Tel: 7676775624 | Mail: info@yellowandred.in

Language: EN KAN

    Follow us :


*ಗಬ್ಬೆದ್ದು ನಾರುತ್ತಿದೆ ತಾಲ್ಲೂಕು ಕಛೇರಿಯ ಆವರಣದಲ್ಲಿರುವ ಸಾರ್ವಜನಿಕ ಶೌಚಾಲಯ*

Posted date: 16 Oct, 2020

Powered by:     Yellow and Red


ಚನ್ನಪಟ್ಟಣ:ಅ/15/20/ಗುರುವಾರ.

ಪ್ರತಿನಿತ್ಯವೂ ಸಹಸ್ರಾರು ಮಂದಿ ಒಂದಿಲ್ಲೊಂದು ಕೆಲಸದ ನಿಮಿತ್ತ ನಗರದ ತಾಲ್ಲೂಕು ಕಛೇರಿಗೆ ಎಡತಾಕುವ ಸಾರ್ವಜನಿಕರಿಗೆಂದೇ ಇತ್ತೀಚಿಗೆ ದುಡ್ಡು ಕೊಟ್ಟು ಉಪಯೋಗಿಸುವ ಸಾರ್ವಜನಿಕ ಶೌಚಾಲಯವು ಗಬ್ಬೆದ್ದು ನಾರುತ್ತಿದೆ.

ಅತಿ ಚಿಕ್ಕದಾದ ಈ ಶೌಚಾಲಯದಲ್ಲಿ ಸಾಮಾನ್ಯವಾಗಿ ಗಂಡಸರಿಗೆ ಮತ್ತು ಹೆಂಗಸರಿಗೆ ಎಂದು ಎರಡು ಭಾಗ ಮಾಡಿದ್ದು, ಸದ್ಯ ಗಂಡಸರ ಕಕ್ಕಸ್ಸು ಮನೆಯ ಬಾಗಿಲು ತೆಗೆದಿದ್ದು ಅವಸರವಾದವರೇನಕರು ಹೋಗಿ ಬಂದು, ನಿರ್ವಹಣೆ ಮಾಡದೆ ಗಬ್ಬು ನಾರುತ್ತಿದ್ದರೆ, ಹೆಂಗಸರು ಉಪಯೋಗಿಸಲೋಸುಗ ಇರುವ ಕಕ್ಕಸ್ಸು ಮನೆಯು ಬೀಗ ಜಡಿದು ನಿಂತಿದೆ.

ಸಾರ್ವಜನಿಕರ ಆರೋಗ್ಯ ಮತ್ತು ಸ್ವಚ್ಚತಾ ದೃಷ್ಟಿಯಿಂದ ಅತ್ಯವಶ್ಯಕವಾಗಿರುವ ಸಾರ್ವಜನಿಕ ಶೌಚಾಲಯವನ್ನು, ತಾಲ್ಲೂಕಿನ ಕೇಂದ್ರ ಬಿಂದುವಾದ ತಾಲ್ಲೂಕು ದಂಡಾಧಿಕಾರಿಯವರ ಕಛೇರಿಯ ಆವರಣದಲ್ಲೇ ಈ ರೀತಿಯಲ್ಲಿ ಅಸೌಖ್ಯವಾಗಿ ಇಟ್ಟಿರುವುದು ತಾಲ್ಲೂಕು ಆಡಳಿತಕ್ಕೆ ಕಪ್ಪು ಚುಕ್ಕೆಯಾಗಿರುವುದು ಅಷ್ಟೇ ಸತ್ಯ.


ನಗರದಾದ್ಯಂತ ಬೆರಳೆಣಿಕೆಯಷ್ಟು ಮಾತ್ರ ಸಾರ್ವಜನಿಕ ಶೌಚಾಲಯಗಳಿದ್ದು, ಎಲ್ಲವೂ ರೋಗಗ್ರಸ್ತ ಶೌಚಾಲಯಗಳಾಗಿವೆ. ಒಬ್ಬ ಹೊರಗಿನ ವ್ಯಕ್ತಿ ಅವಸರವಾದಾಗ ತನ್ನ ಬಹಿರ್ದೆಸೆ ತೀರಿಸಿಕೊಳ್ಳಲು ಹರಸಾಹಸ ಪಡಬೇಕಾದ ಸ್ಥಿತಿ ನಗರದಲ್ಲಿ ಬಂದೊದಗಿದೆ. ಈ ವಿಷಯದಲ್ಲಿ ನಗರಸಭೆಯು ಹಿಂದುಳಿದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.

ಗೋ ರಾ ಶ್ರೀನಿವಾಸ...
ಮೊ:9845856139.


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಮೂರು ದಿನಗಳ ರಜೆಯ ಹಿನ್ನೆಲೆ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ವಾಹನಗಳ ಭರಾಟೆ
ಮೂರು ದಿನಗಳ ರಜೆಯ ಹಿನ್ನೆಲೆ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ವಾಹನಗಳ ಭರಾಟೆ

ಚನ್ನಪಟ್ಟಣ:ಅ/27/20/ಮಂಗಳವಾರ. ತಿಂಗಳ ಕೊನೆಯ ಶನಿವಾರ, ಭಾನುವಾರ ದ ಜೊತೆಗೆ ಆಯುಧ ಪೂಜೆ, ಸೋಮವಾರ ವಿಜಯದಶಮಿ ಹೀಗೆ ಸಾಲುಸಾಲು ರಜೆಗಳ ಹಿನ್ನೆಲೆ

ಅಬ್ಬೂರುದೊಡ್ಡಿ ಗ್ರಾಮದ ಬೀರೇಶ್ವರ ಶಾಲೆಯ ಸುತ್ತ, ಒತ್ತುವರಿ ತೆರವುಗೊಳಿಸಿದ ಕಂದಾಯ ಇಲಾಖೆ
ಅಬ್ಬೂರುದೊಡ್ಡಿ ಗ್ರಾಮದ ಬೀರೇಶ್ವರ ಶಾಲೆಯ ಸುತ್ತ, ಒತ್ತುವರಿ ತೆರವುಗೊಳಿಸಿದ ಕಂದಾಯ ಇಲಾಖೆ

ಚನ್ನಪಟ್ಟಣ:ಅ/23/20/ಶುಕ್ರವಾರ. ತಾಲ್ಲೂಕಿನ ಅಬ್ಬೂರುದೊಡ್ಡಿ ಗ್ರಾಮದಲ್ಲಿರುವ ಶ್ರೀ ಬೀರೇಶ್ವರ ಶಾಲೆಯ ಸುತ್ತ ಕೆಲವು ರೈತರು ಒತ್ತುವರಿ ಮಾಡಿಕೊ

ಹುಟ್ಟಿದ ಮರುಕ್ಷಣವೇ ಹಸುಗೂಸನ್ನು ಬೀದಿಗೆಸೆದ \
ಹುಟ್ಟಿದ ಮರುಕ್ಷಣವೇ ಹಸುಗೂಸನ್ನು ಬೀದಿಗೆಸೆದ \"ಮಹಾ\"ತಾಯಿ

ಚನ್ನಪಟ್ಟಣ:ಅ/22/20/ಗುರುವಾರ. ಆಗತಾನೇ ಜನಿಸಿರುವ ನವಜಾತ ಗಂಡು ಶಿಶುವೊಂದನ್ನು ಪಾಪಿ ತಾಯಿಯೊಬ್ಬಳು (ಅಥವಾ ಸಂಬಂಧಿಸಿದ ಇತರರು ಇರಬಹುದು) ನಗರದ

ಪತ್ರಕರ್ತರು ನಿಧನರಾದಾಗ ಅವರಿಗೆ ಸಹೋದ್ಯೋಗಿಗಳೇ ನೆರವಾಗುವ ಮಟ್ಟಕ್ಕೆ ಸಂಘವು ಬೆಳೆಯಬೇಕು; ನಟರಾಜ್
ಪತ್ರಕರ್ತರು ನಿಧನರಾದಾಗ ಅವರಿಗೆ ಸಹೋದ್ಯೋಗಿಗಳೇ ನೆರವಾಗುವ ಮಟ್ಟಕ್ಕೆ ಸಂಘವು ಬೆಳೆಯಬೇಕು; ನಟರಾಜ್

ಚನ್ನಪಟ್ಟಣ:ಅ/21/20/ಬುಧವಾರ. ಸಮಯದ ಅರಿವೇ ಇಲ್ಲದೇ, ಸರ್ವರ ಕಷ್ಟಗಳಿಗೂ ತಮ್ಮ ವರದಿಗಳಿಂದಲೇ ನ್ಯಾಯ ಕೊಡಿಸುವ ಮೂಲಕ ಸಮಾಜಕ್ಕೆ ನೆರವಾಗುವ ಒಬ್ಬ

ಗಡಿ ಮತ್ತು ನಾಗರೀಕರನ್ನು ಕಾಯುವ ಪೋಲಿಸರಿಗೆ ಸರ್ವರೂ ಗೌರವ ನೀಡಬೇಕು; ಜಿಲ್ಲಾಧಿಕಾರಿ ಅರ್ಚನಾ
ಗಡಿ ಮತ್ತು ನಾಗರೀಕರನ್ನು ಕಾಯುವ ಪೋಲಿಸರಿಗೆ ಸರ್ವರೂ ಗೌರವ ನೀಡಬೇಕು; ಜಿಲ್ಲಾಧಿಕಾರಿ ಅರ್ಚನಾ

ಚನ್ನಪಟ್ಟಣ:ಅ:21/20/ಬುಧವಾರ. ಗಡಿಯನ್ನು ಮತ್ತು ನಾಗರೀಕರನ್ನು ಸದಾ ಕಾಯುವ ಪೋಲಿಸರಿಗೆ ಸಾರ್ವಜನಿಕರು ಗೌರವವನ್ನು ನೀಡಬೇಕು.

ಅವ

*ಹಾರುತಿಹುದು, ತೂರುತಿಹುದು, ನಗರಸಭೆಯ ಕಸವೂ, ವಿಲೇವಾರಿ ಆಗದೆ ಮನೆಯ ಮುಂದೆಮುಂದೆ.*

Top Stories »  


Top ↑