ಪುರಾಣ ಪ್ರಸಿದ್ಧ ಅಯ್ಯನ ಗುಡಿ ಜಾತ್ರೆ ರದ್ದು ಇಓ ತಮ್ಮೇಗೌಡ

ಚನ್ನಪಟ್ಟಣ:ಜ/12/21/ಮಂಗಳವಾರ. ಪುರಾಣ ಪ್ರಸಿದ್ಧ ಐತಿಹಾಸಿಕ ಅಯ್ಯನಗುಡಿ(ಕೆಂಗಲ್)ಯಲ್ಲಿ
ನಡೆಯುತಿದ್ದ ಜನ,ಜಾನುವಾರುಗಳ ಜಾತ್ರೆಯು ಕೋವಿಡ್೧೯ ಕಾರಣದಿಂದ ಹಾಗೂ ಕೋವಿಡ್ ಹರಡಬಾರದೆಂಬ ಮುನ್ನೆಚ್ಚರಿಕೆ ಯೊಂದಿಗೆ ಸರ್ಕಾರದ ಆದೇಶದನ್ವಯ ಜಾತ್ರೆಯನ್ನು ರದ್ದುಗೊಳಿಸಲಾಗಿದೆ ಎಂದು ಕೆಂಗಲ್ ಆಂಜನೇಯ ಸ್ವಾಮಿ ದೇವಾಲಯ ದ ಕಾರ್ಯ ನಿರ್ವಾಹಕ ಅಧಿಕಾರಿ ತಮ್ಮೇಗೌಡ ಅವರು ಕೆಂಗಲ್ ಜಾತ್ರೆಯ ಬಗ್ಗೆ ಪತ್ರಿಕೆಗೆ ಮಾಹಿತಿ ನೀಡಿದರು.
ಪ್ರತಿ ವರ್ಷದಂತೆ ಈ ವರ್ಷವು ಸಹ ಜಾತ್ರೆಯು ಜರುಗಬೇಕಾಗಿತ್ತು. ಆದರೆ ಕೋವಿಡ್ ಇರುವುದರಿಂದ ಸರ್ಕಾರದ ಆದೇಶದನ್ವಯ ಸಾರ್ವಜನಿಕರ ಹಿತ ದೃಷ್ಟಿಯಿಂದ ಜಾತ್ರೆಯನ್ನು ರದ್ದು ಗೊಳಿಸಲಾಗಿದೆ.
ಭಕ್ತಾದಿಗಳು ಹಾಗೂ ಸಾರ್ವಜನಿಕರು ಸಹಕರಿಸಬೇಕೆಂದು ಮನವಿ ಮಾಡಿದರು.
ಪ್ರಧಾನ ಅರ್ಚಕ ರವೀಂದ್ರ ರವರು ಮಾತನಾಡಿ ಇದೇ ತಿಂಗಳ 14 ರ ಮಕರ ಸಂಕ್ರಾಂತಿ ದಿನದಂದು ಜಾತ್ರೆಯು ಪ್ರಾರಂಭವಾಗಿ 7 ದಿನಗಳು ಅಂದರೆ 20 ನೇ ತಾರೀಖಿನ. ತನಕ ಜಿಲ್ಲಾಡಳಿತ ಮತ್ತು ಸಾರ್ವಜನಿಕ ರ ಸಹಕಾರ ದೊಂದಿಗೆ ಜರುಗಬೇಕಾಗಿತ್ತು, ಕೋವಿಡ್ ಕಾರಣದಿಂದ ಜಾತ್ರೆ ರದ್ದು ಪಡಿಸಲಾಗಿದೆ.
ಜಾತ್ರೆ ರದ್ದಾಗಿದ್ದರೂ ಸಹ ದೇವರಿಗೆ ನಡೆಯುವ ಸೇವಾ ಕೈಂಕರ್ಯಗಳು ಭಕ್ತಾದಿಗಳಿಗೆ ಮುಂಜಾಗ್ರತಾ ಕ್ರಮವನ್ನು ಕೈಗೊಂಡು ಭಗವಂತನ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಮತ್ತೋರ್ವ ಅರ್ಚಕ ಶರತ್ ಕುಮಾರ್ ಉಪಸ್ಥಿತರಿದ್ದರು.
ಗೋ ರಾ ಶ್ರೀನಿವಾಸ್...
ಮೊ:9845856139.
Recent news in ramanagara »

ಆರೋಗ್ಯ ಇಲಾಖೆ ಸಾರ್ವಜನಿಕರ ನಡುವೆ ಮಾಧ್ಯಮಗಳು ಜ್ಞಾನದ ಸೇತುವೆಯಾಗಿವೆ. ಡಾ ಪ್ರಸನ್ನ
ರಾಮನಗರ:ಜ/23/21/ಶನಿವಾರ. ಆರೋಗ್ಯ ಇಲಾಖೆಯಲ್ಲಿ ಜನರ ಆರೋಗ್ಯ ಕಾಪಾಡಲು ಹಲವಾರು ಯೋಜನೆಗಳನ್ನು ರೂಪಿಸಲಾಗುತ್ತಿದೆ. ಇದನ್ನು ಅನುಷ್ಠಾನಗೊಳಿಸಲು

ಅಂಬೇಡ್ಕರ್ ರವರ ಹೋರಾಟದ ಬದುಕೇ ನಮಗೆ ಆದರ್ಶವಾಗಬೇಕು ಶ್ರೀರಾಮುಲು.
ಚನ್ನಪಟ್ಟಣ:ಜ/22/21/ಶುಕ್ರವಾರ. ನಮಗೆ ಅಂಬೇಡ್ಕರ್ ರವರ ಹೋರಾಟದ ಜೀವನ ಮಾದರಿಯಾಗಬೇಕು.
ಹನ್ನೆರಡನೇ ಶತಮಾನದಲ್ಲಿ ಬಸವಣ್ಣ ಮತ್ತು

ಕ್ಲಸ್ಟರ್ ಪಾರ್ಕಗಳಿಂದ ಹೆಚ್ಚಿನ ಉದ್ಯೋಗ ಸೃಷ್ಟಿ: ಜಗದೀಶ್ ಶೆಟ್ಟರ್
ರಾಮನಗರ:ಜ/20/21/ಬುಧವಾರ. ಕೈಗಾರಿಕಾ ಕ್ಲಸ್ಟರ್ಗಳಿಂದ ಹೆಚ್ಚಿನ ಕೈಗಾರಿಕೆಗಳು ರಚನೆಯಾಗಿ ಸ್ಥಳೀಯವಾಗಿ ಹೆಚ್ಚಿನ ಉದ್ಯೋಗ ದೊರೆಯುತ್ತದೆ. ಇದರಿ

ರಾಮನಗರ ಜಿಲ್ಲೆಯಲ್ಲಿ ಮಹಿಳಾ ಕಾಯಕೋತ್ಸವಕ್ಕೆ ಚಾಲನೆ
ರಾಮನಗರ:ಜ/20/21/ಬುಧವಾರ. ಮಹಾತ್ಮಗಾಂಧಿ ನರೇಗಾ ಯೋಜನೆಯಡಿ (ಮನರೇಗಾ) ಮಹಿಳೆಯರು ಭಾಗವಹಿಸುವಿಕೆ ಹೆಚ್ಚಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯ

ಶುಕ್ರವಾರ ಅಂಬೇಡ್ಕರ್ ಭವನ ಉದ್ಘಾನೆ. ಹೆಚ್ ಡಿ ಕುಮಾರಸ್ವಾಮಿ
ಚನ್ನಪಟ್ಟಣ:ಜ/20/21ಬುಧವಾರ. ಈ ತಿಂಗಳ 22 ನೇ ತಾರೀಖಿನ ಶುಕ್ರವಾರದಂದು ನಗರದ ಅಂಬೇಡ್ಕರ್ ಭವನವನ್ನು ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಶ್ರೀರಾಮು

ಗುತ್ತಲೆಹುಣಸೆ ಗ್ರಾಮಕ್ಕೆ ವಸತಿ ಸಚಿವ ವಿ ಸೋಮಣ್ಣ ಭೇಟಿ
ರಾಮನಗರ:ಜ/18/21/ಸೋಮವಾರ. ವಸತಿ ಸಚಿವರಾದ ವಿ. ಸೋಮಣ್ಣ ಅವರು ಇಂದು ಕನಕಪುರ ತಾಲ್ಲೂಕಿನ ಗುತ್ತಲಹುಣಸೆ ಗ್ರಾಮದಲ್ಲಿರುವ ಶ್ರೀ ಮಲೆ ಮಹದೇಶ್ವರಸ್

ಗಣರಾಜ್ಯೋತ್ಸವ ಹಬ್ಬ ಸರಳವಾಗಿ ಆಚರಿಸಲಾಗುತ್ತದೆ ತಹಶಿಲ್ದಾರ್ ನಾಗೇಶ್
- ಚನ್ನಪಟ್ಟಣ:ಜ/19/21/ಮಂಗಳವಾರ.
ಇದೇ ತಿಂಗಳ 26 ನೇ ತಾರೀಖಿನಂದು ನಡೆಯುವ ಗಣರಾಜ್ಯೋತ್ಸವ ಹಬ್ಬವನ್ನು ಸರಳವಾಗಿ, ಅರ್ಥಪೂರ್ಣವಾಗಿ ಹಾಗೂ ಪ್ರೋಟೋಕಾಲ್ ನಿಯಮಾನುಸಾರ ಪದವಿಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ಆಚ

ಖಾತೆ ರಹಿತ ನೂತನ ಸಚಿವ ಸಿ ಪಿ ಯೋಗೇಶ್ವರ್ ರವರಿಗೆ ಅದ್ದೂರಿ ಸ್ವಾಗತ ಕೋರಿದ ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು
ಚನ್ನಪಟ್ಟಣ/ಜ/18/21/ಸೋಮವಾರ. ರಾಜ್ಯದ ಮಂತ್ರಿಯಾಗಿ ಇವತ್ತಿಗೂ ಸಹ ಖಾತೆ ಗಳಿಸದ, ಆಧುನಿಕ ಭಗಿರಥ ಎಂದೇ ಹೆಸರು ಮಾಡಿರುವ ಚನ್ನಪಟ್ಟಣ ಕ್ಷೇತ್ರದ

ಪ್ರಥಮ ಬಾರಿಗೆ ತಾಲ್ಲೂಕಿನ ಇಗ್ಗಲೂರು ಮತ್ತು ನಗರ ಸಾರ್ವಜನಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳಿಗೆ ಇಂದು ಲಸಿಕೆ
ಚನ್ನಪಟ್ಟಣ:ಜ/16/21/ಶನಿವಾರ. ವಿಶ್ವವನ್ನೇ ಗಾಬರಿ ಹುಟ್ಟಿಸಿ, ವಿಶ್ವದಾದ್ಯಂತ ಲಕ್ಷಾಂತರ ಮಂದಿಯನ್ನು ಬಲಿ ಪಡೆದ ಕೊರೊನಾ ಮಾರಿಗೆ ಭಾರತದ

ಜಿಲ್ಲೆಯಲ್ಲಿ ಮೊದಲನೇ ದಿನ 353 ಜನರಿಗೆ ಕೋವಿಡ್-19 ಲಸಿಕೆ
ರಾಮನಗರ:ಜ/16/21/ಶನಿವಾರ. ಕೋವಿಡ್-19 ಲಸಿಕೆ ನೀಡಲು ಪ್ರಾರಂಭವಾದ ಮೊದಲನೇ ದಿನವಾದ ಇಂದು (ದಿನಾಂಕ 16-01-2020) 353 ಜನರಿಗೆ ಲಸಿಕೆ ನೀಡಲಾಗಿ
ಪ್ರತಿಕ್ರಿಯೆಗಳು