Tel: 7676775624 | Mail: info@yellowandred.in

Language: EN KAN

    Follow us :


ವಿಶ್ವ ಮಹಿಳಾ ದಿನಾಚರಣೆಗೆ, ತಾಲ್ಲೂಕಿನ ಸಪ್ತ ಸಾಧಕ ಮಹಿಳೆಯರ ಪರಿಚಯ

Posted date: 08 Mar, 2021

Powered by:     Yellow and Red

ವಿಶ್ವ ಮಹಿಳಾ ದಿನಾಚರಣೆಗೆ, ತಾಲ್ಲೂಕಿನ ಸಪ್ತ ಸಾಧಕ ಮಹಿಳೆಯರ ಪರಿಚಯ

ಇಂದು ವಿಶ್ವ ಮಹಿಳಾ ದಿನಾಚರಣೆ. ದಿನಾಚರಣೆಯ ಅಂಗವಾಗಿ ನಮ್ಮ ತಾಲ್ಲೂಕಿನಲ್ಲಿ ವಿವಿಧ ಪ್ರಕಾರಗಳಲ್ಲಿ ಸಾಧನೆಗೈದ ಏಳು ಮಂದಿ ಮಹಿಳೆಯರನ್ನು ನಮ್ಮ ಪತ್ರಿಕೆ ಗುರುತಿಸಿ ಅವರ ಸಾಧನೆಯನ್ನು ಹೊರಜಗತ್ತಿಗೆ ಪರಿಚಯಿಸುತ್ತಿದ್ದೇವೆ. ಅಂತಹ ಸಾಧನಾ ಮಹಿಳೆಯರ ಪುಟ್ಟ ಪರಿಚಯ ತಮ್ಮ ಮುಂದೆ.

ಮಹಿಳೆ ಎಂದರೆ ಆಕೆ ಕೇವಲ ಒಂದು ಹೆಣ್ಣು ಎಂಬುದಲ್ಲ. ಆಕೆಯನ್ನು ಭೂಮಿಗೆ ಹೋಲಿಸುತ್ತಾರೆ. ಆಕೆ ಇಲ್ಲದೆ ಜಗತ್ತೇ ಇಲ್ಲಾ ಎನ್ನುವುದು ಸಾರ್ವಕಾಲಿಕ ಸತ್ಯ. ಇತ್ತೀಚೆಗಂತೂ ಹೆಣ್ಣು ಮಕ್ಕಳು ವಿಶ್ವದಾಖಲೆ ಸೃಷ್ಟಿಸುವಂತಹ ಸಾಹಸಗಳನ್ನು ಮಾಡುತ್ತಿದ್ದಾರೆ. ಇನ್ನೂ ಕೆಲವರಲ್ಲಿ ಆಸಕ್ತಿ ಇದ್ದರೂ ಪ್ರೋತ್ಸಾಹ ಸಿಗದೆ ತಮ್ಮ ಸಾಹಸಗಾಥೆಗೆ ತಿಲಾಂಜಲಿ ಇತ್ತಿದ್ದಾರೆ.


*ಗಂಡು ಕಲೆಗಳ ಪ್ರದ ರ್ಶಕಿ ಮತ್ತುಜಿಲ್ಲೆಯ ಮೊದಲ ಮಹಿಳಾ ಕರಾಟೆ ಶಿಕ್ಷಕಿ ಲಕ್ಷ್ಮಿ*

ಚಂದದ ಪಟ್ಟಣವಾದ ಚನ್ನಪಟ್ಟಣ ತಾಲ್ಲೂಕಿನ ಗೋವಿಂದೇಗೌಡನದೊಡ್ಡಿ ಗ್ರಾಮದ ಲಕ್ಷ್ಮಿ ಗೋ ರಾ ಶ್ರೀನಿವಾಸ ಎಂಬ ಮಹಿಳೆಯು ಕಲೆಯಲ್ಲಿ ತಮ್ಮದೇ ಸಾಧನೆಯನ್ನು ಮಾಡಿದ್ದಾರೆ.

ಜಾನಪದ, ತಮಟೆ, ಡೊಳ್ಳು, ನಗಾರಿ, ಪಟ ಕುಣಿತ, ಕರಾಟೆ, ನೃತ್ಯ, ನಾಟಕ, ನಟನೆ ಸೇರಿದಂತೆ ಅನೇಕ ಕಲೆಗಳನ್ನು ಕಲಿತು ಹಲವಾರು ಮಕ್ಕಳಿಗೂ ಕಲಿಸಿರುವ ಲಕ್ಷ್ಮಿ ಯವರು, ಅನೇಕ ಸಂಘಸಂಸ್ಥೆಗಳಿಂದ ಗೌರವಕ್ಕೆ ಭಾಜನರಾಗಿದ್ದಾರೆ. ರಾಮನಗರದ ಬಿಜಿಎಸ್ ವರ್ಲ್ಡ್ ಸ್ಕೂಲ್ ನಲ್ಲಿ ನಾಲ್ಕು ವರ್ಷಗಳ ಕಾಲ ಕರಾಟೆ ಮತ್ತು ಯೋಗ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿ ನಿರ್ಮಲಾನಂದನಾಥ ಸ್ವಾಮೀಜಿ ಮತ್ತು ಅನ್ನದಾನೇಶ್ವರನಾಥ ಸ್ವಾಮೀಜಿಗಳಿಂದ ಪ್ರಶಂಸೆ ಗೊಳಪಟ್ಟಿದ್ದಾರೆ. ಹಿ.ಶಿ ರಾಮಚಂದ್ರೇಗೌಡರು, ಭೈರನಹಳ್ಳಿ ಶಿವರಾಮು, ಡಾ ಎಂ ಭೈರೇಗೌಡ ರ ನಿರ್ದೇಶನದ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಕರಿ ರಾಯನ ಕಾಳಗ ಎಂಬ ನಾಟಕವನ್ನು ಐದು ಜಿಲ್ಲೆಗಳಲ್ಲಿ ಪ್ರಸ್ತುತಪಡಿಸಿದ್ದಾರೆ. ಇದಲ್ಲದೆ ದೇವರ ನಾಮದ ವೀಡಿಯೋ ಕ್ಯಾಸೆಟ್ ಗಳಲ್ಲಿ ಮತ್ತು ಧರಣಿ ಎಂಬ ಸಾಕ್ಷ್ಯ ಚಿತ್ರದಲ್ಲೂ ನಟಿಸಿದ್ದಾರೆ. ಅನೇಕ ಮಹಿಳೆಯರಿಗೆ ಮತ್ತು ವಿದ್ಯಾರ್ಥಿನಿಯರಿಗೆ ತಮಟೆ, ಕಂಸಾಳೆ, ಕೋಲಾಟ, ನೃತ್ಯ ಸೇರಿದಂತೆ ಅನೇಕ ಮಜಲುಗಳನ್ನು ಯಾವುದೇ ಫಲಾಫೇಕ್ಷೆ ಇಲ್ಲದೆ ತಮ್ಮ ಮನೆಯ ಆವರಣದಲ್ಲಿ ಉಚಿತವಾಗಿ ತರಬೇತಿ ನೀಡಿದ್ದಾರೆ.


*ಯೋಗ ಮತ್ತು ಮಾನಸಿಕ ಸಂವಹನ ಕಾರ್ಯಕರ್ತೆ*

ತಾಲ್ಲೂಕಿನ ಮತ್ತೊಬ್ಬ ಸಾಧಕ ಮಹಿಳೆ ರಾಧಿಕಾ ರವಿಕುಮಾರಗೌಡರವರು. ಇವರು ಮೂಲತಃ ಉಡುಪಿಯವರು. ಚನ್ನಪಟ್ಟಣದ ಸೊಸೆಯಾದ ನಂತರ ಇಲ್ಲೇ ನೆಲೆಸಿದ್ದಾರೆ. ಇವರು ಶ್ರೀ ಶ್ರೀ ರವಿಶಂಕರ್ ಗುರೂಜಿಯವರ ನೇರ ಶಿಷ್ಯೆ ಎಂದರೆ ತಪ್ಪಾಗಲಾರದು. ಇವರು ಕರ್ನಾಟಕದ ಮೂಲೆಮೂಲೆಗಳಲ್ಲಿ ಸಂತ್ರಸ್ತರಿಗೆ ಸರ್ಕಾರದ ಅನುಕೂಲತೆ ಕಲ್ಪಿಸುವುದು. ಯೋಗ ಹೇಳಿಕೊಡುವುದು, ದುಶ್ಚಟಗಳಿಗೆ ದಾಸರಾದವರನ್ನು ದುಶ್ಚಟ ಮುಕ್ತರನ್ನಾಗಿಸುವುದು, ಒಡೆದ ಕುಟುಂಬಗಳನ್ನು ಆಂತರಿಕವಾಗಿ ಒಗ್ಗೂಡಿಸುವುದು, ಸ್ವಚ್ಚತೆ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ರಾಜ್ಯದಾದ್ಯಂತ ನಡೆಸಿಕೊಂಡು ಬಂದಿದ್ದಾರೆ, ಹಾಗೂ ನಡೆಸುತ್ತಿದ್ದಾರೆ. ಸಹಸ್ರಾರು ಮಂದಿಗೆ ಈಗಲೂ ಯೋಗ ಕಲಿಸುತ್ತಾರೆ. ನೂರಾರು ಮಹಿಳೆಯರಿಗೆ ಕೇಂದ್ರ ಸರ್ಕಾರದಿಂದ ಯೋಗ ಸರ್ಟಿಫಿಕೇಟ್ ಸಹ ಕೊಡಿಸಿದ್ದಾರೆ. ಮಾನಸಿಕ ಖಾಯಿಲೆಯಿಂದ ಬಳಲುತ್ತಿರುವ ಅನೇಕ ಮಂದಿಯನ್ನು ಸುಧಾರಿಸಿರುವುದು ಇವರ ಹೆಗ್ಗಳಿಕೆ.


*ರಾಜಕೀಯ ಪಟು ಕಾವೇರಮ್ಮ*

1999 ರಲ್ಲೇ ರಾಷ್ಟ್ರದಲ್ಲೇ ಗ್ರಾಮ ಪಂಚಾಯತಿ ಉತ್ತಮ ಅಧ್ಯಕ್ಷೆ ಎಂದು ಮಹಿಳಾ ಆಯೋಗದ ವತಿಯಿಂದ ಅಂದಿನ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಯವರಿಂದ ಪ್ರಶಸ್ತಿ ಪಡೆದ ತಾಲ್ಲೂಕಿನ ಹೆಮ್ಮೆಯ ನಾಯಕಿ ಕಾವೇರಮ್ಮ. ಹೌದು ಚನ್ನಪಟ್ಟಣ ತಾಲ್ಲೂಕಿನ ನಾಗವಾರ ಗ್ರಾಮ ಪಂಚಾಯತಿಯಲ್ಲಿ ಆರು ವರ್ಷಗಳ ಕಾಲ ಅಧ್ಯಕ್ಷೆ ಯಾದ ಕಾವೇರಮ್ಮನವರು ಅಂದು ವಾರ್ಷಿಕವಾಗಿ ಬರುತ್ತಿದ್ದ ಕೇವಲ ಎರಡು ಲಕ್ಷ ರೂಪಾಯಿಗಳ ಅನುದಾನದಲ್ಲೇ ವ್ಯಾಪ್ತಿಯ ಗ್ರಾಮಗಳನ್ನು ಅಭಿವೃದ್ಧಿ ಪಡಿಸಿದವರು. ನಂತರ ತಾಪಂಯಲ್ಲಿ ಗೆದ್ದು, ಇಪ್ಪತ್ತು ತಿಂಗಳ ಕಾಲ ಉಪಾಧ್ಯಕ್ಷರಾಗಿ ಹಲವಾರು ಕೆಲಸಗಳನ್ನು ಮಾಡಿದ್ದಾರೆ.

ಮಹಿಳಾ ಕಾಂಗ್ರೆಸ್‌ನ ತಾಲ್ಲೂಕು ಅಧ್ಯಕ್ಷರಾಗಿ, ಜಿಲ್ಲಾಧ್ಯಕ್ಷರಾಗಿ ಈಗ ರಾಜ್ಯ ಮಹಿಳಾ ಕಾಂಗ್ರೆಸ್‌ನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈಗಲೂ ಸಕ್ರಿಯವಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿ ರುವ ಕಾವೇರಮ್ಮನವರು ಜಿಲ್ಲಾ ಪಂಚಾಯತಿಗೆ ಅಥವಾ ವಿಧಾನಸಭೆಗೆ ಪಕ್ಷವು ಟಿಕೆಟ್ ನೀಡಿದರೆ ಗೆದ್ದು ಬರುವೆ ಎಂಬ ವಿಶ್ವಾಸವನ್ನು ಹೊಂದಿದ್ದಾರೆ.


*ಸಾಮಾಜಿಕ ಹೋರಾಟದ ಚಿಲುಮೆ ಮಂಗಳಮ್ಮ*

ಮಂಗಳಮ್ಮ ನವರು ತಾಲ್ಲೂಕಿನ ಕೋಡಂಬಳ್ಳಿ ಹತ್ತಿರವಿರುವ ಹುಚ್ಚಯ್ಯನದೊಡ್ಡಿ ಗ್ರಾಮದ ಧೀರ ಮಹಿಳೆ. ತಮ್ಮ 27 ವರ್ಷ ವಯಸ್ಸಿದ್ದಾಗ ಹೋರಾಟಕ್ಕೆ ಧುಮುಕಿದ್ದು.  ಕಳೆದ 26 ವರ್ಷಗಳಿಂದ ಸಾಮಾಜಿಕ ಹೋರಾಟದಲ್ಲಿ ತೊಡಗಿ ಕೊಂಡಿದ್ದಾರೆ. ಹತ್ತಾರು ಗ್ರಾಮಗಳಲ್ಲಿ ಸಮಾಜ ಕಲ್ಯಾಣ ಇಲಾಖೆ, ನೆಹರು ಯುವ ಕೇಂದ್ರ, ಪಾಲಿಟೆಕ್ನಿಕ್ ಕಾಲೇಜು ವತಿಯಿಂದ ಉಚಿತ ಹೊಲಿಗೆ ತರಬೇತಿ, ಟೈಲರಿಂಗ್ ಮಿಷನ್ ಜೊತೆಗೆ ಕೆಲವು ಗ್ರಾಮಗಳಿಗೆ ತರಬೇತಿ ಕೇಂದ್ರಗಳನ್ನು ಸಹ ಕೊಡಿಸಿದ್ದಾರೆ.

ವಿಕಾಸ ಗ್ರಾಮೀಣ ಅಭಿ ವೃದ್ಧಿ ಸಂಸ್ಥೆಯ ವತಿಯಿಂದ ತಾಲ್ಲೂಕಿನಲ್ಲಿ ಮೂರು ಒಕ್ಕೂಟ ಮಾಡಿ ಮಹಿಳೆ ಯರಿಗೆ ಸ್ವಾವಲಂಬನೆ ಬದುಕು ಕಟ್ಟಿಕೊಳ್ಳಲು ಸಹಾಯ ನೀಡಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆ, ಜಯಕರ್ನಾಟಕ ಸಂಘಟನೆ ಮತ್ತು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಸಂಘಟನೆ ಗಳ ಮೂಲಕ ಸಹಸ್ರಾರು ಹೋರಾಟಗಳನ್ನು ಮಾಡಿದ್ದಾರೆ. ಜೀತ ಪದ್ಧತಿ, ಮಹಿಳಾ ದೌರ್ಜನ್ಯ, ಬಾಲ್ಯ ವಿವಾಹ, ಅನ್ಯ ಭಾಷೆಗಳ ಹೇರಿಕೆಯ ವಿರುದ್ಧ, ನಾಡು, ನುಡಿ, ಜಲದ ಬಗ್ಗೆ, ಹೋರಾಟ ಹಮ್ಮಿಕೊಳ್ಳುವುದರ ಜೊತೆಗೆ ಮಹಿಳಾ ಸಮಾವೇಶ ಮಾಡಿದ್ದಾರೆ. ಜೈಲು ವಾಸವನ್ನು ಅನುಭವಿಸಿದ್ದಾರೆ. ಕಬ್ಬು ಮತ್ತು ರೇಷ್ಮೆ ಬೆಳೆಯ ಬೆಲೆ ಕುಸಿ ದಾಗ ಪಾದಯಾತ್ರೆ ಮಾಡಿದ್ದಾರೆ. ಈಗಲೂ ಸಹ ನ್ಯಾಯಾಲಯಕ್ಕೆ ಅಲೆಯುತ್ತಿದ್ದು. ನಾಡು,ನುಡಿ,ಜಲದ ಜೊತೆಗೆ ಯಾವುದೇ ರೀತಿಯ ಸಾಮಾಜಿಕ ಅನ್ಯಾಯ ಕಂಡುಬಂದರೂ ಸಹ ಈಗಲೂ ಹೋರಾಟಕ್ಕೆ ಧುಮುಕಿ ನ್ಯಾಯ ಪಡೆಯಲು ಮತ್ತು ಕೊಡಿಸಲು ಸದಾ ಸಿದ್ದಳಿದ್ದೇನೆ. ಯಾವುದೇ ಬೆದರಿಕೆಗೂ ಜಗ್ಗದೆ, ಬಗ್ಗದೆ ನನ್ನ ಕೊನೆಯ ಉಸಿರಿರುವ ತನಕವೂ ಹೋರಾಟದಲ್ಲಿಯೇ ತೊಡಗಿಕೊಳ್ಳುತ್ತೇನೆ ಎಂಬ ದಿಟ್ಟ ನಿರ್ಧಾರ ವನ್ನು ಮಂಗಳಮ್ಮನವರು ದೃಢವಾದ ಧ್ವನಿಯಲ್ಲಿ ತಿಳಿಸಿದ್ದಾರೆ.


*ಸಂತ್ರಸ್ತ ಮಹಿಳೆಯರ ಆಶಾಕಿರಣ ಸುಕನ್ಯ*

ಸಾಂಸಾರಿಕ ಜೀವನದಲ್ಲಿ ನೊಂದ ಮಹಿಳೆಯರಿಗೆ, ಆಸೆ ಆಮಿಷಗಳಿಗೆ ಹಾಗೂ ಬಲಾತ್ಕಾರಕ್ಕೆ ಒಳಗಾಗಿ ತನ್ನ ಬದುಕು ಇಷ್ಟೇ ! ಇಲ್ಲಿಗೆ ಮುಗಿದುಹೋಯಿತು ಎಂಬಂತಹ ಸುಕೋಮಲ ಬಾಲೆಯರಿಗೆ ಹಾಗೂ ಮಹಿಳೆಯರಿಗೆ ಆಶಾಕಿರಣ ವಾದವರೇ ಸುಕನ್ಯಾ ಎಂಬ ದಿಟ್ಟ ಮಹಿಳೆ. ಹಲವಾರು ತಪ್ಪಿತಸ್ಥ ಗಂಡಸರಿಗೆ, ಕಾಮುಕರಿಗೆ ಅಷ್ಟೇ ಏಕೆ ಇವರು ದೂರು ನೀಡಲು ಹೋದರೆ ಓ ಈಯಮ್ಮ ಯಾವುದೋ ನ್ಯಾಯ ಹಿಡ್ಕೊಂಡು ಬಂದ್ರಲ್ಲಪ್ಪಾ ಎಂದು ಮುಖ ಸಿಂಡರಿಸಿ ಕೊಳ್ಳುವಂತಹ ಅಧಿಕಾರಿಗ ಳಿಗೂ ಸಹ ಈ ಸುಕನ್ಯಾ ಬಿಸಿ ಮುಟ್ಟಿಸಿದ್ದಾರೆ. ಕೇವಲ ತಾಲ್ಲೂಕು ಅಷ್ಟೇ ಅಲ್ಲ, ರಾಮನಗರ ಜಿಲ್ಲೆ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ಸಂಸಾರ ಬಿಟ್ಟ ಅನೇಕರನ್ನು ಕರೆತಂದು ನ್ಯಾಯ ಒದಗಿಸಿಕೊಟ್ಟಿದ್ದಾರೆ. ಹಲವಾರು ಬಾರಿ ಸುಕನ್ಯಾ ರವರ ಮೇಲೆ ದಾಳಿ ಮಾಡಲು ಯತ್ನಿಸಿದ್ದೂ ಉಂಟು. ಹಲವಾರು ನ್ಯಾಯಗಳನ್ನು ಅವರ ಮನೆಯಲ್ಲಿ, ಸಂತ್ರಸ್ತರ ಮನೆಯಲ್ಲಿ, ಊರಿನ ಯಜಮಾನರ ಸಮ್ಮುಖದಲ್ಲಿ, ಪೊಲೀಸ್ ಠಾಣೆಗಳಲ್ಲಿ ಬಗೆಹರಿಸಿದರೆ ಕೆಲವು ನ್ಯಾಯಾಲಯದಲ್ಲಿ ಬಗೆ ಹರಿದಿವೆ. ಮತ್ತಷ್ಟು ಬಗೆ ಹರಿಯಬೇಕಾಗಿವೆ. ಹಲವಾರು ಸಂಘಟನೆಗಳಲ್ಲಿ ದುಡಿದ ಇವರು ಸದ್ಯ ಸ್ವರಾಜ್ ಎಂಬ ಸಂಸ್ಥೆಯಲ್ಲಿ ಗುರುತಿಸಿಕೊಂಡು ಇಂದಿಗೂ ದುಡಿಯುತ್ತಿದ್ದಾರೆ. ಇವರ ನ್ಯಾಯಪರತೆಗೆ ಹಲವಾರು ಸಂಘ ಸಂಸ್ಥೆಗಳು ಇವರನ್ನು ಗುರುತಿಸಿ ಸನ್ಮಾನಿಸಿ ಗೌರವ ನೀಡಿದ್ದಾರೆ.


*ಬಂಜೆತನ ನೀಗಿಸುವ ಕೆ ಟಿ ಲಕ್ಷ್ಮಮ್ಮ*

ಒಬ್ಬ ಮಹಿಳೆ ಯಾವ ಅಪವಾದವನ್ನು ಒಪ್ಪಿಕೊಳ್ಳಲಾರಳು. ಅದರಲ್ಲೂ ಬಂಜೆ ಎಂಬುದನ್ನು ಆಕೆ ಒಪ್ಪಿಕೊಳ್ಳಲು ಆಕೆಯ ತಾಯ್ತನ ಒಪ್ಪುವುದೇ ಇಲ್ಲ. ಆಕೆ ತನ್ನ ಇಹಪರ ತ್ಯಾಗ ಮಾಡಿಯಾದರೂ ತಾನೊಬ್ಬ ತಾಯಿ ಎಂದೆನಿಸಿಕೊಳ್ಳಲು ಆಸೆ ಪಡುತ್ತಾಳೆ. ಹಲವಾರು ಇಂಗ್ಲಿಷ್ ಮೆಡಿಸಿನ್, ಮಾಟಮಂತ್ರ, ದೇವರುದಿಂಡಿರು, ಆಯುರ್ವೇದ ಜೊತೆಗೆ ಯಾರ್ಯಾರು ಏನೇನು ಹೇಳುತ್ತಾರೋ ಆಕೆ ಅದನ್ನೆಲ್ಲಾ ಮಾಡಿ ತಾಯಿಯಾಗಲು ಹಂಬಲಿಸುತ್ತಾಳೆ. ಸಮಾಜದ ಕಳಂಕಿತಕ್ಕಿಂತ ಹೆಚ್ಚಾಗಿ ತನ್ನವರೆನಿಸಿಕೊಂಡವರಿಂದಲೇ ಅಲ್ಲದೆ ಆಕೆಯ ಗಂಡನ ದೋಷ ವಿದ್ದರೂ ಆಕೆ ನಿಕೃಷ್ಟಳಾಗುತ್ತಿರುವುದು ಸಹ ಅಷ್ಟೇ ಸತ್ಯ. ಲಕ್ಷಲಕ್ಷ ರೂಪಾಯಿಯ ಇಂಗ್ಲಿಷ್ ಮೆಡಿಸಿನ್, ಸಹಸ್ರಾರು ರೂಪಾಯಿಯ ಹೋಮಹವನ, ಕಂಡಕಂಡವರೆಲ್ಲಾ ಹೇಳಿದ್ದು, ಕೇಳಿದ್ದು, ಕೊಟ್ಟಿದ್ದು ಎಲ್ಲಾ ಮಾಡಿದರೂ ಆಕೆಯ ಒಡಲು ಮಾತ್ರ ತುಂಬಲೇ ಇಲ್ಲ. ಅಂತಹ ಬಂಜೆತನದ ಶಾಪ ಹೊತ್ತ ಮಹಿಳೆಗೆ ತಾಯ್ತನದ ಚಿಗುರು ಮೂಡಿಸುವ ಆಶಾಕಿರಣವಾಗಿ ಹೊರಹೊಮ್ಮಿರುವ ಚನ್ನಪಟ್ಟಣ ತಾಲ್ಲೂಕಿನ ಹಾರೋಹಳ್ಳಿ ದೊಡ್ಡಿ ಗ್ರಾಮದ ಕೆ ಟಿ ಲಕ್ಷ್ಮಮ್ಮ.

ಹೌದು ನಾಲ್ಕು ತಲೆಮಾ ರಿನಿಂದ ಬಂಜೆತನ ನೀಗಿಸುವಲ್ಲಿ ಕೆ ಟಿ ಲಕ್ಷ್ಮಮ್ಮ ನವರ ಕುಟುಂಬ ನಿರತವಾಗಿದೆ. ಗಂಡಸಿನ ದೌರ್ಬಲ್ಯ ಹೊರತು ಪಡಿಸಿ ಗರ್ಭ ಕೋಶಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಕಾಯಕಲ್ಪ ನೀಡಿ ಬಂಜೆತನದ ತಾಯಿಗೆ ಗರ್ಭನಿಲ್ಲಿಸುವಲ್ಲಿ ಅವರು ನೀಡುವ ಅಪ್ಪಟ ಗಿಡಮೂಲಿಕೆ ಔಷಧಿ ಕೆಲಸ ಮಾಡುತ್ತಿದೆ. ಮುಂಜಾನೆ ವೇಳೆ ಸ್ವತಃ ಕಾಡಿಗೆ ತೆರಳಿ, ಮೊದಲೇ ಗುರುತಿಸಿದ ಐದು ಸಸ್ಯಗಳ ನವಿರಾದ ಎಲೆಗಳನ್ನು ಕಿತ್ತು, ಮನೆಗೆ ತಂದು ತೊಳೆದು, ಪೂಜಿಸಿ ಒರಳು ಕಲ್ಲಿನಲ್ಲಿ ಸ್ವತಃ ಅವರೇ ಅರೆದು ಅದಕ್ಕೆ ಸ್ವಲ್ಪ ಮಜ್ಜಿಗೆ ಸೇರಿಸಿ, ನಡು ಹೊಸಲಿನ ಮೇಲೆ ಕುಕ್ಕರಗಾಲಿನಲ್ಲಿ ಕೂರಿಸಿ ಗಿಡಮೂಲಿಕೆಗಳ ರಸವನ್ನು ಕುಡಿಸುತ್ತಾರೆ. ನಂತರ ಆಕೆಗೆ ಅದೇ ತಟ್ಟೆಯಿಂದ ದೃಷ್ಟಿ ತೆಗೆದು, ಆಕೆಗೆ ಉಡಿ ತುಂಬಿ ಆಶೀರ್ವದಿಸಿ ಕಳುಹಿಸುತ್ತಾರೆ. ಇನ್ನು ಹಣಕಾಸಿನ ವಿಷಯಕ್ಕೆ ಬಂದರೆ ಅವರಾಗಿಯೇ ಅವರು ಹೊಸ್ತಿಲ ಮೇಲೆ ಇಡುವ ಕಾಣಿಕೆ ಬಿಟ್ಟರೆ ಇಷ್ಟು ಕೊಡಬೇಕು ಎಂದು ಕೇಳುವುದೇ ಇಲ್ಲ. ತಲೆಮಾರು ಹೊರತು ಪಡಿಸಿ ಲಕ್ಷ್ಮಮ್ಮನವರೇ ಸಹಸ್ರಾರು ಬಂಜೆಯರಿಗೆ ಔಷಧ ನೀಡಿದ್ದು, ಶೇಕಡಾ ಎಪ್ಪತ್ತಕ್ಕೂ ಹೆಚ್ಚು ಮಂದಿ ಫಲಪ್ರದರಾಗಿದ್ದಾರೆ. ಫಲ ಪ್ರದರಾಗಿರುವ ಅನೇಕ ಮಹಿಳೆಯರು ತಾವು ಗರ್ಭ ಧರಿಸಿದ ನಂತರ ಅಥವಾ ಹೆರಿಗೆ ಆದ ನಂತರ ಮಗು ಸಮೇತ ಬಂದು ಲಕ್ಷ್ಮಮ್ಮ ನವರನ್ನು ಗೌರವಿಸಿ ಆಶೀ ರ್ವಾದ ಪಡೆದು ಹೋಗಿರುವುದೇ ಸಾಕ್ಷಿ ಆಗಿದೆ. ಯಾವುದೇ ಫಲಾನುಭವಿ ಬರಬೇಕಾದರೆ ಮೊದಲು ಕರೆ ಮಾಡಿ ಬರಬೇಕೆಂದು ಅವರು ಮನವಿ ಮಾಡಿ ಕೊಳ್ಳುತ್ತಾರೆ.


*ಲಘು ಸಂಗೀತದ ಶಾರದಾನಾಗೇಶ್*

ಲಘುಸಂಗೀತದ ಉತ್ತಮ ಗಾಯಕಿ ಶಾರದಾ ನಾಗೇಶ್ ರವರು, ಜಿಲ್ಯಾದ್ಯಂತ ಯಾವುದೇ ಸಾಂಸ್ಕೃ ತಿಕ ಕಾರ್ಯಕ್ರಮವಿರಲಿ, ಯಾವುದೇ ಪಕ್ಷದ ರಾಜಕೀಯ ಕಾರ್ಯಕ್ರಮ ವಿರಲಿ, ದೇವಾಲಯಗಳ ಶುಭ ಕಾರ್ಯಕ್ರಮವಿರಲಿ ಅಲ್ಲಿ ಬಹುತೇಕ ಶಾರದಾ ನಾಗೇಶ್ ಮತ್ತು ತಂಡದ ಉಪಸ್ಥಿತಿ ಇರುತ್ತದೆ. ಆ ಕಾರ್ಯಕ್ರಮಗಳ ಉದ್ಘಾಟನಾ ಪ್ರಾರ್ಥನೆ, ನಾಡಗೀತೆ ಮತ್ತು ರೈತಗೀತೆ ಹಾಡುವುದರಲ್ಲಿ ಇವರ ತಂಡ ಹೆಸರು ಮಾಡಿದೆ. ದೇವರ ನಾಮ, ವಚನ, ದಾಸರ ಪದ, ನಾಡುನುಡಿ ಮತ್ತು ರೈತ ಗೀತೆಗಳನ್ನು ವೇದಿಕೆಯಲ್ಲಿ ಪ್ರಸ್ತುತಪಡಿಸಲು, ಜಿಲ್ಲೆಯಲ್ಲಷ್ಟೇ ಅಲ್ಲದೇ ರಾಜ್ಯದಾದ್ಯಂತ ಅನೇಕ ಜಿಲ್ಲೆಗಳಲ್ಲಿ ಇವರನ್ನು ಕರೆಸಿ ಗೀತಗಾಯನ ಏರ್ಪಡಿಸಿ, ಸನ್ಮಾನಿಸಿ ಗೌರವಿಸಿ ಕಳುಹಿಸಿದ್ದಾರೆ.

ಅನೇಕ ಸಂಘಸಂಸ್ಥೆಗಳು, ರಾಷ್ಟ್ರೀಯ ಹಬ್ಬಗಳ ಆಚರಣೆ ಹಾಗೂ ತಾಲ್ಲೂಕು ಆಡಳಿತದಿಂದ ರಾಜ್ಯೋತ್ಸವ ಗೌರವ ಸೇರಿದಂತೆ ರಾಜ್ಯದ ಅನೇಕ ಸಂಘಸಂಸ್ಥೆಗಳು ಬಿರುದನ್ನು ನೀಡಿ ಗೌರವಿಸಿವೆ. ಸರ್ಕಾರಿ ಶಾಲೆಯ ಶಿಕ್ಷಕಿಯಾಗಿರುವ ಇವರು ಲಘು ಸಂಗೀತ ಕಲಿಯಲು ಆಸಕ್ತಿ ಇರುವ ಮಕ್ಕಳು ಬಂದರೆ ಉಚಿತ ವಾಗಿ ಕಲಿಸಿಕೊಡಲಾಗು ವುದು ಎಂದು ಅವರು ತಿಳಿಸುತ್ತಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ

ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)

ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ

ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.

ಚನ್ನಪಟ್ಟಣ :  ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ

ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು

ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ

ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್

ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ

ರಾಮನಗರ, ಫೆ. 16  ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ

ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ

ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ

ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ

ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು,  ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ

ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು

ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ

ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್

ರಾಮನಗರ, ಫೆ. 12:   ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ

ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್


ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ

Top Stories »  


Top ↑