ರಾಜಕೀಯ ಪಕ್ಷಗಳು ಸ್ವಾರ್ಥಕ್ಕಾಗಿ ದ್ವೇಷ ಬಿತ್ತುವ ಕೆಲಸ ನಿಲ್ಲಿಸಬೇಕು : ಡಾ. ಬೈರಮಂಗಲ ರಾಮೇಗೌಡ

ರಾಮನಗರ : ಜನಾಂಗ ಜನಾಂಗಗಳ ನಡುವೆ ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥಕ್ಕಾಗಿ ದ್ವೇಷ ಬಿತ್ತುವ ಕೆಲಸ ಮಾಡುತ್ತಿವೆ. ಇದು ನಿಲ್ಲಬೇಕು ಎಂದು ವಿಮರ್ಶಕ ಡಾ. ಬೈರಮಂಗಲ ರಾಮೇಗೌಡ ತಿಳಿಸಿದರು.
ನಗರದ ಶಾಂತಲಾ ಕಲಾಕೇಂದ್ರದ ದರ್ಪಣ ಸಭಾಂಗಣದಲ್ಲಿ ಜಿಲ್ಲಾ ಲೇಖಕರ ವೇದಿಕೆ ವತಿಯಿಂದ ಆಯೋಜಿಸಿದ್ದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ, ಕವಿಗೋಷ್ಠಿ ಹಾಗೂ ಗೀತಗಾಯನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಎಲ್ಲಾ ರಾಜಕೀಯ ಪಕ್ಷಗಳು ಚರ್ಚೆ ಮಾಡಿ ಅಭಿವೃದ್ಧಿ ಪ್ರಾಧಿಕಾರಿಗಳನ್ನು ಅಥವಾ ನಿಗಮಗಳನ್ನು ಸ್ಥಾಪನೆ ಮಾಡಿದರೆ ಗೊಂದಲಗಳು ಉಂಟಾಗುವುದಿಲ್ಲ ಎಂದು ತಿಳಿಸಿದರು.
ರಾಜಕೀಯ ವ್ಯಕ್ತಿಗಳನ್ನು ಟೀಕಿಸಿ ಬರೆದಾಗ ಅವರನ್ನು ಜೈಲಿಗಟ್ಟುವ ಕೆಲಸ ನಡೆಯುತ್ತಿದೆ. ಇದು ನಿಲ್ಲಬೇಕು. ಕನ್ನಡ ನಾಡು, ನುಡಿಯ ವಿಷಯದಲ್ಲಿ ಎಲ್ಲಾ ಸರ್ಕಾರಗಳು ಆಶ್ವಾಸನೆಗಳನ್ನು, ಭರವಸೆಗಳನ್ನು ನೀಡುತ್ತಾ ಬಂದಿವೆಯೆ ಹೊರೆತು ಕಾರ್ಯಗತಗೊಳಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಕೆ.ಆರ್. ವಿನುತ ಮಾತನಾಡಿ ಮೈಸೂರು ಸಂಸ್ಥಾನದಂತೆ ಉತ್ತರ ಕರ್ನಾಟಕವನ್ನು ಅಭಿವೃದ್ಧಿಗೊಳಿಸಬೇಕೆಂಬ ನಿಟ್ಟಿನಲ್ಲಿ 1973 ನವೆಂಬರ್ 1 ರಂದು ಮೈಸೂರು ಸಂಸ್ಥಾನಕ್ಕೆ ಕರ್ನಾಟಕ ಎಂಬ ಹೆಸರನ್ನು ಇಡಲಾಯಿತು. ಆದರೆ ಉತ್ತರ ಕರ್ನಾಟಕದ ಭಾಗವು ಇಂದೂ ಸಹ ಅಭಿವೃದ್ಧಿಯತ್ತ ಮುಖ ಮಾಡಿಲ್ಲ ಎಂದು ತಿಳಿಸಿದರು.
ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ಹೆಚ್ಚಿನ ಮೀಸಲಾತಿಯನ್ನು ನೀಡಬೇಕಿದೆ. ಉನ್ನತ ವ್ಯಾಸಂಗಕ್ಕೆ ಬೇಕಾದ ಸಂಪನ್ಮೂಲ ಪುಸ್ತಕಗಳನ್ನು ಅನುವಾದ ಮಾಡಬೇಕಾದ ಅವಶ್ಯಕತೆ ಇದೆ ಎಂದು ತಿಳಿಸಿದರು.
ಸಾಹಿತಿ ಡಾ. ಮಲ್ಲಿಕಾರ್ಜುನ ಛಬ್ಬಿ ಮಾತನಾಡಿ ಕವಿಯಾದವನು ಹೆಚ್ಚು ಅಧ್ಯಯನ ಮಾಡಬೇಕು. ತನ್ನ ದೇಸಿ ನೆಲೆಯಲ್ಲಿ ಕವಿತೆಗಳನ್ನು ಬರೆದಾಗ ಅದು ಹೆಚ್ಚು ಅರ್ಥಪೂರ್ಣವಾಗಿರುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಹಿರಿಯ ಸಾಂಸ್ಕøತಿಕ ಸಂಘಟಕಿ ಜೆ. ಶಾಂತಬಾಯಿ, ರಂಗಭೂಮಿಯ ಹಿರಿಯ ಕಲಾವಿದೆ ಎನ್. ಶಾಂತಮ್ಮ, ತೊಗಲುಗೊಂಬೆಯಾಟದ ಕಲಾವಿದೆ ಗೌರಮ್ಮ, ಸಾಂಸ್ಕøತಿಕ ಸಂಘಟಕಿ ಕವಿತಾರಾವ್, ನಿವೃತ್ತ ಅಧ್ಯಾಪಕ ಬಿ. ನರಸಿಂಹಯ್ಯ, ಕವಿ ಕಾಕೋಳು ಶೈಲೇಂದ್ರ ಅವರನ್ನು ಸನ್ಮಾನಿಸಲಾಯಿತು.
ಕವಿಗಳಾದ ಡಾ. ಅಂಕನಹಳ್ಳಿ ಪಾರ್ಥ, ಎಚ್.ಕೆ. ಶೈಲಾಶ್ರೀನಿವಾಸ್, ಎಸ್. ನರಸಿಂಹಸ್ವಾಮಿ, ಡಾ. ಎಚ್.ವಿ. ಮೂರ್ತಿ, ಎಂ.ಎಸ್. ಚನ್ನವೀರಪ್ಪ, ಜಿ. ಕೃಷ್ಣಾನಾಯಕ್ ಅವರು ಕವನಗಳನ್ನು ವಾಚಿಸಿದರು. ಗಾಯಕರಾದ ಕೆಂಗಲ್ ವಿನಯ್ ಕುಮಾರ್, ಗೋಪಾಲ್ ಅವರು ಗೀತಗಾಯನ ನಡೆಸಿಕೊಟ್ಟರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸಿಂ.ಲಿಂ. ನಾಗರಾಜ್, ಸ್ನೇಹಕೂಟ ಸಂಸ್ಥೆ ಅಧ್ಯಕ್ಷ ಎಚ್.ಪಿ. ನಂಜೇಗೌಡ, ಅಮೃತ ವಿಕಲಚೇತನ ಟ್ರಸ್ಟಿನ ಕಾರ್ಯದರ್ಶಿ ಟಿ. ರಮೇಶ್, ರಾಜ್ಯ ಒಕ್ಕಲಿಗರ ಒಕ್ಕೂಟದ ಸಂಘಟನಾ ಕಾರ್ಯದರ್ಶಿ ಜಿ.ಪಿ. ಕಾಡೇಗೌಡ ಗಬ್ಬಾಡಿ, ವಕೀಲರ ಸಾಹಿತ್ಯ ಕೂಟದ ಅಧ್ಯಕ್ಷ ನಂಜಪ್ಪ ಕಾಳೇಗೌಡ, ಜಿಲ್ಲಾ ಲೇಖಕರ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೂ.ಗಿ. ಗಿರಿಯಪ್ಪ, ಪ್ರಧಾನ ಕಾರ್ಯದರ್ಶಿ ಎಸ್. ರುದ್ರೇಶ್ವರ, ತಾಲ್ಲೂಕು ಅಧ್ಯಕ್ಷ ಸಿ. ರಮೇಶ್ ಹೊಸದೊಡ್ಡಿ ಇತರರು ಇದ್ದರು.
Recent news in ramanagara »

ಕ್ಲಸ್ಟರ್ ಪಾರ್ಕಗಳಿಂದ ಹೆಚ್ಚಿನ ಉದ್ಯೋಗ ಸೃಷ್ಟಿ: ಜಗದೀಶ್ ಶೆಟ್ಟರ್
ರಾಮನಗರ:ಜ/20/21/ಬುಧವಾರ. ಕೈಗಾರಿಕಾ ಕ್ಲಸ್ಟರ್ಗಳಿಂದ ಹೆಚ್ಚಿನ ಕೈಗಾರಿಕೆಗಳು ರಚನೆಯಾಗಿ ಸ್ಥಳೀಯವಾಗಿ ಹೆಚ್ಚಿನ ಉದ್ಯೋಗ ದೊರೆಯುತ್ತದೆ. ಇದರಿ

ರಾಮನಗರ ಜಿಲ್ಲೆಯಲ್ಲಿ ಮಹಿಳಾ ಕಾಯಕೋತ್ಸವಕ್ಕೆ ಚಾಲನೆ
ರಾಮನಗರ:ಜ/20/21/ಬುಧವಾರ. ಮಹಾತ್ಮಗಾಂಧಿ ನರೇಗಾ ಯೋಜನೆಯಡಿ (ಮನರೇಗಾ) ಮಹಿಳೆಯರು ಭಾಗವಹಿಸುವಿಕೆ ಹೆಚ್ಚಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯ

ಶುಕ್ರವಾರ ಅಂಬೇಡ್ಕರ್ ಭವನ ಉದ್ಘಾನೆ. ಹೆಚ್ ಡಿ ಕುಮಾರಸ್ವಾಮಿ
ಚನ್ನಪಟ್ಟಣ:ಜ/20/21ಬುಧವಾರ. ಈ ತಿಂಗಳ 22 ನೇ ತಾರೀಖಿನ ಶುಕ್ರವಾರದಂದು ನಗರದ ಅಂಬೇಡ್ಕರ್ ಭವನವನ್ನು ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಶ್ರೀರಾಮು

ಗುತ್ತಲೆಹುಣಸೆ ಗ್ರಾಮಕ್ಕೆ ವಸತಿ ಸಚಿವ ವಿ ಸೋಮಣ್ಣ ಭೇಟಿ
ರಾಮನಗರ:ಜ/18/21/ಸೋಮವಾರ. ವಸತಿ ಸಚಿವರಾದ ವಿ. ಸೋಮಣ್ಣ ಅವರು ಇಂದು ಕನಕಪುರ ತಾಲ್ಲೂಕಿನ ಗುತ್ತಲಹುಣಸೆ ಗ್ರಾಮದಲ್ಲಿರುವ ಶ್ರೀ ಮಲೆ ಮಹದೇಶ್ವರಸ್

ಗಣರಾಜ್ಯೋತ್ಸವ ಹಬ್ಬ ಸರಳವಾಗಿ ಆಚರಿಸಲಾಗುತ್ತದೆ ತಹಶಿಲ್ದಾರ್ ನಾಗೇಶ್
- ಚನ್ನಪಟ್ಟಣ:ಜ/19/21/ಮಂಗಳವಾರ.
ಇದೇ ತಿಂಗಳ 26 ನೇ ತಾರೀಖಿನಂದು ನಡೆಯುವ ಗಣರಾಜ್ಯೋತ್ಸವ ಹಬ್ಬವನ್ನು ಸರಳವಾಗಿ, ಅರ್ಥಪೂರ್ಣವಾಗಿ ಹಾಗೂ ಪ್ರೋಟೋಕಾಲ್ ನಿಯಮಾನುಸಾರ ಪದವಿಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ಆಚ

ಖಾತೆ ರಹಿತ ನೂತನ ಸಚಿವ ಸಿ ಪಿ ಯೋಗೇಶ್ವರ್ ರವರಿಗೆ ಅದ್ದೂರಿ ಸ್ವಾಗತ ಕೋರಿದ ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು
ಚನ್ನಪಟ್ಟಣ/ಜ/18/21/ಸೋಮವಾರ. ರಾಜ್ಯದ ಮಂತ್ರಿಯಾಗಿ ಇವತ್ತಿಗೂ ಸಹ ಖಾತೆ ಗಳಿಸದ, ಆಧುನಿಕ ಭಗಿರಥ ಎಂದೇ ಹೆಸರು ಮಾಡಿರುವ ಚನ್ನಪಟ್ಟಣ ಕ್ಷೇತ್ರದ

ಪ್ರಥಮ ಬಾರಿಗೆ ತಾಲ್ಲೂಕಿನ ಇಗ್ಗಲೂರು ಮತ್ತು ನಗರ ಸಾರ್ವಜನಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳಿಗೆ ಇಂದು ಲಸಿಕೆ
ಚನ್ನಪಟ್ಟಣ:ಜ/16/21/ಶನಿವಾರ. ವಿಶ್ವವನ್ನೇ ಗಾಬರಿ ಹುಟ್ಟಿಸಿ, ವಿಶ್ವದಾದ್ಯಂತ ಲಕ್ಷಾಂತರ ಮಂದಿಯನ್ನು ಬಲಿ ಪಡೆದ ಕೊರೊನಾ ಮಾರಿಗೆ ಭಾರತದ

ಜಿಲ್ಲೆಯಲ್ಲಿ ಮೊದಲನೇ ದಿನ 353 ಜನರಿಗೆ ಕೋವಿಡ್-19 ಲಸಿಕೆ
ರಾಮನಗರ:ಜ/16/21/ಶನಿವಾರ. ಕೋವಿಡ್-19 ಲಸಿಕೆ ನೀಡಲು ಪ್ರಾರಂಭವಾದ ಮೊದಲನೇ ದಿನವಾದ ಇಂದು (ದಿನಾಂಕ 16-01-2020) 353 ಜನರಿಗೆ ಲಸಿಕೆ ನೀಡಲಾಗಿ

ರಾಮನಗರ ಜಿಲ್ಲೆಗೆ ಆಗಮಿಸಿದ ಕೊರೋನಾ ಲಸಿಕೆ ಹರ್ಷ ವ್ಯಕ್ತಪಡಿಸಿದ ಜಿಲ್ಲಾಡಳಿತ
ರಾಮನಗರ:ಜ/15/21/ಶುಕ್ರವಾರ. ರಾಮನಗರ ಜಿಲ್ಲೆಗೆ ಶುಕ್ರವಾರ ಬೆಳಿಗ್ಗೆ ಬಂದ 5000 ಕೊರೋನಾ ಲಸಿಕೆ ಬಂತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿ

ಮಕರ ಸಂಕ್ರಾಂತಿ ಹಬ್ಬವು ರಾಶಿ ರಾಸುಗಳ ಜೊತೆಗೆ ಹೆಣ್ಮಕ್ಕಳ ಹಬ್ಬವೂ ಹೌದು ಜಿಲ್ಲಾಧಿಕಾರಿ ಅರ್ಚನಾ
ರಾಮನಗರ:ಜ/14/21/ಗುರುವಾರ. ಮಕರ ಸಂಕ್ರಾಂತಿ ಹಬ್ಬವು ರಾಶಿ, ರಾಸುಗಳ ಜೊತೆಗೆ ರೈತರಿಗೆ ಸುಗ್ಗಿಯ ಹಬ್ಬ. ಹಾಗೆ ಹೆಣ್ಣು ಮಕ್ಕಳಿಗೆ ಬಾಗಿನ ಹಬ್ಬವ
ಪ್ರತಿಕ್ರಿಯೆಗಳು