Tel: 7676775624 | Mail: info@yellowandred.in

Language: EN KAN

    Follow us :


ಪ್ರತಿ ತಿಂಗಳ ಮೊದಲವಾರ ಇ-ಸ್ವತ್ತಿಗಾಗಿ ದಾಖಲೆ ಸಂಗ್ರಹಿಸಲು ಗ್ರಾಮಪಂಚಾಯಿತಿ ಅಧಿಕಾರಿಗಳು‌ ನಿಮ್ಮ ಮನೆಯ ಮುಂದೆ; ಇಓ ಚಂದ್ರು

Posted date: 30 Jul, 2020

Powered by:     Yellow and Red

ಪ್ರತಿ ತಿಂಗಳ ಮೊದಲವಾರ ಇ-ಸ್ವತ್ತಿಗಾಗಿ ದಾಖಲೆ ಸಂಗ್ರಹಿಸಲು ಗ್ರಾಮಪಂಚಾಯಿತಿ ಅಧಿಕಾರಿಗಳು‌ ನಿಮ್ಮ ಮನೆಯ ಮುಂದೆ; ಇಓ ಚಂದ್ರು

ಚನ್ನಪಟ್ಟಣ:ಜು/29/20/ಗುರುವಾರ. ತಾಲ್ಲೂಕಿನಾದ್ಯಂತ ಆಗಸ್ಟ್ ತಿಂಗಳಿನಿಂದ ಡಿಸೆಂಬರ್ ತಿಂಗಳವರೆಗೆ ಪ್ರತಿ ಮೊದಲವಾರ ಇ-ಸ್ವತ್ತು ನೀಡುವುದಕ್ಕೆ ಬೇಕಾದ ದಾಖಲೆಗಳನ್ನು ಕಲೆ ಹಾಕಲು ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ, ಬಿಲ್ ಕಲೆಕ್ಟರ್ ಹಾಗೂ ಕಂಪ್ಯೂಟರ್ ಆಪರೇಟರ್ (ಗಣಕಯಂತ್ರ ನಿಯಂತ್ರಕ) ರವರು ತಮ್ಮ ಮನೆಯ ಬಳಿಯೇ ಬಂದು ತಮ್ಮ ಆಸ್ತಿಗೆ ಇ-ಸ್ವತ್ತು ನೀಡಲು ಬೇಕಾದ ದಾಖಲೆಗಳನ್ನು ಪಡೆದುಕೊಳ್ಳುತ್ತಾರೆ ಎಂದು ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಣಾಧಿಕಾರಿ ಚಂದ್ರು ಹೇಳಿದರು.

ಅವರು ಇಂದು ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ಕರೆದು ಇ-ಸ್ವತ್ತು ಆಂದೋಲನದ ಕುರಿತು ಮಾಹಿತಿ ನೀಡಿದರು.


ತಾಲ್ಲೂಕಿನಲ್ಲಿ 67,521 ಆಸ್ತಿಗಳಿದ್ದು, ಇ-ಸ್ವತ್ತು ಆಗದಿರುವ ಎಲ್ಲಾ ಆಸ್ತಿಗಳಿಗೂ ದಾಖಲೆಗಳನ್ನು ಪಡೆದು ಇ-ಸ್ವತ್ತು ನೀಡಲಾಗುತ್ತದೆ. ಎಲ್ಲಾ ದಾಖಲೆಗಳು ಸರಿಯಾಗಿದ್ದರೆ 15 ದಿನದೊಳಗೆ ಇ-ಖಾತೆ ನೀಡಲಾಗುತ್ತದೆ. ಇದು ಡಿಸೆಂಬರ್ ವರೆಗೆ ಪ್ರತಿ ತಿಂಗಳ ಮೊದಲವಾರ ಆಂದೋಲನ ಮಾಡಲಾಗುತ್ತದೆ. ಡಿಸೆಂಬರ್ ನಂತರ ತಾವೇ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ದಾಖಲೆ ಸಲ್ಲಿಸಿ ಇ-ಖಾತೆ ಪಡೆದುಕೊಳ್ಳಬಹುದು ಎಂದು ಅವರು ಮಾಹಿತಿ ನೀಡಿದರು.


9 ಮತ್ತು 11 ಎ ನಮೂನೆಗಳನ್ನು ಪಡೆಯಲು ನೀಡಬೇಕಾದ ದಾಖಲೆಗಳು ಹೀಗಿವೆ;

ಉದಾಹರಣೆಗೆ ವಸತಿಯೋಜನೆಯಡಿ ಮಂಜೂರಾದ ಆಸ್ತಿ (ಹಕ್ಕುಪತ್ರ) ಗೆ ಅರ್ಜಿ, ಸ್ವತ್ತಿನ ಮಾಲೀಕರ ಹೆಸರು, ವಿಳಾಸ, ಆಸ್ತಿಯ ಸಂಖ್ಯೆ, ಆಸ್ತಿ ಇರುವ ಗ್ರಾಮ, ಮೊಬೈಲ್ ನಂಬರ್ ಸಹಿತ ವಿವರವುಳ್ಳ ಅರ್ಜಿ, ಮೂಲ ಹಕ್ಕುಪತ್ರ, ಆಸ್ತಿ ಮಾಲೀಕರ ಪಾಸ್ ಪೋರ್ಟ್ ಭಾವಚಿತ್ರ, ಆಸ್ತಿಯ ಭಾವಚಿತ್ರ, ಮಾಲೀಕರ ಆಧಾರ ಕಾರ್ಡ್, ಮತದಾರರ ಗುರುತಿನ ಚೀಟಿ, ಪ್ರಪತ್ರ-(ಇಸಿ) (ಅವಶ್ಯವಿದ್ದಲ್ಲಿ) ನೀಡಬೇಕು.


ಹೀಗೆ 1) ಗ್ರಾಮಠಾಣಾ ಆಸ್ತಿ, 2) ಬಿಎಂಆರ್ಡಿಎ, ಬಿಎಂಐಸಿಎಪಿಎ ಹಾಗೂ ಸ್ಥಳೀಯ ಯೋಜನಾ ಪ್ರಾಧಿಕಾರದಿಂದ ಅನುಮೋದಿತ ಬಡಾವಣೆ. 3) 14-06-2013 ಪೂರ್ವದಲ್ಲಿ ಸೃಜನೆಯಾಗಿರುವ ಕಟ್ಟಡ ಪರವಾನಗಿ ಪಡೆದು ಕಟ್ಟಿರುವ ಮನೆಗಳು. 4) 16-11-1992 ರ ಹಿಂದೆ ಭೂಪರಿವರ್ತಿತವಾಗಿ ಗ್ರಾಮ ಪಂಚಾಯತಿಯಿಂದ ಅನುಮೋದನೆಗೊಂಡ ಆಸ್ತಿಗಳು.


11 ಬಿ ನಮೂನೆ ಪಡೆಯಲು; 1) 16-11-1992 ರ ನಂತರ 14-06-2013 ರ ಪೂರ್ವದಲ್ಲಿ ಗ್ರಾಮ ಪಂಚಾಯತಿಯಿಂದ ಅನುಮೋದಿತವಾದ ಆಸ್ತಿಗಳು. 2) ಗ್ರಾಮಠಾಣಾ ವ್ಯಾಪ್ತಿಯಿಂದ ಹೊರಗಿರುವ ಆಸ್ತಿಗಳು. 3) ಹೊಸದಾಗಿ ಭೂಪರಿವರ್ತನೆಯಾದ ಸಕ್ಷಮ ಪ್ರಾಧಿಕಾರದ ಅನುಮೋದನೆ ಇಲ್ಲದ ಆಸ್ತಿಗಳು, (ನೋಂದಣಿಗೆ ಅವಕಾಶವಿಲ್ಲದ 11ಬಿ), 4) ಮ್ಯುಟೇಶನ್ ಬದಲಾವಣೆ (ನಮೂನೆ-9 ಮತ್ತು 11 ಹಾಗೂ ನಮೂನೆ 11-ಬಿ) ಈ ಮೇಲಿನ ಎಲ್ಲಾ ಇ-ಸ್ವತ್ತು ಗಳಿಗೂ ಬೇರೆಬೇರೆ ರೀತಿಯ ದಾಖಲೆಗಳನ್ನು ಸಲ್ಲಿಸಿ ಇ-ಸ್ವತ್ತು ಪಡೆಯಬೇಕು ಎಂದು ಅವರು ಮಾಹಿತಿ ನೀಡಿದರು.


ತಾಲ್ಲೂಕು ಪಂಚಾಯತಿ ಅಧ್ಯಕ್ಷ ಹರೂರು ರಾಜಣ್ಣ ಮಾತನಾಡಿ, ತಾಲ್ಲೂಕಿನಾದ್ಯಂತ 32 ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ 273 ಕಟ್ಟೆ/ಕುಂಟೆ ಮತ್ತು ಗೋ ಕಟ್ಟೆಗಳು, 937 ಕೃಷಿ ಹೊಂಡಗಳು, 646 ರೈತರ ಜಮೀನಿನಲ್ಲಿ ಹಾಕಿರುವ ಬದುಗಳು, 635 ದನದ ಕೊಟ್ಟಿಗೆಗಳು, 172 ಹಳ್ಳ ಮತ್ತು ಕಾಲುವೆಗಳು, 3 ಮಳೆ ನೀರು ಕೊಯ್ಲು, ಹೊಸದಾಗಿ 4 ಕಲ್ಯಾಣಿಗಳು, 8 ಕೆರೆಗಳು ಸೇರಿ 2,663 ಜಲಮೂಲಗಳ ಕಾಮಗಾರಿಗಳನ್ನು ಮಾಡಲಾಗಿದೆ. ಇವುಗಳಲ್ಲಿ ಕೆಲವು ಶೇಕಡಾ 100 ರಷ್ಟು ಕಾಮಗಾರಿ ಪೂರ್ಣಗೊಂಡಿವೆ. ಇನ್ನೂ ಕೆಲವು ಮಳೆ ಹಾಗೂ ಇತರ ಕಾರಣಗಳಿಂದ ಶೇಕಡಾ 50 ರಿಂದ 80 ರವರೆಗೂ ಕಾಮಗಾರಿ ಆಗಿದ್ದು ಶೀಘ್ರವಾಗಿ ಪೂರ್ಣಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.


ಈ ನಡುವೆ ಎಲ್ಲಾ ಪಿಡಿಓ ರವರ ಅಸಮರ್ಪಕ ಕೆಲಸಗಳು, ದಾಖಲೆಗಳಿಲ್ಲದೆ ಇ-ಖಾತೆ ಮಾಡಿಕೊಟ್ಟಿರುವ ಬಗ್ಗೆ, ನರೇಗಾ ಕಾಮಗಾರಿಗಳಲ್ಲಿ, ಕೆಲಸವೇ ನಡೆಯದೆ ಹಾಗೂ ಅರ್ಧಂಬರ್ಧ ಕಳಪೆ ಕಾಮಗಾರಿಗಳಿಗೆ ಬಿಲ್ ನೀಡಿರುವ ಬಗ್ಗೆ, ಕೋಳಿ ತ್ಯಾಜ್ಯ, ಖಾಸಗಿ ಕಾರ್ಖಾನೆಗಳು, ಶಾಲೆಗಳಲ್ಲಿ ಕಂದಾಯ ವಸೂಲಿ ಮಾಡದ ಬಗ್ಗೆ ಹಲವಾರು ಪ್ರಶ್ನೆಗಳನ್ನು ಪತ್ರಕರ್ತರು ಮುಂದಿಟ್ಟು ಚರ್ಚಿಸಿದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ

ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)

ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ

ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.

ಚನ್ನಪಟ್ಟಣ :  ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ

ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು

ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ

ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್

ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ

ರಾಮನಗರ, ಫೆ. 16  ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ

ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ

ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ

ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ

ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು,  ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ

ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು

ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ

ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್

ರಾಮನಗರ, ಫೆ. 12:   ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ

ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್


ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ

Top Stories »  


Top ↑