದ ವರ್ತಕರ ಸಂಘದ ಪದಾಧಿಕಾರಿಗಳು ಸ್ಪಂದಿಸಿ ಇದೇ ತಿಂಗಳ ೨೪ ರಂದು ಶ್ರೀ ಲಕ್ಷ್ಮಿ ನಾರಾಯಣ ಸ್ವಾಮಿ ದೇವಾಲಯದಲ್ಲಿ ಸಭೆ ಸೇರಿ ಜುಲೈ ೧೦ ನೇ ತಾರೀಖಿನವರೆಗೆ ಮಧ್ಯಾಹ್ನ ೧೨ ಗಂಟೆಯ ನಂತರ ಅಂಗಡಿಗಳನ್ನು ಸ್ವಯಂ ಬಾಗಿಲು ಹಾಕುವ ಮೂಲಕ ಲಾಕ್ಡೌನ್ ಗೆ ಸಹಕಾರ ನೀಡುವುದಾಗಿ ಘೋಷಿಸಿಕೊಂಡಿದ್ದರು.


ನಿನ್ನೆ ದಿನ ಸ್ವಯಂ ಲಾಕ್ಡೌನ್ ಸಂಪೂರ್ಣ ವಿಫಲವಾಗಿದ್ದು, ಇದನ್ನು ಅರಿತ ವರ್ತಕರ ಸಂಘದ ಪದಾಧಿಕಾರಿಗಳು ಇಂದು ನಗರದ ಪ್ರಮುಖ ಬೀದಿಗಳಿಗೆ ಆಟೋ ಮೂಲಕ ಮಧ್ಯಾಹ್ನ ದ ನಂತರ ಅಂಗಡಿಗಳನ್ನು ಮುಚ್ಚುವ ಮೂಲಕ ಲಾಕ್ಡೌನ್ ಮಾಡಿ ಕೊರೋನ ತೊಲಗಿಸಲು ಕೈಜೋಡಿಸಬೇಕೆಂಬ ಮನವಿಯನ್ನು ಪ್ರಚಾರ ಮಾಡಿದರು.


ಪ್ರಚಾರದ ಫಲವಾಗಿ ನಗರದ ಜನಜಂಗುಳಿ ಪ್ರದೇಶಗಳಾದ ಜೆ ಸಿ ರಸ್ತೆ, ಎಂ ಜಿ ರಸ್ತೆ (ಪೇಟೆ ಬೀದಿಗಳು ಮಾತ್ರ) ಗಳ ಶೇಕಡಾ ೭೦ ರಷ್ಟು ಅಂಗಡಿಗಳು ಬಾಗಿಲು ಮುಚ್ವುವ ಮೂಲಕ ಲಾಕ್ಡೌನ್ ಗೆ ಸಹಕರಿಸಿದರೆ ಹೆದ್ದಾರಿಯ ಎರಡು ಬದಿಗಳಲ್ಲಿರುವ ಅಂಗಡಿಗಳ ಮಾಲೀಕರು ಶೇಕಡಾ ೩೦ ಕ್ಕೂ ಕಡಿಮೆ ಬಾಗಿಲು ಮುಚ್ಚಿದರೆ ಶೇಕಡಾ ೭೦ ಕ್ಕೂ ಹೆಚ್ಚಿನ ಅಂಗಡಿಗಳು ಬಾಗಿಲು ತೆಗೆದು ವಹಿವಾಟು ನಡೆಸಿದವು. ಬೀದಿ ಬದಿಯ ವ್ಯಾಪಾರಿಗಳು ಮತ್ತು ಎಲ್ಲಾ ವೈನ್ ಶಾಪ್ ಗಳು, ಹಲವು ಹೋಟೆಲ್‌ ಗಳಲ್ಲಿ ಜನ ಜಂಗುಳಿಯೇ ನೆರೆದಿತ್ತು. ನಗರದ ವರ್ತಕರ ನಡುವೆಯೂ ಭಿನ್ನಾಭಿಪ್ರಾಯಗಳು ಇರುವುದು ಹಾಗೂ ಒಗ್ಗಟ್ಟು ಇಲ್ಲದಿರುವುದು ಇದರಿಂದ ಸ್ಪಷ್ಟವಾಗುತ್ತಿರುವುದು ತಿಳಿದುಬರುತ್ತದೆ.


ಕೊರೊನಾ (ಕೋವಿಡ್-೧೯) ವಿಷಯದಲ್ಲಿ ಸ್ವಯಂ ಲಾಕ್ಡೌನ್ ಫಲ ನೀಡುವುದಿಲ್ಲ ಎಂಬುದು ಇದರಿಂದ ವೇದ್ಯವಾಗುತ್ತದೆ. ಜನರ ಜೀವ ಮತ್ತು ಜೀವನದ ಮೇಲೆ ಸರ್ಕಾರವು ಚಲ್ಲಾಟವಾಡದೆ ಅಗತ್ಯ ವಸ್ತುಗಳ ಪಟ್ಟಿಯನ್ನು ಕಡಿಮೆ ಮಾಡಿ ಶೀಘ್ರವಾಗಿ ಸರ್ಕಾರವೇ ಲಾಕ್ಡೌನ್ ಘೋಷಿಸಬೇಕು. ಆಗ ಮಾತ್ರ ದಿನೆದಿನೇ ಹೆಚ್ಚಿತ್ತಿರುವ ಕೊರೊನಾ ವನ್ನು ತಡೆಗಟ್ಟಲು ಸಾಧ್ಯ ಎಂಬುದು ನಾಗರೀಕರ ಕೋರಿಕೆಯಾಗಿದೆ.


ಗೋ ರಾ ಶ್ರೀನಿವಾಸ...

ಮೊ:9845856139.


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ನ್ಯಾಯಾಧೀಶರಿಂದ ಮಾಸ್ಕ್ ವಿತರಣೆ
ನ್ಯಾಯಾಧೀಶರಿಂದ ಮಾಸ್ಕ್ ವಿತರಣೆ

ರಾಮನಗರ:ಡಿ/03/20/ಗುರುವಾರ: ಮಾಸ್ಕ್ ಧರಿಸುವುದರಿಂದ  ಕೋವಿಡ್-19 ನಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಜಿ. ರಮಾ ಅವರು ತಿಳಿಸಿದ

\'ಸಕಾಲ\' ದಲ್ಲಿ ದೊರೆಯುವ ಸೌಲಭ್ಯಗಳನ್ನು ರೈತರು ಮತ್ತು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಿ ತಹಶಿಲ್ದಾರ್ ನಾಗೇಶ್
\'ಸಕಾಲ\' ದಲ್ಲಿ ದೊರೆಯುವ ಸೌಲಭ್ಯಗಳನ್ನು ರೈತರು ಮತ್ತು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಿ ತಹಶಿಲ್ದಾರ್ ನಾಗೇಶ್

ಚನ್ನಪಟ್ಟಣ:ಡಿ/02/20/ಬುಧವಾರ. ರಾಜ್ಯ ಸರ್ಕಾರದ ವತಿಯಿಂದ \'ಸಕಾಲ ಸಪ್ತಾಹ\' ಸೇವೆಗಳು ನಗರಾಭಿವೃದ್ಧಿ ಇಲಾಖೆ, ಕಂದಾಯ ಇಲಾಖೆ, ಸಾರಿಗೆ ಇಲಾಖೆ, ಆಹಾರ, ನಾಗ

ಕೊರೊನಾ : ಇಂದು 4 ಪ್ರಕರಣ ದೃಢ
ಕೊರೊನಾ : ಇಂದು 4 ಪ್ರಕರಣ ದೃಢ

ರಾಮನಗರ, ಡಿ 1  (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಚನ್ನಪಟ್ಟಣ 3 ಹಾಗೂ  ಕನಕಪುರ 1 ಪ್ರಕರಣಗಳು ಸೇರಿ ಇಂದು ಒಟ್ಟು  4 ಕರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಇವರನ್ನು ರಾಮನ

ಚನ್ನಪಟ್ಟಣ ಗ್ರಾಮ ಸ್ವರಾಜ್ಯ ಕಾರ್ಯಕ್ರಮದಲ್ಲಿ ಡಿಕೆ ಬ್ರದರ್ಸ್‌ಗೆ ಎಚ್ಚರಿಕೆ ಕೊಟ್ಟ ಡಾ.ಅಶ್ವತ್ಥನಾರಾಯಣ
ಚನ್ನಪಟ್ಟಣ ಗ್ರಾಮ ಸ್ವರಾಜ್ಯ ಕಾರ್ಯಕ್ರಮದಲ್ಲಿ ಡಿಕೆ ಬ್ರದರ್ಸ್‌ಗೆ ಎಚ್ಚರಿಕೆ ಕೊಟ್ಟ ಡಾ.ಅಶ್ವತ್ಥನಾರಾಯಣ

ಚನ್ನಪಟ್ಟಣ:ಡಿ/01/20/ಮಂಗಳವಾರ. ಇಷ್ಟು ದಿನ ಅಭಿವೃದ್ಧಿ ಕೆಲಸಗಳು ಕೇವಲ ಕಾಗದದ ಮೇಲಿದ್ದವು. ಈಗ ಅನುಷ್ಠಾನ ಆಗಿ ಕಣ್ಣಿಗೆ ಕಾಣುತ್ತಿವೆ. ಇದಕ್ಕೆ ಕಾರಣ ದೇಶ

ಅರವಿಂದ್ ಫ್ಯಾಷನ್ ಲಿ, ಲಾಕ್ ಔಟ್. ಬೀದಿಗೆ ಬಂದ ಅರವತ್ತಾರು ಕುಟುಂಬ. ನ್ಯಾಯಕ್ಕಾಗಿ ಹೋರಾಡುತ್ತಿರುವ ಕಾರ್ಮಿಕರು
ಗ್ರಾಮ ಪಂಚಾಯತಿ ಚುನಾವಣೆ ಹಿನ್ನೆಲೆ, ನಗರದ ರೌಡಿ ಶೀಟರ್ ಗಳ ಪೆರೇಡ್ ನಡೆಸಿ ಎಚ್ಚರಿಕೆ ನೀಡಿದ ಎಸ್ಐ ರವೀಂದ್ರ
ಗ್ರಾಮ ಪಂಚಾಯತಿ ಚುನಾವಣೆ ಹಿನ್ನೆಲೆ, ನಗರದ ರೌಡಿ ಶೀಟರ್ ಗಳ ಪೆರೇಡ್ ನಡೆಸಿ ಎಚ್ಚರಿಕೆ ನೀಡಿದ ಎಸ್ಐ ರವೀಂದ್ರ

ಚನ್ನಪಟ್ಟಣ:ನ/29/20/ಭಾನುವಾರ. ಮುಂಬರುವ ಗ್ರಾಮ ಪಂಚಾಯತಿ ಚುನಾವಣೆ ಹಾಗೂ ಸಮಾಜದ ಸ್ವಾಸ್ಥ್ಯ ಕದಡಬಾರದು ಎಂಬ ಹಿನ್ನೆಲೆಯಲ್ಲಿ ನಗರದ ರೌಡಿ ಶೀಟರ

ಭೂಮಾಲೀಕರು ಸಾಂತ್ವನ ನಿವೇಶನವನ್ನು ಮಾರಾಟ ಮಾಡಬೇಡಿ : ವಿ ಸೋಮಣ್ಣ
ಭೂಮಾಲೀಕರು ಸಾಂತ್ವನ ನಿವೇಶನವನ್ನು ಮಾರಾಟ ಮಾಡಬೇಡಿ : ವಿ ಸೋಮಣ್ಣ

ರಾಮನಗರ:ನ/28/20/ಶನಿವಾರ. ಕರ್ನಾಟಕ ಗೃಹ ಮಂಡಳಿಯಿಂದ ರಾಯಸಂದ್ರ ವಸತಿ ಬಡಾವಣೆಗೆ ಭೂಮಿ ನೀಡಿರುವ ಭೂಮಾಲೀಕರಿಗೆ ನೀಡಲಾಗುವ ಸಾಂತ್ವನ ನಿವೇಶನವನ್

ಉಪಮುಖ್ಯಮಂತ್ರಿಗಳಿಂದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ
ಉಪಮುಖ್ಯಮಂತ್ರಿಗಳಿಂದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ

ಚನ್ನಪಟ್ಟಣ:ನ/26/20/ಗುರುವಾರ. ಉಪಮುಖ್ಯಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ: ಸಿಎನ್ ಅಶ್ವಥ್ ನಾರಾಯಣ ಅವರು ಇಂದು ಮಾಗಡಿ ತಾಲ್ಲ

ಮಾಗಡಿ ತಾಲೂಕಿನಲ್ಲಿ ಡಿಸಿಎಂ ರೌಂಡ್ಸ್;‌ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ, ಅಡಿಗಲ್ಲು
ಮಾಗಡಿ ತಾಲೂಕಿನಲ್ಲಿ ಡಿಸಿಎಂ ರೌಂಡ್ಸ್;‌ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ, ಅಡಿಗಲ್ಲು

ರಾಮನಗರ:ನ/26/20/ಗುರುವಾರ. ರಾಮನಗರ: ಜಿಲ್ಲಾ ಉಸುವಾರಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಗುರುವಾರದಂದು ಜಿಲ್ಲೆಯ ವಿವ

Top Stories »  


Top ↑