Tel: 7676775624 | Mail: info@yellowandred.in

Language: EN KAN

    Follow us :


ನಗರದ ಪ್ರಥಮ ವಾರ್ಡ್ ನಲ್ಲಿ ಚರಂಡಿ ನೀರು ಹರಿಯಲಾಗದೆ, ಮನೆಗೆ ನುಗ್ಗುತ್ತಿದೆ. ಹೀಗೆ ಮುಂದುವರೆದರೆ ಉಗ್ರ ಪ್ರತಿಭಟನೆಗೆ ಸಿದ್ದ, ನಿವಾಸಿಗಳ ಎಚ್ಚರಿಕೆ

Posted date: 23 Feb, 2021

Powered by:     Yellow and Red

ನಗರದ ಪ್ರಥಮ ವಾರ್ಡ್ ನಲ್ಲಿ ಚರಂಡಿ ನೀರು ಹರಿಯಲಾಗದೆ, ಮನೆಗೆ ನುಗ್ಗುತ್ತಿದೆ. ಹೀಗೆ ಮುಂದುವರೆದರೆ ಉಗ್ರ ಪ್ರತಿಭಟನೆಗೆ ಸಿದ್ದ, ನಿವಾಸಿಗಳ ಎಚ್ಚರಿಕೆ

ನಗರದ ಪ್ರಥಮ ವಾರ್ಡ್ ನ ಬೀದಿಗಳಲ್ಲಿ ಚರಂಡಿ ನೀರು ಸರಾಗವಾಗಿ ಹರಿಯಲಾಗದೆ ನಿಂತಲ್ಲೆ ನಿಂತು ಗಬ್ಬೆದ್ದು ನಾರುತ್ತಿದೆ. ಮಳೆ ಬಂದಾಗಲಂತೂ ಗಬ್ಬು ನಾರುವ ಚರಂಡಿ ನೀರು ಸೀದಾ ಮನೆಯೊಳಗೆ ಬರುತ್ತದೆ. ನಗರಸಭೆಗೆ ಎಷ್ಟೇ ಮನವಿ ಮಾಡಿದರೂ ಸಹ ಚರಂಡಿಯನ್ನು ಸರಿಪಡಿಸುತ್ತಿಲ್ಲ. ಎಂದು ವಾರ್ಡ್ ನ ನಿವಾಸಿಗಳು ದೂರಿದ್ದಾರೆ.


ಎರಡು ಬೀದಿಗಳಲ್ಲಿನ ನಾಲ್ಕು ಬದಿ ಚರಂಡಿಗಳು ತುಂಬಿ ನಿಂತಿವೆ. ನಿಂತ ನೀರಿನಲ್ಲಿ ಹುಳುಗಳು ಹರಿದಾಡುತ್ತಿವೆ. ಸರೀಸೃಪಗಳು ಮನೆಗೆ ಬರುತ್ತಿವೆ. ಬೀದಿಯ ಕೆಳಭಾಗ ಖಾಸಗಿಯವರ ಜಮೀನಾಗಿದ್ದು, ಕೂಡ್ಲೂರು ಗ್ರಾಮದ ರಸ್ತೆಯ ಬದಿಯ ಚರಂಡಿಗೆ ನೀರು ಹರಿಯಬೇಕಾಗಿತ್ತು. ಆ ಚರಂಡಿಯೂ ಸಹ ಸಂಪೂರ್ಣವಾಗಿ ಮುಚ್ಚಿಹೋಗಿರುವುದರಿಂದ ಎರಡೂ ಕಡೆಯೂ ನೀರು ಹರಿಯಲಾಗದೇ ಮನೆಯೊಳಗೆ ಹರಿಯುತ್ತಿದೆ.


ವಾರ್ಡಿನ ಹತ್ತಿರದಲ್ಲಿಯೇ ವಾಹನಗಳನ್ನು ತೊಳೆಯುವ ಸರ್ವೀಸ್ ಸ್ಟೇಷನ್ ಇದ್ದು, ವಾಹನಗಳ ಗಲೀಜು ನೀರು ಸಹ ನಮ್ಮ ಚರಂಡಿಗೆ ಹರಿದು ಬರುತ್ತಿದೆ. ಇದನ್ನು ಕೇಳುವವರೇ ಇಲ್ಲವಾಗಿದೆ. ನಮ್ಮ ವಾರ್ಡಿನ ಒಂದು ಬದಿಯಲ್ಲಿ ರಾಜಕಾಲುವೆ ಮತ್ತೊಂದು ಬದಿಯಲ್ಲಿ ಶಿಂಷಾ ನದಿ ಇದೆ. ಆ ಕಡೆಗಾದರೂ ನೀರು ಹರಿಯುವಂತೆ ಮಾಡಿಕೊಡಲಿ ಎಂದು ಅವರು ಮನವಿ ಮಾಡಿದರು.


ಕಳೆದ ಎಂಟು ವರ್ಷಗಳಿಂದ ನಗರಸಭೆಯ ಸದಸ್ಯರುಗಳು ಇಲ್ಲಾ. ನಗರಸಭೆಯ ಅಧಿಕಾರಿಗಳು ಸ್ಪಂದಿಸುತ್ತಿಲ್ಕ. ಹೀಗಾಗಿ ನಮ್ಮ ಸಮಸ್ಯೆಗಳನ್ನು ಆಲಿಸುವವರಿಲ್ಲದೆ, ನಮ್ಮ ಕಷ್ಟವನ್ನು ಕೇಳುವವರೇ ಇಲ್ಲದಂತಾಗಿದೆ. ಹೀಗೇ ಮುಂದುವರೆದರೆ ನಗರಸಭೆಯ ಕಛೇರಿಯ ಮುಂಭಾಗ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

??????????????

  • ????? ???????? ??????????? ???? ??????????.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ವಿಶ್ವ ಮಹಿಳಾ ದಿನಾಚರಣೆಗೆ, ತಾಲ್ಲೂಕಿನ ಸಪ್ತ ಸಾಧಕ ಮಹಿಳೆಯರ ಪರಿಚಯ
ವಿಶ್ವ ಮಹಿಳಾ ದಿನಾಚರಣೆಗೆ, ತಾಲ್ಲೂಕಿನ ಸಪ್ತ ಸಾಧಕ ಮಹಿಳೆಯರ ಪರಿಚಯ

ಇಂದು ವಿಶ್ವ ಮಹಿಳಾ ದಿನಾಚರಣೆ. ದಿನಾಚರಣೆಯ ಅಂಗವಾಗಿ ನಮ್ಮ ತಾಲ್ಲೂಕಿನಲ್ಲಿ ವಿವಿಧ ಪ್ರಕಾರಗಳಲ್ಲಿ ಸಾಧನೆಗೈದ ಏಳು ಮಂದಿ ಮಹಿಳೆಯರನ್ನು ನಮ್ಮ ಪತ್ರಿಕೆ ಗುರುತಿಸಿ ಅವರ ಸಾಧನೆಯನ್ನು ಹೊರಜಗತ್ತಿಗೆ ಪರಿಚ

ನಿರ್ಗಮಿತ ಜಿಲ್ಲಾಧಿಕಾರಿ ಎಂ ಎಸ್ ಅರ್ಚನಾ ರವರಿಗೆ ಶುಭ ಹಾರೈಸಿದ ನೂತನ ಜಿಲ್ಲಾಧಿಕಾರಿ ರಾಕೇಶ್ ಕುಮಾರ್
ನಿರ್ಗಮಿತ ಜಿಲ್ಲಾಧಿಕಾರಿ ಎಂ ಎಸ್ ಅರ್ಚನಾ ರವರಿಗೆ ಶುಭ ಹಾರೈಸಿದ ನೂತನ ಜಿಲ್ಲಾಧಿಕಾರಿ ರಾಕೇಶ್ ಕುಮಾರ್

ನಿರ್ಗಮಿತ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಅವರಿಗೆ ಶುಭ ಹಾರೈಸಿದ ನೂತನ ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ಕೆ ಅವರು ಮಾತನಾಡಿ ವರ್ಗಾವಣೆಯಾದ ಸಂದರ್ಭದಲ್ಲಿ ಕೋರುವ ಒಳ್ಳೆಯ ಮಾತುಗಳು ಮುಂದಿನ ಕೆಲ

ನಿಜವಾದ ಕೊರೊನಾ ವಾರಿಯರ್ಸ್‌ ಎಂದರೆ ಅದು ಪತ್ರಕರ್ತರು ಮಾತ್ರ. ಶಿವಾನಂದ ತಗಡೂರು.
ನಿಜವಾದ ಕೊರೊನಾ ವಾರಿಯರ್ಸ್‌ ಎಂದರೆ ಅದು ಪತ್ರಕರ್ತರು ಮಾತ್ರ. ಶಿವಾನಂದ ತಗಡೂರು.

ರಾಮನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ರಾಮನಗರ ದ ರಾಮ್ ಗಢ್ ಹೋಟೆಲ್ ನ ಸಭಾಂಗಣದಲ್ಲಿ ಪತ್ರಕರ್ತರ ಕಾರ್ಯಾಗಾರ ನಡೆಯಿತು.


ರಾಜ್ಯ ಕಾರ್ಯಕಾರಿ ಸಮಿತಿಯ ಪದಾಧಿಕಾ

ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಎಚ್ಚರವಹಿಸಿ: ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್
ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಎಚ್ಚರವಹಿಸಿ: ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್

ರಾಮನಗರ: ಬೇಸಿಗೆ ಸಮೀಪಿಸುತ್ತಿದ್ದು, ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ ಸ್ಥಳಗಳನ್ನು ಗುರುತಿಸಿ ಮುನ್ನಚ್ಚರಿಕಾ ಕ್ರಮವಹಿಸಿ ಯಾವುದೇ

ಮನೆ ಇಲ್ಲದ ಅಲೆಮಾರಿ ಜನಾಂಗದವರನ್ನು  ಗುರುತಿಸಿ: ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್
ಮನೆ ಇಲ್ಲದ ಅಲೆಮಾರಿ ಜನಾಂಗದವರನ್ನು ಗುರುತಿಸಿ: ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್

ಜಿಲ್ಲೆಯಲ್ಲಿ ಮನೆಯಿಲ್ಲದ ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗದವರಿಗೆ ಸೂರು ಒದಗಿಸಲು  ಅರ್ಹ ಫಲಾನುಭವಿಗಳನ್ನು ಗ್ರಾಮ ಮಟ್ಟದಲ್ಲಿ ಗುರುತಿಸಿ ಪಟ್ಟಿ ಮಾಡುವಂತೆ ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ಕೆ

ಕೇಕ್ ಎಂಪೈರ್ ಬೇಕರಿ ಮತ್ತು ಕೆಫೆ
ಗ್ರಾಮೀಣ ಭಾಗದ ಆರೋಗ್ಯ ದೃಷ್ಟಿಯಿಂದ ಹೈಟೆಕ್ ಆಸ್ಪತ್ರೆ ನಿರ್ಮಾಣ: ಹೆಚ್ಡಿಕೆ.
ಗ್ರಾಮೀಣ ಭಾಗದ ಆರೋಗ್ಯ ದೃಷ್ಟಿಯಿಂದ ಹೈಟೆಕ್ ಆಸ್ಪತ್ರೆ ನಿರ್ಮಾಣ: ಹೆಚ್ಡಿಕೆ.

ಗ್ರಾಮೀಣ ಭಾಗದ ಜನರ ಆರೋಗ್ಯದ ಹಿತದೃಷ್ಟಿಯಿಂದ, ತಾಲ್ಲೂಕಿನಲ್ಲಿ ಸುಸಜ್ಜಿತ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪನೆ ಮಾಡುತ್ತಿರುವುದಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಕ್ಷೇತ್ರದ ಶಾಸಕ ಎಚ್.ಡಿ.ಕುಮಾ

ನೂತನ ಜಿಲ್ಲಾಧಿಕಾರಿಯಾಗಿ ಡಾ: ರಾಕೇಶ್ ಕುಮಾರ್ ಕೆ ಅಧಿಕಾರ ಸ್ವೀಕಾರ
ನೂತನ ಜಿಲ್ಲಾಧಿಕಾರಿಯಾಗಿ ಡಾ: ರಾಕೇಶ್ ಕುಮಾರ್ ಕೆ ಅಧಿಕಾರ ಸ್ವೀಕಾರ

ರಾಮನಗರ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಡಾ: ರಾಕೇಶ್ ಕುಮಾರ್ ಕೆ. ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಧಿಕಾರ ಸ್ವೀಕರಿಸಿದರು. 


ಡಾ: ರಾಕೇಶ್

ಅಪರಾಧ ಮುಕ್ತ ಮತ್ತು ಸ್ವಚ್ಛ ತಾಲ್ಲೂಕು ಮಾಡಲು ಪತ್ರಕರ್ತರ ಜೊತೆ ಸಮಾಲೋಚಿಸಿದ ಡಿವೈಎಸ್ಪಿ ರಮೇಶ್
ಅಪರಾಧ ಮುಕ್ತ ಮತ್ತು ಸ್ವಚ್ಛ ತಾಲ್ಲೂಕು ಮಾಡಲು ಪತ್ರಕರ್ತರ ಜೊತೆ ಸಮಾಲೋಚಿಸಿದ ಡಿವೈಎಸ್ಪಿ ರಮೇಶ್

ಇಡೀ ಚನ್ನಪಟ್ಟಣ ತಾಲ್ಲೂಕನ್ನು ಅಪರಾಧ ಮುಕ್ತ, ಹಾಗೂ ನಗರ ಸೇರಿದಂತೆ ತಾಲ್ಲೂಕನ್ನು ಸ್ವಚ್ಛ ಮಾಡಲು ಎಲ್ಲರೂ ಒಗ್ಗೂಡಿ ಕೆಲಸ ಮಾಡೋಣಾ, ಸಾರ್ವಜನಿಕರ ಸಹಾಯದ ಜೊತೆಗೆ ಪತ್ರಕರ್ತರ ಸಹಾಯ, ಸಲಹೆ ಮತ್ತು ಸೂಚನೆ

ಜಿಲ್ಲೆಯಲ್ಲಿ ಮೂರನೇ‌ ಹಂತದ ಕೋವಿಡ್ ಲಸಿಕಾ ಕಾರ್ಯಕ್ರಮ ‌ಆರಂಭ: ಎಂ.ಎಸ್.ಅರ್ಚನಾ
ಜಿಲ್ಲೆಯಲ್ಲಿ ಮೂರನೇ‌ ಹಂತದ ಕೋವಿಡ್ ಲಸಿಕಾ ಕಾರ್ಯಕ್ರಮ ‌ಆರಂಭ: ಎಂ.ಎಸ್.ಅರ್ಚನಾ


ಜಿಲ್ಲೆಯಲ್ಲಿ 60 ವರ್ಷ ಮೇಲ್ಪಟ್ಟ ಸಾರ್ವಜನಿಕರಿಗೆ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮವನ್ನು ಇಂದಿನಿಂದ ಆರಂಭಿಸಲಾಗಿದ್ದು, ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ (M.S Archana) ಅವರು‌‌

Top Stories »  


Top ↑